Published on: April 12, 2022
ಸುದ್ಧಿ ಸಮಾಚಾರ 12 ಏಪ್ರಿಲ್ 2022
ಸುದ್ಧಿ ಸಮಾಚಾರ 12 ಏಪ್ರಿಲ್ 2022
- ದೇಶದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿರುವ ರಾಷ್ಟ್ರೀಯ ಸಹಕಾರಿ ಹೈನುಗಾರಿಕೆ ಮಹಾಮಂಡಲ( ಎನ್ಸಿಡಿಎಫ್ಐ)ವು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸು-ಸಂದರ್ಭದಲ್ಲಿ ಹಾಲು ಮತ್ತು ಹಾಲಿನ ಉತ್ಪಾದನೆ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ‘ಕೆಎಂಎಫ್’ ಗೆ ಪ್ರಶಸ್ತಿ ನೀಡಲಾಗಿದೆ
- ವಿದೇಶಿ ದೇಣಿಗೆ(ನಿಯಂತ್ರಣ) ಕಾಯ್ದೆ 2010ಕ್ಕೆ ಕೇಂದ್ರ ಮಾಡಿರುವ ತಿದ್ದುಪಡಿಗಳ ಸಿಂಧುತ್ವವನ್ನು ಎತ್ತಿಹಿಡಿಯುವ ಮೂಲಕ ವಿದೇಶಿ ದೇಣಿಗೆ ಪಡೆಯುವುದು ಸಂಪೂರ್ಣ ಅಥವಾ ಸೂಚಿತ ಹಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
- ವಿಂಡರ್ಜಿ ಇಂಡಿಯಾ 2022, ಮುಂಬರುವ ಮೆಗಾ ವಿಂಡ್ ಎನರ್ಜಿ ಟ್ರೇಡ್ ಫೇರ್ ಮತ್ತು ಕಾನ್ಫರೆನ್ಸ್ ನಲ್ಲಿ ಭಾರತ ಸರ್ಕಾರ ಪಾಲ್ಗೊಳ್ಳುತ್ತಿದೆ.
- ರಷ್ಯಾದ ಆಕ್ರಮಣದಿಂದಾಗಿ ಉಕ್ರೇನ್ನ ಆರ್ಥಿಕತೆಯು ಈ ವರ್ಷ ಶೇಕಡಾ 45.1 ರಷ್ಟು ಕುಸಿಯಲಿದೆ.ಯುದ್ಧದಿಂದಾಗಿ ದೇಶದ ಅರ್ಧದಷ್ಟು ವ್ಯವಹಾರಗಳನ್ನು ಸ್ಥಗಿತಗೊಳಿಸಿದೆ, ಆಮದು ಮತ್ತು ರಫ್ತುಗಳನ್ನು ಸ್ಥಗಿತಗೊಳಿಸಿದೆ, ಅಪಾರ ಪ್ರಮಾಣದಲ್ಲಿ ಮೂಲಸೌಕರ್ಯಗಳು ಹಾನಿಗೀಡಾಗಿವೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
- ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ (DRDO) ನಿರ್ಮಿತ ಪಿನಾಕಾ ರಾಕೆಟ್ ವ್ಯವಸ್ಥೆಯ ಹೊಸ ಆವೃತ್ತಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಪಿನಾಕಾ ರಾಕೆಟ್ ವ್ಯವಸ್ಥೆಯ ಹೊಸ ಆವೃತ್ತಿಯನ್ನು ಡಿಆರ್ಡಿಒ ಮತ್ತು ಭಾರತೀಯ ಸೇನೆಯು ಪೋಖ್ರಾನ್ ಫೈರಿಂಗ್ ರೇಂಜ್ಗಳಲ್ಲಿ ಯಶಸ್ವಿಯಾಗಿ ಹಾರಾಟ-ಪರೀಕ್ಷೆ ನಡೆಸಿದೆ
- ಘನ ಇಂಧನ ಸಾಮರ್ಥ್ಯದ ಡಕ್ಟೆಡ್ ರಾಮ್ಜೆಟ್ ಕ್ಷಿಪಣಿ ವ್ಯವಸ್ಥೆಯನ್ನು ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ (ಡಿಆರ್ ಡಿಒ) ಯಶಸ್ವಿ ಉಡಾವಣೆ ಮಾಡಿದೆ.
- ಲೇಖಕಿ ಗೀತಾಂಜಲಿ ಶ್ರೀ ಅವರ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ.