7-10 ಸೆಪ್ಟೆಂಬರ್ 2025

7-10 ಸೆಪ್ಟೆಂಬರ್ 2025

1: ‘ಪಲ್ಲಾಸ್ ಕ್ಯಾಟ್’ ಪತ್ತೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ‘ಪಲ್ಲಾಸ್ ಕ್ಯಾಟ್’ ಅರುಣಾಚಲ ಪ್ರದೇಶದ ಹಿಮಾಲಯ ಶ್ರೇಣಿಯಲ್ಲಿ 4,200 ಮೀಟರ್‌ಗಿಂತ ಕಡಿಮೆ ಎತ್ತರದಲ್ಲಿ ಪತ್ತೆಯಾಗಿದೆ.
2. ಈ ಆವಿಷ್ಕಾರವು ಹಿಮಾಲಯದ ಪರಿಸರ ವ್ಯವಸ್ಥೆಯಲ್ಲಿ 6 ವಿವಿಧ ಜಾತಿಯ ಕಾಡುಬೆಕ್ಕುಗಳ ಅಸ್ತಿತ್ವವನ್ನು ದೃಢಪಡಿಸಿದೆ.
3. ಈ ಸಮೀಕ್ಷೆಯನ್ನು ವಿಶ್ವ ವನ್ಯಜೀವಿ ಸಂಸ್ಥೆ (WWF) ಯ ಭಾರತ ಘಟಕವು ಸ್ಥಳೀಯ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನಡೆಸಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
2: ಹಿಮಾಲಯದಲ್ಲಿ ಪಲ್ಲಾಸ್ ಕ್ಯಾಟ್ ಪತ್ತೆಯ ಮಹತ್ವದ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಇದು ಸಮುದ್ರ ಮಟ್ಟದಿಂದ 4,000 ಮೀಟರ್‌ಗಿಂತ ಹೆಚ್ಚಿನ ಎತ್ತರದಲ್ಲಿ ವನ್ಯಜೀವಿಗಳ ಅಸ್ತಿತ್ವದ ಅಪರೂಪದ ದಾಖಲೆಯಾಗಿದೆ.
2. ಈ ಪತ್ತೆಯು ಅಂತರರಾಷ್ಟ್ರೀಯ ವನ್ಯಜೀವಿ ವ್ಯಾಪಾರಕ್ಕೆ ಹೊಸ ಮಾರ್ಗಗಳನ್ನು ತೆರೆಯುತ್ತದೆ.
3. ಸ್ಥಳೀಯ ಸಮುದಾಯದ ಸಹಕಾರವು ವನ್ಯಜೀವಿ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ಈ ಸಮೀಕ್ಷೆ ತೋರಿಸಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
3: ಹಿಮಾಲಯದಲ್ಲಿ ಕಂಡುಬರುವ ಕಾಡುಬೆಕ್ಕುಗಳ ಬಗ್ಗೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
A) ಪಲ್ಲಾಸ್ ಕ್ಯಾಟ್ ಹಿಮಾಲಯದಲ್ಲಿ ಕಂಡುಬರುವ ಏಕೈಕ ಕಾಡುಬೆಕ್ಕು.
B) ಸ್ನೋ ಲೆಪರ್ಡ್, ಕ್ಲೌಡೆಡ್ ಲೆಪರ್ಡ್ ಮತ್ತು ಪಲ್ಲಾಸ್ ಕ್ಯಾಟ್ ಹಿಮಾಲಯದಲ್ಲಿ ಪತ್ತೆಯಾದ ಕೆಲವು ಕಾಡುಬೆಕ್ಕುಗಳಾಗಿವೆ.
C) ಈ ಸಮೀಕ್ಷೆಯು ಹಿಮಾಲಯದಲ್ಲಿ ಒಟ್ಟು 8 ಜಾತಿಯ ಕಾಡುಬೆಕ್ಕುಗಳನ್ನು ಪತ್ತೆ ಮಾಡಿದೆ.
D) ಪಲ್ಲಾಸ್ ಕ್ಯಾಟ್‌ನ ವೈಜ್ಞಾನಿಕ ಹೆಸರು Panthera pardus.
4: ಚೀನಾದ JL-1 ವಾಯು-ಉಡಾವಣಾ ಬ್ಯಾಲಿಸ್ಟಿಕ್ ಕ್ಷಿಪಣಿಗೆ (ALBM) ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. JL-1 ಅನ್ನು H-6N ಸ್ಟ್ರಾಟೆಜಿಕ್ ಬಾಂಬರ್ ನಿಂದ ಉಡಾಯಿಸಲಾಗುತ್ತದೆ.
2. ಈ ಕ್ಷಿಪಣಿಯು ಸುಮಾರು 800 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ.
3. ಇದು ಚೀನಾದ ಪರಮಾಣು ತ್ರಿವಳಿ ವ್ಯವಸ್ಥೆಯ ವಾಯು ಘಟಕವನ್ನು ಬಲಪಡಿಸುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
5: ಚೀನಾದ JL-1 ALBM ಅನಾವರಣದ ಮಹತ್ವದ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಇದು ಚೀನಾದ ರಕ್ಷಣಾ ತಂತ್ರಜ್ಞಾನದಲ್ಲಿನ ಪ್ರಗತಿಯನ್ನು ಪ್ರದರ್ಶಿಸುತ್ತದೆ.
2. ಈ ಕ್ಷಿಪಣಿಯ ಅನಾವರಣವು ಜಾಗತಿಕ ರಕ್ಷಣಾ ಸಮತೋಲನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
3. JL-1 ಕ್ಷಿಪಣಿಯು ನಿಖರ ದಾಳಿಗಾಗಿ MARV (Manouverable Re-entry Vehicle) ವ್ಯವಸ್ಥೆಯನ್ನು ಹೊಂದಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
6: ಚೀನಾದ ಪರಮಾಣು ತ್ರಿವಳಿ (nuclear triad) ವ್ಯವಸ್ಥೆಯು ಈ ಕೆಳಗಿನ ಯಾವ ಘಟಕಗಳನ್ನು ಒಳಗೊಂಡಿದೆ?
A) ನೆಲ, ಬಾಹ್ಯಾಕಾಶ ಮತ್ತು ಸೈಬರ್ ಘಟಕಗಳು
B) ಸಮುದ್ರ, ವಾಯು ಮತ್ತು ಬಾಹ್ಯಾಕಾಶ ಘಟಕಗಳು
C) ನೆಲ, ಸಮುದ್ರ ಮತ್ತು ವಾಯು ಘಟಕಗಳು
D) ಸೈಬರ್, ವಾಯು ಮತ್ತು ಸಮುದ್ರ ಘಟಕಗಳು
7: ಭಾರತ-ಇಸ್ರೇಲ್ ದ್ವಿಪಕ್ಷೀಯ ಹೂಡಿಕೆ ಒಪ್ಪಂದ (BIA)ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಈ BIA ಒಪ್ಪಂದವು 2017ರಲ್ಲಿ ಭಾರತದ ಹೊಸ ಹೂಡಿಕೆ ನೀತಿಯ ಅಡಿಯಲ್ಲಿ ರದ್ದುಗೊಂಡಿದ್ದ 1996ರ ಹಿಂದಿನ ಒಪ್ಪಂದದ ಸ್ಥಾನವನ್ನು ಪಡೆದುಕೊಂಡಿದೆ.
2. ಇಸ್ರೇಲ್, ಭಾರತದ ಪರಿಷ್ಕೃತ ಹೂಡಿಕೆ ಒಪ್ಪಂದದ ಚೌಕಟ್ಟಿನ ಅಡಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ ಮೊದಲ OECD ಸದಸ್ಯ ರಾಷ್ಟ್ರವಾಗಿದೆ.
3. ಈ ಒಪ್ಪಂದವು ದ್ವಿಪಕ್ಷೀಯ ಹೂಡಿಕೆಗಳನ್ನು ಪ್ರಸ್ತುತ USD 80 ಮಿಲಿಯನ್‌ನಿಂದ ಹೆಚ್ಚಿಸುವ ನಿರೀಕ್ಷೆಯಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
8: ಭಾರತ-ಇಸ್ರೇಲ್ ಸಂಬಂಧಗಳ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಭಾರತವು ಇಸ್ರೇಲ್ ಅನ್ನು 1950ರಲ್ಲಿ ಮಾನ್ಯತೆ ನೀಡಿತು ಮತ್ತು 1992ರಲ್ಲಿ ಪೂರ್ಣ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿತು.
2. 2017ರಲ್ಲಿ ಭಾರತದ ಪ್ರಧಾನಿ ಮೋದಿ ಅವರ ಇಸ್ರೇಲ್ ಭೇಟಿಯು, ಭಾರತದ ಪ್ರಧಾನಿಯೊಬ್ಬರ ಮೊದಲ ಭೇಟಿಯಾಗಿತ್ತು.
3. ಇಸ್ರೇಲ್, ಪಾಕಿಸ್ತಾನದ ವಿಷಯದಲ್ಲಿ ಭಾರತವನ್ನು ಬೆಂಬಲಿಸುತ್ತದೆ ಮತ್ತು ಭಯೋತ್ಪಾದನಾ ನಿಗ್ರಹದಲ್ಲಿ ಸಹಕರಿಸುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
9: ಭಾರತ ಮತ್ತು ಇಸ್ರೇಲ್ ನಡುವಿನ ವ್ಯಾಪಾರ ಸಂಬಂಧಗಳು ಪ್ರಮುಖವಾಗಿ ಯಾವ ವಲಯಗಳಲ್ಲಿ ವಿಸ್ತರಿಸಿವೆ?
1. ರಕ್ಷಣಾ
2. ಹವಳ (ವಜ್ರಗಳು)
3. ಮಾಹಿತಿ ತಂತ್ರಜ್ಞಾನ (IT)
4. ಕೃಷಿ
ಸರಿಯಾದ ಆಯ್ಕೆಯನ್ನು ಆರಿಸಿ:
A) 1 ಮತ್ತು 2 ಮಾತ್ರ
B) 2, 3 ಮತ್ತು 4 ಮಾತ್ರ
C) 1, 3 ಮತ್ತು 4 ಮಾತ್ರ
D) 1, 2, 3 ಮತ್ತು 4
10: ಬಯೋಚಾರ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಬಯೋಚಾರ್ ಜೈವಿಕ ವಸ್ತುಗಳನ್ನು ಹೆಚ್ಚು ಆಮ್ಲಜನಕದಲ್ಲಿ ಕಾಯಿಸಿದಾಗ ದೊರೆಯುವ ಇಂಗಾಲಯುಕ್ತ ಪದಾರ್ಥವಾಗಿದೆ.
2. ಇದು ಮಣ್ಣಿನಲ್ಲಿ ನೀರು ಹಿಡಿದಿಡುವ ಶಕ್ತಿಯನ್ನು 15-20% ರಷ್ಟು ಹೆಚ್ಚಿಸುತ್ತದೆ.
3. ಡೆನ್ಮಾರ್ಕ್ ಮೂಲದ ಮಾಷ್‌ ಮೇಕ್ ಸಂಸ್ಥೆಯು ಭಾರತದ ಮೊದಲ ಆಧುನಿಕ ಬಯೋಚಾರ್ ಘಟಕವನ್ನು ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ ಸ್ಥಾಪಿಸಲು ಮುಂದಾಗಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
11: ಬಯೋಚಾರ್‌ನ ಪರಿಸರ ಮಹತ್ವದ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಇದು ಮಣ್ಣಿನ ಸವೆತವನ್ನು ತಡೆಯಲು ಸಹಾಯ ಮಾಡುತ್ತದೆ.
2. ಇದು ಇಂಗಾಲವನ್ನು ಮಣ್ಣಿನಲ್ಲಿ ಸಂಗ್ರಹಿಸಿ ವಾಯುಗುಣ ಬದಲಾವಣೆಯನ್ನು ತಗ್ಗಿಸಲು ಸಹಾಯಕವಾಗಬಹುದು.
3. ಬಯೋಚಾರ್ ಬಳಕೆಯಿಂದ ರಾಸಾಯನಿಕ ಗೊಬ್ಬರ ಮತ್ತು ನೀರಿನ ಬಳಕೆಯನ್ನು ಹೆಚ್ಚಿಸಬೇಕಾಗುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
12: ಬಯೋಚಾರ್ ಉತ್ಪಾದನೆಗೆ ಈ ಕೆಳಗಿನ ಯಾವ ಜೈವಿಕ ತ್ಯಾಜ್ಯಗಳನ್ನು ಬಳಸಬಹುದು?
1. ಕಟ್ಟಿಗೆ
2. ತೆಂಗಿನ ಸಿಪ್ಪೆ
3. ಅಡಿಕೆ ಸಿಪ್ಪೆ
4. ಭತ್ತದ ಹೊಟ್ಟು
ಸರಿಯಾದ ಆಯ್ಕೆಯನ್ನು ಆರಿಸಿ:
A) 1 ಮತ್ತು 2 ಮಾತ್ರ
B) 2, 3 ಮತ್ತು 4 ಮಾತ್ರ
C) 1, 3 ಮತ್ತು 4 ಮಾತ್ರ
D) 1, 2, 3 ಮತ್ತು 4
13: ರಷ್ಯಾದ ‘ಎಂಟರೋಮಿಕ್ಸ್’ ಕ್ಯಾನ್ಸರ್ ಲಸಿಕೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ‘ಎಂಟರೋಮಿಕ್ಸ್’ ಲಸಿಕೆಯನ್ನು ಫೆಡರಲ್ ಮೆಡಿಕಲ್ ಆ್ಯಂಡ್ ಬಯೋಲಾಜಿಕಲ್ ಏಜೆನ್ಸಿ (FMBA) ಅಭಿವೃದ್ಧಿಪಡಿಸಿದೆ.
2. ಇದು mRNA ಆಧಾರಿತ ಲಸಿಕೆಯಾಗಿದ್ದು, ಪೂರ್ವ-ಕ್ಲಿನಿಕಲ್ ಪ್ರಯೋಗಗಳಲ್ಲಿ 100% ಪರಿಣಾಮಕಾರಿ ಎಂದು ಸಾಬೀತಾಗಿದೆ.
3. ಈ ಲಸಿಕೆಯು ಕ್ಯಾನ್ಸರ್ ಗೆಡ್ಡೆಗಳನ್ನು ನಾಶಪಡಿಸುವ ಮತ್ತು ಅವುಗಳ ಗಾತ್ರವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
14: ‘ಎಂಟರೋಮಿಕ್ಸ್’ ಲಸಿಕೆಯ ಕಾರ್ಯವಿಧಾನ ಮತ್ತು ಮಹತ್ವದ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. mRNA ತಂತ್ರಜ್ಞಾನವು ದೇಹದ ಜೀವಕೋಶಗಳನ್ನು ಉತ್ತೇಜಿಸಿ, ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುವ ನಿರ್ದಿಷ್ಟ ಪ್ರೋಟೀನ್‌ಗಳನ್ನು ಉತ್ಪಾದಿಸುತ್ತದೆ.
2. ಈ ಲಸಿಕೆಯು ವೈದ್ಯಕೀಯ ಕ್ಷೇತ್ರದಲ್ಲಿ ಯಾವುದೇ ಕ್ರಾಂತಿಕಾರಿ ಬದಲಾವಣೆಗಳನ್ನು ತರುವುದಿಲ್ಲ.
3. ಈ ಆವಿಷ್ಕಾರವು ವೈದ್ಯಕೀಯ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ರಷ್ಯಾದ ಪ್ರಗತಿಯನ್ನು ತೋರಿಸುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
A) 1 ಮತ್ತು 2 ಮಾತ್ರ
B) 1 ಮತ್ತು 3 ಮಾತ್ರ
C) 2 ಮತ್ತು 3 ಮಾತ್ರ
D) 1, 2 ಮತ್ತು 3
15: ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA) ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. UNGA ಅನ್ನು 1945ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ವಿಶ್ವಸಂಸ್ಥೆಯ ಎಲ್ಲ 193 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.
2. ಇದರ ಅಧಿವೇಶನಗಳು ಪ್ರತಿವರ್ಷ ಜನವರಿಯಿಂದ ಮಾರ್ಚ್‌ವರೆಗೆ ನಡೆಯುತ್ತವೆ.
3. ಪ್ರಸ್ತುತ ಫಿಲೆಮಾನ್ ಯಂಗ್ ಅವರು UNGA ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
16: UNGA ದ ಪ್ರಮುಖ ಕಾರ್ಯಗಳು ಮತ್ತು ಮಹತ್ವದ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಇದು ವಿಶ್ವ ಶಾಂತಿ, ಭದ್ರತೆ ಮತ್ತು ಮಾನವ ಹಕ್ಕುಗಳ ಬಗ್ಗೆ ಚರ್ಚಿಸಿ ಶಿಫಾರಸುಗಳನ್ನು ನೀಡುತ್ತದೆ.
2. ಭದ್ರತಾ ಮಂಡಳಿಯು ವಿಫಲವಾದರೆ ಶಾಂತಿ ಭಂಗದ ಸಂದರ್ಭಗಳಲ್ಲಿ ಕ್ರಮ ಕೈಗೊಳ್ಳಲು UNGA ಗೆ ಅಧಿಕಾರವಿಲ್ಲ.
3. ಇದು ವಿಶ್ವಸಂಸ್ಥೆಯ ಬಜೆಟ್ ಅನ್ನು ಪರಿಶೀಲಿಸುತ್ತದೆ ಮತ್ತು ಸದಸ್ಯ ರಾಷ್ಟ್ರಗಳ ಆರ್ಥಿಕ ಕೊಡುಗೆಯನ್ನು ಮೌಲ್ಯಮಾಪನ ಮಾಡುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
17: ಇತ್ತೀಚಿನ ಕ್ರೀಡಾ ಘಟನೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಮ್ಯಾಕ್ಸ್ ವರ್ಸ್ಟಪ್ಪೆನ್ 2025ರ ಇಟಾಲಿಯನ್ ಗ್ರಾಂಡ್ ಪ್ರಿಕ್ಸ್ ಅನ್ನು ಗೆದ್ದಿದ್ದಾರೆ, ಇದು ಫಾರ್ಮುಲಾ 1 ಇತಿಹಾಸದಲ್ಲಿಯೇ ಅತ್ಯಂತ ವೇಗದ ಓಟವಾಗಿದೆ.
2. ಭಾರತದ ಪುರುಷರ ಹಾಕಿ ತಂಡವು ಎಂಟು ವರ್ಷಗಳ ಬಳಿಕ ಹಾಕಿ ಏಷ್ಯಾಕಪ್ 2025 ಅನ್ನು ಗೆದ್ದಿದ್ದು, ಇದು ಅವರಿಗೆ ವಿಶ್ವಕಪ್‌ಗೆ ನೇರ ಪ್ರವೇಶವನ್ನು ನೀಡಿದೆ.
3. ಯುಎಸ್‌ ಓಪನ್ 2025 ಮಹಿಳಾ ಸಿಂಗಲ್ಸ್‌ನಲ್ಲಿ ಅರೈನಾ ಸಬಲೆಂಕಾ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದರು.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
18: CAFA ನೇಷನ್ಸ್ ಕಪ್ ಮತ್ತು ಯುಎಸ್‌ ಓಪನ್ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. CAFA ನೇಷನ್ಸ್ ಕಪ್ 2025 ಫುಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಆತಿಥೇಯ ಉಜ್ಬೇಕಿಸ್ತಾನ್ ಪ್ರಶಸ್ತಿ ಗೆದ್ದಿತು.
2. ಭಾರತ ತಂಡ CAFA ನೇಷನ್ಸ್ ಕಪ್‌ನಲ್ಲಿ ಚಿನ್ನದ ಪದಕವನ್ನು ಪಡೆಯಿತು.
3. ಕಾರ್ಲೋಸ್ ಅಲ್ಕರಾಜ್ ಅವರು ಯುಎಸ್‌ ಓಪನ್ 2025 ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಜನ್ನಿಕ್ ಸಿನ್ನರ್ ಅವರನ್ನು ಸೋಲಿಸಿ ತಮ್ಮ ಎರಡನೇ ಪ್ರಶಸ್ತಿ ಗೆದ್ದರು.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
19: ಅಂತರರಾಷ್ಟ್ರೀಯ ದಿನಗಳ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಪ್ರತಿ ವರ್ಷ ಸೆಪ್ಟೆಂಬರ್ 8 ಅನ್ನು ಅಂತರರಾಷ್ಟ್ರೀಯ ಸಾಕ್ಷರತಾ ದಿನ ಎಂದು ಆಚರಿಸಲಾಗುತ್ತದೆ.
2. 2025ರ ಸಾಕ್ಷರತಾ ದಿನದ ಥೀಮ್ “ಬಹುಭಾಷಾ ಶಿಕ್ಷಣವನ್ನು ಉತ್ತೇಜಿಸುವುದು: ಪರಸ್ಪರ ತಿಳುವಳಿಕೆ ಮತ್ತು ಶಾಂತಿಗಾಗಿ ಸಾಕ್ಷರತೆ” ಎಂಬುದು.
3. ಸೆಪ್ಟೆಂಬರ್ 7ರಂದು ವಿಶ್ವಸಂಸ್ಥೆಯು ‘ಸ್ವಚ್ಛ ಗಾಳಿ ಮತ್ತು ನೀಲಿ ಆಕಾಶಕ್ಕಾಗಿ ಅಂತರರಾಷ್ಟ್ರೀಯ ದಿನ’ ವನ್ನು ಆಚರಿಸುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
20: ಅನುಪರ್ಣಾ ರಾಯ್ ಅವರ ಸಾಧನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಅನುಪರ್ಣಾ ರಾಯ್ ನಿರ್ದೇಶನದ ಹಿಂದಿ ಚಲನಚಿತ್ರ ‘Songs of Forgotten Trees’ ವೆನಿಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿಯನ್ನು ಗಳಿಸಿದೆ.
2. ಈ ಚಿತ್ರವು ವಲಸೆ ಬಂದ ನಟಿಯ ಬದುಕು ಮತ್ತು ಅವಳ ಕನಸುಗಳ ಹೋರಾಟವನ್ನು ಒಳಗೊಂಡಿದೆ.
3. ಈ ಪ್ರಶಸ್ತಿಯನ್ನು ಅವರು ತಮ್ಮ ಕುಟುಂಬ ಸದಸ್ಯರಿಗೆ ಅರ್ಪಿಸಿದ್ದಾರೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
21: ಚೀನಾದ ‘ಗೆಲಿ ಸಮೂಹ’ ಉಪಗ್ರಹಗಳ ಉಡಾವಣೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಜೀಸ್ಪೇಸ್ (GeeSpace) ತನ್ನ ಗೆಲಿ ಸಮೂಹಕ್ಕಾಗಿ ಗ್ರೂಪ್-05 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
2. ಈ ಉಪಗ್ರಹಗಳನ್ನು ಸ್ಮಾರ್ಟ್ ಡ್ರ್ಯಾಗನ್-3 (Smart Dragon-3) ರಾಕೆಟ್ ಬಳಸಿ ಉಡಾವಣೆ ಮಾಡಲಾಯಿತು.
3. ಗೆಲಿ ಸಮೂಹವು ಜಾಗತಿಕ ಬಳಕೆದಾರರಿಗೆ ವಾಣಿಜ್ಯ ಉಪಗ್ರಹ ಇಂಟರ್ನೆಟ್ ಆಫ್ ಥಿಂಗ್ಸ್ (IoT) ಸಂವಹನ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
22: ಸ್ಮಾರ್ಟ್ ಡ್ರ್ಯಾಗನ್-3 ರಾಕೆಟ್ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಸ್ಮಾರ್ಟ್ ಡ್ರ್ಯಾಗನ್-3 ರಾಕೆಟ್ ಅನ್ನು ಚೀನಾ ನ್ಯಾಷನಲ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (CNSA) ಅಭಿವೃದ್ಧಿಪಡಿಸಿದೆ.
2. ಇದು ನಾಲ್ಕು ಹಂತದ ಘನ ಇಂಧನ ವಾಹಕ ರಾಕೆಟ್ ಆಗಿದ್ದು, ಸೂರ್ಯ-ಅನುಕಲಿತ ಕಕ್ಷೆಗೆ ಬಾಹ್ಯಾಕಾಶ ನೌಕೆಗಳನ್ನು ಉಡಾಯಿಸಲು ವಿನ್ಯಾಸಗೊಳಿಸಲಾಗಿದೆ.
3. ಇದು 500 ಕಿಲೋಮೀಟರ್ ಎತ್ತರದಲ್ಲಿರುವ ಸೂರ್ಯ-ಅನುಕಲಿತ ಕಕ್ಷೆಗೆ 1.5 ಟನ್‌ಗಳಷ್ಟು ಪೇಲೋಡ್ ಅನ್ನು ಕಳುಹಿಸಬಲ್ಲದು.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
23: ‘UPI–UPU ಇಂಟಿಗ್ರೇಶನ್ ಪ್ರಾಜೆಕ್ಟ್’ ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಈ ಯೋಜನೆಯನ್ನು ಕೇಂದ್ರ ಸಂವಹನ ಸಚಿವಾಲಯದ ಸಚಿವರಾದ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ಉದ್ಘಾಟಿಸಿದರು.
2. ಇದನ್ನು ದುಬೈನಲ್ಲಿ ನಡೆದ 28ನೇ ಯುನಿವರ್ಸಲ್ ಪೋಸ್ಟಲ್ ಕಾಂಗ್ರೆಸ್‌ನಲ್ಲಿ ಪ್ರಾರಂಭಿಸಲಾಯಿತು.
3. ಇದು ಗಡಿಯಾಚೆಗಿನ ಪಾವತಿಗಳನ್ನು ಸರಳ ಮತ್ತು ಕಡಿಮೆ ವೆಚ್ಚದಲ್ಲಿ ಮಾಡಲು ಅನುಕೂಲವಾಗುತ್ತದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
24: ಯುನಿವರ್ಸಲ್ ಪೋಸ್ಟಲ್ ಯೂನಿಯನ್ (UPU) ಮತ್ತು ‘UPI-UPU ಇಂಟಿಗ್ರೇಶನ್ ಪ್ರಾಜೆಕ್ಟ್’ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. UPU ವಿಶ್ವಸಂಸ್ಥೆಯ (UN) ವಿಶೇಷ ಏಜೆನ್ಸಿಯಾಗಿದೆ ಮತ್ತು 1874ರಲ್ಲಿ ಸ್ಥಾಪನೆಯಾಗಿದೆ.
2. UPI ಅನ್ನು ಜಾಗತಿಕ ಅಂಚೆ ಜಾಲದೊಂದಿಗೆ ಸಂಯೋಜಿಸುವುದರಿಂದ ಬಳಕೆದಾರರು ಅಂಚೆ ಕಚೇರಿಗಳ ಮೂಲಕ ಗಡಿಯಾಚೆಗಿನ ಹಣ ರವಾನೆಯನ್ನು ಮಾಡಬಹುದು.
3. 28ನೇ ಯುನಿವರ್ಸಲ್ ಪೋಸ್ಟಲ್ ಕಾಂಗ್ರೆಸ್‌ನ ಥೀಮ್ ‘ಸುಸ್ಥಿರತೆಗಾಗಿ ನಾವೀನ್ಯತೆ’ ಎಂಬುದು.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
25: ಸಿ.ಪಿ. ರಾಧಾಕೃಷ್ಣನ್ ಅವರ ಆಯ್ಕೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಸಿ.ಪಿ. ರಾಧಾಕೃಷ್ಣನ್ ಅವರು ಭಾರತದ 15ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.
2. ಅವರು 452 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಬಿ. ಸುದರ್ಶನ ರೆಡ್ಡಿ 300 ಮತಗಳನ್ನು ಪಡೆದರು.
3. ಜಗದೀಪ್ ಧನಕರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪರಾಷ್ಟ್ರಪತಿ ಹುದ್ದೆಗೆ ಈ ಚುನಾವಣೆ ನಡೆಯಿತು.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
A) 1 ಮತ್ತು 2 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3
26: ಭಾರತದ ಉಪರಾಷ್ಟ್ರಪತಿಯ ಹುದ್ದೆ ಮತ್ತು ಸಿ.ಪಿ. ರಾಧಾಕೃಷ್ಣನ್ ಅವರ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಉಪರಾಷ್ಟ್ರಪತಿಗಳು ಭಾರತದ ಎರಡನೇ ಅತಿ ಹೆಚ್ಚು ಸಾಂವಿಧಾನಿಕ ಪ್ರಾಧಿಕಾರವಾಗಿದ್ದು, ರಾಜ್ಯಸಭೆಯ ಪದನಿಮಿತ್ತ ಸಭಾಪತಿಯಾಗಿ ಕಾರ್ಯನಿರ್ವಹಿಸುತ್ತಾರೆ.
2. ಸಿ.ಪಿ. ರಾಧಾಕೃಷ್ಣನ್ ಅವರು ಉಪರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ ತಮಿಳುನಾಡಿನ ಮೊದಲ ನಾಯಕರಾಗಿದ್ದಾರೆ.
3. ಅಧಿಕಾರದಲ್ಲಿರುವಾಗಲೇ ನಿಧನರಾದ ಮೊದಲ ಮತ್ತು ಏಕೈಕ ಉಪರಾಷ್ಟ್ರಪತಿ ಮೊಹಮ್ಮದ್ ಹಮೀದ್ ಅನ್ಸಾರಿ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ?
A) 1 ಮಾತ್ರ
B) 2 ಮತ್ತು 3 ಮಾತ್ರ
C) 1 ಮತ್ತು 3 ಮಾತ್ರ
D) 1, 2 ಮತ್ತು 3