ರಾಷ್ಟ್ರಕೂಟರ ಕಲೆ ಮತ್ತು ವಾಸ್ತು ಶಿಲ್ಪ
ರಾಷ್ಟ್ರಕೂಟರ ಕಲೆ ಮತ್ತು ವಾಸ್ತು ಶಿಲ್ಪ
ರಾಷ್ಟ್ರಕೂಟರ ಕಲೆ ಮತ್ತು ವಾಸ್ತು ಶಿಲ್ಪವನ್ನು ವಿಮರ್ಶಾತ್ಮಕವಾಗಿ ವಿವರಿಸಿ
ಪರಿಚಯ
- ಕ್ರಿ. ಶ. 757ರಲ್ಲಿ ಚಾಲುಕ್ಯರನ್ನು ಬದಿಗೊತ್ತಿ ರಾಷ್ಟ್ರಕೂಟರು ಆಳ್ವಿಕೆಗೆ ಬಂದರು. ಕ್ರಿ.ಶ. 973ರವರೆಗೆ ಆಳ್ವಿಕೆ ನಡೆಸಿದರು. ಅವರ ಸಾಮ್ರಾಜ್ಯವು ಉತ್ತರದಲ್ಲಿ ನರ್ಮದಾ ನದಿಯಿಂದ ದಕ್ಷಿಣದ ಕಾವೇರಿ ಅವರಿಗೂ ಪೂರ್ವದಲ್ಲಿ ವಾರಂಗಲ್ ಕಡಪಗಳಿಂದ ಪಶ್ಚಿಮದಲ್ಲಿ ಅರಬಿ ಸಮುದ್ರದ ವರೆಗೂ ಹಬ್ಬಿತ್ತು
- ಕನ್ನಡ ಸಾಹಿತ್ಯಕ್ಕೆ ಅವರ ಕಾಣಿಕೆ ಅಪಾರವಾದದ್ದು ಕಲೆ ಮತ್ತು ವಾಸ್ತು ಶಿಲ್ಪದಲ್ಲಂತೂ ಅವರ ಸಾಧನೆ ಅತ್ಯಂತ ಅಮೋಘವಾದದ್ದು ಚಾಲುಕ್ಯರು ಕರ್ನಾಟಕ ಸಾಮ್ರಾಜ್ಯದ ಸಂಘಟಕರಾದರೆ ರಾಷ್ಟ್ರಕೂಟರು ಅದನ್ನು ವೈಭವ ಪರಾಕಾರ್ಸ್ತೆಗೆ ಏರಿಸಿದ ಕೀರ್ತಿಶಾಲಿಗಳು ಆದ್ದರಿಂದ ರಾಷ್ಟ್ರಕೂಟರ ಕಾಲವನ್ನು ಅಖಿಲ ಭಾರತ ಇತಿಹಾಸದಲ್ಲಿ ರಾಷ್ಟ್ರಕೂಟ ಯುಗ ಎಂದು ಕರೆಯಲಾಗುತ್ತದೆ.
ವಿವರಣೆ
- ರಾಷ್ಟ್ರಕೂಟರು ಮಹಾ ನಿರ್ಮಾಪಕರು ಕಲಾರಾಧಕರು ಆಗಿದ್ದು ವಾಸ್ತುಶಿಲ್ಪ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೈದಿದ್ದಾರೆ ಅವರ ಕಲೆಯು ಭಾರತದ ಕಲೆಯಲ್ಲಿ ಪ್ರೌಢ ಸ್ಥಾನ ಪಡೆದಿದೆ ಅವರು ತಮ್ಮ ಸಾಮ್ರಾಜ್ಯಶಾಹಿ ಘನತೆಗೆ ತಕ್ಕ ಬಿನ್ನ ವಾಸ್ತುಶಿಲ್ಪವನ್ನ ನೀಡಿದ್ದಾರೆ.
- ಎಲ್ಲೋರ ಮತ್ತು ಎಲಿಫೆಂಟಾಗಳು ಅವರ ಮುಖ್ಯ ಕಲಾ ಕೇಂದ್ರಗಳು
- ರಾಷ್ಟ್ರಕೂಟರ ವಾಸ್ತುಶಿಲ್ಪವನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು
- ಗುಹಾಲಯಗಳು (ಕಲ್ಲಿನಲ್ಲಿ ಕೊರೆದ ವಾಸ್ತುಶಿಲ್ಪ)
- ರಚನಾತ್ಮಕ ದೇವಾಲಯಗಳು (ನಿರ್ಮಾಣ ವಾಸ್ತುಶಿಲ್ಪ)
- ಗುಹಾ ದೇವಾಲಯಗಳು: ಬಾದಾಮಿ ಚಾಲುಕ್ಯರಂತೆಯೇ ರಾಷ್ಟ್ರಕೂಟ ರಾಜ್ಯಸಂತತಿಯು ಕಲ್ಲಿನಲ್ಲಿ ಕೊರೆದ ಗುಹಾ ದೇವಾಲಯಗಳನ್ನು ಸಕ್ರಿಯವಾಗಿ ಪೋಷಿಸಿತು. ಗುಹಾಲಯಗಳನ್ನು ಹಿಂದೂ ಗುಹೆಗಳು ಮತ್ತು ಜೈನ ಗುಹೆಗಳು ಎಂದು ಎರಡು ಭಾಗಗಳಾಗಿ ವಿಂಗಡಿಸಬಹುದು ಅವೆರಡೂ ಎಲ್ಲೋರದಲ್ಲಿವೆ. ರಾಷ್ಟ್ರಕೂಟರ ಗುಹೆ ದೇವಾಲಯಗಳನ್ನು ಎಲ್ಲೋರ,ಎಲಿಫೆಂಟಾ, ಜೋಗೇಶ್ವರ, ಧಾರೇಶ್ವರ ಮೊದಲಾದ ಕಡೆ ನೋಡಬಹುದು
- ಎಲ್ಲೋರಾ ವಿಶ್ವ ಪರಂಪರೆಯ ತಾಣ: ಎಲ್ಲೋರಾದಲ್ಲಿ ರಾಷ್ಟ್ರಕೂಟರು ನಿರ್ಮಿಸಿದ 18 ಬ್ರಾಹ್ಮಣ 4 ಜೈನ ಗುಹೆಗಳು ಸೇರಿದಂತೆ ಒಟ್ಟು 34 ಗುಹಾಂತರ ದೇವಾಲಯಗಳಿವೆ. ಅವುಗಳಲ್ಲಿ ಅತ್ಯಂತ ಜಗತ್ಪ್ರಸಿದ್ಧವಾದದ್ದು ಕೈಲಾಸನಾಥ ದೇವಾಲಯ.
- ಕೈಲಾಸನಾಥ ದೇವಾಲಯ: ಕ್ರಿ.ಶ. 770 ಇದು ಎಲ್ಲೋರದಲ್ಲಿ ರಾಷ್ಟ್ರಕೂಟರು ನಿರ್ಮಿಸಿದ ಗುಹಾಲಯಗಳಲ್ಲಿ ಅತ್ಯುತ್ತಮವಾದದ್ದು ಇದು ಅತ್ಯಂತ ಅಮೋಘ ಕಲಾ ಕೃತಿಯಾಗಿದ್ದು ಅವರ ಗುಹಾಂತರ ವಾಸ್ತು ಶಿಲ್ಪ ಪರಾಕಾಷ್ಟತೆಯನ್ನು ಎತ್ತಿ ತೋರಿಸುತ್ತದೆ. ಒಂದನೇ ಕೃಷ್ಣ ಇದರ ನಿರ್ಮಾಪಕ ಇದು 3300 ಚದರ ಅಡಿಮಿಟರ್ ವಿಸ್ತೀರ್ಣವಿದ್ದು 276 ಅಡಿ ಉ ದ್ದ 154 ಅಡಿ ಅಗಲವಿದೆ 100 ಅಡಿ (38 ಮೀಟರ್) ಎತ್ತರವಿದೆ. ಎರಡು ಅಂತಸ್ತುಗಳಿಂದ ಕೂಡಿದೆ ಈ ದೇವಾಲಯವನ್ನು ಏಕಶಿಲಾ ಗುಡ್ಡದಲ್ಲಿ 107 ಅಡಿ ಆಳಕ್ಕೆ ಕೊರೆಯಲಾಗಿದೆ. ಕಲ್ಲಿನಲ್ಲಿ ಕೊರೆದ ಈ ದೇವಾಲಯವು ಪಶ್ಚಿಮಕ್ಕೆ ಮುಖ ಮಾಡಿದ್ದು ವಿಶಾಲವಾದ ಅಂಗಳದ ಮಧ್ಯೆ ಇದೆ ದೇವಾಲಯವು ಪ್ರವೇಶ ದ್ವಾರ ನಂದಿಮಂಟಪ ಚುತುಶ್ಯಾಲೆ ಮತ್ತು ಗರ್ಭಗುಡಿ ಎಂಬ ನಾಲ್ಕು ಭಾಗಗಳಿಂದ ಕೂಡಿದೆ.
- ಕೆಳ ಅಂತಸ್ತಿನ ಕೆಳಭಾಗದಲ್ಲಿ ಎರಡು ಆನೆಗಳನ್ನು ಕೆತ್ತಲಾಗಿದ್ದು ಅವು ಇಡೀ ದೇವಾಲಯವನ್ನು ಹೊತ್ತು ನಿಂತಂತೆ ಕಾಣುತ್ತದೆ ಮೇಲ ಅಂತಸ್ತಿನಲ್ಲಿ 16 ಕಂಬಗಳ ಮಂಟಪವಿದೆ ಹಿಂಭಾಗದಲ್ಲಿ ಗರ್ಭಗೃಹವಿದೆ ಅದರ ಮುಖ್ಯ ಶಿಖರವು ದ್ರಾವಿಡ ಶೈಲಿಯಲ್ಲಿದ್ದು 14 ಮೀಟರ್ ಎತ್ತರವಿದೆ ಚಾಲುಕ್ಯ ದೇವಾಲಯಗಳಂತೆ ಶಿಖರವು ಮುಂಚಾಚು ಹೊಂದಿದೆ. ಗರ್ಭಗೃಹ ಮತ್ತು ಮಂಟಪ ಅಪಾರ ಸೌಂದರ್ಯವುಳ್ಳ ಶಿಲ್ಪ ಕಲಾ ಕೃತಿಗಳಿಂದ ಕೂಡಿದೆ ಕೆಳ ಅಂತಸ್ತಿನ ತಡೆಗೋಡೆಗಳ ಮೇಲೆ ರಾವಣನು ಕೈಲಾಸ ಪರ್ವತವನ್ನು ಎತ್ತುತ್ತಿರುವ ದೃಶ್ಯ ಸುಂದರವಾಗಿದೆ ಅದೇ ರೀತಿ ದಶಾವತಾರ, ಭೈರವ, ರುದ್ರ ತಾಂಡವ, ತ್ರಿಪುರಾಂತಕ, ಗಿರಿಜಾ ಕಲ್ಯಾಣ ಪಗಡೆ ಆಡುತ್ತಿರುವ, ಸಂಗೀತ ಆಲಿಸುತ್ತಿರುವ ದೃಶ್ಯಗಳು, ಗಜಾಸುರ, ಲಕ್ಷ್ಮಿ, ಗಂಗಾ ಯಮುನಾ ನರಸಿಂಹ ಶಿಲ್ಪದೃಶಗಳಿವೆ . ಗರ್ಭಗುಡಿ ಭಾಗದಲ್ಲಿ ಶಿವ ಗಜೇಂದ್ರನನ್ನು ಕಾಪಾಡುತ್ತಿರುವ, ವಿಷ್ಣು ಅಂದಕಾಸುರನ ವಧೆ, ನಟರಾಜ, ಲಿಂಗೋದ್ಭವ, ವಿಗ್ರಹಗಳಿವೆ
- ದಶಾವತಾರ ಗುಹೆ: ಇದು 15 ನೇ ಗುಹೆ ಇದು ಎರಡು ಅಂತಸ್ತುಗಳಿಂದ ಕೂಡಿದ್ದು ಗುಹೆಯ ನಡುವೆ ಒಂದು ಏಕಶಿಲಾ ಮಂಟಪವಿದೆ ಪ್ರವೇಶ ದ್ವಾರದ ಎರಡು ಪಾರ್ಶ್ವಗಳಲ್ಲಿ ನದಿ ದೇವತೆಗಳ ಮೂರ್ತಿಗಳಿವೆ ಕೇಳ ಅಂತಸ್ತಿನ ಮಂಟಪದಲ್ಲಿ 14 ಕಂಬಗಳ ಮತ್ತು ಮೇಲಂತಸ್ತಿನ ಮಂಟಪದಲ್ಲಿ 18 ಕಂಬಗಳಿವೆ. ಅದೇ ಗೋಡೆಗಳ ಮೇಲೆ ಗಿರಿಜಾ ಕಲ್ಯಾಣ, ನಟರಾಜ, ಅಂಧಕಾಸುರನನ್ನು ಸಂಹರಿಸುತ್ತಿರುವ ಗಣೇಶ, ಶಿವ ಪಾರ್ವತಿಯರ ಪಗಡೆಯಾಟ, ವರಾಹ ನರಸಿಂಹಮತಾರ ಮತ್ತು ವಿಷ್ಣು ಆದಿಶೇಷನ ಮೇಲೆ ಮಲಗಿರುವ ಶಿಲ್ಪಗಳಿವೆ. ಈ ಗುಹೆಯಲ್ಲಿ ದಂತಿ ದುರ್ಗನ ಶಾಸನವಿದೆ ಗುಹೆ 94 ಅಡಿ ಉದ್ದ 54 ಅಡಿ ಅಗಲವಿದೆ
- ರಾಮೇಶ್ವರ ಗುಹೆ: ಇಲ್ಲಿ ತ್ರಿಬಂಗ, ಅಭಂಗ, ಮಕರ, ಕಾಳಿ, ಸಪ್ತಮಾತ್ರಕ್ಕೆ, ನಟರಾಜ, ಗಿರಿಜಾ ಕಲ್ಯಾಣ ಶಿಲ್ಪಗಳಿವೆ
- ಇಂದ್ರ ಸಭಾ : ಇದು 32ನೇ ಜೈನ ಗುಹೆ. ಎಲ್ಲೋರದಲ್ಲಿರುವ ಅತ್ಯಂತ ಸುಂದರವಾದ ಜೈನ ಕಲಾಕೃತಿ ಏಕಶಿಲಾ ಗುಹೆ. ಒಂದು ಅಂಗಳದ ನಡುವೆ ಇದೆ ಒಳಗಡೆ ಇಂದ್ರ ಸಚಿದೇವಿಯರ ವಿಗ್ರಹಗಳಿಂದಾಗಿ ಇದಕ್ಕೆ ಆ ಹೆಸರು ಬಂದಿದೆ. ಇಂದ್ರ ಸಭಾದಲ್ಲಿ ಬಾಹುಬಲಿಯ ನಾಲ್ಕು ಶಿಲ್ಪಗಳಿವೆ . ಇದರ ಗರ್ಭಗೃಹದ ಹೊರ ಭಾಗದ ಬಾಹುಬಲಿ ವಿಗ್ರಹ ಎಲ್ಲೋರಾದ ಜೈನ ಶಿಲ್ಪಕಲೆಗಳಲ್ಲಿ ಅತ್ಯುತ್ತಮವಾದ ಶಿಲ್ಪ. ಧ್ಯಾನಭಂಗಿಯ ಬಾಹುಬಲಿಯ ಕೈಕಾಲುಗಳಿಗೆ ಮಾಧವಿ ಲತೆಗಳು ಸುತ್ತಿಕೊಂಡಿವೆ. ಬಳ್ಳಿ ಸುರಳಿಯಾಗಿ ಅಲಂಕಾರ ಚಿಹ್ನೆಯಾಗಿ ಕಾಣುತ್ತದೆ ಪಾದಗಳ ಬಳಿಯಲ್ಲಿ ಜಿಂಕೆ, ಸರ್ಪ,ಇಲಿ,ಚೇಳು, ಕಾಡು ನಾಯಿ ಪ್ರಾಣಿಗಳನ್ನು ಕೆತ್ತಲಾಗಿದೆ. ಬಾಹುಬಲಿ ಕೇಶವ ರಾಶಿ ಹೊಂದಿದ್ದಾನೆ ಇದರ ನಿರ್ಮಾಣ ಕ್ರಿ.ಶ 10ನೇ ಶತಮಾನ. ಎಲ್ಲೋರದಲ್ಲಿ ಜಗನ್ನಾಥ ಗುಹೆ ನೀಲಕಂಠ ಗುಹೆಗಳಿವೆ.
- ಎಲಿಫೆಂಟಾ: ಬಾಂಬೆಗೆ ಆರು ಮೈಲಿ ದೂರದಲ್ಲಿರುವ ಎಲಿಫೆಂಟಾದ ಮೊದಲ ಹೆಸರು ಗೋವಕಪುರಿ (ಘರಾಪುರಿ) ಪೋರ್ಚುಗೀಸರು ಇಲ್ಲಿ ದೊಡ್ಡ ಆನೆಯಕಾರದ ಬಂಡೆಯನ್ನು ಕಂಡು ಅದನ್ನು ಎಲಿಫೆಂಟಾ ಎಂದು ಕರೆದರು. ಇಲ್ಲಿ ರಾಷ್ಟ್ರಕೂಟರ ಕಾಲದ ಏಳು ಗುಹೆಗಳಿವೆ ಅವುಗಳಲ್ಲಿ ಮಧ್ಯದ ತ್ರಿಮೂರ್ತಿ ಗುಹೆ ದೊಡ್ಡದು ಅದು 130 ಅಡಿ ಚಚೌಕವಾಗಿದೆ ಇದರಲ್ಲಿ 30 ದೊಡ್ಡ ಕಂಬಗಳಿರುವ ಮಹಾಮಂಟಪವಿದೆ ಮಂಟಪಕ್ಕೆ ಹೋಗಲು ಮೆಟ್ಟಿಲುಗಳನ್ನು ಕೊರೆಯಲಾಗಿದೆ. ಮಂಟಪದ ನಾಲ್ಕು ದಿಕ್ಕುಗಳಿಗೆ ಬಾಗಿಲುಗಳಿರುವ ಗರ್ಭಗೃಹವಿದೆ ಇಲ್ಲಿ ಒಂದು ಶಿವಲಿಂಗವಿದೆ. ದೊಡ್ಡ ಜಗಲಿಯ ಮೇಲೆ ಬೃಹತಾಕಾರದ ತ್ರಿಮೂರ್ತಿ ಮಹೇಶ ಮೂರ್ತಿ ಸ್ಥಾಪಿಸಲಾಗಿದೆ. 23 ಅಡಿ ಎತ್ತರದ ಈ ಅಪೂರ್ವ ವಿಗ್ರಹ ಜಗತ್ಪ್ರಸಿದ್ಧವಾಗಿದೆ. ಈ ಮಹೇಶ್ವರ ವಿಗ್ರಹವನ್ನು ಸೃಷ್ಟಿ ಸ್ಥಿತಿ ಮತ್ತು ಲಯದ ಪ್ರತೀಕವೆಂಬಂತೆ ಕೆತ್ತಲಾಗಿದೆ. ಅವು ಭಯಂಕರವಾದ ರೂಪ ಶಾಂತವಾದ ಶಿವನ ರೂಪ ಮತ್ತು ಸಂಕೇತಿಸುತ್ತವೆ. ಗಿರಿಜಾ ಕಲ್ಯಾಣ, ನಟರಾಜ, ಗಂಗಾಧರ, ಅರ್ಧನಾರೀಶ್ವರ,ಶಿವ, ಶಿವಯೋಗಿಶ್ವರ ಇತ್ಯಾದಿ ಶಿವನ ಅವತಾರದ ವಿಗ್ರಹಗಳನ್ನು ಕಡೆಯಲಾಗಿದೆ.
2 ರಚನಾತ್ಮಕ ದೇವಾಲಯಗಳು
- ರಾಷ್ಟ್ರಕೂಟರು ಚಾಲುಕ್ಯರನ್ನು ಅನುಸರಿಸಿ ಅಸಂಖ್ಯಾತ ದೇವಾಲಯಗಳನ್ನು ನಿರ್ಮಿಸಿದರು. ಅವು ಐಹೊಳೆ, ಪಟ್ಟದಕಲ್ಲು, ಸಿರಿವಲ, ಕುಕ್ಕುನೂರು ನವಲಿಂಗೇಶ್ವರ, ರೋಣ ಸೋಮೇಶ್ವರ, ಸೆರೆಗಲ್, ಸೌದತ್ತಿ, ಸೊಗಲ ಕುಡುತಿನಿ, ನಂದವಾಡಿಗೆ ಮೂಕಬಸವೇಶ್ವರ ದೇವಾಲಯ, ಮಹಾಕೂಟ ಮೊದಲಾದ ಕಡೆ ಇವೆ. ಗುಲ್ಬರ್ಗದಲ್ಲಿ ಜಿಲ್ಲೆಯ ಸಿರಿವಾಳ ಮತ್ತು ಐಹೊಳೆಯಲ್ಲಿ ರಾಷ್ಟ್ರಕೂಟರ ಕಾಲಕ್ಕೆ ಸೇರಿದ 20ಕ್ಕೂ ಹೆಚ್ಚು ದೇವಾಲಯಗಳು ಕಂಡುಬಂದಿವೆ .
ರಾಷ್ಟ್ರಕೂಟ ದೇವಾಲಯಗಳ ವೈಶಿಷ್ಟ್ಯತೆಗಳು ಕೆಳಕಂಡಂತಿವೆ
- ಸಾಮಾನ್ಯವಾಗಿ ದೇವಾಲಯಗಳು ಗರ್ಭಗುಡಿ ಅರ್ಧ ಮಂಟಪ ನವರಂಗ ಹಾಗೂ ಮುಖ ಮಂಟಪಗಳಿಂದ ಕೂಡಿರುತ್ತವೆ
- ದೇವಾಲಯದ ಸೌಂದರ್ಯ ಹೆಚ್ಚಿಸಲು ದ್ವಿಕೂಟ, ತ್ರಿಕೂಟ ದೇವಾಲಯಗಳನ್ನು ನಿರ್ಮಿಸಿದರು ಸವದೆಯ ನಾರಾಯಣ, ರೋಣದ ಸೋಮೇಶ್ವರ ದೇವಾಲಯಗಳು ದ್ವಿಕೂಟ ಎರಡು ಗರ್ಭಗುಡಿಗಳು ದೇವಾಲಯಗಳಾಗಿವೆ .
- ಹೊಯ್ಸಳ ಶೈಲಿಯಂತೆ ನಕ್ಷತ್ರ ಆಕಾರದ ತಳವಿನ್ಯಾಸದ ಮೇಲೆ ದೇವಾಲಯ ನಿರ್ಮಾಣ ಉದಾಹರಣೆಗೆ: ಕಣ್ಣುೂರಿನ ಜೈನ ದೇವಾಲಯ, ನರಗುಂದದ ದಂಡೇಶ್ವರ ದೇವಾಲಯ
- ದೇವಾಲಯದ ಕಂಬಗಳು ಹಾಗೂ ಮೇಲ್ಚಾವಣಿಯ ಭಾಗಗಳು ಅಪರೂಪದ ಉಬ್ಬು ಶಿಲ್ಪಗಳಿಂದ ಕೂಡಿವೆ .
- ವಾಸ್ತು ರಚನೆಗೆ ಕೆಂಪು ಮರಳುಗಲ್ಲು, ಗ್ರಾನೆಟ್ ಹಾಗೂ ಪದರು ಕಲ್ಲನ್ನು ಬಳಸಿರುವುದು
- ಚಚೌಕಾರದ ಬಳ್ಳಿಯ ಅಲಂಕಾರದ ಕಂಬಗಳ ರಚನೆ , ಅವನ್ನು ಹೂ ಬಳ್ಳಿಗಳಿಂದ ಅಲಂಕರಿಸಿರುವುದು.
- ಗರ್ಭಗುಡಿಯ ಎರಡು ಬದಿಗಳಲ್ಲಿ ಬೃಹತ್ ಗಾತ್ರದ ದ್ವಾರಪಾಲಕರ ವಿಗ್ರಹಗಳನ್ನು ಕೆತ್ತಿರುವುದು ಪಕ್ಕ ಗೋಡೆ ಕಂಬಗಳಲ್ಲಿ ತರಂಗ ಚಾಚುಪೀಠಗಳಿವೆ
- ಅಂತಸ್ತುಗಳುಳ್ಳ ಬಸದಿಗಳ ನಿರ್ಮಾಣ ಪಟ್ಟದಕಲ್ಲು ಹಳ್ಳೂರು ಮತ್ತು ಐಹೊಳೆ ಸೆಟ್ಟವ್ವ ಬಸದಿಗಳು ಇದಕ್ಕೆ ಉದಾಹರಣೆಗಳಾಗಿವೆ .
- ಕೆಲವು ದೇವಾಲಯಗಳಲ್ಲಿ ನಾಗರ ಶೈಲಿಯ ವಿಮಾನಗಳಿವೆ ಮತ್ತು ಕೆಲವು ದೇವಾಲಯಗಳಿಗೆ ಶಿಖರಗಳೆ ಇರುವುದಿಲ್ಲ
- ಕೆಲವು ದೇವಾಲಯಗಳಲ್ಲಿ ವಿಶಾಲವಾದ ಗರ್ಭಗುಡಿಗಳಿದ್ದು ತ್ರಿಮೂರ್ತಿಯನ್ನು ಒಂದೇ ಸಾಲಿನಲ್ಲಿ ಸ್ಥಾಪಿಸಲಾಗಿದೆ.
- ಐಹೊಳೆಯ ಜಾಡರ ಗುಡಿ, ನಂದವಾಡಿಗೆಯ ಮೂಕ ಬಸವಣ್ಣ ದೇವಾಲಯ, ನರೇಗಲ್ಲಿನ ನಾರಾಯಣ ಮತ್ತು ಸೋಮೇಶ್ವರ ದೇವಾಲಯಗಳು ರಾಷ್ಟ್ರಕೂಟರು ನಿರ್ಮಿಸಿದ ಅತ್ಯಂತ ಪ್ರಾಚೀನ ದೇವಾಲಯಗಳಾಗಿವೆ .
ಬಸದಿಗಳು
- ರಾಷ್ಟ್ರಕೂಟರು ಕೆಲವು ಜೈನ ಬಸದಿಗಳನ್ನು ನಿರ್ಮಿಸಿದರು. ಅವನ್ನು ಕೊಂಡರು, ಹಳೂರು, ಪಟ್ಟದಕಲ್ಲು, ನರಕೆಗಲ್, ಐಹೊಳೆಗಳಲ್ಲಿ ಕಾಣಬಹುದು. ಅವುಗಳಲ್ಲಿ ಕೆಲವೊಂದು ಅಂತಸ್ತುಗಳಲ್ಲಿ ನಿರ್ಮಿಸಲಾಗಿದೆ ನರೇಗಲ್ನ ತ್ರಿಕೂಟ ಬಸದಿ ಕರ್ನಾಟಕದಲ್ಲೆ ಅತಿ ದೊಡ್ಡ ಬಸದಿಯಾಗಿದೆ.
ಉಪಸಂಹಾರ
- ಕಲೆ ಮತ್ತು ವಾಸ್ತುಶಿಲ್ಪಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ರಾಷ್ಟ್ರಕೂಟರು ಚಾಲುಕ್ಯ ವಾಸ್ತು ಶಿಲ್ಪಶೈಲಿಯನ್ನು ಮುಂದುವರಿಸಿದರು ಅಂದರೆ ರಾಷ್ಟ್ರಕೂಟ ಕಲೆ ಪ್ರಾಚೀನ ಚಾಲುಕ್ಯ ವಾಸ್ತುಶಿಲ್ಪದಿಂದ ಪ್ರಭಾವಿತವಾಗಿದೆ. ಆದರೆ ಬದಲಾದ ಸೌಂದರ್ಯ ಮತ್ತು ಉದ್ದೇಶಗಳಿಗೆ ತಕ್ಕಂತೆ ಅವರು ಬದಲಾವಣೆಗಳನ್ನು ಮಾಡಿಕೊಂಡರು. ದೇವಾಲಯ ಸ್ಥಳ ವಿನ್ಯಾಸ ಸುಧಾರಣೆಗೊಂಡ ಮಾದರಿಗಳು ಹೊಸ ಬಗೆಯ ಅಲಂಕಾರಗಳು ಆ ಮಾರ್ಪಾಡುಗಳನ್ನು ಮಾಡಿಕೊಂಡರು.