08 ಡಿಸೆಂಬರ್‌ 2025

08 ಡಿಸೆಂಬರ್‌ 2025

1. ಸ್ಟೇಬಲ್‌ಕಾಯಿನ್‌ಗಳ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಇವು ಮೌಲ್ಯವನ್ನು ಸ್ಥಿರ ಆಸ್ತಿಗೆ ಜೋಡಿಸಿರುವ ಕ್ರಿಪ್ಟೋ ಆಸ್ತಿಗಳಾಗಿವೆ.
2. ಇವು ಬ್ಯಾಂಕಿಂಗ್ ಮಧ್ಯವರ್ತಿಗಳನ್ನು ಬಲಪಡಿಸುವಲ್ಲಿ ಸಹಾಯ ಮಾಡುತ್ತವೆ.
3. ಮಾರುಕಟ್ಟೆಯಲ್ಲಿ ಹಠಾತ್ ಹಿಂಪಡೆಯುವಿಕೆಯಿಂದ ಅಗಾಧ ಆರ್ಥಿಕ ಅಸ್ಥಿರತೆ ಉಂಟಾಗಬಹುದು.
ಸರಿಯಾದ ಹೇಳಿಕೆಗಳನ್ನು ಗುರುತಿಸಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3

 

2. IMF ವರದಿಯಲ್ಲಿ ಉಲ್ಲೇಖಿಸಿರುವ ನಿಯಂತ್ರಣದ ಅವಶ್ಯಕತೆಯ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ನಿಯಂತ್ರಣದ ವ್ಯತ್ಯಾಸಗಳು ವಿತರಕರಿಗೆ ಆರ್ಬಿಟ್ರೇಜ್ ಅವಕಾಶ ಕೊಡಬಹುದು.
2. CBDCಗಳು ನಿಯಂತ್ರಿತ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವುದರಿಂದ ಗ್ರಾಹಕ ರಕ್ಷಣೆಯನ್ನು ಹೆಚ್ಚಿಸುತ್ತವೆ.
3. ಸ್ಟೇಬಲ್‌ಕಾಯಿನ್‌ಗಳು ದೇಶೀಯ ವಿತ್ತೀಯ ಸಾರ್ವಭೌಮತ್ವವನ್ನು ಬಲಪಡಿಸುತ್ತವೆ.
4. ಗಡಿಯಾಚೆಗಿನ ಪಾವತಿಗಳಲ್ಲಿ ಸ್ಟೇಬಲ್‌ಕಾಯಿನ್‌ಗಳ ಬಳಕೆ ವೇಗವಾಗಿ ವಿಸ್ತರಿಸುತ್ತಿದೆ.
ಸರಿಯಾದ ಹೇಳಿಕೆಗಳನ್ನು ಗುರುತಿಸಿ:
A. 1, 2 ಮತ್ತು 3
B. 1, 2 ಮತ್ತು 4
C. 2, 3 ಮತ್ತು 4
D. 1, 3 ಮತ್ತು 4

 

3. ಬಹುಪಕ್ಷೀಯತೆಯ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಇದು ಕನಿಷ್ಠ ಮೂರು ರಾಷ್ಟ್ರಗಳ ನಡುವೆ ಜಾಗತಿಕ ಸಮಸ್ಯೆಗಳನ್ನು ಬಗೆಹರಿಸಲು ಸಹಕಾರದ ವಿಧಾನ.
2. ಬಹುಪಕ್ಷೀಯತೆ ಶಾಂತಿ ಮತ್ತು ಭದ್ರತೆಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
3. ಬಹುಪಕ್ಷೀಯತೆ ಏಕಪಕ್ಷೀಯತೆಯಿಗಿಂತ ರಾಷ್ಟ್ರಗಳ ಸ್ವಾಯತ್ತತೆಯನ್ನು ಹೆಚ್ಚು ದುರ್ಬಲಗೊಳಿಸುತ್ತದೆ.
ಸರಿಯಾದ ಹೇಳಿಕೆಗಳನ್ನು ಗುರುತಿಸಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3 ಮಾತ್ರ

 

4. ಪ್ರಸ್ತುತ ಬಹುಪಕ್ಷೀಯ ವ್ಯವಸ್ಥೆಯ ಬಿಕ್ಕಟ್ಟಿಗೆ ಕಾರಣಗಳ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಅಮೆರಿಕ, ಚೀನಾ ಮತ್ತು ರಷ್ಯಾ ನಡುವಿನ ಪೈಪೋಟಿಯು ಜಾಗತಿಕ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಕುಗ್ಗಿಸಿದೆ.
2. ವಿಶ್ವಸಂಸ್ಥೆಯಂತಹ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ ಅಸಮಾನವಾಗಿದೆ.
3. ಪರ್ಯಾಯ ಬಣಗಳ ಉದಯ ಬಹುಪಕ್ಷೀಯತೆಯನ್ನು ಬಲಪಡಿಸಿದೆ.
4. ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿ ನಿರ್ಲಕ್ಷಿತವಾಗಿರುವುದು ವ್ಯವಸ್ಥೆಯ ಮಾನ್ಯತೆಯನ್ನು ಕುಗ್ಗಿಸಿದೆ.
ಸರಿಯಾದ ಹೇಳಿಕೆಗಳನ್ನು ಗುರುತಿಸಿ:
A. 1, 2 ಮತ್ತು 3 ಮಾತ್ರ
B. 1, 2 ಮತ್ತು 4 ಮಾತ್ರ
C. 2, 3 ಮತ್ತು 4 ಮಾತ್ರ
D. 1, 3 ಮತ್ತು 4 ಮಾತ್ರ

 

5. ವಿಪ್ ಮತ್ತು 10ನೇ ಅನುಸೂಚಿ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಪಕ್ಷದ ನಿರ್ದೇಶನಕ್ಕೆ ವಿರುದ್ಧವಾಗಿ ಮತ ಚಲಾಯಿಸಿದರೆ 10ನೇ ಅನುಸೂಚಿಯಡಿ ಅನರ್ಹತೆ ಸಂಭವಿಸಬಹುದು.
2. ವಿಪ್ ಹುದ್ದೆ ಮತ್ತು ಕಚೇರಿಗೆ ಸಂವಿಧಾನಾತ್ಮಕ ಸ್ಥಾನಮಾನವಿದೆ.
3. ಪಕ್ಷಾಂತರ ತಡೆಯುವುದು ವಿಪ್ ಜಾರಿಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.
ಸರಿಯಾದ ಹೇಳಿಕೆಗಳನ್ನು ಗುರುತಿಸಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3 ಮಾತ್ರ

 

6. ವಿಪ್‌ ವ್ಯವಸ್ಥೆಗೆ ಸಂಬಂಧಿಸಿದ ಸುಧಾರಣಾ ಶಿಫಾರಸುಗಳ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. 170ನೇ ಕಾನೂನು ಆಯೋಗವು ಸರ್ಕಾರದ ಸ್ಥಿರತಿಗೆ ಸಂಬಂಧಿಸಿದ ಮತದಾನಗಳಲ್ಲಿಯೇ ವಿಪ್ ಬಳಸಬೇಕು ಎಂದು ಹೇಳಿದೆ.
2. ಪ್ರಸ್ತಾಪಿತ ಖಾಸಗಿ ಸದಸ್ಯರ ವಿಧೇಯಕವು ಸಂಸದರಿಗೆ ತಮ್ಮ ಆತ್ಮಸಾಕ್ಷಿಯಂತೆ ಮತ ಚಲಾಯಿಸಲು ಸ್ವಾತಂತ್ರ್ಯ ನೀಡುವ ಉದ್ದೇಶ ಹೊಂದಿದೆ.
3. ವಿಪ್ ಪದ್ಧತಿ ಸಂವಿಧಾನದ 19(1)(a) ವಿಧಿಯ ಅಡಿಯಲ್ಲಿ ನೀಡಿರುವ ಸ್ವಾತಂತ್ರ್ಯಕ್ಕೆ ಯಾವುದೇ ಸಂಬಂಧವಿಲ್ಲ.
4. ವಿಪ್ ಜಾರಿಯು ಕೆಲವೊಮ್ಮೆ ಸಂಸದರ ಭಿನ್ನಾಭಿಪ್ರಾಯ ಅಭಿವ್ಯಕ್ತಿ ಹತ್ತಿಕ್ಕುವುದಕ್ಕೆ ಕಾರಣವಾಗುತ್ತದೆ.
ಸರಿಯಾದ ಹೇಳಿಕೆಗಳನ್ನು ಗುರುತಿಸಿ:
A. 1, 2 ಮತ್ತು 3 ಮಾತ್ರ
B. 1, 2 ಮತ್ತು 4 ಮಾತ್ರ
C. 2, 3 ಮತ್ತು 4 ಮಾತ್ರ
D. 1, 3 ಮತ್ತು 4 ಮಾತ್ರ

 

7. ಧ್ರುವ ವ್ಯವಸ್ಥೆಯ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಧ್ರುವವು ಸಾಂಪ್ರದಾಯಿಕ ವಿಳಾಸಗಳನ್ನು ವರ್ಚುವಲ್ ಲೇಬಲ್‌ಗಳ ಮೂಲಕ ಬದಲಾಯಿಸುವ ರಾಷ್ಟ್ರೀಯ ಡಿಜಿಟಲ್ ವಿಳಾಸ ವ್ಯವಸ್ಥೆ.
2. ಡಿಜಿಪಿನ್ ಪ್ರತಿ 14 ಚದರ ಮೀಟರ್ ಪ್ರದೇಶಕ್ಕೆ GPS ಆಧಾರಿತ ವಿಶಿಷ್ಟ ಗುರುತು ಒದಗಿಸುತ್ತದೆ.
3. ಧ್ರುವ ವ್ಯವಸ್ಥೆಯಲ್ಲಿರುವ ವಿಳಾಸ ಪ್ರವೇಶ ನಿಯಂತ್ರಣವು ನೆಟ್ವರ್ಕ್ ನಿರ್ವಾಹಕರ ಕೈಯಲ್ಲಿರುತ್ತದೆ, ಬಳಕೆದಾರರ ಕೈಯಲ್ಲಲ್ಲ.
ಸರಿಯಾದ ಹೇಳಿಕೆಗಳನ್ನು ಗುರುತಿಸಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3 ಮಾತ್ರ

 

8. ಧ್ರುವ ವ್ಯವಸ್ಥೆಯ ವಿನ್ಯಾಸ ಹಾಗೂ ಕಾರ್ಯಪದ್ಧತಿ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಡಿಜಿಪಿನ್ 10 ಅಕ್ಷರಗಳ ಆಲ್ಫಾನ್ಯೂಮರಿಕ್ ಕೋಡ್ ಆಗಿದೆ.
2. ಧ್ರುವವು ಇ-ಕಾಮರ್ಸ್, ಲಾಜಿಸ್ಟಿಕ್ಸ್ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳೊಂದಿಗೆ ಪರಸ್ಪರ ಕಾರ್ಯನಿರ್ವಹಿಸಬಲ್ಲ ಮೂಲಸೌಕರ್ಯ.
3. ಬಳಕೆದಾರರು ತಮ್ಮ ವಿಳಾಸವನ್ನು ಯಾರು ನೋಡಬಹುದು ಎಂಬುದನ್ನು ನಿಯಂತ್ರಿಸುವ ಸಾಧ್ಯತೆ ಇಲ್ಲ.
4. ಧ್ರುವಕ್ಕೆ ರಾಷ್ಟ್ರೀಯ ನೆಟ್‌ವರ್ಕ್ ನಿರ್ವಾಹಕ ಮಾದರಿಯ ಆಡಳಿತ ವ್ಯವಸ್ಥೆ ಇರಲಿದೆ.
ಸರಿಯಾದ ಹೇಳಿಕೆಗಳನ್ನು ಗುರುತಿಸಿ:
A. 1 ಮತ್ತು 2 ಮಾತ್ರ
B. 1, 2 ಮತ್ತು 4 ಮಾತ್ರ
C. 2, 3 ಮತ್ತು 4 ಮಾತ್ರ
D. 1, 3 ಮತ್ತು 4 ಮಾತ್ರ

 

9. ಭಾರತದಲ್ಲಿ ಅಗ್ನಿ ಅವಘಡಗಳ ಪ್ರಮುಖ ಕಾರಣಗಳ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಬಿಸಿ ಮತ್ತು ಒಣ ಹವಾಮಾನ ಸೇರಿದಂತೆ ನೈಸರ್ಗಿಕ ಅಂಶಗಳು ಕೆಲವು ಘಟನೆಗಳಿಗೆ ಕಾರಣವಾಗುತ್ತವೆ.
2. ಅಗ್ನಿಶಾಮಕ ಠಾಣೆಗಳ ಕೊರತೆ ಭಾರತದಲ್ಲಿ ಅಗ್ನಿ ಅಪಾಯವನ್ನು ಹೆಚ್ಚಿಸುತ್ತದೆ.
3. ವಸತಿ ಪ್ರದೇಶಗಳಲ್ಲಿ ಅಗ್ನಿ ಪ್ರಕರಣಗಳು ಅಪರೂಪವಾಗಿ ವರದಿಯಾಗುತ್ತವೆ.
ಸರಿಯಾದ ಹೇಳಿಕೆಗಳನ್ನು ಗುರುತಿಸಿ:
A. 1 ಮತ್ತು 2 ಮಾತ್ರ
B. 2 ಮತ್ತು 3 ಮಾತ್ರ
C. 1 ಮತ್ತು 3 ಮಾತ್ರ
D. 1, 2 ಮತ್ತು 3 ಮಾತ್ರ

 

10. ಅಗ್ನಿ ಸುರಕ್ಷತೆಯನ್ನು ಸುಧಾರಿಸುವ ಮುಂದಿನ ಕ್ರಮಗಳ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಅಪಾಯ ಮೌಲ್ಯಮಾಪನಕ್ಕೆ ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆಗಳನ್ನು ಬಳಸುವ ಪ್ರಸ್ತಾಪವಿದೆ.
2. ಅಗ್ನಿಶಾಮಕ ಠಾಣೆಗಳನ್ನು ರಸ್ತೆ ಜಾಲ ಹಾಗೂ ಸಂಚಾರಕ್ಕೆ ಅನುಗುಣವಾಗಿ ಸ್ಥಳಾಂತರಿಸಬೇಕು.
3. ಅಗ್ನಿ ತೆರಿಗೆ ಪರಿಚಯಿಸುವುದು ಮೂಲಸೌಕರ್ಯ ಸುಧಾರಣೆಗೆ ನೆರವಾಗಬಹುದು.
4. ಪರವಾನಗಿ ನೀಡುವ ವೇಳೆ ಪರಿಶೀಲನೆ ಅಗತ್ಯವಿಲ್ಲ, ಏಕೆಂದರೆ ಅದು ವಿಳಂಬಕ್ಕೆ ಕಾರಣವಾಗುತ್ತದೆ.
ಸರಿಯಾದ ಹೇಳಿಕೆಗಳನ್ನು ಗುರುತಿಸಿ:
A. 1 ಮತ್ತು 4 ಮಾತ್ರ
B. 1, 2 ಮತ್ತು 3 ಮಾತ್ರ
C. 2, 3 ಮತ್ತು 4 ಮಾತ್ರ
D. 1, 3 ಮತ್ತು 4 ಮಾತ್ರ

 

11. ಕಾರಾಗೃಹಗಳಲ್ಲಿ ವಿಕಲಚೇತನ ಕೈದಿಗಳ ಹಕ್ಕುಗಳ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ವಿಕಲಚೇತನ ಕೈದಿಗಳನ್ನು ನಿರ್ಲಕ್ಷಿಸಿದರೆ RPwD ಕಾಯ್ದೆ ಸೆಕ್ಷನ್ 89ರಡಿ ದಂಡನಾತ್ಮಕ ಕ್ರಮ ಕೈಗೊಳ್ಳಬಹುದು.
2. ಸುಪ್ರೀಂ ಕೋರ್ಟ್ ರಾಷ್ಟ್ರೀಯ ಮಟ್ಟದಲ್ಲಿ ವಿಸ್ತೃತ ಭೇಟಿ ಹಕ್ಕುಗಳನ್ನು ಒದಗಿಸುವಂತೆ ಸೂಚಿಸಿದೆ.
3. RPwD ಕಾಯ್ದೆಯು ಅಂಗವೈಕಲ್ಯ ವಿಭಾಗಗಳನ್ನು 21ರಿಂದ 7ಕ್ಕೆ ಕಡಿತಗೊಳಿಸಿದೆ.
ಸರಿಯಾದ ಹೇಳಿಕೆಗಳನ್ನು ಗುರುತಿಸಿ:
A. 1 ಮತ್ತು 3 ಮಾತ್ರ
B. 1 ಮತ್ತು 2 ಮಾತ್ರ
C. 2 ಮತ್ತು 3 ಮಾತ್ರ
D. 1, 2 ಮತ್ತು 3 ಮಾತ್ರ

 

12. RPwD ಕಾಯ್ದೆ, 2016 ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಈ ಕಾಯ್ದೆ 1995ರ ಕಾಯ್ದೆಯನ್ನು ಬದಲಿಸಲು ಜಾರಿಗೆ ಬಂದಿತು.
2. ಅಂಗವೈಕಲ್ಯ ಹೊಂದಿರುವವರಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ಒದಗಿಸುತ್ತದೆ.
3. ಈ ಕಾಯ್ದೆ UNCRPD ಮಾನದಂಡಗಳಿಗೆ ಸಂಪೂರ್ಣ ಹೊಂದಾಣಿಕೆಯಾಗುತ್ತದೆ.
4. “ನಿಗದಿತ ಪ್ರಮಾಣದ ಅಂಗವೈಕಲ್ಯ” ಎಂದರೆ ಕನಿಷ್ಠ 40 ಶೇಕಡಾ ಪ್ರಮಾಣದ ಅಂಗವೈಕಲ್ಯ.
ಸರಿಯಾದ ಹೇಳಿಕೆಗಳನ್ನು ಗುರುತಿಸಿ:
A. 1, 2 ಮತ್ತು 4 ಮಾತ್ರ
B. 2, 3 ಮತ್ತು 4 ಮಾತ್ರ
C. 1, 3 ಮತ್ತು 4 ಮಾತ್ರ
D. 1, 2 ಮತ್ತು 3 ಮಾತ್ರ