F.D.A / S.D.A ಯ ತಯಾರಿಯನ್ನು ಹೇಗೆ ಪ್ರಾರಂಭಿಸುವುದು?
F.D.A / S.D.A ಯ ತಯಾರಿಯನ್ನು ಹೇಗೆ ಪ್ರಾರಂಭಿಸುವುದು?
ಎಫ್.ಡಿ.ಎ/ಎಸ್.ಡಿ.ಎ ಪರೀಕ್ಷಾ ತಯಾರಿ ಹೇಗೆ?
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರಥಮ ದರ್ಜೆಯ ಸಹಾಯಕರು (ಸಹಾಯಕರು)/ದ್ವಿತೀಯ ದರ್ಜೆ ಸಹಾಯಕರು ಎಂಬ ಸೇವೆಗಳಿಗೆ ಅತ್ಯಂತ ಸ್ಪರ್ಧೆ ಏರ್ಪಡುತ್ತಿದೆ. ಏಕೆಂದರೆ ಈ ಸೇವೆಗಳನ್ನು ಸರ್ಕಾರದಲ್ಲಿ ಆಡಳಿತದ ಬೆನ್ನೆಲುಬು ಎಂದು ಕರೆಯಲಾಗುತ್ತದೆ. ಹಾಗಾದರೆ ಇಷ್ಟೊಂದು ಮುಖ್ಯ ಪಾತ್ರ ವಹಿಸುವ ಸರ್ಕಾರಿ ಸೇವೆಗಳಿಗೆ ಸೇರುವುದು ಹೇಗೆ ಮತ್ತು ಅದರ ತಯಾರಿ ಹೇಗಿರಬೇಕು ಎಂಬ ಬಗ್ಗೆ ಆಳವಾಗಿ ನೋಡಿದಾಗ : ಈ ಕೆಳಗಿನಂತೆ ವಿವರವಾಗಿ ನೋಡಬಹುದು.
ಯಾವ ಸೇವೆಗಳಿಗೆ ಎಫ್.ಡಿ.ಎ/ಎಸ್.ಡಿ.ಎ ಪರೀಕ್ಷೆ
ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ‘ಸಿ’ ಮತ್ತು ‘ಡಿ’ ವೃಂದದ ಹೈದ್ರಾಬಾದ್ ಕರ್ನಾಟಕ (ಹೆಚ್ಕೆ) ಮತ್ತು ಉಳಿಕೆ ಪ್ರದೇಶದ ವೃಂದ (ಆರ್ಪಿಸಿ) ದ ಸೇವೆಗಳಿಗೆ ಪರೀಕ್ಷೆ ನಡೆಯುತ್ತವೆ. ಉದಾಹರಣೆಗೆ: ರಾಜ್ಯ ಸರ್ಕಾರದ ವಿಧಾನಸೌಧ ಮತ್ತು ಅದಕ್ಕೆ ಹೊಂದಿಕೊAಡAತೆ ಇರುವ ಸಚಿವಾಲಯ ಮತ್ತು ಹಲವು ಇಲಾಖೆಗಳಿಂದ ಹಿಡಿದು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ದಂಢಾದಿಕಾರಿಗಳ ಕಛೇರಿಗಳವರೆಗೆ ಮತ್ತು ಎಲ್ಲಾ ನ್ಯಾಯಾಲಯಗಳನ್ನು ಸೇರಿಕೊಂಡು ಎಲ್ಲಾ ಇಲಾಖೆಗಳಲ್ಲಿಯೂ ಈ ಸೇವೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.
ಎಫ್.ಡಿ.ಎ/ಎಸ್.ಡಿ.ಎ ಪರೀಕ್ಷೆಗಳಿಗೆ ವಿದ್ಯಾರ್ಹತೆ ಏನು?
ಎಫ್.ಡಿ.ಎ ಹುದ್ದೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅಂಗೀಕೃತಗೊAಡ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಿಂದ ಪಡೆದ ಯಾವುದೇ ಪದವಿ.
ಎಸ್.ಡಿ.ಎ ಹುದ್ದೆಗಳಿಗೆ ಪದವಿ ಪೂರ್ವ ಶಿಕ್ಷಣ ಮಂಡಳಿಯು ನಡೆಸುವ ಪಿ.ಯು.ಸಿ ಅಥವಾ ತತ್ಸಮಾನ ವಿದ್ಯಾರ್ಹತೆ.
(ಸೂಚನೆ: ಅರ್ಜಿಗಳನ್ನು ಭರ್ತಿ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದAದು ಆಯಾಯ ಹುದ್ದೆಗಳಿಗೆ ನಿಗಧಿಪಡಿಸಿದ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು).
ಎಫ್.ಡಿ.ಎ/ಎಸ್.ಡಿ.ಎ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ವಯೋಮಿತಿ
ಕೆ.ಪಿ.ಎಸ್.ಸಿ (KPSC) ನಿಗದಿಪಡಿಸಿದ ಅರ್ಜಿಸಲ್ಲಿಸಲು ಕೊನೆಯ ದಿನಾಂಕದAದು ಅಭ್ಯರ್ಥಿಯು ಈ ಕೆಳಕಂಡ ಕನಿಷ್ಠ ವಯೋಮಿತಿಯನ್ನು ಹೊಂದಿರಲೇಬೇಕು ಹಾಗೂ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.
ಕನಿಷ್ಠ : 18 ವರ್ಷಗಳು (ಎಸ್.ಡಿ.ಎ) ಮತ್ತು 21 ವರ್ಷಗಳು (ಎಫ್.ಡಿ.ಎ)
ಗರಿಷ್ಠ: 35 ವರ್ಷಗಳು (ಸಾಮಾನ್ಯ)
o 38 ವರ್ಷಗಳು (ಪ್ರವರ್ಗ ೨ಎ/೨ಬಿ/೩ಎ/ಎಬಿ)
o 40 ವರ್ಷಗಳು (ಪ.ಜಾ/ಪ.ಪಂ. ಪ್ರವರ್ಗ-೧)
o 40 +10 ವರ್ಷಗಳು (ವಿಕಲಚೇತನರು ಮತ್ತು ವಿಧವೆಯರಿಗೆ ಸಡಿಲಿಕೆ)
- ಮೀಸಲಾತಿ ಏನು? ಮತ್ತು ಎಷ್ಟು?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಜಾತಿ ಮೀಸಲಾತಿ, ಗ್ರಾಮೀಣ ಅಭ್ಯರ್ಥಿ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ, ಮಾಜಿ ಸೈನಿಕ, ಯೋಜನೆಗಳಿಂದ ನಿರಾಶ್ರಿತ (ಪಿಡಿಪಿ), ಹೈದ್ರಾಬಾದ್ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ (HK and KK) ಮತ್ತು ಅಂಗವಿಕಲ ಅಥವಾ ವಿಕಲಚೇತನ ಅಭ್ಯರ್ಥಿಗಳಿಗೆ ಮೀಸಲಾತಿ ನೀಡಲಾಗಿದೆ.
(ಸೂಚನೆ: 40 ವರ್ಷ ಮೇಲ್ಪಟ್ಟ ಅಂಗವಿಕಲರಿಗೆ ಈ ಮೀಸಲಾತಿ ಲಭ್ಯವಿರುವುದಿಲ್ಲ)
ಎಫ್.ಡಿ.ಎ/ಎಸ್.ಡಿ.ಎ ಪರೀಕ್ಷಾ ಮಾದರಿ
ಕೆ.ಪಿ.ಎಸ್.ಸಿ (KPSC) ಮೂಲಕ ಬಿಡುಗಡೆ ಮಾಡಲಾಗುವ ಅಧಿಸೂಚನೆಯಂತೆಯೇ ಪರೀಕ್ಷಾ ಪೂರ್ಣ ನೇಮಕಾತಿ ನಡೆಯುತ್ತದೆ. ಅದೇರೀತಿ ಈ ಪರೀಕ್ಷೆಯಲ್ಲಿ ಮೂರು ಪತ್ರಿಕೆಯ ಪರೀಕ್ಷೆ ನಡೆಸಲಾಗುತ್ತದೆ.
ಪತ್ರಿಕೆ-1: ಕಡ್ಡಾಯ ಕನ್ನಡ (150 ಅಂಕಗಳು- ವಿವರಣಾತ್ಮಕ ಪತ್ರಿಕೆ)
(ಈ ಪತ್ರಿಕೆ ಕಡ್ಡಾಯವಾಗಿ ೧ನೇ ತರಗತಿಯಿಂದ ೧೦ನೇ ತರಗತಿಯವರೆಗೆ ಅಥವಾ ನಂತರದ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆ ಎಂದು ಅಥವಾ ಐಚ್ಛಿಕ ವಿಷಯವಾಗಿ ಓದಿಲ್ಲದಿದ್ದಲ್ಲಿ ಈ ಪರೀಕ್ಷೆ ಎದುರಿಸಬೇಕಾಗುತ್ತದೆ. ಅದೇರೀತಿ ಈ ಪತ್ರಿಕೆಯ ಅಂಕಗಳು ಆಯ್ಕೆಯಲ್ಲಿ ನಿರ್ಧರಿತವಾಗದೇ ಇದ್ದರೂ ಅಭ್ಯರ್ಥಿಗಳು ಅರ್ಹರಾಗಲು ಕಡ್ಡಾಯವಾಗಿ ೫೦ ಅಂಕಗಳನ್ನು ಗಳಿಸಲೇಬೇಕು).
ಪತ್ರಿಕೆ-2: ಸಾಮಾನ್ಯ ಕನ್ನಡ/ಸಾಮಾನ್ಯ ಇಂಗ್ಲಿಷ್ (1೦೦ ಅಂಕಗಳಿಗೆ ವಸ್ತುನಿಷ್ಠ ಬಹು ಆಯ್ಕೆ ಪರೀಕ್ಷೆ)
ಅರ್ಜಿಯಲ್ಲಿ ಆಯ್ಕೆ ಮಾಡಿಕೊಂಡAತೆ ವಿಷಯದ ಬಗೆಗಿನ ಅಧ್ಯಯನ ಅವಶ್ಯಕ. ಇಲ್ಲಿ ಪತ್ರಿಕೆಯು ಸಾಮಾನ್ಯವಾಗಿ ಪದವಿ ಪರೀಕ್ಷೆಯಲ್ಲಿ ಪಾಸ್ ಆದ ವಿದ್ಯಾರ್ಥಿಗಳಿಗೆ ಇರಬೇಕಾದ ಕನಿಷ್ಠ ವಿದ್ಯಾರ್ಹತೆಗೆ ಸಮನಾಗಿರುತ್ತದೆ.
ಪತ್ರಿಕೆ-3: ಸಾಮಾನ್ಯ ಜ್ಞಾನ (1೦೦ ಅಂಕಗಳಿಗೆ ವಸ್ತುನಿಷ್ಠ ಬಹು ಆಯ್ಕೆ ಪರೀಕ್ಷೆ)
ಪದವಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವ ವಿದ್ಯಾರ್ಥಿಗೆ ಇರಬೇಕಾದ ಸಾಮಾನ್ಯ ಜ್ಞಾನಕ್ಕೆ ಸಂಬAಧಪಟ್ಟ ಕನಿಷ್ಠ ವಿದ್ಯಾಮಟ್ಟಕ್ಕೆ ಸಮನಾಗಿರುತ್ತದೆ.
ಎಫ್.ಡಿ.ಎ/ಎಸ್.ಡಿ.ಎ ಪರೀಕ್ಷಾ ಪಠ್ಯ ಕ್ರಮ : (Syllabus)
ಪತ್ರಿಕೆ-1: ‘ಕಡ್ಡಾಯ ಕನ್ನಡ’
೧) ವಿಷಯದ ಸಮಗ್ರ ತಿಳುವಳಿಕೆ : ಕನ್ನಡ ವ್ಯಾಕರಣ, ವಸ್ತು ನಿಷ್ಠತೆ, ಸಮನಾರ್ಥಕ, ವಿರುದ್ಧಾರ್ಥಕ (೨೫ ಅಂಕಗಳು)
೨) ಪದ ಪ್ರಯೋಗ – (೨೫ ಅಂಕಗಳು)
೩) ವಿಷಯದ ಸಂಕ್ಷೇಪಗಳು – (೨೫ ಅಂಕಗಳು)
೪) ಪದ ಜ್ಞಾನ – (೨೫ ಅಂಕಗಳು)
೫) ಲಘು ಪ್ರಬಂಧ – (೨೫ ಅಂಕಗಳು)
೬) ಭಾಷಾಂತರ (ಕನ್ನಡಕ್ಕೆ) – (೨೫ ಅಂಕಗಳು)
ಪತ್ರಿಕೆ-2: ‘ಸಾಮಾನ್ಯ ಕನ್ನಡ’/ Genaral English
೧) ಶುದ್ಧ ಬರಹ ತಪ್ಪು ಕಂಡುಹಿಡಿಯುವಿಕೆ (Spot the errors)
೨) ಬಿಟ್ಟ ಸ್ಥಳ ತುಂಬಿ- Fill In the Blanks
೩) ಸಮಾನಾರ್ಥಕ ಮತ್ತು ವಿರುದ್ದಾರ್ಥಕ ಪದಗಳು – Synonims and Antonims
೪) ಗಾದೆಗಳು ಮತ್ತು ನುಡಿಗಟ್ಟುಗಳು- Idioms and Prases
೫) ವಾಕ್ಯಗಳ ಸರಿಪಡಿಸುವಿಕೆ- Correction Of The Sentences
- ವಾಕ್ಯಗಳ ಜೋಡಿಸುವಿಕೆ- Editing of the sentences
- ವಾಕ್ಯಗಳ ಪೂರ್ಣಗೊಳಿಸುವಿಕೆ- Completion Of the sentences
೬) ಸಕರ್ಮಕ ಮತ್ತು ಅಕರ್ಮಕ ಪದಗಳು (Active and Passive Voices)
೭) ನಿರೂಪಣೆ (Narration)
೮) ಗದ್ಯಭಾಗಗಳ ಅರ್ಥೈಸುವಿಕೆ (Comprehension of passages)
ಪತ್ರಿಕೆ-3: ‘ಸಾಮಾನ್ಯ ಜ್ಞಾನ’/ Genaral Knowledge
ಇತಿಹಾಸ (History) – ಪ್ರಾಚೀನ, ಮಧ್ಯಕಾಲೀನ, ಸಮಕಾಲಿನ ಅಥವಾ ಆಧುನಿಕ ಭಾರತ ಮತ್ತು ರಾಜ್ಯ ಇತಿಹಾಸ.
ಕಲೆ ಮತ್ತು ಸಂಸ್ಕೃತಿ (Art and Culture)
ಭೂಗೋಳ ಶಾಸ್ತç (Geography) ಕರ್ನಾಟಕ, ಭಾರತ, ಅಂತಾರಾಷ್ಟಿçÃಯ ಪ್ರಾಕೃತಿಕ ಮತ್ತು ಪ್ರಾದೇಶಿಕ.
ಅರ್ಥಶಾಸ್ರöç – ರಾಜ್ಯ ಮತ್ತು ರಾಷ್ಟಿçÃಯ ಆರ್ಥಿಕ ಸಂಗತಿಗಳು ಮತ್ತು ಅರ್ಥವ್ಯವಸ್ಥೆ.
ಸಾಮಾನ್ಯ ನೀತಿ- ಸಂಕ್ಷೇಪಣೆಗಳು.
ವೈಜ್ಞಾನಿಕ ಸಂಶೋಧನೆಗಳು ಮತ್ತು ದೈನಂದಿನ ಜೀವನದಲ್ಲಿ ವಿಜ್ಞಾನ
ರಸಾಯನಶಾಸ್ತç, ಜೀವಶಾಸ್ತç, ಇತ್ಯಾದಿ
ಪ್ರಚಲಿತ ವಿದ್ಯಮಾನಗಳು- ಪ್ರಶಸ್ತಿಗಳು, ಕೃತಿಗಳು, ಕ್ರೀಡೆ, ಸರ್ಕಾರದ ಹೊಸ ಹೊಸ ಕಾರ್ಯಕ್ರಮಗಳು ಮತ್ತು ನೀತಿಗಳು
ಹಾಗೂ ದಿನಪತ್ರಿಕೆ, ಮಾಸಿಕಗಳ ಅಧ್ಯಯನ ಇತರೆ,
ಎಫ್.ಡಿ.ಎ/ಎಸ್.ಡಿ.ಎ ಪರೀಕ್ಷಾ ಸಿದ್ಧತೆಗೆ ಅಗತ್ಯವಾದ ಪುಸ್ತಕಗಳು:
ಸರ್ಕಾರಿ ಪಠ್ಯಪುಸ್ತಕಗಳು (NCERT/DCERT) ಅಥವಾ ರಾಜ್ಯ ಶಾಲಾ ಪಢ್ಯ ಪ್ರಾಧಿಕಾರದ ೪ ರಿಂದ ೧೦ ತರಗತಿಯ ಎಲ್ಲಾ ಪಠ್ಯಪುಸ್ತಕಗಳು
ಪದವಿ ಪೂರ್ವ ಕಾಲೇಜಿನ ಮೊದಲ ಮತ್ತು ದ್ವಿತೀಯ ಪಿಯುಸಿ ಪುಸ್ತಕಗಳು (ರಾಜ್ಯ ಪ್ರಾಧಿಕಾರದ)
ಕನ್ನಡ ವ್ಯಾಕರಣ-ಅರಳಿಗುಪ್ಪಿ ಮತ್ತು ರಾಮಕೃಷ್ಣ ಉಡುಪ ಅಥವಾ ಕನ್ನಡ ಸಾಹಿತ್ಯಕೋಶ-ರಾಜಪ್ಪ ದಳವಾಯಿ
ಭಾರತ ಸಂವಿಧಾನ ಮತ್ತು ಸಂವಿಧಾನ- ನಮ್ಮ ಕೆಪಿಎಸ್ಸಿ ನೋಟ್ಸ್ ಅಥವಾ ಪಿ.ಎಸ್.ಗಂಗಾಧರ ಅಥವಾ ಲಕ್ಷಿö್ಮಕಾಂತ್ (Lakshmikanth)
ಪ್ರಾದೇಶಿಕ ಮತ್ತು ಪ್ರಾಕೃತ ಭೂಗೋಖ ಶಾಸ್ತç- ಡಾ|| ರಂಗನಾಥ
ಭಾರತದ ಆರ್ಥಿಕ ಅಭಿವೃದ್ಧಿ –ಗರಣಿ ಕೃಷ್ಣಮೂರ್ತಿ/ಜಿ.ಡಬ್ಲೂö್ಯ.ಕೆಂಪಯ್ಯ
ಸಾಮಾನ್ಯ ವಿಜ್ಞಾನ- ಕೆ.ಹೆಚ್.ಸುರೇಶ್/ವಿ.ಕೆ.ಶಿ
ಕರ್ನಾಟಕ/ಭಾರತ ಇಯರ್ ಬುಕ್ ೨೦೨೦-೨೧- ನಮ್ಮ ಕೆಪಿಎಸ್ಸಿ ಅಥವಾ ಸ್ಪರ್ಧಾಸ್ಪೂರ್ತಿ ಅಥವಾ (NammaKPSC)
ದಿನಪತ್ರಿಕೆಗಳು- ಪ್ರಜಾವಾಣಿ, ವಿಜಯವಾಣಿ ಇತರೆ
ಪರಿಸರ ಅಧ್ಯಯನ-ಕೆ.ಬೈರಪ್ಪ (IRS)
ರಾಜ್ಯ ಮತ್ತು ಕೇಂದ್ರ ಬಜೆಟ್ ಮತ್ತು -(ಇಛಿoಟಿomiಛಿ ಎouಡಿಟಿeಥಿ – (೨೦೨೦-೨೧) Sಣಚಿಣe & ಅeಟಿಣಡಿಚಿಟ)
ಮಾನಸಿಕ ಸಾಮರ್ಥ್ಯ- Gururaj Bulbule ಅಥವಾ ಆರ್.ಎಸ್.ಅಗರ್ವಾಲ್
ಪ್ರಪಂಚ, ಭಾರತ ಮತ್ತು ಕರ್ನಾಟಕದ ಮ್ಯಾಪ್ಗಳು & ಅಟ್ಲಾಸ್ಗಳು
ಮಾಸಿಕಗಳು- ಮಾಹಿತಿ (Monthly Magazine – NammaKPSC)
ಇತಿಹಾಸ- ಕೆ.ಸದಾಶಿವ ಅಥವಾ K N A
ಹಳೆಯ ಪ್ರಶ್ನೆ ಪತ್ರಿಕೆಗಳು, ಇತರೆ
ತುಂಬಾ ಉಪಯುಕ್ತ ಮತ್ತು ವಿವರಣಾತ್ಮಕ ಮಾಹಿತಿಯಾಗಿದೆ, ಧನ್ಯವಾದಗಳು.