ಚೋಳರ ಆಡಳಿತ
ಚೋಳರ ಆಡಳಿತ
“ಮಧ್ಯಕಾಲೀನ ಅವಧಿಯಲ್ಲಿ ಚೋಳ ಸಾಮ್ರಾಜ್ಯದ ಆಡಳಿತ ರಚನೆ ಮತ್ತು ನೀತಿಗಳನ್ನು ಚರ್ಚಿಸಿ, ಆಡಳಿತ, ಕಂದಾಯ ಆಡಳಿತ, ಸ್ಥಳೀಯ ಆಡಳಿತ ಮತ್ತು ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಮೇಲೆ ಅವುಗಳ ಪ್ರಭಾವದ ಪ್ರಮುಖ ಲಕ್ಷಣಗಳನ್ನು ಬರೆಯಿರಿ.”
ಪರಿಚಯ:
- ಭಾರತವನ್ನಾಳಿದ ಪ್ರಾಚೀನ ರಾಜ ಸಂತತಿಗಳಲ್ಲಿ ಚೋಳ ಸಂತತಿಯು ಒಂದು. ಚೋಳರ ಉಲ್ಲೇಖ ಮಹಾಭಾರತದಲ್ಲೇ ಕಂಡುಬರುತ್ತದೆ. ಮೆಗಸ್ಥನಿಸನ ಬರವಣಿಗೆ ಹಾಗೂ ಅಶೋಕನ ಶಿಲಾ ಶಾಸನಗಳಲ್ಲಿ ಚೋಳರ ಬಗ್ಗೆ ಉಲ್ಲೇಖಗಳಿವೆ. ಚೋಳರು ದಕ್ಷಿಣ ಭಾರತದಲ್ಲಿ ಪಲ್ಲವರು ಅವನತಿ ಹೊಂದಿದ ಮೇಲೆ ಏಳಿಗೆಗೆ ಬಂದರು. ಅವರು ಕ್ರಿ.ಶ 9ನೇ ಶತಮಾನದಿಂದ 12ನೇ ಶತಮಾನದವರೆಗೆ ದಕ್ಷಿಣ ಭಾರತದ ಬಹು ಭಾಗವನ್ನು ಆಳಿದರು. ಚೋಳ ಸಾಮ್ರಾಜ್ಯವು ಕೋರಮಂಡಲ ತೀರವು ಒಳಗೊಂಡಂತೆ ನೆಲ್ಲೂರಿನಿಂದ ದಕ್ಷಿಣದ ಪುದುಕೊಟ್ಟೈವರೆಗೆ ಹಬ್ಬಿತು, ಇದು ತುಂಗಭದ್ರಾ ನದಿಯ ದಕ್ಷಿಣ ಭಾಗ ಹಾಗೂ ಮೈಸೂರಿನ ಕೆಲವು ಭಾಗಗಳನ್ನು ಒಳಗೊಂಡಿದ್ದು ಅದನ್ನು ಚೋಳಮಂಡಲ ಎಂದು ಕರೆಯಲಾಗುತ್ತಿತ್ತು. ಉರೈಯೂರು (ಹಳೆ ತಿರುಚಿನಾಪಲ್ಲಿ) ಅವರ ಆರಂಭ ರಾಜಧಾನಿಯಾಗಿತ್ತು. ಹುಲಿ ಅವರ ರಾಜಲಾಂಛನವಾಗಿತ್ತು
- ಚೋಳರ ರಾಜಕೀಯ ಇತಿಹಾಸವು ಸಂಘಂ ಯುಗದಿಂದ ಆರಂಭವಾಗುತ್ತದೆ. ಇಳೈಯಾನ್ ಚೋಳ ಸಂಘಂ ಯುಗದ ಆರಂಭದದ ಚೋಳ ರಾಜ. ಉರೈಯೂರ್ ಅವನ ರಾಜಧಾನಿಯಾಗಿತ್ತು. ಕ್ರಿಸ್ತಶಕ 2ನೇ ಶತಮಾನದಲ್ಲಿ ಆಳಿದ ಕರಿಕಾಳ ಚೋಳನೆ ಚೋಳ ಸಂತತಿಯ ಮೊದಲ ಐತಿಹಾಸಿಕ ದೊರೆ.
- ಚೋಳರು ಇಡೀ ದಕ್ಷಿಣ ಭಾರತವನ್ನು ಒಂದೇ ಆಡಳಿತದ ಅಡಿಯಲ್ಲಿ ತರಲು ಯಶಸ್ವಿಯಾದ ಮೊದಲ ರಾಜವಂಶ. ಚೋಳರ ಆಡಳಿತವನ್ನು ಕೇಂದ್ರ ಸರ್ಕಾರ, ಸ್ಥಳೀಯ ಸರ್ಕಾರ ಮತ್ತು ಪ್ರಾಂತೀಯ ಸರ್ಕಾರ ಎಂದು ಮೂರು ವಿಭಿನ್ನ ಭಾಗಗಳಾಗಿ ವಿಂಗಡಿಸಲಾಗಿದೆ.
ವಿವರ
ಕೇಂದ್ರಾಡಳಿತ
- ವಂಶ ಪಾರಂಪರ್ಯ ರಾಜಪ್ರಭುತ್ವ ವ್ಯವಸ್ಥೆಯನ್ನು ಚೋಳರು ಮುಂದುವರಿಸಿದರು. ರಾಜನೇ ಕೇಂದ್ರ ಸರ್ಕಾರದ ಸರ್ವೋಚ್ಛ ಅಧಿಕಾರಿ. ಮತ್ತು ಪ್ರಜೆಗಳ ಸಾರ್ವಭೌಮ, ರಾಜ್ಯದ ಸಮಸ್ತ ನೇಮಕಗಳು, ಹಣಕಾಸು, ಶಾಸನ ರಚನೆ, ಮಿಲಿಟರಿ ನಾಯಕತ್ವ ವಿದೇಶಾಂಗ ವ್ಯವಹಾರಗಳು ಅವನಿಗೆ ಸೇರಿದ್ದವು ರಾಜನು ಪರಮಾಧಿಕಾರವನ್ನು ಪಡೆದಿದ್ದರೂ ನಿರಂಕುಶನಾಗಿರಲಿಲ್ಲ ಆತ ಪ್ರಜೆಗಳ ಕ್ಷೇಮಾಭಿವೃದ್ಧಿಯನ್ನು ಬಯಸಿ ಅವರ ಕುಂದುಕೊರತೆಗಳ ಪರಿಶೀಲನೆಗೆ ಪ್ರವಾಸ ಕೈಗೊಳ್ಳುತ್ತಿದ್ದನು.
- ರಾಣಿಯರು ಸಹ ಆಡಳಿತದಲ್ಲಿ ಭಾಗವಹಿಸುತ್ತಿದ್ದರು. ರಾಜತ್ವ ವಂಶ ಪಾರಂಪರ್ಯವಾಗಿತ್ತು ರಾಜನು ಬದುಕಿದ್ದಾಗಲೇ ಹಿರಿಯ ಮಗನನ್ನು ಯುವರಾಜನನ್ನಾಗಿ ನೇಮಿಸಲಾಗುತ್ತಿತ್ತು. ಕಾರ್ಯದರ್ಶಿಗಳು ಮಂತ್ರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಜೊತೆಗೆ ಪೆರುಂದರಂ ಮತ್ತು ಸಿರುಂದರಂ ಎಂಬ ಉನ್ನತ ಮೇಲ್ವರ್ಗ ಮತ್ತು ಕೆಳವರ್ಗದ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದರು. ಸಿವಿಲ್ ಮತ್ತು ಮಿಲಿಟರಿ ಹುದ್ದೆಗಳ ನಡುವೆ ವ್ಯತ್ಯಾಸವಿರಲಿಲ್ಲ.
- ರಾಜನಿಗೆ ಬೆಂಗಾಲಿನ (ವೆಳೈಕಾರರ್) ಎಂಬ ಅಂಗರಕ್ಷಕನ ಪಡೆ ಇದ್ದಿತು. ದೈನಂದಿನ ಆಡಳಿತ ನೋಡಿಕೊಳ್ಳಲು ವಿವಿಧ ಇಲಾಖೆಗಳ ಮುಖ್ಯಸ್ಥರು ನೆರವಾಗುತ್ತಿದ್ದರು. ಅಧಿಕಾರಿಗಳಿಗೆ ಭೂಮಿಯನ್ನು ವೇತನವಾಗಿ ನೀಡಲಾಗುತ್ತಿತ್ತು. ಅವರು ಸಿವಿಲ್ ಮತ್ತು ಮಿಲಿಟರಿ ಅಧಿಕಾರಿಗಳನ್ನು ಪ್ರತ್ಯೇಕಿಸಿದ್ದರು.
ಪ್ರಾಂತ್ಯಾಡಳಿತ
- ಆಡಳಿತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು ಪ್ರಾಂತ್ಯ (ಮಂಡಲ)ಕೊಟ್ಟಂ (ವಿಭಾಗ) ಒಳನಾಡು (ಜಿಲ್ಲೆ) ಕುರುಂ, ಪುರೂರು, ಸಿರೂರು (ಹೋಬಳಿ) ಮತ್ತು ಗ್ರಾಮಗಳಾಗಿ ವಿಭಾಗಿಸಲಾಗಿತ್ತು. ದೊಡ್ಡ ಗ್ರಾಮಗಳ ಆಡಳಿತ ಘಟಕವನ್ನು ತಣಿಯುರ್ ಕುರಂ ಎಂದು ಕರೆಯಲಾಗುತ್ತಿತ್ತು.
- ಚೋಳರ ಸಾಮ್ರಾಜ್ಯದಲ್ಲಿ ಆರರಿಂದ ಎಂಟು ಮಂಡಲಗಳಿದ್ದವು ಮಹಾಮಂಡಲೇಶ್ವರ ಅಥವಾ ರಾಜ ಪ್ರತಿನಿಧಿ ಮಂಡಲದ ಅಧಿಕಾರಿಯಾಗಿದ್ದರು.
- ಸಾಮಾನ್ಯವಾಗಿ ರಾಜನ ಮಗ ಇಲ್ಲವೇ ಆಪ್ತ ಸಂಬಂಧಿಗಳನ್ನು ಮಹಾಮಂಡಲೇಶ್ವರನಾಗಿ ನೇಮಿಸಲಾಗುತ್ತಿತ್ತು . ರಾಜಾಜ್ಞೆಗಳನ್ನು ಅವನು ಜಾರಿಗೊಳಿಸುತ್ತಿದ್ದನು.
- ಕೊಟ್ಟಂ ಹಲವು ಸ್ವಯಂ ಆಡಳಿತ ಗ್ರಾಮಗಳನ್ನು ಒಳಗೊಂಡಿತ್ತು.
- ಗ್ರಾಮಾಡಳಿತ ಗ್ರಾಮ ಸಭೆಗಳಿಗೆ ಸೇರಿತ್ತು ಚೋಳರ ಆಡಳಿತದಲ್ಲಿ ಪ್ರಜಾಪ್ರಭುತ್ವ ತತ್ವಗಳಂತೆ ಕಾರ್ಯನಿರ್ವಹಿಸುತ್ತಿದ್ದ ನಾಲ್ಕು ಜನಪ್ರಿಯ ಸಭೆಗಳಿದ್ದವು
- ನತ್ತರ್: ಜಿಲ್ಲಾಡಳಿತ ಸಮಿತಿ ಅಥವಾ ನಾಡು ಸಮಿತಿ
- ನಗರತ್ತರ್(ನಗರಂ): ಇದು ನಗರ ಮತ್ತು ಪಟ್ಟಣಗಳ ಆಡಳಿತ ನೋಡಿಕೊಳ್ಳುತ್ತಿತ್ತು ವ್ಯಾಪಾರ ವಾಣಿಜ್ಯ ಮೇಲ್ವಿಚಾರಣೆ ಸಮಿತಿ, ವರ್ತಕರಿಂದ ಕೂಡಿದ್ದ ಇದು ವ್ಯಾಪಾರ ವಾಣಿಜ್ಯವನ್ನು ನೋಡಿಕೊಳ್ಳುತ್ತಿತ್ತು.
- ಊರ್ ಗ್ರಾಮ ಸದಸ್ಯರ ಮಂಡಳಿ ಬ್ರಾಹ್ಮಣರ ಕೈಯಲ್ಲಿದ್ದ ಹಳ್ಳಿಗಳ ಆಡಳಿತಕ್ಕೆ ಊರ್ ಸಭಾ ಇದ್ದಿತು ಅದು ಭೂ ಕಂದಾಯ ನ್ಯಾಯ ಪರಿಪಾಲನೆ ಕಾರ್ಯ ಮಾಡುತ್ತಿತ್ತು
- ಮಹಾಸಭೆ ಹಿರಿಯ ಗ್ರಾಮ ಮುಖಂಡರ ಸಭೆ ಇದು ಅಗ್ರಹಾರಗಳಲ್ಲಿ ಅಸ್ತಿತ್ವದಲ್ಲಿತ್ತು ಬ್ರಾಹ್ಮಣರು ಇದ್ದ ಸಭೆಗೆ ಭೂ ದತ್ತಿ ನೀಡಲಾಗುತ್ತಿತ್ತು.
ಸ್ಥಳೀಯ ಸರ್ಕಾರ ಗ್ರಾಮಾಡಳಿತ
- ಚೋಳರು ಸ್ಥಳೀಯ ಸಂಘ ಸಂಸ್ಥೆಗಳಿಗೆ ವಿಶೇಷ ಪ್ರೋತ್ಸಾಹ ನೀಡಿದರು. ಗ್ರಾಮಗಳ ಆಡಳಿತವನ್ನು ಸ್ಥಳೀಯರಿಗೆ ಬಿಟ್ಟುಕೊಟ್ಟಿದ್ದರು. ಗ್ರಾಮಗಳು ಸ್ವಯಂ ಆಡಳಿತ ಹೊಂದಿದ್ದು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದವು. ಗ್ರಾಮಾಡಳಿತ ನೋಡಿಕೊಳ್ಳಲು ಅದೇ ಗ್ರಾಮದ ಗ್ರಾಮಸ್ಥರು ಇದ್ದರು. ಗ್ರಾಮ ಸಭೆಗಳನ್ನು ರಚಿಸಲಾಗಿತ್ತು ಅವು ಪುಟ್ಟ ಗಣರಾಜ್ಯಗಳಂತೆ ಕಾರ್ಯ ನಿರ್ವಹಿಸುತ್ತಿದ್ದವು . ಹೀಗಾಗಿ ಭಾರತದ ಆಡಳಿತ ಪದ್ಧತಿಯಲ್ಲಿ ಚೋಳರು ಗ್ರಾಮಾಡಳಿತ ವಿಶಿಷ್ಟ ಸ್ಥಾನವಿದೆ. ಗ್ರಾಮದಲ್ಲಿ ಎರಡು ವಿಧ ಇದ್ದವು
- ಬ್ರಾಹ್ಮನೇತರಿಂದ ಕೂಡಿದ ಗ್ರಾಮಗಳು ಅದರ ಆಡಳಿತ ಊರ್ ಸಭಾಗೆ ಸೇರಿತ್ತು.
- ಬ್ರಾಹ್ಮಣರೇ ವಾಸವಾಗಿದ್ದ ಗ್ರಾಮ ಆಡಳಿತಕ್ಕೆ ಮಹಾಜನರ ಸಭೆ ಇದ್ದಿತು.
- ಚೋಳರ ಗ್ರಾಮ ಆಡಳಿತ ತಿಳಿಯಲು ಒಂದನೇ ಪರಾಂತಕನ ಉತ್ತರ ಮೆರೂರು ಶಾಸನ ನೆರವಾಗುತ್ತದೆ. ಅದರ ಪ್ರಕಾರ ಪ್ರತಿ ಗ್ರಾಮವು ಮಹಾಸಭೆಯ ಆಡಳಿತಕ್ಕೆ ಒಳಪಟ್ಟಿತು. ಗ್ರಾಮವನ್ನು 30 ವಾರ್ಡುಗಳಾಗಿ ವಿಂಗಡಿಸಲಾಗಿತ್ತು ಅವನ್ನುಕುಟುಂಬಂ ಎಂದು ಕರೆಯುತ್ತಿದ್ದರು. ಪ್ರತಿ ಕುಟುಂಬ(ವಿಭಾಗ)ದಿಂದ ಒಬ್ಬೊಬ್ಬ ಅಭ್ಯರ್ಥಿಯನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗುತ್ತಿತ್ತು. ಹೀಗೆ ಆಯ್ಕೆಯಾದ 30 ಸದಸ್ಯರನ್ನು ಜನರಿಂದ ಚುನಾಯಿಸಲಾಗುತ್ತಿತ್ತು. ಗ್ರಾಮ ಸಭೆಯ ಸದಸ್ಯರಾಗಲು ಕೆಲವು ಅರ್ಹತೆಗಳನ್ನೂ ಹೊಂದಿರಬೇಕಿತ್ತು
ಗ್ರಾಮ ಮಹಾಸಭೆಯ ರಚನೆ (ವಾರಿಯ ಪದ್ಧತಿ)
- ಗ್ರಾಮ ಸಭೆಗೆ ಆಯ್ಕೆಯಾದ 30 ಸದಸ್ಯರನ್ನು ಪೆರು ಮಕ್ಕಳ್ ಎಂದು ಕರೆಯುತ್ತಿದ್ದರು. ಗ್ರಾಮ ಸಭೆಯನ್ನು ಆರು ಸಮಿತಿಗಳಾಗಿ ವಿಭಾಗಿಸಿ ಪ್ರತಿ ಸಮಿತಿಗೆ ಆರು ಸದಸ್ಯರನ್ನು ಹಂಚಲಾಗುತ್ತಿತ್ತು. ಸಮಿತಿಗಳನ್ನು ವಾರಿಯಂ ಎಂತಲೂ ಸಮಿತಿಯ ಸದಸ್ಯರನ್ನು ವಾರಿಯಪೆರ್ ಮಕ್ಕಳ್ ಎಂದು ಕರೆಯುತ್ತಿದ್ದರು. ಮಹಾಸಭೆಗೆ ಪೆರುಂಗುರಿ ಎಂಬ ಹೆಸರಿದ್ದಿತು.
ಸಮಿತಿಗಳು
- ಸಂವತ್ಸರ ವಾರಿಯಂ - ವಾರ್ಷಿಕ ಸಮಿತಿ
- ತೊಟ್ಟ ವಾರಿಯಂ - ತೋಟದ ಸಮಿತಿ
- ದೇವಸ್ಥಾನ ವಾರಿಯಂ - ದೇವಸ್ಥಾನ ಸಮಿತಿ ನೀರಾವರಿ ಅಥವಾ ಕೆರೆ ಸಮಿತಿ
- ಪೋನ್ ವಾರಿಯಂ - ಬಂಗಾರ ಅಥವಾ ಕಂದಾಯ ಸಮಿತಿ
- ನ್ಯಾಯವಾರಿಯಂ - ನ್ಯಾಯ ಸಮಿತಿಸೇನಾಡಳಿತ
ಸೇನಾಡಳಿತ
ಚೋಳರು ದಕ್ಷವಾದ ಸ್ಥಾಯಿ ಸೇವೆಯನ್ನು ಸಂಘಟಿಸಿದ್ದರು ಅವರ ಸೈನ್ಯದಲ್ಲಿದ್ದರ ಮುಖ್ಯ ಪಡೆಗಳೆಂದರೆ
- ವಾ ಳ್ವೆ ಟ್ರಿ ಕೋರರ್ - ಕಾವಲು ಪಡೆ
- ಕುದುರೈ ಚ್ಛಿವಗರ್ - ಅಶ್ವಪಡೆ
- ಕುಂಜೀರ್ ಮಲ್ಲರ್ - ಗಜಪಡೆ
- ಕೈ ಕೋಳರು - ಖಡ್ಗಧಾರಿಗಳು
- ವಿಲ್ಲಿಗಳ - ಬಿಲ್ಲು ಗಾರರ ಪಡೆ ಕಾರ
ವೇಲೈ ಕಾರರ್ - ಅಂಗ ರಕ್ಷಣಾ ಪಡೆ
- ಸೈನ್ಯದ ಮೇಲ್ವಿಚಾರಣೆ ದಂಡನಾಯಕನಿಗೆ ಸೇರಿತ್ತು ದಕ್ಷವಾದ ಯುದ್ಧಾಶ್ವಗಳನ್ನು ಅರೇಬಿಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಯುದ್ಧದಲ್ಲಿ ರಾಜನೇ ಸೇನಾ ನಾಯಕತ್ವ ವಹಿಸುತ್ತಿದ್ದ. ಸೇನಾ ದಂಡು ಕೇಂದ್ರಗಳನ್ನು ಕಜಗಂ ಅಥವಾ ಪಡೈವಿದು ಎಂದು ಕರೆಯಲಾಗುತ್ತಿತ್ತು. ಸೈನ್ಯದ ಶಿಸ್ತು ಮತ್ತು ದಕ್ಷತೆಗೆ ಗಮನ ಕೊಡಲಾಗುತ್ತಿತ್ತು. ಯುದ್ಧದಲ್ಲಿ ಶೌರ್ಯ ಪ್ರದರ್ಶಿಸಿದವರನ್ನು ಕ್ಷತ್ರಿಯ ಶಿಖಾಮಣಿ ಎಂಬ ಬಿರುದು ನೀಡಿ ಗೌರವಿಸಲಾಗುತ್ತಿತ್ತು. ಸೈನ್ಯದಲ್ಲಿ ನಾಯಕ ಸೇನಾಪತಿ, ದಂಡನಾಯಕ ಮಹಾದಂಡ ನಾಯಕ ಎಂಬ ಹುದ್ದೆಗಳಿದ್ದವು ಅವು ಬ್ರಾಹ್ಮಣರ ಕೈಯಲ್ಲಿದ್ದವು.
ನೌಕಾಪಡೆ
- ಪ್ರಾಚೀನ ಭಾರತದಲ್ಲಿ ಪ್ರಥಮ ಬಾರಿಗೆ ಶಕ್ತಿಯುತವಾದ ನೌಕಾಪಡೆ ಕಟ್ಟಿದ ಕೀರ್ತಿ ಚೋಳರಿಗೆ ಸಲ್ಲುತ್ತದೆ. ಚೋಳರ ನೌಕಾ ಸಾಧನಗಳು ಒಂದನೇ ರಾಜರಾಜ ಮತ್ತು ಒಂದನೇ ರಾಜೇಂದ್ರ ಚೋಳರ ಕಾಲದಲ್ಲಿ ಅತ್ಯುನ್ನತ ಮಟ್ಟ ತಲುಪಿದವು. ಅವರು ಬಂಗಾಳಕೊಲ್ಲಿಯಲ್ಲಿ ನೌಕಾಪಡೆ ಇಟ್ಟಿದ್ದರು. ಮಲಬಾರ್ ಕೋರಮಂಡಲ ಬಂಗಾಳಗಳ ತೀರದ ಮೇಲೆ ಪ್ರಭುತ್ವ ಸಾಧಿಸಲು ಹಾಗೂ ಸಿಲೋನ್ ಶ್ರೀವಿಜಯ ಸಾಮ್ರಾಜ್ಯ ಮಾಲ್ಡೀವ್ಸ್ ಮತ್ತು ಹಿಂದೂ ಮಹಾಸಾಗರ ದ್ವೀಪಗಳ ಮೇಲೆ ನೌಕಾ ದಂಡೆಯಾತ್ರೆ ಕೈಗೊಳ್ಳಲು ಅವರ ನೌಕಾಪಡೆಯು ಕಾರಣವಾಗಿತ್ತು.
ನ್ಯಾಯಾಡಳಿತ
- ರಾಜನೇ ಸರ್ವೋಚ್ಚ ನ್ಯಾಯಾಧೀಶನಾಗಿದ್ದನು ಅವನ ತೀರ್ಪೆ ಅಂತಿಮವಾಗಿತ್ತು. ಆತ ಲೌಕಿಕ ಪ್ರಕರಣಗಳನ್ನು ವಿಚಾರಣೆ ಮಾಡುತ್ತಿದ್ದನು. ಧಾರ್ಮಿಕ ಪ್ರಕರಣಗಳನ್ನು ಪುರೋಹಿತ ವಿಚಾರಣೆ ಮಾಡುತ್ತಿದ್ದರು. ಪ್ರಾಂತ್ಯಗಳಲ್ಲಿ ರಾಜ ಪ್ರತಿನಿಧಿಗಳು ಗ್ರಾಮಗಳಲ್ಲಿ ಮಹಾರಾಜರು ನ್ಯಾಯ ವಿತರಣೆಯಲ್ಲಿ ತೊಡಗಿದ್ದರು. ಗ್ರಾಮ ಸಭೆಗೆ ಅಥವಾ ಪಂಚಾಯಿತಿಗಳಿಗೆ ನ್ಯಾಯದಾನ ಅಧಿಕಾರ ಇತ್ತು.
ಬಲವಾದ ಮತ್ತು ಪರಿಣಾಮಕಾರಿ ಚೋಳ ಆಡಳಿತಕ್ಕೆ ಕಾರಣಗಳು:
- ಬಲವಾದ ಆಡಳಿತದ ಸಂಘಟನೆಯು ಚೋಳ ಸರ್ಕಾರವನ್ನು ಶಕ್ತಿಯುತವಾಗಿಸಿತು ಮತ್ತು ನೆರೆಯ ರಾಜ್ಯಗಳೊಂದಿಗೆ ಉತ್ತಮ ಸಂಬಂಧವನ್ನು ರೂಪಿಸುವಲ್ಲಿ ಯಶಸ್ವಿಯಾಯಿತು. ಸಾಮಾನ್ಯ ನಿಯಮಗಳ ಅಡಿಯಲ್ಲಿ ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಚೋಳ ಸರ್ಕಾರವು ಹಲವಾರು ಪ್ರಯತ್ನಗಳನ್ನು ಮಾಡಿತು.
- ಬಲವಾದ ಮತ್ತು ಪರಿಣಾಮಕಾರಿ ಆಡಳಿತ ವ್ಯವಸ್ಥೆಯಿಂದಾಗಿ ಇದು ಯಶಸ್ವಿಯಾಯಿತು. ಆಡಳಿತವನ್ನು ಕೇಂದ್ರ ಆಡಳಿತದಂತಹ ವಿವಿಧ ವಿಭಾಗಗಳಾಗಿ ವಿಂಗಡಿಸಲಾಗಿದೆ, ಅಲ್ಲಿ ರಾಜನನ್ನು ಇಡೀ ಆಡಳಿತದಲ್ಲಿ ಅತ್ಯಂತ ಮಹತ್ವದ ಮತ್ತು ಪ್ರಮುಖ ಎಂದು ಪರಿಗಣಿಸಲಾಗಿದೆ.ಇತರ ಆಡಳಿತಗಳೆಂದರೆ ಕಂದಾಯ ಆಡಳಿತ, ಮಿಲಿಟರಿ ಆಡಳಿತ, ಪ್ರಾಂತೀಯ ಆಡಳಿತ ಮತ್ತು ಸ್ಥಳೀಯ ಸರ್ಕಾರಗಳು. ವಿವಿಧ ಆಡಳಿತಗಳು ತಮ್ಮ ಸ್ಪಂದಿಸುವ ಕ್ಷೇತ್ರಗಳನ್ನು ನಿರ್ವಹಿಸಲು ಮತ್ತು ಅವುಗಳಿಗೆ ಸಂಬಂಧಿಸಿದ ಅಡೆತಡೆಗಳನ್ನು ಪರಿಹರಿಸಲು ಜವಾಬ್ದಾರಿಗಳನ್ನು ಅವರಿಗೆ ನೀಡಲಾಗಿತ್ತು. ಮತ್ತು ವ್ಯವಸ್ಥೆಯ ಸಂಘಟನೆಯಲ್ಲಿ ಪರಿಣಾಮಕಾರಿ ಮತ್ತು ಸುಗಮ ಹರಿವನ್ನು ಚೋಳ ಆಡಳಿತದಲ್ಲಿ ಕಾಣಬಹುದು.
ಉಪಸಂಹಾರ
ಚೋಳ ಆಡಳಿತವು ಭಾರತೀಯ ಇತಿಹಾಸದಲ್ಲಿ ನವೀನ ಮತ್ತು ಅಭಿವೃದ್ಧಿ ಹೊಂದಿದ ರಾಜವಂಶಗಳಲ್ಲಿ ಒಂದಾಗಿದೆ. ಇದು 850 - 1200 CE ನಡುವೆ ಪ್ರವರ್ಧಮಾನಕ್ಕೆ ಬಂದಿತು. ಆಡಳಿತವು ಕೆಲವು ಸಕಾರಾತ್ಮಕ ಮತ್ತು ಅನುಕೂಲಕರವಾದ ನಿಯಮಗಳು ಮತ್ತು ನಿಬಂಧನೆಗಳನ್ನು ಹೊಂದಿತ್ತು, ಉದಾಹರಣೆಗೆ ವಿವಿಧ ಹಂತಗಳಿಗೆ ಪ್ರತ್ಯೇಕ ಸರ್ಕಾರಗಳ ಸ್ಥಾಪನೆ. ಈ ಆಳ್ವಿಕೆಯಲ್ಲಿನ ರಾಜ್ಯಗಳನ್ನು ಉತ್ತರಾಧಿಕಾರ ವ್ಯವಸ್ಥೆಯಿಂದ ನಿರ್ವಹಿಸಲಾಗುತ್ತಿತ್ತು. ಇಡೀ ಆಡಳಿತದಲ್ಲಿ ರಾಜನನ್ನು ಅತ್ಯಂತ ಮಹತ್ವದ ಮತ್ತು ಪ್ರಮುಖ ಎಂದು ಪರಿಗಣಿಸಲಾಗಿದೆ. ರಾಜ್ಯಗಳನ್ನು ವಿಸ್ತರಿಸಲು ರಾಜನು ರಾಜ್ಯ ಪ್ರವಾಸಗಳನ್ನು ಮಾಡಬೇಕಾಗಿತ್ತು.