ಚಂದ್ರಯಾನ-3
ಚಂದ್ರಯಾನ-3
ವಿವಿಧ ಚಂದ್ರಯಾನ ಕಾರ್ಯಾಚರಣೆಗಳ ಬಗ್ಗೆ ಸಂಕ್ಷಿಪ್ತವಾಗಿ ಚರ್ಚಿಸಿ
ಸುದ್ದಿಯಲ್ಲಿ ಏಕಿದೆ? ಚಂದ್ರಯಾನ-3 ಬಾಹ್ಯಾಕಾಶ ನೌಕೆ ಅಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ಸುರಕ್ಷಿತವಾಗಿ ಇಳಿದ ಸಂಭ್ರಮದ ನೆನಪಿಗಾಗಿ, ಕೇಂದ್ರ ಸಂಪುಟ ಆಗಸ್ಟ್ 23 ಅನ್ನು 'ರಾಷ್ಟ್ರೀಯ ಬಾಹ್ಯಾಕಾಶ ದಿನ' ಎಂದು ಆಚರಿಸುವುದಾಗಿ ಘೋಷಿಸಿದೆ.
ಭಾರತದ ಚಂದ್ರಯಾನ ಮಿಷನ್ ಗಳು
- ಉಡಾವಣಾ ವಾಹನ : LVM3 M4
- ಜುಲೈ 14, 2023 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SDSC) ಉಡಾವಣೆಗೊಂಡಿತ್ತು.
- 40 ದಿನಗಳ ನಂತರ ಅಂದರೆ ಆಗಸ್ಟ್ 23 ರಂದು ಚಂದ್ರನ ಅಂಗಳವನ್ನು ತಲುಪಿತು
- ಚಂದ್ರಯಾನ 3 ಲ್ಯಾಂಡರ್ ಸ್ಪರ್ಶಿಸಿದ ಸ್ಥಳವನ್ನು ಅನ್ನು ಶಿವಶಕ್ತಿ ಎಂದು ಹೆಸರಿಸಲಾಗಿದೆ
- ಕಾರ್ಯಾಚರಣೆಯ ಅವಧಿ: ಒಂದು ಚಂದ್ರನ ದಿನ ಅಂದರೆ ಭೂಮಿಯ 14 ದಿನಗಳು ಏಕೆಂದರೆ ಬಾಹಾಕ್ಯಾಸ ನೌಕೆಯು ಸೌರ ಶಕ್ತಿಯ ಮೇಲೆ ಕೆಲಸ ಮಾಡುತ್ತದೆ. ಚಂದ್ರನ ರಾತ್ರಿಗಳಿಗೆ ಇದನ್ನು ವಿನ್ಯಾಸಗೊಳಿಸಲಾಗಿಲ್ಲ ಏಕೆಂದರೆ ಚಂದ್ರನಲ್ಲಿ ರಾತ್ರಿ ಸಮಯವೂ ತುಂಬಾ ಶೀತ ವಾತಾವರಣದಿಂದ ಕೂಡಿರುತ್ತದೆ. -230 ಡಿಗ್ರಿ ತಲಪುತ್ತದೆ. ಸೂರ್ಯನ ಬೆಳಕಿನ ಕೊರತೆ ಮತ್ತು ವಿಪರೀತ ಚಳಿಯು ಉಪಕರಣದ ಕಾರ್ಯಾಚರಣೆ ಮತ್ತು ಸಾಮರ್ಥ್ಯಕ್ಕೆ ತೊಂದರೆಗಳನ್ನು ಉಂಟುಮಾಡುತ್ತದೆ.
- ನೌಕೆಯು ಮೂರು ಉಪಕರಣಗಳನ್ನು ಹೊಂದಿದೆ: ಪ್ರೊಪೆಲ್ಷನ್ ಮೊಡ್ಯೂಲ್, ವಿಕ್ರಮ ಲ್ಯಾಂಡರ ಮತ್ತು ಪ್ರಗ್ಯಾನ್ ರೋವರ್(ಈ ಮಿಷನ್ ನಲ್ಲಿ ಆರ್ಬಿಟರ್ ಮೊಡ್ಯೂಲ್ ಇಲ್ಲ ಏಕೆಂದರೆ ಚಂದ್ರಯಾನ 2 ರ ಆರ್ಬಿಟರ್ ಮೊಡ್ಯೂಲ್ ಯಶಸ್ವಿಯಾಗಿ ಕಾರ್ಯಾಚರಣೆ ಮಾಡುತ್ತಿರುವುದರಿಂದ ಅದರ ಸಹಾಯವನ್ನು ಪಡೆಯಲಾಗುತ್ತದೆ)
- ತೂಕ : ವಿಕ್ರಮ ಲ್ಯಾಂಡರ: ಅಂದಾಜು 1750 ಕೆ.ಜಿ.ಮತ್ತು ರೋವರ್ 26 ಕೆ.ಜಿ.
- ಪ್ರೊಪೆಲ್ಷನ್ ಮೊಡ್ಯೂಲ್ನ ಕಾರ್ಯ: ನೌಕೆಯನ್ನು ಭೂಮಿಯ ಆರ್ಬಿಟನಿಂದ ಹೊರತೆಗೆಯುವುದು ಚಂದ್ರನಲ್ಲಿ ತಲುಪಿಸುವುದು. ಇದು ಚಂದ್ರನ ಆರ್ಬಿಟನಲ್ಲಿ 4 ರಿಂದ 6 ತಿಂಗಳವರೆಗೆ ಸುತ್ತುತ್ತ ಇರುತ್ತದೆ. ಇದರಲ್ಲಿ ಸ್ಪೆಕ್ಟ್ರೋ-ಪೋಲಾರಿಮೆಟ್ರಿ ಹ್ಯಾಬಿಟ್ಯಾಟ್ ಆಫ್ ಪ್ಲಾನೆಟ್ ಅರ್ಥ್(SHAPE) ಎನ್ನುವ ಉಪಕರಣವಿದೆ. ಇದು ಸಣ್ಣ ಸಣ್ಣ ಹೊರ ಗ್ರಹಗಳನ್ನು ಅಧ್ಯಯನ ಮಾಡುತ್ತದೆ.
- ರೋವರ್
ಎರಡು ಉಪಕರಣಗಳನ್ನು ಹೊಂದಿದೆ.
1 Laser Induced Breakdown Specroscope(LIBS ): ಚಂದ್ರನಲ್ಲಿರುವ ಮಣ್ಣಿನಲ್ಲಿರುವ ಖನಿಜಗಳನ್ನು ಅಧ್ಯಯನ ಮಾಡಲಿದೆ.
2 Alpha Particle X RAY Spectrum(APXS ):ಚಂದ್ರನ ಮೇಲಿರುವ ಕಲ್ಲುಗಳ ಅಧ್ಯಯನ ನಡೆಸಲಿದೆ.
- ವಿಕ್ರಮ ಲ್ಯಾಂಡರನಲ್ಲಿ 4 ಉಪಕರಣಗಳಿವೆ
- Radio Anatomy Of Bound Hypersensitive Ionosphere And Atmoshere(RAMBHA) : ಲೇಜರ್ ನಿಂದ ಚಂದ್ರನಲ್ಲಿರುವ ಕಲ್ಲುಗಳನ್ನು ಕರಗಿಸಿ ಅದರಿಂದ ಹೊರಬರುವ ಗ್ಯಾಸ್ ಅನ್ನು ವಿಶ್ಲೇಷಿಸಲಿದೆ.
- Chandra’s Surface Thermophysical Experiment(CHASTE) : ಚಂದ್ರನ ದಕ್ಷಿಣ ಧ್ರುವದ ತಾಪಮಾನವನ್ನು ಅಳೆಯಲಿದೆ
- Instrument For Lunar Seismic Activity (ILSA) ಚಂದ್ರನಲ್ಲಿ ಎಷ್ಟು ಭೂಕಂಪಗಳು ಅಂದರೆ ಚಂದ್ರ ಕಂಪನಗಳು ಸಂಭವಿಸುತ್ತವೆ ಅದನ್ನು ಪತ್ತೆ ಹಚ್ಚಲಿದೆ ಇದರಿಂದ ಚಂದ್ರನಲ್ಲಿರುವ ಕ್ರಸ್ಟ್ ಮತ್ತು ಮ್ಯಾಂಟಲ್ ಬಗ್ಗೆ ತಿಳಿಯಲು ಸಹಾಯಕವಾಗಲಿದೆ.
- Laser Retroreflector Array(LRA) ನಾಸಾದಿಂದ ಪಡೆಯಲಾಗಿದೆ ಲೇಜರನ ಸಹಾಯದಿಂದ ಸಿಗ್ನಲ್ ಕಳುಹಿಸುತ್ತದೆ. ಇದರಿಂದ ವಿಕ್ರಮ ಲ್ಯಾಂಡರ್ ಎಲ್ಲಿ ಇದೆ ಎಂದು ತಿಳಿಯಬಹುದಾಗಿದೆ.
- ಇಸ್ರೋದ ಮಾಹಿತಿ ಪ್ರಕಾರ ಚಂದ್ರನಲ್ಲಿ ಗಂಧಕ ಮತ್ತು ಆಮ್ಲಜನಕ ಇರುವುದು ಪತ್ತೆಯಾಗಿದೆ
ಚಂದ್ರಯಾನ-2: ಭಾಗಶಃ ಯಶಸ್ಸು ಮತ್ತು ಆವಿಷ್ಕಾರಗಳು:
- 2019 ರಲ್ಲಿ ಚಂದ್ರಯಾನ-2 ಚಂದ್ರನ ದಕ್ಷಿಣ ಧ್ರುವವನ್ನು ಅನ್ವೇಷಿಸುವ ಗುರಿಯೊಂದಿಗೆ ಆರ್ಬಿಟರ್, ಲ್ಯಾಂಡರ್ (ವಿಕ್ರಮ) ಮತ್ತು ರೋವರ್ (ಪ್ರಗ್ಯಾನ್) ಅನ್ನು ಒಳಗೊಂಡಿತ್ತು.
- ಉಡಾವಣಾ ವಾಹನ: GSLV MkIII-M1
- ಲ್ಯಾಂಡರ್ ಮತ್ತು ರೋವರ್ ಚಂದ್ರನ ಮೇಲ್ಮೈಯಲ್ಲಿ ಅಪ್ಪಳಿಸಿದರೂ, ಆರ್ಬಿಟರ್ ಯಶಸ್ವಿಯಾಗಿ ಡೇಟಾವನ್ನು ಸಂಗ್ರಹಿಸಿತು ಮತ್ತು ನೀರು ಇರುವುದರ ಬಗ್ಗೆ ಮಾಹಿತಿ ನೀಡಿದೆ
- ಚಂದ್ರಯಾನ 2 ಸ್ಪರ್ಶಿದ ಚಂದ್ರನ ಮೇಲಿನ ಸ್ಥಳವನ್ನು 'ತಿರಂಗ' ಎಂದು ಕರೆಯಲಾಗುವುದು.
ಚಂದ್ರಯಾನ-1:
- 2008 ರಲ್ಲಿ ಚಂದ್ರಯಾನ-1 ನೊಂದಿಗೆ ಭಾರತದ ಚಂದ್ರನ ಪರಿಶೋಧನಾ ಕಾರ್ಯಾಚರಣೆಗಳು ಪ್ರಾರಂಭವಾದವು ಇದು ಚಂದ್ರನ ಮೂರು ಆಯಾಮದ ಅಟ್ಲಾಸ್ ಅನ್ನು ರಚಿಸಲು ಮತ್ತು ಖನಿಜಶಾಸ್ತ್ರದ ಮ್ಯಾಪಿಂಗ್ ಅನ್ನು ನಡೆಸುವ ಗುರಿಯನ್ನು ಹೊಂದಿತ್ತು.
- ಇದೊಂದು ಇಂಪ್ಯಾಕ್ಟ್ ಮಿಷನ್ ಆಗಿತ್ತು : ಆರ್ಬಿಟರ್ ಕಾರ್ಯಾಚರಣೆಗಳ ವಿಸ್ತರಣೆಗಳು, ಕಾರ್ಯಾಚರಣೆಗಳು, ಚಂದ್ರನ ಮೇಲ್ಮೈಯಲ್ಲಿ ಅನಿಯಂತ್ರಿತ ಲ್ಯಾಂಡಿಂಗ್ ಮಾಡುವ ಉಪಕರಣಗಳನ್ನು ಒಳಗೊಂಡಿರುತ್ತವೆ, ನಾಶವಾಗುವ ಮೊದಲು ಅಮೂಲ್ಯವಾದ ಡೇಟಾವನ್ನು ಒದಗಿಸುತ್ತವೆ.
- ಉಡಾವಣಾ ವಾಹನ: PSLV - C11.
- ಚಂದ್ರಯಾನ-1 ಚಂದ್ರನ ಮೇಲ್ಮೈಯಲ್ಲಿ ನೀರು ಮತ್ತು ಹೈಡ್ರಾಕ್ಸಿಲ್ ಸಂಶೋಧನೆಗಳನ್ನು ಮಾಡಿದೆ.
- ಇಂಪ್ಯಾಕ್ಟ್ ಪ್ರೋಬ್ ಕ್ರ್ಯಾಶ್ ಲ್ಯಾಂಡ್ ಆದ ಸ್ಥಳಕ್ಕೆ ಜವಾಹರ್ ಎಂದು ಹೆಸರಿಸಲಾಗಿದೆ.
ಚಂದ್ರನ ಮಿಷನ್ ವಿಧಗಳು:
1.ಫ್ಲೈಬೈ ಮಿಷನ್: ಈ ಮಿಷನ್ಗಳು ಚಂದ್ರನ ಬಳಿ ಹಾದುಹೋಗುವ ಬಾಹ್ಯಾಕಾಶ ನೌಕೆಗಳನ್ನು ಅದರ ಕಕ್ಷೆಯನ್ನು ಪ್ರವೇಶಿಸದೆ ದೂರದಿಂದ ವೀಕ್ಷಣೆಗೆ ಅನುವು ಮಾಡಿಕೊಡುತ್ತದೆ.
ಉದಾಹರಣೆಗಳಲ್ಲಿ ಯುನೈಟೆಡ್ ಸ್ಟೇಟ್ಸ್ನ ಪಯೋನೀರ್ 3 ಮತ್ತು 4 ಮತ್ತು ಯುಎಸ್ಎಸ್ಆರ್ನ ಲೂನಾ 3 ಸೇರಿವೆ.
- ಆರ್ಬಿಟರ್ ಮಿಷನ್: ಈ ಬಾಹ್ಯಾಕಾಶ ನೌಕೆಗಳು ಚಂದ್ರನ ಮೇಲ್ಮೈ ಮತ್ತು ವಾತಾವರಣದ ದೀರ್ಘಾವಧಿಯ ಅಧ್ಯಯನಗಳನ್ನು ನಡೆಸಲು ಚಂದ್ರನ ಕಕ್ಷೆಯನ್ನು ಪ್ರವೇಶಿಸುತ್ತವೆ.
ಉದಾ: ಲೂನಾ -1 ಮತ್ತು ಇತರ 46 ಮಿಷನ್ಗಳು ಆರ್ಬಿಟರ್ಗಳನ್ನು ಬಳಸಿಕೊಂಡಿವೆ.
- ಇಂಪ್ಯಾಕ್ಟ್ ಮಿಷನ್ಗಳು: ಆರ್ಬಿಟರ್ ಕಾರ್ಯಾಚರಣೆಗಳ ವಿಸ್ತರಣೆಗಳು, ಕಾರ್ಯಾಚರಣೆಗಳು ಚಂದ್ರನ ಮೇಲ್ಮೈಯಲ್ಲಿ ಅನಿಯಂತ್ರಿತ ಲ್ಯಾಂಡಿಂಗ್ ಮಾಡುವ ಉಪಕರಣಗಳನ್ನು ಒಳಗೊಂಡಿರುತ್ತವೆ, ನಾಶವಾಗುವ ಮೊದಲು ಅಮೂಲ್ಯವಾದ ಡೇಟಾವನ್ನು ಒದಗಿಸುತ್ತವೆ.
ಉದಾ: ಚಂದ್ರಯಾನ-1.
4.ಲ್ಯಾಂಡರ್ಗಳು: ಈ ಕಾರ್ಯಾಚರಣೆಗಳು ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್ಗೆ ಗುರಿಯಾಗುತ್ತವೆ, ಇದು ನಿಕಟವಾಗಿ ಅನ್ವೇಷಿಸಲು ಅನುವು ಮಾಡಿಕೊಡುತ್ತದೆ.
ಯುಎಸ್ಎಸ್ಆರ್ ಲೂನಾ 9 1966 ರಲ್ಲಿ ಚಂದ್ರನ ಮೇಲೆ ಮೊದಲ ಯಶಸ್ವಿ ಲ್ಯಾಂಡಿಂಗ್ ಆಗಿತ್ತು.
- ರೋವರ್ಗಳು: ರೋವರ್ಗಳು ಲ್ಯಾಂಡರ್ಗಳಿಂದ ಬೇರ್ಪಡುವ ಮತ್ತು ಚಂದ್ರನ ಮೇಲ್ಮೈಯಲ್ಲಿ ಸ್ವತಂತ್ರವಾಗಿ ಚಲಿಸುವ ವಿಶೇಷ ಪೇಲೋಡ್ಗಳಾಗಿವೆ.
ಉದಾ: ಚಂದ್ರಯಾನ-2, ಚಂದ್ರಯಾನ -3
- ಮಾನವ ಮಿಷನ್ ಗಳು: ಈ ಕಾರ್ಯಾಚರಣೆಗಳು ಚಂದ್ರನ ಮೇಲ್ಮೈಯಲ್ಲಿ ಗಗನಯಾತ್ರಿಗಳ ಲ್ಯಾಂಡಿಂಗ್ ಅನ್ನು ಒಳಗೊಂಡಿರುತ್ತವೆ. 1969 ಮತ್ತು 1972 ರ ನಡುವೆ ಆರು ಯಶಸ್ವಿ ಲ್ಯಾಂಡಿಂಗ್ಗಳೊಂದಿಗೆ ನಾಸಾ ಮಾತ್ರ ಈ ಸಾಧನೆಯನ್ನು ಸಾಧಿಸಿದೆ.