ಚೀನಾ ಮತ್ತು ಇತರ ಸರ್ಕಾರಗಳ ಒತ್ತಡಕ್ಕೆ ಮಣಿದ ಆರೋಪಕ್ಕೆ ಗುರಿಯಾಗಿರುವ ವಿಶ್ವಬ್ಯಾಂಕ್ ತನ್ನ ಜನಪ್ರಿಯ ಆರ್ಥಿಕ ದೇಶಗಳ ಶ್ರೇಯಾಂಕ ವರದಿಯನ್ನು ಕೈಬಿಟ್ಟಿದೆ.
ಆರ್ಥಿಕ ದೇಶಗಳ ಶ್ರೇಯಾಂಕ ವರದಿಯ ಪ್ರಾಮುಖ್ಯತೆ
- ವಿವಿಧ ದೇಶಗಳಲ್ಲಿ ಆರ್ಥಿಕ ಹೂಡಿಕೆಗೆ ಪ್ರಪಂಚದಾದ್ಯಂತದ ಅನೇಕ ಕಂಪನಿಗಳು ಮತ್ತು ಹೂಡಿಕೆದಾರರಿಗೆ ಈ ವರದಿಯೇ ಮುಖ್ಯವಾಗಿರುತ್ತದೆ. ಅವರು ಹಣವನ್ನು ಎಲ್ಲಿ ಹೂಡಿಕೆ ಮಾಡುವುದು, ಉತ್ಪಾದನಾ ಘಟಕಗಳನ್ನು ಎಲ್ಲಿ ತೆರೆಯುವುದು ಅಥವಾ ಉತ್ಪನ್ನಗಳನ್ನು ಎಲ್ಲಿ ಮಾರಾಟ ಮಾಡುವುದು ಎಂಬುದನ್ನು ನಿರ್ಧರಿಸಲು ಸಹಾಯ ಮಾಡಲು ಅವರು ವಿಶ್ವ ಬ್ಯಾಂಕ್ನ "ಡೂಯಿಂಗ್ ಬಿಸಿನೆಸ್" ವರದಿಯನ್ನು ಬಳಕೆ ಮಾಡಿಕೊಳ್ಳುತ್ತಾರೆ.
- ಆರ್ಥಿಕ ಶ್ರೇಯಾಂಕ ಉತ್ತಮ ಪಡಿಸಿಕೊಳ್ಳಲು ಕೆಲವೊಮ್ಮೆ, ರಾಷ್ಟ್ರಗಳು ಗಣನೀಯ ನೀತಿ ಬದಲಾವಣೆಗಳನ್ನು ಅನುಸರಿಸುತ್ತವೆ. ಉದಾಹರಣೆಗೆ, ವ್ಯವಹಾರಗಳಿಗೆ ತೆರಿಗೆ ಪಾವತಿಸಲು, ಸಾಲಗಳನ್ನು ಪಡೆಯಲು ಅಥವಾ ಒಪ್ಪಂದಗಳನ್ನು ಜಾರಿಗೊಳಿಸಲು ತಮ್ಮ ಕಾನೂನಿಗೆ ತಿದ್ದುಪಡಿ ತಂದು ಸುಲಭವಾಗಿಸುತ್ತದೆ.
ಹಿನ್ನಲೆ
- ವಿಶ್ವಬ್ಯಾಂಕ್ ಬಹಳ ಹಿಂದಿನಿಂದಲೂ "ಡೂಯಿಂಗ್ ಬ್ಯುಸಿನೆಸ್" ಶ್ರೇಯಾಂಕಗಳನ್ನು ತಯಾರಿಸುವಲ್ಲಿ ರಾಜಕೀಯ ಒತ್ತಡಕ್ಕೆ ಮಣಿದಿದೆ ಎಂದು ಹೇಳಲಾಗಿದೆ.
- 2018 ಮತ್ತು 2020 ರ "ಡೂಯಿಂಗ್ ಬ್ಯುಸಿನೆಸ್" ಮತ್ತು ವಿಶ್ವ ಬ್ಯಾಂಕ್ ಸಿಬ್ಬಂದಿ ಸದಸ್ಯರನ್ನು ಒಳಗೊಂಡ "ನೈತಿಕ ವಿಷಯಗಳ" ಆವೃತ್ತಿಗಳಲ್ಲಿ "ಡೇಟಾ ಅಕ್ರಮಗಳ" ಬಗ್ಗೆ ಆಂತರಿಕ ದೂರುಗಳನ್ನು ಪರಿಶೀಲಿಸಿದ ನಂತರ ಈ ವಾರ ವಿಶ್ವಬ್ಯಾಂಕ್ ತನ್ನದೇ ವರದಿಯನ್ನು ಕೈಬಿಟ್ಟಿದೆ.
- ಇಂತಹ ಪ್ರಮುಖ ವರದಿಯನ್ನು ಸ್ವತಃ ವಿಶ್ವಬ್ಯಾಂಕ್ ತಿರುಚಿ ಹಲವು ಚೀನಾ ಸೇರಿದಂತೆ ಹಲವು ಪ್ರಬಲ ದೇಶಗಳ ಓಲೈಕಿಗೆ ಮುಂದಾಗಿದ್ದ ಅಚ್ಚರಿಯ ವಿಚಾರ ಬೆಳಕಿಗೆ ಬಂದಿದೆ. ಪ್ರಪಂಚದಾದ್ಯಂತದ ದೇಶಗಳು ಹೂಡಿಕೆಯನ್ನು ಆಕರ್ಷಿಸಲು ಉತ್ಸುಕವಾಗಿದ್ದು, ವಿಶೇಷವಾಗಿ ಚೀನಾದಂತಹ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳು, ವಿಶ್ವ ಬ್ಯಾಂಕಿನ ವರದಿಯಲ್ಲಿ ತಮ್ಮ ಶ್ರೇಯಾಂಕಗಳನ್ನು ಸುಧಾರಿಸಲು ಪ್ರಯತ್ನಿಸಿವೆ
ವಿಶ್ವ ಬ್ಯಾಂಕ್ ಕೆಲಸವೇನು?
- 1944 ರಲ್ಲಿ ಸ್ಥಾಪನೆಯಾದ, 189-ದೇಶಗಳು ವಿಶ್ವಬ್ಯಾಂಕ್ ಅನುದಾನ ಮತ್ತು ಸಾಲಗಳನ್ನು ಪಡೆಯುತ್ತಿದೆ. ಆಗಾಗ್ಗೆ ದೊಡ್ಡ ಸಾರ್ವಜನಿಕ ಕೆಲಸಗಳ ಯೋಜನೆಗಳಿಗೆ ಹಣಕಾಸು ಸೇವೆಯನ್ನು ಈ ವಿಶ್ವಬ್ಯಾಂಕ್ ಒದಗಿಸುತ್ತದೆ. ಅಲ್ಲದೆ ತನ್ನ ಸದಸ್ಯ ರಾಷ್ಟ್ರಗಳಿಗೆ ಆರ್ಥಿಕ ಸಲಹೆಯನ್ನು ನೀಡುತ್ತದೆ. ಪ್ರಮುಖವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ. ಅಂತೆಯೇ ವಾಷಿಂಗ್ಟನ್ನಲ್ಲಿರುವ ಈ ವಿಶ್ವಬ್ಯಾಂಕ್, ವಿಶ್ವದಾದ್ಯಂತ ಬಡತನವನ್ನು ಕಡಿಮೆ ಮಾಡಲು ಪ್ರತಿಜ್ಞೆ ಮಾಡಿದೆ.
"ಡೂಯಿಂಗ್ ಬಿಸಿನೆಸ್" ವರದಿ ಎಂದರೇನು?
- 2002 ರಲ್ಲಿ, ವಿಶ್ವಬ್ಯಾಂಕ್ ಈ ವರದಿಯನ್ನು ಪರಿಚಯಿಸಿತು, ಸದಸ್ಯ ದೇಶಗಳ ವಾರ್ಷಿಕ ಶ್ರೇಯಾಂಕಗಳು, ಯಾವ ದೇಶಗಳು ವ್ಯವಹಾರಗಳಿಗೆ ಅನುಕೂಲಕರವಾದ ನೀತಿಗಳನ್ನು ಅಳವಡಿಸಿಕೊಂಡಿವೆ ಮತ್ತು ಯಾವುದನ್ನು ಮಾಡಿಲ್ಲ ಮತ್ತು ಅವು ಎಷ್ಟು ಸುಧಾರಿಸುತ್ತಿವೆ ಅಥವಾ ಹಿಮ್ಮೆಟ್ಟುತ್ತಿವೆ ಎಂಬುದನ್ನು ಈ ವರದಿ ಎತ್ತಿ ತೋರಿಸುತ್ತದೆ.
- 190 ದೇಶಗಳಲ್ಲಿ ಸುಮಾರು ಹತ್ತು ಸಾವಿರ ಅಕೌಂಟೆಂಟ್ಗಳು, ವಕೀಲರು ಮತ್ತು ಇತರ ವೃತ್ತಿಪರರಿಂದ ಮಾಹಿತಿಯನ್ನು ಸಂಗ್ರಹಿಸುವ ವಿಶ್ವಬ್ಯಾಂಕ್, ವ್ಯವಹಾರವನ್ನು ಪ್ರಾರಂಭಿಸುವುದು, ನಿರ್ಮಾಣ ಪರವಾನಗಿ ಪಡೆಯುವುದು ಅಥವಾ ಎಲೆಕ್ಟ್ರಿಕಲ್ ಗ್ರಿಡ್ಗೆ ಸಂಪರ್ಕಿಸುವುದು ಮುಂತಾದ ಕೆಲಸಗಳನ್ನು ಮಾಡುವುದು ಎಷ್ಟು ಸುಲಭ ಎಂದು ನಿರ್ಣಯಿಸುತ್ತದೆ.
- ಕಳೆದ ವರ್ಷದ ಶ್ರೇಯಾಂಕದಲ್ಲಿ ನ್ಯೂಜಿಲ್ಯಾಂಡ್ ನಂ .1, ಅಮೆರಿಕ 6 ಮತ್ತು ಸೊಮಾಲಿಯಾ ಕೊನೆಯ ಅಂದರೆ ನಂ .190 ನೇ ಸ್ಥಾನದಲ್ಲಿತ್ತು.
ಈ ಘಟನೆಯು ಏನನ್ನು ತಿಳಿಸುತ್ತದೆ ?
- ಈ ಘಟನೆಯು ವಿಶ್ವಬ್ಯಾಂಕ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯಂತಹ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ತನ್ನ ತೂಕವನ್ನು ಹೆಚ್ಚಿಸಿಕೊಳ್ಳಲು ಚೀನಾದ ಹೆಣೆಯುತ್ತಿರುವ ತಂತ್ರಗಾರಿಕೆ ಮತ್ತು ಹೆಚ್ಚುತ್ತಿರುವ ಅದರ ಒತ್ತಡವನ್ನು ಎತ್ತಿ ತೋರಿಸುತ್ತದೆ.