NammaKPSC Current Affairs - March 2023
ಚುಟುಕು ಸಮಾಚಾರ
ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 24ರಂದು ವಿಶ್ವ ಕ್ಷಯ ರೋಗ ದಿನವನ್ನು ಆಚರಿಸಲಾಗುತ್ತದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಾರಾಣಸಿಯಲ್ಲಿ ಒಂದು ವಿಶ್ವ ಟಿಬಿ ಶೃಂಗಸಭೆಯಲ್ಲಿ ಟಿಬಿ ಮುಕ್ತ ಪಂಚಾಯತ್, ಅಲ್ಪಾವಧಿಯ ಟಿಬಿ ತಡೆಗಟ್ಟುವ ಚಿಕಿತ್ಸೆಗೆ (ಟಿಪಿಟಿ)ನ್ನು ಭಾರತದಾದ್ಯಂತ ಅಧಿಕೃತ ಅನುಷ್ಠಾನ, ಕ್ಷಯರೋಗಕ್ಕೆ ಕುಟುಂಬ ಕೇಂದ್ರಿತ ಆರೈಕೆ ಮಾದರಿ ಮತ್ತು ಭಾರತದ ವಾರ್ಷಿಕ ಟಿಬಿ ವರದಿ 2023 ರ ಬಿಡುಗಡೆ ಸೇರಿದಂತೆ ವಿವಿಧ ಉಪಕ್ರಮಗಳಿಗೆ ಚಾಲನೆ ನೀಡಿದರು.
ಬೆಂಗಳೂರಿನಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆ, ರಾಷ್ಟ್ರೀಯ ಭದ್ರತೆ ಕುರಿತ ದಕ್ಷಿಣ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಸಮ್ಮೇಳನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದರು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯೋಜಿಸಿದ್ದ ಗಾಂಧಿ ಗ್ರಾಮ ಪುರಸ್ಕಾರ ಮತ್ತು ಮಹಾತ್ಮಾ ಗಾಂಧಿ ನರೇಗಾ ಪ್ರಶಸ್ತಿ ಪ್ರದಾನ ಹಾಗೂ ಪಂಚತಂತ್ರ 2.0, ಬಾಪೂಜಿ ಸೇವಾ ಕೇಂದ್ರ ತಂತ್ರಾಂಶ, ತೆರಿಗೆ ಸಂಗ್ರಹದ ಪಿಓಎಸ್ ಉಪಕರಣಗಳ ಲೋಕಾರ್ಪಣೆ ಮತ್ತು ಜಲಶಕ್ತಿ ಆಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಚುಟುಕು ಸಮಾಚಾರ
“ನೀರಿಗಾಗಿ ಪಾಲುದಾರಿಕೆ ಮತ್ತು ಸಹಕಾರ” ವರದಿಯನ್ನು ವಿಶ್ವಸಂಸ್ಥೆ 2023 ಜಲ ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಗಿದೆ.
ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ.
ಬಾಡಿಗೆ ತಾಯಿ ವೈದ್ಯಕೀಯ ಪದ್ಧತಿಯನ್ನು ಈಗ ಹಸುಗಳ ಮೇಲೆಯೂ ಪ್ರಯೋಗಿಸಲಾಗಿದ್ದು, ಉತ್ತರ ಪ್ರದೇಶ ಹಸುಗಳಲ್ಲಿ ಬಾಡಿಗೆ ತಾಯ್ತನದ ಸಂಶೋಧನೆಯಿಂದ 26 ಆಕಳು ಕರುಗಳು ಜನ್ಮ ನೀಡಿವೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಹೊಸದಾಗಿ ಬೆಂಗಳೂರಿನಿಂದ ರಾಜ್ಯದ ಐದು ನಗರಗಳಿಗೆ ಇವಿ ಪವರ್ ಪ್ಲಸ್ ಎಂಬ ಎಲೆಕ್ಟ್ರಿಕ್ ಬಸ್ ಸೇವೆಯನ್ನ ಆರಂಭಿಸಿದೆ.
ದೇಶದಲ್ಲಿ ಮೊದಲ ಮಿಥೆನಾಲ್ ಮಿಶ್ರಿತ ಇಂಧನ ಆಧಾರಿತ ಬಸ್‍ಗಳ ಸಂಚಾರವನ್ನು ಕರ್ನಾಟಕದ ಬಿಎಂಟಿಸಿ ಆರಂಭಿಸಿದೆ
ಚುಟುಕು ಸಮಾಚಾರ
ವಿಶೇಷ ವಿದ್ಯಮಾನ ವಸಂತ ವಿಷುವ (ವಿಷುವತ್ ಸಂಕ್ರಾಂತಿ) ಪ್ರತಿ ವರ್ಷ ಸಂಭವಿಸುತ್ತದೆ. ಈ ವರ್ಷ ಮಾರ್ಚ್ 21ರಂದು ನಡೆಯಲಿದೆ.
ಗೋಮಾಂಸ ನಿಷೇಧ ಹಾಗೂ ಗೋಹತ್ಯೆ ನಿಷೇಧಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಗೋ ಸೇವಾ ಆಯೋಗ ರಚನೆಯ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ.
ಬಾಂಗ್ಲಾದೇಶ-ಭಾರತ ನಡುವಿನ ‘ಫ್ರೆಂಡ್ಶಿಪ್ ಪೈಪ್ಲೈನ್’ ಅನ್ನು ವರ್ಚುವಲ್ ಆಗಿ ಹಸೀನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉದ್ಘಾಟಿಸಿದರು.
ಚುಟುಕು ಸಮಾಚಾರ
ಪ್ರತೀ ವರ್ಷ ಮಾರ್ಚ್ 20 ವಿಶ್ವ ಗುಬ್ಬಚ್ಚಿ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.
ದೇಶದಲ್ಲಿ ವೈದ್ಯಕೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸರ್ಕಾರವು ‘ ಹೀಲ್ ಇನ್ ಇಂಡಿಯಾ ‘ ಎಂಬ ಉಪಕ್ರಮವನ್ನು ಪ್ರಾರಂಭಿಸಿದೆ. ಆರೋಗ್ಯ ಪ್ರವಾಸೋದ್ಯಮದ ಮೂಲಕ ಆಯುಷ್ ಚಿಕಿತ್ಸೆಯನ್ನು ಉತ್ತೇಜಿಸಲು ಸರ್ಕಾರ ಪ್ರಯತ್ನಿಸುತ್ತಿದೆ.
ಬೆಂಗಳೂರಿಗೆ 128 ವರ್ಷಗಳ ನೀರು ಪೂರೈಕೆಯ ಇತಿಹಾಸವನ್ನು ವಿವರಿಸುವ ವಿಶಿಷ್ಟ ಜಲ ಸಂಗ್ರಹಾಲಯವನ್ನು ಉದ್ಘಾಟಿಸಲಾಯಿತು.
ಚುಟುಕು ಸಮಾಚಾರ
ಶಾಂಘೈ ಸಹಕಾರ ಸಂಘಟನೆ (ಎಸ್.ಸಿ.ಒ) ಯುವ ಮಂಡಳಿಯ 16 ನೇ ಸಭೆ ಹೊಸದಿಲ್ಲಿಯಲ್ಲಿ ಹೈಬ್ರಿಡ್ ಮಾದರಿಯಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನಡೆಯಿತು.
ಜವಳಿ ಕ್ಷೇತ್ರದ ಬೆಳವಣಿಗೆಗೆ ಇರುವ ಅವಕಾಶ ಬಳಸಿಕೊಳ್ಳುವ ಉದ್ದೇಶದಿಂದ ದೇಶದ ಏಳು ಕಡೆಗಳಲ್ಲಿ ಪ್ರಧಾನ ಮಂತ್ರಿ ಮೆಗಾ ಇಂಟಿಗ್ರೇಟೆಡ್ ಟೆಕ್ಸ್ಟೈಲ್ ರೀಜನ್ ಆಂಡ್ ಅಪೇರಲ್ (ಪಿಎಂ ಮಿತ್ರ) ಸ್ಥಾಪಿಸಲು ಉದ್ದೇಶಿಸಿದ್ದು, ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕೇಂದ್ರ ಯೋಜನೆಯನ್ನು ಅನುಷ್ಠಾನ ಮಾಡಲಿದೆ.
ಚುಟುಕು ಸಮಾಚಾರ
2023 ರ ಮಾರ್ಚ್ ನಲ್ಲಿ ಭಾರತದ ಜೋಧ್‌ಪುರ ಮಿಲಿಟರಿ ನಿಲ್ದಾಣದಲ್ಲಿ 13 ನೇ ಆವೃತ್ತಿಯ ದ್ವಿಪಕ್ಷೀಯ ವ್ಯಾಯಾಮ ಬೋಲ್ಡ್ ಕುರುಕ್ಷೇತ್ರದಲ್ಲಿ ಸಿಂಗಾಪುರ್ ಸೇನೆ ಮತ್ತು ಭಾರತೀಯ ಸೇನೆ ಭಾಗವಹಿಸಿದ್ದವು .
ನೀತಿ ಆಯೋಗ ಇತ್ತೀಚೆಗೆ ATL Sarthi ಅನ್ನು ಪ್ರಾರಂಭಿಸಿದೆ, ಅಟಲ್ ಟಿಂಕರಿಂಗ್ ಲ್ಯಾಬ್ಸ್ (ATL) ನ ಬೆಳೆಯುತ್ತಿರುವ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಸಮಗ್ರ ಸ್ವಯಂ-ಮೇಲ್ವಿಚಾರಣಾ ಚೌಕಟ್ಟಾಗಿದೆ.
ತಂಬಾಕು ನಿಯಂತ್ರಣದ ಮೂಲಕ ಸಾಂಕ್ರಾಮಿಕವಲ್ಲದ ರೋಗಗಳನ್ನು(ಎನ್ಸಿಡಿ) ತಡೆಗಟ್ಟುವಲ್ಲಿ ಮಾಡಿದ ಸಾಧನೆಗಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ಒ) ಬೆಂಗಳೂರು ಮತ್ತು ಇತರ ನಾಲ್ಕು ನಗರಗಳಿಗೆ ಪ್ರಶಸ್ತಿ ನೀಡಿದೆ.
ಚುಟುಕು ಸಮಾಚಾರ
ವಿದೇಶಿ ವಕೀಲರು ಮತ್ತು ಕಾನೂನು ಸಂಸ್ಥೆಗಳು ಭಾರತದ ನ್ಯಾಯಾಲಯಗಳಲ್ಲಿ ನಿರ್ಬಂಧಿತ ಹಾಗೂ ಉತ್ತಮ ನಿಯಂತ್ರಿತವಾದ ಆಧಾರದ ಮೇಲೆ ಅಭ್ಯಾಸ ಮಾಡಲು ಭಾರತೀಯ ಬಾರ್ ಕೌನ್ಸಿಲ್ (BCI) ಸಮ್ಮತಿಸಿದೆ.
ಭಾರತವು 2022ರಲ್ಲಿ ಅತಿ ಹೆಚ್ಚು ಮಾಲಿನ್ಯ ಹೊಂದಿರುವ ವಿಶ್ವದ ಎಂಟನೇ ದೇಶವಾಗಿದ್ದು, 50 ಅತ್ಯಂತ ಕಲುಷಿತ ನಗರಗಳಲ್ಲಿ ಭಾರತದ 39 ನಗರಗಳು ಸ್ಥಾನ ಪಡೆದಿವೆ.
ಭಾರತದ ಅರುಣಾಚಲ ಪ್ರದೇಶ ಹಾಗೂ ಚೀನಾ ನಡುವಿನ ಅಂತಾರಾಷ್ಟ್ರೀಯ ಗಡಿಯಾಗಿ ಮೆಕ್ ಮೋಹನ್ ರೇಖೆಗೆ ಅಮೆರಿಕ ಮಾನ್ಯತೆ ನೀಡಿದೆ.
ಕರ್ನಾಟಕ ರಾಜ್ಯದಲ್ಲಿಯೇ ಅತಿ ಹೆಚ್ಚು ರೈತರಿಗೆ ಕಿಸಾನ್ ಸಮ್ಮಾನ್ ದೊರಕಿಸಿಕೊಟ್ಟ ಜಿಲ್ಲೆಗಳಲ್ಲಿ ಬೆಳಗಾವಿ ಅಗ್ರಸ್ಥಾನ ಪಡೆದಿದೆ. 5 ಲಕ್ಷಕ್ಕೂ ಅಧಿಕ ರೈತರ ಖಾತೆಗೆ 13ನೇ ಕಂತಿನ ಹಣ ಜಮೆ ಮಾಡಲಾಗಿದೆ.
ಚುಟುಕು ಸಮಾಚಾರ
ಅಮೆರಿಕ, ಬ್ರಿಟನ್ ಹಾಗೂ ಆಸ್ಟ್ರೇಲಿಯಾಗಳು ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ ಯೋಜನೆಗೆ ಒಪ್ಪಿಗೆ ಸೂಚಿಸಿವೆ. ಇದಕ್ಕೆ ಚೀನಾದಿಂದ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ತಮಿಳುನಾಡು, ಕರ್ನಾಟಕ ಹಾಗೂ ಕೇರಳ ಸೇರಿ ಮೂರು ರಾಜ್ಯಗಳಲ್ಲಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ರಣಹದ್ದುಗಳ ಸಮೀಕ್ಷೆ ನಡೆಯಿತು.
ಚುಟುಕು ಸಮಾಚಾರ
ಮಾರ್ಚ್ 2023 ರಲ್ಲಿ , ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನವದೆಹಲಿಯಲ್ಲಿ ದ್ವಿಪಕ್ಷೀಯ ವಾಣಿಜ್ಯ ಸಂವಾದದ 5 ನೇ ಮಂತ್ರಿ ಸಭೆಯನ್ನು ನಡೆಯಿತು.
ಕಣ್ಮರೆಯಾಗುತ್ತಿರುವ ರಾಜ್ಯ ಪಕ್ಷಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ರಕ್ಷಣೆಗೆ ರಾಜಸ್ಥಾನ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.
ಕೇಂದ್ರ ಸರ್ಕಾರದ ಟಿಬಿ ಮುಕ್ತ ಭಾರತ ಅಭಿಯಾನದ ‘ನಿ-ಕ್ಷಯ ಮಿತ್ರ’ದ ಅಂಗವಾಗಿ ಕರ್ನಾಟಕ ರಾಜ್ಯಪಾಲರಾದ ತಾವರಚಂದ್ ಗೆಲ್ಹೋಟ್ ಅವರು 100 ಕ್ಷಯ ರೋಗಿಗಳ ದತ್ತು ಪಡೆದಿದ್ದಾರೆ.
ಚುಟುಕು ಸಮಾಚಾರ
ಇಂಡೋನೇಷಿಯಾ ತನ್ನ ರಾಜಧಾನಿಯನ್ನು ಬೊರ್ನಿಯೊ ದ್ವೀಪಕ್ಕೆ ವರ್ಗಾವಣೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದೆ.
ನಿಸಾರ್ ಮಿಷನ್ ಎಂಬುದು ಒಂದು ಉಪಗ್ರಹ ಯೋಜನೆ. ಇದನ್ನು ಭಾರತದ ಇಸ್ರೋ ಹಾಗೂ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಜಂಟಿಯಾಗಿ ನಿರ್ಮಿಸಿದೆ.
ಧಾರವಾಡದಲ್ಲಿ ಸುಮಾರು 535 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿರುವ, ಭಾರತದ ಪ್ರಥಮ ಹಸಿರು ಐಐಟಿ ಖ್ಯಾತಿಯ, ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದರು.
ಚುಟುಕು ಸಮಾಚಾರ
ಸೆಮಿಕಂಡಕ್ಟರ್ ಪೂರೈಕೆ ವ್ಯವಸ್ಥೆಯನ್ನು ಸ್ಥಾಪಿಸಲು ಭಾರತ ಮತ್ತು ಅಮೆರಿಕ ಒಪ್ಪಂದಕ್ಕೆ ಸಹಿ ಮಾಡಿವೆ.
ದೇಶದ ಭೂಕುಸಿತ ಅಪಾಯದ ಪ್ರದೇಶಗಳ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ ) ಮತ್ತೊಂದು ವರದಿ ಬಿಡುಗಡೆ ಮಾಡಿದೆ. ದೇಶದಲ್ಲಿರುವ ಭೂಕುಸಿತದ 147 ಸೂಕ್ಷ್ಮ ಜಿಲ್ಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಬೆಂಗಳೂರಿನಲ್ಲಿ ಡ್ರ್ಯಾಗನ್ ಫ್ರೂಟ್ ಸಂಶೋಧನೆ ಹಾಗೂ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸುವುದಾಗಿ ಕೇಂದ್ರ ಕೃಷಿ ಸಚಿವಾಲಯ ಪ್ರಕಟಿಸಿದೆ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಸಂಬಂಧ ರಾಜ್ಯ ಸರ್ಕಾರ ಪರಿಷ್ಕೃತ ಕಾರ್ಯನೀತಿ ಪ್ರಕಟಿಸಿದ್ದು, ಆ ಮೂಲಕ ಈ ಯೋಜನೆಯಡಿ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ನೌಕರರು (ಉದಾ: ಪತಿ, ಪತ್ನಿ, ತಂದೆ, ತಾಯಿ ಮತ್ತು ಮಕ್ಕಳು) ನಗದು ರಹಿತವಾಗಿ ಆರೋಗ್ಯ ಸೇವಾ ಸೌಲಭ್ಯವನ್ನು ಪಡೆಯಬಹುದಾಗಿದೆ.
ಚುಟುಕು ಸಮಾಚಾರ
ಭಾರತೀಯ ನೌಕಾಪಡೆಯ ಅತಿ ದೊಡ್ಡ ದ್ವೈವಾರ್ಷಿಕ ಸಮರಾಭ್ಯಾಸವಾದ ‘ಟ್ರೋಪೆಕ್ಸ್’ (ಥಿಯೇಟರ್ ಲೆವೆಲ್ ಆಪರೇಷನಲ್ ರೆಡಿನೆಸ್ ಎಕ್ಸರ್‌ಸೈಸ್) ಕೊನೆಗೊಂಡಿದೆ.
ಕರ್ನಾಟಕ ಸರ್ಕಾರವು RASTHA (ರಾಪಿಡ್ ರೆಸ್ಪಾನ್ಸ್, ಮೌಲ್ಯಮಾಪನ, ಸ್ಥಿರೀಕರಣ ಮತ್ತು ಹೆದ್ದಾರಿ ಅಪಘಾತಗಳಲ್ಲಿ ಸುರಕ್ಷಿತ ಸಾರಿಗೆ) ಎಂಬ ಉಪಕ್ರಮವನ್ನು ಪ್ರಾರಂಭಿಸಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಿಳಾ ಸ್ವ-ಸಹಾಯ ಗುಂಪುಗಳ (ಎಸ್‌ಎಚ್‌ಜಿ) ಬೆಂಬಲಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಸ್ತ್ರೀ ಸಾಮರ್ಥ್ಯ-ನಮೋ ಸ್ತ್ರೀ ಯೋಜನೆ’ಗೆ ಚಾಲನೆ ನೀಡಿದರು.
ಚುಟುಕು ಸಮಾಚಾರ
ಅಳಿವಿನಂಚಿನಲ್ಲಿರುವ ಭಾರತೀಯ ತೋಳಗಳು ಸುಮಾರು 10 ವರ್ಷಗಳ ಬಳಿಕ ಆಂಧ್ರ ಪ್ರದೇಶದ ನಲ್ಲಮಲ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿವೆ.
ಸುದ್ದಿಯಲ್ಲಿ ಏಕಿದೆ? ಇತ್ತೀಚೆಗೆ ಕೇಂದ್ರ ಸರ್ಕಾರವು ಅನುಮೋದಿಸಿದ ದಿಬಾಂಗ್ ಜಲವಿದ್ಯುತ್ ಯೋಜನೆಯು ಭಾರತದ ಅತಿದೊಡ್ಡ ಜಲವಿದ್ಯುತ್ ಯೋಜನೆಯಾಗಿದೆ.
ಮುಖ್ಯಾಂಶಗಳು
• ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದಲ್ಲಿನ ಕೆಳ ದಿಬಾಂಗ್ ಕಣಿವೆ ಜಿಲ್ಲೆಯಲ್ಲಿ ದಿಬಾಂಗ್ ನದಿಯ ಮೇಲೆ ಚೀನಾದ ಗಡಿಭಾಗದಲ್ಲಿಈ ಯೋಜನೆಯನ್ನು ರಾಷ್ಟ್ರೀಯ ಜಲವಿದ್ಯುಚ್ಛಕ್ತಿನಿಗಮ (ಎನ್ ಎಚ್ಪಿಸಿ) ಕಾರ್ಯಗತಗೊಳಿಸುತ್ತಿದೆ. ವಿಶೇಷವೆಂದರೆ ಇದನ್ನು ಪರ್ವತ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
• 3,50,000 ಮರಗಳನ್ನು ಕಡಿಯಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಪರಿಸರ ಮತ್ತುಅರಣ್ಯ ಸಚಿವಾಲಯದ ಅರಣ್ಯ ಸಲಹಾ ಸಮಿತಿಯು 2013 ರಲ್ಲಿಯೋಜನೆಗೆ ಅನುಮತಿ ನೀಡುವುದನ್ನು ತಡೆಹಿಡಿದಿತ್ತು.
• ಆದರೆ, ಈಗ ಯೋಜನೆಗೆ ಅಗತ್ಯವಿರುವ ಪರಿಸರ ಹಾಗೂ ಅರಣ್ಯ ಸಂಬಂಧಿ ಅನುಮತಿ ಸೇರಿದಂತೆ ಅಗತ್ಯವಿರುವ ಎಲ್ಲಾಶಾಸನಬದ್ಧಅನುಮೋದನೆಗಳನ್ನು ಪಡೆದುಕೊಳ್ಳಲಾಗಿದೆ.
ಯೋಜನೆಯ ವಿವರ
• ನಿರ್ಮಾಣದ ನಂತರ ಈ ಅಣೆಕಟ್ಟು ಭಾರತದ ಅತ್ಯಂತ ಎತ್ತರವಾದ ಅಣೆಕಟ್ಟಾಗಿ ಹೊರಹೊಮ್ಮಲಿದೆ.
• ಸಾಮರ್ಥ್ಯ: 2,880 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದಿಸುವ ಗುರಿ
• ಅಂದಾಜು ವೆಚ್ಚ : 319 ಶತಕೋಟಿ INR ಆಗಿದೆ.
• ಇದು ಪೂರ್ಣಗೊಳ್ಳಲು 9 ವರ್ಷಗಳು ಬೇಕಾಗುತ್ತವೆ.
• ಪೂರ್ಣಗೊಂಡ ನಂತರ ಅರುಣಾಚಲ ಪ್ರದೇಶ ಸರ್ಕಾರವು 1346.76 MU ನೀರನ್ನು ಮತ್ತು ನಲವತ್ತುವರ್ಷಗಳ ಕಾಲ ಉಚಿತ ವಿದ್ಯುತ್ ಪಡೆಯಲಿದೆ.
• ಭಾರತದ ಅತಿ ಎತ್ತರದ ಅಣೆಕಟ್ಟು: ಈ ಯೋಜನೆಯಡಿ 278 ಮೀಟರ್ ಎತ್ತರದ ಕಾಂಕ್ರೀಟ್ ಅಣೆಕಟ್ಟು (ಆಳವಾದ ಅಡಿಪಾಯ ಮಟ್ಟಕ್ಕಿಂತ ಮೇಲೆ) ನಿರ್ವಿುಸಲಾಗುತ್ತಿದೆ.
• 300ರಿಂದ 600 ಮೀಟರ್ ಉದ್ದ ಹಾಗೂ 9 ಮೀ ವ್ಯಾಸವನ್ನು ಹೊಂ ದಿರುವ ಕುದುರೆಲಾಳ ಆಕಾರದ 6 ಸುರಂಗಗಳು; ನೆಲದಡಿಯ ಪವರ್ ಹೌಸ್ ಅನ್ನು ಕೂಡ ಈ ಯೋಜನೆಯಲ್ಲಿನಿರ್ವಿುಸಲು ಉದ್ದೇಶಿಸಲಾಗಿದೆ.
• ಅರುಣಾಚಲಕ್ಕೆ ಪ್ರಯೋಜನ: ಈ ಯೋಜನೆಯು ಪೂರ್ಣಗೊಂಡ ನಂತರ ಅರುಣಾಚಲ ಪ್ರದೇಶಕ್ಕೆ. ಅಲ್ಲದೆ, ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ ಕೊಡುಗೆಯಾಗಿ ಒಟ್ಟು 26785 ಕೋಟಿ ರೂಪಾಯಿ ಲಭ್ಯವಾಗಲಿದೆ. ಸಮುದಾಯ ಮತ್ತುಸಾಮಾಜಿಕ ಅಭಿವೃದ್ಧಿ ಯೋಜನೆಗೆ 241 ಕೋಟಿ ರೂಪಾಯಿ, ಸ್ಥಳೀಯ ಜನರ ಸಂಸ್ಕೃತಿ ಮತ್ತುಗುರುತನ್ನು ಕಾಪಾಡುವ ಯೋಜನೆಗೆ 3.27 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.
ಯೋಜನೆಯ ಉದ್ದೇಶ
• ‘ದಿಬಾಂಗ್ ವಿವಿಧೋದ್ದೇಶ ಯೋಜನೆ’ಯು ಭಾರತದ ಅತಿದೊಡ್ಡ ಜಲವಿದ್ಯುತ್ ಯೋಜನೆಯಾಗಲಿದೆ. ಈಶಾನ್ಯ ಭಾರತದಲ್ಲಿ ಪ್ರವಾಹ ನಿಯಂತ್ರಿಸುವ ಪ್ರಮುಖ ಉದ್ದೇಶವನ್ನೂ ಈ ಯೋಜನೆ ಹೊಂದಿದೆ. ಮತ್ತು ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ಪೂರೈಸುವ ನಿಟ್ಟಿನಲ್ಲಿನವೀಕರಿಸಬಹುದಾದ ಇಂಧನ ಉತ್ಪಾದಿಸುವ ಉದ್ದೇಶವನ್ನು ಹೊಂದಿದೆ.
ಯೋಜನೆಯ ಅಗತ್ಯ
• ಈ ಯೋಜನೆ ಜಾರಿಯಾದರೆ, ಕೆಳಭಾಗದ ಸಾಕಷ್ಟು ಪ್ರದೇಶದಲ್ಲಿಉಂಟಾಗುವ ಪ್ರವಾಹವನ್ನು ನಿಯಂತ್ರಿಸಲು ಸಾಧ್ಯವಾಗಲಿದೆ. ಬ್ರಹ್ಮಪುತ್ರವು ಪ್ರಬಲ ನದಿಯಾಗಿದ್ದು, ಇದರಿಂದ ಉಂಟಾಗುವ ಪ್ರವಾಹವನ್ನು ತಗ್ಗಿಸುವುದು ಸವಾಲಿನ ಸಂಗತಿಯಾಗಿದೆ.
• ದಿಹಾಂಗ್, ದಿಬಾಂಗ್ ಮತ್ತುಲೋ ಹಿತ್ ಇವು ಬ್ರಹ್ಮಪುತ್ರ ನದಿಯ ಪ್ರಮುಖ ಉಪನದಿಗಳು. ಮಳೆಗಾಲದಲ್ಲಿ ಈ ನದಿಗಳು ಈಶಾನ್ಯ ಭಾರತ ಪ್ರದೇಶದಲ್ಲಿ ಸಾಕಷ್ಟು ಪ್ರವಾಹವನ್ನು ಸೃಷ್ಟಿಸುತ್ತವೆ. ಪ್ರವಾಹ ಸೃಷ್ಟಿ ಹಾಗೂ ನೀರಿನ ಹರಿವು ಬದಲಾಯಿಸುವ ಕಾರಣಕ್ಕಾಗಿ ಬ್ರಹ್ಮಪುತ್ರ ನದಿಯನ್ನು‘ಅಸ್ಸಾಂನ ದುಃಖ’ ಎಂದೇ ಕರೆಯಲಾಗುತ್ತದೆ. ದಿಬಾಂಗ್ ನದಿಗೆ ಅಣೆಕಟ್ಟು ನಿರ್ವಿುಸಿ ನೀರಿನ ಹರಿವನ್ನು ನಿಯಂತ್ರಿಸಿದರೆ, ಬ್ರಹ್ಮಪುತ್ರ ನದಿಯಲ್ಲಿನೀರಿನ ಹರಿವನ್ನು ನಿಯಂತ್ರಿಸದಂತಾಗುತ್ತದೆ. ಏಕೆಂದರೆ, ದಿಬಾಂಗ್ ನದಿಯು ಬ್ರಹ್ಮಪುತ್ರದ ಉಪನದಿಯಾಗಿದೆ.
ದಿಬಾಂಗ್ ನದಿ
• ಈ ನದಿಯು ಇಂಡೋ -ಚೀನಾ ಗಡಿಯಲ್ಲಿ, ಅಂದರೆ ಕೀಯಾ ಪಾಸ್ ಬಳಿ ಹುಟ್ಟುತ್ತದೆ.
• ಮಿಶ್ಮಿ ಬೆಟ್ಟಗಳ ಮೂಲಕ ಹರಿಯುತ್ತದೆ.
• ಡಿಬ್ರು-ಸೈಖೋವಾ ಅಭಯಾರಣ್ಯದ ಬಳಿ ಲೋಹಿತ್ ನದಿಯನ್ನು ಸೇರುತ್ತದೆ.
• ಉಪನದಿಗಳು : ಎಮ್ರಾ, ಇಥುನ್, ದ್ರಿ, ರಂಗೋ ನ್, ಮಾಥುನ್ ಮತ್ತುಸಿಸಾರ್.
ನಿಮಗಿದು ತಿಳಿದಿರಲಿ
• ಪ್ರಧಾನಿ ಮನಮೋಹನ್ ಸಿಂಗ್ ಅವರು 2008 ರಲ್ಲಿ ಯೋಜನೆಯ ಅಡಿಗಲ್ಲು ಹಾಕಿದ್ದರು.
• ದಿಬಾಂಗ್ ಯೋಜನೆಯು ಎತ್ತರ ಹಾಗೂ ವಿದ್ಯುತ್ ಉತ್ಪಾದನೆ ಪ್ರಮಾಣದಲ್ಲಿತೆಹ್ರಿಯನ್ನು ಮೀರಿಸಲಿದೆ.
• ತೆಹ್ರಿ ಅಣೆಕಟ್ಟು: ಭಾಗೀರಥಿ ನದಿಯ ಮೇಲೆ ಕಟ್ಟಲಾಗಿದೆ. ಈಗ ಭಾರತದಲ್ಲಿರುವ ಅತಿಎತ್ತರದ ಅಣೆಕಟ್ಟು. ಉತ್ತರಾಖಂಡ ರಾಜ್ಯದಲ್ಲಿರುವ ಈ ಅಣೆಕಟ್ಟಿನ ಎತ್ತರ 260.5 ಮೀಟರ್. 2400 ಮೆಗಾ ವ್ಯಾಟ್ ವಿದ್ಯುತ್ ಇಲ್ಲಿಉತ್ಪಾದನೆಯಾಗುತ್ತದೆ.
ಜನರಲ್ಲಿ ಡಿಜಿಟಲ್’ ಪೇಮೆಂಟ್ ಬಗ್ಗೆ ಜಾಗೃತಿ ಮೂಡಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಪ್ರತಿ ಪಾವತಿ ಡಿಜಿಟಲ್ ಮಿಷನ್ (ಹರ್ ಪೇಮೆಂಟ್ ಡಿಜಿಟಲ್) ಎಂಬ ಅಭಿಯಾನಕ್ಕೆ ಚಾಲನೆ ನೀಡಿದೆ.
ಕರ್ನಾಟಕದ ಎಲ್ಲಾ ಜಿಲ್ಲೆಗಳು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ (HDI) ಸುಧಾರಣೆಯನ್ನು ದಾಖಲಿಸಿವೆ. ಆದರೆ ಬಡತನ ಮತ್ತು ಅಪೌಷ್ಟಿಕತೆ ಒಂದು “ಪ್ರಮುಖ” ಮತ್ತು “ದೊಡ್ಡ” ಸವಾಲಾಗಿದೆ.
ಚುಟುಕು ಸಮಾಚಾರ
ವಿಶ್ವದ ಸಾಗರಗಳು ಮತ್ತು ಅವುಗಳಲ್ಲಿ ವಾಸಿಸುವ ಜೀವರಾಶಿ ರಕ್ಷಿಸಲು ಭಾರತ ಸೇರಿದಂತೆ ಸುಮಾರು 200 ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳು ಐತಿಹಾಸಿಕ ಒಪ್ಪಂದ ಮಾಡಿಕೊಂಡಿವೆ.
ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಅಡಿಯಲ್ಲಿ 5ನೇ ಜನ ಔಷಧಿ ದಿವಸ್ 2023, ಅನ್ನು ಆಚರಿಸಿತು. ದಿನವನ್ನು ದೇಶಾದ್ಯಂತ “ಜನ್ ಔಷಧಿ – ಸಸ್ತಿ ಭಿ ಅಚ್ಚಿ ಭಿ” ಎಂಬ ವಿಷಯದೊಂದಿಗೆ ಆಚರಿಸಲಾಲಾಯಿತು. ಈ ಕಾರ್ಯಕ್ರಮವನ್ನು ಮಾರ್ಚ್ 1 ರಂದು ದೇಶಾದ್ಯಂತ ಜನ್ ಔಷಧಿ ಜನ ಚೇತನ ಅಭಿಯಾನದೊಂದಿಗೆ ಪ್ರಾರಂಭಿಸಲಾಗಿತ್ತು.
ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಫ್ರೆಂಚ್ ಬಾಹ್ಯಾಕಾಶ ಸಂಸ್ಥೆ CNES ಸಹಯೋಗದಲ್ಲಿ ನಿಯಂತ್ರಿತ ರೀತಿಯಲ್ಲಿ ತನ್ನ ನಿಷ್ಕ್ರಿಯಗೊಂಡ ಉಪಗ್ರಹ ಮೇಘಾ – ಟ್ರೋ ಪಿಕ್ಸ್-1 (MT1) ಅನ್ನು ಭೂಮಿಯ ಮೇಲೆ ಇಳಿಸಲು ಯಶಶ್ವಿಯಾಗಿದೆ.
ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 75 ಮಹಿಳಾ ಬೈಕರ್‌ಗಳ ತಂಡವು ದೆಹಲಿಯಿಂದ ಛತ್ತೀಸ್‌ಗಢದ ನಕ್ಸಲ್ ಪೀಡಿತ ಪ್ರದೇಶದವರೆಗೆ 1,848 ಕಿಮೀ ಯಾತ್ರೆ ಕೈಗೊಳ್ಳಲಿದೆ.
ಯುದ್ಧನೌಕೆಯಿಂದ ವಾಯು ಪ್ರದೇಶಕ್ಕೆ ಗುರಿಯಿಟ್ಟು ಉಡಾಯಿಸಬಹುದಾದ ಮಧ್ಯಮ ಶ್ರೇಣಿಯ ಕ್ಷಿಪಣಿ (MRSAM) –ಯನ್ನು ಭಾರತದ ವಾಯುಪಡೆಯು ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತು.
ಮಾನವಸಹಿತ ಗಗನಯಾನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ), ಗಗನಯಾನಿಗಳನ್ನು ಹೊತ್ತ ಕೋಶವನ್ನು (ಮಾಡ್ಯೂಲ್) ಇಳಿಸುವಲ್ಲಿ ಬಳಕೆಯಾಗುವ ಪ್ಯಾರಾಚೂಟ್‌ಗಳನ್ನು ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ.
ಚುಟುಕು ಸಮಾಚಾರ
ಏಪ್ರಿಲ್ 1 ರಿಂದ ಭಾರತದಲ್ಲಿ ಆಭರಣ ವ್ಯಾಪಾರಿಗಳು ಆರು ಅಂಕಿಯ ಆಲ್ಫಾನ್ಯೂಮರಿಕ್ ಹಾಲ್ ಮಾರ್ಕ್ ವಿಶಿಷ್ಟ ಗುರುತಿನ ಸಂಖ್ಯೆ(ಹೆಚ್ಯುಐಡಿ) ಎಂದು ಗುರುತಿಸಲಾದ ಚಿನ್ನ ಮಾರಾಟ ಮಾಡಬೇಕೆಂದು ಸರ್ಕಾರ ಘೋಷಿಸಿದೆ.
“ಭಾರತೀಯ ರಾಜ್ಯಗಳ’ ಶಕ್ತಿ ಪರಿವರ್ತನೆ’ ವರದಿಯ ಪ್ರಕಾರ ಕರ್ನಾಟಕ ಮತ್ತು ಗುಜರಾತ್ ಶುದ್ಧ ವಿದ್ಯುತ್ ಪರಿವರ್ತನೆಯಲ್ಲಿ ಹೆಚ್ಚು ಪ್ರಗತಿ ಸಾಧಿಸಿವೆ.
ಫೆಬ್ರವರಿ 28 ರಂದು ಆಚರಿಸಲಾಗುವ ರಾಷ್ಟ್ರೀಯ ವಿಜ್ಞಾನ ದಿನದ ಗೌರವಾರ್ಥವಾಗಿ ಭಾರತ ಸರ್ಕಾರವು ವಿದೇಶದಲ್ಲಿರುವ ಭಾರತೀಯರಿಗೆ ವೈಭವ್ ಫೆಲೋಶಿಪ್ ಯೋಜನೆಯನ್ನು ಪ್ರಾರಂಭಿಸಿತು.
ಚುಟುಕು ಸಮಾಚಾರ
ಜಗತ್ತಿನಲ್ಲಿಯೇ ಇದೇ ಮೊದಲ ಬಾರಿಗೆ ಭಾರತದಲ್ಲಿ ಮಹಾರಾಷ್ಟ್ರದ ಚಂದ್ರಾಪುರ ಹಾಗೂ ಯಾವತ್ಮಲ್ ಜಿಲ್ಲೆಗಳನ್ನು ಕೂಡಿಸುವ ವಾನಿ–ವರೋರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದಿರಿನಿಂದ ನಿರ್ಮಿಸಲಾದ 200 ಮೀಟರ್ ವರೆಗಿನ ಅಪಘಾತ ತಡೆಗೋಡೆಯನ್ನು ನಿರ್ಮಿಸಲಾಗಿದೆ.
ಇಫ್ಕೋ ತಯಾರಿಸಲಿರುವ ಲಿಕ್ವಿಡ್ ನ್ಯಾನೊ ಡಿಎಪಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ. ನ್ಯಾನೊ ಯೂರಿಯಾವನ್ನು ಪರಿಚಯಿಸಿದ್ದ ಕೇಂದ್ರ ಸರಕಾರ, ಈಗ ನ್ಯಾನೊ ಲಿಕ್ವಿಡ್ ಡಿಎಪಿ (ಡೈ-ಅಮೋನಿಯಂ ಫಾಸ್ಪೇಟ್) ರಸಗೊಬ್ಬರವನ್ನು ರೈತರಿಗೆ ನೀಡಲು ಮುಂದಾಗಿದೆ.
ದೇಶದಾದ್ಯಂತ ಈಗ ಕೋವಿಡ್ ಲಕ್ಷಣಗಳನ್ನೇ ಹೋಲುವ ಇನ್‌ಫ್ಲೂಯೆಂಜಾ ಎಚ್3ಎನ್2 ಉಪ ಮಾದರಿ ವೈರಸ್ ಸೋಂಕು ಹರಡುತ್ತಿವೆ. ಇದರ ಲಕ್ಷಣಗಳನ್ನು ಪಟ್ಟಿಮಾಡಿರುವ ಕೇಂದ್ರ ಸರ್ಕಾರ, ಇದರ ತಡೆಗೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ವಿವರಿಸಿದೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯಾದ್ಯಂತ ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸ ಮಾಡುವ ಕಟ್ಟಡ ಕಾರ್ಮಿಕರಿಗೆ, ವಿಶೇಷವಾಗಿ ವಲಸೆ ಕಾರ್ಮಿಕರಿಗೆ ರಾಜ್ಯ ಸರ್ಕಾರ ವಸತಿ ಸಮುಚ್ಚಯಗಳನ್ನು ನಿರ್ಮಾಣ ಮಾಡಿ, ನೆರವಿಗೆ ಮುಂದಾಗಿದೆ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕಾರ್ಮಿಕ ಇಲಾಖೆಯಿಂದ ಶ್ರಮಿಕರಿಗೆ ಶ್ರಮಿಕ ನಿವಾಸ್ ವಸತಿ ಯೋಜನೆ ಜಾರಿಗೆ ಬರುತ್ತಿದೆ.
ಚುಟುಕು ಸಮಾಚಾರ
ಕೇಂದ್ರ ಸರ್ಕಾರವು ಎನ್‌ಜಿಒಗಳ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಹಣದ ಹರಿವಿನ ಬಗ್ಗೆ ಕಣ್ಗಾವಲು ಮತ್ತು ಈ ಘಟಕಗಳ ಲೆಕ್ಕಪತ್ರ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕಗೊಳಿಸಲು ಆಧಾರ್ ಮಾದರಿಯಲ್ಲಿ ವಿಶಿಷ್ಟ ಗುರುತಿನ ಸಂಖ್ಯೆಯೊಂದಿಗೆ ಎಲ್ಲಾ ಎನ್‌ಜಿಒಗಳನ್ನು ಕೇಂದ್ರೀಯ ಡೇಟಾ ಹಬ್ ಅಡಿಯಲ್ಲಿ ತರುವ ಕ್ರಮಕ್ಕೆ ಕೇಂದ್ರ ಮುಂದಾಗಿದೆ.
ಛತ್ತೀಸ್ ಗಢದ ಬಲೋದ್ ಜಿಲ್ಲಾಧಿಕಾರಿಗಳ ಕಚೇರಿ, ಹಳೆಯ ಮಾದರಿಯನ್ನು ಹೊಸದಾಗಿ ಅಳವಡಿಸಿಕೊಂಡು ಗಮನ ಸೆಳೆಯುತ್ತಿದೆ. ಕಚೇರಿಗೆ ಬಣ್ಣ ಹಾಕುವ ವಿಷಯದಲ್ಲಿ ಸಂಪೂರ್ಣ ಸಾವಯವ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದ್ದು, ಹಸುವಿನ ಸಗಣಿ ಪ್ರಮುಖ ಘಟಕಾಂಶವಾಗಿರುವ ನೈಸರ್ಗಿಕ, ಪರಿಸರ ಸ್ನೇಹಿ ಪೇಂಟ್ ನ್ನು ಹಚ್ಚಲಾಗಿದೆ.
ಶಿಗ್ಗಾವಿ ತಾಲೂಕಿನ ಶಿಶುವಿನಾಳ ಗ್ರಾಮದ ಸಂತ ಶರೀಫ ಶಿವಯೋಗಿ ಮತ್ತು ಗೋವಿಂದಭಟ್ಟರ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಶಿಶುನಾಳ ಗ್ರಾಮದಲ್ಲಿ ಸಂತ ಶಿಶುನಾಳ ಶರೀಫರ ತತ್ವ ಪದಗಳ ಭಾವಾರ್ಥ ಅರಿಯುವ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ 2012ರಲ್ಲಿ ನಡೆದಿದ್ದ ಭೀಕರ ಅತ್ಯಾಚಾರ ಘಟನೆಯ ನಂತರ ರಚಿಸಲಾದ ‘ನಿರ್ಭಯಾ ಯೋಜನೆ’ ಅಡಿಯಲ್ಲಿ ದೇಶದಾದ್ಯಂತ ಅನೇಕ ನಗರಗಳಲ್ಲಿ ಜಾರಿಗೊಳಿಸಲಾಗುತ್ತಿರುವ ಸೇಫ್ ಸಿಟಿ ಯೋಜನೆ ಇದೀಗ ಕರ್ನಾಟಕದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಾಲನೆ ದೊರಕಿದೆ. ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಈ ಯೋಜನೆಗೆ ಚಾಲನೆ ನೀಡಿದ್ದಾರೆ.
ಚುಟುಕು ಸಮಾಚಾರ
ಪ್ರತಿ ವರ್ಷ ಮಾರ್ಚ್ 3 ರಂದು ಆಚರಣೆ ಮಾಡಲಾಗುತ್ತದೆ. ಈ ದಿನದಂದು ವನ್ಯಜೀವಿಗಳ ಬಗ್ಗೆ ಅರಿವು ಹಾಗೂ ಶಿಕ್ಷಣ ನೀಡಲು, ವನ್ಯಜೀವಿ ವೈವಿದ್ಯತೆಯ ಮತ್ತು ಪ್ರಾಮುಖ್ಯತೆಯ ತಿಳುವಳಿಕೆ ಹೆಚ್ಚಿಸಲು ಈ ದಿನವನ್ನು ಮೀಸಲಿಡಲಾಗಿದೆ.
ಚುನಾವಣಾ ಆಯೋಗದ ಆಯುಕ್ತರನ್ನು ಹಾಲಿ ಇರುವ ಪ್ರಕ್ರಿಯೆಯಂತೆ ನೇಮಕ ಮಾಡುವಂತಿಲ್ಲ. ಬದಲಾಗಿ ಪ್ರಧಾನಿ, ಸಿಜೆಐ ಮತ್ತು ವಿಪಕ್ಷ ನಾಯಕರನ್ನು ಒಳಗೊಂಡ ಸಮಿತಿ ಶಿಫಾರಸಿನ ಆಧಾರದಲ್ಲಿ ಅವರನ್ನು ನೇಮಿಸಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.
ಪ್ರತಿ ವರ್ಷ ಮಾ.3 ರಂದು ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತದೆ.
ಕಂದಾಯ ಇಲಾಖೆಯ ನೋಂದಣಿ ವ್ಯವಸ್ಥೆಯಲ್ಲಿ ಮಧ್ಯವರ್ತಿ ಹಾವಳಿ, ವಂಚನೆ ತಡೆದು ಜನಸ್ನೇಹಿ ಸೇವೆ ನೀಡುವ ಉದ್ದೇಶದಿಂದ ಅಭಿವೃದ್ಧಿ ಪಡಿಸಿದ ‘ಕಾವೇರಿ 2.0’ ತಂತ್ರಾಂಶದ ಸೇವೆ ಮೂರು ತಿಂಗಳಲ್ಲಿ ರಾಜ್ಯಾದ್ಯಂತ ಲಭ್ಯವಾಗಲಿದೆ.
ಚುಟುಕು ಸಮಾಚಾರ
ವಾಯುಪಡೆಗಾಗಿ ಎಚ್‌ಎಎಲ್ ನಿರ್ಮಿತ 70 ತರಬೇತಿ ವಿಮಾನಗಳನ್ನು (ಎಚ್‌ಟಿಟಿ–40) ₹6,828 ಕೋಟಿ ವೆಚ್ಚದಲ್ಲಿ ಖರೀದಿಸಲು ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಭದ್ರತೆ ಕುರಿತ ಸಂಪುಟ ಸಮಿತಿಯು (ಸಿಸಿಎಸ್) ಅನುಮೋದನೆ ನೀಡಿದೆ.
ಅಭಿಜಾತ ಭಾಷೆ ಸಂಸ್ಕೃತದ ಮೂಲಕವೇ ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಈ ಗ್ರಾಮವೇ ಮತ್ತೂರು. ಏಕೈಕ ಸಂಸ್ಕೃತ ಮಾತನಾಡುವ ಗ್ರಾಮವಿದು. ಇಲ್ಲಿನ ರೈಲ್ವೆ ನಿಲ್ದಾಣದ ನಾಮಫಲಕದಲ್ಲಿ ತ್ರಿಭಾಷಾ (ಕನ್ನಡ, ಇಂಗ್ಲಿಷ್, ಹಿಂದಿ)ಜೊತೆಗೆ ಸಂಸ್ಕೃತವನ್ನು ಸೇರಿಸಲಾಗಿದ್ದು ಈ ಮೂಲಕ ಸಂಸ್ಕೃತ ಗ್ರಾಮಕ್ಕೆ ನೈರುತ್ಯ ರೈಲ್ವೆ ವಿಶೇಷ ಗೌರವ ಸಲ್ಲಿಸಿದೆ
ಚುಟುಕು ಸಮಾಚಾರ
ಪ್ರತಿ ವರ್ಷ ಫೆಬ್ರವರಿ 28 ರಂದು ಸರ್ ಸಿ.ವಿ.ರಾಮನ್ ರ ‘ರಾಮನ್ ಪರಿಣಾಮ’ ಅವಿಷ್ಕಾರದ ಸ್ಮರಣಾರ್ಥವಾಗಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಏರುತ್ತಿರುವ ಉಷ್ಣಾಂಶಕ್ಕೆ ಹೊಂದಿಕೊಳ್ಳಬಲ್ಲ ವಿಶೇಷ ಗೋಧಿ ತಳಿಯನ್ನು ಅಭಿವೃದ್ಧಿಪಡಿಸಿರುವುದಾಗಿ ಭಾರತೀಯ ಕೃಷಿ ಸಂಶೋಧನಾ ಪರಿಷತ್ ಪ್ರಕಟಿಸಿದೆ.
2008ರ ನಂತರ ಜನಿಸಿದವರು ಸಿಗರೇಟ್ ಅಥವಾ ತಂಬಾಕು ಉತ್ಪನ್ನಗಳನ್ನು ಖರೀದಿಸುವುದನ್ನು ನಿಷೇಧಿಸುವ ಹೊಸ ಕಾನೂನನ್ನು ಅಂಗೀಕರಿಸಿದ ನ್ಯೂಜಿಲೆಂಡ್‌ನಿಂದ ಪ್ರೇರಿತವಾಗಿರುವ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯು, 2025 ರ ವೇಳೆಗೆ ತಂಬಾಕು ಮುಕ್ತ ಪೀಳಿಗೆಯನ್ನು (ಜನರೇಷನ್) ರಚಿಸಲು ಇದೇ ಮಾದರಿಯನ್ನು ತರಲು ಮುಂದಾಗಿದೆ.
ಚುಟುಕು ಸಮಾಚಾರ
ಭಾರತೀಯ ಹವಾಮಾನ ಇಲಾಖೆ (IMD) ವಾಯುವ್ಯ, ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ಗರಿಷ್ಠ ತಾಪಮಾನವು ದೀರ್ಘಾವಧಿಯ ಸರಾಸರಿಗಿಂತ 3-5 ° C ಹೆಚ್ಚಾಗಿರುತ್ತದೆ ಎಂದು ಎಚ್ಚರಿಸಿದೆ. ಫೆಬ್ರವರಿ 21 ರಂದು, ದೆಹಲಿಯಲ್ಲಿ ಐದು ದಶಕಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ಮೂರನೇ ಅತಿ ಹೆಚ್ಚು ತಾಪಮಾನವನ್ನು (33.6 ° C) ದಾಖಲಿಸಿತು.
2022ನೇ ಸಾಲಿನ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ ಲೇಖಕಿ ವೈದೇಹಿ ಅವರನ್ನು ಆಯ್ಕೆ ಮಾಡಲಾಗಿದೆ. ಇವರ ಜೀವಮಾನದ ಸಾಧನೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ನೃಪತುಂಗ ಪ್ರಶಸ್ತಿಗೆ ಆಯ್ಕೆಯಾದ ಎರಡನೇ ಮಹಿಳಾ ಸಾಹಿತಿ ವೈದೇಹಿ ಆಗಿದ್ದಾರೆ.
ಪ್ರತಿ ವರ್ಷವೂ ರಾಜ್ಯ ಸರ್ಕಾರವು ಸಾಹಿತ್ಯ ಕ್ಷೇತ್ರದಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ ಶ್ರೇಷ್ಠರಿಗೆ ಪಂಪ ಪ್ರಶಸ್ತಿ ನೀಡುತ್ತಿದ್ದು 2022-23ನೇ ಸಾಲಿನ ಪಂಪ ಪ್ರಶಸ್ತಿಗೆ ಡಾ. ಎಸ್.ಆರ್. ರಾಮಸ್ವಾಮಿಯನ್ನು ಆಯ್ಕೆ ಮಾಡಲಾಗಿದೆ.
NammaKPSC Current Affairs - February 2023
ಪ್ರಧಾನಿ ನರೇಂದ್ರ ಮೋದಿಯವರು 98ನೇ ಮನ್ ಕಿ ಬಾತ್ ನಡೆಸಿಕೊಟ್ಟಿದ್ದು, ಇದರಲ್ಲಿ ಟೆಲಿ ಸಮಲೋಚನೆ ಮೂಲಕ ವೈದ್ಯಕೀಯ ಸೇವೆ ನೀಡುವ ಇ-ಸಂಜೀವಿನಿ ಆಪ್ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದ ಸಮೀಪದ ಸೋಗಾನೆ ಗ್ರಾಮದ ಬಳಿ ನಿರ್ಮಿಸಲಾದ ನೂತನ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.
ಚುಟುಕು ಸಮಾಚಾರ
ಕಡಲ ರಕ್ಷಣೆ ಮತ್ತು ಭದ್ರತೆಯ ಕ್ಷೇತ್ರದಲ್ಲಿ ಅಸ್ತಿತ್ವದಲ್ಲಿರುವ ಸಹಕಾರವನ್ನು ಮುಂದುವರಿಸಲು, ಮಾಹಿತಿ ಫ್ಯೂಷನ್ ಸೆಂಟರ್-ಭಾರತ ಸಾಗರ ಪ್ರದೇಶ (IFC-IOR) ಫೆಬ್ರವರಿ 2023 ರಂದು ಸೀಶೆಲ್ಸ್‌ನ ಪ್ರಾದೇಶಿಕ ಸಮನ್ವಯ ಕಾರ್ಯಾಚರಣೆ ಕೇಂದ್ರ (RCOC) ನೊಂದಿಗೆ ಒಂದು ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿತು.
ಜವಳಿ ಉದ್ಯಮಕ್ಕೆ ಉತ್ತಮ ಗುಣಮಟ್ಟದ ಹತ್ತಿಯ ಪೂರೈಕೆಯನ್ನು ಹೆಚ್ಚಿಸಲು ಅವರು ನಿರ್ದಿಷ್ಟ ಸಂಖ್ಯೆಯ IS12171: 2019-ಕಾಟನ್ ಬೇಲ್ಸ್ ಅಡಿಯಲ್ಲಿ ಹತ್ತಿ ಬೇಲ್‌ಗಳ ಕಡ್ಡಾಯ ಪ್ರಮಾಣೀಕರಣಕ್ಕಾಗಿ ಗುಣಮಟ್ಟ ನಿಯಂತ್ರಣ ಆದೇಶವನ್ನು (QCO) ಅನುಮೋದಿಸಲಾಗಿದೆ.
ಕರ್ನಾಟಕ ಪೋಸ್ಟಲ್ ಸರ್ಕಲ್ ರೈತರಿಗೆ ಸಾಲವನ್ನು ವಿತರಿಸಲಿದೆ ಮತ್ತು ಅವರ ಪರವಾಗಿ ತನ್ನ ಕಚೇರಿಗಳಲ್ಲಿ ಇಎಂಐಗಳನ್ನು ಸಂಗ್ರಹಿಸಲಿದೆ.
ಚುಟುಕು ಸಮಾಚಾರ
ಪ್ರತಿ ವರ್ಷ ಫೆಬ್ರವರಿ 21 ರಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸಲಾಗುತ್ತದೆ
ಮಣಿಪುರ ರಾಜ್ಯವು B20 ಸಮ್ಮೇಳನವನ್ನು ಆಯೋಜಿಸಿತು. ಈಶಾನ್ಯ ಭಾರತದಲ್ಲಿ ನಿಗದಿಪಡಿಸಲಾದ ಜಾಗತಿಕ ವ್ಯಾಪಾರ ಸಮುದಾಯದ ಅಧಿಕೃತ G20 ಸಂವಾದ ವೇದಿಕೆಯಾದ B20 ನ ನಾಲ್ಕು ಅವಧಿಗಳಲ್ಲಿ ಇದು ಮೊದಲನೆಯದು
ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದ ಆರ್ಟಿಕಲ್ 370 ರದ್ದುಗೊಳಿಸಿದ 3 ವರ್ಷಗಳ ಬಳಿಕ ಏ.1 ರಿಂದ ಆಸ್ತಿ ತೆರಿಗೆ ವಿಧಿಸುವುದು ಕೇಂದ್ರಾಡಳಿತ ಪ್ರದೇಶದಲ್ಲಿ ಜಾರಿಗೆ ಬರುತ್ತಿದೆ.
ಸಂಸ್ಕೃತಿ ಸಚಿವಾಲಯವು 2023 ರ ಫೆಬ್ರವರಿ 22 ರಿಂದ 25 ರವರೆಗೆ ಮಧ್ಯಪ್ರದೇಶದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಖಜುರಾಹೊದಲ್ಲಿ ಸಂಸ್ಕೃತಿ ವರ್ಕಿಂಗ್ ಗ್ರೂಪ್ (CWG) ನ ಮೊದಲ ಸಭೆಯನ್ನು ಆಯೋಜಿಸಿದೆ.
ಮಹಿಳೆಯರು ಕಾರ್ಖಾನೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡುವ ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ಮಸೂದೆ 2023 ಅನ್ನು ರಾಜ್ಯ ವಿಧಾನಸಭೆ ಅಂಗೀಕರಿಸಿದೆ.
ತಮಿಳುನಾಡು, ಕರ್ನಾಟಕ ಮತ್ತು ಕೇರಳದಲ್ಲಿ ಮೊದಲ ಬಾರಿಗೆ ರಣಹದ್ದುಗಳ ಗಣತಿಯನ್ನು ಫೆಬ್ರುವರಿ 25 ಮತ್ತು 26 ರಂದು ನಡೆಸಲಾಗುವುದು.
ಚುಟುಕು ಸಮಾಚಾರ
2023 ಫೆಬ್ರವರಿ 20 ರಿಂದ 24 ರವರೆಗೆ ನಡೆಯಲಿರುವ NAVDEX 23 (ನೌಕಾ ರಕ್ಷಣಾ ಪ್ರದರ್ಶನ) ಮತ್ತು IDEX 23 (ಅಂತರರಾಷ್ಟ್ರೀಯ ರಕ್ಷಣಾ ಪ್ರದರ್ಶನ) ನಲ್ಲಿ ಭಾಗವಹಿಸಲು ಭಾರತೀಯ ನೌಕಾ ಹಡಗು ಸುಮೇಧಾ ಅಬುಧಾಬಿ, UAE ಗೆ ಆಗಮಿಸಿದೆ.
ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ಬಿವಿಆರ್ ಸುಬ್ರಹ್ಮಣ್ಯಂ ಅವರನ್ನು ನೀತಿ ಆಯೋಗದ ಸಿಇಒ ಆಗಿ ನೇಮಕ ಮಾಡಿದರು.
4800 ಕೋಟಿ ರೂ.ಗಳ ಹಣ ಹಂಚಿಕೆಯೊಂದಿಗೆ 2022-23ರಿಂದ 2025-26ರ ಹಣಕಾಸು ವರ್ಷದವರೆಗೆ ಕೇಂದ್ರ ಪ್ರಾಯೋಜಿತ ಯೋಜನೆ “ರೋಮಾಂಚಕ(ವೈಬ್ರ್ಯಾಂಟ್) ಗ್ರಾಮ ಕಾರ್ಯಕ್ರಮ” (ವಿವಿಪಿ)ಕ್ಕೆ ಅನುಮೋದನೆ ನೀಡಿದೆ.
ಭಾರತ ಸರ್ಕಾರವು ಪುಣೆಯಲ್ಲಿ 430 ಕೋಟಿ ರೂಪಾಯಿ ವೆಚ್ಚದಲ್ಲಿ ತ್ಯಾಜ್ಯದಿಂದ ಮೊದಲ ಜಲಜನಕ ಘಟಕವನ್ನು ಸ್ಥಾಪಿಸಲಿದೆ.
ಆರ್ಥಿಕ ಬೆಳವಣಿಗೆ ವಿಚಾರದಲ್ಲಿರಾಜಧಾನಿ ಬೆಂಗಳೂರು ಹಾಗೂ ಇತರ ಜಿಲ್ಲೆಗಳ ನಡುವಿನ ಅಂತರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಅರ್ಧದಷ್ಟು ಜಿಲ್ಲೆಗಳು ಬೆಂಗಳೂರಿನ ತಲಾ ಆದಾಯದ ಶೇ.25ರಷ್ಟನ್ನೂ ಹೊಂದಿಲ್ಲ.
ಚುಟುಕು ಸಮಾಚಾರ
ಭಾರತ ಮತ್ತು ಜಪಾನ್ ಇತ್ತೀಚೆಗೆ ಧರ್ಮ ಗಾರ್ಡಿಯನ್ ವ್ಯಾಯಾಮವನ್ನು ನಡೆಸಿವೆ. ಜಪಾನ್‌ನ ಶಿಗಾ ಪ್ರಾಂತ್ಯದ ಇಮಾಜು ಕ್ಯಾಂಪ್‌ನಲ್ಲಿ ಈ ವ್ಯಾಯಾಮ ನಡೆಯಿತು.
ಹರಿಯಾಣದ ಗೋರಖ್‌ಪುರದಲ್ಲಿ ಹೊಸ ಪರಮಾಣು ಸ್ಥಾವರವನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಇತ್ತೀಚೆಗೆ ಘೋಷಿಸಿದರು.
ಭಾರತೀಯ ಸೇನೆ ಮತ್ತು ಉಜ್ಬೇಕಿಸ್ಥಾನ ಸೇನೆಯ ನಡುವಿನ ಮಿಲಿಟರಿ ವಿನಿಮಯ ಕಾರ್ಯಕ್ರಮದ ಭಾಗವಾಗಿ, ನಾಲ್ಕನೇ ಆವೃತ್ತಿಯ ತರಬೇತಿ ವ್ಯಾಯಾಮ ಡಸ್ಟ್ಲಿಕ್ (2023) ಮಾರ್ಚ್ 5ರವರೆಗೆ ಉತ್ತರಾಖಂಡ್‌ನ ಪಿಥೋರಗಢದಲ್ಲಿ ನಡೆಯಲಿದೆ. ವ್ಯಾಯಾಮವು ದ್ವೈವಾರ್ಷಿಕವಾಗಿದೆ, ಅಂದರೆ ಎರಡು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ
ಚಂದ್ರಯಾನ 3 ಭಾರತದ ಮೂರನೇ ಚಂದ್ರಯಾನವಾಗಿದೆ. ಲ್ಯಾಂಡರ್ ಭಾಗದ ಇಎಂಐ-ಇಎಂಸಿ ಪರೀಕ್ಷೆ ಯಶಸ್ವಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇತ್ತೀಚೆಗೆ ಪ್ರಕಟಿಸಿದೆ. ಇಎಂಐ-ಇಎಂಸಿ ಗಳು ವಿದ್ಯುತ್ಕಾಂತೀಯ ಪರೀಕ್ಷೆಗಳಾಗಿವೆ.
ಚುಟುಕು ಸಮಾಚಾರ
ಉಲ್ಕಾಶಿಲೆಗಳ ಸಮೂಹವು ಚಂದ್ರನ ಮೇಲಿನ ಕಪ್ಪು ಭಾಗ (ಬಸಾಲ್ಟ್)ದ ಇರುವಿಕೆ ಪತ್ತೆ ಮಾಡಲು ನೆರವು ನೀಡುತ್ತದೆ ಎಂದು ಇಸ್ರೋ ಹೇಳಿದೆ.
ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತಂದ12 ಚಿರತೆಗಳನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರು ಕುನೊ ರಾಷ್ಟ್ರೀಯ ಉದ್ಯಾನವನದ ಆವರಣದಲ್ಲಿ ಚಿರತೆಗಳನ್ನು ಬಿಡುಗಡೆ ಮಾಡಿದರು.
ದೇಶದಲ್ಲಿನ ಚಿರತೆಗಳು ಕ್ಯಾನೈನ್ ಡಿಸ್ಟೆಂಪರ್ ವೈರಸ್ (ಸಿಡಿವಿ) ಕಾಯಿಲೆಯಿಂದ ಸೋಂಕಿಗೆ ಒಳಗಾಗಿದ್ದು, ಚಿರತೆಯ ಅಸಹನೆಯ ವರ್ತನೆಗೆ ಸಿಡಿವಿ ರೋಗ ಕಾರಣ ಎಂದು ಹೊಸ ಅಧ್ಯಯನದಲ್ಲಿ ತಿಳಿದುಬಂದಿದೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಫೆಬ್ರವರಿ 20 ರಂದು ತ್ರಿಪದಿ ಕವಿ ಸರ್ವಜ್ಞ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತಿದೆ.
ಚುಟುಕು ಸಮಾಚಾರ
ವಿಶ್ವದ ಅತ್ಯಂತ ಕಿರಿಯ ಬಹು-ಕಾರ್ಯಾಚರಣೆಯ ಯುದ್ಧತಂತ್ರದ ವಿಮಾನಗಳಲ್ಲಿ ಒಂದಾದ ಸಿ-390 ಮಿಲೇನಿಯಮ್ ತನ್ನ ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಸಾಮರ್ಥ್ಯಗಳನ್ನು ಪ್ರದರ್ಶಿಸುವ ಸಲುವಾಗಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋದಲ್ಲಿ ಮೊಟ್ಟಮೊದಲ ಬಾರಿಗೆ ಪ್ರದರ್ಶನ ನೀಡಿತು .
ಏರೋ ಇಂಡಿಯಾ-2023ರ ಭಾಗವಾಗಿ ಬೆಂಗಳೂರಿನಲ್ಲಿ ನಡೆದ ಬಂಧನ್ ಕಾರ್ಯಕ್ರಮದಲ್ಲಿ ಸುಮಾರು 32 ಕಂಪನಿಗಳೊಂದಿಗೆ 2,930 ಕೋಟಿ ರೂ.ಗಳ ಬಂಡವಾಳ ಹೂಡಿಕೆಯ ಮಹತ್ವದ ಒಪ್ಪಂದಗಳಿಗೆ ರಾಜ್ಯ ಸರಕಾರ ಸಹಿ ಹಾಕಿದೆ.
ಭಾರತದ ಮೂರೂ ಸೇನೆಗಳಿಗಾಗಿ ಲೋರಾ(ಲಾಂಗ್ ರೇಂಜ್ ಅಟ್ಯಾಕ್) ಶಸ್ತ್ರಾಸ್ತ್ರವನ್ನು ದೇಶೀಯವಾಗಿ ಉತ್ಪಾದಿಸಲು ಮತ್ತು ಸರಬರಾಜು ಮಾಡಲು ಇಸ್ರೇಲ್ ಏರೋಸ್ಪೇ ಸ್ ಇಂಡಸ್ಟ್ರೀ ಸ್(ಐಎಐ) ಜೊತೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಒಡಂಬಡಿಕೆ ಮಾಡಿಕೊಂಡಿದೆ.
ನಂದಿ ಬೆಟ್ಟದಲ್ಲಿ ಮಹತ್ವಾಕಾಂಕ್ಷೆಯ ರೋಪ್‌ವೇ ಯೋಜನೆ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಡೈನಾಮಿಕ್ ರೋಪ್‌ವೇ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ರಿಯಾಯಿತಿ ಒಪ್ಪಂದಕ್ಕೆ ಸಹಿ ಹಾಕಿದೆ.
ಚುಟುಕು ಸಮಾಚಾರ
ಸೈಬರ್ ಭದ್ರತೆ ಕುರಿತಂತೆ 28 ಸಮಸ್ಯೆ ಹೇಳಿಕೆಗಳೊಂದಿಗೆ ಡಿಫೆನ್ಸ್ ಇಂಡಿಯಾ ಸ್ಟಾರ್ಟ್ಅಪ್ ಚಾಲೆಂಜಸ್ (ಡಿಐಎಸ್ಸಿ 9) ನ ಒಂಬತ್ತನೇ ಆವೃತ್ತಿಗೆ ಮತ್ತು ಐಡೆಕ್ಸ್- iDEX ಹೂಡಿಕೆದಾರರ ತಾಣ ಆರಂಭಕ್ಕೆ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು ಚಾಲನೆ ನೀಡಿದರು.
10 ಹಾಗೂ 12 ನೇ ತರಗತಿ ಪರೀಕ್ಷೆಗಳಲ್ಲಿ ಕೃತಕ ಬುದ್ದಿ ಮತ್ತೆ ಆಧಾರಿತ ಚಾಟ್ ಜಿಪಿಟಿ ತಂತ್ರಾಂಶದ ಬಳಕೆಯನ್ನು ನಿಷೇಧಿಸಲಾಗಿದೆ, ಎಂದು ರಾಷ್ಟೀಯ ಪ್ರೌಢಶಾಲಾ ಶಿಕ್ಷಣ ಮಂಡಳಿ ಹೇಳಿದೆ.
1971ರ ಇಂಡೋ–ಪಾಕ್ ಕದನದ ವೇಳೆ ಸಮುದ್ರದಲ್ಲಿ ಮುಳುಗಡೆಯಾಗಿದ್ದ ಭಾರತದ ಯುದ್ಧನೌಕೆ ‘ಐಎನ್ಎಸ್ ಖುಕ್ರಿ’ಗೆ ಕಡಲಾಳದಲ್ಲಿ ಗೌರವಾರ್ಪಣೆ ಮಾಡಲಾಗಿದೆ
ವೈಮಾನಿಕ ಉದ್ಯಮ ವಲಯದ ಅತಿ ದೊಡ್ಡ ಪ್ರದರ್ಶನ ಏರೊ ಇಂಡಿಯಾ 2023 ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಅಮೆರಿಕದ ಅಲಾಸ್ಕಾ ಮತ್ತು ಉಟಾದಿಂದ ಬಂದಿರುವ F35A ಯುದ್ಧ ವಿಮಾನ ವೀಕ್ಷಕರನ್ನು ಆಕರ್ಷಿಸುತ್ತಿದೆ.
ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು (ವಿಐಎಸ್‌ಎಲ್) ಮುಚ್ಚುವುದಕ್ಕೆ ತೀರ್ಮಾನಿಸಿರುವ ಕೇಂದ್ರ ಸರ್ಕಾರ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ (ವಿಐಎಸ್ಎಲ್) ಕಾರ್ಯಾಚರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಲು ಮುಂದಾಗಿದೆ.
ಚುಟುಕು ಸಮಾಚಾರ
ಬಜೆಟ್ ಮಂಡನೆ ಸಂದರ್ಭದಲ್ಲಿ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಪಿಎಂ ವಿಕಾಸ್ ಯೋಜನೆಯನ್ನು ಘೋಷಿಸಿದರು.
ಬ್ರೆಜಿಲ್, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್, ಪ್ರಮುಖ ಜೈವಿಕ ಇಂಧನ ಉತ್ಪಾದಕರು ಮತ್ತು ಗ್ರಾಹಕರಂತೆ, ಮುಂದಿನ ಕೆಲವು ತಿಂಗಳುಗಳಲ್ಲಿ ಇತರ ಆಸಕ್ತ ದೇಶಗಳೊಂದಿಗೆ ಜಾಗತಿಕ ಜೈವಿಕ ಇಂಧನ ಒಕ್ಕೂಟದ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡಲಿವೆ.
ಜಗತ್ತಿನ ಅತೀ ದೊಡ್ಡ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ಭಾರತದಲ್ಲಿ ತನ್ನ ಹೊಸ ಲಾಜಿಸ್ಟಿಕ್ಸ್ ಕೇಂದ್ರ ಸ್ಥಾಪಿಸುವುದಾಗಿ ಘೋಷಣೆ ಮಾಡಿದೆ
ಚುಟುಕು ಸಮಾಚಾರ
ಚೀನಾ ಕಳುಹಿಸಿದ ಬೇಹುಗಾರಿಕಾ ಬಲೂನು ಅನ್ನು ಅಮೆರಿಕ ಸೇನೆಯು ಹೊಡೆದುರುಳಿಸಿದೆ.
ಉತ್ತರ ಕರ್ನಾಟಕದ ಜನರ ಪ್ರಮುಖ ಆಹಾರವಾದ ಜೋಳದ ಉತ್ಪಾದನೆಯಲ್ಲಿ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ, ವಿಜಯಪುರದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ (RARS) ಹೆಚ್ಚು ಇಳುವರಿ ನೀಡುವ ಎರಡು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದೆ.
ಕರ್ನಾಟಕ ರಾಜ್ಯದ 35 ಸರಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಆಧುನಿಕ ತಂತ್ರಜ್ಞಾನವಾದ ಐಒಟಿ (ಇಂಟರ್ ನೆಟ್ ಆಫ್ ಥಿಂಗ್ಸ್) ಪ್ರಯೋಗಾಲಯ ಸ್ಥಾಪಿಸುವ ಗುರಿಯನ್ನುಳ್ಳ ಮಹತ್ತ್ವದ ಒಡಂಬಡಿಕೆಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಸ್ಯಾಮ್ಸಂಗ್ ಸೆಮಿಕಂಡಕ್ಟರ್ ಇಂಡಿಯಾ ರೀಸರ್ಚ್ ಅಂಕಿತ ಹಾಕಿವೆ
ಚುಟುಕು ಸಮಾಚಾರ
ಮುಂಬೈ-ಅಹ್ಮದಾಬಾದ್ ನಡುವಿನ ಭಾರತದ ಬಹುನಿರೀಕ್ಷಿತ ಹೈಸ್ಪೀಡ್ ರೈಲು (ಬುಲೆಟ್ ರೈಲು ಯೋಜನೆ ಕಾಮಗಾರಿ ಆರಂಭವಾಗಿದೆ. ಮುಂಬೈ-ಅಹ್ಮದಾಬಾದ್ ಹೈ ಸ್ಪೀಡ್ ರೈಲ್ ಕಾರಿಡಾರ್ ನ ಭಾಗವಾಗಿ ಮಹಾರಾಷ್ಟ್ರದ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ಹಾಗೂ ಶಿಲ್ಪಾತ ನಡುವಿನ ಡಬಲ್ ಲೈನ್ ಗಾಗಿ ಟನಲ್ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತಿದೆ.
ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್ ಹೆಲಿಕಾಪ್ಟರ್ ವಿಭಾಗದಲ್ಲಿ ಸುಧಾರಿತ ಲಘು ಹೆಲಿಕಾಪ್ಟರ್ (ALH) ನ್ನು ಮಾರಿಷಸ್ ಸರ್ಕಾರಕ್ಕೆ ಹಸ್ತಾಂತರಿಸಿದೆ.
ವೇಲಾ ಬಾಂಧವ್ಯ ಎಂಬ ಹೊಸ ಜಾತಿಯ ಜಿಕಾರ್ಸಿನ್ಯೂಸಿಡ್ ಏಡಿ ಪಶ್ಚಿಮ ಘಟ್ಟಗಳಲ್ಲಿ ಕಾಣಿಸಿಕೊಂಡಿದೆ.ರಾಜ್ಯದ ಉತ್ತರ ಕರ್ನಾಟಕದ ಮಧ್ಯ ಪಶ್ಚಿಮ ಘಟ್ಟಗಳಲ್ಲಿ ನೀರಿನಡಿಯಲ್ಲಿ ಪತ್ತೆಯಾಗಿದೆ.
ಚುಟುಕು ಸಮಾಚಾರ
ದೆಹಲಿ–ಮುಂಬೈ ಎಕ್ಸ್ಪ್ರೆಸ್ವೇನ 270 ಕಿ.ಮೀ. ಉದ್ದದ ಭಾಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ
ಮೂರು ಉಪಗ್ರಹಗಳನ್ನು ಹೊತ್ತ ಇಸ್ರೊದ ‘ಕಿರು ಉಪಗ್ರಹ ಉಡಾವಣಾ ನೌಕೆ (ಸ್ಮಾಲ್ ಸ್ಯಾಟ್ಲೈಟ್ ಲಾಂಚ್ ವೆಹಿಕಲ್: ಎಸ್ಎಸ್ಎಲ್ವಿ-ಡಿ2)’ ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೂಲಕ ನಭಕ್ಕೆ ಹಾರಿತು. ಉಪಗ್ರಗಳೆಲ್ಲವೂ ಕಕ್ಷೆಗೆ ಸೇರಿದ್ದು, ಬಾಹ್ಯಾಕಾಶ ಕಾರ್ಯಕ್ರಮ ಯಶಸ್ಸು ಕಂಡಿದೆ ಎಂದು ಇಸ್ರೋ ತಿಳಿಸಿದೆ
ಚುಟುಕು ಸಮಾಚಾರ
ದೇಶದಲ್ಲೇ ಮೊದಲ ಬಾರಿಗೆ ಕ್ರೀಡೆ ಹಾಗೂ ಕ್ರೀಡಾಪಟುಗಳಿಗಾಗಿ ಜಾರ್ಖಂಡ್ ಸರ್ಕಾರ ಡಿಜಿಟಲ್ ಪೋರ್ಟಲ್ ಪ್ರಾರಂಭಿಸಿದ್ದು, ಯುವಜನತೆಯಲ್ಲಿ ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸುವುದು ಜೊಹರ್ ಖಿಲಾಡಿ ಸ್ಪೋರ್ಟ್ಸ್ ಇಂಟಿಗ್ರೇಟೆಡ್ ಪೋರ್ಟಲ್ ನ ಉದ್ದೇಶವಾಗಿದೆ.
ಹಿಮಾಲಯದಲ್ಲಿ 1 ಸಾವಿರಕ್ಕೂ ಅಧಿಕ ಹಿಮ ಸರೋವರಗಳು ಕರಗುತ್ತಿದ್ದು, ದೇಶದ ಸುಮಾರು 30ಲಕ್ಷ ಜನರು ಭೀಕರ ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ಗಂಭೀರ ಎಚ್ಚರಿಕೆ ನೀಡಿದೆ.
ಕನ್ನಡ ಸೇರಿದಂತೆ ಎಂಟು ಭಾಷೆಗಳಲ್ಲಿ ಧ್ವ ನಿ ಆಧಾರಿತ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಮೊಬೈಲ್ ಸ್ಮಾರ್ಟ್‌ಫೋನ್ ಆ್ಯಪ್ ‘ಹಲೋ ಉಜ್ಜೀ ವನ್’ಅನ್ನು ಉಜ್ಜೀ ವನ್ ಸ್ಮಾಲ್ ಫೈ ನಾನ್ಸ್ ಬ್ಯಾಂ ಕ್ ಬಳಕೆಗೆ ಮುಕ್ತವಾಗಿಸಿದೆ.
ಕೊಡಚಾದ್ರಿ ಪರ್ವತದಲ್ಲಿ ರೋಪ್ವೇ ಯೋಜನೆ ಆರಂಭಿಸಲು ಕಾರ್ಯಸಾಧ್ಯತಾ ಅಧ್ಯಯನ ನಡೆಸಲಾಗಿದೆ.
ಚುಟುಕು ಸಮಾಚಾರ
ಲಡಾಖ್‌ನಲ್ಲಿರುವ ಯಾಯಾ ತ್ಸೋ ಸರೋವರವನ್ನು ಇತ್ತೀಚೆಗೆ “ಜೀವವೈವಿಧ್ಯ ಪರಂಪರೆಯ ತಾಣ” ಎಂದು ಘೋಷಿಸಲಾಯಿತು. ಇದು ಲಡಾಖ್‌ನ ಮೊದಲ ಜೀವವೈವಿಧ್ಯ ಪರಂಪರೆಯ ತಾಣವಾಗಿದೆ.
ಇಂಡಿಯಾ ಎನರ್ಜಿ ವೀಕ್ 2023 ಈವೆಂಟ್‌ನಲ್ಲಿ, ಪ್ರಧಾನಿ ಮೋದಿ E20 ಇಂಧನವನ್ನು ಬಿಡುಗಡೆ ಮಾಡಿದರು. 11 ರಾಜ್ಯಗಳು ಮತ್ತು ಯುಟಿಗಳಲ್ಲಿ ಹರಡಿರುವ ಭಾರತದ 83 ಸ್ಥಳಗಳಲ್ಲಿ ಇಂಧನವನ್ನು ಬಿಡುಗಡೆ ಮಾಡಲಾಗುತ್ತಿದೆ.
ಗತಿ ಶಕ್ತಿ ಯೋಜನೆಯ ಅಡಿಯಲ್ಲಿ ಪ್ರಧಾನಿ ಮೋದಿ ಇತ್ತೀಚೆಗೆ ತುಮಕೂರು ಕೈಗಾರಿಕಾ ಟೌನ್‌ಶಿಪ್ ಎಂಬ ಯೋಜನೆಯ ಮೊದಲ ಕೈಗಾರಿಕಾ ಕಾರಿಡಾರ್ ಅನ್ನು ಪ್ರಾರಂಭಿಸಿದರು.
ಚುಟುಕು ಸಮಾಚಾರ
ಭಾರತ ಹಾಗೂ ಬ್ರಿಟನ್ ಮಧ್ಯೆ ನಡೆಯುತ್ತಿರುವ ಮುಕ್ತ ವ್ಯಾಪಾರ ಒಪ್ಪಂದದ (ಎಫ್ಟಿಎ) ಮಾತುಕತೆ ಹಿನ್ನಲೆಯಲ್ಲಿ ಬ್ರಿಟನ್ ಕೈಗಾರಿಕೆ ಒಕ್ಕೂಟವು (ಸಿಬಿಐ) ತನ್ನ ಮೊದಲ ನಿಯೋಗವನ್ನು ಭಾರತಕ್ಕೆ ಕಳುಹಿಸಿದೆ. ಮೂರು ದಿನಗಳ ಭೇಟಿಯಲ್ಲಿ ನಿಯೋಗವು ಮುಂಬೈ ಹಾಗೂ ನವದೆಹಲಿಗೆ ಭೇಟಿ ನೀಡಲಿದೆ.
ಚೆನ್ನೈನ ಕೂವಂ ನದಿಯನ್ನು ಭಾರತದ ದೇಶದ ‘ಅತಿ ಕಲುಷಿತ’ ನದಿ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಯ ಇತ್ತೀಚಿನ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಉಡುಪಿ ಜಿಲ್ಲೆಯ ಕಾರ್ಕಳ ಸಮೀಪದ ಬೈಲೂರಿನಲ್ಲಿ ಉಮಿಕ್ಕಲ್ ಬೆಟ್ಟದ ಮೇಲೆ ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಕಂಚಿನ ಪ್ರತಿಮೆಯೊಂದಿಗೆ ಪರಶುರಾಮನ ಥೀಮ್ ಪಾರ್ಕ್ ಅನ್ನು ಸ್ಥಾಪಿಸಲಾಗಿದೆ.
ಚಾಮರಾಜನಗರದ ಬುಡಕಟ್ಟು ಕುಟುಂಬಗಳು ಈ ಲಂಟಾನ ಗಿಡಗಳಿಂದ ಪೀಠೋಪಕರಣಗಳು, ಬುಟ್ಟಿಗಳು, ಟೇಬಲ್‌ಗಳು, ಬುಕ್‌ಸ್ಟ್ಯಾಂಡ್‌ಗಳು, ಕೀ ಹೋಲ್ಡರ್‌ಗಳು ಇತ್ಯಾದಿಗಳನ್ನು ತಯಾರಿಸುತ್ತಿದ್ದು, ಜೀವನೋಪಾಯವನ್ನೇ ಇದೀಗ ಜೀವನಾಧಾರವಾಗಿ ಮಾಡಿಕೊಂಡಿದ್ದಾರೆ.
ಕರ್ನಾಟಕ ರಾಜ್ಯದ ದೇವಾಲಯಗಳನ್ನು ಸ್ವಚ್ಛವಾಗಿಡುವ ಸಲುವಾಗಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು “ಸ್ವಚ್ಛ ಮಂದಿರ ಅಭಿಯಾನವನ್ನು ಪ್ರಾರಂಭಿಸಿದೆ.
ಫೆಬ್ರವರಿ 6 ರಿಂದ ಫೆಬ್ರವರಿ 8 ರವರೆಗೆ ಕರ್ನಾಟಕದಲ್ಲಿ, ಪ್ರಧಾನಿ ಮೋದಿ ಜಿ 20 ಕಾರ್ಯಕ್ರಮವಾದ ಇಂಡಿಯಾ ಎನರ್ಜಿ ವೀಕ್ ಅನ್ನು ಉದ್ಘಾಟಿಸಲಿದ್ದಾರೆ.
ಭಾರತದ ರಕ್ಷಣಾ ವಲಯಕ್ಕೆ ಉತ್ತೇಜನ ನೀಡುವ ಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನ ಹೆಲಿಕಾಪ್ಟರ್ ಕಾರ್ಖಾನೆಯನ್ನು ಉದ್ಘಾಟಿಸಲಿದ್ದಾರೆ.
ಚುಟುಕು ಸಮಾಚಾರ
ಯುನಿಟಿ ಮಾಲ್ಗಳ ಮೂಲಕ ಪ್ರತಿ ರಾಜ್ಯದಲ್ಲೂ ಪ್ರವಾಸೋದ್ಯಮ ಮತ್ತು ದೇಶೀಯ ಉತ್ಪನ್ನಗಳ ಮಾರಾಟವನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಬುಡಕಟ್ಟು ಪ್ರಾಬಲ್ಯದ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಬೈಗಾ ಬುಡಕಟ್ಟು ಮಹಿಳೆ ಲಹರಿ ಬಾಯಿ ಅವರು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷದಲ್ಲಿ ನಿಜವಾದ ಬ್ರಾಂಡ್ ಅಂಬಾಸಿಡರ್ ಆಗಿ ಹೊರಹೊಮ್ಮಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಬೈತಕೋಲ್ ಗ್ರಾಮದ ಬ್ರಿಟಿಷರ ಕಾಲದ ಲೇಡೀಸ್ ಬೀಚ್’ಗೆ ಸಾರ್ವಜನಿಕರ ಪ್ರವೇಶದ ಮೇಲೆ ನಿರ್ಬಂಧ ಹೇರಲು ಅಧಿಕಾರಿಗಳು ಮುಂದಾಗಿದ್ದಾರೆಂದು ತಿಳಿದುಬಂದಿದೆ.
ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಸ್ಥಳದ ಕೊರತೆ ಎದುರಾಗಿದ್ದು, ಈ ಸಮಸ್ಯೆಯನ್ನು ನೀಗಿಸಲು ಕುಂದಾಪುರ ತಾಲೂಕಿನ ಮುದೂರು ಗ್ರಾಮದಲ್ಲಿ ಇತ್ತೀಚಿಗೆ ಸಂಚಾರಿ ಚಿತಾಗಾರವನ್ನು ಆರಂಭಿಸಲಾಗಿದೆ.
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 13ರಿಂದ 17ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಏಷ್ಯಾದ ಅತಿದೊಡ್ಡ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಅಭಿವೃದ್ಧಿಪಡಿಸಿರುವ ಲಘು ಯುದ್ಧ ವಿಮಾನ ಎಲ್‌ಸಿಎ-ತೇಜಸ್ “ಭಾರತದ ಪೆವಿಲಿಯನ್” ನ ಪ್ರಮಖ ಆಕರ್ಷಣೆಯಾಗಲಿದೆ.
2020ರ ಸೆಪ್ಟೆಂಬರ್ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಬಿಹಾರದಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು
ಇದು ತೇವ(ಜೌಗು) ಭೂಮಿಯ ಅತ್ಯುತ್ತಮ ಬಳಕೆಯನ್ನು ಉತ್ತೇಜಿಸಲು ಮತ್ತು ಜೈವಿಕ ವೈವಿಧ್ಯತೆ, ಕಾರ್ಬನ್ ಸ್ಟಾಕ್, ಪರಿಸರ-ಪ್ರವಾಸೋದ್ಯಮ ಅವಕಾಶಗಳನ್ನು ಮತ್ತು ಸ್ಥಳೀಯ ಸಮುದಾಯಗಳಿಗೆ ಆದಾಯವನ್ನು ಹೆಚ್ಚಿಸಲು ಮುಂದಿನ ಮೂರು ವರ್ಷಗಳಲ್ಲಿ ಜಾರಿಗೆ ತರಲಾಗುವ ಯೋಜನೆಯಾಗಿದೆ. ಪರಿಸರ ವ್ಯವಸ್ಥೆಯ ಪಾಲಕರಾಗಿ ಸ್ಥಳೀಯ ಸಮುದಾಯಗಳನ್ನು ತೊಡಗಿಸಿಕೊಳ್ಳುವ ವಿಧಾನದೊಂದಿಗೆ, ಅಮೃತ್ ಪಾರಂಪರಿಕ ಸರೋವರಗಳ ಪ್ರಾಮುಖ್ಯತೆ ಮತ್ತು ಅವುಗಳ ಸಂರಕ್ಷಣೆಯನ್ನು ಒತ್ತಿಹೇಳುತ್ತದೆ
“ನೈಸರ್ಗಿಕ ಬೇಸಾಯ”ದ ಅಳವಡಿಕೆಯನ್ನು ಇನ್ನಷ್ಟು ಸುಲಭಗೊಳಿಸಲು 10,000 ಜೈವಿಕ-ಇನ್‌ಪುಟ್ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಲಾಗುವುದು, ಇದು ರಾಷ್ಟ್ರೀಯ ಮಟ್ಟದ ವಿತರಿಸಲಾದ ಸೂಕ್ಷ್ಮ ರಸಗೊಬ್ಬರ ಮತ್ತು ಕೀಟನಾಶಕ ಉತ್ಪಾದನಾ ಜಾಲವನ್ನು ರಚಿಸುತ್ತದೆ. ಇದು ಮುಂದಿನ ಮೂರು ವರ್ಷಗಳಲ್ಲಿ 1 ಕೋಟಿ ರೈತರ ಮೇಲೆ ಪರಿಣಾಮ ಬೀರಲಿದೆ
ಮಿಶ್ತಿ ಒಂದು ಹೊಸ ಕಾರ್ಯಕ್ರಮವಾಗಿದ್ದು, ಇದು ಭಾರತದ ಕರಾವಳಿಯಲ್ಲಿ ಮತ್ತು ಉಪ್ಪಿನ ಭೂಮಿಯಲ್ಲಿ ಮ್ಯಾಂಗ್ರೋವ್ ತೋಟವನ್ನು ಸುಗಮಗೊಳಿಸುತ್ತದೆ. ಕಾರ್ಯಕ್ರಮವು “MGNREGS, ಕ್ಯಾಂಪಾ ಫಂಡ್ ಮತ್ತು ಇತರ ಮೂಲಗಳ ಮೂಲಕ ಕಾರ್ಯನಿರ್ವಹಿಸುತ್ತದೆ.
ಶ್ರೀ ಅನ್ನ ಹೆಸರಿನಲ್ಲಿ ಸಿರಿಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಸಣ್ಣ ರೈತರಿಗೆ ಸರ್ಕಾರದ ವತಿಯಿಂದ ನೀಡಲಾಗುತ್ತದೆ ಎಂದು ಬಜೆಟ್ ನಲ್ಲಿ ಘೋಷಿಸಲಾಗಿದೆ.
ಕೃಷಿ ಕ್ಷೇತ್ರದ ಸ್ಟಾರ್ಟ್ ಅಪ್ ಆರಂಭಿಸುವ ಯುವಕರಿಗೆ ಉತ್ತೇಜನ ನೀಡಲು ನಿಗದಿತ ಮೊತ್ತದ ಅನುದಾನ ಮೀಸಲಿಡಲಾಗುತ್ತದೆ ಎಂದು ಬಜೆಟ್ ನಲ್ಲಿ ಘೋಷಿಸಲಾಗಿದೆ.
ಪರ್ಯಾಯ ರಸಗೊಬ್ಬರಗಳು ಮತ್ತು ರಾಸಾಯನಿಕ ಗೊಬ್ಬರಗಳ ಸಮತೋಲಿತ ಬಳಕೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಉತ್ತೇಜಿಸಲು ಪಿಎಂ ಪ್ರಣಾಮ್ ಯೋಜನೆಯನ್ನು ಪ್ರಕಟಿಸಲಾಗಿದೆ.
ಮರುಬಳಕೆ ಆರ್ಥಿಕತೆಯನ್ನು ಉತ್ತೇಜಿಸಲು ಗೋಬರ್ ಧನ್ ಯೋಜನೆ ಅಡಿಯಲ್ಲಿ 500 ಹೊಸ ವೆಸ್ಟ್ ಟು ವೆಲ್ತ್ ಘಟಕಗಳನ್ನು ಸ್ಥಾಪಿಸಲು ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ
ಕೇಂದ್ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ಮತ್ತು ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಲಾಗಿದೆ
ಬಜೆಟ್ 2023 ರನ್ನು ಮೊದಲ ಅಮೃತ ಕಾಲದ ಬಜೆಟ್ ಎಂದು ಘೋಷಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪ್ರಮುಖ 7 ಅಂಶಗಳ ಅಡಿಯಲ್ಲಿ ಬಜೆಟ್ ಮಂಡಿಸಿದ್ದಾರೆ.
ಚುಟುಕು ಸಮಾಚಾರ
ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ್ದ ಉತ್ತರಾಖಂಡದ ಸ್ತಬ್ಧ ಚಿತ್ರಕ್ಕೆ ಬಹುಮಾನ ದೊರೆತಿದೆ.
ಇಂಟರ್ನ್ಯಾಷನಲ್ ಬ್ಲೂ ಫ್ಲ್ಯಾಗ್ ಟ್ಯಾಗ್ ಅನ್ನು ಸ್ವಚ್ಛ ಮತ್ತು ಪರಿಸರ ಸ್ನೇಹಿ ಬೀಚ್‌ಗಳಿಗೆ ನೀಡಲಾಗುತ್ತದೆ. ಕೇರಳದ ಕಪ್ಪಾಡ್ ಬೀಚ್ ಮಾತ್ರ ಟ್ಯಾಗ್ ಅನ್ನು ಪಡೆದ ಏಕಮಾತ್ರ ಬೀಚ್ ಆಗಿದೆ.
ಭೋಪಾಲ್‌ನ ತಾತ್ಯಾ ಟೋಪಿ ನಗರ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಅನುರಾಗ್ ಸಿಂಗ್ ಠಾಕೂರ್ ಮತ್ತು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಖೇಲೋ ಇಂಡಿಯಾ ಯೂತ್ ಗೇಮ್ಸ್-2022 ಅನ್ನು ಉದ್ಘಾಟಿಸಿದರು.
ಭಾರತದಲ್ಲಿ ಉನ್ನತ ಶಿಕ್ಷಣಕ್ಕೆ ದಾಖಲಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ.
ಭಾರತದಲ್ಲಿ 53 ಹುಲಿ ಮೀಸಲು ಅಭಯಾರಣ್ಯಗಳಲ್ಲಿ 2967 ಹುಲಿಗಳಿವೆ. ಜಗತ್ತಿನ ಶೇ 70ರಷ್ಟು ಹುಲಿಗಳು ಭಾರತದಲ್ಲಿಯೇ ಇವೆ ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರಕಾರ ವರದಿ ನೀಡಿದೆ.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) – ಬೆಂಗಳೂರಿನ ಸಂಶೋಧಕರ ಇತ್ತೀಚಿನ ಅಧ್ಯಯನವು ಕರ್ನಾಟಕದ ಸಂಪೂರ್ಣ ಜೌಗು ಪ್ರದೇಶ ಪರಿಸರ ವ್ಯವಸ್ಥೆಯ ಮೌಲ್ಯವು 7.32 ಲಕ್ಷ ಕೋಟಿ ರೂ. (7,320.6 ಶತಕೋಟಿ) ಆಗಿದೆ ಎಂದು ತೋರಿಸಿದ್ದು, ಇದು ಕ್ರಮೇಣ ವಿವಿಧ ಅಭಿವೃದ್ಧಿ ಕಾರ್ಯಗಳಿಂದ ನಷ್ಟವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ.
NammaKPSC Current Affairs - January 2023
ಚುಟುಕು ಸಮಾಚಾರ
ಜನವರಿ 31ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಫೆಬ್ರವರಿ 1ರಂದು ಬಜೆಟ್ ಮಂಡಿಸಲಾಗುತ್ತದೆ. ಅದಕ್ಕೂ ಮುನ್ನ ಬಜೆಟ್ ಅಧಿವೇಶನದಲ್ಲಿ ಜನವರಿ 31ರಂದು ಆರ್ಥಿಕ ಸಮೀಕ್ಷೆಯನ್ನು ಮಂಡನೆ ಮಾಡಲಾಗುತ್ತದೆ.
2023 ಜನವರಿ 13 ರಿಂದ 29ರ ವರೆಗೆ ಭಾರತದಲ್ಲಿ FIH ಪುರುಷರ ಹಾಕಿ ವಿಶ್ವಕಪ್ ನಡೆಯಿತು.
ಅರಣ್ಯ ಇಲಾಖೆಯು ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಾಲ್ಕು ದಿನಗಳ ಪಕ್ಷಿ ಸಮೀಕ್ಷೆ ನಡೆಯಿತು.
ಚುಟುಕು ಸಮಾಚಾರ
ಜಾಗತಿಕ ತಾಪಮಾನ ಏರಿಕೆಯಂತಹ ಪರಿಸ್ಥಿತಿಯ ನಡುವೆಯೇ ವಿಜ್ಞಾನಿಗಳು ಅಂಟಾರ್ಕ್ಟಿಕಾ ವಲಯದ ಓಝೋನ್ ಪದರದಲ್ಲಿ ಉಂಟಾಗಿರುವ ರಂಧ್ರವು ತನ್ನಷ್ಟಕ್ಕೆ ತಾನೆ ಮುಚ್ಚಿಕೊಳ್ಳುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಷ್ಟ್ರಪತಿಯವರ ಅಧಿಕೃತ ನಿವಾಸ ರಾಷ್ಟ್ರಪತಿ ಭವನದಲ್ಲಿರುವ ಜನಪ್ರಿಯ ಮೊಘಲ್ ಗಾರ್ಡನ್ ಗೆ ಅಮೃತ ಉದ್ಯಾನ ಎಂದು ಮರುನಾಮಕರಣ ಮಾಡಲಾಗಿದೆ.
ಇತರೆ ಪ್ರವಾಸಿ ತಾಣಗಳಲ್ಲಿ ಜೋಶಿಮಠದಂತಹ ವಿಪತ್ತನ್ನು ತಡೆಯಲು ಪ್ರವಾಸೋದ್ಯಮ ಸಚಿವಾಲಯವು ಎಲ್ಲಾ ಪ್ರವಾಸಿ ತಾಣಗಳಲ್ಲಿ ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳು ಮತ್ತು ಪಶ್ಚಿಮ ಘಟ್ಟಗಳಲ್ಲಿನ ಭೂಮಿ ಸಾಮರ್ಥ್ಯ ಕುರಿತು ಅಧ್ಯಯನ ನಡೆಸಲು ಮುಂದಾಗಿದೆ.
1960ರ ಸೆಪ್ಟೆಂಬರ್‌ನ ಸಿಂಧೂ ಜಲ ಒಪ್ಪಂದದ (ಐಡಬ್ಲ್ಯುಟಿ) ಅನುಷ್ಠಾನದ ಬಗ್ಗೆ ಪಾಕಿಸ್ತಾನವು “ನಿರುತ್ಸಾಹ” ತೋರಿದ ನಂತರ ಅದರ ಮಾರ್ಪಾಡಿಗಾಗಿ ಭಾರತವು ಒಪ್ಪಂದದ ನಿಬಂಧನೆಗಳ ಪ್ರಕಾರ ಪಾಕಿಸ್ತಾನಕ್ಕೆ ನೋಟಿಸ್ ನೀಡಿದೆ.
ಚುಟುಕು ಸಮಾಚಾರ
ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಆಗಿರುವ ಸೂರ್ಯನ ಅಧ್ಯಯನದ ಆದಿತ್ಯ ಎಲ್-1ಗಾಗಿ ಸಿದ್ಧತೆ ನಡೆಸಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತನ್ನ ಮೊದಲ ಪೇಲೋಡ್ ವಿಎಲ್‌ಇಸಿಯನ್ನು ಸ್ವೀಕರಿಸಿದೆ.
ವಿವಿಧ ಕ್ಷೇತ್ರಗಳ ಕಾಯಕ ಯೋಗಿಗಳನ್ನು ಗುರುತಿಸಿ ನೀಡಲಾಗುವ ಪದ್ಮ ಪ್ರಶಸ್ತಿಗಳಿಗೆ ಈ ಬಾರಿ ಕರ್ನಾಟಕದ ಎಂಟು ಸಾಧಕರು ಆಯ್ಕೆಯಾಗಿದ್ದಾರೆ. ಕೇಂದ್ರ ಸರಕಾರವು ಪ್ರಶಸ್ತಿ ಪಟ್ಟಿ ಪ್ರಕಟಿಸಿದೆ.
ಮೂರು ದಿನಗಳ ಕಾಲ ಹಂಪಿಯಲ್ಲಿ ನಡೆಯುವ ಹಂಪಿ ಉತ್ಸವ-2023 ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿ ಸಿದರು.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಚಾಕಶೆಟ್ಟಿಹಳ್ಳಿ ಗ್ರಾಮದಲ್ಲಿ ಈಚೆಗೆ ನಡೆಸಿದ ಕ್ಷೇತ್ರ ಕಾರ್ಯದಲ್ಲಿ ‘ಹೊಯ್ಸಳರ ಕಾಲದ ವಿಶೇಷವಾದ ಅಪ್ರಕಟಿತ ವೀರಗಲ್ಲು ಶಾಸನ ಶಿಲ್ಪ’ವನ್ನು ಪತ್ತೆ ಹಚ್ಚಿದೆ.
ಚುಟುಕು ಸಮಾಚಾರ
ಹುಲಿಗಳೂ ಸೇರಿದಂತೆ ಹಲವು ವನ್ಯಜೀವಿಗಳ ಸಂತತಿಗೆ ಕಡಿವಾಣ ಹಾಕಲು ಮುಂದಾಗಿರುವ ಕೇರಳ ಸರ್ಕಾರದ ನಡೆಗೆ ಪರಿಸರವಾದಿಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
74ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿಸುಪ್ರೀಂ ಕೋರ್ಟ್ ನಿಂದ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸುಪ್ರೀಂಕೋರ್ಟ್ ತೀರ್ಪುಗಳು ಹಲವು ಭಾಷೆಗಳಿಗೆ ಭಾಷಾಂತರ ಮಾಡಲಾಗುವುದು.
ಈ ವರ್ಷ (2023) ಭಾರತವು ತನ್ನ 74 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ.
ಚುಟುಕು ಸಮಾಚಾರ
ಅಸ್ಸಾಂ ರಾಜ್ಯದಲ್ಲಿ ಬಾಲ್ಯ ವಿವಾಹಗಳ ವಿರುದ್ಧ ಬೃಹತ್ ಅಭಿಯಾನವನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮಕ್ಕಳಿಗಾಗಿ ಪ್ರಧಾನ ಮಂತ್ರಿ ರಾಷ್ಟ್ರೀಯ ಪ್ರಶಸ್ತಿಯನ್ನು (ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಎಂದೂ ಕರೆಯುತ್ತಾರೆ) ನೀಡಲಾಯಿತು. ಇದನ್ನು ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುತ್ತಾರೆ. ರಾಷ್ಟ್ರಪತಿಗಳು 11 ಮಕ್ಕಳಿಗೆ ಈ ಪ್ರಶಸ್ತಿಯನ್ನು ನೀಡಿದರು.
ಭಾರತೀಯ ವಿಜ್ಞಾನ ಸಂಸ್ಥೆಯ (IISc) ನಾಲ್ವರು ಅಧ್ಯಾಪಕರು ಯುವ ವಿಜ್ಞಾನಿಗಳ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ (INSA) ಪದಕಕ್ಕೆ ಆಯ್ಕೆಯಾಗಿದ್ದಾರೆ.
ಭಾರತದ ಎಲ್ಲಾ ಮೂರು ರಕ್ಷಣಾ ಪಡೆಗಳು, ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಇತ್ತೀಚೆಗೆ AMPHEX ನಲ್ಲಿ ಭಾಗವಹಿಸಿದ್ದವು. AMPHEX ತ್ರಿ-ಸೇನಾ ವ್ಯಾಯಾಮವಾಗಿದ್ದು, ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಡೆಯಿತು.
ಭಾರತವು ತನ್ನ 13 ನೇ ರಾಷ್ಟ್ರೀಯ ಮತದಾರರ ದಿನವನ್ನು ಜನವರಿ 25 ರಂದು ಆಚರಿಸುತ್ತಿದೆ
ಚುಟುಕು ಸಮಾಚಾರ
ತೀವ್ರವಾದ ಗ್ಯಾಸ್ಟ್ರಿಕ್ ಸಮಸ್ಯೆ ಸೃಷ್ಟಿಸುವ ನೋರೊ ವೈರಸ್ ಸೋಂಕು ಕೇರಳದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ತಗುಲಿದೆ.
ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಬಹುರಾಜ್ಯ ಸಹಕಾರ ಸಂಘಗಳ (ಎಂಎಸ್ ಸಿಎಸ್) ಕಾಯಿದೆ 2002ರ ಅಡಿ ರಾಷ್ಟ್ರೀಯ ಮಟ್ಟದ ಬಹುರಾಜ್ಯ ಸಹಕಾರ ರಫ್ತು ಸಂಘವನ್ನು ಸ್ಥಾಪಿಸಿ, ಉತ್ತೇಜನ ನೀಡುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ಕಲ್ವರಿ ದರ್ಜೆಯ ಐದನೇ ಜಲಾಂತರ್ಗಾಮಿ ನೌಕೆ ಐಎನ್ಎಸ್ ವಾಗಿರ್ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದೆ.
ಪ್ರತಿ ವರ್ಷ ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ
ಚುಟುಕು ಸಮಾಚಾರ
ಕೆನಡಾದ ಮ್ಯಾಕ್‌ಗಿಲ್ ವಿಶ್ವವಿದ್ಯಾನಿಲಯ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಖಗೋಳ ಶಾಸ್ತ್ರಜ್ಞರು ಪುಣೆಯ ಜೈಂಟ್ ಮೆಟ್ರೆವೇವ್ ರೇಡಿಯೊ ಟೆಲಿಸ್ಕೋಪ್ (ಜಿಎಂಆರ್‌ಟಿ) ದತ್ತಾಂಶದ ಮೂಲಕ ದೂರದ ನಕ್ಷತ್ರಪುಂಜದ ಪರಮಾಣು ಹೈಡ್ರೋಜನ್‌ನಿಂದ ಹೊರಹೊಮ್ಮಿದ ರೇಡಿಯೊ ಸಂಕೇತಗಳನ್ನು ಪತ್ತೆ ಮಾಡಿದ್ದಾರೆ.
ಮಾಲ್ಡೀವ್ಸ್‌ನಲ್ಲಿ ಕ್ರೀಡಾ ಮೂಲಸೌರ್ಕಯಗಳ ಅಭಿವೃದ್ಧಿಗಾಗಿ ಭಾರತವು ಸುಮಾರು ರೂ.3,200 ಕೋಟಿಗೆ ರಿಯಾಯಿತಿ ಸಾಲದ ನೆರವು ವಿಸ್ತರಿಸಿದೆ.
ಭಾರತದ ಇತಿಹಾಸಕ್ಕೆ ಅಪ್ರತಿಮ ಕೊಡುಗೆಯನ್ನು ನೀಡಿರುವ ಸುಭಾಷ್ ಚಂದ್ರ ಬೋಸ್ ಅವರ 126ನೇ ಜನ್ಮದಿನ ಹಿನ್ನೆಲೆಯಲ್ಲಿ ನೇತಾಜಿಯವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಗೌರವ ಸಲ್ಲಿಸಿದ್ದಾರೆ.
ಚುಟುಕು ಸಮಾಚಾರ
ಕಸ್ತೂರ್ ಬಾ ಗಾಂಧಿಯವರ ಜೀವನದ ಮುಖ್ಯ ಘಟನೆಗಳನ್ನು ಆಧರಿಸಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ ‘ತಾಯಿ ಕಸ್ತೂರ್ ಗಾಂಧಿ’ ಕನ್ನಡ ಚಿತ್ರವು ಹತ್ತನೇ ನೊಯಿಡಾ ಅಂತರರಾಷ್ಟ್ರೀ ಯ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ.
ವಾರ್ಷಿಕ ಶೈಕ್ಷಣಿಕ ಸ್ಥಿತಿಗತಿ ವರದಿಯಲ್ಲಿ (ಆಸರ್) ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಏರಿಕೆ ಶೈಕ್ಷಣಿಕ ಪ್ರಗತಿಯಲ್ಲಿ ಕರ್ನಾಟಕ ರಾಜ್ಯವೇ ಉತ್ತಮವಾಗಿದೆ ಎಂದು ಹೇಳಲಾಗಿದೆ. ಹೆಣ್ಣುಮಕ್ಕಳ ದಾಖಲಾತಿ ಹೆಚ್ಚಳವಾಗಿದೆ. ಇದಕ್ಕೆ ಸುಕನ್ಯಾ ಸಮೃದ್ಧಿಯೋಜನೆ ಮತ್ತು ಬೇಟಿ ಬಚಾವೋ, ಬೇಟಿ ಪಡಾವೋ ಮುಂತಾದ ಕಾರ್ಯಕ್ರಮಗಳ ಸಹಯೋಗ ಮತ್ತುಪರಿಣಾಮಕಾರಿ ಜಾರಿಯೂ ಕಾರಣವಾಗಿದೆ.
ಕರ್ನಾಟಕ ರಾಜ್ಯದಲ್ಲಿ ಬಾಲ್ಯ ವಿವಾಹವನ್ನು ತಡೆಗಟ್ಟಲು ‘ಸ್ಪೂರ್ತಿ ಯೋಜನೆ’ ಆರಂಭಿಸಲಾಗಿದ್ದು, ಇದಕ್ಕಾಗಿ ರಾಜ್ಯ ಸಚಿವ ಸಂಪುಟ 12.51 ಕೋಟಿ ರೂಪಾಯಿ ಬಿಡುಗಡೆ ಮಾಡಲಿದೆ. ಯೋಜನೆಯ ಭಾಗವಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ವರ್ಷಪೂರ್ತಿ ಜಾಗೃತಿ ಅಭಿಯಾನ ನಡೆಯಲಿದೆ.
ಚುಟುಕು ಸಮಾಚಾರ
ಚತ್ತೀಸ್ಗಢದ ಕಾಂಗರ್ ವ್ಯಾಲಿ ರಾಷ್ಟ್ರೀಯ ಉದ್ಯಾನವನದಲ್ಲಿ ಅಪರೂಪದ ಕಿತ್ತಳೆ ಬಣ್ಣದ ಬಾವಲಿ ಪತ್ತೆಯಾಗಿದೆ
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಎಡಭಾಗದ ಅಂಚಿಗೆ ಹೊಂದಿಕೊಂಡಿರುವ ‘ಮೀಸಲು ಅರಣ್ಯ ಪ್ರದೇಶವಾಗಿದ್ದ ಉತ್ತರೆಗುಡ್ಡ ಅರಣ್ಯ ಪ್ರದೇಶವನ್ನು ಅರಣ್ಯ ಇಲಾಖೆ ವನ್ಯಜೀವಿಧಾಮ ಎಂದು ಘೋಷಿಸಿದೆ.
ಸಾರ್ವಜನಿಕರ ಭದ್ರತೆ ಹಾಗೂ ಅಪರಾಧ ಪ್ರಕರಣಗಳ ನಿಯಂತ್ರಣಕ್ಕಾಗಿ ರೂಪಿಸಿರುವ ಪೊಲೀಸ್ ಗಸ್ತುವ್ಯವಸ್ಥೆಸಂಪೂರ್ಣವಾಗಿ ಸ್ಮಾರ್ಟ್ ಆಗಿದೆ. ಪುಸ್ತಕ ಆಧಾರಿತ ಗಸ್ತುಪದ್ಧತಿಯನ್ನು ಪೂರ್ಣ ಪ್ರಮಾಣದಲ್ಲಿರದ್ದುಪಡಿಸಿ ‘ಸ್ಮಾರ್ಟ್ ಇ-ಬೀಟ್’ ಪದ್ಧತಿಯನ್ನು ರಾಜ್ಯಾದ್ಯಂತ ಜಾರಿಗೆ ತರಲಾಗಿದೆ.
ದೇಶದ ಎಲ್ಲಾ ರಾಜ್ಯಗಳ ಪೊಲೀಸರಿಗೆ ಒಂದೇ ರೀತಿಯ ಸಮವಸ್ತ್ರ ಜಾರಿಗೆ ತರುವ ಸಂಬಂಧ ಕೇಂದ್ರ ಸರ್ಕಾರ ಕಳುಹಿಸಿದ್ದ ಒಂದು ದೇಶ, ಒಂದು ಸಮವಸ್ತ್ರ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಪ್ರಧಾನಿ ಮೋದಿಯವರು ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಕೊಡೆಕಲ್ ಗ್ರಾಮದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಎಡದಂಡೆ ನಾಲೆಯನ್ನು ಉದ್ಘಾಟಿಸಿದರು.
ಚುಟುಕು ಸಮಾಚಾರ
ಎಲ್ಲಾ ಅರ್ಹ ಖಾತೆಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಅನ್ನು ಸಕ್ರಿಯಗೊಳಿಸಿದ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದೆ.
ಡಿಜಿಟಲ್ ಇಂಡಿಯಾ ಪ್ರಶಸ್ತಿಗಳ ಏಳನೇ ಆವೃತ್ತಿಯನ್ನು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ನವದೆಹಲಿಯಲ್ಲಿ ಪ್ರದಾನ ಮಾಡಿದರು.” ಡಿಜಿಟಲ್ ಇಂಡಿಯಾದ ದೃಷ್ಟಿಕೋನವನ್ನು ಸಾಧಿಸಲು ಸರ್ಕಾರಿ ಘಟಕಗಳನ್ನು ಮಾತ್ರವಲ್ಲದೆ ಸ್ಟಾರ್ಟ್‌ಅಪ್‌ಗಳನ್ನು ಗುರುತಿಸಿ, ಪ್ರೇರೇಪಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ”
ಬುಡಕಟ್ಟು ಸಮುದಾಯದ ಮಹಿಳೆಯರು ಹೆಚ್ಚು ಮಕ್ಕಳನ್ನು ಹೆರುವುದನ್ನು ಉತ್ತೇಜಿಸಲು ಸಿಕ್ಕಿಂ ಸರ್ಕಾರವು ಪ್ರೋತ್ಸಾಹಧನವನ್ನು ಘೋಷಿಸಿದೆ
ಭಾರತ ಮತ್ತು ಫ್ರಾನ್ಸ್ ನೌಕಾಪಡೆಯ 21ನೇ ಜಂಟಿ ಕವಾಯತು ಪಶ್ಚಿಮ ಸಮುದ್ರತೀರದಲ್ಲಿ ಆರಂಭಗೊಂಡಿದೆ.
ಚುಟುಕು ಸಮಾಚಾರ
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEF) ವನ್ಯಜೀವಿ (ಸಂರಕ್ಷಣೆ) ಕಾಯಿದೆ, 1972 ರ ಅನುಸೂಚಿ III ರ ಅಡಿಯಲ್ಲಿ ನೀಲಕುರಿಂಜಿ (ಸ್ಟ್ರೋಬಿಲಾಂಥೆಸ್ ಕುಂಥಿಯಾನ) ಅನ್ನು ಸಂರಕ್ಷಿತ ಸಸ್ಯಗಳ ಪಟ್ಟಿಯಲ್ಲಿ ಸೇರಿಸಿದೆ.
ಸಾಮಾಜಿಕ ಮತ್ತು ಭಾವನಾತ್ಮಕ ಕಲಿಕೆಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ ತ್ರಿಪುರಾ ಸರ್ಕಾರವು ‘ಸಹರ್ಶ್’ ಎಂಬ ವಿಶೇಷ ಶಿಕ್ಷಣ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
2020ರಿಂದೀಚೆಗೆ ಭಾರತದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜಾನುವಾರುಗಳ ಮರಣಕ್ಕೆ ಕಾರಣವಾಗಿರುವ ಚರ್ಮಗಂಟು ರೋಗ (ಎಲ್‌ಎಸ್‌ಡಿ)ಕ್ಕೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್)-ಭಾರತೀಯ ಪಶುವೈದ್ಯಕೀಯ ಸಂಶೋಧನೆ ಸಂಸ್ಥೆ (ಐವಿಆರ್’ಐ) ಲಸಿಕೆಯೊಂದನ್ನು ಅಭಿವೃದ್ಧಿಪಡಿಸಿದೆ.
ಚುಟುಕು ಸಮಾಚಾರ
ಪ್ರತಿ ವರ್ಷ ಜನವರಿ 5 ರಂದು ರಾಷ್ಟ್ರೀಯ ಪಕ್ಷಿ ದಿನವನ್ನು ಆಚರಣೆ ಮಾಡಲಾಗುತ್ತದೆ.
ಜನೆವರಿ 15, ಭಾರತೀಯ ಸೇನೆಯ 75ನೇ ಸೇನಾ ದಿನ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯಿತು. ರಾಷ್ಟ್ರಕ್ಕೇ ನಿಸ್ವಾರ್ಥ ಸೇವೆ ಸಲ್ಲಿಸಿದ ಸೈನಿಕರನ್ನು ಗೌರವಿಸಲಾಗುತ್ತದೆ. ಈ ದಿನವನ್ನು ಎಲ್ಲಾ ಸೇನಾ ಕಮಾಂಡ್ ಪ್ರಧಾನ ಕಚೇರಿಗಳಲ್ಲಿ ಆಚರಣೆ ಮಾಡಲಾಯಿತು
ಪ್ರತಿ ಕುಟುಂಬಕ್ಕೆ ಮನೆ ನಿರ್ವಹಣೆ ಮಾಡುವ ಹೆಣ್ಣು ಮಕ್ಕಳಿಗಾಗಿ ಮುಂದಿನ ಬಜೆಟ್ ನಲ್ಲಿ ವಿಶೇಷ ಕಾರ್ಯಕ್ರಮವನ್ನು ನೀಡಲಾಗುವುದು. ಸ್ತ್ರೀ ಸಾಮರ್ಥ್ಯದ ಜೊತೆಗೆ ಸ್ತ್ರೀ ಶಕ್ತಿ ಯೋಜನೆಯಡಿ ಮನೆ ನಡೆಸಲು, ಕೋವಿಡ್ ಉಪಚಾರ, ಆರೋಗ್ಯ, ಮುಂತಾದವುಕ್ಕೆ ಸಹಾಯವಾಗುವ ವಿಶೇಷ ಯೋಜನೆ ಇದಾಗಿದೆ.
ಚುಟುಕು ಸಮಾಚಾರ
ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿರುವ 2023ರಲ್ಲಿ ಭೇಟಿ ನೀಡಬೇಕಾದ 52 ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಭಾರತದಿಂದ ಕೇರಳ ಸ್ಥಾನ ಪಡೆದುಕೊಂಡಿದೆ. ವಾರ್ಷಿಕ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೇರಳವು 13ನೇ ಸ್ಥಾನದಲ್ಲಿದೆ ಮತ್ತು ಭಾರತದಿಂದ ಜಾಗ ಪಡೆದ ಏಕೈಕ ಪ್ರವಾಸಿ ತಾಣವಾಗಿದೆ.
ಉತ್ತರಾಖಂಡದ ಭೂಕುಸಿತ ವಲಯವಾಗಿ ಪರಿಗಣಿಸಿರುವ ಜೋಶಿಮಠ ಪಟ್ಟಣ ಕೇವಲ 12 ದಿನಗಳಲ್ಲಿ 5.4 ಸೆಂ.ಮೀನಷ್ಟು ವೇಗವಾಗಿ ಕುಸಿದಿರುವುದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬಿಡುಗಡೆ ಮಾಡಿರುವ ಕಾರ್ಟೊಸ್ಯಾಟ್ -2 ಎಸ್ ಉಪಗ್ರಹ ಚಿತ್ರಗಳಲ್ಲಿ ಕಂಡುಬಂದಿದೆ.
ತೆಲಂಗಾಣದಲ್ಲಿ ಶಾಲೆಗೆ ಹೋಗುವ ಹದಿಹರೆಯದ ವಿದ್ಯಾರ್ಥಿಗಳಲ್ಲಿ ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ‘ಸೈಬರ್ ಅಂಬಾಸಿಡರ್ಸ್ ಪ್ಲಾಟ್ಫಾರ್ಮ್’ (ಸಿಎಪಿ) ಅನ್ನು ಪ್ರಾರಂಭಿಸಲಾಗಿದೆ.
ರಾಜಕೀಯ, ಆರ್ಥಿಕ, ಸಾಮಾಜಿಕ, ಪರಿಸರ, ಸಾಂಸ್ಕೃತಿಕ ಮತ್ತು ತಾಂತ್ರಿಕ ವಿಷಯಗಳ ಕುರಿತು ಸಹಕರಿಸಲು ರಾಷ್ಟ್ರಗಳ ಪ್ರಮುಖ ಗುಂಪಾಗಿ 2023 ರ ಜನವರಿ 12 ಮತ್ತು 13 ರಂದು ಭಾರತವು ಶೃಂಗಸಭೆಯನ್ನು ಆಯೋಜಿಸಿತ್ತು. ಗೌರವಾನ್ವಿತ ಪ್ರಧಾನ ಮಂತ್ರಿಯವರು ಈ ಶೃಂಗಸಭೆಯನ್ನು ಉದ್ಘಾಟಿಸಿದರು.
ಚುಟುಕು ಸಮಾಚಾರ
ಸೇತುಸಮುದ್ರಂ ಹಡಗು ಕಾಲುವೆ ಯೋಜನೆಯನ್ನು ವಿಳಂಬವಿಲ್ಲದೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿದೆ.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ಮೊದಲ ಬಾರಿಗೆ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ದೂರದ ಮತ್ತು ಗುಡ್ಡಗಾಡು ಟೆಥಾನ್ ಹಳ್ಳಿಯ ಗ್ರಾಮಕ್ಕೆ ವಿದ್ಯುತ್ ತಲುಪಿದೆ
ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅತಿ ಉದ್ದದ ನದಿ ವಿಹಾರ ಬೋಟ್ ಎಂವಿ ಗಂಗಾ ವಿಲಾಸ್ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಲಿದ್ದಾರೆ. ಇದೇ ವೇಳೆ, ವಾರಣಾಸಿಯ ಗಂಗಾ ನದಿಯ ದಡದಲ್ಲಿ ‘ಟೆಂಟ್ ಸಿಟಿ’ ಕೂಡ ಉದ್ಘಾಟಿಸುವರು.
ಚುಟುಕು ಸಮಾಚಾರ
ಭೂಮಿಯ ಸುತ್ತ 38 ವರ್ಷಗಳ ಕಾಲ ಸುತ್ತು ಹಾಕಿದ್ದ, ನಿಷ್ಕ್ರಿಯ ಉಪಗ್ರಹವು ನಿರೀಕ್ಷೆಯಂತೇ ಭೂಮಿಗೆ ಬಿದ್ದಿದೆ ಎಂದು ನಾಸಾ ತಿಳಿಸಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಹಿತಿಯ ಪ್ರಕಾರ, 2022ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯು ದೇಶದಲ್ಲಿಯೇ ಅತ್ಯಂತ ಕಲುಷಿತ ನಗರವಾಗಿದೆ.
ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಡತನ ರೇಖೆಗಿಂತ ಕೆಳಗಿರುವ (ಬಿ.ಪಿ.ಎಲ್) ಕುಟುಂಬಗಳ ಗೃಹ ವಿದ್ಯುತ್ ಬಳಕೆದಾರಿಗೆ (ಎಸ್ಸಿ, ಎಸ್ಟಿ, ಭಾಗ್ಯಜ್ಯೋತಿ/ ಕುಟೀರ ಜ್ಯೋತಿ ಬಳಕೆದಾರರನ್ನು ಒಳಗೊಂಡಂತೆ) ಮಾಸಿಕ 75 ಯೂನಿಟ್ವರೆಗೆ ಉಚಿತ ವಿದ್ಯುತ್ ಒದಗಿಸುವ ಅಮೃತ ಜ್ಯೋತಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ
ಸುದ್ದಿಯಲ್ಲಿ ಏಕಿದೆ? ಕನ್ನಡದ ಹೆಸರಾಂತ ಸಾಹಿತಿ ಸಾರಾ ಅಬೂಬಕ್ಕರ್ (87) ವಯೋಸಹಜ ಕಾರಣಗಳಿಂದ ನಿಧನ ಹೊಂದಿದ್ದಾರೆ ಸಾರಾ ಅಬೂಬಕ್ಕರ್ • ಇವರು ಕಾಸರಗೋಡಿನ ಚಂದ್ರಗಿರಿ ತೀರದ ‘ಪುದಿಯಾ ಪುರ್ (ಹೊಸಮನೆ) ತರವಾಡು ಮನೆಯಲ್ಲಿ 1936ರಲ್ಲಿ ಜನಿಸಿದ್ದರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಕಾಸರಗೋಡಿನಲ್ಲಿ ಹೈಸ್ಕೂಲ್‌ವರೆಗೆ ಶಿಕ್ಷಣ ಪಡೆದರು. ಅರೆಬಿಕ್ ಕಲಿತಿದ್ದ ಅಜ್ಜಿ ಹೇಳುತ್ತಿದ್ದ ಕಥೆಗಳಿಂದ ಆಕರ್ಷಿತರಾಗಿ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದರು. • ಮಹಿಳಾ ಸಮಾನತೆ, ಮಹಿಳಾ ಸಬಲೀಕರಣದ ಚಿಂತನೆ ಹೊಂದಿರುವ ಇವರು ಬಳಿಕ ಬರಹಗಾರರಾಗಿ ಜನಪ್ರಿಯರಾದರು. • […]
ಹುಬ್ಬಳ್ಳಿ ಧಾರವಾಡದಲ್ಲಿ ಜನವರಿ 12 ರಿಂದ 16ರ ತನಕ ನಡೆಯಲಿರುವ 26 ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
ಚುಟುಕು ಸಮಾಚಾರ
ಚೀನಾದಲ್ಲಿಇದೇ ಮೊದಲ ಬಾರಿಗೆ ಜಲಜನಕ (ಹೈಡ್ರೋ ಜನ್) ಆಧಾರಿತ ಸೆಮಿ ಹೈಸ್ಪೀಡ್ ಸ್ಪೀಡ್ ಪ್ಯಾಸೆಂಜರ್ ರೈಲು ಚಾಲನೆಗೊಂಡಿದೆ.
ಆರು ಸಂಶೋಧಕರಿಗೆ ಆಯಾ ಕ್ಷೇತ್ರಗಳಲ್ಲಿನ ಅವರ ಕಾರ್ಯವನ್ನು ಗುರುತಿಸಿ 2022ನೇ ಸಾಲಿನ ಇನ್ಫೋಸಿಸ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
“ಅವಧಿ ಮೀರಿದ ನೋಂದಾಯಿತ ವಾಹನಗಳ ನಾಶ ಪಡಿಸುವ ನೀತಿ’ (ಗುಜರಿ ನೀತಿ) ಗೆ ಕರ್ನಾಟಕ ರಾಜ್ಯ ಸಚಿವ ಸಂಪುಟ ಅನುಮೋದಿಸಿತು.
ಪರಿಶಿಷ್ಟರ ಒಳಮೀಸಲಾತಿ ಕುರಿತು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ನೀಡಿರುವ ವರದಿ ಅವಾಸ್ತವಿಕ, ಅವೈಜ್ಞಾನಿಕ, ಅಂವಿಧಾನಿಕವಾಗಿದ್ದು, ಈ ವರದಿಯನ್ನು ತಿರಸ್ಕರಿಸುವಂತೆ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಪ್ರತಿಭಟನೆ ಮಾಡುತ್ತಿದೆ.
ಚುಟುಕು ಸಮಾಚಾರ
ಇತಿಹಾಸ ಪ್ರಸಿದ್ಧ ಉತ್ತರಾಖಂಡ್ನ ಜೋಶಿಮಠ ಅಳವಿನಂಚಿಗೆ ತಲುಪುತ್ತಿದ್ದು, ಈ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತುರ್ತು ಪರಿಶೀಲನೆ ನಡೆಸಲು ಸುಪ್ರೀಕೋರ್ಟ್ ನಿರಾಕರಿಸಿದೆ.
ರಾಷ್ಟ್ರೀಯ ಹಸಿರು ಜಲಜನಕ (ಹೈಡ್ರೋ ಜನ್) ಮಿಷನ್ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಅಪರಾಧದ ದೃಶ್ಯಗಳಿಂದ ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸುವಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ವಿಧಿವಿಜ್ಞಾನದ ಕೋರ್ಸ್‌ಗಳನ್ನು ನೀಡಲು ರಾಜ್ಯ ಸರ್ಕಾರವು ಪ್ರತ್ಯೇಕ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಚಿಂತನೆ ನಡೆಸುತ್ತಿದೆ.
ಚುಟುಕು ಸಮಾಚಾರ
ದೇಶಾದ್ಯಂತ ಎಲ್ಲಾ ವಲಯಗಳಾದ್ಯಂತ ‘ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್'(ಐಎಸ್‌ಟಿ) ಕಾಲಮಾನವನ್ನು ಕಡ್ಡಾಯಗೊಳಿಸಲು ಕೇಂದ್ರ ಸರಕಾರ ಮುಂದಾಗಿದ್ದು, ಇದಕ್ಕಾಗಿ ಪ್ರತ್ಯೇಕ ನೀತಿಯೊಂದನ್ನು ಹೊರತರಲಿದೆ.
17ನೇ ಪ್ರವಾಸಿ ಭಾರತೀಯ ದಿವಸ ಸಮ್ಮೇಳನವು ಮಧ್ಯಪ್ರದೇಶ ಸರಕಾರದ ಸಹಯೋಗದಲ್ಲಿ 2023ರ ಜನವರಿ 8ರಿಂದ 10ರವರೆಗೆ ಇಂದೋರ್‌ನಲ್ಲಿ ನಡೆಯಲಿದೆ.
ಚುಟುಕು ಸಮಾಚಾರ
ಚುಟುಕು ಸಮಾಚಾರ
ಒಡಿಶಾ ಸಿಎಂ ನವೀನ್ ಪಟ್ನಾಯಕ್ ವಿಶ್ವದ ಅತಿ ದೊಡ್ಡ ಹಾಕಿ ಸ್ಟೇಡಿಯಂನ್ನು ರೂರ್ಕೆಲಾದಲ್ಲಿ ಉದ್ಘಾಟಿಸಿದ್ದಾರೆ.
ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಸ್ವದೇಶ್ ದರ್ಶನ್ ಯೋಜನೆ ಆರಂಭಿಸಿದ್ದು, ಈ ಸ್ವದೇಶ್ ದರ್ಶನ್ 2.0 ಯೋಜನೆಗೆ ಹಂಪಿ ಹಾಗೂ ಮೈಸೂರು ಆಯ್ಕೆಯಾಗಿವೆ.
ಏಲಕ್ಕಿ ನಗರವೆಂದೆ ಪ್ರಸಿದ್ಧಿಯಾಗಿರುವ ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 2023 ಜನೇವರಿ 6,7 ಮತ್ತು 8 ರಂದು ನಡೆಯಲಿದೆ.
ಚುಟುಕು ಸಮಾಚಾರ
ಮಹಿಳಾ ಶಿಕ್ಷಣದ ಪ್ರವರ್ತಕಿ ಸಾವಿತ್ರಿಬಾಯಿ ಫುಲೆ ಅವರ 174 ನೇ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಟ್ವೀ ಟ್ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ. ಇದೇ ವೇಳೆ 18ನೇ ಶತಮಾನದಲ್ಲಿ ವಸಾಹತುಶಾಹಿ ಸಾಮ್ರಾಜ್ಯದ ವಿರುದ್ಧ ಹೋರಾಡಿದ ತಮಿಳುನಾಡಿನ ವೇಲು ನಾಚಿಯಾರ್ ಜನ್ಮದಿನಕ್ಕೆ ಶುಭ ಕೋರಿದ್ದಾರೆ.
ನೋಟುಗಳ ರದ್ದು ತಪ್ಪಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಈ ಸಂಬಂಧ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದೆ.
ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) 2024 ರಲ್ಲಿ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಕೈಗೊಳ್ಳಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಚುಟುಕು ಸಮಾಚಾರ
ದೇಶದಲ್ಲಿ ಅಳಿವಿನಂಚಿನಲ್ಲಿರುವ ಹಿಮಚಿರತೆಗಳ (ಬಿಗ್ ಕ್ಯಾಟ್ಸ್) ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ಅಧ್ಯಯನವೊಂದು ಮಾಹಿತಿ ನೀಡಿದೆ
ವಿಶ್ವದ ಅತ್ಯಂತ ಎತ್ತರದ ಕದನ ಭೂಮಿ ಭಾರತದ ಸಿಯಾಚಿನ್ ನೀರ್ಗಲ್ಲಿನ ಕುಮಾರ್ ಪೋಸ್ಟ್ ಯುದ್ಧಭೂಮಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಮೊದಲ ಮಹಿಳಾ ಅಧಿಕಾರಿ ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಅಧಿಕಾರಿ ಕ್ಯಾಪ್ಟನ್ ಶಿವ ಚೌಹಾಣ್ ಆಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ನಾಗ್ಪುರ ವಿವಿಯಲ್ಲಿ ನಡೆಯುವ 108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಉದ್ಘಾಟನಾ ಅಧಿವೇಶನವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಮಾತನಾಡಿದರು.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಭೂಪೇಂದ್ರ ಯಾದವ್ ಅವರು ಚಾಮರಾಜನಗರ ಜಿಲ್ಲೆಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ವನ್ಯಜೀವಿ ಸಫಾರಿ ಕಾರ್ಯಕ್ರಮ ‘ಬಂಡಿಪುರ ಯುವ ಮಿತ್ರ’ಕ್ಕೆ ಚಾಲನೆ ನೀಡಿದರು.
ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಜ.02 ರಂದು ಸಂಜೆ ಲಿಂಗೈಕ್ಯರಾಗಿದ್ದು ಅವರ ಅಂತ್ಯಕ್ರಿಯೆ ಆಶ್ರಮದ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು
-ಆಡಳಿತ ಯೋಜನೆಯನ್ನು ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನ್ (ನೇವಾ) ಮೂಲಕ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಮಾಜಿ ಎಂಎಲ್‌ಸಿ ಮತ್ತು ವಕೀಲ ರಮೇಶ್ ಬಾಬು ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ಕರ್ನಾಟಕ ಹೈಕೋರ್ಟ್ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದೆ.
ಚುಟುಕು ಸಮಾಚಾರ
ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಒಪ್ಪಂದಡಿ ತಮ್ಮ ರಾಷ್ಟ್ರಗಳಲ್ಲಿರುವ ಪರಮಾಣು ಸ್ಥಾವರಗಳ ಪಟ್ಟಿಯನ್ನು ವಿನಿಮಯ ಮಾಡಿಕೊಂಡಿದ್ದಾರೆ. ಈ ಪದ್ಧತಿ 32 ವರ್ಷಗಳಿಂದ ನಡೆದುಕೊಂಡು ಬಂದಿದೆ.
“BRO ದ ಅರುಣಾಂಕ್ ಯೋಜನೆ ಅರುಣಾಚಲ ಪ್ರದೇಶದ TCC-ಮಜಾ ರಸ್ತೆಯಲ್ಲಿರುವ ಉತ್ತರ ಗಡಿಯುದ್ದಕ್ಕೂ ಆಯಕಟ್ಟಿನ ಸ್ಥಳವಾದ ಮಜಾಗೆ ಸಂಪರ್ಕವನ್ನು ಸಾಧಿಸಿದೆ.
ಭಾರತದ ನಿರುದ್ಯೋಗ ದರವು ಡಿಸೆಂಬರ್‌ನಲ್ಲಿ ಶೇಕಡಾ 8.3 ಕ್ಕೆ ಏರಿದ್ದು, ಇದು 16 ತಿಂಗಳುಗಳಲ್ಲಿ ಅತ್ಯಧಿಕ ದರವಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಅಂಕಿ ಅಂಶಗಳು ತಿಳಿಸಿವೆ.
18-21 ವರ್ಷ ವಯಸ್ಸಿನ ಬಾಲಕಿಯರಿಗಾಗಿ ಆರು ಆಫ್ಟರ್ ಕೇರ್ ಹೋಮ್‌ಗಳ ಸ್ಥಾಪನೆಗೆ ಕರ್ನಾಟಕ ಮಕ್ಕಳ ರಕ್ಷಣಾ ನಿರ್ದೇಶನಾಲಯವು ಚಿಂತನೆ ನಡೆಸಿದೆ.
ಹಂಪಿ ದರೋಜಿ ಪಕ್ಷಿಗಳ ಪಟ್ಟಿಗೆ ಈಗ ಮರದ ಹಕ್ಕಿ ಎಂದೇ ಪರಿಗಣಿತವಾಗಿರುವ ಮಚ್ಚೆಯುಳ್ಳ ಮರದ ಗೂಬೆ ಸೇರ್ಪಡೆಯಾಗಿದೆ.
NammaKPSC Current Affairs - December 2022
ಚುಟುಕು ಸಮಾಚಾರ
ಸಾರ್ವಕಾಲಿಕ ಶ್ರೇಷ್ಠ ಆಟಗಾರ ವಿಶ್ವ ಫುಟ್ಬಾಲ್ ರಂಗದಲ್ಲಿ ಕಪ್ಪು ಮುತ್ತು (Black Pearl) ಎಂದೇ ಖ್ಯಾತಿ ಗಳಿಸಿದ್ದ ಬ್ರೆಜಿಲ್ ಫುಟ್ ಬಾಲ್ ಆಟಗಾರ ಪೀಲೆ ತಮ್ಮ 82 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಛತ್ತೀಸ್‌ಗಢ ಪೊಲೀಸರ ಮಾದಕ ದ್ರವ್ಯ ಮತ್ತು ಅಕ್ರಮ ಮದ್ಯ ವಿರೋಧಿ ಅಭಿಯಾನ ‘ನಿಜಾತ್’ ಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆತ್ತಿದ್ದು, ಇಂಟರ್‌ನ್ಯಾಶನಲ್ ಅಸೋಸಿಯೇಷನ್ ಆಫ್ ಚೀಫ್ಸ್ ಆಫ್ ಪೋಲೀಸ್ (IACP), ಪ್ರಶಸ್ತಿ ಲಭಿಸಿದೆ.
ಭಾರತೀಯ ವಾಯುಪಡೆಯು ಸುಖೋಯ್ ಸು-30 ಯುದ್ಧ ವಿಮಾನದ ಮೂಲಕ ಬ್ರಹ್ಮೋಸ್ ವಾಯು ಉಡಾವಣಾ ಕ್ಷಿಪಣಿಯ ಸುಧಾರಿತ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.
ಡಿಸೆಂಬರ್ 29 ಕವಿ ಕುವೆಂಪು ಅವರ 118 ನೇ ಜನ್ಮ ದಿನಾಚರಣೆಯಾಗಿದ್ದು ಕರ್ನಾಟಕ ಸರ್ಕಾರ 2015 ರಿಂದ ಇವರ ಹುಟ್ಟು ಹಬ್ಬವನ್ನು ವಿಶ್ವಮಾನವ ದಿನವನ್ನಾಗಿ ಆಚರಿಸುತ್ತಿದೆ.
ವಿಧಾನಸಭಾ ಚುನಾವಣಾ ಸನ್ನಿಹದಲ್ಲಿರುವಂತೆಯೇ ಉತ್ತರ ಕರ್ನಾಟಕ ಜನರ ಬಹು ದಿನಗಳ ಬೇಡಿಕೆಯಾಗಿದ್ದ ಕಳಸಾ- ಬಂಡೂರಿ ಯೋಜನೆಯ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಶಕ್ತಿ ಆಯೋಗ ಅನುಮತಿ ನೀಡಿದೆ.
ಚುಟುಕು ಸಮಾಚಾರ
ಗಿಗ್ ಕೆಲಸಗಾರರ ವ್ಯಾಪ್ತಿಗೆ ಬರುವ ಡೆಲಿವರಿ ಬಾಯ್‌ಗಳು, ಕ್ಯಾಬ್ ಓಡಿಸುವ ಚಾಲಕರು, ಗುತ್ತಿಗೆ ಆಧಾರದ ಮೇಲೆ ಅಥವಾ ಬೇಡಿಕೆ ಆಧಾರದ ಮೇಲೆ ಕೆಲಸಕ್ಕೆ ಸೇರಿದವರನ್ನು ಪಿಂಚಣಿ ವ್ಯಾಪ್ತಿಗೆ ತರಲು ಭಾರತೀಯ ಪಿಂಚಣಿ ನಿಧಿ ನಿರ್ವಾಹಕ ಮತ್ತು ಅಭಿವೃದ್ಧಿ ಪ್ರಾಧಿಕಾರವು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ.
ಇದೇ ಮೊದಲ ಬಾರಿಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಂಶೋಧಕರು ಕರ್ನಾಟಕದ ಜಲಮೂಲಗಳು ಮತ್ತು ಕರಾವಳಿಗಳ ಪರಿಸರ ಮತ್ತು ಆರ್ಥಿಕ ಮೌಲ್ಯವನ್ನು ಅಧ್ಯಯನ ಮಾಡಲು ಮುಂದಾಗಿದ್ದಾರೆ.
ರಾಮನಗರದಲ್ಲಿರುವ ಪ್ರಸಿದ್ಧ ರಾಮ ದೇವರ ಬೆಟ್ಟದಲ್ಲಿ ಅಯೋಧ್ಯೆಯ ರಾಮ ಮಂದಿರದ ಮಾದರಿ ದೇವಾಲಯ ನಿರ್ಮಾಣ, ಅಭಿವೃದ್ಧಿಗೆ ಯೋಜನೆ ರೂಪಿಸಲು ಸಿಎಂ ಸೂಚನೆ ನೀಡಿದ್ದಾರೆ.
ಚುಟುಕು ಸಮಾಚಾರ
ಅರುಣಾಚಲ ಪ್ರದೇಶದ ತವಾಂಗ್ ವಲಯದ ಯಾಂಗ್‌ಟ್ಸೆ ಗಡಿ ಪೋಸ್ಟ್, ಭಾರತ-ಚೀನಾ ಗಡಿಯಲ್ಲಿ ಇತ್ತೀಚೆಗೆ ಉಭಯ ದೇಶಗಳ ಸೈನಿಕರ ನಡುವೆ ಘರ್ಷಣೆ ನಡೆದಿದ್ದು, ಉದ್ವಿಗ್ನತೆಯನ್ನು ಶಮನಗೊಳಿಸುವಂತೆ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಕರೆ ನೀಡಿದ್ದಾರೆ.
ಪಾಕಿಸ್ತಾನ ಮತ್ತು ಚೀನಾ ಗಡಿ ಕಾವಲಿಗೆ ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಪ್ರಳಯ ಕ್ಷಿಪಣಿಗಳನ್ನು ನಿಯೋಜನೆ ಮಾಡಲು ರಕ್ಷಣಾ ಇಲಾಖೆ ತೀರ್ಮಾನಿಸಿದ್ದು, 120 ಖಂಡಾತರ ಕ್ಷಿಪಣಿ ಖರೀದಿ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಗಿದೆ.
ಸಚಿವೆ ಸ್ಮೃತಿ ಇರಾನಿ ಅವರು ದೇವಳದ ಕಿರುಷಷ್ಠಿ ಮಹೋತ್ಸವದ ಕಾರ್ತಿಕ ವೇದಿಕೆಯಲ್ಲಿ ಪವಿತ್ರ ಶ್ರದ್ಧಾಕೇಂದ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೇಂದ್ರ ಸರ್ಕಾರದ ‘ಸ್ವದೇಶಿ ದರ್ಶನ್’ ಯೋಜನೆಯನ್ನು ಜಾರಿಗೆ ತರಲು ಉತ್ಸುಕಳಾ ಗಿದ್ದೇ ನೆ ಎಂದು ಹೇಳಿದರು.
ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಸದನದ ಪರ್ಯಾಲೋಚನೆಗೆ ಹಾಕಿ ವಿಧೇಯಕ ಧ್ವನಿಮತದ ಮೂಲಕ ಸರ್ವಾನುಮತದ ಅಂಗೀಕಾರಗೊಂಡಿತು.
ಚುಟುಕು ಸಮಾಚಾರ
ಕೆನಡಾದ ಮೊಂಟ್ರಿಯಾಲನಲ್ಲಿ ನಡೆದ ಜೀವವೈವಿಧ್ಯ ಸಂರಕ್ಷಣೆ ಕುರಿತ 15ನೇ ಸಮಾವೇಶವು ಮಹತ್ವದ ಒಪ್ಪಂದದೊಂದಿಗೆ ಅಂತ್ಯಗೊಂಡಿತು. ನಾಲ್ಕು ವರ್ಷಗಳ ಮಾತುಕತೆಯ ನಂತರ ನಿಸರ್ಗ ಮತ್ತು ಪರಿಸರ ವ್ಯವಸ್ಥೆಯನ್ನು ಕಾಪಾಡುವ ಐತಿಹಾಸಿಕ ಒಪ್ಪಂದಕ್ಕೆ 196 ದೇಶಗಳು ಅನುಮೋದನೆ ನೀಡಿವೆ.
ಸಶಸ್ತ್ರ ಪಡೆಗಳ ಪಿಂಚಣಿದಾರರು/ಕುಟುಂಬ ಪಿಂಚಣಿದಾರರ ಒನ್ ರ‍್ಯಾಂಕ್ ಒನ್ ಪೆನ್ಶನ್(ಒಆರ್ ಒಪಿ) ಅನ್ನು ಪರಿಷ್ಕರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಯೋಜನೆ ಜಾರಿಗೆಯಿಂದ 25 ಲಕ್ಷಕ್ಕೂ ಹೆಚ್ಚು ಯೋಧರ ಕುಟುಂಬಗಳಿಗೆ ಸೌಲಭ್ಯ ಸಿಗಲಿದೆ.
ರಾಜಸ್ಥಾನದ ‘ಚೋಖಿ ಧನಿ’ ಮಾದರಿಯಲ್ಲಿ, ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಮಲ್ಲತ್ತಹಳ್ಳಿಯ ಕಲಾಗ್ರಾಮವನ್ನು ಅಭಿವೃದ್ಧಿ ಪಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ.
ಚುಟುಕು ಸಮಾಚಾರ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ ಡಿ. 25ರಂದು ‘ಉತ್ತಮ ಆಡಳಿತ ದಿನ’ ಎಂದು ಪ್ರತಿವರ್ಷ ಆಚರಿಸಲಾಗುತ್ತದೆ.
ಪ್ರಧಾನ ಮಂತ್ರಿ ಸ್ವ–ನಿಧಿ ನಿಧಿಯಡಿ ಸಾಲ ಪಡೆಯುವ ಬೀದಿ ಬದಿ ವ್ಯಾಪಾರಿಗಳು ನೀಡಬೇಕಾಗಿದ್ದ ಮುದ್ರಾಂಕ ಶುಲ್ಕ ಪಾವತಿಯನ್ನು ರದ್ದುಪಡಿಸುವ ಕರ್ನಾಟಕ ಸ್ಟಾಂಪ್ ಅಧಿನಿಯಮ 1957ಕ್ಕೆ ತಿದ್ದುಪಡಿ ತರಲು ವಿಧಾನಸಭೆಗೆ ಒಪ್ಪಿಗೆ ನೀಡಿತು.
ಚುಟುಕು ಸಮಾಚಾರ
ಅಮೆರಿಕದಲ್ಲಿ ಐತಿಹಾಸಿಕ ಚಳಿ ಚಂಡಮಾರುತ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಚಂಡಮಾರುತದ ಕಾರಣದಿಂದ ತಾಪಮಾನದಲ್ಲಿ ಭಾರಿ ಏರಿಳಿತ ಉಂಟಾಗುತ್ತಿದ್ದು ಅಮೇರಿಕ ಸರ್ಕಾರವು ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ.
ಹೊಸದಾಗಿ ಆವಿಷ್ಕರಿಸಿರುವ ಅವಳಿ ಕೆಪ್ಲರ್ ಉಪಗ್ರಹಗಳಲ್ಲಿ ನೀರು ಇರುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ರಾಜ್ಯದಲ್ಲಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲ ಇಲಾಖೆಗಳಲ್ಲಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿನ ಸಿ ಮತ್ತು ಡಿ ದರ್ಜೆ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕೆಂಬ ಖಾಸಗಿ ನಿರ್ಣಯವನ್ನು ವಿಧಾನಪರಿಷತ್ತಿನಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.
2017ಕ್ಕೂ ಮುನ್ನ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಿಂದ ಹೊರಗಿದ್ದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಆಸ್ತಿಗಳ ಖಾತೆಗಳನ್ನು ಇ–ಆಸ್ತಿ ತಂತ್ರಾಂಶದಲ್ಲಿ ದಾಖಲಿಸಿ, ‘ಇ–ಖಾತೆ’ ನೀಡಲು ಸರ್ಕಾರ ನಿರ್ಧರಿಸಿದೆ.
ಕೃಷಿಭೂಮಿಯಲ್ಲಿ ಸ್ವಂತಕ್ಕೆ ಮನೆ, ಕೃಷಿ ಪರಿಕರಗಳನ್ನು ಸಂಗ್ರಹಿಸಿಡಲು ಕಟ್ಟಡ, ತೋಟದ ಮನೆ ನಿರ್ಮಿಸಿಕೊಳ್ಳಲು ಭೂ ಪರಿವರ್ತನೆಗೆ ರೈತರು ಅರ್ಜಿ ಸಲ್ಲಿಸಿದ ಏಳು ದಿನಗಳ ಒಳಗೇ ಮಂಜೂರಾತಿ ಆದೇಶ ನೀಡುವಂತೆ ಜಿಲ್ಲಾಧಿಕಾರಿಗೆ ಗಡುವು ವಿಧಿಸುವ ಉದ್ದೇ ಶದಿಂದ ಮಂಡಿಸಿದ ‘ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ‘ ಮಸೂದೆಗೆ ವಿಧಾನಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಚುಟುಕು ಸಮಾಚಾರ
ದೇಶದಲ್ಲಿ ಪ್ರತಿವರ್ಷ ಡಿಸೆಂಬರ್ 23ನ್ನು ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸ ಎಂದು ಆಚರಿಸಲಾಗುತ್ತದೆ.
ಕೇಂದ್ರ ಸಾಹಿತ್ಯ ಅಕಾಡೆಮಿಯು ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ನೀಡುವ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು ಕನ್ನಡದ ಪ್ರಮುಖ ಲೇಖಕರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ‘ಬಹುತ್ವದ ಭಾರತ ಮತ್ತು ಬೌದ್ಧ ತಾತ್ತ್ವಿಕತೆ’ ಕೃತಿಯು ಈ ವರ್ಷದ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ. ಅನುವಾದ ಪ್ರಶಸ್ತಿಗೆ ಪದ್ಮರಾಜ ದಂಡಾವತಿ ಅವರು ಅನುವಾದಿಸಿದ ‘ಸೀತಾ: ರಾಮಾಯಣದ ಸಚಿತ್ರ ಮರುಕಥನ’ ಕೃತಿ ಆಯ್ಕೆಯಾಗಿದೆ.
ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನವು ಇದೀಗ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಜ್ಜಾಗಿದ್ದು, ಹೊಸ ಜಾತಿಯ ಪಕ್ಷಿಗಳು ಮತ್ತು ಸಸ್ತನಿಗಳನ್ನು ವಿದೇಶಗಳಿಂದ ಪಡೆದುಕೊಂಡಿದೆ.
ರೋಗ ನಿರೋಧಕ ಔಷಧಯುಕ್ತ ಕರ್ಕ್ಯುಮಿನ್ ಅಂಶ ಶೇ 7ರಷ್ಟಿರುವ ಮೇಘಾಲಯದ ಲಕಾಡಾಂಗ್ ಅರಿಸಿನ ತಳಿಯನ್ನು ಕೇಂದ್ರ ತಂಬಾಕು ಸಂಶೋಧನಾಲಯದಲ್ಲಿ ‘ಪ್ರತಿಭಾ ಮತ್ತು ಪ್ರಗತಿ’ ಹೆಸರಿನಲ್ಲಿ ಅಭಿವೃದ್ಧಿಪಡಿಸಲಾಗಿದೆ.
ನಂದಿಬೆಟ್ಟದ ತಪ್ಪಲಿನ ಹೆಗ್ಗಡಿಹಳ್ಳಿಯಲ್ಲಿ ಹೊಸ ಜೇಡ ಪ್ರಭೇದವನ್ನು ಪರಿಸರಾಸಕ್ತರು ಪತ್ತೆ ಹಚ್ಚಿದ್ದಾರೆ. ನಂದಿ ಬೆಟ್ಟದಲ್ಲಿ ಹುಟ್ಟುವ ಅರ್ಕಾವತಿ ನದಿಯ ಹೆಸರನ್ನು ಈ ಹೊಸ ಜೇಡ ಪ್ರಬೇಧಕ್ಕೆ ಇಡಲಾಗಿದೆ.
ಚುಟುಕು ಸಮಾಚಾರ
ಸ್ಕಾರ್ಪೀನ್ ಸರಣಿಯ 5ನೇ ಜಲಾಂತರ್ಗಾಮಿ ನೌಕೆ ‘ಐಎನ್‌ಎಸ್ ವಾಗೀರ್’ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದೆ.
ಗಡಿಯಲ್ಲಿ ಚೀನಾ ಹಾವಳಿ ಹೆಚ್ಚಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ ಅರುಣಾಚಲ ಪ್ರದೇಶದಲ್ಲಿ ಸೇನಾ ವಾಹನಗಳ ಸುಲಭ ಸಂಚಾರಕ್ಕೆ 1,748 ಕಿ.ಮೀ ಉದ್ದದ ಹೊಸ ಹೆದ್ದಾರಿ ನಿರ್ಮಿಸಲು ಮುಂದಾಗಿದೆ.
ಚೀನಾದಲ್ಲಿ ಸದ್ಯ ಹೆಚ್ಚುತ್ತಿರುವ ಕೊರೊನಾ ವೈರಸ್ ಓಮಿಕ್ರಾನ್ ಹೊಸ ರೂಪಾಂತರಿ ತಳಿ ಬಿಎಫ್.7 ವೈರಾಣು ಭಾರತದಲ್ಲೂ ಪತ್ತೆಯಾಗಿದೆ.
ವಿಶ್ವವಿದ್ಯಾಲಯಗಳು ಕಾಲೇಜುಗಳಿಂದ ಸಂಗ್ರಹಿಸುವ ‘ಮಾನ್ಯತಾ ಶುಲ್ಕದ’ ಮೇಲೆ ಸರಕು ಹಾಗೂ ಸೇವಾ ತೆರಿಗೆ (ಗೂಡ್ಸ್ ಆ್ಯಂಡ್ ಸರ್ವೀಸಸ್ ಟ್ಯಾಕ್ಸ್ – ಜಿಎಸ್‌ಟಿ) ವಿಧಿಸಿದೆ.
ದಿಲ್ಲಿ ಹಾತ್ ಮಾದರಿಯಲ್ಲಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿಯೂ ಕರಕುಶಲ ಗ್ರಾಮವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹೊಸ ಪಿಂಚಣಿ ವ್ಯವಸ್ಥೆಯನ್ನು (ಎನ್‌ಪಿಎಸ್) ರದ್ದುಗೊಳಿಸಿ ಹಳೆಯ ಪಿಂಚಣಿ ಪದ್ಧತಿ (ಒಪಿಎಸ್) ಜಾರಿಗೊಳಿಸಿರುವ ಬೆನ್ನಲ್ಲೇ ರಾಜ್ಯದಲ್ಲೂ ಸರಕಾರಿ ನೌಕರರು ‘ಒಪಿಎಸ್’ ಬೇಡಿಕೆಯನ್ನು ಮುಂದಿಟ್ಟುಕೊಂಡು ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿದ್ದಾರೆ.
ಚುಟುಕು ಸಮಾಚಾರ
ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯಿಂದ ವಿಶ್ವದಲ್ಲಿಯೇ ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸ್ಕೌಟ್ಸ್ ಅಂಡ್ ಗೈಡ್ಸ್ ಜಾಂಬೂರಿಯನ್ನು ಆಯೋಜಿಸಲಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಅಡಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮಹತ್ವದ ಆದೇಶವನ್ನು ಹೊರಡಿಸಿದೆ.
ಇ-ಬೈಕ್ ಟ್ಯಾಕ್ಸಿ ಸೇವೆಗಳಿಗೆ ಸರ್ಕಾರ ಅನುಮತಿಸಿದ್ದು, ಶೀಘ್ರದಲ್ಲೇ ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸಲಿವೆ.
ಮಕ್ಕಳಿಗೆ ಮಾನಸಿಕ ಆರೋಗ್ಯದ ಮಹತ್ವವನ್ನು ತಿಳಿಸಲು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ನೇತೃತ್ವದಲ್ಲಿ ‘ಮನೋಸ್ತೈರ್ಯ’ ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭಿಸಲಾಗಿದೆ.
ಗ್ರೀನ್ ಟೀ ನಲ್ಲಿರುವ ಪ್ರಯೋಜನಗಳನ್ನು ಮತ್ತಷ್ಟು ಬಳಕೆ ಮಾಡಿಕೊಂಡಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc)ಯ ಸಂಶೋದಕರು, ಇದರಿಂದ ‘ಸೂಕ್ಷ್ಮಾಣು ನಾಶಕ’ ಏರ್ ಫಿಲ್ಟರ್’ನ್ನು ಅಭಿವೃದ್ಧಿಪಡಿಸಿದ್ದಾರೆ.
ಚುಟುಕು ಸಮಾಚಾರ
ಡಿಜಿಲೀಕರಣದ ಮತ್ತೊಂದು ಹೆಜ್ಜೆಯಾಗಿ ಹಾಗೂ ಸುಪ್ರೀಂ ಕೋರ್ಟ್ ಅನ್ನು ‘ಕಾಗದರಹಿತ’ವನ್ನಾಗಿಸುವ ನಿಟ್ಟಿನಲ್ಲಿ, ವಕೀಲರು ಜ. 1ರಿಂದ ಹಾಜರಾತಿಯನ್ನು ತೋರಿಸಲು ಹಸ್ತಚಾಲಿತ ಸ್ಲಿಪ್ ನೀಡಬೇಕಿಲ್ಲ. ಅವರು ‘ಅಡ್ವೊಕೇಟ್ ಅಪಿಯರೆನ್ಸ್ ಪೋರ್ಟಲ್’ಗೆ ಲಾಗಿನ್ ಆದರೆ ಸಾಕು’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ 17 ವರ್ಷದ ಬಾಲಕಿಯ ಮೇಲಿನ ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಇ–ಕಾಮರ್ಸ್ ವೇದಿಕೆಗಳಾದ ಫ್ಲಿಪ್‌ಕಾರ್ಟ್, ಅಮೆಜಾನ್‌ಗೆ ದೆಹಲಿ ಪೊಲೀಸರು ಮತ್ತು ದೆಹಲಿ ಮಹಿಳಾ ಆಯೋಗವು ನೋಟಿಸ್ ನೀಡಿದೆ.
ಕೇಂದ್ರ ಸರ್ಕಾರವು ದೇಶದಲ್ಲಿ ಉತ್ಪಾದನೆ ಆಗುವ ಕಚ್ಚಾ ತೈಲದ ಮೇಲಿನ ‘ಆಕಸ್ಮಿಕ ಲಾಭ ತೆರಿಗೆ’ಯನ್ನು ತಗ್ಗಿಸಿದೆ. ಇದೇ ವೇಳೆ, ಡೀಸೆಲ್ ಮತ್ತು ವಿಮಾನ ಇಂಧನ (ಎಟಿಎಫ್) ರಫ್ತು ಮೇಲಿನ ತೆರಿಗೆಯನ್ನೂ ಕಡಿಮೆ ಮಾಡಿದೆ.
ಈ ವರ್ಷ ಜಾಗತಿಕ ಮಾಧ್ಯಮಗಳಲ್ಲಿ ಅತಿಹೆಚ್ಚು ಲೇಖನಗಳು ಪ್ರಕಟಗೊಂಡ ಅಥ್ಲೀಟ್‌ಗಳ ಪಟ್ಟಿಯಲ್ಲಿ ಭಾರತದ ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ ಅವರು ಅಗ್ರಸ್ಥಾನ ಪಡೆದುಕೊಂಡಿದ್ದಾರೆ.
ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಲು ‘ದಕ್ಷಿಣ ಪಿನಾಕಿನಿ ಜಲವಿವಾದ ನ್ಯಾಯಮಂಡಳಿ’ ರಚಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮೂರು ತಿಂಗಳ ಕಾಲಾವಕಾಶ ನೀಡಿದೆ.
ಜಪಾನಿನ ವಾಣಿಜ್ಯೋದ್ಯಮಿ, ಬಿಲಿಯನೇರ್ ಯುಸಾಕು ಮೇಜಾವಾ ಅವರು ಚಂದ್ರನಿಗೆ ಮೊದಲ ನಾಗರಿಕ ಮಿಷನ್‌ಗಾಗಿ ‘ಡಿಯರ್ ಮೂನ್’ ಯೋಜನೆ ಕಾರ್ಯಾಚರಣೆ ಘೋಷಿಸಿದ್ದರು. ಚಂದ್ರನಲ್ಲಿಗೆ ಪ್ರಯಾಣಿಸುವ ಎಂಟು ಮಂದಿಯಲ್ಲಿ ಬಾಲ್ ವೀರ್ ಮಕ್ಕಳ ಹಿಂದಿ ಧಾರವಾಹಿ ಖ್ಯಾತಿಯ ಭಾರತೀಯ ನಟ ದೇವ್ ಜೋಷಿ ಕೂಡ ಇದ್ದಾರೆ.
ಚುಟುಕು ಸಮಾಚಾರ
ದೋಹಾದಲ್ಲಿ ನಡೆದ ಫುಟ್ ಬಾಲ್ ವಿಶ್ವಕಪ್ ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಗೆದ್ದು ಅರ್ಜೆಂಟೀನಾ ವಿಶ್ವ ಚಾಂಪಿಯನ ಆಯಿತು. ಕತಾರ್ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮೊರೊಕ್ಕೊ ತಂಡವನ್ನು ಸೋಲಿಸಿ ಕ್ರೊಯೇಷಿಯಾ 3ನೇ ಸ್ಥಾನಕ್ಕೇರಿದೆ
ಧಾರ್ಮಿಕ ಸ್ವಾತಂತ್ರ್ಯ ಕಪ್ಪು ಪಟ್ಟಿಯಿಂದ ಅಮೆರಿಕಾವು ಭಾರತವನ್ನು ಹೊರಗಿಟ್ಟಿದೆ.
ಸುದ್ದಿಯಲ್ಲಿ ಏಕಿದೆ? ಭಾರತದ ಪ್ರಥಮ ಡಾರ್ಕ್ ಸ್ಕೈ ಪಾರ್ಕ್ ಗಾಢ ಕತ್ತಲು ಇರುವಂತಹ ಹಾಗೂ ದೀರ್ಘಾವಧಿಯಲ್ಲಿ ಮೋಡಗಳು ಬಾರದಂತಹ ತಾಣಗಳನ್ನು ಸ್ಕೈ ಪಾರ್ಕ್ ನಿರ್ಮಾಣಕ್ಕೆ ಗುರುತಿಸಲಾಗುತ್ತದೆ. ಭಾರತದಲ್ಲಿ ಲಡಾಖ್‌ನ ‘ಹಾನ್ಲೆ’ ಎಂಬ ಪ್ರದೇಶವನ್ನು ಡಾರ್ಕ್ ಸ್ಕೈ ಪಾರ್ಕ್‌ಗಾಗಿ ಆಯ್ಕೆ ಮಾಡಲಾಗಿದೆ. ಮುಖ್ಯಾಂಶಗಳು ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೊಫಿಸಿಕ್ಸ್‌ನ ತಜ್ಞರು ಡಾರ್ಕ್ ಸ್ಕೈ ಪಾರ್ಕ್ ಸೌಲಭ್ಯ ಅಭಿವೃದ್ಧಿಪಡಿಸಲು ವೈಜ್ಞಾನಿಕ ಮತ್ತು ತಾಂತ್ರಿಕ ಬೆಂಬಲವನ್ನು ಒದಗಿಸುತ್ತಿದ್ದಾರೆ. ಈಗಾಗಲೇ ಪ್ರಾಥಮಿಕ ಹಂತದ […]
ಸಂಪೂರ್ಣ ಸ್ವದೇಶಿ ನಿರ್ಮಿತ ಪಥ ನಿರ್ದೇಶಿತ ಕ್ಷಿಪಣಿ ನಾಶಕ ಯುದ್ಧನೌಕೆ ‘ಐಎನ್ಎಸ್ ಮರ್ಮಗೋವಾ‘ ಅನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಮುಂಬೈನಲ್ಲಿ ನೌಕಾಪಡೆಗೆ ನಿಯೋಜನೆ ಮಾಡಿದರು.
ಕೊನೆಯ ಹಾಗೂ 36ನೇ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಬಂದಿದೆ.
850 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ನಶಿಸುತ್ತಿರುವ ನಕ್ಷತ್ರವೊಂದರ ಅಂತ್ಯದ ವಿದ್ಯಮಾನ ಗುರುತಿಸುವಿಕೆಯಲ್ಲಿ ಲಡಾಖ್‌ನಲ್ಲಿರುವ ಹಿಮಾಲಯನ್ ಟೆಲಿಸ್ಕೋಪ್ ಮತ್ತು ಭಾರತದ ಖಗೋಳ ತಜ್ಞರ ತಂಡವು ಮಹತ್ವದ ಪಾತ್ರ ವಹಿಸಿರುವುದು ತಿಳಿದುಬಂದಿದೆ.
ಚುಟುಕು ಸಮಾಚಾರ
ನಿರ್ಬಂಧ ಎದುರಿಸುತ್ತಿರುವ ರಾಷ್ಟ್ರಗಳಿಗೆ ಮಾನವೀಯ ನೆರವುಗಳಿಗೆ ವಿನಾಯಿತಿ ನೀಡುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯದಿಂದ ಭಾರತ ಮತಚಲಾವಣೆ ಮಾಡದೇ ತಟಸ್ಥವಾಗಿ ಉಳಿದಿದೆ.
ಗಡಿ ಮತ್ತು ಶೀತ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಭಾರತೀಯ ವೀರ ಯೋಧರಿಗೆ ಬೆಚ್ಚಗಿರಲು ಹಾಗೂ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಬೆಂಗಳೂರು ಮೂಲದ ರೇಷ್ಮೆ ಸಂಸ್ಥೆಯೊಂದು ರೇಷ್ಮೆ ಹೊದಿಕೆಯನ್ನು ಸಿದ್ಧಪಡಿಸುತ್ತಿದೆ.
ರಾಜ್ಯದ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿಅಭಿವೃದ್ಧಿಹಾಗೂ ಹೂಡಿಕೆಗೆ ಪೂರಕವಾಗುವ ಪಟ್ಟಣಗಳ ಯದ್ವಾತದ್ವಾ ಬೆಳವಣಿಗೆಗೆ ಕಡಿವಾಣ ಹಾಕಲು ನಗರಗಳ ಅಭಿವೃದ್ಧಿಗೆ ಸಮಗ್ರ ಯೋಜನೆ ಯನ್ನು ರೂಪಿಸಲಾಗುತ್ತಿದೆ
ರಾಜ್ಯದ ಗ್ರಾಮಗಳಲ್ಲಿ ಹಂತ ಹಂತವಾಗಿ ನ್ಯಾಯಾಲಯಗಳ ಸ್ಥಾಪಸಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಚುಟುಕು ಸಂಚಾರ
ಅಗ್ನಿ-5 ಕ್ಷಿಪಣಿ ಪರೀಕ್ಷೆ ಒಡಿಶಾದ ಬಾಲಸೋರ್ ಕರಾವಳಿಯಲ್ಲಿರುವ ಅಬ್ದುಲ್ ಕಲಾಂ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಸಲಾಯಿತು. ಅಗ್ನಿ-5 ಪ್ರಯೋಗ ಯಶಸ್ವಿಯಾಗಿದೆ.
1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಐತಿಹಾಸಿಕ ವಿಜಯವನ್ನು ನೆನಪಿಸುವ ದಿನವನ್ನು(ಡಿಸೆಂಬರ್ 16 ) ವಿಜಯ ದಿನವನ್ನಾಗಿ ಆಚರಿಸಲಾಗುತ್ತದೆ. ಇದು ಬಾಂಗ್ಲಾದೇಶವನ್ನು ಪಾಕಿಸ್ತಾನದಿಂದ ಮುಕ್ತಗೊಳಿಸಿತು
ನಗರ ಪ್ರದೇಶದ ಬಡಜನರಿಗಾಗಿ ರಾಜ್ಯ ಸರ್ಕಾರ ಪ್ರಾರಂಭಿಸಿರುವ ರಾಜ್ಯಾದ್ಯಂತ ಕಾರ್ಯನಿರ್ವಹಿಸುವ 114 ನಮ್ಮ ಕ್ಲಿನಿಕ್ ಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಉದ್ಘಾಟಿಸಿದರು
ಮಹಿಳೆಯರಿಗೆ ಪ್ರತ್ಯೇಕ ಹಾಗು ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ರಾಜ್ಯಾದ್ಯಂತ 250 ‘ಆಯುಷ್ಮತಿ ಕ್ಲಿನಿಕ್’ಗಳನ್ನು ಪ್ರಾರಂಭವಾಗಲಿದ್ದು, ಈ ಯೋಜನೆಗೆ ಜನವರಿಯಲ್ಲಿಚಾಲನೆ ನೀಡಲು ಆರೋ ಗ್ಯ ಇಲಾಖೆ ಸಿದ್ಧತೆ ನಡೆಸಿದೆ.
ಕೈಮಗ್ಗ ನೇಕಾರರಿಗೆ ತಲಾ 5,000 ರೂ. ನೀಡುವ ನೇಕಾರ ಸಮ್ಮಾನ್ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಚುಟುಕು ಸಮಾಚಾರ
ಪರೀಕ್ಷೆ ಉದ್ದೇಶದೊಂದಿಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಉಡ್ಡಯನ ಮಾಡಿದ್ದ ಒರಾಯನ್ ಗಗನನೌಕೆ ವ್ಯೋಮಯಾನವನ್ನು ಪೂರ್ಣಗೊಳಿಸಿ ಭೂಮಿಯತ್ತ ಮರುಳಿದೆ.
9 ನೇ ವಿಶ್ವ ಆಯುರ್ವೇದ ಕಾಂಗ್ರೆಸ್ (ಡಬ್ಲ್ಯುಎಸಿ) ಗೋವಾದ ಪಣಜಿಯಲ್ಲಿ ಉದ್ಘಾಟಿಸಲಾಯಿತು.
ವಿದ್ಯಾರ್ಥಿಗಳು ಆನರ್ಸ್ ಪದವಿಯನ್ನು (ಗೌರವ ಪದವಿ) ಪಡೆಯಲು ಮೂರರ ಬದಲಿಗೆ ನಾಲ್ಕು ವರ್ಷದ ಪದವಿಪೂರ್ವ ಕೋರ್ಸ್ ಪೂರ್ಣಗೊಳಿಸಬೇಕು ಎಂದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ ತಿಳಿಸಿದೆ.
ಪಳೆಯುಳಿಕೆಯೇತರ ಇಂಧನ ಮೂಲಗಳಾದ ಬಯೋಮಾಸ್, ಇಥೆನಾಲ್ ಮತ್ತು ಹಸಿರು ಹೈಡ್ರೋಜನ್ ಬಳಕೆಯನ್ನು ಕಡ್ಡಾಯಗೊಳಿಸುವ ಇಂಧನ ಸಂರಕ್ಷಣಾ ಮಸೂದೆ (ತಿದ್ದುಪಡಿ)–2022ಕ್ಕೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿದೆ.
ಚುಟುಕು ಸಮಾಚಾರ
ಪಠ್ಯ ಬೋಧನೆ ಕಾರ್ಯಕ್ರಮವು ಡಿಸೆಂಬರ್ 12 ರಿಂದ ಫೆಬ್ರವರಿ 23, 2023 ರವರೆಗೆ ಆಕಾಶವಾಣಿಯಲ್ಲಿ ನಡೆಯಲಿದೆ.
ಸಂರಕ್ಷಿತ ಅರಣ್ಯ ಪ್ರದೇಶದ ನಿರ್ವಹಣೆಯನ್ನು ಉತ್ತಮಗೊಳಿಸುವುದಕ್ಕಾಗಿ ಸಿದ್ಧಪಡಿಸಲಾಗಿರುವ ವನ್ಯಜೀವಿ (ಸಂರಕ್ಷಣೆ) ತಿದ್ದುಪಡಿ ಕಾಯ್ದೆ, 2021 ಅನ್ನು ರಾಜ್ಯಸಭೆ ಅಂಗೀಕರಿಸಿದೆ.
ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ಸೋಂಕು ವರದಿಯಾಗಿದೆ. ರಾಯಚೂರು ಜಿಲ್ಲೆಯ ಐದು ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ
ಪೊವೆಲ್ ನಿಧನಕ್ಕೆ ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ ಎಎಫ್‌ಐ ಸಂತಾಪ ಸೂಚಿಸಿದೆ
ಚುಟುಕು ಸಮಾಚಾರ
ರಾಷ್ಟ್ರೀಯತೆ ಆಧಾರದ ಮೇಲೆ ಗ್ರೀನ್ ಕಾರ್ಡ್ ನೀಡುವ ಬದಲು ಮೆರಿಟ್ ಆಧಾರದ ಮೇಲೆ ವಲಸೆ ಉದ್ಯೋಗಿಗಳಿಗೆ ಗ್ರೀನ್ ಕಾರ್ಡ್ ನೀಡುವ ಮಸೂದೆಗೆ ಒಪ್ಪಿಗೆ ಸೂಚಿಸಲು ಅಮೇರಿಕ ಸರಕಾರ ನಿರ್ಧರಿಸಿದೆ.
ಪದೇ ಪದೇ ಕರೆ ಮಾಡಿ ಕಿರಿಕಿರಿ ಉಂಟು ಮಾಡುವ ಸಾಲದ ಆಫರ್ ಕೊಡುವ ಕರೆಗಳು, ಅನ್ಯರ ಹೆಸರಲ್ಲಿ ವಂಚನೆಗೆ ಯತ್ನಿಸುವ ಕರೆಗಳನ್ನು ತಡೆಗಟ್ಟಲು ಕೇಂದ್ರ ಸರಕಾರ ಮುಂದಾಗಿದೆ. ಈ ಸಂಬಂಧ ದೇಶದ ಎಲ್ಲ ಹೊಸ ಮೊಬೈಲ್ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವ ನೂತನ ‘ಕಾಲರ್ ಐಡಿ’ಯ ಅಳವಡಿಕೆ ಹಾಗೂ ಬಳಕೆಯಲ್ಲಿರುವ ಫೋನ್‌ಗಳಿಗೆ ಇನ್‌ಸ್ಟಾಲ್ ಮಾಡಿಕೊಳ್ಳಬಹುದಾದ ಆ್ಯಪ್ ಬಿಡುಗಡೆ ಮಾಡಲಿದೆ.
ಡಿಸೆಂಬರ್ 13-15ರವರೆಗೆ ಬೆಂಗಳೂರಿನಲ್ಲಿ ಮೊದಲ ಜಿ20 ಹಣಕಾಸು ಮತ್ತು ಸೆಂಟ್ರಲ್ ಬ್ಯಾಂಕ್ ನಿಯೋಗಗಳ ಸಭೆ ನಡೆಯಲಿದ್ದು, ಕೇಂದ್ರ ಹಣಕಾಸು ಸಚಿವಾಲಯ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜಂಟಿಯಾಗಿ ಇದನ್ನು ಆಯೋಜಿಸಿವೆ.
ರಾಜ್ಯ ಸರಕಾರ 2022-23ನೇ ಸಾಲಿನ ಆಯವ್ಯಯದಲ್ಲಿ ಯಶಸ್ವಿನಿ ಯೋಜನೆ ಪರಿಷ್ಕರಿಸಿ ಮರು ಜಾರಿ ಮಾಡಿ ಆದೇಶಿಸಿದ್ದು, ರಾಜ್ಯಾದ್ಯಂತ ಸದಸ್ಯತ್ವ ನೋಂದಣಿ ಆರಂಭಗೊಂಡಿದೆ.
ಮೈಸೂರು ಮಹಾರಾಜ ಟಿಪ್ಪು ಸುಲ್ತಾನ್ ಆಡಳಿತಾವಧಿಯಿಂದಲೂ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಪ್ರತಿದಿನ ಸಂಜೆ ಹೊತ್ತಿನಲ್ಲಿ ನಡೆಯುವ ‘ದೀವಟಿಗೆ ಸಲಾಂ’ ಪೂಜಾ ವಿಧಾನವನ್ನು ನಿಲ್ಲಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ‘ದೀವಟಿಗೆ ಸಲಾಂ’ ನಡೆಯುತ್ತಿದ್ದ ಸಮಯದಲ್ಲಿ ಇನ್ನು ಮುಂದೆ ‘ದೀಪ ನಮಸ್ಕಾರ’ ನಡೆಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ
ಚುಟುಕು ಸಮಾಚಾರ
ಈ ಬಾರಿ ಪಕ್ಷಿ ಉತ್ಸವ ಕೊಲ್ಲೂರಿನ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದಲ್ಲಿ ಜನವರಿ 6ರಿಂದ 8ರವರೆಗೆ ನಡೆಯಲಿದೆ.
ಕರ್ನಾಟಕದಲ್ಲಿ ಅಭಿವೃದ್ಧಿ ಹಾಗೂ ನಾವಿನ್ಯತೆಯ ಪಯಣ, ಇದಕ್ಕೆ ಕಾರಣವಾಗಿರುವ ಸಾಧಕರು, ಇವರ ಸಾಧನೆಗಳನ್ನು ಬಿಂಬಿಸುವ (ಇನ್ನೋವೇಷನ್ ಎಕ್ಸ್ಪೀರಿಯನ್ಸ್ ಮ್ಯೂಸಿಯಂ) ನಾವಿನ್ಯತಾ ಅನುಭವ ವಸ್ತು ಸಂಗ್ರಹಾಲಯವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಎಲ್ಲ ಕ್ಷೇತ್ರಗಳಲ್ಲಿ ಯುವಕರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಯುವ ನೀತಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಚುಟುಕು ಸಮಾಚಾರ
ಪ್ರತಿವರ್ಷವೂ ಡಿಸೆಂಬರ್ 7ರಂದು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ದೇಶದ ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆಯ ಯೋಧರಿಗೆ ಗೌರವ ಸಲ್ಲಿಸುವ ಸಂಪ್ರದಾಯದ ದಿನವಾಗಿ ಆಚರಿಸಲಾಗುತ್ತಿದೆ.
ಸಂಚಾರ ನಿಯಮ ಉಲ್ಲಂಘಿಘಿಸುವ ವಾಹನ ಸವಾರರ ಮೇಲೆ ಕಣ್ಗಾವಲು ಇಡಲು ಪ್ರಮುಖ 50 ಜಂಕ್ಷನ್‌ಗಳಲ್ಲಿಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಐಟಿಎಂಎಸ್) ಅನ್ನು ಜಾರಿ ಮಾಡಲಾಗಿದೆ.
ಚುಟುಕು ಸಮಾಚಾರ
ಸುಮಾರು 48,500 ವರ್ಷಗಳ ಹಿಂದೆ ಹಿಮದ ಅಡಿ ಹೂತುಹೋಗಿದ್ದ ವೈರಸ್‌ಗಳನ್ನು ಸಂಶೋಧಕರು ಪುನಶ್ಚೇತನಗೊಳಿಸಿದ್ದಾರೆ.
ಭಾರತ ಮತ್ತು ಜರ್ಮನಿ ವಲಸೆ ಮತ್ತು ಮೊಬಿಲಿಟಿ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿವೆ ಇದರಿಂದ ಪರಸ್ಪರ ದೇಶದ ಜನರು ಎರಡೂ ದೇಶಗಳಲ್ಲಿ ಅಧ್ಯಯನ, ಸಂಶೋಧನೆ ಹಾಗೂ ಉದ್ಯೋಗ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.
ಆರೋಗ್ಯ ಸಂಬಂಧಿ ಉತ್ಪನ್ನಗಳು ಹಾಗೂ ಔಷಧಗಳನ್ನು ಗ್ರಾಹಕರಿಗೆ ತಲುಪಿಸಲು ಡ್ರೋನ್ ಡೆಲಿವರಿಯ ಪ್ರಾಯೋಗಿಕ ಯೋಜನೆಯನ್ನು ಡೆಹ್ರಾಡೂನ್ನಲ್ಲಿ ಟಾಟಾ ಗ್ರೂಪ್ನ ಡಿಜಿಟಲ್ ಹೆಲ್ತ್ ಪ್ಲಾಟ್ಫಾರ್ಮ್ ‘1ಎಂಜಿ’ ಪ್ರಾರಂಭಿಸಿದೆ.
ಡ್ರೋನ್ ಬಳಸಿ ಔಷಧಗಳ ತಲುಪಿಸುವ ಕಾರ್ಯ ಆರಂಭಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಮೇಘಾಲಯ ಪಾತ್ರವಾಗಿದೆ.
ದಿವ್ಯಾಂಗರಿಗೆ ವಸತಿ ಯೋಜನೆಯಲ್ಲಿ ಶೇ.3 ರಷ್ಟು ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರದಿಂದ ಕ್ರೀಡಾ ಸಾಧಕರಿಗೆ ನೀಡುವ 2021ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ, 36ನೇ ರಾಷ್ಟ್ರೀಯ ಕ್ರೀಡಾಕೂಟ ಪದಕ ವಿಜೇತರಿಗೆ ನಗದು ಪುರಸ್ಕಾರ ಹಾಗೂ 2022-23ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಚುಟುಕು ಸಮಾಚಾರ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಮದ್ರಾಸ್ (ಐಐಟಿ–ಎಂ)ಸಂಶೋಧಕರು ಸಮುದ್ರದ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ಉಪಕರಣ ಅಭಿವೃದ್ಧಿಪಡಿಸಿದ್ದಾರೆ.
ಅಂಗವಿಕಲರಿಗೆ ನ್ಯಾಯಾಂಗ ಸೇವೆ ಸುಲಭವಾಗಿ ದೊರೆಯುವಂತೆ ಮಾಡುವ ಗುರಿಯೊಂದಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ಕಮಿಟಿ ಆನ್ ಆ್ಯಕ್ಸೆಸಿಬಿಲಿಟಿ’ ಹೆಸರಿನ ಸಮಿತಿಯೊಂದನ್ನು ರಚಿಸಿದ್ದಾರೆ.
2014-16ರಲ್ಲಿ 130 ರಷ್ಟಿದ್ದ ತಾಯಂದಿರ ಮರಣ ಪ್ರಮಾಣವು 2018-20 ರಲ್ಲಿ 97ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಭಾರತೀಯ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ವಿಶೇಷ ವರದಿಯಲ್ಲಿ ತಿಳಿಸಿದೆ.
ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆಗಾಗಿ ಅಂತರಾಷ್ಟ್ರೀಯ ದಿನದ (ನವೆಂಬರ್ 25) ಸಂದರ್ಭದಲ್ಲಿ ಕೇಂದ್ರ ಸರ್ಕಾರವು ನಯಿ ಚೇತನ ಅಭಿಯಾನವನ್ನು ಪ್ರಾರಂಭಿಸಿದೆ.
ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ನಡೆಯುವ ಹಾರ್ನ್ ಬಿಲ್ (ಮಂಗಟ್ಟೆ) ಫೆಸ್ಟಿವಲ್ ನಾಗಾಲ್ಯಾಂಡ್ ನಅತೀ ದೊಡ್ಡ ವಾರ್ಷಿಕ ಹಬ್ಬವಾಗಿದೆ.
ಮಕ್ಕಳಲ್ಲಿ ನರ ದೌರ್ಬಲ್ಯ, ಬುದ್ಧಿ ಮಾಂದ್ಯತೆ ಸೇರಿದಂತೆ ಶಾಶ್ವತ ಅಂಗವಿಕಲತೆ ಉಂಟು ಮಾಡುವ ಜೆಇ ಮೆದುಳು ಜ್ವರ (ಜಪಾನೀಸ್ ಎನ್ ಸೆಫಲೈಟಿಸ್) ನಿಯಂತ್ರಣಕ್ಕಾಗಿ ಡಿಸೆಂಬರ್ 5 ರಿಂದ ವಿಶೇಷ ಲಸಿಕಾ ಅಭಿಯಾನ ಆರಂಭವಾಗಲಿದೆ. ಈ ಅಭಿಯಾನದಡಿ 1 – 15 ವರ್ಷದ ಅಂದಾಜು 48 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಇದೆ.
ಚುಟುಕು ಸಮಾಚಾರ
ಹಿಜಾಬ್ ವಿರೋಧಿ ಪ್ರತಿಭಟನೆಗೆ ಮಣಿದು ಇರಾನ್ ಸರ್ಕಾರ ತನ್ನ ದೇಶದಲ್ಲಿನ ‘ನೈತಿಕತೆ ಪೋಲೀಸ್’ ವ್ಯವಸ್ಥೆಯನ್ನು ವಿಸರ್ಜಿಸಿದೆ.
ನೌಕಾಪಡೆ ದಿನ ಅಂಗವಾಗಿ ಡಿಸೆಂಬರ್4 ರಂದು ಭಾರತೀಯ ನೌಕಾಪಡೆಯು ತನ್ನ ಕಾರ್ಯಾಚರಣೆ ಪ್ರಾತ್ಯಕ್ಷಿಕೆ ಮೂಲಕ ಪ್ರಬಲ ಯುದ್ಧ ಸಾಮರ್ಥ್ಯ ಪ್ರದರ್ಶಿಸಿತು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳ ತೆರಿಗೆ ಪಾವತಿ ಇನ್ನು ಮುಂದೆ ಸುಲಭವಾಗಲಿದೆ. ಇದಕ್ಕಾಗಿ ಪಂಚತಂತ್ರ ಮೊಬೈಲ್ ಆ್ಯಪ್ ಸಿದ್ಧಗೊಳ್ಳುತ್ತಿದ್ದು, ಸಿಬ್ಬಂದಿ ಮನೆ- ಮನೆಗೆ ಭೇಟಿ ನೀಡಿ ತೆರಿಗೆ ಸಂಗ್ರಹಿಸಲಿದ್ದಾರೆ.
ಕರ್ನಾಟಕ ರಾಜ್ಯದ ರೈತರು ಸಂಪೂರ್ಣ ಡಿಜಿಟಲೀಕರಣಗೊಳ್ಳುತ್ತಿದ್ದು, 2023ರ ವೇಳೆಗೆ ಆನ್’ಲೈನಲ್ಲಿಯೇ ಬೆಳೆಗಳ ವಿತರಣೆ ಹಾಗೂ ಖರೀದಿ ಮಾಡಲಿದ್ದಾರೆ. ರೈತರು ಸಂಪೂರ್ಣ ಡಿಜಿಟಲೀಕರಣಗೊಳ್ಳುತ್ತಿರುವುದು ದೇಶದಲ್ಲಿಯೇ ಮೊದಲಾಗಿದೆ.
ಚುಟುಕು ಸಮಾಚಾರ
ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿರುವ ವಿಶ್ವವಿದ್ಯಾಲಯಗಳ ಮೌಲ್ಯಮಾಪನ ನಡೆಸಿ, ಗುಣಮಟ್ಟವನ್ನು ಶ್ರೇಣೀಕರಿಸುವ ಸ್ವತಂತ್ರ ಸಂಸ್ಥೆಯಾದ ‘ಕ್ವಕ್‍ಕ್ವಾರೆಲಿ ಸೈಮಂಡ್ಸ್ (ಕ್ಯು.ಎಸ್.) ಇತ್ತೀಚೆಗೆ ಪ್ರಕಟಿಸಿರುವ ‘ವಿಶ್ವ ವಿಶ್ವವಿದ್ಯಾಲಯ ರ‍್ಯಾಂಕಿಂಗ್’ನಲ್ಲಿ ಮೈಸೂರು ವಿಶ್ವವಿದ್ಯಾಲಯವು 110ನೇ ಸ್ಥಾನ ಪಡೆದಿದೆ’.
ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಜನವಸತಿ ಇಲ್ಲದ 21 ದ್ವೀಪಗಳಿಗೆದೇಶದ ಅತ್ಯುತ್ತಮ ಸೇನಾ ಪ್ರಶಸ್ತಿಯಾದ ಪರಂವೀರ ಚಕ್ರ ಪ್ರಶಸ್ತಿ ಸ್ವೀಕರಿಸಿದ ಸೈನಿಕರ ಹೆಸರನ್ನು ಕೇಂದ್ರ ಸರ್ಕಾರ ಹೆಸರಿಸಿದೆ.
ಗಡಿ ಭಾಗದಲ್ಲಿ ಪಾಕಿಸ್ತಾನದ ಸೇನೆ ಮತ್ತು ಉಗ್ರರು ಡ್ರೋನ್ ಮೂಲಕ ಉಗ್ರರಿಗೆ ನೆರವಾಗುತ್ತಿರುವ ಚಟುವಟಿಕೆ ಭಾರತಕ್ಕೆ ತಲೆನೋವಾಗಿದೆ. ಇದನ್ನು ನಿವಾರಿಸಲು ಭಾರತೀಯ ಪಡೆಯು ಹದ್ದು ಮತ್ತು ನಾಯಿಗಳಿಗೆ ತರಬೇತಿ ನೀಡುತ್ತಿದೆ.
ಪ್ರಯಾಣಿಕರಿಗೆ ವಿಮಾನ ನಿಲ್ದಾಣದೊಳಗೆ ಹೆಚ್ಚು ಅಡೆತಡೆ ಇಲ್ಲದೆ ಪ್ರವೇಶ ಕಲ್ಪಿಸುವ ಹಾಗೂ ವಿಮಾನ ಹತ್ತುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿರುವ ‘ಡಿಜಿ ಯಾತ್ರಾ’ ಸೇವೆಗೆ ಚಾಲನೆ ನೀಡಲಾಗಿದೆ.
ಇದೇ ಮೊದಲ ಬಾರಿಗೆ ಗುಜರಾತ್‌ನ ಆಫ್ರಿಕನ್ ವಿಲೇಜ್ (ಆಫ್ರಿಕನ್ ಗ್ರಾಮ) ಎಂದು ಹೆಸರಾದ ಬುಡಕಟ್ಟು ಹಳ್ಳಿಯ ಜನರಿಗೆ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸೌರಾಷ್ಟ್ರ, ಕಛ್, ದಕ್ಷಿಣ ಭಾಗ ಒಳಗೊಂಡ ಮತದಾನದ ಹಕ್ಕನ್ನು ನೀಡಲಾಗಿದೆ.
ಚುಟುಕು ಸಮಾಚಾರ
ವಿಶ್ವ ಆರೋಗ್ಯ ಸಂಸ್ಥೆ (WHO) 1988 ರಲ್ಲಿ ಜಗತ್ತಿನಾದ್ಯಂತ ಈ ಸಾಂಕ್ರಾಮಿಕ ರೋಗದ ಬಗ್ಗೆ ಜನರಲ್ಲಿ ಮಾಹಿತಿ ವಿನಿಮಯವನ್ನು ಸುಲಭಗೊಳಿಸಲು ಡಿಸೆಂಬರ್ 1 ವಿಶ್ವ ಏಡ್ಸ್ ದಿನವನ್ನು ಸ್ಥಾಪಿಸಿತು. ಸುಮಾರು 180 ವಿಶ್ವ ದೇಶಗಳಲ್ಲಿ ಈಗ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.
18ನೇ ಭಾರತ-ಅಮೆರಿಕ ಜಂಟಿ ಸೇನಾ ‘ಯುದ್ಧ ಅಭ್ಯಾಸ’ ನಡೆಯುತ್ತಿದೆ.
ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರನ್ನು ಬೆಸೆಯುವ ಸ್ಕಿಲ್ ಕನೆಕ್ಟ್ ಪೋರ್ಟಲ್ ಉದ್ಘಾಟನೆ, ಐದು ಸಂಸ್ಥೆಗಳೊಂದಿಗೆ ಉದ್ಯೋಗಸೃಷ್ಟಿಯ ಒಡಂಬಡಿಕೆ ಮತ್ತು ತಮ್ಮ ಇಲಾಖೆಗಳಲ್ಲಿ ಏನೆಲ್ಲ ಸುಧಾರಣೆಗಳನ್ನ ಮಾಡಲಾಗುತ್ತದೆ ಎಂಬುದರ ಸಂಕಲ್ಪ ಪತ್ರಗಳ ಬಿಡುಗಡೆಯೊಂದಿಗೆ ತಮ್ಮ ನೇತೃತ್ವದ ಎಲ್ಲ ಇಲಾಖೆಗಳಡಿಯಲ್ಲಿ ಡಿಸೆಂಬರ್ ಪೂರ್ತಿ ನಡೆಯುವ ‘ಸುಶಾಸನ ಮಾಸಾಚರಣೆ’ಗೆ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಚಾಲನೆ ನೀಡಿದರು.
ಗಂಗಾವತಿ ತಾಲೂಕಿನ ಎಲ್ಲಾ ಸರಕಾರಿ ಶಾಲಾಮಕ್ಕಳನ್ನು ಮೌರ್ಯರ ಬೆಟ್ಟಕ್ಕೆ ಕರೆದೊಯ್ದು ಐತಿಹಾಸಿ ಸ್ಥಳದ ಬಗ್ಗೆ ಪೂರ್ಣ ಮಾಹಿತಿ ನೀಡುವ ವಿನೂತನ ಯೋಜನೆಯನ್ನು ತಾಲೂಕಿನ ಶ್ರೀ ರಾಮನಗರ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಹಾಕಿಕೊಂಡಿದೆ.
ಜಾನುವಾರುಗಳ ಅನುಕೂಲಕ್ಕಾಗಿ ಈಗಾಗಲೇ ಮಹಾತ್ಮಾಗಾಂಧಿ ನರೇಗಾ ಯೋಜನೆಯಲ್ಲಿ ದನದ ಶೆಡ್, ಗೋಕಟ್ಟೆಯಂಥ ವಿವಿಧ ಕಾಮಗಾರಿಗಳನ್ನು ಕೈಗೊಂಡಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಇಲಾಖೆ, ಈಗ ಜಾನುವಾರುಗಳ ಮೇವಿಗೆ ಅನುಕೂಲವಾಗುವಂತೆ ಗೋಮಾಳಗಳ ಅಭಿವೃದ್ಧಿಗೆ ಮುಂದಾಗಿದೆ.
ಚುಟುಕು ಸಮಾಚಾರ
ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಇಸ್ರೋ ಆವರಣದಲ್ಲಿ ದೇಶದ ಮೊದಲ ಖಾಸಗಿ ಉಡಾವಣಾ ವಾಹಕ ಮತ್ತು ಯೋಜನಾ ನಿರ್ವಹಣೆ ಕೇಂದ್ರವನ್ನು ಉದ್ಘಾಟಿಸಲಾಯಿತು.
ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಸಂಗೀತ, ನಾಟಕ ಹಾಗೂ ನೃತ್ಯ ಕ್ಷೇತ್ರಗಳಲ್ಲಿ ಅಮೋಘ ಸಾಧನೆ ಮಾಡಿರುವ ಕರ್ನಾಟಕದ ಸಾಧಕರು ಸೇರಿದಂತೆ ವಿವಿಧ ರಾಜ್ಯಗಳ 86 ಮಂದಿಗೆ ‘ಸಂಗೀತ ನಾಟಕ ಅಕಾಡೆಮಿ ಅಮೃತ ಪ್ರಶಸ್ತಿ’ಯನ್ನು ಘೋಷಿಸಿದೆ.
ಅಂತಾರಾಷ್ಟ್ರೀಯ ಆರ್ಥಿಕ ಸಹಕಾರದ ಪ್ರಧಾನ ವೇದಿಕೆಯಾದ ಜಿ20 ಗುಂಪಿನ ಅಧ್ಯಕ್ಷ ಸ್ಥಾನವನ್ನು ಭಾರತ ಅಧಿಕೃತವಾಗಿ ವಹಿಸಿಕೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳೂ ಸೇರಿದಂತೆ ಜಿ20 ಲಾಂಛನವನ್ನು ಹೊಂದಿರುವಂತೆ ದೇಶದ 100 ಸ್ಮಾರಕಗಳು ಡಿಸೆಂಬರ್ 1 ರಿಂದ 7 ರವರೆಗೆ ದೀಪಾಲಂಕಾರದಿಂದ ಝಗಮಗಿಸಲಿವೆ.
ತನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಎಲ್ಲಾ ಸ್ಮಾರಕಗಳ ಸಂಪೂರ್ಣ ಡೇಟಾಬೇಸ್ ಅನ್ನು ರಚಿಸುವ ಗುರಿಯೊಂದಿಗೆ, ಮೊದಲ ಬಾರಿಗೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಬೆಂಗಳೂರು ವೃತ್ತ) ಕರ್ನಾಟಕದ 17 ಜಿಲ್ಲೆಗಳಾದ್ಯಂತ ಎಲ್ಲಾ 129 ಸಂರಕ್ಷಿತ ಸ್ಮಾರಕಗಳಿಗೆ “ಸ್ಮಾರಕ ಆರೋಗ್ಯ ಕಾರ್ಡ್”ನ್ನು ಸಿದ್ಧಪಡಿಸುತ್ತಿದೆ.
NammaKPSC Current Affairs - November 2022
ಚುಟುಕು ಸಮಾಚಾರ
ಮೂಗಿನ ಮೂಲಕ ಹನಿಗಳ ರೂಪದಲ್ಲಿ ನೀಡಬಹುದಾದ ಇನ್ ಕೋವ್ಯಾಕ್ ಕೋವಿಡ್ ಲಸಿಕೆಗೆ ತುರ್ತು ಸಂದರ್ಭದಲ್ಲಿ ಬಳಸಲು ಭಾರತೀಯ ಔಷಧ ನಿಯಂತ್ರಣ ಸಂಸ್ಥೆ ಅನುಮೋದನೆ ನೀಡಿದೆ.
ನವೆಂಬರ್ 2022 ರಲ್ಲಿ, ಅರಬ್ ರಿಪಬ್ಲಿಕ್ ಆಫ್ ಈಜಿಪ್ಟ್ ಸರ್ಕಾರವು UNFCCC (COP 27) ನ 27 ನೇ ಪಕ್ಷಗಳ ಸಮ್ಮೇಳನದ ಅಧಿವೇಶನವನ್ನು ಆಯೋಜಿಸಿತು, ಹಿಂದಿನ ಯಶಸ್ಸನ್ನು ನಿರ್ಮಿಸುವ ದೃಷ್ಟಿಯಿಂದ ಮತ್ತು ಜಾಗತಿಕವಾಗಿ ಹವಾಮಾನ ಬದಲಾವಣೆಯ ಸವಾಲನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಭವಿಷ್ಯದ ಮಹತ್ವಾಕಾಂಕ್ಷೆಗೆ ದಾರಿ ಮಾಡಿಕೊಡುತ್ತದೆ.
259 ಹೆಕ್ಟೇರ್ ಧರಾವಿ ಮರು ಅಭಿವೃದ್ಧಿ ಯೋಜನೆಯ ಬಿಡ್ ನ್ನು ಅದಾನಿ ಸಮೂಹ ಪಡೆದಿದೆ.
ಹೆಚ್ಚುತ್ತಿರುವ ಮಾನವ-ಹಾವು ಸಂಘರ್ಷದ ಘಟನೆಗಳನ್ನು ನಿಭಾಯಿಸಲು ಮತ್ತು ನಿಗದಿತ ವೈಜ್ಞಾನಿಕ ರೀತಿಯಲ್ಲಿ ಹಾವುಗಳನ್ನು ರಕ್ಷಿಸುವುದನ್ನು ಖಚಿತಪಡಿಸಿಕೊಳ್ಳಲು, ಕರ್ನಾಟಕ ಅರಣ್ಯ ಇಲಾಖೆಯು ಹಾವು ರಕ್ಷಕರಿಗಾಗಿ ಇದೇ ಮೊದಲ ಬಾರಿಗೆ ಕಾರ್ಯಾಚರಣಾ ಕೈಪಿಡಿಯೊಂದನ್ನು ಬಿಡುಗಡೆಗೊಳಿಸಿದೆ
ಕರ್ನಾಟಕದ ಕಲಬುರಗಿ, ತುಮಕೂರು, ವಿಜಯಪುರ ಜಿಲ್ಲೆಗಳಲ್ಲಿ ಮಿತ್ರಾ ಯೋಜನೆಯಡಿ ಸಹಾಯಾನುದಾನ ಪಡೆದು ವಿಶ್ವಮಟ್ಟದ ಮೆಗಾ ಜವಳಿ ಪಾರ್ಕ್ ಸ್ಥಾಪನೆಗೆ ಕರ್ನಾಟಕ ಸರ್ಕಾರ ಮುಂದಾಗಿದೆ.
ಚುಟುಕು ಸಮಾಚಾರ
ಹವಾಯಿ ದ್ವೀಪದ ವಿಶ್ವದ ಅತಿದೊಡ್ಡ ಮೌನಾ ಲೋವಾ ಸಕ್ರಿಯ ಜ್ವಾಲಾಮುಖಿಯು ಸ್ಪೋಟಿಸುತ್ತಿದೆ. 38 ವರ್ಷಗಳಲ್ಲಿ ತನ್ನ ಮೊದಲ ಸ್ಫೋಟದಲ್ಲಿ ಕಿತ್ತಳೆ ಬಣ್ಣದ ಪ್ರಜ್ವಲಿಸುವ ಲಾವಾ ಮತ್ತು ಬೃಹತ್ ಪ್ರಮಾಣದ ಬೂದಿಯನ್ನು ಹೊರಸೂಸುತ್ತಿದೆ.
ಭಾರತ ಡಿ. 1ರಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸುತ್ತಿದ್ದು, ಭಯೋತ್ಪಾದನೆ ನಿಗ್ರಹ ಮತ್ತು ಬಹುಪಕ್ಷೀಯ ಸಂಬಂಧಗಳ ಸುಧಾರಣೆಯು ದೇಶದ ಆದ್ಯತೆಯಾಗಿರಲಿದೆ ಎಂದು ಭಾರತದ ವಿಶ್ವಸಂಸ್ಥೆಯ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ತಿಳಿಸಿದ್ದಾರೆ.
ಬ್ರಹ್ಮಾಂಡದ ಉಗಮದ ಹಂತದಲ್ಲಿ ಹುಟ್ಟಿದ ಮೊದಲ ನಕ್ಷತ್ರಗಳು ಮತ್ತು ಆಕಾಶಗಂಗೆಗಳ ಸ್ವರೂಪಗಳ ಬಗ್ಗೆ ‘ಸರಾಸ್–3’ (ಎಸ್ಎಆರ್‌ಎಎಸ್–3) ರೇಡಿಯೊ ದೂರದರ್ಶಕ ಸುಳಿವು ನೀಡಿದೆ ಎಂದು ರಾಮನ್ ಸಂಶೋಧನಾ ಸಂಸ್ಥೆ ತಿಳಿಸಿದೆ.
ಚುಟುಕು ಸಮಾಚಾರ
ಹಿಮಾಲಯ ಪ್ರದೇಶದ ಎತ್ತರದ ಪರ್ವತಗಳಲ್ಲಿ ಜೀವಿಸುವ ಬಹುಪಯೋಗಿ ಪ್ರಾಣಿ ಯಾಕ್ ಅನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ) ಆಹಾರ ಪ್ರಾಣಿ ಎಂದು ಘೋಷಿಸಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ಥಳೀಯ ನಿರ್ಮಿತ ರೋಹಿಣಿ ಆರ್‌ಎಚ್-200 ಸೌಂಡಿಂಗ್ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ರಸ್ತೆ ಗುಂಡಿ, ಸಂಚಾರ ದಟ್ಟಣೆಯಿಂದಾಗಿ ಎದುರಿಸುತ್ತಿರುವ, ಸಮಸ್ಯೆಗಳನ್ನು ದೂರಾಗಿಸಲು ಬಿಬಿಎಂಪಿ ರಾಪಿಡ್ ರೋಡ್ಸ್ ಎಂಬ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಕ್ಷಿಪ್ರಗತಿಯಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ.
ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ನಡಿ ಆರೋಗ್ಯ ವೃತ್ತಿಪರರು ಮತ್ತು ಆರೋಗ್ಯ ಸೌಲಭ್ಯ ನೋಂದಣಿಯಲ್ಲಿ ಇಡೀ ದೇಶದಲ್ಲಿ ಕರ್ನಾಟಕ ಮೊದಲ ಮತ್ತು ಎರಡನೇ ಸ್ಥಾನದಲ್ಲಿದೆ.
ಚುಟುಕು ಸಮಾಚಾರ
ಪ್ರಧಾನಿ ನರೇಂದ್ರ ಮೋದಿ ಇ-ಕೋರ್ಟ್ ಯೋಜನೆಯಡಿ ವರ್ಚುವಲ್ ಜಸ್ಟಿಸ್ ಕ್ಲಾಕ್ ಸೇರಿದಂತೆ ವಿವಿಧ ಹೊಸ ಉಪಕ್ರಮಗಳಿಗೆ ಚಾಲನೆ ನೀಡಿದರು.
ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ ಪಿಎಸ್‌ಎಲ್‌ವಿ-ಸಿ 54 ರಾಕೆಟ್ ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಪ್ರತಿ ವರ್ಷ ನವೆಂಬರ್ 26 ರಂದು ಭಾರತದ ಸಂವಿಧಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ರಾಷ್ಟ್ರೀಯ ಕಾನೂನು ದಿನ ಅಥವಾ ನ್ಯಾಷನಲ್ ಲಾ ಡೇ ಎಂದೂ ಕರೆಯಲಾಗುತ್ತದೆ. ಭಾರತದ ಸಂವಿಧಾನವನ್ನು ಅಳವಡಿಸಿಕೊಂಡ ಸಂದರ್ಭದ ಸ್ಮರಣೆಗಾಗಿ ಈ ದಿನವನ್ನ ಆಚರಿಸಲಾಗುತ್ತದೆ.
ಚುಟುಕು ಸಮಾಚಾರ
ಭಾರತೀಯ ವನ್ಯಜೀವಿ ತಜ್ಞೆ, ಅಸ್ಸಾಂನ ಡಾ. ಪೂರ್ಣಿಮಾ ದೇವಿ ಬರ್ಮನ್ ಅವರಿಗೆ ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವ ಪ್ರಶಸ್ತಿ ಎನಿಸಿರುವ ‘ಈ ವರ್ಷದ ಚಾಂಪಿಯನ್ಸ್ ಆಫ್ ಅರ್ಥ್’ ಪ್ರಶಸ್ತಿ ಲಭಿಸಿದೆ.
ನೇಪಾಳದಿಂದ ಕಣ್ಮರೆಯಾಗಿದ್ದ ಅಳಿವಿನಂಚಿನಲ್ಲಿರುವ ಅಪರೂಪದ ರಣಹದ್ದು ಬಿಹಾರದ ದರ್ಭಾಂಗ ಸಮೀಪದ ಪಕ್ಷಿಧಾಮವೊಂದರಲ್ಲಿ ಪತ್ತೆಯಾಗಿದೆ.
ಹಲವು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾರ್ವತ್ರಿಕ ಚುನಾವಣೆಯ ವರ್ಷವಾಗಿದ್ದು ಈ ನಡುವೆಯೇ ಸರ್ಕಾರ ಅಧಿಸೂಚನೆಯ ಮೂಲಕ ಚುನಾವಣಾ ಬಾಂಡ್ ಗಳ ಮಾರಾಟವನ್ನು 15 ದಿನಗಳ ಕಾಲ ವಿಸ್ತರಿಸಿದೆ.
ತಮಿಳುನಾಡು ಸರ್ಕಾರ ಐತಿಹಾಸಿಕ ಮಧುರೈ ಜಿಲ್ಲೆಯ 2 ಗ್ರಾಮಗಳನ್ನು ಅರಿಟ್ಟಪಟ್ಟಿ ಮತ್ತು ಮೀನಾಕ್ಷಿಪುರಂ ಗ್ರಾಮಗಳನ್ನು ಜೀವವೈವಿಧ್ಯ ಪರಂಪರೆಯ ಸಂಕೇತದ ಪಟ್ಟಿಗೆ ಅಧಿಕೃತವಾಗಿ ಸೇರಿಸಿ ಘೋಷಣೆ ಮಾಡಿದೆ.
ಮಣ್ಣು ಇಲ್ಲದೇ ಬೆಳೆ ಊಹಿಸಲು ಆಸಾಧ್ಯ ಆದರೆ, ಮಣ್ಣು ರಹಿತವಾಗಿ ತರಕಾರಿ, ಸಾಂಬಾರ ಪದಾರ್ಥಗಳು, ಹೂವು ಹಣ್ಣುಗಳನ್ನು ಬೆಳೆಯುವ ಹೊಸ ತಂತ್ರಜ್ಞಾನ ಉತ್ತೇಜಿಸಲು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್ಆರ್) ಮುಂದಾಗಿದೆ.
ಚುಟುಕು ಸಮಾಚಾರ
ರಾಷ್ಟ್ರೀಯ ಮಹಿಳಾ ಆಯೋಗ (NCW) ಡಿಜಿಟಲ್ ಶಕ್ತಿ ಅಭಿಯಾನದ ನಾಲ್ಕನೇ ಹಂತವನ್ನು ಪ್ರಾರಂಭಿಸಿದ್ದು, ಇದು ಸೈಬರ್ಸ್ಪೇಸ್ನಲ್ಲಿ ಮಹಿಳೆಯರ ಡಿಜಿಟಲ್ ಸಬಲೀಕರಣ ಮತ್ತು ಕೌಶಲ್ಯಕ್ಕಾಗಿ ಪ್ಯಾನ್ ಇಂಡಿಯಾ ಯೋಜನೆಯಾಗಿದೆ.
ಹುಬ್ಬಳ್ಳಿ ಏರ್‌ಪೋರ್ಟ್ ರಾಜ್ಯದ ಮೊದಲ ಹಸಿರು ವಿಮಾನ ನಿಲ್ದಾಣವಾಗಿ ರೂಪುಗೊಂಡಿದೆ.
ಚಿತ್ರ ಕಲಾವಿದ ಕೆ. ಸೋಮಶೇಖರ್ ಸಿದ್ಧಪಡಿಸಿರುವ ರಾಜ್ಯದ ಸಾಂಪ್ರದಾಯಿಕ ಕಲೆ ಹಾಗೂ ನಾಡಗೀತೆಯಲ್ಲಿರುವ ಕೆಲವು ಅಂಶಗಳನ್ನು ಸಾಂಕೇತಿಕವಾಗಿ ಬಿಂಬಿಸುವ ‘ನಾಡದೇವತೆ’ಯ ಚಿತ್ರವನ್ನು ಅಧಿಕೃತವೆಂದು ಪರಿಗಣಿಸುವಂತೆ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಿ. ಮಹೇಂದ್ರ ಅಧ್ಯಕ್ಷತೆಯ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಚುಟುಕು ಸಮಾಚಾರ
ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ ಕಮೆಂಗ್ ಜಲವಿದ್ಯುತ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಸಮರ್ಪಿಸಿದರು.
ಒಂದು ತಿಂಗಳ ಕಾಲ ನಡೆಯುವ ಕಾಶಿ–ತಮಿಳು ಸಮಾಗಮ ಕಾರ್ಯಕ್ರಮಕ್ಕೆ ವಾರಾಣಸಿಯ ಬನಾರಸ್ ವಿಶ್ವವಿದ್ಯಾಲಯದ ಬಯಲು ರಂಗಮಂದಿರದ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
‘ಸಹ್ಯಾದ್ರಿ ಕೆಂಪು ಮುಕ್ತಿ’ ಹೆಸರಿನ ಕೆಂಪಕ್ಕಿಯ ಭತ್ತದ ತಳಿಯನ್ನು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.
ಚುಟುಕು ಸಮಾಚಾರ
ವೈಯಕ್ತಿಕ ದತ್ತಾಂಶ ರಕ್ಷಣೆ ಮಸೂದೆ 2022ರ ಅಡಿಯಲ್ಲಿನ ನಿಬಂಧನೆಗಳನ್ನು ಉಲ್ಲಂಘಿಸಿದರೆ ವಿಧಿಸುವ ದಂಡದ ಮೊತ್ತವನ್ನು 6 ಬಗೆಯಲ್ಲಿ 500 ಕೋಟಿ ರೂವರೆಗೆ ಹೆಚ್ಚಿಸಿ ಕೇಂದ್ರ ಸರ್ಕಾರ ಉದ್ದೇಶಿತ ಕರಡು ಪ್ರಸ್ತಾವನೆ ಹೊರಡಿಸಿದೆ.
ಆಸ್ಟ್ರೇಲಿಯಾ ತನ್ನ ರಾಯಭಾರ ಕಚೇರಿಯನ್ನು 2023 ರಲ್ಲಿ ಬೆಂಗಳೂರಿನಲ್ಲಿ ತೆರೆಯಲು ನಿರ್ಧರಿಸಿದೆ.
ರಾಜ್ಯ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದಂತೆ ಕರ್ನಾಟಕ ರಾಜ್ಯ ಶ್ರೀಗಂಧ ನೀತಿ-2022ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಕರ್ನಾಟಕ ರಾಜ್ಯ ದತ್ತಿ ಇಲಾಖೆಯು ಚಿಕ್ಕಮಗಳೂರಿನ ಗುರು ದತ್ತಾತ್ರೇಯ ಬಾಬಾಬುಡನ್ ದೇಗುಲದಲ್ಲಿನಡೆಯುವ ಧಾರ್ಮಿಕ ವಿಧಿ ವಿಧಾನಗಳ ಮೇಲ್ವಿಚಾರಣೆಗಾಗಿ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿದೆ.
ಚುಟುಕು ಸಮಾಚಾರ
ಅರುಣಾಚಲ ಪ್ರದೇಶದ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದು, ಇದು ಈಶಾನ್ಯ ಪ್ರದೇಶದ 16ನೇ ವಿಮಾನ ನಿಲ್ದಾಣವಾಗಿದೆ.
ವಿದ್ಯುನ್ಮಾನ ಜಾಲಗಳ ಮೂಲಕ ಸರಕು ಮತ್ತು ಸೇವೆಗಳ ವಿನಿಮಯಕ್ಕೆ ಉತ್ತೇಜನ ನೀಡುವ ಉದ್ದೇಶದ ಓಎನ್‌ಡಿಸಿ (ಓಪನ್ ನೆಟ್‌ವರ್ಕ್ ಡಿಜಿಟಲ್ ಕಾಮರ್ಸ್) ಪಾರದರ್ಶಕ ಮತ್ತು ಉತ್ತಮ ವ್ಯವಸ್ಥೆಯಾಗಿ ರೂಪುಗೊಂಡಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಶೀಘ್ರದಲ್ಲೇ ಕರ್ನಾಟಕದಲ್ಲೂ ಒನ್ ಹೆಲ್ತ್ ಮಿಷನ್ ಪ್ರಾರಂಭ ಮಾಡಲಾಗುವುದು ಎಂದು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಅಜಯ್ ಸೂದ್ ತಿಳಿಸಿದ್ದಾರೆ.
ಚುಟುಕು ಸಮಾಚಾರ
ನಾಸಾವು ಚಂದ್ರಯಾನದ ಅಂಗವಾಗಿ, ಆರ್ಟೆಮಿಸ್– 1 ಒರಿಯನ್’ನೌಕೆಯನ್ನು ಸ್ಪೇಸ್ ಲಾಂಚ್ ಸಿಸ್ಟಂನ (ಎಸ್‌ಎಲ್‌ಎಸ್) ಪರೀಕ್ಷಾರ್ಥವಾಗಿ ಉಡಾವಣೆ ಮಾಡಿದೆ.
2022 ನೇ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಪಟ್ಟಿಯನ್ನು, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಬಿಡುಗಡೆ ಮಾಡಿದೆ. ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗಾಗಿ ಭಾರತ ಸರ್ಕಾರ ಈ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ
ಸಂಸದರು, ಶಾಸಕರು ಶಾಸನಸಭೆಗಳಲ್ಲಿ ಮಾತನಾಡಲು, ಮತ ಚಲಾಯಿಸಲು ಲಂಚ ಪಡೆದ ಪ್ರಕರಣದಲ್ಲಿ ಕ್ರಿಮಿನಲ್ ವಿಚಾರಣೆಯಿಂದ ವಿನಾಯಿತಿ ಪಡೆಯಬಹುದೇ ಎಂಬ ವಿಷಯ ಕುರಿತ ವಿಚಾರಣೆಯಲ್ಲಿ ಜನಪ್ರತಿನಿಧಿಗಳಿಗೆ ನೆರವಾಗಲು ಸುಪ್ರೀಂ ಕೋರ್ಟ್ ‘ಅಮಿಕಸ್ ಕ್ಯೂರಿ’ ನೇಮಿಸಿದೆ.
ಚುಟುಕು ಸಮಾಚಾರ
ವಾರ್ಷಿಕ 3000 ಭಾರತೀಯ ವೀಸಾ ಅನುಮತಿಗೆ ಬ್ರಿಟನ್ ಒಪ್ಪಿಗೆ ನೀಡಿದೆ.
ಭಾರತವು 2023ನೇ ಸಾಲಿನ ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ (ಸಿಸಿಪಿಐ) ಎಂಟನೇ ಸ್ಥಾನಕ್ಕೇರಿದೆ.
ಕರ್ನಾಟಕದ ಗದಗ ಜಿಲ್ಲೆಯ ಗಜೇಂದ್ರಗಡ ಬಳಿಯ ಭೈರಾಪುರ ಗುಡ್ಡದ ಮೇಲೆ ‘ಹಿಟ್ಲರ್ ಮುಖ’ ಹೋಲುವ ಅಪರೂಪದ ಕೀಟಗಳು ಪತ್ತೆಯಾಗಿದೆ.
ಜಾಗತಿಕವಾಗಿ ಮಹತ್ವ ಪಡೆದಿರುವ 25ನೇ ಆವೃತ್ತಿ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ (ಬೆಂಗಳೂರು ಟೆಕ್ ಸಮ್ಮಿಟ್) ಪ್ರಧಾನಮಂತ್ರಿ ನರೇಂದ್ರಮೋದಿ ಅವರು ವರ್ಚುವಲ್ ಚಾಲನೆ ನೀಡಿದರು. 25ನೇ ಅವೃತ್ತಿಯ ಸಂಭ್ರಮಾಚರಣೆಯ ಪ್ರಯುಕ್ತ ‘ಸ್ಮರಣಾರ್ಥ ಫಲಕ’ವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿದರು.
ಚುಟುಕು ಸಮಾಚಾರ
ಭಾರತ ಸರ್ಕಾರವು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವಾದ ನವೆಂಬರ್ 15 ಅನ್ನು ಪ್ರತಿ ವರ್ಷ ಜನಜಾತಿಯ ಗೌರವ್ ದಿವಸ್ ಎಂದು ಆಚರಿಸಲಾಗುವುದು ಎಂದು ಘೋಷಿಸಿದೆ.
ಈ ಬಾರಿಯ ಭಾರತದ ಹುಲಿ ಸಂರಕ್ಷಿತ ಪ್ರದೇಶಗಳ ನಿರ್ವಹಣೆ ಕುರಿತು ನಡೆಸಿರುವ ಮ್ಯಾನೇಜ್‌ಮೆಂಟ್ ಎಫೆಕ್ಟಿವ್‌ನೆಸ್ ಎವಲ್ಯೂಷನ್ ನಲ್ಲಿ ಬಂಡೀಪುರ ಉನ್ನತ ಅಂಕಗಳನ್ನು ಗಳಿಸಿ ಮತ್ತೊಮ್ಮೆ ಅತ್ಯುತ್ತಮ ಹುಲಿ ಸಂರಕ್ಷಿತ ವಲಯ ಎಂಬ ಬಿರುದನ್ನು ತನ್ನದಾಗಿಸಿಕೊಂಡಿದೆ.
ಚುಟುಕು ಸಮಾಚಾರ
ಇಂಡೋನೇಷ್ಯಾದ ಬಾಲಿಯ ನುಸಾ ದುವಾದಲ್ಲಿ 2022 ರ 17ನೇ G20 ಬಾಲಿ ಶೃಂಗಸಭೆಯು ಈ ವರ್ಷ ನವೆಂಬರ್ 15 ಮತ್ತು 16 ರಂದು ನಡೆಯಲಿದೆ.
ಅಕ್ಟೋಬರ್ ತಿಂಗಳಲ್ಲಿ ದೇಶದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇಕಡ 6.77ಕ್ಕೆ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಸಗಟು ಹಣದುಬ್ಬರ ಪ್ರಮಾಣವು 19 ತಿಂಗಳ ಕನಿಷ್ಠ ಮಟ್ಟವಾದ ಶೇ 8.39ಕ್ಕೆ ತಗ್ಗಿದೆ.
ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಚಿವೆ ಶಶಿಕಲಾ ಜೊಲ್ಲೆ ವೊಕಲ್ ಫಾರ್ ಲೋಕಲ್ ಅಭಿಯಾನಕ್ಕೆ ಕೈಜೋಡಿಸುವ ಉದ್ದೇಶದಿಂದ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆಯ ಕಾಮಧೇನುವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಚುಟುಕು ಸಮಾಚಾರ
ಅಮೆರಿಕದ ಹಣಕಾಸು ಇಲಾಖೆ ಭಾರತಸಹಿತ ಐದು ಪ್ರಮುಖ ವಾಣಿಜ್ಯ ಪಾಲುದಾರ ರಾಷ್ಟ್ರಗಳನ್ನು ಕರೆನ್ಸಿ ಕಣ್ಗಾವಲು ಪಟ್ಟಿಯಿಂದ ತೆಗೆದು ಹಾಕಿದೆ.
ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ ಜಾಗತಿಕ ಜನಸಂಖ್ಯೆಯು ನವೆಂಬರ್ ಮಧ್ಯದ ವೇಳೆಗೆ ಎಂಟು ಶತಕೋಟಿ ತಲುಪುತ್ತಿದೆ ಮತ್ತು ಮುಂಬರುವ ದಶಕಗಳಲ್ಲಿ ನಿಧಾನ ಗತಿಯಲ್ಲಿ ಮತ್ತು ಪ್ರಾದೇಶಿಕ ಅಸಮಾನತೆಗಳೊಂದಿಗೆ ಬೆಳೆಯುತ್ತಲೇ ಇರುತ್ತದೆ.
ಮೈಸೂರಿನಲ್ಲಿ ಮೂರು ದಿನಗಳ ಕಾಲ ನಡೆದ ಕಿಸಾನ ಸ್ವರಾಜ ಸಮೇಳನದಲ್ಲಿ ರೈತರ ಹಿತ ಕಾಪಾಡುವಂತೆ ಒತ್ತಾಯಿಸಿ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಕುರಿಗಾಹಿಗಳಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟು ಆರ್ಥಿಕವಾಗಿ ಬಲವರ್ಧನೆ ಮಾಡುವ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಜಾರಿಗೊಳಿಸಲಾಗಿದೆ.
ಚುಟುಕು ಸಮಾಚಾರ
ಬುಡಕಟ್ಟು ಸಮುದಾಯಗಳ, ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ (PVTGs) ಪರಂಪರೆಯನ್ನು ಪ್ರದರ್ಶಿಸುವ ಮೊದಲ ಪ್ರಯತ್ನದಲ್ಲಿ, ಭಾರತೀಯ ಮಾನವಶಾಸ್ತ್ರೀಯ ಸಮೀಕ್ಷೆ (AnSI) ತನ್ನ ವಿವಿಧ ಪ್ರಾದೇಶಿಕ ಕೇಂದ್ರಗಳಲ್ಲಿ ಹಲವಾರು ಸಮುದಾಯಗಳ ಗುಡಿಸಲುಗಳನ್ನು ಮರುಸೃಷ್ಟಿಸಿದೆ.
ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಯಿಂದ ರಾಜ್ಯಪಾಲರನ್ನು ಪದಚ್ಯುತಗೊಳಿಸಲು ಕೇರಳರಾಜ್ಯ ಸರ್ಕಾರ ಸುಗ್ರೀವಾಜ್ಞೆ ತರಲು ನಿರ್ಧರಿಸಿದೆ.
ಟಿವಿ ಚಾನೆಲ್ ಗಳು ರಾಷ್ಟ್ರೀಯ ಹಿತಾಸಕ್ತಿ ಅಥವಾ ಸಾರ್ವಜನಿಕ ಸೇವೆಯಲ್ಲಿ ಪ್ರತಿದಿನ 30 ನಿಮಿಷಗಳ ಕಾಲ ವಿಷಯವನ್ನು ಪ್ರಸಾರ ಮಾಡಬೇಕು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತನ್ನ ಇತ್ತೀಚಿನ ಅಪ್ ಲಿಂಕಿಂಗ್ ಮತ್ತು ಡೌನ್‌ಲೋಡ್ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದೆ.
‘ಅಮೂರ್ ಫಾಲ್ಕನ್’ ಎಂದು ಕರೆಯಲ್ಪಡುವ ಈ ಪಕ್ಷಿಯು ಕಾರವಾರದ ಗ್ರಾಮೀಣ ಭಾಗದಲ್ಲಿ ಕಂಡುಬಂದಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ದ ಟರ್ಮಿನಲ್ 2ರ ಉದ್ಘಾಟನೆ ಮಾಡಿದರು.
ಚುಟುಕು ಸಮಾಚಾರ
19 ದೇಶಗಳು ಹಾಗೂ ಐರೋಪ್ಯ ಒಕ್ಕೂಟ (ಅದರಲ್ಲಿ 27 ದೇಶಗಳಿವೆ) ಒಳಗೊಂಡ ವಿಶ್ವದ ಅತ್ಯಂತ ಪ್ರಭಾವಿ ಕೂಟ ‘ಜಿ 20’ಯ ಅಧ್ಯಕ್ಷತೆಯನ್ನು ಡಿ.1, 2022 ರಿಂದ ವಹಿಸಿಕೊಳ್ಳುತ್ತಿರುವ ಭಾರತ ಈ ಐತಿಹಾಸಿಕ ಜವಾಬ್ದಾರಿಯ ಸಂಭ್ರಮಕ್ಕಾಗಿ ಲಾಂಛನ, ಧ್ಯೇಯ (ಥೀಮ್) ಹಾಗೂ ವೆಬ್‌ಸೈಟ್‌ಗಳನ್ನು ಲೋಕಾರ್ಪಣೆ ಮಾಡಿದೆ.
ಭಾರತೀಯ ಕಪ್ಪು ಜೇನುಹುಳು (ಅಪಿಸ್ ಕರಿಂಜೋಡಿಯನ್) ಎಂದು ನಾಮಕರಣಗೊಂಡ ಜೇನುನೊಣದ ಹೊಸ ಸ್ಥಳೀಯ ಪ್ರಭೇದವು ಪಶ್ಚಿಮ ಘಟ್ಟಗಳಲ್ಲಿ ಪತ್ತೆಯಾಗಿದೆ.
ಹಳ್ಳಿಗರ ಆರೋಗ್ಯ ಸುರಕ್ಷತೆಯ ಕಾರಣಕ್ಕೆ ಸೋಂಕು ರಹಿತ ರೋಗಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡುವುದಕ್ಕೆ ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನ ಯೋಜನೆಯನ್ನು ಈ ವರ್ಷಾಂತ್ಯದೊಳಗೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ.
ರೈತರು, ನೇಕಾರರಾರೂ ಮತ್ತು ಮೀನುಗಾರರ ಮಕ್ಕಳಿಗೆ ಜಾರಿಗೊಳಿಸಿದ ರೈತ ವಿದ್ಯಾವಿಧಿ ಯೋಜನೆಯನ್ನು ಹಳದಿ ಬೋರ್ಡ ಹೊಂದಿದ ಟ್ಯಾಕ್ಸಿ ಮತ್ತು ಆಟೋ ಚಾಲಕರ ಮಕ್ಕಳಿಗೂ ವಿಸ್ತರಿಸಲಾಗಿದೆ.
ಚುಟುಕು ಸಮಾಚಾರ
ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ರಾಕೆಟ್ ವಿಕ್ರಮ್ ಎಸ್ನವೆಂಬರ್ 12 ಮತ್ತು 16 ರ ನಡುವೆ ಉಡಾವಣೆಗೆ ಸಿದ್ಧವಾಗಿದೆ ಎಂದು ಹೈದರಾಬಾದ್ ಮೂಲದ ಬಾಹ್ಯಾಕಾಶ ಸ್ಟಾರ್ಟ್ಅಪ್ ಸ್ಕೈರೂಟ್ ಏರೋ ಸ್ಪೇಸ್ ಪ್ರಕಟಿಸಿದೆ.
ಉದ್ಯೋಗಿಗಳ ಪಿಂಚಣಿ (ತಿದ್ದುಪಡಿ)– 2014ರ ಯೋಜನೆಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಜತೆಗೆ, ಪಿಂಚಣಿ ನಿಧಿಗೆ ಸೇರಲು ನಿಗದಿಪಡಿಸಿದ್ದ ಗರಿಷ್ಠ ಮಾಸಿಕ ರೂ. 15 ಸಾವಿರ ವೇತನದ ಮಿತಿಯನ್ನೂ ರದ್ದುಪಡಿಸಿದೆ.
68,640 ಹೆಕ್ಟೇರ್ ಪ್ರದೇಶದ ಕಾವೇರಿ ದಕ್ಷಿಣ ವನ್ಯಜೀವಿ ಅಭಯಾರಣ್ಯವನ್ನು ತಮಿಳುನಾಡು ಸರ್ಕಾರವು 17ನೇ ವನ್ಯಜೀವಿ ಅಭಯಾರಣ್ಯವಾಗಿಘೋಷಿಸಿ ಅಧಿಸೂಚನೆ ಹೊರಡಿಸಿದೆ. ಅಭಯಾರಣ್ಯವು ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳಲ್ಲಿನ ಮೀಸಲು ಅರಣ್ಯ ಪ್ರದೇಶಗಳನ್ನು ಒಳಗೊಂಡಿದೆ. ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ಸೆಕ್ಷನ್ 26-A ಅಡಿಯಲ್ಲಿ ಅಭಯಾರಣ್ಯವನ್ನು ಸೂಚಿಸಲಾಗಿದೆ.
ಚುಟುಕು ಸಮಾಚಾರ
ಇಡೀ ಜಗತ್ತಿನಲ್ಲಿ ಒಟ್ಟು 5 ದೇಶಗಳ ಮುಖ್ಯಸ್ಥರು ಭಾರತ ಮೂಲದವರಾಗಿದ್ದಾರೆ. ಇದೀಗ 5ನೇ ದೇಶವಾಗಿ ಬ್ರಿಟನ್ ಈ ಪಟ್ಟಿಗೆ ಸೇರಿದೆ.
ಗ್ರಾಮೀಣ ಪ್ರದೇಶದ ಬಡ ಹಾಗೂ ದುರ್ಬಲ ಕುಟುಂಬಗಳ ಮಹಿಳೆಯರ ಸಾಂಸ್ಥಿಕ, ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಬಡತನದ ತೀವ್ರತೆಯನ್ನು ತಗ್ಗಿಸುವ ಉದ್ದೇಶದಿಂದ ಕೃಷಿ ಪೌಷ್ಟಿಕ ತೋಟ ಎಂಬ ಯೋಜನೆಯನ್ನು ಸರ್ಕಾರ ಅನುಷ್ಠಾನಕ್ಕೆಗೊಳಿಸಿದೆ .
ಚೆನ್ನೈ – ಬೆಂಗಳೂರು-ಮೈಸೂರು ನಡುವಿನ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಕರ ರೈಲು ಚೆನ್ನೈನ ಎಂ.ಜಿ ರಾಮಚಂದ್ರನ್ ಕೇಂದ್ರ ರೈಲು ನಿಲ್ದಾಣದಿಂದ ಪ್ರಾಯೋಗಿಕ ಸಂಚಾರ ಆರಂಭಿಸಿತು. ನವೆಂಬರ್ 11ಕ್ಕೆ ಪ್ರಧಾನಿಯವರು ಚಾಲನೆ ನೀಡಲಿದ್ದಾರೆ
ಚುಟುಕು ಸಮಾಚಾರ
ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಿಂದ ವಲಸೆ ಬಂದು ಪ್ರಸ್ತುತ ಗುಜರಾತ್ನ ಆನಂದ್ ಮತ್ತು ಮೆಹ್ಸಾನಾ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಹಿಂದೂಗಳು, ಸಿಖ್ರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ, 2019 (ಸಿಎಎ) ಅಡಿ ಪೌರತ್ವ ನೀಡಿಲ್ಲ ಬದಲಾಗಿ ಪೌರತ್ವ ಕಾಯ್ದೆ, 1955ರ ಅಡಿಯಲ್ಲಿ ಭಾರತೀಯ ಪೌರತ್ವ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಮುಂದುವರೆದ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಕೇಂದ್ರೀಯ ಸಂಸ್ಥೆಗಳು ಮತ್ತು ಉದ್ಯೋಗದಲ್ಲಿ ಶೇ. 10 ರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನದ 103ನೇ ತಿದ್ದುಪಡಿಯ ಮಾನ್ಯತೆಯನ್ನು ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಅವರನ್ನೊಳಗೊಂಡ ಪಂಚ ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ ಎತ್ತಿ ಹಿಡಿದಿದೆ.
ರಾಜ್ಯ ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ಐಕ್ಯಾಟ್(ಇಂಟರ್ನ್ಯಾಷನಲ್ ಕ್ರಿಟಿಕಲ್-ಕೇರ್ ಏರ್ ಟ್ರಾನ್ಸ್‌ಫರ್ ಟೀಮ್) ಫೌಂಡೇಶನ್ ರಾಜ್ಯ ಸರ್ಕಾರ ಶಿಫಾರಸು ಮಾಡಿದ ರೋಗಿಗಳಿಗೆ ಉಚಿತವಾಗಿ ಏರ್ ಆಂಬ್ಯುಲೆನ್ಸ್ ಸೇವೆ ನೀಡಲಿದೆ.
ಆರು ವರ್ಷಗಳ ನಂತರ ಬೆಂಗಳೂರಿನಲ್ಲಿ ಇನ್ವೆಸ್ಟ್ ಕರ್ನಾಟಕ-2022 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ(GIM) ನಡೆಯಿತು.
ಚುಟುಕು ಸಮಾಚಾರ
ಅನಿಯಂತ್ರಿತವಾಗಿ ಭೂ ವಾತಾವರಣಕ್ಕೆ ವಾಪಸ್ಸಾದ ಭಾರತದ ನಿಷ್ಕ್ರಿಯ ಉಪಗ್ರಹ RISAT-2, ಇಂಡೋನೇಷ್ಯಾದ ಜಕಾರ್ತಾ ಸಮೀಪ ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ (ಇಸ್ರೊ–ಐಎಸ್‌ಆರ್‌ಒ) ತಿಳಿಸಿದೆ.
ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಒದಗಿಸಿರುವ ಭದ್ರತೆಯನ್ನು ಮಹಾರಾಷ್ಟ್ರ ಸರ್ಕಾರ ಈಗ ಹೆಚ್ಚಿಸಿದೆ. ನಟರಾದ ಅಕ್ಷಯ್ ಕುಮಾರ್ ಮತ್ತು ಅನುಪಮ್ ಖೇರ್ ಅವರಿಗೂ ವರ್ಗೀಕೃತ ಶ್ರೇಣಿಯ ಭದ್ರತೆ ಕಲ್ಲಿಸಲಾಗಿದೆ. ಸಲ್ಮಾನ್ ಭದ್ರತೆಯನ್ನು ಈಗಿರುವ ಎಕ್ಸ್ನಿಂ ವೈಪ್ಲಸ್ ವರ್ಗದ ಮೇಲ್ದರ್ಜೆಗೆ ಏರಿಸಲಾಗಿದೆ. ಅಕ್ಷಯ ಮತ್ತು ಅನುಪಮ್ ಎಕ್ಸ್ ವರ್ಗದ ಭದ್ರತೆ ಪಡೆಯಲಿದ್ದಾರೆ.
ಭಾರತೀಯ ಸೇನೆಯು ಹೊಸ ವಿನ್ಯಾಸದ ಸಮವಸ್ತ್ರಕ್ಕೆ ಪೇಟೆಂಟ್ ಮಾಡಿಸಿದೆ. ಹೀಗಾಗಿ ಇನ್ನು ಮುಂದೆ ಅದೇ ಮಾದರಿಯ ಸೇನಾ ಸಮವಸ್ತ್ರದ ವಿನ್ಯಾಸವನ್ನು ನಕಲು ಮಾಡುವುದು ಶಿಕ್ಷಾರ್ಹ ಅಪರಾಧವಾಗಲಿದೆ.
ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಿ, ಆ ಮಾಹಿತಿಯನ್ನು ಸಾರ್ವಜನಿಕವಾಗಿ ಮುಕ್ತವಾಗಿಸಲು ಬಯಸಿದೆ. ಸಾವಿರಾರು ಕೋಟಿ ರೂ. ವ್ಯವಹಾರ ನಡೆಯುವ ಕ್ಷೇತ್ರದಲ್ಲಿ ಪಾರದರ್ಶಕತೆ ಕೊರತೆ ಎದ್ದು ಕಾಣುತ್ತಿದ್ದು, ಸರ್ಕಾರ ಈಗ ‘ಬೆಸ್ಟ್ ಪ್ರಾಕ್ಟೀಸಸ್’ ಕಲ್ಪನೆಯಲ್ಲಿ ಡಿಜಿಟಲೀಕರಣಕ್ಕೆ ಮೊರೆ ಹೋಗಿದೆ.
ಕೃಷಿ ಮೇಳ-2022ರಲ್ಲಿ ಮಣ್ಣು ರಹಿತ ಕೃಷಿ ಪದ್ಧತಿಯ ಪ್ರಾತ್ಯಕ್ಷಿತೆ ನೀಡಲಾಯಿತು.
ಸಾವಯವ ಕೃಷಿ ಮತ್ತು ಪಶುಸಂಗೋಪನೆಯಲ್ಲಿ ವಿಶೇಷ ಆಕರ್ಷಣೆಗಳೊಂದಿಗೆ ಕೃಷಿ ಕ್ಷೇತ್ರದ ಇತ್ತೀಚಿನ ತಂತ್ರಜ್ಞಾನಗಳನ್ನು ಪ್ರದರ್ಶಿಸುವ ನಾಲ್ಕು ದಿನಗಳ ಕೃಷಿ ಮೇಳವು ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಆರಂಭಗೊಂಡಿದೆ.
ಚುಟುಕು ಸಮಾಚಾರ
ಕೆಲವು ದಿನಗಳ ಹಿಂದೆ ಮಂಗಳಗ್ರಹ ಗೃಹಕ್ಕೆ ಉಲ್ಕೆಯೊಂದು ವೇಗದಿಂದ ಅಪ್ಪಳಿಸಿತು. ಅದು ಅಪ್ಪಳಿಸಿದ ರಭಸಕ್ಕೆ ಮಂಗಳನ ಅಂಗಳದ ಮೇಲೆ ಭೂಕಂಪನದ ಅಲೆಗಳೇ ಎದ್ದವು. ಬರೋಬ್ಬರಿ 490 ಅಡಿ ಅಗಲದ ಕುಳಿ ಉಂಟಾಯಿತು ಆ ಉಲ್ಕೆಯು ಅಪ್ಪಳಿಸಿದಾಗ ನೆಲದಿಂದ ಮೇಲೆದ್ದ ಮಣ್ಣಿನ ಜೊತೆಗೆ ಮಂಜಿನ(ಹಿಮ) ಕಣಗಳೂ ಹೊರ ಚಿಮ್ಮಿದವು.
ಜಲಸಂಪನ್ಮೂಲ ಅಭಿವೃದ್ಧಿ ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ಡೆನ್ಮಾರ್ಕ್ ಜತೆಗಿನ ಒಡಂಬಡಿಕೆಗೆ (ಎಂಒಯು) ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಉಕ್ರೇನ್‌ನಿಂದ ಆಹಾರ ಧಾನ್ಯ ಸುಗಮ ರಫ್ತಿಗೆ ಅವಕಾಶ ಕಲ್ಪಿಸುವ ವಿಶ್ವಸಂಸ್ಥೆ ಮತ್ತು ಟರ್ಕಿ ಮಧ್ಯಸ್ಥಿಕೆಯ ಯುದ್ಧಕಾಲದ ಒಪ್ಪಂದದಿಂದ ಹೊರಗುಳಿಯುವ ಬೆದರಿಕೆ ಹಾಕಿದ್ದ ರಷ್ಯಾ ತನ್ನ ನಿಲುವನ್ನು ಬದಲಿಸಿದೆ.
ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಡಿಆರ್‌ಡಿಒ ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್(ಬಿಎಂಡಿ) ಇಂಟರ್‌ಸೆಪ್ಟರ್ ಎಡಿ-1 ಕ್ಷಿಪಣಿಯ ಎರಡನೇ ಹಂತದ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.
ಭಾರತ ಮತ್ತು ಚೀನಾ ಗಡಿಯಲ್ಲಿನ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಪಹರೆ ಕಾಯುವ ಇಂಡೊ ಟಿಬೇಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿಗೆ ಶಸ್ತ್ರಾಸ್ತ್ರ ರಹಿತವಾದಂತಹ ಆಕ್ರಮಣಕಾರಿ ಯುದ್ಧ ತಂತ್ರಗಳ ಕುರಿತು ತರಬೇತಿ ನೀಡಲು ನಿರ್ಧರಿಸಲಾಗಿದೆ.
ರಾಜ್ಯದಲ್ಲಿ ಬಂಡವಾಳ ಹೂಡಿಕೆಗಿರುವ ತೊಡಕುಗಳನ್ನು ತ್ವರಿತಗತಿಯಲ್ಲಿ ನಿವಾರಿಸಿ, ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ನೀಡುವ ‘ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮ’ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಹೆದ್ದಾರಿಗಳಲ್ಲಿ ಅಪಘಾತಗಳು, ವಾಹನಗಳಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಘಟನೆಗಳನ್ನು ತಪ್ಪಿಸಲು ಶಾಲಾ ವಾಹನಗಳೂ ಸೇರಿದಂತೆ ಸುಮಾರು 6.87 ಲಕ್ಷ ಸಾರ್ವಜನಿಕ ಸಾರಿಗೆ ವಾಹನಗಳಿಗೆ ವಾಹನ ಚಲನೆ ನಿಗಾ ಉಪಕರಣಗಳು (ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್) ಮತ್ತು ಪ್ಯಾನಿಕ್ ಬಟನ್ ಅಳವಡಿಸಲು ಸರ್ಕಾರ ತೀರ್ಮಾನಿಸಿದೆ.
ಚುಟುಕು ಸಮಾಚಾರ
ಅಂತರಿಕ್ಷ ಕಕ್ಷೆಯಲ್ಲಿ ತನ್ನ ಅಸ್ತಿತ್ವ ಬಲಪಡಿಸುವುದರ ಭಾಗವಾಗಿ ಮೂರು ಮತ್ತು ಅಂತಿಮ ಹಂತದ ಪರಿಕರಗಳನ್ನು ಹೊತ್ತ ಮೆಂಗ್ಟಿಯಾನ್ ಅನ್ನು ತನ್ನ ಶಾಶ್ವತ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿಸುವಲ್ಲಿ ಚೀನಾ ಯಶಸ್ವಿಯಾಯಿತು.
ಪ್ಯಾಲೆಸ್ತೀನ್ ನಿರಾಶ್ರಿತರಿಗಾಗಿ ಭಾರತವು ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ(UNRWA)ಗೆ 2.5 ಮಿಲಿಯನ್ ಡಾಲರ್ ನೆರವು ನೀಡಿದೆ.
ದೇಶದ ಮೊದಲ ಕಾಡುಕೋಣ (Gour) ಸಫಾರಿಗೆ ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ–ಸಿಂಹ ಧಾಮ ಸಿದ್ಧವಾಗಿದೆ. ನ. 1 ರಂದು ಕರ್ನಾಟಕ ರಾಜ್ಯೋ ತ್ಸವದ ದಿನ ಪ್ರವಾಸಿಗರಿಗೆ ಪ್ರಾಯೋಗಿಕವಾಗಿ ಕಾಡುಕೋಣಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಯಿತು.
ವಿಶ್ವವಿಖ್ಯಾತ ಹಂಪಿಯಲ್ಲಿ ಕನ್ನಡ ರಾಜ್ಯಾತ್ಸವದ ನಿಮಿತ್ತ ರಾತ್ರಿ ಹಂಪಿ ಬೈ ನೈಟ್ ವಿನೂತನ ಯೋಜನೆಯ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಚಾಲನೆ ನೀಡಿದರು.
ದೇಶದಲ್ಲೇ ಮೊದಲ ಬಾರಿಗೆ ಗ್ರಾಮಾಭಿವೃದ್ಧಿ ಗ್ರೂಪ್ ಫೆಲೋಶಿಪ್ ಕರ್ನಾಟಕ ರಾಜ್ಯದಲ್ಲಿ ಘೋಷಣೆಯಾಗಿತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವು ರಾಜ್ಯೋತ್ಸವದ ಹಿನ್ನೆಲೆಯಲ್ಲಿ ‘ನಮ್ಮ ಗ್ರಾಮ ನಮ್ಮ ಹೆಮ್ಮೆ’ ಪರಿಕಲ್ಪನೆಯಡಿ ಫೆಲೋಶಿಪ್ ಯೋಜನೆ ರೂಪಿಸಿದೆ.
ಚುಟುಕು ಸಮಾಚಾರ
ಪುರುಷರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಭಾರತದ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಅವರು ಚೈನೀಸ್ ವಿರುದ್ಧ ನೇರ ಗೇಮ್‌ಗಳ ಜಯ ಸಾಧಿಸುವುದರೊಂದಿಗೆ ಫ್ರೆಂಚ್ ಓಪನ್ ಸೂಪರ್ 750 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಬಿಡಬ್ಲ್ಯೂಎಫ್ ಸೂಪರ್ 750 ಕಿರೀಟವನ್ನು ಗೆದ್ದ ಮೊದಲ ಭಾರತೀಯ ಡಬಲ್ಸ್ ಜೋಡಿ ಇದಾಗಿದೆ.
ಪದ್ಮಭೂಷಣ ಪಡೆದ, ಸ್ಟೀಲ್ ಮ್ಯಾನ್ ಆಫ್ ಇಂಡಿಯಾ (ಭಾರತದ ಉಕ್ಕಿನ ಮನುಷ್ಯ) ಖ್ಯಾತಿಯ ಜಮ್ಶೆಡ್ ಜೆ ಇರಾನಿ ಅವರು ನಿಧನರಾದರು.
ಮಂಗಳೂರಿನಲ್ಲಿ ಭಾರತದ ಮೊದಲ ಗ್ರೀನ್ ಹೈಡ್ರೋಜನ್ ಕ್ಲಸ್ಟರ್ ಸ್ಥಾಪಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿದೆ. ಭಾರತದಲ್ಲಿ (ಹಸಿರು ಜಲಜನಕ) ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ ಎಂಬುದನ್ನು ಇದು ತೋರಿಸುತ್ತದೆ.
ಶಾಲಾ ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹ ಸಂಗ್ರಹ ಮತ್ತು ಅಧ್ಯಯನವನ್ನು ಉತ್ತೇಜಿಸಲು ಅಂಚೆ ಇಲಾಖೆ ಜಾರಿಗೆ ತಂದಿರುವ ದೀನ ದಯಾಳ್ ಸ್ಪರ್ಶ್ ಯೋಜನೆ ಅಡಿಯಲ್ಲಿ ರಾಜ್ಯದಾದ್ಯಂತ ಒಟ್ಟು 2,237 ವಿದ್ಯಾರ್ಥಿಗಳು 40 ವಿದ್ಯಾರ್ಥಿವೇತನಕ್ಕಾಗಿ ಸ್ಪರ್ಧಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ನವೆಂಬರ್ 1 ರಂದು ಡಿಜಿಟಲ್ ರೂಪಾಯಿ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸುತ್ತದೆ. ದೇಶದ ಮೊದಲ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಬಳಕೆಯು ಆರಂಭವಾಗಲಿದೆ.
ಚುಟುಕು ಸಮಾಚಾರ
ಗುಜರಾತ್ ರಾಜ್ಯದ ಗೃಹ ಸಚಿವ ಹರ್ಷ ಸಂಘವಿ ಅವರು ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುನಿಫಾರ್ಮ್ ಸಿವಿಲ್ ಕೋಡ್- ಯುಸಿಸಿ) ಜಾರಿಗೊಳಿಸಲು ಸಮಿತಿಯೊಂದನ್ನು ರಚಿಸುವುದಾಗಿ ಪ್ರಕಟಿಸಿದ್ದಾರೆ.
ಗುಜರಾತ್ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಡೋದರಾದಲ್ಲಿ ಸಿ-295 ಸಾರಿಗೆ ವಿಮಾನ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಪಶ್ಚಿಮ ಗುಜರಾತ್‌ನ ಮೊರ್ಬಿಯಲ್ಲಿ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ನವೀಕರಣಗೊಂಡ ಶತಮಾನಗಳಷ್ಟು ಹಳೆಯದಾದ ಸೇತುವೆ ಕುಸಿದು ಬಿದ್ದು ದುರಂತ ಸಂಭವಿಸಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಅಂಚೆ ಇಲಾಖೆ ದೇಶದ 75 ನಗರಗಳಲ್ಲಿ ಸುಕನ್ಯಾ ಸಮೃದ್ಧಿ ಮಹೋತ್ಸವ ಹಮ್ಮಿಕೊಂಡಿತ್ತು. ರಾಜ್ಯದ ಐದು ನಗರಗಳ ಪೈಕಿ ಕೊಪ್ಪಳ ಅತಿ ಹೆಚ್ಚು ಖಾತೆ ತೆರೆಯುವುದರ ಮೂಲಕ ಮೊದಲನೆಯ ಸ್ಥಾನ ಪಡೆದಿದೆ.
“೨೦೨೧-೨೨ನೇ ಸಾಲಿನ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಯನ್ನು 67 ಸಾಧಕರು ಹಾಗೂ 10 ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲು ಸರ್ಕಾರ ಆದೇಶಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ವ್ಯಕ್ತಿಗಳು ಹಾಗೂ ಸಂಘ-ಸಂಸ್ಥೆಗಳನ್ನು 67ನೇ ರಾಜ್ಯೋತ್ಸವ ಆಚರಣೆಯ ಅಂಗವಾಗಿ ಆಯ್ಕೆ ಮಾಡಲಾಗಿದೆ.
NammaKPSC Current Affairs - October 2022
ಚುಟುಕು ಸಮಾಚಾರ
ಇಸ್ರೊ ತನ್ನ ಉಪಗ್ರಹಗಳ ಮೂಲಕ ರೂಪಿಸಿರುವ ದೇಶೀಯ ಮಾರ್ಗಸೂಚಿ ವ್ಯವಸ್ಥೆಯಾದ ‘ನಾವಿಕ್’ (NaVIC) ಅನ್ನು ನಾಗರಿಕ ವಲಯಗಳಿಗೂ ವಿಸ್ತರಿಸಲು ಮುಂದಾಗಿದೆ. ದೇಶದ ಗಡಿಗಳಿಂದ ದೂರಕ್ಕೆ ಸಾಗುವ ಹಡಗುಗಳು ಹಾಗೂ ವಿಮಾನಗಳಲ್ಲಿ ನಾವಿಕ್ ಬಳಸಲು ಅನುವಾಗುವಂತೆ ವಿಸ್ತರಣೆಯ ನಿರ್ಧಾರ ಕೈಗೊಳ್ಳಲಾಗಿದೆ
ಪುರುಷ ಕ್ರಿಕೆಟಗರಿಗೆ ನೀಡುವಷ್ಟೇ ಸಂಭಾವನೆ ಯನ್ನು ಮಹಿಳಾ ಕ್ರಿಕೆಟಿಗರಿಗೂ ನೀಡುವ ಐತಿಹಾಸಿಕ ತೀರ್ಮಾನವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ತೆಗೆದುಕೊಂಡಿದೆ. ಬಿಸಿಸಿಐ ಅಪೆಕ್ಸ್ ಸಮಿತಿ ತುರ್ತುಸಭೆಯಲ್ಲಿ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ.
ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಹಾಗೂ ಹೆಚ್ಚು ಇಳುವರಿ ನೀಡುವ ಹೈಬ್ರಿಡ್ ಕುಲಾಂತರಿ (ಡಿಎಂಎಚ್–11) ಸಾಸಿವೆ ಬೆಳೆಯಲು ಕೇಂದ್ರ ಪರಿಸರ ಸಚಿವಾಲಯ ಅನುಮತಿ ನೀಡಿದೆ. ಇದು ವಾಣಿಜ್ಯ ಬಳಕೆಯ ಮೊದಲ ಕುಲಾಂತರಿ ಆಹಾರ ಬೆಳೆಯಾಗಿದೆ. ಬಿ.ಟಿ ಹತ್ತಿ ನಂತರ ಪರವಾನಗಿ ಪಡೆದ ಎರಡನೇ ವಾಣಿಜ್ಯ ಬೆಳೆಯಾಗಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಭಾರತದ ಮೊದಲನೆಯ ‘ಫ್ಲೆಕ್ಸ್ ಇಂಧನ’ ಕೇಂದ್ರ ಆರಂಭವಾಗಲಿದೆ. ಈ ಫ್ಲೆಕ್ಸ್ ಇಂಧನ ಕೇಂದ್ರವು ಜೈವಿಕ ಸಿಎನ್ಜಿ, ಎಥೆನಾಲ್ ಮಿಶ್ರಿತ ಗ್ಯಾಸೋಲಿನ್ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುತ್ತದೆ.
ಚುಟುಕು ಸಮಾಚಾರ
ಬಾಂಗ್ಲಾದೇಶಕ್ಕೆ ಸಿತ್ರಾಂಗ್ ಚಂಡಮಾರುತ ಅಪ್ಪಳಿಸಿದ್ದು, ಕನಿಷ್ಠ 16 ಮಂದಿ ಸಾವಿಗೀಡಾಗಿದ್ದು, ಸುಮಾರು ಒಂದು ಮಿಲಿಯನ್ ಜನರನ್ನು ಅವರ ಮನೆಗಳಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಹರಿಯಾಣದ ಸೂರಜ್‍ಕುಂಡ್‍ನಲ್ಲಿ ಅಕ್ಟೋಬರ್ 27 -28ರಂದು ಅಖಿಲ ಭಾರತ ಗೃಹ ಸಚಿವರ ಸಮ್ಮೇಳನನಡೆಯಲಿದ್ದು, ಅಪರಾಧ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿಸುವ ಕುರಿತಂತೆ ಗಂಭೀರ ಚರ್ಚೆ ನಡೆಯಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಮೂರರಿಂದ ಎಂಟು ವರ್ಷದ ಮಕ್ಕಳ ಅಡಿಪಾಯ ಹಂತದ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿಗೆ (ಎನ್ಸಿಎಫ್) ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಚಾಲನೆ ನೀಡಿದರು.
2020 ಮತ್ತು 2021 ರಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (IARI) ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಐದು ಹೊಸ ಬಾಸುಮತಿ ತಳಿಗಳು, ದೇಶದಲ್ಲಿ ಈ ರೀತಿಯ ಭತ್ತವನ್ನು ಬೆಳೆಯುವ ವಿಧಾನದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲು ಸಿದ್ಧವಾಗಿವೆ.
ಚುಟುಕು ಸಮಾಚಾರ
ಬ್ರಿಟನ್ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಕನ್ಸರ್ವೇಟಿವ್ ಪಕ್ಷದ ಮುಖಂಡ ರಿಷಿ ಸುನಕ್ ಭಾರತದ ಮೊದಲ ಸಂಜಾತ ಹಾಗೂ ಯುಕೆಯ ಮೊದಲ ಹಿಂದೂ ಪ್ರಧಾನಿಯಾಗಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅತ್ಯಂತ ಭಾರವಾದ ರಾಕೆಟ್ LVM3 M2 ಉಡಾವಣೆಯಶಸ್ವಿಯಾಗಿದೆ. ಇದು ವಾಣಿಜ್ಯ ಉದ್ದೇಶದ ಮೊದಲ ಉಡಾವಣೆಯಾಗಿದ್ದು, ಬ್ರಿಟನ್‌ನ ಮೂಲದ ಒನ್‌ವೆಬ್ ಲಿಮಿಟೆಡ್‌ನ 36 ಬ್ರಾಡ್‌ಬ್ಯಾಂಡ್ ಸಂವಹನ ಉಪಗ್ರಹಗಳನ್ನು ಒಟ್ಟಿಗೆ ನಭಕ್ಕೆ ಕಳುಹಿಸಲಾಗಿದೆ.
1824ರ ಅಕ್ಟೋಬರ್ 23ರಂದು ಕಿತ್ತೂರು ಕಲಿಗಳು ಬ್ರಿಟಿಷ್ ಸೈನ್ಯವನ್ನು ಸೋಲಿಸಿ ಹಿಮ್ಮೆಟ್ಟಿಸಿದರು. ಆ ವಿಜಯದ ಸಂಕೇತವಾಗಿ ಉತ್ಸವ ಆಚರಿಲಾಗುತ್ತಿದೆ. ಇದೇ ಮೊದಲ ಬಾರಿಗೆ ಉತ್ಸವಕ್ಕೆ ರಾಜ್ಯಮಟ್ಟದ ಮಾನ್ಯತೆ ನೀಡಿದ್ದರಿಂದ ವೈಭವ ಇಮ್ಮಡಿಗೊಂಡಿತು. ಇದು 198ನೇ ಕಿತ್ತೂರು ಉತ್ಸವವಾಗಿದೆ.
ಕರ್ನಾಟಕದಲ್ಲಿ ಅಡಿಕೆ ತೋಟಗಳಲ್ಲಿ ಹಬ್ಬಿರುವ ಎಲೆ ಚುಕ್ಕಿ ರೋಗದ ಬಗ್ಗೆ ಅಧ್ಯಯನ ನಡೆಸಲು ಏಳು ತಜ್ಞರನ್ನು ಒಳಗೊಂಡ ಸಮಿತಿಯನ್ನು ಕೇಂದ್ರ ಕೃಷಿ ಸಚಿವಾಲಯ ರಚಿಸಿದೆ.
ಚುಟುಕು ಸಮಾಚಾರ
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ (ಐಎಸ್ಎಸ್) ಸೂಕ್ಷ್ಮಾಣುಜೀವಿಗಳ ನಡುವಿನ ವರ್ತನೆ ಕುರಿತು ಮದ್ರಾಸ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ–ಎಂ) ಮತ್ತು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್) ಸಂಶೋಧಕರು ಮಹತ್ವದ ಅಧ್ಯಯನ ನಡೆಸಿವೆ.
ಸ್ವದೇಶಿಯಾಗಿ ಅಭಿವೃದ್ಧಿಪಡಿಸಿರುವ ಹೊಸ ತಲೆಮಾರಿನ ‘ಅಗ್ನಿ ಪ್ರೈಮ್’ ಮಧ್ಯಮ ಶ್ರೇಣಿಯ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ನಡೆದಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(ಡಿಆರ್‌ಡಿಒ) ಮೂಲಗಳು ಹೇಳಿವೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) 2023ರಲ್ಲಿ ಸೂರ್ಯನ ಬಳಿಗೆ ಒಂದು ಉಪಗ್ರಹ ಮತ್ತು ಚಂದ್ರನಲ್ಲಿಗೆ ಒಂದು ನೌಕೆಯನ್ನು ಕಳುಹಿಸಲಿದೆ. 2024ರ ಗಗನಯಾನ ಯೋಜನೆ ಸಂಬಂಧ, 2023ರಲ್ಲಿ ಆರು ಕಾರ್ಯಾಚರಣೆಗಳನ್ನು ನಡೆಸಲಾಗುತ್ತದೆ.
ಪರಿಶಿಷ್ಟ ಜಾತಿ (ಎಸ್.ಸಿ) ಮತ್ತು ಪಂಗಡಗಳ (ಎಸ್.ಟಿ) ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ನಿರ್ಧಾರವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಕೆವಾಡಿಯಾದ ಏಕತಾ ನಗರದ ಏಕತಾ ಪ್ರತಿಮೆಯಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರ ಉಪಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಿಷನ್ ಲೈಫ್ಗೆ ಚಾಲನೆ ನೀಡಿದರು.
ಚುಟುಕು ಸಮಾಚಾರ
ಉತ್ತರ ಗುಜರಾತ್‌ನ ಬನಾಸಕಾಂಠಾ ಜಿಲ್ಲೆಯ ಡೀಸಾದಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಸ್ಥಾಪನೆಯಾಗಲಿರುವ ನೂತನ ವಾಯುನೆಲೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ನೆಲೆಗೊಳ್ಳಲಿರುವ ನೂತನ ವಾಯುನೆಲೆ ದೇಶದ ಭದ್ರತೆಗೆ ಅತ್ಯಂತ ಪ್ರಭಾವಶಾಲಿ ಕೇಂದ್ರವಾಗಿ ಹೊರಹೊಮ್ಮಲಿದೆ.
ಗುಜರಾತ್ನ ಗಾಂಧಿನಗರದಲ್ಲಿರುವ ಸಬರಮತಿ ನದಿ ದಂಡೆಯಲ್ಲಿ ನಡೆಯುತ್ತಿರುವ ಅತಿದೊಡ್ಡ ಡಿಫೆನ್ಸ್ ಎಕ್ಸ್ಪೋ (ರಕ್ಷಣಾ ಪ್ರದರ್ಶನ) 2022 ರ 12 ನೇ ಆವೃತ್ತಿಯ ಎಕ್ಸ್‌ಪೋಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು.
ಗುಜರಾತ್ನ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣವನ್ನು ಮರುಪರಿಶೀಲಿಸುವ ಉದ್ದೇಶದಿಂದ ಗಾಂಧಿನಗರ ಜಿಲ್ಲೆಯ ಅದಾಲಾಜ್ ಪಟ್ಟಣದಲ್ಲಿ ಗುಜರಾತ್ ಸರ್ಕಾರದ ಮಿಷನ್ ಸ್ಕೂಲ್ ಆಫ್ ಎಕ್ಸಲೆನ್ಸ್ ಉಪಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ 90 ಮೀಟರ್ ಏರಿಯಲ್ ಪ್ಲಾಟ್ಫಾರ್ಮ್ ಲ್ಯಾಡರ್ ನ್ನು ಲೋಕಾರ್ಪಣೆ ಮಾಡಿದರು. ಇದೇ ಮೊದಲ ಬರಿಗೆ ಬೆಂಗಳೂರಿಗೆ ಏರಿಯಲ್ ಲ್ಯಾಡರ್ ವಾಹನ ಪರಿಚಯಿಸಲಾಗಿದ್ದು ಈ ವಾಹನದ ಸಹಾಯದಿಂದ 90 ಮೀಟರ್ ಎತ್ತರದ ವರೆಗೂ ತಲುಪಿ ಅಗ್ನಿ ಅವಘಡಗಳು ಸಂಭವಿಸಿದರೆ ಅದನ್ನು ನಂದಿಸಬಹುದು
ಕಾಂತಾರ ಚಿತ್ರದ ಮೂಲಕ ತುಳುನಾಡಿನ ಹೆಮ್ಮೆಯ ಆಚರಣೆ ಭೂತ ಕೋಲ ಇದೀಗ ಜಗತ್ ಪ್ರಸಿದ್ಧಿಯಾಗಿದೆ.
ಕರ್ನಾಟಕದಲ್ಲಿ ಅಸಂಘಟಿತ ವಲಯದ ಶೇ.37.5ರಷ್ಟು ಕಾರ್ಮಿಕರು ಮಾತ್ರ ಇ-ಶ್ರಮ್ ರಾಷ್ಟ್ರೀಯ ಡೇಟಾಬೇಸ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಆಗಸ್ಟ್ 2021 ರಲ್ಲಿ ನೋಂದಣಿಗಳನ್ನು ತೆರೆಯಲಾಗಿದೆ.
ಚುಟುಕು ಸಮಾಚಾರ
ಯೂನಿಕಾರ್ನ್ ಸ್ಟೆಲ್ ವ್ಯವಸ್ಥೆಯನ್ನು ಜಪಾನ್ ತಯಾರಿಸಿದ್ದು , ಭಾರತ ತನ್ನ ಯುದ್ಧನೌಕೆಗಳಲ್ಲಿ ಬಳಸಲು ನಿರ್ಧರಿಸಿದೆ. ಚೀನಾ ಯುದ್ಧನೌಕೆಗಳನ್ನು ಗಮನದಲ್ಲಿಟ್ಟುಕೊಂಡು ಈ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ.
ಶ್ರೀಲಂಕಾದ ಲೇಖಕ ಶೆಹಾನ್ ಕರುಣಾತಿಲಕ ಅವರ ಎರಡನೇ ಕಾದಂಬರಿ ‘ದಿ ಸೆವೆನ್ ಮೂನ್ಸ್ ಆಫ್ ಮಾಲಿ ಅಲ್ಮೇಡಾ’ ಕೃತಿಗೆ 2022ನೇ ಸಾಲಿನ ಪ್ರತಿಷ್ಠಿತ ಬುಕರ್ ಪ್ರಶಸ್ತಿ ದೊರೆತಿದೆ.
ಪ್ರತಿ ವರ್ಷ ಅಕ್ಟೋಬರ್ 17 ರಂದು ಅಂತರರಾಷ್ಟ್ರೀಯ ಬಡತನ ನಿರ್ಮೂಲನಾ ದಿನವನ್ನು ಆಚರಿಸಲಾಗುತ್ತದೆ.
ಹಿಂದಿ ಭಾಷೆಯನ್ನು ಜಾಗತಿಕ ಭಾಷೆಯನ್ನಾಗಿ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಫಿಜಿ ದೇಶದಲ್ಲಿ ಮುಂದಿನ ವರ್ಷ ಪ್ರಥಮ ವಿಶ್ವ ಹಿಂದಿ ಸಮ್ಮೇಳನವನ್ನು ಆಯೋಜಿಸಲಾಗಿದೆ’ ಎಂದು ದಕ್ಷಿಣ ಫೆಸಿಫಿಕ್ ರಾಷ್ಟ್ರಗಳ ಭಾರತೀಯ ಹೈಕಮಿಷನರ್ ಹೇಳಿದ್ದಾರೆ.
ಹೈದರಾಬಾದ್ ಇತ್ತೀಚೆಗೆ ಪ್ರತಿಷ್ಠಿತ ವರ್ಲ್ಡ್ ಗ್ರೀನ್ ಸಿಟಿ ಪ್ರಶಸ್ತಿ 2022 ಅನ್ನು ಸ್ವೀಕರಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರು ಒಂದು ದೇಶ ಒಂದು ಗೊಬ್ಬರ ಹೆಸರಿನಲ್ಲಿ ರಸಗೊಬ್ಬರವನ್ನ ಲೋಕಾರ್ಪಣೆ ಮಾಡಿದರು. ಮತ್ತು ಇದೆ ಸಮಯದಲ್ಲಿ ಪಿಎಂ ಕಿಸಾ ನ್ ಸಮ್ಮಾನ್ ಸಮ್ಮೇಳನಕ್ಕೆ ಚಾಲನೆ ನೀಡಿದರು. ಈ ಮೂಲಕ ದೇಶದ ಅನ್ನದಾತರಿಗೆ ಭಾರತ್‌ಬ್ರ್ಯಾಂಡ್‌ನಡಿ ಸಬ್ಸಿಡಿ ದರದ ಯೂರಿಯಾ ದೊರೆಯಲಿದೆ.
ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಗೆ (ಯುಎನ್‌ಎಚ್‌ಆರ್‌ಸಿ) ಸ್ವತಂತ್ರ ತಜ್ಞೆಯಾಗಿ ಕೋಲಾರ ಜಿಲ್ಲೆಯ ಕಸಬಾ ಕುರುಬರಹಳ್ಳಿ ಗ್ರಾಮದ ದಲಿತ ಯುವತಿ ಡಾ.ಕೆ.ಪಿ.ಅಶ್ವಿನಿ ನೇಮಕವಾಗಿದ್ದಾರೆ.
ಹೊನ್ನಾವರದ ಕಾಸರಕೋಡು ಇಕೊ ಬೀಚ್‌ಗೆ, ಪ್ರತಿಷ್ಠಿತ ‘ಬ್ಲೂ ಫ್ಲ್ಯಾಗ್’ ಮನ್ನಣೆಯನ್ನು ಸತತ ಮೂರನೇ ವರ್ಷ ಪಡೆದುಕೊಳ್ಳುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಈ ಮೂಲಕ ಕಡಲತೀರವು ಅಂತರರಾಷ್ಟ್ರೀಯ ಪ್ರವಾಸೋದ್ಯಮದ ನಕ್ಷೆಯಲ್ಲಿ ಮತ್ತೊಮ್ಮೆ ಗುರುತಿಸಿಕೊಂಡಿದೆ.
ಚುಟುಕು ಸಮಾಚಾರ
ದೇಶದ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳ (ಡಿಬಿಯು) ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮಾಧ್ಯಮದ ಮೂಲಕ ನೆರವೇರಿಸಿದರು.
ಮಧ್ಯಪ್ರದೇಶ ಸರ್ಕಾರವು ಹಿಂದಿ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣ ನೀಡುವ ಮಹಾತ್ವಾಕಾಂಕ್ಷಿ ಯೋಜನೆಯನ್ನು ಕಾರ್ಯಗತಗೊಳಿಸುವ ದಿಸೆಯಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ಹಿಂದಿಯಲ್ಲಿ ಎಂಬಿಬಿಎಸ್ ಕೋರ್ಸ್ ಆರಂಭಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಮಧ್ಯಪ್ರದೇಶ ಭಾಜನವಾಗಿದೆ’
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ ಅವರನ್ನು ಭಾರತದ ಮುಖ್ಯನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿದ್ದಾರೆ.
ಮಾನ್ಯತೆ ಪಡೆದ ಪಕ್ಷವು ವಿಭಜನೆಯಾದಾಗ ಆ ಪಕ್ಷದ ಚಿಹ್ನೆಯ ಮೇಲೆ ಹಕ್ಕು ಸಾಧಿಸಲು ವಿಭಜಿತ ಬಣಗಳು ಪ್ರಯತ್ನಿಸುತ್ತವೆ. ಈ ಸಂಗತಿ ಇತ್ಯರ್ಥ ಆಗುವವರೆಗೂ ಚುನಾವಣೆ ಆಯೋಗವು ಆ ಚಿಹ್ನೆಯನ್ನು ಸ್ಥಗಿತಗೊಳಿಸುತ್ತದೆ. ಆಗ ವಿಭಜಿತ ಬಣಗಳು ಹೊಸ ಚಿಹ್ನೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಈಗ ಮಹಾರಾಷ್ಟ್ರದ ಶಿವಸೇನೆಯಲ್ಲಿ ಇಂತಹ ಪರಿಸ್ಥಿತಿ ಉದ್ಭವಿಸಿದೆ.
ಚುಟುಕು ಸಮಾಚಾರ
ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 107 ನೇ ಸ್ಥಾನದಲ್ಲಿರುವುದು ಜನರಿಗೆ ಆಹಾರ ಭದ್ರತೆ ಮತ್ತು ಅದರ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಪೂರೈಸದ ರಾಷ್ಟ್ರ ಎಂಬ ದೇಶದ ವರ್ಚಸ್ಸನ್ನು ಕಳಂಕಗೊಳಿಸುವ ನಿರಂತರ ಪ್ರಯತ್ನದ ಭಾಗವಾಗಿದೆ ಮತ್ತು ಹಸಿವು ಸೂಚ್ಯಂಕ ದೋಷಪೂರಿತ ಮಾನದಂಡವಾಗಿದೆ ಎಂದು ಕೇಂದ್ರ ರ್ಕಾರ ಪ್ರತಿಪಾದಿಸಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 1980 ರ ದಶಕದಲ್ಲಿ ಅಭಿವೃದ್ಧಿಪಡಿಸಿದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಗೆ ಪರ್ಯಾಯವಾಗಿ ಹೊಸ ರಾಕೆಟ್ ಅಭಿವೃದ್ಧಿಯತ್ತ ದಿಟ್ಟ ಹೆಜ್ಜೆ ಇಟ್ಟಿದೆ.
ಜಲಾಂತರ್ಗಾಮಿ ‘ಐಎನ್‌ಎಸ್ ಅರಿಹಂತ’ದಿಂದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು (ಎಸ್‌ಎಲ್‌ಬಿಎಂ) ಬಂಗಾಳ ಕೊಲ್ಲಿಯಲ್ಲಿ ಯಶಸ್ವಿಯಾಗಿ ಉಡಾಯಿಸಲಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ದೇಶದ ಕೆಲ ರಾಜ್ಯಗಳು, ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳ ದೇವಸ್ಥಾನಗಳಲ್ಲಿ ಈಗಲೂ ಮುಂದುವರಿದಿರುವದೇವದಾಸಿ ಪದ್ಧತಿ ನಿರ್ಮೂಲನೆಗೆ ಕೈಗೊಂಡ ಕ್ರಮಗಳ ಬಗ್ಗೆ ವಿವರವಾದ ವರದಿನೀಡುವಂತೆ ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸೇರಿದಂತೆ 6 ರಾಜ್ಯಗಳಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ)ನೋಟಿಸ್ ಜಾರಿ ಮಾಡಿದೆ.
ಚುಟುಕು ಸಮಾಚಾರ
ಗುಜರಾತನಲ್ಲಿ ನಡೆದ 36ನೇ ಆವೃತ್ತಿಯ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕಕ್ಕೆ 88 ಪದಕಗಳು ಲಭಿಸಿದ್ದು, 27 ಚಿನ್ನ, 23 ಬೆಳ್ಳಿ ಮತ್ತು 38 ಕಂಚಿನ ಪದಕಗಳನ್ನು ಪಡೆದುಕೊಂಡು 4 ನೇ ಸ್ಥಾನದಲ್ಲಿದೆ.
ಶಾಲಾ–ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶವನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಭಿನ್ನಮತದ ತೀರ್ಪು ನೀಡಿದೆ. ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ.
ರಾಜ್ಯ ಸರ್ಕಾರ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸಿದೆ. ತಾತ್ವಿಕ ಅನುಮೋದನೆ ನೀಡಿ ಸರ್ಕಾರ ಆದೇಶ ನೀಡಿದೆ.
ಚುಟುಕು ಸಮಾಚಾರ
ಮಹಾತ್ಮಾ ಗಾಂಧಿಯವರ ಜೀವನ ಮತ್ತು ತತ್ವ ಪ್ರಸಾರಕ್ಕೆ ಮೀಸಲಾದ ವಸ್ತುಸಂಗ್ರಹಾಲಯವನ್ನು ಯುಎಸ್‌ನ ಅಟ್ಲಾಂಟಿಕ್ ನಗರದಲ್ಲಿ ತೆರೆಯಲಾಗಿದೆ. ಈ ವಸ್ತುಸಂಗ್ರಹಾಲಯದಲ್ಲಿ ಕಲಾಕೃತಿಗಳು ಮತ್ತು ಡಿಜಿಟಲ್ ಡಿಸ್‌ಪ್ಲೇ ಪರದೆಗಳನ್ನು ಹಾಕಲಾಗಿದೆ. ಸಂದರ್ಶಕರು ಶಾಂತಿದೂತ ಗಾಂಧಿ ಅವರ ಜೀವನಕ್ಕೆ ಸಂಬಂಧಿಸಿದ ಘಟನಾವಳಿಗಳನ್ನು ವೀಕ್ಷಿಸಬಹುದಾಗಿದೆ.
ಜ್ಯೋತಿರ್ಲಿಂಗ ಕಾಶಿ ವಿಶ್ವನಾಥ ಮಂದಿರದ ಕಾರಿಡಾರ್ ಅಭಿವೃದ್ಧಿಪಡಿಸಿದಂತೆಯೇ ಮತ್ತೊಂದು ಪ್ರಸಿದ್ಧ ಜ್ಯೋತಿರ್ಲಿಂಗ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಲೇಶ್ವರ ದೇಗುಲ ಪ್ರಾಂಗಣ ಅಭಿವೃದ್ಧಿಪಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಹಾಕಾಲ ಲೋಕ ಕಾರಿಡಾರ್ ಲೋಕಾರ್ಪಣೆ ಮಾಡಿದ್ದಾರೆ. ಇದು 900 ಮೀಟರ್‌ಗೂ ಅಧಿಕ ಉದ್ದವಿದೆ.
ಯುವ 2.0 ಇದು ಯುವ ಯೋಜನೆಯ ಎರಡನೇ ಆವೃತ್ತಿಯನ್ನು ಕೇಂದ್ರ ಶಿಕ್ಷಣ ಸಚಿವಾಲಯವು, ಯುವ ಬರಹಗಾರರಿಗೆ ಮಾರ್ಗದರ್ಶನ ನೀಡಲು ಆಜಾದಿ ಕಾ ಅಮೃತ್ ಮಹೋತ್ಸವ ಅಥವಾ ಭಾರತ @75 ಯೋಜನೆಯ ಭಾಗವಾಗಿ ಪ್ರಾರಂಭಿಸಿದೆ.
ಚುಟುಕು ಸಮಾಚಾರ
ದೇಶದ ಮೊದಲ ಸೌರಶಕ್ತಿ ಚಾಲಿತ ಹಳ್ಳಿ ಎಂಬ ಶ್ರೇಯ ಪಡೆದ ಮೋಧೆರಾದಲ್ಲಿ ದಿನದ 24 ತಾಸೂ ಸೌರ ವಿದ್ಯುತ್ ದೊರೆಯಲಿದೆ. ಗ್ರಾಮದಲ್ಲಿ ಸೌರ ವಿದ್ಯುತ್ ಸ್ಥಾವರ ಅಭಿವೃದ್ಧಿಪಡಿಸಲಾಗಿದೆ. ವಸತಿ ಕಟ್ಟಡಗಳು, ಸರ್ಕಾರಿ ಕಟ್ಟಡಗಳ ಮೇಲ್ಚಾವಣಿಯಲ್ಲಿ 1,300ಕ್ಕೂ ಹೆಚ್ಚು ಸೌರಫಲಕಗಳನ್ನು ಅಳವಡಿಸಲಾಗಿದೆ.
ಭಾರತೀಯ ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘12,000 ಇಯರ್ಸ್ ಆಫ್ ಇಂಡಿಯಾ–ರಿಪೋರ್ಟ್ ಆನ್ ದಿ ಸಿವಿಲೈಸೇಷನ್ ಆ್ಯಂಡ್ ಹಿಸ್ಟರೀಸ್ ಆಫ್ ಇಂಡಿಯಾ ಸಿನ್ಸ್ ಹೋಲೊಸಿನ್’ ವರದಿಯನ್ನು ಬಿಡುಗಡೆ ಮಾಡಲಾಯಿತು.
ವಿಶ್ವ ಮಾನಸಿಕ ಆರೋಗ್ಯ ದಿನ(ಅಕ್ಟೋಬರ್10) ದ ಅಂಗವಾಗಿ, ಕೇಂದ್ರ ಸರ್ಕಾರವು ಟಿ-ಮನಸ್ ಎಂಬ ಯೋಜನೆ ಜಾರಿ ಮಾಡಿದೆ. ಕರ್ನಾಟಕದ ಇ-ಮನಸ್ ಯೋಜನೆಯೇ ಇದಕ್ಕೆ ಪ್ರೇರಣೆಯಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಚುಟುಕು ಸಮಾಚಾರ
ಶಾಂತಿ ಪ್ರಶಸ್ತಿ ಬೆಲಾರಸ್‌ನ ಮಾನವ ಹಕ್ಕುಗಳ ಹೋರಾಟಗಾರ ಅಲೆಸ್ ಬಿಲಿಯಾಟ್ಸ್ಕಿ :ಬೆಲಾರಸ್‌ನ ಅಲೆಸ್ ಬಿಲಿಯಾಟ್ಸ್ಕಿ 1980 ರ ದಶಕದಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ ಚಳವಳಿಯ ಪ್ರಾರಂಭಿಕರಲ್ಲಿ ಒಬ್ಬರಾಗಿದ್ದರು ಮತ್ತು ಪ್ರಜಾಪ್ರಭುತ್ವ ಮತ್ತು ಶಾಂತಿಯನ್ನು ಉತ್ತೇಜಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ರಷ್ಯಾದ ಮಾನವ ಹಕ್ಕುಗಳ ಸಂಸ್ಥೆ ಮೆಮೋರಿಯಲ್: ಮಾನವ ಹಕ್ಕುಗಳ ಸಂಸ್ಥೆ ಮೆಮೋರಿಯಲ್ ರಷ್ಯಾದಲ್ಲಿ ರಾಜಕೀಯ ದಬ್ಬಾಳಿಕೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಮಾಹಿತಿಯನ್ನು ಸಂಗ್ರಹಿಸಿದೆ ಮತ್ತು ವ್ಯವಸ್ಥಿತಗೊಳಿಸಿದೆ. ಉಕ್ರೇನಿಯನ್ ಮಾನವ ಹಕ್ಕುಗಳ ಸಂಸ್ಥೆ ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್: […]
ನಾಸಾದ ಬಾಹ್ಯಾಕಾಶ ನೌಕೆ ‘ಡಾರ್ಟ್’, ಡಿಮಾರ್ಫೋಸ್ ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬಾಹ್ಯಾಕಾಶಲ್ಲಿ ಸಾವಿರಾರು ಕಿ.ಮೀ. ವರೆಗೂ ಕ್ಷುದ್ರಗ್ರಹದಿಂದ ಹೊಮ್ಮಿದ ದೂಳು ಹಾಗೂ ಶಿಲೆಗಳ ಚೂರುಗಳು ಚದುರಿದ ಚಿತ್ರಗಳನ್ನು ಚಿಲಿಯಲ್ಲಿರುವ ದೂರದರ್ಶಕ ಸೆರೆಹಿಡಿದಿದೆ.
ಚುಟುಕು ಸಮಾಚಾರ
ಕೇಂದ್ರ ಸರ್ಕಾರದ ವಾರ್ಷಿಕ ಸ್ವಚ್ಛತಾ ಸರ್ವೇಕ್ಷಣೆಯ ಫಲಿತಾಂಶ ಪ್ರಕಟವಾಗಿದ್ದು, ದೇಶದ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಮಧ್ಯಪ್ರದೇಶ ಇಂದೋರ್ ಸತತ ಆರನೇ ಬಾರಿಗೆ ಪಾತ್ರವಾಗಿದೆ. 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ 45 ನಗರಗಳಲ್ಲಿ ಬೆಂಗಳೂರು 43ನೇ ಸ್ಥಾನ ಪಡೆದಿದೆ.
ಮಂಗಳ ಗ್ರಹದ ಕಕ್ಷೆಯಲ್ಲಿ ಪರಿಭ್ರಮಣ ನಡೆಸಿ ಅಪರೂಪದ ಮಾಹಿತಿಗಳನ್ನು ಸಂಗ್ರಹಿಸಿ ಭೂಮಿಗೆ ಕಳುಹಿಸುತ್ತಿದ್ದ ಇಸ್ರೊದ ‘ಮಂಗಳಯಾನ’ ಕಕ್ಷೆಗಾಮಿ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ.
ಅಕ್ಟೋಬರ ೨ ಗಾಂಧಿ ಜಯಂತಿ ದಿನವನ್ನು ಅಂತರರಾಷ್ಟ್ರೀಯ ಅಹಿಂಸಾ ದಿನವಾಗಿ ಆಚರಿಸಲಾಗುತ್ತದೆ. ಗಾಂಧಿ ಜಯಂತಿ ನಿಮಿತ್ತ ವಿಶ್ವಸಂಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಮಹಾತ್ಮಾ ಗಾಂಧಿ ಅವರ ಪೂರ್ಣ ವ್ಯಕ್ತಿಚಿತ್ರವನ್ನು ಹಾಲೊಗ್ರಾಮ್ ಮೂಲಕ ಪ್ರದರ್ಶಿಸಿ, ಶಿಕ್ಷಣ ಕುರಿತ ಅವರ ಚಿಂತನೆಗಳನ್ನು ಪ್ರಸಾರ ಮಾಡಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ ಅಪರೂಪದ ಟ್ರ್ಯಾವನ್‌ಕೋರ್ ಹಾರುವ ಅಳಿಲು ಪತ್ತೆಯಾಗಿದೆ.
‘2021ರಲ್ಲಿ ‘ಮಾತಾಡ್ ಮಾತಾಡ್ ಕನ್ನಡ’ ಘೋಷ ವಾಕ್ಯದೊಂದಿಗೆ ಏರ್ಪಡಿಸಿದ್ದ ‘ಲಕ್ಷ ಕಂಠ’ ಗಾಯನ ಯಶಸ್ವಿಯಾಗಿದ್ದ ಹಿನ್ನೆಲೆಯಲ್ಲಿ ಅಕ್ಟೋಬರ್ 2022ರಲ್ಲಿ ರಾಜ್ಯದಾದ್ಯಂ ತ ಕನ್ನಡದ ಕವಿಗಳ ಜನಪ್ರಿಯ ಗೀತೆಗಳ ಕೋಟಿ ಕಂಠ ಗಾಯನವನ್ನು ಕನ್ನಡ ಮತ್ತು ಸಂಸ್ಕೃ ತಿ ಇಲಾಖೆ ಹಮ್ಮಿಕೊಂಡಿದೆ
ಚುಟುಕು ಸಮಾಚಾರ
ಕೇಂದ್ರ ಸರ್ಕಾರದ ಯೋಜನೆಯಾದ ಸ್ವಚ್ಛ ಭಾರತ್ ಮಿಷನ್‌ಗೆ ಹೆಚ್ಚಿನ ಸಾರ್ವಜನಿಕ ಸಹಭಾಗಿತ್ವವನ್ನು ಸೃಷ್ಟಿಸುವ ಮತ್ತು ಸ್ವಚ್ಛತೆ ಕಾರ್ಯ ಪ್ರತಿಯೊಬ್ಬರ ಕರ್ತವ್ಯ ಎಂಬ ಪರಿಕಲ್ಪನೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ‘ಸ್ವಚ್ಛತಾ ಹಿ ಸೇವಾ’ಅಭಿಯಾನದಲ್ಲಿ ಕರ್ನಾಟಕವು ಇತರ ರಾಜ್ಯಗಳನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿದೆ . ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ, ಕರ್ನಾಟಕದಿಂದ 4,33,79,791 ಜನರು ಅಭಿಯಾನದಲ್ಲಿ ಭಾಗವಹಿಸಿದ್ದಾರೆ.
‘ಕರ್ನಾಟಕ ಧರ್ಮ ಸ್ವಾತಂತ್ರ್ಯದ ಹಕ್ಕು ಸಂರಕ್ಷಣಾ ಮಸೂದೆ’ಯನ್ನು ಇತ್ತೀಚೆಗೆ ರಾಜ್ಯ ವಿಧಾನ ಪರಿಷತ್ತು ಅಂಗೀಕರಿಸಿದೆ.ಕರ್ನಾಟಕದ ಮತಾಂತರ ವಿರೋಧಿ ಮಸೂದೆಯನ್ನು ಡಿಸೆಂಬರ್ 2021 ರಲ್ಲಿ ಶಾಸಕಾಂಗ ಸಭೆ ಅಂಗೀಕರಿಸಿತು.
ಪ್ರವಾಸೋದ್ಯಮದ ಕುರಿತು ಜಾಗೃತಿ ಮೂಡಿಸಲು ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಪ್ರವಾಸಿ ತಾಣದತ್ತ ಜನರು ಹೆಚ್ಚು ಆಕರ್ಷಿತರಾಗುವಂತೆ ಮಾಡಲಾಗುತ್ತಿದೆ.
NammaKPSC Current Affairs - September 2022
ಚುಟುಕು ಸಮಾಚಾರ
ವಿಪ್ರೊ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು 300 ಮಂದಿ ಪ್ರತಿಸ್ಪರ್ಧಿ ಕಂಪನಿಯೊಂದಕ್ಕೆ ಕೂಡ ಕೆಲಸ ಮಾಡುತ್ತಿದ್ದುದು ಪತ್ತೆಯಾಗಿದೆ ಎಂದು ವಿಪ್ರೊ ಅಧ್ಯಕ್ಷ ರಿಷದ್ ಪ್ರೇಮ್‌ಜಿ ಹೇಳಿದ್ದಾರೆ. ವಿಪ್ರೊದಲ್ಲಿ ಕೆಲಸ ಮಾಡುತ್ತಲೇ ಪ್ರತಿಸ್ಪರ್ಧಿ ಕಂಪನಿಗಳಿಗೂ ಕೆಲಸ ಮಾಡುವವರಿಗೆ ತಮ್ಮ ಕಂಪನಿಯಲ್ಲಿ ಸ್ಥಾನ ಇಲ್ಲ ಎಂದು ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳು ಭಾರತಕ್ಕೆ ಸೇರಿ ಸೆಪ್ಟೆಂಬರ್17 ಕ್ಕೆ 75 ವರ್ಷಗಳು ಪೂರ್ಣಗೊಂಡಿವೆ. ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಸರಕಾರ ಕಲ್ಯಾಣ ಕರ್ನಾಟಕ ಉತ್ಸವನ್ನಾಗಿ ಆಚರಣೆ ಮಾಡುತ್ತಿದೆ.
ಖ್ಯಾತ ರಾಗ ಸಂಯೋಜಕ, ಗಾಯಕ ದಿ.ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ ಕುವೆಂಪು ವಿರಚಿತ ನಾಡಗೀತೆಯ ಒಂದಕ್ಷರವನ್ನೂ ಬಿಡದಂತೆ ಹಾಡುವುದಕ್ಕೆ ಈಗ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದ್ದು, ಇದಕ್ಕಾಗಿ ಕಾಲಮಿತಿಯನ್ನೂ ನಿಗದಿ ಪಡಿಸಿದೆ.
412ನೇ ಮೈಸೂರು ದಸರಾ-2022ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಿದರು. ನಂತರ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಅವರು 7ನೇ ಬಾರಿ ಖಾಸಗಿ ದರ್ಬಾರ್ ನಡೆಸಿದರು.
ಚುಟುಕು ಸಮಾಚಾರ
ಚುನಾವಣೆಗೆ ಸ್ಪರ್ಧಿಸುವುದು ವ್ಯಕ್ತಿಯ ಮೂಲಭೂತ ಹಕ್ಕೂ ಅಲ್ಲ, ಕಾನೂನಿನ ಅನ್ವಯ ಸಾಮಾನ್ಯ ಹಕ್ಕೂ ಅಲ್ಲ, ಇದು ಶಾಸನದಿಂದ ನೀಡಲ್ಪಟ್ಟ ಹಕ್ಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಮಹಾರಾಷ್ಟ್ರದಲ್ಲಿ ಖ್ಯಾತ ಔಷಧ ತಯಾರಿಕಾ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯ ಪೌಡರ್ ಉತ್ಪಾದನಾ ಪರವಾನಗಿ ರದ್ದು ಮಾಡಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಭಾರತದ ಸಾಂಪ್ರದಾಯಿಕ ಅಥವಾ ಪಾರಂಪರಿಕ ಜ್ಞಾನದ ಡಿಜಿಟಲ್ ಲೈಬ್ರರಿಗಳ ಡೇಟಾಬೇಸ್ ಉಪಯೋಗಿಸಲು ಪೇಟೆಂಟ್ ಕಚೇರಿಗಳ ಜೊತೆಗೆ ಸಾಮಾನ್ಯ ಜನರಿಗೂ ಅನುಮತಿ ನೀಡಲಾಯಿತು.
ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮದಿನದಂದು (ಸೆಪ್ಟೆಂಬರ್ 15) ಭಾರತದಲ್ಲಿ ಪ್ರತಿ ವರ್ಷ ಎಂಜಿನಿಯರ್‌ಗಳ ದಿನ ಆಚರಿಸಲಾಗುತ್ತದೆ.
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹುಲಿಸಂರಕ್ಷಿತ ಪ್ರದೇಶದಲ್ಲಿ (ಬಿಆರ್‌ಟಿ) ಹಲ್ಲಿಯ ಹೊಸ ಪ್ರಭೇದ (‘ಉಮಾಶಂಕರ್ ಕುಬ್ಜ ಹಲ್ಲಿ’) ಪತ್ತೆಯಾಗಿದೆ. ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಅಂಡ್ ದಿ ಎನ್ವಿರಾನ್‌ಮೆಂಟ್ (ಏಟ್ರೀ) ಸಂಶೋಧಕ ಡಾ.ಅರವಿಂದ್ ಎನ್.ಎ. ಹಾಗೂ ಸಂಶೋಧನಾ ವಿದ್ಯಾರ್ಥಿ ಸೂರ್ಯನಾರಾಯಣನ್ ಅವರು ಹಲ್ಲಿಯ ಹೊಸ ಪ್ರಬೇಧವನ್ನು ಪತ್ತೆ ಮಾಡಿದ್ದು, ಅಧ್ಯಯನ ನಡೆಸಿ ಅದನ್ನು ‘ಕುಬ್ಜ ಹಲ್ಲಿ’ ಎಂದು ಗುರುತಿಸಿದ್ದಾರೆ.
ಚುಟುಕು ಸಮಾಚಾರ
ಇತ್ತೀಚಿಗೆ ರಾಣಿ ಎಲಿಜಬೆತ್ II ಕನ್ಸರ್ವೇಟಿವ್ ಪಕ್ಷದ ನಾಯಕಿ ಲಿಜ್ ಟ್ರಸ್ ಅವರನ್ನು ಯುನೈಟೆಡ್ ಕಿಂಗ್‌ಡಂನ ಹೊಸ ಪ್ರಧಾನ ಮಂತ್ರಿಯಾಗಿ ನೇಮಿಸಿದರು.
ಭಾರತೀಯ ಮೂಲದ ಬ್ಯಾರಿಸ್ಟರ್ ಸುಯೆಲ್ಲಾ ಬ್ರಾವರ್‌ಮನ್ ಅವರನ್ನು ಬ್ರಿಟನ್ ನ ಹೊಸ ಗೃಹ ಕಾರ್ಯದರ್ಶಿಯಾಗಿ ನೇಮಿಸಲಾಗಿದ್ದು, ಭಾರತೀಯ ಮೂಲದ ಸಹ ಸಹೋದ್ಯೋಗಿ ಪ್ರೀತಿ ಪಟೇಲ್ ಅವರ ಬದಲಾಗಿ ಸುಯೆಲ್ಲಾ ಅವರಿಗೆ ಈ ಸ್ಥಾನ ನೀಡಲಾಗಿದೆ.
ದಕ್ಷಿಣ ಅಮೆರಿಕದ ಅಮೆಜಾನ್ ಮಳೆ ಕಾಡುಗಳಲ್ಲಿ ಬದುಕಿದ್ದ ಅಮೆಜಾನ್ ಕಾಡಿನ ಬುಡಕಟ್ಟು ಸಮುದಾಯವೊಂದರ ಕಟ್ಟಕಡೆಯ ವ್ಯಕ್ತಿ ಮರಣ ಹೊಂದಿದ್ದಾನೆ. ಈ ವ್ಯಕ್ತಿ ರೋಂಡೊನಿಯಾದ ತಾನಾರು ವ್ಯಾಪ್ತಿಯ ಕಾಡಿನಲ್ಲಿ ಮರಣವಾಗಿದ್ದಾನೆ ಎಂದು ಬ್ರೆಜಿಲ್‌ನ ಬುಡಕಟ್ಟು ಇಲಾಖೆ (Funai) ತಿಳಿಸಿದೆ.
ಶ್ರೀಲಂಕಾದಲ್ಲಿ ಅಧ್ಯಕ್ಷರ ಅಧಿಕಾರವನ್ನು ಮೊಟಕುಗೊಳಿಸಿ ಸಂಸತ್‌ಗೆ ಪರಮಾಧಿಕಾರವನ್ನು ನೀಡುವ ಸಂವಿಧಾನದ 22ನೇ ತಿದ್ದುಪಡಿ ಮಸೂದೆಗೆ ದೇಶದ ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿದೆ.
ದೆಹಲಿಯಲ್ಲಿ ಪ್ರತೀ ವರ್ಷ ಮಾಲಿನ್ಯ ಸೃಷ್ಟಿಸುತ್ತಿರುವ ರೈತರ ಕೃಷಿ ತ್ಯಾಜ್ಯ ಸುಡುವಿಕೆ ಸಮಸ್ಯೆಗೆ ಅಂತ್ಯ ಹಾಡಲು ಪಂಜಾಬ್ ಮತ್ತು ದೆಹಲಿ ಸರ್ಕಾರಗಳು ಕೈಜೋಡಿಸಿವೆ. ಬೆಳೆ ತ್ಯಾಜ್ಯ ನಿರ್ವಹಣೆಗೆ ಸದ್ಯದಲ್ಲೇ ಪೈಲಟ್ ಯೋಜನೆ ಆರಂಭಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ರೇಡಾರ್‌ಗಳ ಕಣ್ತಪ್ಪಿಸಿ ಸಂಚರಿಸುವ ಸಾಮರ್ಥ್ಯದ, ಭಾರತೀಯ ನೌಕಾಪಡೆಯ ಪ್ರಾಜೆಕ್ಟ್–17 ಯೋಜನೆಯ ಮೂರನೇ ನೌಕೆ ‘ತಾರಾಗಿರಿ’ ಅರಬ್ಬಿ ಸಮುದ್ರಕ್ಕೆ ಇಳಿಯಿತು. ‘ನೀಲಗಿರಿ ಶ್ರೇಣಿ’ಯ ನೌಕೆಗಳಲ್ಲಿ ಈ ನೌಕೆ ಮೂರನೆಯದ್ದಾಗಿದ್ದು, ಇದು ರಕ್ಷಣಾ ಸ್ವಾವಲಂಬನೆಯಲ್ಲಿ ಭಾರತದ ಮಹತ್ವದ ಹೆಜ್ಜೆ ಎಂದು ವಿಶ್ಲೇಷಿಸಲಾಗಿದೆ.
ಓಣಂ ಹಬ್ಬದ ಪ್ರಯುಕ್ತ ಕೇರಳದಲ್ಲಿ ವರ್ಷಂಪ್ರತಿ ಆಯೋಜನೆಯಾಗುತ್ತಿರುವ ನೆಹರೂ ಟ್ರೋಫಿ ದೋಣಿ ಸ್ಪರ್ಧೆಗೆ ಈ ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೇರಳ ಸರ್ಕಾರವು ಆಹ್ವಾನ ನೀಡಿತ್ತು.
1947 ರಲ್ಲಿ ದೇಶದ ಕೊನೆಯ ಚಿರತೆ ಸಾವನ್ನಪ್ಪಿದ 75 ವರ್ಷಗಳ ನಂತರ, ವಿಶ್ವದ ಅತಿ ವೇಗದ ಪ್ರಾಣಿಯನ್ನು ಭಾರತೀಯ ಅರಣ್ಯಕ್ಕೆ ಮರುಪರಿಚಯಿಸುವ ಕಾರ್ಯಕ್ರಮವನ್ನು ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನೆರವೇರಿಸಲಿದ್ದಾರೆ.
ರಕ್ತದಾನ ಅಮೃತ ಮಹೋತ್ಸವ’ ಅಭಿಯಾನಕ್ಕಾಗಿ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಕೇಂದ್ರ ಆರೋಗ್ಯ ಸಚಿವಾಲಯವು ಇದಕ್ಕಾಗಿ ಇ-ರಕ್ತ್ ಕೋಶ್ ಎಂಬ ಆನ್‌ಲೈನ್ ಪೋರ್ಟಲ್ ಲಾಂಚ್ ಮಾಡಲಿದ್ದು, ಸೆಪ್ಟೆಂಬರ್ 17ರಿಂದ ಜನರು ಇದರಲ್ಲಿ ತಮ್ಮ ಹೆಸರು ನೋಂದಾಯಿಸಿ ಸ್ವಯಂಪ್ರೇರಿತ ರಕ್ತದಾನದಲ್ಲಿ ಪಾಲ್ಗೊಳ್ಳಬಹುದು.
64ನೇ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆ ಮಾಡಿರುವ ಸಂಬಂಧ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರತಿಷ್ಠಾನವು ಕೇರಳದ ಸಿಪಿಎಂ ಹಿರಿಯ ನಾಯಕಿ ಮತ್ತು ಮಾಜಿ ಆರೋಗ್ಯ ಸಚಿವೆ ಶೈಲಜಾ ಅವರನ್ನು ಸಂಪರ್ಕಿಸಿತ್ತು, ಆದರೆ ಅವರು ಈ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.
ಶಾಲಾ ಮಕ್ಕಳಲ್ಲಿ ಉಳಿತಾಯದ ಮನೋಭಾವ ಜಾಗೃತಗೊಳಿಸಲು ಮುಂದಾಗಿರುವ ಭಾರತೀಯ ಅಂಚೆ ಇಲಾಖೆ ಮೊದಲ ಹಂತದಲ್ಲಿ ಬೆಂಗಳೂರು ನಗರದ ಆಯ್ದ 10 ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
‘ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು (ಕೆಆರ್‌ವಿಪಿ) ವತಿಯಿಂದ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಸೆ.8ರಿಂದ 10ರವರೆಗೆ 14ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ ಆಯೋಜಿಸಲಾಗಿತ್ತು’.
ಚುಟುಕು ಸಮಾಚಾರ
ಇಂಗ್ಲೆಂಡ್ ರಾಣಿ ಎಲಿಜಬೆತ್ II ವಯೋಸಹಜ ಖಾಯಿಲೆಯಿಂದ ತಮ್ಮ 96ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸ್ಕಾಟ್ ಲ್ಯಾಂಡ್ ನ ಬಲ್ಮೊರಲ್ ನಿವಾಸದಲ್ಲಿ ತಮ್ಮ ತಾಯಿ 2ನೇ ಎಲಿಜಬೆತ್ ನಿಧನ ನಂತರ 73 ವರ್ಷದ ಚಾರ್ಲ್ಸ್ ಇಂಗ್ಲೆಂಡ್ ರಾಜರಾಗಿದ್ದಾರೆ.
ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ 2021ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 191 ರಾಷ್ಟ್ರಗಳ ಪೈಕಿ ಭಾರತ 132 ನೇ ಸ್ಥಾನ ಪಡೆದುಕೊಂಡಿದೆ. 2020ರಲ್ಲಿ ಭಾರತ 189 ರಾಷ್ಟ್ರಗಳ ಪೈಕಿ 131ನೇ ಸ್ಥಾನ ಪಡೆದಿತ್ತು.
ಸುಮಾರು 48 ವರ್ಷಗಳ ನಂತರ ವಿಶ್ವ ಡೈರಿ ಶೃಂಗಸಭೆಯನ್ನು ಭಾರತದಲ್ಲಿ ಆಯೋಜಿಸಲಾಗುತ್ತಿದೆ. ಹಲವು ವಿಚಾರಗಳಿಂದ ವಿಶೇಷವಾಗಿರುವ ಈ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಗುಜರಾತ್ನ ‘ಬನ್ನಿ’ ಎಮ್ಮೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಮೇಲ್ಮೈನಿಂದ ಆಗಸಕ್ಕೆ ಚಿಮ್ಮುವ ತ್ವರಿತ ಪ್ರತಿಕ್ರಿಯೆಯ ಕ್ಷಿಪಣಿ ವ್ಯವಸ್ಥೆಯನ್ನು ಭಾರತ ಯಶಸ್ವಿಯಾಗಿ ಉಡಾಯಿಸಿದೆ. ಒಡಿಶಾದ ಕಡಲ ತೀರದಿಂದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನಲ್ಲಿ ಉಡಾವಣೆ ಮಾಡಲಾಗಿದ್ದು, ಸೇನೆ ಹಾಗೂ ಡಿಆರ್ ಡಿಒ ಮೌಲ್ಯಮಾಪನ ಪ್ರಯೋಗಗಳ ಭಾಗವಾಗಿ ಈ ಪ್ರಯೋಗ ನಡೆದಿದೆ.
ಕೇಂದ್ರ ಸರ್ಕಾರ ರಾಜ್ ಪಥ್ ಮಾರ್ಗವನ್ನು ಸೆಂಟ್ರಲ್ ವಿಸ್ತಾ ಲಾನ್ಸ್ ಯೋಜನೆ ಅಡಿ ಅಭಿವೃದ್ಧಿಗೊಳಿಸಿ ಅದಕ್ಕೆ ಕರ್ತವ್ಯ ಪಥ್ ಎಂದು ಮರುನಾಮಕರಣ ಮಾಡಿ ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು . ಇದೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಗೇಟ್‌ನಲ್ಲಿ ಸ್ಥಾಪಿಸಲಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 28 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಕಾರವಾರ ತಾಲ್ಲೂಕಿನ ಮಾಜಾಳಿಯಲ್ಲಿ ರೂ. 250 ಕೋಟಿ ವೆಚ್ಚದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ ಯೋಜನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ. ಇದರೊಂದಿಗೆ ಕರಾವಳಿಯಲ್ಲಿ ಮತ್ತೊಂದು ಬಂದರು ನಿರ್ಮಾಣವಾಗಲಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಸಾಗರಮಾಲಾ’ದ ಅಡಿಯಲ್ಲಿ ಬಂದರು ನಿರ್ಮಾಣವಾಗಲಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ಉದ್ಘಾಟನೆಗೆ ಪೂರ್ವಭಾವಿಯಾಗಿ ರಾಜ್ಯಾದ್ಯಂತದಿಂದ ಪವಿತ್ರ ಮೃತ್ತಿಕೆ (ಮಣ್ಣು) ಮತ್ತು ಜಲವನ್ನು ಸಂಗ್ರಹಿಸುವ ವಿಶಿಷ್ಟ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಿರಳ ಕಾಯಿಲೆಗಳಿಗೂ ಚಿಕಿತ್ಸಾ ವೆಚ್ಚ ಭರಿಸಲು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಕ್ರಮ ವಹಿಸಿದ್ದಾರೆ.
ಚುಟುಕು ಸಮಾಚಾರ
ಲೈಂಗಿಕ ಹಾಗೂ ಎಲ್ಲಾ ರೀತಿಯ ಅಪರಾಧ, ದೌರ್ಜನ್ಯಗಳಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ 2012ರಲ್ಲಿ ಜಾರಿಗೆ ಬಂದಿದ್ದೆ ಪೋಕ್ಸೋ ಕಾಯ್ದೆ. POCSO ಅಂದರೆ The Protection of Children from Sexual Offences ಅಂದರೆ ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ.
ಸೆಪ್ಟೆಂಬರ 2 ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶೀಯ ನಿರ್ಮಿತ ಮೊದಲ ವಿಮಾನ ವಾಹಕ ಯುದ್ಧನೌಕೆ ‘ಐಎನ್ಎಸ್ ವಿಕ್ರಾಂತ್’ ಲೋಕಾರ್ಪಣೆ ಮಾಡುವ ಮೂಲಕ ಆತ್ಮನಿರ್ಭರ ಭಾರತ ದ ಸಂಕಲ್ಪಕ್ಕೆ ಪುಷ್ಟಿ ನೀಡಿದರು.
ನಾಲ್ಕು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಮ್ಮುಖದಲ್ಲಿ ಭಾರತದೊಂದಿಗೆ 7 ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ.
ಅಂತರರಾಷ್ಟ್ರೀ ಯ ಹಣಕಾಸು ನಿಧಿಯ (ಐಎಂಎಫ್) ಅಂದಾಜಿನ ಪ್ರಕಾರ ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿ ಬ್ರಿಟನ್ ಹಿಂದಿಕ್ಕಿರುವ ಭಾರತ 5ನೇ ಸ್ಥಾನಕ್ಕೇರಿದ್ದು, ಬ್ರಿಟನ್ ಆರನೇ ಸ್ಥಾನಕ್ಕೆ ಕುಸಿದಿದೆ.
ಕರಾವಳಿ ಜಿಲ್ಲೆಯ ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ, 3,800 ಕೋಟಿ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ ನೀಡಿದರು.
ಉತ್ಪಾದನೆ ಮತ್ತು ಸುಸ್ಥಿರತೆ-ಸಂಬಂಧಿತ ವಲಯಗಳಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಗುರುತಿಸಿ, ಬೆಂಬಲಿಸುವ ‘ವೆಂಚುರೈಸ್’ ಸ್ಪರ್ಧೆಗೆ ಕರ್ನಾಟಕ ಸರ್ಕಾರ ಚಾಲನೆ ನೀಡಿದೆ.
ಚುಟುಕು ಸಮಾಚಾರ
ಕೃತಕ ಬುದ್ಧಿಮತ್ತೆ (ಎಐ) ತಂತ್ರಾಂಶವೂ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿದ ‘ಡ್ರೋನ್‌ಗಳ ಸಮೂಹ’ ವನ್ನು ಸಶಸ್ತ್ರ ಪಡೆಗಳಿಗೆ ಸೇರ್ಪಡೆ ಮಾಡಲಾಗುತ್ತಿದೆ. ಗುರಿಗಳನ್ನು ನಿಖರವಾಗಿ ಗುರುತಿಸಿ, ಧ್ವಂಸ ಮಾಡಲು ಈ ಡ್ರೋನ್‌ಗಳಲ್ಲಿನ ಕೃತಕ ಬುದ್ಧಿಮತ್ತೆ ತಂತ್ರಾಂಶ ನೆರವಾಗಲಿದೆ ಎಂದು ಮೂಲಗಳು ಹೇಳಿವೆ.
ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್(CSIR) ಮತ್ತು ಖಾಸಗಿ ಸಂಸ್ಥೆ KPIT ಲಿಮಿಟೆಡ್ ಅಭಿವೃದ್ಧಿಪಡಿಸಿದ ಭಾರತದ ಮೊದಲ ಸ್ಥಳೀಯ ಹೈಡ್ರೋಜನ್ ಇಂಧನ ಸೆಲ್ ಬಸ್ ಅನ್ನು ಪುಣೆಯಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಅನಾವರಣಗೊಳಿಸಿದರು.
ಆಗಸ್ಟ್ 27 ರಂದು ಅಹಮದಾಬಾದ್‌ನ ಸಾಬರಮತಿ ನದಿ ತೀರದಲ್ಲಿ ‘ಖಾದಿ ಉತ್ಸವ’ ನಡೆಯಿತು. ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಭಾಗವಾಗಿ ಈ ಉತ್ಸವವನ್ನು ಆಯೋಜಿಸಲಾಗಿದೆ. ಖಾದಿ ಉತ್ಸವದಲ್ಲಿ ಸುಮಾರು 7,500 ಮಹಿಳೆಯರು ಏಕಕಾಲಕ್ಕೆ ಚರಕದಲ್ಲಿ ನೂಲುವ ಮೂಲಕ ದಾಖಲೆ ಬರೆದಿದ್ದಾರೆ.
ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ) ಖಾತೆದಾರರನ್ನು ಸರ್ಕಾರಿ ಬೆಂಬಲಿತ ಜೀವ ವಿಮೆ ಮತ್ತು ಅಪಘಾತ ವಿಮಾ ಯೋಜನೆಗಳ ಅಡಿಯಲ್ಲಿ ಕವರ್ ಮಾಡಲು ಬ್ಯಾಂಕ್‌ಗಳಿಗೆ ತಿಳಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಭಾರತದ ಕ್ಲೀನ್ ಏರ್ ಶೃಂಗಸಭೆಯ (ಐಸಿಎಎಸ್) ನಾಲ್ಕನೇ ಆವೃತ್ತಿಯು ಬೆಂಗಳೂರಿನಲ್ಲಿ ಆಗಸ್ಟ್ 23 ರಿಂದ 26 ರವರೆಗೆ ಜಾಗತಿಕ ತಜ್ಞರೊಂದಿಗೆ ನಡೆಯಿತು. ICAS ನಲ್ಲಿ ಜಾಗತಿಕ ತಜ್ಞರು ವಾಯು ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯನ್ನು ಪರಿಹರಿಸುವ ವಿಧಾನಗಳನ್ನು ಚರ್ಚಿಸಿದ್ದಾರೆ.
‘ಉದ್ಯೋಗಸ್ಥ ಮಹಿಳೆಯರಿಗೆ ಉದ್ಯೋಗ ಸ್ಥಳದಲ್ಲಿ ಸೌಕರ್ಯ ಕಲ್ಪಿಸಿರುವ ‘ಪ್ರಾಜೆಕ್ಟ್ ರಶ್ಮಿ’ಯನ್ನು ಮೂರು ಕಡೆ ಅಂದರೆ, ಪೊಲೀಸ್ ಆಯುಕ್ತರ ಕಚೇರಿ, ಲೋಕೋಪಯೋಗಿ ಇಲಾಖೆ ಕಟ್ಟಡ ಹಾಗೂ ಹೈಕೋರ್ಟ್ ಆವರಣದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಬೆಂಗಳೂರು ನಗರದಲ್ಲಿನ ಕೊಳಚೆ ಪ್ರದೇಶದ ಬಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೆರವಾಗಲು ಬಿಬಿಎಂಪಿ ಕಲ್ಯಾಣ ಇಲಾಖೆ ಎಲ್ಲಾ ವಾರ್ಡ್ ಗಳಲ್ಲಿ ಬೆಳಕು ಕಲಿಕಾ ಕೇಂದ್ರವೊಂದನ್ನು ಸ್ಥಾಪಿಸುತ್ತಿದೆ. ಈ ಕೇಂದ್ರದಲ್ಲಿ ಓರ್ವ ನುರಿತ ಶಿಕ್ಷಕ, ಸುಸಜ್ಜಿತ ಕೊಠಡಿ ಹಾಗೂ ಪುಸ್ತಕಗಳು ಇರಲಿವೆ.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ನಬಾರ್ಡ್ ಸಹಯೋಗದಲ್ಲಿ ಆಯೋಜಿಸಿರುವ ಸಿರಿಧಾನ್ಯಗಳ ಅಭಿಯಾನವನ್ನುರಾಯಚೂರಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉದ್ಘಾಟಿ ಸಿದರು.
ಗೌರಿ-ಗಣೇಶ ಹಬ್ಬದಂದು ಮಹಿಳೆಯರಿಗೆ ವಿವಿಧ ಉದ್ಯೋಗಾವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರದಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ 30 ಸಾವಿರ ಮಹಿಳೆಯರಿಗೆ ‘ಸಖಿ ಭಾಗ್ಯ’ ಯೋಜನೆಯನ್ನು ಜಾರಿಗೊಳಿಸುವ ನಿರ್ಧಾರ ಕೈಗೊಂಡಿದೆ.
NammaKPSC Current Affairs - August 2022
ಚುಟುಕು ಸಮಾಚಾರ
ಖೋ-ಖೋ, ಕಬಡ್ಡಿಯಂತೆ ದಹಿ ಹಂಡಿಗೂ ಈಗ ಮಹಾರಾಷ್ಟ್ರದಲ್ಲಿ ಆಟದ ಸ್ಥಾನಮಾನ ಸಿಕ್ಕಿದೆ. ಇದನ್ನು ಒಂದು ರೀತಿಯ ಸಾಹಸ ಕ್ರೀಡೆ ಎಂದು ಪರಿಗಣಿಸಲಾಗುವುದು.
ಬೇನಾಮಿ ವಹಿವಾಟುಗಳ ನಿಷೇಧ ಕಾಯ್ದೆ– 1988ರ 3(2)ನೇ ಸೆಕ್ಷನ್ ಅಸಾಂವಿಧಾನಿಕ. ಜತೆಗೆ ಈ ಕಾಯ್ದೆಗೆ 2016ರಲ್ಲಿ ತರಲಾಗಿ ರುವ ತಿದ್ದುಪಡಿಗಳನ್ನು ಪೂರ್ವಾನ್ವಯ ಮಾಡಲು ಸಾಧ್ಯ ವಿಲ್ಲ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.
ಖ್ಯಾತ ವಿಜ್ಞಾನಿ ಸಮೀರ್ ವಿ.ಕಾಮತ್ ಅವರು ರಕ್ಷಣಾ ಸಚಿವಾಲಯದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮುಖ್ಯಸ್ಥ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2022–23ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ‘ಗೌರವ ಪ್ರಶಸ್ತಿ’ಗೆ ಚನ್ನರಾಯಪಟ್ಟಣದ ಗಾಯಕ ಸಿ.ಆರ್. ರಾಮಚಂದ್ರ ಹಾಗೂ ಮಂಗಳೂರಿನ ನೃತ್ಯ ಗುರು ಗೀತಾ ಸರಳಾಯ ಆಯ್ಕೆಯಾಗಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದ ಒಂಬತ್ತು ಜಿಲ್ಲೆಗಳ ವ್ಯಾಪ್ತಿಯಲ್ಲಿ ಈಶಾ ಫೌಂಡೇಷನ್‌ನ ಕಾವೇರಿ ಕೂಗು ಹಾಗೂ ಸರ್ಕಾರದ ವಿವಿಧ ಕೃಷಿ ಅರಣ್ಯ ಯೋಜನೆಗಳ ಕುರಿತು ಜಂಟಿಯಾಗಿ ಪ್ರಚಾರ ನಡೆಸಲು ರಾಜ್ಯ ಸರ್ಕಾರ ಮತ್ತು ಈಶಾ ಔಟ್‌ರೀಚ್ ಒಪ್ಪಂದಕ್ಕೆ ಸಹಿ ಹಾಕಿವೆ.
ಎಂಟು ನೂತನ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುವು ಮಾಡಿಕೊಡುವ ಉದ್ದೇಶದಿಂದ ‘ಕರ್ನಾಟಕ ವಿವಿಗಳ ಕಾಯ್ದೆ-2000’ಕ್ಕೆ ತಿದ್ದುಪಡಿ ತರಲು ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇದರಿಂದಾಗಿ ಚಾಮರಾಜನಗರ, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ, ಬೀದರ್ ಮತ್ತು ಮಂಡ್ಯ ವಿ.ವಿ.ಗಳ ಸ್ಥಾಪನೆ ಸುಗಮವಾಗಿ ನಡೆಯಲಿದೆ.
ಭಾರತಮಾಲಾ ಪರಿಯೋಜನಾ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎ) ಬೆಳಗಾವಿ– ಗೋವಾ ನಡುವೆ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್ 748 ಎಎ) ಮೇಲ್ದರ್ಜೆಗೆ ಏರಿಸುವ ಕಾಮಗಾರಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆ ಕಡ್ಡಾಯ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ನಿರ್ದೇಶಿಸಿದೆ.
ಚುಟುಕು ಸಮಾಚಾರ
ಕೇಂದ್ರ ಸರ್ಕಾರ ವಿಂಡ್ ಫಾಲ್ ಆದಾಯ ತೆರಿಗೆಯ ಪಾಕ್ಷಿಕ ಪರಿಷ್ಕರಣೆಯಲ್ಲಿ ಆಗಸ್ಟ್ 18 ರಂದು ಕಚ್ಚಾ ತೈಲದ ಮೇಲಿನ ಸೆಸ್ ನ್ನು ಪ್ರತಿ ಟನ್ ಗೆ 17,750 ರೂಗಳಿಂದ 13,000 ರೂಪಾಯಿಗಳಿಗೆ ಇಳಿಕೆ ಮಾಡಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಅಡಿಯಲ್ಲಿ ದೇಶಾದ್ಯಂತ ಹಂಚಿಕೆಯಾಗುತ್ತಿರುವ ಆಹಾರ ಅಧಾನ್ಯಗಳ ಪ್ರಮಾಣ ಮತ್ತು ಬೆಲೆಯಲ್ಲಿ ಏಕರೂಪತೆ ಕಾಯ್ದುಕೊಳ್ಳುವುದಕ್ಕಾಗಿ ಎನ್ಎಫ್ಎಸ್ಎ ಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಖಾದ್ಯ ಸುರಕ್ಷಾ ಯೋಜನೆ ಎಂದು ಮರು ನಾಮಕರಣ ಮಾಡಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕ ಸ್ನೇಹಿಯಾಗುತ್ತಿದೆ. ಕುಡಿಯುವ ನೀರು, ಆಹಾರ, ಟಿಕೆಟ್, ಬುಕ್ಕಿಂಗ್ ಸೇರಿದಂತೆ ಪ್ರತಿಯೊಂದರಲ್ಲಿ ಪ್ರಯಾಣಿಕರ ಕ್ಷೇಮ, ಕುಶಲತೆ, ಅನುಕೂಲತೆಯನ್ನು ಒದಗಿಸುತ್ತಿದೆ. ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಯುಟಿಎಸ್ (ಕಾಯ್ದಿರಿಸದ ಟಿಕೆಟ್ ವ್ಯವಸ್ಥೆ) ಆಪ್ ಬಿಡುಗಡೆಗೊಳಿಸಿದೆ.
ಕೇರಳದಲ್ಲಿ ಟೊಮೇಟೊ ಜ್ವರ ಪ್ರಕರಣಗಳು ವರದಿಯಾಗುತ್ತಿದ್ದು, ಹೈಅಲರ್ಟ್ ಘೋಷಿಸಲಾಗಿದೆ.
ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಮೆನುವಿನಲ್ಲಿ ಜೋಳ, ಸಜ್ಜೆ ಮತ್ತು ರಾಗಿಯನ್ನು ರಾಜ್ಯ ಹಾಗೂ ದೇಶದಾದ್ಯಂತ ಪರಿಚಯಿಸಲಾಗುವುದು. ಪೋಷಣ್ ಅಭಿಯಾನದ ಭಾಗವಾಗಿ ಮಕ್ಕಳ ಊಟದಲ್ಲಿ ಪೌಷ್ಟಿಕಾಂಶವನ್ನು ಸೇರಿಸಲು ಇನ್‌ಸ್ಟಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚ್ (IIMR), ಅಕ್ಷಯ ಪಾತ್ರಾ ಫೌಂಡೇಶನ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ವಿಧಾನಸೌಧದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿ, ‘ಕರ್ನಾಟಕ ವಿಷನ್ ವರದಿ’ ಬಿಡುಗಡೆ ಮಾಡಿದರು. ಇಡೀ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರದ ದೂರದೃಷ್ಟಿಗಾಗಿ ‘ಕರ್ನಾಟಕ ವಿಷನ್ ವರದಿ’ ಹೊರತರಲಾಗಿದೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಯುವ ಬರಹಗಾರ ದಾದಾಪೀರ್ ಜಿಮನ್ ಮತ್ತು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ನಿವೃತ್ತ ಶಿಕ್ಷಕ ತಮ್ಮಣ್ಣ ಬೀಗಾರ್ ಅವರಿಗೆ 2022ನೇ ಸಾಲಿನ ಕೇಂದ್ರೀಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
3ಡಿ ತಂತ್ರಜ್ಞಾನ ಬಳಸಿ ನಿರ್ಮಿಸಿದ ಭಾರತದ ಮೊದಲ ಅಂಚೆ ಕಚೇರಿ ಬೆಂಗಳೂರಿನ ಹಲಸೂರಿನ ಕೇಂಬ್ರಿಡ್ಜ್ ಲೇಔಟ್‌ನಲ್ಲಿ ನಿರ್ಮಾಣವಾಗಲಿದ್ದು, 3ಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿ ನಿರ್ಮಿಸಲಾದ ದೇಶದ ಮೊಟ್ಟ ಮೊದಲ ಅಂಚೆ ಕಚೇರಿ ಎನ್ನುವ ಹೆಗ್ಗಳಿಕೆ ಇದರದ್ದಾಗಲಿದೆ.
ಭಾರತೀಯ ನಾವೀನ್ಯ ಶೃಂಗಸಭೆಯ 18ನೇ ಆವೃತ್ತಿ ‘ಇನ್ನೋವರ್ಜ್–2022’ ಇದೇ 25ರಿಂದ ಮೂರು ದಿನ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ತಿಳಿಸಿದೆ. ಭಾರತೀಯ ಕೈಗಾರಿಕೆಗಳು ನಾವೀನ್ಯದ ಆಧಾರಲ್ಲಿ ಬೆಳವಣಿಗೆ ಸಾಧಿಸಿ, ಆ ಮೂಲಕ ಡಿಜಿಟಲ್ ಯುಗದಲ್ಲಿ ಜಾಗತಿಕವಾಗಿ ದೊಡ್ಡ ಮಟ್ಟದಲ್ಲಿ ಬೆಳೆಯಲು ಈ ಶೃಂಗಸಭೆ ನೆರವಾಗಲಿದೆ ಎಂದು ಸಿಐಐ ಹೇಳಿದೆ.
ಚುಟುಕು ಸಮಾಚಾರ
ಆಗಸ್ಟ್ 22, ರಂದು ವಿಶ್ವ ಜಾನಪದ ದಿನ ಆಚರಿಸಲಾಗುತ್ತದೆ, ಬ್ರೆಜಿಲ್ ಸರ್ಕಾರವು ಆಗಸ್ಟ್ 22 ಅನ್ನು ‘ಫೋಕ್‌ಲೋರ್ ಡೇ’ ಎಂದು 1965ರ ಆಗಸ್ಟ್ 17ರಂದು ಅಧಿಕೃತವಾಗಿ ಘೋಷಿಸಿತು. ಅಲ್ಲಿ ಪ್ರತಿವರ್ಷ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇದುಜಗತ್ತಿನ ಜನಪದ ಸಮುದಾಯಗಳಿಗೂ ವಿದ್ವಾಂಸರಿಗೂ ಒಂದು ಅವಿಸ್ಮರಣೀಯ ದಿನ.
ಮೊದಲ ಎರಡು ವರ್ಷ ಶಿಶುವಿನ ಚಲನವಲನಗಳಲ್ಲಿ ಆಗುವ ಪ್ರಗತಿ, ಬದಲಾವಣೆಗಳನ್ನು ಗುರುತಿಸಲು ತಂದೆ–ತಾಯಿಗೆ ನೆರವಾಗುವಂತೆ ರೂಪಿಸಿದ ಮೊಬೈಲ್ ಅಪ್ಲಿಕೇಷನ್ ಅನ್ನು ಕೇಂದ್ರ ಆರೋಗ್ಯ ಇಲಾಖೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಬಿಡುಗಡೆಗೊಳಿಸಿದರು.
ರಕ್ಷಣಾ ಕ್ಷೇತ್ರದ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಪೂರಕವಾಗಿ ಭಾರತವು ಕಡಲ ಕಣ್ಗಾವಲು ವಿಮಾನ ಡಾರ್ನಿಯರ್ ಅನ್ನು ಶ್ರೀಲಂಕಾ ನೌಕಾಪಡೆಗೆ ಹಸ್ತಾಂತರಿಸಿದೆ.
ಕರ್ನಾಟಕ ಸರ್ಕಾರವು ಕ್ರಿಕೆಟ್‌ನಲ್ಲಿ ಬೆಳ್ಳಿ ಪದಕ ವಿಜೇತೆ ರಾಜೇಶ್ವರಿ ಗಾಯಕ್ವಾಡ್ ಅವರಿಗೆ 15 ಲಕ್ಷ ಹಾಗೂ ವೇಟ್ ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದ ಗುರುರಾಜ ಪೂಜಾರಿಗೆ 8 ಲಕ್ಷ ನಗದು ಪುರಸ್ಕಾರ, ಬ್ಯಾಡ್ಮಿಂಟನ್ ಮಿಕ್ಸಡ್ ಡಬಲ್ಸ್‌ನಲ್ಲಿ ಬೆಳ್ಳಿ ಗೆದ್ದ ಕನ್ನಡತಿ ಅಶ್ವಿನಿ ಪೊನ್ನಪ್ಪ ಅವರಿಗೆ ರಾಜ್ಯ ಸರ್ಕಾರದಿಂದ 15 ಲಕ್ಷ ರೂ ನಗದು ಪುರಸ್ಕಾರವನ್ನುಘೋಷಿಸಲಾಗಿದೆ.
ಚುಟುಕು ಸಮಾಚಾರ
ಇಂಧನ ಸಂರಕ್ಷಣೆ (ತಿದ್ದುಪಡಿ) ಮಸೂದೆ, 2022 ಅನ್ನು ಆಗಸ್ಟ್ 3, 2022 ರಂದು ಲೋಕಸಭೆಯಲ್ಲಿ ಮಂಡಿಸಲಾಯಿತು ಮತ್ತು ಆಗಸ್ಟ್ 8 ರಂದು ಅಂಗೀಕರಿಸಲಾಯಿತು. ಇದು ಇಂಧನ ಸಂರಕ್ಷಣೆ ಕಾಯಿದೆ, 2001 ಅನ್ನು ತಿದ್ದುಪಡಿ ಮಾಡಲು ಪ್ರಯತ್ನಿಸುತ್ತದೆ. ಇದು ಇಂಧನ ದಕ್ಷತೆ ಮತ್ತು ಸಂರಕ್ಷಣೆಯನ್ನು ಉತ್ತೇಜಿಸುತ್ತದೆ.
ಫಿಫಾ ಕೌನ್ಸಿಲ್ ಬ್ಯೂರೋ, ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (AIFF) ಸಂಸ್ಥೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಘೋಷಿಸಿದೆ. ಬ್ಯೂರೊ ಆಫ್ ಫಿಫಾ (FIFA) ಕೌನ್ಸಿಲ್‍ನಲ್ಲಿ ಈ ಸಂಬಂಧ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ.
ತಿಂಗಳ ಕೊನೆಯಲ್ಲಿ ರಷ್ಯಾದಲ್ಲಿ ನಡೆಯಲಿರುವ ವೋಸ್ಟಾಕ್ -2022 ಮಿಲಿಟರಿ ತಾಲೀಮಿನಲ್ಲಿ ತಮ್ಮ ಸೈನಿಕರು ಭಾಗವಹಿಸಲಿದ್ದಾರೆ ಎಂದು ಚೀನಾ ತಿಳಿಸಿದೆ. ಈ ಸಮರಾಭ್ಯಾಸದಲ್ಲಿ ಭಾರತೀಯ ಸೇನೆಯ ಭಾಗವಹಿಸುವಿಕೆಯೂ ಇರಲಿದೆ ಎಂದು ಅದು ಹೇಳಿದೆ.
ದೆಹಲಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಭಾರತವನ್ನು ವಿಶ್ವದ ನಂಬರ್ ಒನ್ ದೇಶವನ್ನಾಗಿ ಮಾಡುವ ರಾಷ್ಟ್ರೀಯ ಮಿಷನ್ ಗೆ ಚಾಲನೆ ನೀಡಿದರು.
ದೇಶಕ್ಕೆ ಸ್ವಾತಂತ್ರ್ಯ ದೊರಕಿ ಅಮೃತ ಮಹೋತ್ಸವದ ಸಂದರ್ಭದಲ್ಲಿದ್ದಾಗಲೇ, 38 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯೋಧ ಲ್ಯಾನ್ಸ್ ನಾಯಕ್ ಚಂದ್ರಶೇಖರ್ ಅವರ ಮೃತ ದೇಹದ ಪಳೆಯುಳಿಕೆ ಸಿಯಾಚಿನ್‍ನ 16,000 ಅಡಿ ಆಳದಲ್ಲಿ ಪತ್ತೆ ಆಗಿದೆ.
ಭಾರತದ ತೇಜಸ್ ಲಘು ಯುದ್ಧ ವಿಮಾನಗಳಿಗೆ ಭಾರೀ ಬೇಡಿಕೆ ಬಂದಿದ್ದು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಲ್) ಕೌಲಾಲಂಪುರದಲ್ಲಿ(ಮಲೇಷ್ಯಾ) ತನ್ನ ಕಚೇರಿಯನ್ನು ತೆರೆಯುವ ಒಪ್ಪಂದಕ್ಕೆ ಸಹಿ ಹಾಕಿದೆ.
ದೇವಬಾಗ್ ಬಳಿಯ ದಂಡೇಬಾಗ್‌ನಲ್ಲಿ ದಡಕ್ಕೆ ತೇಲಿಬಂದ ಆಳಸಮುದ್ರ ಮೀನುಗಾರಿಕೆಯ ಬಲೆಯಲ್ಲಿ ಎರಡು ಆಲಿವ್ ರಿಡ್ಲೆ ಆಮೆಗಳು ಸಿಲುಕಿದ್ದವು.
ಕರ್ನಾಟಕ ಜಾನಪದ ಅಕಾಡೆಮಿಯ 2022ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ಚುಟುಕು ಸಮಾಚಾರ
ಉಪಗ್ರಹಗಳ ಜಾಡು ಮತ್ತು ಖಂಡಾಂತರ ಕ್ಷಿಪಣಿಗಳನ್ನು ಪತ್ತೆಹಚ್ಚುವ ಚೀನಾದ ಅತ್ಯಾಧುನಿಕ ಕಣ್ಗಾವಲು ಮತ್ತು ಸಂಶೋಧನಾ ನೌಕೆ ಯುವಾನ್ ವಾಂಗ್ 5 ಶ್ರೀಲಂಕಾ ದಕ್ಷಿಣದ ಹಂಬಂಟೋಟ ಬಂದರಿನಲ್ಲಿ ಲಂಗರು ಹಾಕಿದೆ.
ಭಾರತೀಯ ರೈಲ್ವೆ ಬೋಗಿ ತಯಾರಿಕೆ ಘಟಕ ಐಸಿಎಫ್‌ನಲ್ಲಿ (ಇಂಟಿಗ್ರಲ್ ಕೋಚ್ ಫ್ಯಾಕ್ಟರಿ) ದೇಶದಲ್ಲೇ ಮೊದಲ ಬಾರಿಗೆ ಮೆಟ್ರೊ ರೈಲುಗಳ ಕೋಚ್‌ಗಳನ್ನು (ಬೋಗಿ) ನಿರ್ಮಿಸಲಾಗುತ್ತಿದೆ.
2 ನೇ ತಲೆಮಾರಿನ ಎಥೆನಾಲ್ ಸ್ಥಾವರವನ್ನು ಆಗಸ್ಟ್ 10, 2022 ರಂದು ಹರಿಯಾಣದಲ್ಲಿ ವಿಶ್ವ ಜೈವಿಕ ಇಂಧನ ದಿನದ ಸಂದರ್ಭದಲ್ಲಿ ಕಾರ್ಯಾರಂಭ ಮಾಡಲು ನಿರ್ಧರಿಸಲಾಗಿದೆ.
80 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ‘ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ’ಯ (ಸಿಎಸ್‌ಐಆರ್) ಮಹಾನಿರ್ದೇಶಕ ಹುದ್ದೆಗೆ ಮಹಿಳೆಯೊಬ್ಬರು ಆಯ್ಕೆಯಾಗಿದ್ದಾರೆ. ಅವರೆ ವಿಜ್ಞಾನಿ ಡಾ.ನಲ್ಲತಂಬಿ ಕಲೈಸೆಲ್ವಿ.
ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಅಡಿಯಲ್ಲಿ ಅಕ್ಟೋಬರ್‌ನಲ್ಲಿ ಭಾರತ ಆಯೋಜಿಸಲಿರುವ ಭಯೋತ್ಪಾದನಾ ನಿಗ್ರಹ ಕವಾಯತಿನಲ್ಲಿ ಪಾಕಿಸ್ತಾನವು ಭಾಗಿಯಾಗಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಸ್ವಾತಂತ್ರ್ಯದ 75 ನೇ ವರ್ಷಾಚರಣೆ ಅಂಗವಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಆ ರಾಜ್ಯದ ಜನತೆಗಾಗಿ 75 ಆಮ್ ಆದ್ಮಿ ಕ್ಲಿನಿಕ್‌ಗಳನ್ನು (ಜನತಾ ಆಸ್ಪತ್ರೆಗಳು) ತೆರೆಯಲು ನಿರ್ಧರಿಸಿದ್ದಾರೆ.
ಭಾರತದ 75ನೇ ಸ್ವಾತಂತ್ರ್ಯೋತ್ಸವದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಲವು ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
ಚುಟುಕು ಸಮಾಚಾರ
ಉದಾರಶಕ್ತಿ ಭಾರತೀಯ ವಾಯುಪಡೆ (IAF) ಮತ್ತು ರಾಯಲ್ ಮಲೇಷಿಯನ್ ಏರ್ ಫೋರ್ಸ್ (RMAF) ನಡುವಿನ ದ್ವಿಪಕ್ಷೀಯ ವ್ಯಾಯಾಮವಾಗಿದೆ. ನಾಲ್ಕು ದಿನಗಳ ದ್ವಿಪಕ್ಷೀಯ ವ್ಯಾಯಾಮಗಳು ಇತ್ತೀಚೆಗೆ ಮಲೇಷ್ಯಾದಲ್ಲಿ ಪ್ರಾರಂಭವಾದವು.
ಆದಾಯ ತೆರಿಗೆ ಪಾವತಿ ಮಾಡುವವರು ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆ ‘ಅಟಲ್ ಪಿಂಚಣಿ ಯೋಜನೆ’ಯ (ಎಪಿವೈ) ಅಡಿ ಹೆಸರು ನೋಂದಾಯಿಸಿಕೊಳ್ಳಲು ಅಕ್ಟೋಬರ್ 1ರಿಂದ ಅವಕಾಶ ಇಲ್ಲ. ಕೇಂದ್ರ ಸರ್ಕಾರವು 2015ರ ಜೂನ್ 1ರಂದು ಅಟಲ್ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹೆಡಿಯಾಲ ಉಪ ವಿಭಾಗದ ಕಲ್ಕರೆ ವಲಯದ ರಾಂಪುರ ಆನೆ ಶಿಬಿರದಲ್ಲಿ ಆಗಸ್ಟ್ ೧೨ ರಂದು ವಿಶ್ವ ಆನೆ ದಿನಾಚರಣೆಯನ್ನು ಆಚರಿಸಲಾಯಿತು. ‘ವಿಶ್ವ ಆನೆ ದಿನವನ್ನು 2012ರಿಂದ ಆಚರಿಸಲಾಗುತ್ತಿದೆ. ಮುಖ್ಯಾಂಶಗಳು· ದೇಶದಲ್ಲಿ 49,000 ಸಾವಿರ ಆನೆಗಳಿವೆ, ಕರ್ನಾಟಕದಲ್ಲಿ 6,000, ಬಂಡೀಪುರದಲ್ಲಿ 1,200 ಆನೆಗಳಿವೆ, ಆಗ ಎರಡು ಸಾವಿರಕ್ಕೂ ಹೆಚ್ಚು ಆನೆಗಳು ಸಿಗುತ್ತವೆ. ರಾಜ್ಯದಲ್ಲಿ ಎಂಟು ಸಾಕಾನೆ ಕ್ಯಾಂಪ್ ಇವೆ. ಈಗ ಹೊಸದಾಗಿ ಇನ್ನೊಂದು ಆನೆ ಕ್ಯಾಂಪ್ ಹಾರಂಗಿಯಲ್ಲಿ ಮಾಡಲಾಗಿದೆ. ಹಿನ್ನೆಲೆ
ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಲು ತಾಲೂಕುಗಳ ಅಭಿವೃದ್ಧಿಗಾಗಿ ಮಹತ್ವಾಕಾಂಕ್ಷೆಯ ಹೊಸ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ಇದು ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನ ಕುರಿತು D.M ನಂಜುಂಡಪ್ಪ ಸಮಿತಿ ವರದಿ ಪ್ರಕಾರ ಬಿಡುಗಡೆಯಾದ ವಿಶೇಷ ಅಭಿವೃದ್ಧಿ ಯೋಜನೆ (SDP) ಅವಧಿಯನ್ನು ಪೂರ್ಣಗೊಳಿಸಿದ ನಂತರ NITI ಆಯೋಗ್ ನಿಯೋಜಿಸಿದ 49 ಸೂಚಕಗಳನ್ನು ಒಳಗೊಂಡಿದೆ.
ಮುಂದಿನ ಐದು ವರ್ಷಗಳ ಅವಧಿಯಲ್ಲಿ 45,000 ಕೋಟಿ ಹೂಡಿಕೆಯನ್ನು ಆಕರ್ಷಿಸಲು ಮತ್ತು ವಲಯದಲ್ಲಿನ ಹೂಡಿಕೆದಾರರಿಗೆ ರಿಯಾಯಿತಿಗಳನ್ನು ವಿಸ್ತರಿಸಲು ಕರ್ನಾಟಕ ಏರೋಸ್ಪೇಸ್ ಮತ್ತು ರಕ್ಷಣಾ ನೀತಿ 2022-27 ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
2025 ರ ವೇಳೆಗೆ ಕೃಷಿಯು ಸುಮಾರು 84% ನಷ್ಟು ನೀರಿನ ಬಳಕೆಯ ಜೊತೆಗೆ ಅಂದಾಜು ನೀರಿನ ಬೇಡಿಕೆಯು 1,859 tmcft ಗೆ ತಲುಪಲಿದೆ, ಆದ್ದರಿಂದ ರಾಜ್ಯ ಸಚಿವ ಸಂಪುಟವು ಜಲ ಸಂಪನ್ಮೂಲಗಳ ಪರಿಣಾಮಕಾರಿ ನಿರ್ವಹಣೆಗಾಗಿ ಕರ್ನಾಟಕ ಜಲ ನೀತಿ 2022 ಅನ್ನು ಅನುಮೋದಿಸಿತು.
ಚುಟುಕು ಸಮಾಚಾರ
ನರ್ಮದಾ ನದಿಗೆ ಕಟ್ಟಲಾಗಿರುವ ಓಂಕಾರೇಶ್ವರ ಅಣೆಕಟ್ಟೆಯಲ್ಲಿ ತೇಲುವ ಸೌರ ಸ್ಥಾವರ ನಿರ್ಮಿಸಲಾಗುತ್ತದೆ. 2022-23 ರ ವೇಳೆಗೆ 600 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ತೇಲುವ ಸೌರ ವಿದ್ಯುತ್ ಸ್ಥಾವರವನ್ನು ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಿರ್ಮಿಸಲು ಯೋಜಿಸಲಾಗಿದೆ.
ಬಿಹಾರದ ಮುಜಾಫರ್‌ಪುರದ ಲಂಗತ್ ಸಿಂಗ್ ಕಾಲೇಜಿನಲ್ಲಿರುವ 106 ವರ್ಷ ಹಳೆಯ ಖಗೋಳ ವೀಕ್ಷಣಾಲಯವನ್ನು ಯುನೆಸ್ಕೋ ವಿಶ್ವ ಪರಂಪರೆಯ ವೀಕ್ಷಣಾಲಯಗಳ ಪಟ್ಟಿಗೆ ಸೇರಿಸಲಾಗಿದೆ. ಈ ವೀಕ್ಷಣಾಲಯವು ಭಾರತದ ಪೂರ್ವ ಭಾಗದಲ್ಲಿ ಮೊದಲನೆಯದು.
ದೇಶದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ಉದಯ್ ಉಮೇಶ್ ಲಲಿತ್ ಅವರನ್ನು ನೇಮಕ ಮಾಡಲಾಗಿದೆ.
ರಾಜಸ್ಥಾನದಲ್ಲಿ ಲಂಪಿ ವೈರಸ್‌ನಿಂದ ಉಂಟಾಗುವ ಚರ್ಮಗಂಟು ಸೋಂಕಿನಿಂದ 12,800 ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿದ್ದು, ರಾಜ್ಯ ಸರ್ಕಾರ ಪ್ರಾಣಿಗಳ ಸಂತೆ, ಅಥವಾ ಜಾತ್ರೆ ನಡೆಸುವುದನ್ನು ನಿಷೇಧಿಸಿದೆ.
ಈ ಹಿಂದಿನ ಸರ್ಕಾರ 2016ರಲ್ಲಿ ರಚನೆ ಮಾಡಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದ್ದು, ಎಸಿಬಿಗೆ ನೀಡಲಾಗಿದ್ದ ಪೊಲೀಸ್ ಠಾಣೆ ಸ್ಥಾನಮಾನವನ್ನು ಮರಳಿ ಲೋಕಾಯುಕ್ತ ಸಂಸ್ಥೆಗೆ ನೀಡಿದೆ.
ಚರಂಡಿಯ ನೀರನ್ನು ಸಂಸ್ಕರಿಸಿ ಶುದ್ಧ ಕುಡಿಯುವ ನೀರು ನೀಡುವ ಇಸ್ರೇಲ್ ಕಂಪನಿಯ ‘ಗಾಲ್ ಮೊಬೈಲ್’ ನೀರು ಸಂಸ್ಕರಣೆ ಯಂತ್ರವು ನಗರಕ್ಕೆ ಬಂದಿದೆ. ಬೊಮ್ಮನಹಳ್ಳಿಯ ಎಚ್ಎಸ್ಆರ್ ಲೇಔಟ್‌ನಲ್ಲಿ ಇದರ ಮೊದಲ ಪ್ರಾತ್ಯಕ್ಷಿಕೆ ನೀಡಲಾಯಿತು, ಕೊಳವೆಯ ಮೂಲಕ ಚರಂಡಿ ನೀರನ್ನು ಹೀರಿ, ನಾಲ್ಕು ಹಂತಗಳಲ್ಲಿ ಸಂಸ್ಕರಿಸಿ ಶುದ್ಧ ಕುಡಿಯುವ ನೀರು ಕೊಡುತ್ತದೆ.
ಚುಟುಕು ಸಮಾಚಾರ
ಭಾರತದಲ್ಲಿ ಪ್ರತಿ ವರ್ಷ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಯಿತು. ಈ ದಿನವು ಭಾರತದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಕೈಮಗ್ಗ ಉದ್ಯಮದ ಕೊಡುಗೆಯನ್ನು ಎತ್ತಿ ತೋರಿಸುತ್ತದೆ. ಇದು ಕೈಮಗ್ಗ ಉದ್ಯಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತದೆ.
ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಆಚರಣೆಯ ಭಾಗವಾಗಿ ಕಾಕೋರಿ ರೈಲು ಪ್ರಕರಣದ ಸ್ಮರಣಾರ್ಥ ‘ರೇಡಿಯೊ ಜಯಘೋಷ್’ ಚಾನಲ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಚಾಲನೆ ನೀಡಿದರು.
ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿ ಎಂದು ಒತ್ತಾಯಿಸಿದ ಕ್ವಿಟ್ ಇಂಡಿಯಾ ಚಳವಳಿ ಆಗಸ್ಟ್ 8 ರಂದು 80ನೇ ವರ್ಷಾಚರಣೆ ಹಾಗೂ ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಆಜಾದಿ ಕಾ ಅಮೃತ್ ಮಹೋತ್ಸವ ಭಾಗವಾಗಿ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಬೆಂಗಳೂರಿನಲ್ಲಿರುವ ಮೂವರು ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ಭೇಟಿ ನೀಡಿ ಅವರನ್ನು ಗೌರವಿಸಿದರು.
ಹೊಸ ಜಿಲ್ಲೆ ವಿಜಯನಗರದ ಕೇಂದ್ರ ಸ್ಥಾನವಾದ ಹೊಸಪೇಟೆಯಲ್ಲಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ದೇಶದ ಅತಿ ಎತ್ತರದ ಧ್ವಜಸ್ತಂಭ(123 ಮೀಟರ್ )ವನ್ನು ಅನಾವರಣಗೊಳಿಸಿ ರಾಷ್ಟ್ರಧ್ವಜವನ್ನು ಹಾರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಚುಟುಕು ಸಮಾಚಾರ
ಭಾರತದ ನೂತನ14ನೇ ಉಪರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಅವರು ಆಯ್ಕೆಯಾಗಿದ್ದಾರೆ. ಅವರು ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಾರ್ಗರೇಟ್ ಆಳ್ವ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಸ್ವತಂತ್ರ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಗೂಗಲ್ ಸಂಸ್ಥೆಯು ‘ಇಂಡಿಯಾ ಕಿ ಉಡಾನ್’ ಎಂಬ ಆನ್‌ಲೈನ್ ಕಾರ್ಯಕ್ರಮ ಅನಾವರಣಗೊಳಿಸಿದೆ. ಗೂಗಲ್‌ನ ಕಲಾ ಮತ್ತು ಸಾಂಸ್ಕೃತಿಕ ವಿಭಾಗ ಈ ಯೋಜನೆ ಕೈಗೊಂಡಿದೆ.
ಭಾರತದ 75ನೇ ಸ್ವಾತಂತ್ರ್ಯೋತ್ಸವಕ್ಕೆ ಅತಿಥಿಯಾಗಿ ಆಫ್ರಿಕ ಮೂಲದ ಅಮೆರಿಕದ ಹಾಡುಗಾರ್ತಿ ಮೇರಿ ಮಿಲಾಬೆನ್ ಅವರು ಆಗಮಿಸಲಿದ್ದಾರೆ.
ಚೀನಾ ಹಾಗೂ ತೈವಾನ್ ನಡುವೆ ಯುದ್ಧದ ಕಾರ್ಮೋಡ ಕವಿದಿರುವ ಬೆನ್ನಲ್ಲೇ ಭಾರತ–ಅಮೆರಿಕ, ಚೀನಾ ಗಡಿಯಲ್ಲಿ ಜಂಟಿ ಮೆಗಾ ಸಮರಾಭ್ಯಾಸ ನಡೆಸಲು ಯೋಜಿಸಿವೆ.
ಪಟಾಕಿಗಳನ್ನು ಬೆಂಗಳೂರು ನಗರ ಪ್ರದೇಶದ ಹೊರವಲಯದಲ್ಲಿ ಮಾರಾಟ ಮಾಡುವ ನಿಟ್ಟಿನಲ್ಲಿ ಹೊರಡಿಸಿದ್ದ ಪೊಲೀಸ್ ಇಲಾಖೆಯ ಆದೇಶವನ್ನು ಎತ್ತಿಹಿಡಿದಿರುವ ಹೈಕೋರ್ಟ್, ‘ನಗರ ಪ್ರದೇಶಗಳ ಒಳಗೆ ಪಟಾಕಿ ಮಾರಾಟ ನಡೆಸುವುದು ಜೀವಸಂಕುಲಕ್ಕೆ ಅತ್ಯಂತ ಅಪಾಯ ಕಾರಿಯಾದುದು’ ಎಂದು ಅಭಿಪ್ರಾಯಪಟ್ಟಿದೆ.
ಮಕ್ಕಳ ಓದನ್ನು ಉತ್ತೇಜಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಜಾರಿಗೆ ತಂದಿರುವ ‘ಓದುವ ಬೆಳಕು’ ಯೋಜನೆಯಡಿ ಕಲಬುರ್ಗಿ ಜಿಲ್ಲೆಯಲ್ಲಿ ಒಟ್ಟು 87314 ಮಕ್ಕಳು ನೋಂದಾಯಿಸಿಕೊಂಡಿದ್ದಾರೆ.
ರಾಜ್ಯದಲ್ಲಿ 28 ಸಾವಿರ ಗ್ರಾಮಗಳಲ್ಲಿ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಡಿ 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ತರಬೇತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರಾಜಧಾನಿ ಬೆಂಗಳೂರಿನಲ್ಲಿ ‘ಸಂಕಲ್ಪ್ ಸೆ ಸಿದ್ಧಿ'(ಸಂಕಲ್ಪದಿಂದ ಸಿದ್ಧಿ) ಕಾರ್ಯಕ್ರಮ ಸರ್ಕಾರ ವತಿಯಿಂದ ನಡೆಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಕರ್ನಾಟಕದ ಪ್ರಸಿದ್ಧ ಪಕ್ಷಿಧಾಮ ರಂಗನತಿಟ್ಟು ಪಕ್ಷಿಧಾಮ ಸೇರಿದಂತೆ ಭಾರತದ ಒಟ್ಟು 10 ತಾಣಗಳು ರಾಮ್ಸರ್ ಪಟ್ಟಿಗೆ ಸೇರ್ಪಡೆಗೊಂಡಿದೆ. ಈ ಮೂಲಕ ಅಂತಾರಾಷ್ಟ್ರೀಯ ಪ್ರಾಮುಖ್ಯತೆಯ ಜೌಗು ಪ್ರದೇಶಗಳಾಗಿ ಗುರುತಿಸಿಕೊಂಡಿದೆ.
ನೈಸರ್ಗಿಕ ಪಾರಂಪರಿಕ ಪ್ರದೇಶಗಳು ಎಂದು ಯುನೆಸ್ಕೊ ಪಟ್ಟಿ ಮಾಡಿರುವ ಪ್ರದೇಶಗಳನ್ನೂ ಹೊಂದಿರುವ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಕರಡು ಅಧಿಸೂಚನೆಯನ್ನು ಕೇಂದ್ರ ಸರ್ಕಾರವು ಪ್ರಕಟಿಸಿದೆ.
ಚುಟುಕು ಸಮಾಚಾರ
ನೀತಿ ಆಯೋಗದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಬ್ ಕಾಂತ್ ಅವರನ್ನು ಇತ್ತೀಚೆಗೆ 20 ರಾಷ್ಟ್ರಗಳ ಸಂಘಟನೆಯಾದ ‘ಜಿ–20’ಗೆ ಭಾರತದ ಹೊಸ ಶೆರ್ಪಾ ಆಗಿ ನೇಮಿಸಲಾಯಿತು. ಹಿಂದೆ ಈ ಸ್ಥಾನದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪೀಯೂಷ್ ಗೋಯಲ್ ಇದ್ದರು.
ಅಪರೂಪದ ಕಪ್ಪು ಹುಲಿ ಭಾರತದ ಒಡಿಶಾದ ಕಾಡಿನಲ್ಲಿ ಇದೆ. ಒಡಿಶಾದ ‘ಸಿಮ್ಲಿಪಾಲ್ ನ್ಯಾಷನಲ್ ಪಾರ್ಕ್’ನಲ್ಲಿ ಈ ಕಪ್ಪು ಹುಲಿಯ ಚಲನವಲನಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದೇಶಾದ್ಯಂತ 75 ಶಾಲೆಗಳ 750 ವಿದ್ಯಾರ್ಥಿನಿಯರು ಅಭಿವೃದ್ಧಿಪಡಿಸಿರುವ ‘ಆಜಾದಿಸ್ಯಾಟ್’ ಇಸ್ರೋದ ಮೊದಲ ಸಣ್ಣ ಉಪಗ್ರಹ ಉಡಾವಣಾ ವಾಹಕದಲ್ಲಿ (ಎಸ್‌ಎಸ್‌ಎಲ್‌ವಿ) ಉಡಾವಣೆಗೆ ಸಿದ್ಧವಾಗಿದೆ.
ರಾಷ್ಟ್ರೀಯ ಉದ್ದೀಪನ ತಡೆ ಘಟಕ ಮತ್ತು ರಾಷ್ಟ್ರೀಯ ಉದ್ದೀಪನ ಮದ್ದು ಪರೀಕ್ಷಾ ಪ್ರಯೋಗಾಲಯ ಕಾರ್ಯವೈಖರಿಯ ರೂಪುರೇಷೆ ಸಿದ್ಧತೆಗೆ ಒತ್ತು ನೀಡುವ ಮಸೂದೆಯನ್ನು ಸಂಸತ್‌ನಲ್ಲಿ ಅಂಗೀಕರಿಸಲಾಯಿತು. ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಈ ಮಸೂದೆಗೆ ಅನುಮೋದನೆ ನೀಡಲಾಯಿತು. ಲೋಕಸಭೆಯಲ್ಲಿಯೂ ಅಂಗೀಕರಿಸಲಾಗಿತ್ತು.
ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ‘ಫೆಡರೇಷನ್ ಆಫ್ ಇಂಡೋ ಅಮೆರಿಕನ್ಸ್ ಆಫ್ ನಾದರ್ನ್ ಕ್ಯಾಲಿಫೋರ್ನಿಯಾ’ ಇವರು ಆಯೋಜಿಸುವ ‘ಫೆಸ್ಟಿವಲ್ ಆಫ್ ಗ್ಲೋಬ್’(FOG)ನ ಪ್ರಶಸ್ತಿಗೆ ಈ ಬಾರಿ ದಕ್ಷಿಣ ಭಾರತದ ಖ್ಯಾತ ನಟಿ ಮೇಘನರಾಜ್ ಪಾತ್ರರಾಗಿದ್ದಾರೆ.
ನಾಡಿನ ಶಕ್ತಿಪೀಠದಲ್ಲೊಂದಾದ ಇಲ್ಲಿನ ಮಾರಿಕಾಂಬಾ ದೇವಾಲಯದಲ್ಲಿ ಮಧ್ಯಾಹ್ನ ಭಕ್ತರಿಗೆ ನೀಡುವ ಅನ್ನ ಪ್ರಸಾದಕ್ಕೆ ರಾಷ್ಟ್ರೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ನೀಡುವ ‘ಭೋಗ್’ (Blissfull Hygiene Offering to God) ಪ್ರಮಾಣಪತ್ರ ಲಭಿಸಿದೆ.
ಚೆಸ್ ಒಲಂಪಿಯಾಡ್ ನಿಂದ ಪ್ರೇರಣೆ ಪಡೆದು ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಲ್ಲಿ ಚೆಸ್ ಕಲಿಕೆಯನ್ನು ಉತ್ತೇಜಿಸಲು ಮುಂದಾಗಿದೆ. ಗ್ರಂಥಾಲಯಗಳಲ್ಲಿ ಒಳಾಂಗಣ ಬೋರ್ಡ್ ಗೇಮ್ ಗಳನ್ನು ಪರಿಚಯಿಸಲು ಸರ್ಕಾರ ಅಧಿಸೂಚನೆಯನ್ನೂ ಹೊರಡಿಸಿದ್ದು, ಜಿಲ್ಲೆಯಾದ್ಯಂತ ಡಿಜಿಟಲ್ ಗ್ರಂಥಾಲಯಗಳಲ್ಲಿ ಪರಿಚಯವಾಗಿರುವ ಚದುರಂಗವನ್ನು ಕೊಡಗು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈಗ ಕಲಿಯುತ್ತಿದ್ದಾರೆ.
NammaKPSC Current Affairs - July 2022
ಚುಟುಕು ಸಮಾಚಾರ
ರೇಥಿಯಾನ್ ಟೆಕ್ನಾಲಜೀಸ್ ಕಾರ್ಪೋರೇಷನ್ ಸಂಸ್ಥೆ ನಿರ್ಮಿಸಿರುವ, ಶಬ್ದದ ವೇಗಕ್ಕಿಂತ ಐದು ಪಟ್ಟು ಹೆಚ್ಚಿನ ವೇಗದಲ್ಲಿ ಸಾಗುವ ಏರ್ ಬ್ರೀದಿಂಗ್ ಹೈಪರ್ ಸಾನಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಾ ಉಡಾವಣೆ ನಡೆಸಿದೆ.
ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಅಸಂಘಟಿತ ವಲಯದದಲ್ಲಿ ಕೆಲಸ ಮಾಡುವ ಮಹಿಳೆಯರ ವಾಸ್ತವ್ಯಕ್ಕೆ ಕೇರಳ ಸರ್ಕಾರ ರಾಜ್ಯಾದಾದ್ಯಂತ ‘ಸ್ಟುಡಿಯೊ ಅಪಾರ್ಟ್‌ಮೆಂಟ್’ ಸ್ಥಾಪಿಸಲು ಯೋಜನೆ ರೂಪಿಸಿದೆ.
ಸಮುದ್ರ ತೀರದ ಅನೇಕ ಪ್ರದೇಶಗಳನ್ನು ಭಾರಿ ಗಾತ್ರದ ಅಲೆಗಳು ಆಪೋಶನ ಪಡೆಯುತ್ತಲೇ ಇವೆ. ಇದನ್ನು ತಡೆಯಲು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದರೂ ಪ್ರಯೋಜನವಾಗಿಲ್ಲ. ಇದಕ್ಕೆ ಕಡಲತೀರಗಳಲ್ಲಿ ‘ಹಸಿರು ಕವಚ’ವನ್ನು ಬೆಳೆಸುವುದೇ ಸೂಕ್ತ ಎಂಬ ಅಭಿಪ್ರಾಯ ವಿಜ್ಞಾನಿಗಳದ್ದು.
ಕೋಡಿ ಬೆಂಗ್ರೆ ಉಡುಪಿ ಜಿಲ್ಲೆಯ ಮೊದಲ ತಂಬಾಕು ಮುಕ್ತ ಗ್ರಾಮವಾಗಿ ಘೋಷಣೆಯಾದ ಬೆನ್ನಲ್ಲೇ ಹಲವು ಗ್ರಾಮಗಳು ತಂಬಾಕು ಮುಕ್ತ ಗ್ರಾಮಗಳಾಗುವ ಸಂಕಲ್ಪ ತೊಟ್ಟಿದ್ದು ಕಾರ್ಯೋನ್ಮುಖವಾಗಿವೆ.
ಭಾರತದ ಆತಿಥ್ಯದಲ್ಲಿ ನಡೆಯಲಿರುವ 44ನೇ ಚೆಸ್ ಒಲಿಂಪಿಯಾಡ್‌ನ ಕ್ರೀಡಾ ಜ್ಯೋತಿ ಯಾತ್ರೆಯು ಉದ್ಯಾನನಗರಿಯಲ್ಲಿ ವೈಭವದಿಂದ ನಡೆಯಿತು.
ರಾಮಯ್ಯ ಆನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕುಲ್‌ದೀಪ್ ಕೆ. ರೈನಾ ಹಾಗೂ ಭಾರತೀಯ ತಂತ್ರಜ್ಞಾನ ಕಾಂಗ್ರೆಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ಎಲ್.ವಿ.ಮುರಳಿಕೃಷ್ಣ ರೆಡ್ಡಿ ಅವರು ‘ರಾಮಯ್ಯ ಸ್ಯಾಟ್’ ಹೆಸರಿನ ನ್ಯಾನೋ ಉಪಗ್ರಹ ಅಭಿವೃದ್ಧಿಪಡಿಸುವ ಒಡಂಬಡಿಕೆಗೆ ಸಹಿ ಹಾಕಿದರು.
ಆರಂಭದಲ್ಲಿ ಮಳೆ ಬಾರದೆ ಆಲೂಗೆಡ್ಡೆ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಈಗ ಹುಲುಸಾಗಿ ಬೆಳೆದು ನಿಂತಿರುವ ಬೆಳೆಗೆ ಅಂಗಮಾರಿ ರೋಗದ ಭೀತಿ ಕಾಡುತ್ತಿದೆ.
ರಾಜ್ಯದಲ್ಲಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ 1ರಿಂದ 8ನೇ ತರಗತಿಯ ಮಕ್ಕಳಿಗೆ ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ನೀಡುವ ಯೋಜನೆಗೆ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ. ಆದರೆ, ವರ್ಷದ 46 ದಿನಗಳು ಮಾತ್ರ ವಿತರಿಸಲು ಇಲಾಖೆ ಅನುಮೋದನೆ ನೀಡಿದೆ.
ಐಐಟಿ ಧಾರವಾಡದ ಕ್ಯಾಂಪಸ್ ನಲ್ಲಿ ಅತ್ಯಾಧುನಿಕ ಡ್ರೋನ್ ಪ್ರಯೋಗಾಲಯವನ್ನು ಸ್ಥಾಪಿಸುವ ಯೋಜನೆ ನಡೆಯುತ್ತಿದೆ.
ಅಥಣಿ ಪಟ್ಟಣದ ಹೊರವಲಯದಲ್ಲಿನ ಕೃಷ್ಣಾ ಬಡಾವಣೆಯಲ್ಲಿ ಪುನುಗು ಬೆಕ್ಕು (ಸಿವೆಟ್ ಕ್ಯಾಟ್) ಪತ್ತೆಯಾಗಿದೆ.
ಚುಟುಕು ಸಮಾಚಾರ
ನೀತಿ ಆಯೋಗ ಜುಲೈ 21, 2022 ರಂದು ಪ್ರಕಟಿಸಿರುವ ಅಖಿಲ ಭಾರತ ಆವಿಷ್ಕಾರ ಸೂಚ್ಯಂಕ ಪಟ್ಟಿ-2021 ರಲ್ಲಿ ಕರ್ನಾಟಕ ಸತತ ಮೂರನೇ ಬಾರಿಗೆ ಅಗ್ರ ಸ್ಥಾನ ಪಡೆದಿದೆ. ತೆಲಂಗಾಣ ಮತ್ತು ಹರಿಯಾಣ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ.
ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ (ಸ್ವೈನ್ ಫಿವರ್) ಪತ್ತೆಯಾಗಿದೆ. ಕೇರಳದ ವಯನಾಡ್ ಜಿಲ್ಲೆಯ ಮಾನಂದವಾಡಿಯ ಎರಡು ಸಾಕಣೆ ಕೇಂದ್ರದಲ್ಲಿ ಆಫ್ರಿಕನ್ ಹಂದಿ ಜ್ವರ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಿದುಳಿನಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ, ಚಿಕಿತ್ಸೆಗೆ ಒಳಪಡಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರಿಗೆ ತರಬೇತಿ ನೀಡಲಾಗುತ್ತಿದೆ’ ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ತಿಳಿಸಿದೆ.
ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ದ್ರೌಪತಿ ಮುರ್ಮು ಅವರು ದೇಶದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಇದೇ ಮೊದಲ ಬಾರಿಗೆ ಬುಡಕಟ್ಟು ಸಮುದಾಯದವರೊಬ್ಬರು ರಾಷ್ಟ್ರದ ಪರಮೋಚ್ಚ ಸ್ಥಾನವನ್ನು ಅಲಂಕರಿಸಿದಂತಾಗಿದೆ.
ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಆಚರಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಕೇಂದ್ರ ಸರ್ಕಾರ ಧ್ವಜ ಸಂಹಿತೆಗೆ ತಿದ್ದುಪಡಿ ತಂದಿದ್ದು, ತ್ರಿವರ್ಣ ಧ್ವಜವನ್ನು ಹಗಲು-ರಾತ್ರಿ ಹಾರಿಸಲು ಅವಕಾಶ ನೀಡಿದೆ.
ಭಾರತವೂ ಸೇರಿದಂತೆ ಜಗತ್ತಿನ ಅನೇಕ ದೇಶಗಳನ್ನು ಕಾಡುತ್ತಿರುವ ಮಂಕಿಪಾಕ್ಸ್ ಸಾಂಕ್ರಾಮಿಕವನ್ನು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ತುರ್ತುಪರಿಸ್ಥಿತಿ ಎಂದು ಘೋಷಿಸಿದೆ.
ಸ್ವಾತಂತ್ರ್ಯ ಹೋರಾಟಗಾರರಿಗೆ ಡಿಜಿಟಲ್ ಗೌರವ ಸಲ್ಲಿಸುವಂತೆ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಜು.23 ರಂದು ಕರೆ ನೀಡಿದ್ದಾರೆ.
ಕೈಗಾರಿಕೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸುವ ಹೊಸ ಉದ್ಯೋಗ ನೀತಿ 2022-25ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಜಲ ಜೀವನ್ ಮಿಷನ್ (JJM) ಯೋಜನೆ ಅನುಷ್ಠಾನದಲ್ಲಿ ಗದಗ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದು, ಧಾರವಾಡ, ಮಂಡ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲೆ ನಂತರದ ಸ್ಥಾನಗಳಲ್ಲಿವೆ.
ಚುಟಕು ಸಮಾಚಾರ
ಮಾರ್ಬರ್ಗ್’ ವೈರಾಣುವಿನ ಮೊದಲ ಪ್ರಕರಣ ಪಶ್ಚಿಮ ಆಫ್ರಿಕಾ ಖಂಡದ ಘಾನಾದಲ್ಲಿ ಪತ್ತೆಯಾಗಿದೆ. ಎಬೊಲಾ ಮಾದರಿಯ ಈ ವೈರಾಣು ಹೆಚ್ಚು ಸೋಂಕುಕಾರಕವಾದುದು ಎಂದು ಘಾನಾ ಪ್ರತಿಕ್ರಿಯಿಸಿದೆ. ಸೋಂಕು ಪತ್ತೆಯಾಗಿದ್ದ ಇಬ್ಬರು ರೋಗಿಗಳು ಮೃತಪಟ್ಟಿದ್ದಾರೆ.
ಗಡಿ ನಿಯಂತ್ರಣ ರೇಖೆ (LOC) ಅಥವಾ ಗಡಿಯ 100 ಕಿ.ಮೀ ವ್ಯಾಪ್ತಿಯಲ್ಲಿ ರಕ್ಷಣಾ ಮತ್ತು ಕಾರ್ಯತಂತ್ರದ ಪ್ರಾಮುಖ್ಯತೆಗೆ ಸಂಬಂಧಿಸಿದ ಹೆದ್ದಾರಿ ಯೋಜನೆಗಳಿಗೆ ಪರಿಸರ ತೆರವು ಅಗತ್ಯದಿಂದ ವಿನಾಯಿತಿ ನೀಡುವ ಪರಿಸರ ಪ್ರಭಾವ ಮೌಲ್ಯಮಾಪನ ನಿಯಮಗಳಿಗೆ ತಿದ್ದುಪಡಿಗಳನ್ನು ಕೇಂದ್ರವು ಸೂಚಿಸಿದೆ.
ಸ್ಟಾರ್ಟಪ್‌ಗಳನ್ನು ಬೆಂಬಲಿಸುವ ಪ್ರಯತ್ನದಲ್ಲಿ, ವಿಶೇಷವಾಗಿ ಬಿ2ಬಿ (ಬಿಸಿನೆಸ್-ಟು-ಬಿಸಿನೆಸ್)ಯಂತ ಸ್ಟಾರ್ಟ್‌ಅಪ್‌ಗಳಿಗೆ ಅನುಕೂಲವಾಗಲು ಸಿಐಐ ಕರ್ನಾಟಕ ‘ಸ್ಟಾರ್ಟ್‌ಅಪ್ ಟಾಸ್ಕ್ ಫೋರ್ಸ್’ ಅನ್ನು ಸ್ಥಾಪಿಸಲಿದ್ದು, ಅದು ಬಿ2ಬಿಗೆ ದೊಡ್ಡ ಕಂಪನಿಗಳೊಂದಿಗೆ ಸಂವಹನ ನಡೆಸಲು ಅವಕಾಶವನ್ನು ಒದಗಿಸುತ್ತದೆ ಮತ್ತು ವೇದಿಕೆಯನ್ನು ಸೃಷ್ಟಿಸಲಿದೆ.
ತೋಟಗಾರಿಕೆ ಸಚಿವರ ರಾಷ್ಟ್ರೀ ಯ ಸಮ್ಮೇ ಳನದಲ್ಲಿ’ಮಣ್ಣಿನ ಫಲವತ್ತತೆ ಕಾಪಾಡುವ ನಿಟ್ಟಿನಲ್ಲಿ ಭೂಚೇತನ ಯೋಜನೆಯನ್ನು ಮರು ಜಾರಿಗೊಳಿಸಲು ನಿರ್ಧರಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಚುಟುಕು ಸಮಾಚಾರ
ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಬಿಂಬಿಸುವ ನಗರವಾದ ವಾರಾಣಸಿಯನ್ನು ಶಾಂಘೈ ಸಹಕಾರ ಸಂಸ್ಥೆಯ (ಎಸ್‌ಸಿಒ) ಮೊದಲ ‘ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ರಾಜಧಾನಿ’ ಎಂದು ಘೋಷಿಸಲಾಗುವುದು ಎಂದು ಎಸ್‌ಸಿಒ ಬ್ಲಾಕ್‌ನ ಪ್ರಧಾನ ಕಾರ್ಯದರ್ಶಿ ಜಾಂಗ್ ಮಿಂಗ್ ಹೇಳಿದರು.
ಚೀನಾದಂತಹ ಆಕ್ರಮಣಕಾರರನ್ನು ತಡೆಯಲು ನೆರವಾಗಲು ರಷ್ಯಾದಿಂದ ಭಾರತ ಖರೀದಿಸುತ್ತಿರುವ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಸಿಎಎಟಿಎಸ್ ಎಸ್ (ಕಾಟ್ಸಾ) ಕಾಯ್ದೆಯಿಂದ ವಿನಾಯಿತಿ ನೀಡುವ ತಿದ್ದುಪಡಿ ಮಸೂದೆಗೆ ಅಮೆರಿಕದ ಪ್ರಜಾ ಪ್ರತಿನಿಧಿ ಸಭೆಯಲ್ಲಿ ಧ್ವನಿಮತದ ಅಂಗೀಕಾರ ದೊರೆತಿದೆ.
ನಾಲ್ಕು ರಾಷ್ಟ್ರಗಳ I2U2′ ಶೃಂಗಸಭೆ ಅಂಗವಾಗಿ ದೇಶಾದ್ಯಂತ ಸಮಗ್ರ ಫುಡ್ ಪಾರ್ಕ್ ಅಭಿವೃದ್ಧಿಗೆ ಯುನೈಟೆಡ್ ಅರಬ್ ಎಮಿರೈಟ್ಸ್ 2 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲಿದೆ.
ಜಾಗತಿಕ ಲಿಂಗ ಸಮಾನತೆಯ ಅಂತರದ ರ‍್ಯಾಂಕಿಂಗ್ನಲ್ಲಿ ಭಾರತವು 135ನೇ ಸ್ಥಾನದಲ್ಲಿದೆ. ಉದ್ಯೋ ಗ, ಶಿಕ್ಷಣ, ರಾಜಕೀಯದಲ್ಲಿ ಮಹಿಳೆಯರಿಗೆ ಇರುವ ಅವಕಾಶಗಳು, ಪುರುಷರಿಗೆ ಇರುವ ಅವಕಾಶಗಳಿಗಿಂತ ತೀರಾ ಕಡಿಮೆ ಇದೆ. ಆರ್ಥಿಕ ಕ್ಷೇತ್ರ ದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಿರುವುದರಿಂದ ಶ್ರೇಯಾಂಕ ಏರಿಕೆಯಾಗಿದೆ.
ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಸಂಸ್ಥೆಗಳ ಭಾರತ ಶ್ರೇಯಾಂಕ 2022 ಪ್ರಕಟವಾಗಿದ್ದು, ಮದ್ರಾಸ್ ಐಐಟಿ ಅಗ್ರ ಸ್ಥಾನ ಮತ್ತು ಬೆಂಗಳೂರು ಐಐಎಸ್ಸಿ 2ನೇ ಸ್ಥಾನ ಮತ್ತು ಐಐಟಿ ಬಾಂಬೆ ಮೂರನೇ ಸ್ಥಾನ ದಲ್ಲಿವೆ.
ಕೆಂಪು ಇರುವೆಗಳಿಂದ ತಯಾರಿಸಿದ ಕಾಯಿ ಚಟ್ನಿಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿರುತ್ತದೆ, ಇದು ಭೌಗೋಳಿಕ ಸೂಚನೆಗಳ (GI) ಟ್ಯಾಗ್ ಅನ್ನು ಪಡೆಯುವ ಪ್ರಕ್ರಿಯೆಯಲ್ಲಿದೆ, ಏಕೆಂದರೆ ವಿಜ್ಞಾನಿಗಳು ಈಗ ಅದನ್ನು GI ನೋಂದಣಿಗಾಗಿ ಪ್ರಸ್ತುತಿಪಡಿಸಲು ತಮ್ಮ ಸಂಶೋಧನಾ ವರದಿ ಸಿದ್ಧಪಡಿಸುತ್ತಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ಸಹಾಯಧನವನ್ನು ಡಿಬಿಟಿ ಮೂಲಕ ಆನ್ ಲೈನ್ ನಲ್ಲಿ ವರ್ಗಾವಣೆ ಮಾಡಿದರು.
ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಬೂಸ್ಟ್ ನೀಡುವ ಉದ್ದೇಶದಿಂದ ಕೆಲವೊಂದು ಹೊಸ ಚಿಂತನೆಗಳನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಇದರಲ್ಲಿ ‘ಟೆಂಟ್ ಟೂರಿಸಂ’ ಕೂಡ ಸೇರಿದೆ. ಇದರ ಪ್ರಾಯೋಗಿಕ ಯೋಜನೆ ಆಗಿ ಮೈಸೂರಿನ ಲಲಿತ ಮಹಲ್ ಹೋಟೆಲ್ ಆವರಣವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಚುಟುಕು ಸಮಾಚಾರ
ಪ್ರತಿ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ.
‘ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ವಲಯಕ್ಕೂ ಮುಕ್ತಗೊಳಿಸಿದ ಬಳಿಕ ಸುಮಾರು 60 ನವೋದ್ಯಮಗಳು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಜತೆ ಒಪ್ಪಂದ ನೋಂದಾಯಿಸಿಕೊಂಡಿವೆ’.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೆಹಲಿಯಲ್ಲಿಂದು ನೂತನ ಸಂಸತ್ತು ಭವನದ ಛಾವಣಿಯ ಮೇಲೆ ರಾಷ್ಟ್ರೀಯ ಲಾಂಛನವನ್ನು ಅನಾವರಣಗೊಳಿಸಿದರು.
ಜೈವಿಕ ತ್ಯಾಜ್ಯಗಳಿಂದ ಹಸಿರು ಹೈಡ್ರೋ ಜನ್ (ಶುದ್ಧ ಜಲಜನಕ ಇಂಧನ) ಉತ್ಪಾದಿಸುವ ಪರಿಸರ ಸ್ನೇಹಿ ವಿಧಾನವನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.
ಚುಟುಕು ಸಮಾಚಾರ
ರಷ್ಯಾದಿಂದ ಎಸ್- 400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿ ಸಂಬಂಧ ಭಾರತಕ್ಕೆ ಪ್ರತಿಕೂಲವಾಗಿರುವ ಕಾಟ್ಸಾ ಕಾಯ್ದೆಗೆ ಅಮೆರಿಕದ ಸಂಸತ್ನಲ್ಲಿ ಶಾಸನಾತ್ಮಕ ತಿದ್ದುಪಡಿ ಮಸೂದೆಯನ್ನು ಭಾರತ – ಅಮೆರಿಕದ ಕಾಂಗ್ರೆಸ್ಸಿಗ ರೋ ಖನ್ನಾ ಮಂಡಿಸಿದ್ದಾರೆ.
‘ಕೆಲ ದಿನಗಳಲ್ಲಿ ಕೇರಳದ ಅತಿರಪಿಲ್ಲಿ ಅರಣ್ಯ ಪ್ರದೇಶದಲ್ಲಿ ಆಂಥ್ರಾಕ್ಸ್ ಸೋಂಕಿನಿಂದಾಗಿ ಕೆಲ ಕಾಡು ಹಂದಿಗಳು ಮೃತಪಟ್ಟಿವೆ. ಆದರೆ ಜಾನುವಾರುಗಳಲ್ಲಿ ಸೋಂಕು ಕಾಣಿಸಿಕೊಂಡಿಲ್ಲ.
ಹರಿಯಾಲಿ ಮಹೋತ್ಸವವನ್ನು ಜುಲೈ 8, 2022 ರಂದು ಆಯೋಜಿಸಲಾಗಿದೆ. ಹೊಸ ದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ “ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ” ಈವೆಂಟ್ ಅನ್ನು ಆಯೋಜಿಸಿದೆ.ಮುಖ್ಯಾಂಶಗಳು ·
ಟೆಕ್ ದೈತ್ಯ ಗೂಗಲ್ ಇಂಡಿಯಾ ತನ್ನ ನ್ಯೂಸ್ ಇನಿಶಿಯೇಟಿವ್ ಟ್ರೈನಿಂಗ್ ನೆಟ್‌ವರ್ಕ್ ಗೆ ಐದು ಹೊಸ ಭಾಷೆಗಳನ್ನು ಸೇರಿಸಿದೆ, ಪಂಜಾಬಿ, ಅಸ್ಸಾಮಿ, ಗುಜರಾತಿ, ಒಡಿಯಾ ಮತ್ತು ಮಲಯಾಳಂ ಗೂಗಲ್ ಗೆ ಹೊಸದಾಗಿ ಸೇರ್ಪಡೆಯಾದ ಭಾಷೆಗಳು.
ಭಾರತೀಯ ಸೇನೆ, ವಾಯುಪಡೆ, ನೌಕಾಪಡೆ, ಕೋಸ್ಟ್ ಗಾರ್ಡ್‌ಗಳು ಬಳಕೆ ಮಾಡಲಿರುವ 10 ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಆಧಾರಿತ ಮೊದಲ ಹಂತದ ಉತ್ಪನ್ನಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನಾವರಣಗೊಳಿಸಲಿದ್ದಾರೆ.
ಭಾರತೀಯ ನೌಕಾಪಡೆಯ ವಿಮಾನವಾಹಕ ನೌಕೆ ವಿಕ್ರಾಂತ್ ನಾಲ್ಕನೇ ಹಂತದ ಸಮುದ್ರ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಭಾರತದ ನಾಗರಿಕ ವಾಯುಯಾನ ಉದ್ಯಮ ತನ್ನ ಶೈಶವಾವಸ್ಥೆಯಿಂದ ಬೆಳವಣಿಗೆಯತ್ತ ಮುನ್ನುಗ್ಗುತ್ತಿದೆ. ಭಾರತ ಮುಂದಿನ ನಾಲ್ಕರಿಂದ ಐದು ವರ್ಷಗಳ ಅವಧಿಯಲ್ಲಿ ದೇಶದಲ್ಲಿರುವ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 138 ರಿಂದ 220ಕ್ಕೆ ಏರಿಸುವ ಗುರಿಯನ್ನು ಹೊಂದಿದೆ.
ಮುಂಬರುವ ವರ್ಷಗಳಲ್ಲಿ ನೈಸರ್ಗಿಕ ಕೃಷಿಯ ಬೃಹತ್ ಆಂದೋಲನವು ವ್ಯಾಪಕವಾಗಿ ಯಶಸ್ಸು ಸಾಧಿಸಲಿದ್ದು, ರೈತರು ಈ ಬದಲಾವಣೆಗೆ ಎಷ್ಟು ಬೇಗ ತೆರೆದುಕೊಳ್ಳುವರೋ ಅಷ್ಟು ಅದರ ಲಾಭ ಗಳಿಸಲಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
2020ರ ವಾಣಿಜ್ಯ ವಹಿವಾಟು ಸುಧಾರಣೆ ಕ್ರಿಯಾ ಯೋಜನೆಯ ಅನುಷ್ಠಾನದ ಆಧಾರದಲ್ಲಿ ಸಿದ್ಧಪಡಿಸಿರುವ, ‘ಟಾಪ್ ಸಾಧಕ’ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಕರ್ನಾಟಕ ಸ್ಥಾನ ಪಡೆದಿದೆ.
ಕಣ್ಣಿಗೆ ಕಾಣದ ಆದರೆ ವಾತಾವರಣದಲ್ಲಿ ವ್ಯಾಪಕವಾಗಿರುವ ಅತಿಗೆಂಪು ಬೆಳಕನ್ನು (ಇನ್ಫ್ರಾರೆಡ್) ಪತ್ತೆ ಮಾಡಿ, ಅಗತ್ಯಕ್ಕೆ ತಕ್ಕಂತೆ ನಿಯಂತ್ರಿಸುವ ಮೂಲಕ ಆಪ್ಟಿಕಲ್ ಸಂಪರ್ಕ ಸಾಧನಗಳಿಗೆ ಬಳಸ ಬಹುದಾದ ಸಾಧನವನ್ನು ಬೆಂಗಳೂರಿನ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.
ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟ ಪ್ರದೇಶದ 56,825 ಚದರ ಕಿ.ಮೀ ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತೊಮ್ಮೆ ಕರಡು ಅಧಿಸೂಚನೆ ಹೊರಡಿಸಿದೆ. ಈ ಹಿಂದೆ ಮೂರು ಬಾರಿ ಕರಡು ಅಧಿಸೂಚನೆ ಹೊರಡಿಸಲಾಗಿತ್ತು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಉಚಿತ ಆರೋಗ್ಯ ಯೋಜನೆ ಅಡಿ ನೌಕರರು 1,250 ಕಾಯಿಲೆಗಳಿಗೆ ನಗದು ರಹಿತವಾಗಿ ಸೇವೆ ಪಡೆಯಬಹುದಾಗಿದೆ. ನಿವೃತ್ತರಿಗೂ ಯೋಜನೆ ಅನ್ವಯಿಸಬೇಕು ಎಂದು ಕೋರಿದರು.
ಕವಿ ಸರ್ವಜ್ಞನ ಹುಟ್ಟೂರಾದ ಹಾವೇರಿ ಜಿಲ್ಲೆಯ ಅಬಲೂರಿನಲ್ಲಿ ಅವರ ತಂದೆ ತಾಯಿಯ ಹೆಸರಿನಲ್ಲಿ ಕಟ್ಟಡ ನಿರ್ಮಾಣ ಹಾಗೂ ಮಾಸೂರಿನ ಸಮಾಧಿ ಸ್ಥಳ ಅಭಿವೃದ್ಧಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಜ್ಞ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆ ನೀಡಿದೆ.
ಹದಿಹರೆಯದ ಹೆಣ್ಣು ಮಕ್ಕಳ ಸ್ವಚ್ಛ ಹಾಗೂ ಸುರಕ್ಷಿತ ಋತುಚಕ್ರ ನಿರ್ವಹಣೆಗಾಗಿ ಸರ್ಕಾರದ ವಿನೂತನ ಯೋಜನೆ.
ಚುಟುಕು ಸಮಾಚಾರ
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಿಂಗಾಪುರದ ಮೂರು ವಾಣಿಜ್ಯಾತ್ಮಕ ಉಪಗ್ರಹಗಳನ್ನು ಹೊತ್ತ ಇಸ್ರೋದ ಪಿಎಸ್ ಎಲ್ ವಿ ಸಿ-53 ರಾಕೆಟ್ ಉಡಾವಣೆಯಾಯಿತು
ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸೆಂಟರ್ ಫಾರ್ ನ್ಯೂರೋ ಸೈನ್ಸ್ ವಿಭಾಗದ ಸಂಶೋಧಕರು ಜಿಪಿಯು (ಗ್ರಾಫಿಕ್ ಪ್ರೊಸೆಸಿಂಗ್ ಯುನಿಟ್) ಆಧಾರಿತ ‘ಮೆಷಿನ್ ಲರ್ನಿಂಗ್ ಅಲ್ಗಾರಿದಮ್’ ಹೊಸದಾಗಿ ಅಭಿವೃದ್ಧಿಪಡಿಸಿದ್ದಾರೆ
15 ವಾರಗಳ ಬಳಿಕ ಗರ್ಭಪಾತ ಮಾಡಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಿದ್ದಂತೆಯೇ ಅಮೆರಿಕದಲ್ಲಿ ಪ್ರತಿಭಟನೆಗಳು ತೀವ್ರವಾಗವೆ.
ಇತ್ತೀಚೆಗೆ, ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್‌ನ 47 ನೇ ಸಭೆಯಲ್ಲಿ, ದರ ರಚನೆಯನ್ನು ಸರಳಗೊಳಿಸಲು ಹಲವಾರು ಸಾಮೂಹಿಕ ಬಳಕೆಯ ವಸ್ತುಗಳಿಗೆ ವಿನಾಯಿತಿಗಳನ್ನು ತೆಗೆದುಹಾಕುವ ಸಂದರ್ಭದಲ್ಲಿ ಅಧಿಕಾರಿಗಳು ಕೆಲವು ಸರಕು ಮತ್ತು ಸೇವೆಗಳ ದರಗಳನ್ನು ಹೆಚ್ಚಿಸಲು ಅನುಮೋದಿಸಿದರು.
ಕೇಂದ್ರ ಸರ್ಕಾರವು ಧ್ವಜ ಸಂಹಿತೆ-2002ಕ್ಕೆ ತಿದ್ದುಪಡಿ ತಂದು ಖಾದಿ ಬಟ್ಟೆಯ ಬದಲು ಪಾಲಿಸ್ಟರ್ ಧ್ವಜಗಳಿಗೆ ಅನುಮತಿ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ‘ಮೈಸೂರು ಖಾದಿ ನೂಲುಗಾರರ ಬಳಗ’ವು ಮಕ್ಕಳು ಮತ್ತು ನಾಗರಿಕರಿಗೆ ಖಾದಿ ನೂಲು ನೇಯುವ ಕಾರ್ಯಾಗಾರ ನಡೆಸಿ ಮೌನ ಪ್ರತಿಭಟನೆ ದಾಖಲಿಸಿತು.
ಪ್ಲಾಸ್ಟಿಕ್ ತ್ಯಾಜ್ಯದ ಅಪಾಯಗಳನ್ನು ಪರಿಗಣಿಸಿ, ಮಾಲಿನ್ಯವನ್ನು ನಿಯಂತ್ರಿಸುವ ಪ್ರಯತ್ನದ ಭಾಗವಾಗಿ ದೇಶದಲ್ಲಿ ಏಕಬಳಕೆಯ ಪ್ಲಾಸ್ಟಿಕ್‌ನ ಮೇಲೆ ನಿಷೇಧ ಹೇರಲಾಗಿದೆ.
ಪೋಷಣ್ ಯೋಜನೆಯ ಪ್ರಯೋಜನ ಪಡೆಯುವಲ್ಲಿ ಮಕ್ಕಳ ಆಧಾರ್ ಕಡ್ಡಾಯವಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸ್ಪಷ್ಪಪಡಿಸಿದೆ. ತಾಯಿಯ ಬಯೋಮೆಟ್ರಿಕ್ ಕಾರ್ಡ್ ಬಳಸಿ ಪೋಷಣ್ ಆ್ಯಪ್ ನಲ್ಲಿ ನೋಂದಣಿಯಾಗಿ ಇದರ ಅನುಕೂಲ ಪಡೆಯಬಹುದಾಗಿದೆ.
ಜಿಲ್ಲೆಯಲ್ಲಿ ಕೃಷ್ಣಾ, ಭೀಮಾ ನದಿ ಪ್ರವಾಹ ಸೇರಿದಂತೆ ಇನ್ನಿತರ ಪ್ರಾಕೃತಿಕ ವಿಪತ್ತುಗಳು ಸಂಭವಿಸಿದಾಗ ತುರ್ತಾಗಿ ಜನರಿಗೆ ರಕ್ಷಣೆ ನೀಡಲು, ಆಸ್ತಿ ಹಾಗೂ ಪ್ರಾಣ ರಕ್ಷಣೆ ಮಾಡಲು ಸಮುದಾಯದಲ್ಲಿ 24 ಗಂಟೆಗಳು ಲಭ್ಯವಿರುವಂಥ ಜನರಿಗೆ ತರಬೇತಿ ಸರ್ಕಾರ ಮುಂದಾಗಿದೆ.
ಹಾವು ಮತ್ತಿತರ ಜಂತುಗಳ ವಿಷ ನಿಷ್ಕ್ರಿಯಗೊಳಿಸುವ ಔಷಧ ಉತ್ಪಾದಿಸಲು ನೆರವಾಗುವ ‘ಪ್ರತಿವಿಷ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ’ದ ಕಟ್ಟಡ ನಿರ್ಮಾಣಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ‘ಬೆಂಗಳೂರು ಹೆಲಿಕ್ಸ್ ಬಯೋಟೆಕ್ ಪಾರ್ಕ್’ನ ಐಬಿಎಬಿ ಸಂಸ್ಥೆ ಆವರಣದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.
ಅಮೃತ ಸ್ವಾತಂತ್ರೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರ ಆಗಸ್ಟ್ 11 ರಿಂದ 17ರವರೆಗೆ ಹಮ್ಮಿಕೊಂಡಿರುವ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಉನ್ನತ ಶಿಕ್ಷಣ, ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಗಳ ವ್ಯಾಪ್ತಿಯಲ್ಲಿ ಯಶಸ್ವಿಗೊಳಿಸಲು ಸುತ್ತೋಲೆ ಹೊರಡಿಸಲಾಗಿದೆ.
ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಕಲಬುರಗಿ ಯಲ್ಲಿ ವೈಮಾನಿಕ ತರಬೇತಿ ಶಾಲೆಗೆ ಒಪ್ಪಿಗೆ ನೀಡಿದ್ದು, ಇನ್ನು ಮುಂದೆ ಉತ್ತರ ಕರ್ನಾಟಕ ಭಾಗದ ಯುವಕರು ಇಲ್ಲಿಯೇ ಪೈಲಟ್ ತರಬೇತಿ ಪಡೆಯಬಹುದು.
ಬೆಂಗಳೂರು ರೈಲ್ವೆ ವಿಭಾಗವು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮತ್ತು ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣಗಳಲ್ಲಿ ಡಿಜಿಟಲ್ ಸ್ಮಾರ್ಟ್ ಕ್ಲೋಕ್ ರೂಮ್‌ಗಳನ್ನು (ಡಿಜಿಲಾಕರ್‌ಗಳು) ಪ್ರಾರಂಭಿಸಿದೆ.
ರಕ್ಷಣಾ ವಿಭಾಗದಲ್ಲಿ ಸ್ವಾವಲಂಬನೆಯತ್ತ ಮಹತ್ವದ ಹೆಜ್ಜೆಯನ್ನಿಟ್ಟಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಚಿತ್ರದುರ್ಗದ ಎಟಿಆರ್ (ಏರೋನಾಟಿಕಲ್ ಟೆಸ್ಟ್ ರೇಂಜ್) ನಿಂದ ಮೊದಲ ಚಾಲಕ ರಹಿತ ವಿಮಾನದ ಯಶಸ್ವಿ ಹಾರಾಟ ನಡೆಸಿದೆ.
ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ (ಎಂಎಲ್ಎಲ್ಯಾಡ್) ಅಡಿಯಲ್ಲಿ ಸರ್ಕಾರಿ ಶಾಲೆಗಳಿಗೆ ಬಸ್ ಖರೀದಿಸಲು ಸೌಲಭ್ಯವನ್ನು ಕಲ್ಪಿಸಿದೆ.
ಬೆಂಗಳೂರಿನ ಆಕರ್ಷಣೆಗಳಲ್ಲಿ ಒಂದಾಗಿರುವ ಐತಿಹಾಸಿಕ ಕಬ್ಬನ್ ಪಾರ್ಕ್ ಉದ್ಯಾನದಲ್ಲಿ ಶೀಘ್ರದಲ್ಲೇ ಸುರಂಗ ಅಕ್ವೇರಿಯಂ ತಲೆ ಎತ್ತಲಿದೆ.
ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಪರಿಸರ ರಾಯಭಾರಿ ಗೌರವ ನೀಡಿ, ಜೊತೆಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
NammaKPSC Current Affairs - June 2022
ಚುಟುಕು ಸಮಾಚಾರ
ಬವೇರಿಯನ್ ಆಲ್ಪ್ಸ್‌ನ ಪ್ರಕೃತಿ ಮೀಸಲು ಪ್ರದೇಶದಲ್ಲಿ ಶತಮಾನಗಳಷ್ಟು ಹಳೆಯದಾದ ಸ್ಕ್ಲೋಸ್ ಎಲ್ಮಾವ್‌ನಲ್ಲಿ ನಡೆಯುತ್ತಿರುವ ಗ್ರೂಪ್ ಆಫ್ ಸೆವೆನ್ (ಜಿ7) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಜರ್ಮನಿಗೆ ತೆರಳಿದ್ದಾರೆ. · ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರು ಅರ್ಜೆಂಟೀನಾ, ಇಂಡೋನೇಷ್ಯಾ, ಸೆನೆಗಲ್ ಮತ್ತು ದಕ್ಷಿಣ ಆಫ್ರಿಕಾದೊಂದಿಗೆ ಭಾರತವನ್ನು ಪಾಲುದಾರ ರಾಷ್ಟ್ರಗಳಾಗಿ 2022 ರ ಶೃಂಗಸಭೆಗೆ ಆಹ್ವಾನಿಸಿದ್ದಾರೆ.
14 ನೇ ಬ್ರಿಕ್ಸ್ ಶೃಂಗಸಭೆಯು ವರ್ಚುವಲ್ ಮೋಡ್‌ನಲ್ಲಿ ಜೂನ್ 23, 2022 ರಂದು ನಡೆಯಿತು.
ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ನೊಂದಿಗೆ ವಿವಿಧ ವಿಭಾಗಗಳ ರಸ್ತೆಗಳಲ್ಲಿ 12 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 75 ಸ್ಥಳಗಳಲ್ಲಿ ಮಾರ್ಗಬದಿ ಸೌಲಭ್ಯಗಳನ್ನು ಸ್ಥಾಪಿಸಲು ರಕ್ಷಣಾ ಸಚಿವಾಲಯ (MoD) ಅನುಮೋದನೆ ನೀಡಿದೆ.
ಭಾರತ ಜೂ.24 ರಂದು ಮೇಲ್ಮೈ ನಿಂದ ಆಗಸಕ್ಕೆ ಚಿಮ್ಮುವ ವರ್ಟಿಕಲ್ ಲಾಂಚ್ ಶಾರ್ಟ್ ರೇಂಜ್ (ವಿಎಲ್-ಎಸ್ ಆರ್ಎಸ್ಎಎಂ) ಕ್ಷಿಪಣಿಯ ಪರೀಕ್ಷೆಯನ್ನು ಒಡಿಶಾದಿಂದ ಯಶಸ್ವಿಯಾಗಿ ನಡೆಸಿದೆ.
ಜೂನ್ 23 ರಂದು, ಭಾರತವು ತನ್ನ GSAT-24 ಉಪಗ್ರಹವನ್ನು ಉಡಾವಣೆ ಮಾಡಿತು, ಇದನ್ನು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಗಾಗಿ ISRO ನಿರ್ಮಿಸಿದೆ.
ಸೇನೆಗೆ ಸೇರುವ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತರಬೇತಿ ಶಾಲೆ ಆರಂಭಿಸಲು ನಿರ್ಧರಿಸಿದೆ.
ಚುಟುಕು ಸಮಾಚಾರ
ಆಗ್ನೇಯ ಏಷ್ಯಾ ರಾಷ್ಟ್ರ ಮತ್ತು ಯುನೈಟೆಡ್ ಸ್ಟೇಟ್ಸ್‌ನ ವಿಜ್ಞಾನಿಗಳ ಪ್ರಕಾರ, ವಿಶ್ವದ ಅತಿದೊಡ್ಡ ದಾಖಲಿತ ಸಿಹಿನೀರಿನ ಮೀನು, ದೈತ್ಯ ಸ್ಟಿಂಗ್ರೇ, ಕಾಂಬೋಡಿಯಾದ ಮೆಕಾಂಗ್ ನದಿಯಲ್ಲಿ ಸಿಕ್ಕಿದೆ.
ಚಿನ್ನದ ಸಂಸ್ಕರಣೆ ಮತ್ತು ಮರುಬಳಕೆಯ ವರದಿಯನ್ನು ಇತ್ತೀಚೆಗೆ WGC ಪ್ರಕಟಿಸಿದೆ. ವರದಿಯಲ್ಲಿ, 2021 ರಲ್ಲಿ 168 ಟನ್ ಚಿನ್ನವನ್ನು ಮರುಬಳಕೆ ಮಾಡಿದ ನಂತರ ಚೀನಾ ಜಾಗತಿಕ ಚಿನ್ನದ ಮರುಬಳಕೆ ಚಾರ್ಟ್‌ನಲ್ಲಿ ಮೊದಲ ಸ್ಥಾನದಲ್ಲಿದೆ.ಇದರ ನಂತರ ಇಟಲಿ 80 ಟನ್ ಚಿನ್ನ ಮತ್ತು ಯುಎಸ್ ಮೂರನೇ ಸ್ಥಾನದಲ್ಲಿದೆ, 2021 ರಲ್ಲಿ 78 ಟನ್ ಮರುಬಳಕೆ ಮಾಡಲಾಗುತ್ತಿದೆ.
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳು ಡಿಜಿಟಲೀಕರಣಗೊಳ್ಳುತ್ತಿದ್ದು, ಅಂಚೆ ಇಲಾಖೆಯ ಸೇವೆಗಳು ಕೂಡ ವಾಟ್ಸ್ಆ್ಯಪ್ ಮೂಲಕ ಲಭ್ಯವಾಗಲಿದೆ.
ಹಿರಿಯ ರಾಜತಾಂತ್ರಿಕ ಅಧಿಕಾರಿ ರುಚಿರಾ ಕಾಂಬೋಜ್ ಅವರನ್ನು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿ ನೇಮಕ ಮಾಡಲಾಗಿದೆ.
ಆಯುಷ್ ಇಲಾಖೆಯು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಸಹಯೋಗದಲ್ಲಿ ಈ ಡಿಜಿಟಲ್ ಯೋಗ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು, ಇದನ್ನು ಪ್ರಧಾನಿ ನರೇಂದ್ರ ಮೋದಿ ಉದ್ಗಾಟಿಸಿದ್ದರು.
ವಿಶ್ವವಿಖ್ಯಾತ ಮೈಸೂರು ಅರಮನೆ ಅಂಗಳದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆದಿದ್ದು, ಮೋದಿಯವರು ಓಂಕಾರ ಉಚ್ಛಾರಣೆ ಮತ್ತು ಸಂಸ್ಕತ ಶ್ಲೋಕದೊಂದಿಗೆ ಯೋಗಭ್ಯಾಸ ನಡೆಸಿದರು.
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) 280 ಕೋಟಿ ರೂಪಾಯಿ ವೆಚ್ಚದಲ್ಲಿ ಮೆದುಳಿನ ಸಂಶೋಧನಾ ಕೇಂದ್ರವನ್ನು (CBR) ಸ್ಥಾಪಿಸಲಾಗಿದೆ.
ಚುಟುಕು ಸಮಾಚಾರ
ಜುಲೈಗೆ 5ಜಿ ತರಂಗಾಂತರ ಹರಾಜು ಪ್ರಕ್ರಿಯೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಸಮ್ಮತಿ ಸೂಚಿಸಿದೆ. ಒಟ್ಟು 72 ಗಿಗಾಹರ್ಟ್ಸ್ ತರಂಗಾಂತರವು 20 ವರ್ಷಗಳ ಅವಧಿಗೆ ಹರಾಜು ಹಾಕಲಾಗುತ್ತಿದ್ದು, ಜುಲೈ ಅಂತ್ಯದ ವೇಳೆಗೆ ಹರಾಜು ಪ್ರಕ್ರಿಯೆ ನಡೆಯಲಿದೆ.
ರಷ್ಯಾ ಆಕ್ರಮಣ ಆರಂಭಿಸಿದ ನಾಲ್ಕು ತಿಂಗಳ ನಂತರ ಉಕ್ರೇನ್‌ಗೆ ಯುರೋಪ್ ಒಕ್ಕೂಟದ (ಯುಇ) ಸದಸ್ಯ ಪಡೆಯುವ ಉಮೇದುವಾರಿಕೆ ಸ್ಥಾನಮಾನವನ್ನು ಯುರೋಪಿಯನ್ ಕಮಿಷನ್ ಬೆಂಬಲಿಸಿರುವುದಕ್ಕೆ ಶ್ಲಾಘಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ‘ಇದೊಂದು ಐತಿಹಾಸಿಕ ತೀರ್ಮಾನ’ ಎಂದು ಬಣ್ಣಿಸಿದ್ದಾರೆ.
ಚೆಸ್ ಒಲಿಂಪಿಯಾಡ್‌ನಲ್ಲಿ ಇದೇ ಮೊದಲ ಬಾರಿ ಆಯೋಜಿಸಿರುವ ಕ್ರೀಡಾ ಜ್ಯೋತಿ ಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕಾನಹಳ್ಳಿ ಗ್ರಾಮದಲ್ಲಿ 13ನೇ ಶತಮಾನದ ತುರುಗೋಳ್ ವೀರಗಲ್ಲು ಶಾಸನ ಪತ್ತೆಯಾಗಿದೆ. “
ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ಆರ್ಕಿಡ್ ಸಸ್ಯ ಪ್ರಭೇದಗಳನ್ನು ಸಂರಕ್ಷಿಸುವ ಪ್ರಯತ್ನವಾಗಿ ಅರಣ್ಯ ಇಲಾಖೆ ಆರ್ಕಿಡೇರಿಯಂ ಸ್ಥಾಪಿಸಲು ಸಜ್ಜಾಗಿದೆ.
ಚುಟುಕು ಸಮಾಚಾರ
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಭಾರತೀಯ ಮೂಲದ ರಾಧಾ ಅಯ್ಯಂಗಾರ್ ಪ್ಲಂಬ್ ಅವರನ್ನು ಪೆಂಟಗನ್ ಉನ್ನತ ಹುದ್ದೆಗೆ ನಾಮನಿರ್ದೇಶನ ಮಾಡಿದ್ದಾರೆ.
ಭಾರತವು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಪರಮಾಣು ಸಾಮರ್ಥ್ಯದ ಪೃಥ್ವಿ-II ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.
ಅಗ್ನಿಪಥ್ ಅಥವಾ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚಾಲನೆ ನೀಡಿದರು.
ಚುಟುಕು ಸಮಾಚಾರ
ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷ ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸುತ್ತದೆ. ‘ರಕ್ತದಾನ ಮಾಡುವುದು ಸಾಮೂಹಿಕ ಕಾರ್ಯ. ಈ ಪ್ರಯತ್ನಕ್ಕೆ ಕೈಜೋಡಿಸಿ ಮತ್ತು ಜೀವ ಉಳಿಸಿ’ ಎಂಬ ಸಂದೇಶದೊಂದಿಗೆ ಈ ಬಾರಿ ರಕ್ತದಾನಿಗಳ ದಿನ ಆಚರಿಸಲಾಗುತ್ತಿದೆ.
2022 ರ ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ; ಸಿಕ್ಕಿಂನ ಮುಖ್ಯಮಂತ್ರಿ ಪಿ.ಎಸ್. ಗೋಲೆ, ಬ್ಲೂ ಡ್ಯೂಕ್ ಅನ್ನು “ಸ್ಟೇಟ್ ಬಟರ್ಫ್ಲೈ ಆಫ್ ಸಿಕ್ಕಿಂ” ಎಂದು ಘೋಷಿಸಿದರು.
ಭಾರತ ಸರ್ಕಾರದ ಹಲವಾರು ಸಚಿವಾಲಯಗಳು ಅಥವಾ ಇಲಾಖೆಗಳು ಅಥವಾ ಏಜೆನ್ಸಿಗಳು ಅಸಾಧಾರಣ ಕೊಡುಗೆ ನೀಡಿದ ಮತ್ತು ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಜನರನ್ನು ಗುರುತಿಸಲು ವಿವಿಧ ನಾಗರಿಕ ಪ್ರಶಸ್ತಿಗಳನ್ನು ಸ್ಥಾಪಿಸಿವೆ.
ಮುಖ್ಯವಾಗಿ ಆಹಾರ ಪದಾರ್ಥಗಳ ಬೆಲೆ ಕಡಿಮೆಯಾದ ಪರಿಣಾಮ ಏಪ್ರಿಲ್ ನಲ್ಲಿ ಶೇಕಡಾ 7.79ರಷ್ಟಿದ್ದ ಚಿಲ್ಲರೆ ಹಣದುಬ್ಬರವು ಮೇ ತಿಂಗಳಲ್ಲಿ ಶೇ. 7.04ಕ್ಕೆ ಇಳಿದಿದೆ ಎಂದು ಸರ್ಕಾರಿ ಅಂಕಿ-ಅಂಶಗಳು ಮಾಹಿತಿ ನೀಡಿವೆ.
ಆತ್ಮ ನಿರ್ಭರ ಭಾರತಕ್ಕೆ ವಾಯುಸೇನೆ ಒತ್ತು ನೀಡುವ ನಿಟ್ಟಿನಲ್ಲಿ ವಾಯುಸೇನೆ ಸ್ವೀಕರಿಸಲಿರುವ ಯುದ್ಧ ವಿಮಾನಗಳ ಪೈಕಿ ಶೇ.90ರಷ್ಟು ಅಂದರೆ 96 ಜೆಟ್ ಯುದ್ಧ ವಿಮಾನಗಳನ್ನು ದೇಶದಲ್ಲಿಯೇ ತಯಾರಾಗಲಿವೆ.
ಪಶ್ಚಿಮ ಘಟ್ಟವನ್ನು ಸಮೃದ್ಧವಾಗಿಡುವ ಪ್ರಮುಖ ನದಿಗಳು ಬೇಡ್ತಿ ಹಾಗೂ ವರದಾ. ಈ ನದಿಗಳ ನೀರನ್ನು ಬಿಸಿಲನಾಡಿನ ತುಂಗಭದ್ರಾ ಎಡದಂಡೆ ಕಾಲುವೆಗೆ ಹರಿಸುವ ಸಂಬಂಧ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ‘ರಾಷ್ಟ್ರೀಯ ಜಲಮೂಲ ಅಭಿವೃದ್ಧಿ ಏಜೆನ್ಸಿ’ (ಎನ್.ಡಬ್ಲ್ಯು.ಡಿ.ಎ.) ಸಿದ್ಧಪಡಿಸಿದ ವಿಸ್ತೃತ ಯೋಜನಾ ವರದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ
ಆಯುಷ್ಮಾನ್ ಭಾರತ ಡಿಜಿಟಲ್ ಮಿಷನ್‌ನ (ಎಬಿಡಿಎಂ) ತಂತ್ರಜ್ಞಾನ ಕೇಂದ್ರವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲಾಗುವುದು’ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (ಎನ್‌ಎಚ್‌ಒ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್.ಎಸ್. ಶರ್ಮಾ ತಿಳಿಸಿದರು.
ಚುಟುಕು ಸಮಾಚಾರ
ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿರುವ WTO ಪ್ರಧಾನ ಕಛೇರಿಯಲ್ಲಿ ಇದನ್ನು ಆಯೋಜಿಸಲಾಗಿದೆ.ಸಮ್ಮೇಳನವು ಜೂನ್ 15, 2022 ರಂದು ಮುಕ್ತಾಯಗೊಳ್ಳಲಿದೆ.
ಎಲಿಜಬೆತ್ ರಾಣಿ ಜಗತ್ತಿನಲ್ಲೇ ಅತ್ಯಂತ ಸುದೀರ್ಘ ಆಳ್ವಿಕೆ ನಡೆಸಿದ ಎರಡನೇ ರಾಜ ವಂಶಸ್ಥೆಯಾಗಿ ಬ್ರಿಟನ್ ರಾಣಿ 2ನೇ ಎಲಿಜಬೆತ್ ದಾಖಲೆ ನಿರ್ಮಿಸಿದ್ದಾರೆ.
ಭಾರತಕ್ಕೆ ರಷ್ಯಾದ ಸರಕುಗಳ ಸಾಗಣೆಗೆ ಇರಾನ್ ಹೊಸ ವ್ಯಾಪಾರಿ ಮಾರ್ಗ ಆರಂಭಿಸಿದೆ’ ಎಂದು ಇರಾನ್‌ನ ಸರ್ಕಾರಿ ಸ್ವಾಮ್ಯದ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಶಿಪ್ಪಿಂಗ್ ಲೈನ್ಸ್ ಗ್ರೂಪ್ ತಿಳಿಸಿದೆ.
ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಗೋವಾದ ಪ್ರವಾಸೋದ್ಯಮ ಕ್ಷೇತ್ರ ಮತ್ತು ಕಡಲತೀರಗಳನ್ನು ಗಮನದಲ್ಲಿಟ್ಟುಕೊಂಡು “ಬೀಚ್ ವಿಜಿಲ್ ಆಪ್” ಅನ್ನು ಪ್ರಾರಂಭಿಸಿದರು.
ಬಂದರುಗಳು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವಾಲಯವು ಸಚಿವಾಲಯದ ವಿವಿಧ ವಿಭಾಗಗಳಲ್ಲಿ ಪ್ರತಿಭಾವಂತ, ಕ್ರಿಯಾತ್ಮಕ ಮತ್ತು ಮುಂದಾಲೋಚನೆಯ ಯುವ ವೃತ್ತಿಪರರನ್ನು ತೊಡಗಿಸಿಕೊಳ್ಳುವ ಪ್ರಯತ್ನದಲ್ಲಿ “ಸಾಗರಮಾಲಾ ಯುವ ವೃತ್ತಿಪರ ಯೋಜನೆ” ಎಂಬ ಯೋಜನೆಯನ್ನು ಪ್ರಾರಂಭಿಸಿದೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಇತ್ತೀಚೆಗೆ ರಾಷ್ಟ್ರಪತಿ ಚುನಾವಣೆ 2022 ರ ವೇಳಾಪಟ್ಟಿಯನ್ನು ಪ್ರಕಟಿಸಿದರು
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ತಂತ್ರಜ್ಞಾನದ ರಾಯಭಾರಿಯಾಗಿ ಹಿರಿಯ ಭಾರತೀಯ ರಾಜತಾಂತ್ರಿಕ ಅಧಿಕಾರಿ ಅಮನ್ ದೀಪ್ ಸಿಂಗ್ ಗಿಲ್ ಅವರನ್ನು ನೇಮಕ ಮಾಡಲಾಗಿದೆ.
ಕಬಿನಿ ಶಕ್ತಿಮಾನ್ ಎಂದೇ ಖ್ಯಾತಿ ಪಡೆದಿದ್ದ ನೀಳ ದಂತದ, ಸುಂದರ ನಡಿಗೆಯ ಭೋಗೇಶ್ವರ ಹೆಸರಿನ ಆನೆ ನಿಧನ ಹೊಂದಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಅರೆ ರೋಬೋಟಿಕ್ ಟೋಯಿಂಗ್ ಸಾಧನವನ್ನು ನಿಯೋಜಿಸಿದ ವಿಶ್ವದ ಎರಡನೇ ವಿಮಾನ ನಿಲ್ದಾಣವಾಗಿದೆ.
ಚುಟುಕು ಸಮಾಚಾರ
ಮಂಗಳ ಗ್ರಹದಲ್ಲಿ ‘ಕ್ಯೂರಿಯಾಸಿಟಿ ರೋವರ್’ ಗುರುತಿಸಿರುವ ಮೊನಚು ಆಕೃತಿಯ ಚಿತ್ರಗಳನ್ನು ನಾಸಾ ಇತ್ತೀಚೆಗೆ ಬಿಡುಗಡೆ ಮಾಡಿದೆ.
2021ರಲ್ಲಿ ಭಾರತಕ್ಕೆ ಹರಿದುಬಂದ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ) ಮೊತ್ತವು ಕಡಿಮೆ ಆಗಿದ್ದರೂ, ಭಾರತವು ಜಾಗತಿಕ ಮಟ್ಟದಲ್ಲಿ ಎಫ್ಡಿಐ ಆಕರ್ಷಿಸಿದ ಮೊದಲ ಹತ್ತು ರಾಷ್ಟ್ರಗಳ ಸಾಲಿನಲ್ಲಿ ಸ್ಥಾನ ಪಡೆದಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಫಿಚ್ ರೇಟಿಂಗ್ಸ್ ಸಂಸ್ಥೆಯು ಭಾರತದ ಸಾಲ ಪಡೆಯುವ ಸಾಮರ್ಥ್ಯದ ಮುನ್ನೋಟವನ್ನು ‘ಸ್ಥಿರ’ ಎಂದು ಮೇಲ್ದರ್ಜೆಗೆ ಏರಿಸಿದೆ. ಇದು ಎರಡು ವರ್ಷಗಳಿಂದ ‘ನಕಾರಾತ್ಮಕ’ ಆಗಿತ್ತು.
ಪ್ರಾಣಿಗಳಿಗೆ ನೀಡಬಹುದಾದ, ದೇಶಿಯವಾಗಿಯೇ ಅಭಿವೃದ್ಧಿಪಡಿಸಿರುವ ಕೋವಿಡ್ 19 ಲಸಿಕೆ ‘ಅನೊಕೊವ್ಯಾಕ್ಸ್’ ಅನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಬಿಡುಗಡೆ ಮಾಡಿದರು.
ಮುದ್ರಣ, ಟಿ.ವಿ ವಾಹಿನಿಗಳು ಹಾಗೂ ಆನ್ಲೈನ್ ವೇದಿಕೆಗಳಲ್ಲಿ ರಿಯಾಯಿತಿಗಳು ಮತ್ತು ಉಚಿತ ತ್ವರೆಗಳನ್ನು ನೀಡುವ ಮೂಲಕ ಗ್ರಾಹಕರಿಗೆ ಅದರಲ್ಲೂ ಮಕ್ಕಳಿಗೆ ಆಮಿಷ ಒಡ್ಡುವ, ತಪ್ಪು ದಾರಿಗೆ ಎಳೆಯುವ ಜಾಹೀರಾತುಗಳಿಗೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿ, ಕೇಂದ್ರ ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಭಾರತೀಯ ಮಸಾಲೆ ಪದಾರ್ಥಗಳಲ್ಲಿ ಬಳಸಲಾಗುವ ಔಷಧೀಯ ಗುಣಗಳಿರುವ ಅರಿಶಿನವನ್ನು ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ‘ಒಂದು ಜಿಲ್ಲೆ ಒಂದು ಉತ್ಪನ್ನ’ (ಒಡಿಒಪಿ) ವಾಗಿ ಘೋಷಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಮುಘಲರು ಭಾರತಕ್ಕೆ ಹೆಜ್ಜೆ ಇಡುವ ಮೊದಲೇ ಸುಮಾರು 300 ವರ್ಷಗಳ ಹಿಂದೆ ಕುತುಬ್ ಮಿನಾರ್ ಅನ್ನು ನಿರ್ಮಿಸಲಾಗಿದೆ. ಈ ವಿಚಾರದಲ್ಲಿ ಮುಘಲರಿಗೂ ಕುತುಬ್ ಮಿನಾರ್ಗೂ ಸಂಬಂಧವಿಲ್ಲ ಎಂದು ಇತಿಹಾಸಕಾರರು ಸ್ಪಷ್ಟಪಡಿಸಿದ್ದಾರೆ.
ವಾಟ್ಸಾಪ್: SMB ಸಾಥಿ ಉತ್ಸವ ಉಪಕ್ರಮವನ್ನು ಪ್ರಾರಂಭಿಸಿತು, ಇದು ವಾಟ್ಸಾಪ್ ವ್ಯಾಪಾರ ಅಪ್ಲಿಕೇಶನ್‌ನಂತಹ ಡಿಜಿಟಲ್ ಮಾಧ್ಯಮಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುವ ಮೂಲಕ ಸಣ್ಣ ವ್ಯಾಪಾರಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.
ಖಾಸಗಿ ಉದ್ಯಮ, ಶೈಕ್ಷಣಿಕ ಮತ್ತು ಸ್ಟಾರ್ಟ್-ಅಪ್‌ಗಳಿಗೆ ಯೂನಿಯನ್ ಬಜೆಟ್ 2022-23 ನವೀನ TDF ಉತ್ಪನ್ನಗಳಿಗೆ ಹೆಚ್ಚಿನ ನಿಧಿಯನ್ನು ಸುಗಮಗೊಳಿಸುವ ಸಲುವಾಗಿ ರಕ್ಷಣಾ R&D ಬಜೆಟ್‌ನ 25% ಅನ್ನು ಕಾಯ್ದಿರಿಸಿದೆ.
ಜೂನ್ 7, 2022 ರಂದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಮಹಾತ್ಮಾ ಗಾಂಧಿ ಸೇತುವಿನ ಸೂಪರ್ ಸ್ಟ್ರಕ್ಚರ್ ಬದಲಿಯನ್ನು ಉದ್ಘಾಟಿಸಿದರು.
ವಿದೇಶಿ ಸಾಂಸ್ಥಿಕ ಹೂಡಿಕೆ ಮತ್ತು ಕಚ್ಚಾ ತೈಲ ಬೆಲೆಗಳ ಏರಿಕೆಯ ನಡುವೆ ಷೇರು ಮಾರುಕಟ್ಟೆಗಳಲ್ಲಿ ನಿರಂತರ ಮಾರಾಟದಿಂದ ಮತ್ತೆ ರೂಪಾಯಿ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿದಿದೆ.
ವರ್ಷದ ಮೊದಲ ಭಾಗದಲ್ಲಿ ಭಾರತ 14 ಹೊಸ ಯೂನಿಕಾರ್ನ್ ಗಳನ್ನು ಸೃಷ್ಟಿಸಿದೆ.
ಹೆದ್ದಾರಿಗಳಲ್ಲಿ ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಲು ಇಂಧನ ಇಲಾಖೆಯು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ.
ಚುಟುಕು ಸಮಾಚಾರ
ಕ್ಯೂಎಸ್ ವರ್ಲ್ಡ್ ಯುನಿವರ್ಸಿಟಿ ಶ್ರೇಯಾಂಕಗಳ ಉನ್ನತ 200 ವಿಶ್ವವಿದ್ಯಾನಿಲಯಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ದಕ್ಷಿಣ ಏಷ್ಯಾದ ವಿಶ್ವವಿದ್ಯಾಲಯವಾಗಿ ಗುರುತಿಸಿಕೊಂಡಿದೆ.
ಭಾರತ ಮತ್ತು ವಿಯೆಟ್ನಾಂ ದ್ವಿಪಕ್ಷೀಯ ಮಿಲಿಟರಿ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿವೆ.
ಈ ಸಾಲಿನ ಪರಿಸರ ಕಾರ್ಯದಕ್ಷತೆ ಸೂಚ್ಯಂಕದಲ್ಲಿ (ಇಪಿಐ) ಭಾರತವು ಅತ್ಯಂತ ಕಡಿಮೆ ಅಂಕಗಳನ್ನು ಪಡೆದು, ಕೊನೆಯ ಸ್ಥಾನದಲ್ಲಿದೆ ಎಂದು ಅಮೆರಿಕದ ಅಧ್ಯಯನ ಸಂಸ್ಥೆಗಳು ಹೇಳಿದೆ. ಅತಿಹೆಚ್ಚು ಅಂಕ ಪಡೆದಿರುವ ಡೆನ್ಮಾರ್ಕ್ ಮೊದಲ ಸ್ಥಾನದಲ್ಲಿದೆ.
ಹಾಲಿ ಕಕ್ಷೆಯಲ್ಲಿರುವ 10 ಸಂವಹನ ಉಪಗ್ರಹಗಳನ್ನು ಸಾರ್ವಜನಿಕ ಉದ್ಯಮ ವಲಯಕ್ಕೆ ವರ್ಗಾಯಿಸಲು ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಈ ಬಾರಿ ಜೂನ್ 8ರಂದು ಮೇಳ ನಡೆಯಲಿದೆ. ಕಾಶ್ಮೀರದಾದ್ಯಂತ ಐದು ದೇವಾಲಯಗಳಲ್ಲಿ ಖೀರ್ ಭವಾನಿ ಮೇಳಗಳನ್ನು ಆಯೋಜಿಸಲಾಗಿದೆ.
ಜೂನ್ 9 ಮತ್ತು ಜೂನ್ 10 ರಂದು ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯಲಿರುವ ‘ಬಯೋಟೆಕ್ ಸ್ಟಾರ್ಟ್ ಅಪ್ ಎಕ್ಸ್ ಪೋ’ ಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.
ಚುಟುಕು ಸಮಾಚಾರ
ಟೋಕಿಯೊ ಪ್ಯಾರಾಲಿಂಪಿಕ್ಸ್ ನ ಚಾಂಪಿಯನ್ ಅವನಿ ಲೇಖರಾ ಅವರು ಇದೀಗ ಫ್ರಾನ್ಸ್ ನ ಚಟಿರಾಕ್ಸ್ ನಲ್ಲಿ ನಡೆಯುತ್ತಿರುವ ಪ್ಯಾರಾ ಶೂಟಿಂಗ್ ವಿಶ್ವಕಪ್ ನ ವನಿತೆಯ 10 ಮೀ. ಏರ್ ರೈಫಲ್ ಸ್ಟಾಂಡಿಂಗ್ ಎಸ್ಎಚ್ 1ರಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಾಲ ನೀಡುವ ದರವನ್ನು ಅಂದರೆ ರೆಪೊ ದರವನ್ನು ಶೇಕಡಾ 4.90ಕ್ಕೆ ಏರಿಸಿದೆ. ಆರ್‌ಬಿಐ ‘withdrawal of accommodation’ ನೀತಿಯ ನಿಲುವನ್ನು ಉಳಿಸಿಕೊಳ್ಳಲು ಸರ್ವಾನುಮತದಿಂದ ನಿರ್ಧರಿಸಿದೆ. ಕಳೆದ ಎರಡು ತಿಂಗಳಲ್ಲಿ ರೆಪೊ ದರ ಹೆಚ್ಚಳವಾಗುತ್ತಿರುವುದು ಇದು ಎರಡನೇ ಸಲ.
UPI (ಯುನೈಟೆಡ್ ಪೇಮೆಂಟ್ಸ್ ಇಂಟರ್‌ಫೇಸ್) ಪ್ಲಾಟ್‌ಫಾರ್ಮ್ ಮತ್ತು ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಉದ್ದೇಶದಿಂದ, ಭಾರತೀಯ ರಿಸರ್ವ್ ಬ್ಯಾಂಕ್ (RBI) UPI ಅಡಿಯನಲ್ಲಿ ಕ್ರೆಡಿಟ್ ಕಾರ್ಡ್ ಗಳ ಜೋಡಣೆಗೆ ಅನುವು ಮಾಡಿಕೊಡಲು ಪ್ರಸ್ತಾವನೆ ಸಲ್ಲಿಸಿದೆ.
ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥರ (ಡಿಸಿಎಸ್) ನೇಮಕಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನಿಯಮಗಳನ್ನು ಸಡಿಲಗೊಳಿಸಿದ್ದು, 62 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮೂರು ಸೇನೆಗಳಲ್ಲಿ ಯಾವುದೇ ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತ ಲೆಫ್ಟಿನೆಂಟ್ ಜನರಲ್, ಏರ್ ಮಾರ್ಷಲ್ ಮತ್ತು ವೈಸ್ ಅಡ್ಮಿರಲ್ ಸಹ ಸಿಡಿಎಸ್ ಹುದ್ದೆಗೆ ಅರ್ಹರಾಗಿರುತ್ತಾರೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ)ನಾಲ್ಕನೇ ರಾಜ್ಯ ಆಹಾರ ಸುರಕ್ಷತಾ ಸೂಚ್ಯಂಕ 2021-22ರ ವರದಿ ಬಿಡುಗಡೆಯಾಗಿದ್ದು, ಗುಜರಾತ್ ರಾಜ್ಯವನ್ನು ಹಿಂದಿಕ್ಕಿ ತಮಿಳುನಾಡು ಅಗ್ರ ಸ್ಥಾನಕ್ಕೇರಿದೆ.
ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ರೋಟರಿ ಬೆಂಗಳೂರು ಹೈಗ್ರೌಂಡ್ಸ್, ಇನ್‍ಫೋಸಿಸ್ ಫೌಂಡೇಶನ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಸಿಎಸ್‍ಆರ್ ಯೋಜನೆ ಒದಗಿಸಿರುವ ಲ್ಯಾಬ್ ಬಿಲ್ಟ್ ಆನ್ ವೀಲ್ಸ್ – ಮೊಬೈಲ್ ಕ್ಲಿನಿಕ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿದರು.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು (IIMB) ಜಾಗತಿಕ ಅತ್ಯುತ್ತಮ ಪ್ರವರ್ತಕ ವ್ಯಾಪಾರ ಶಾಲೆಗಳಲ್ಲಿ ಒಂದಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಿಂದ ಸುಮಾರು 27 ಕಿ.ಮೀ ದೂರದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಪಟ್ಟಣವನ್ನು ಎಲ್ಲಾ ಮೂಲಸೌಕರ್ಯಗಳೊಂದಿಗೆ ಸ್ಯಾಟಲೈಟ್ ಟೌನ್ ಆಗಿ ಶೀಘ್ರದಲ್ಲೇ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಚುಟುಕು ಸಮಾಚಾರ
ಆಧುನಿಕ ಖಗೋಳಶಾಸ್ತ್ರದ ಅತ್ಯಂತ ಪರಿಣಾಮಕಾರಿ ಬಾಹ್ಯಾಕಾಶ ದೂರದರ್ಶಕ ಯಂತ್ರ ಎಂದೇ ಪರಿಗಣಿಸಲಾಗಿರುವ ನಾಸಾದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್, ಮುಂಬುರವ ಜುಲೈ 12ರಂದು ತನ್ನ ಮೊಟ್ಟಮೊದಲ ವೈಜ್ಞಾನಿಕ ಬಾಹ್ಯಾಕಾಶ ಚಿತ್ರವನ್ನು ಭೂಮಿಗೆ ರವಾನಿಸಲಿದೆ.
ಜೂನ್ 6 ರಂದು, ಆಪರೇಷನ್ ಬ್ಲೂಸ್ಟಾರ್ ನ 38 ನೇ ವಾರ್ಷಿಕೋತ್ಸವವನ್ನು ಗುರುತಿಸಲು, ಪಂಜಾಬ್ನ ಪಂಥೀಯ ಗುಂಪುಗಳು ಹಲವಾರು ಕಾರ್ಯಕ್ರಮಗಳನ್ನು ಘೋಷಿಸಿವೆ.
ಗುಜರಾತ್, ಮಹಾರಾಷ್ಟ್ರ ಮತ್ತು ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿಯಾದ್ಯಂತ ವ್ಯಾಪಿಸಿರುವ ಮಹತ್ವಾಕಾಂಕ್ಷೆಯ ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಗೆ ಅಗತ್ಯವಿರುವ ಒಟ್ಟು ಭೂಮಿಯಲ್ಲಿ ಶೇ. 90ಕ್ಕೂ ಹೆಚ್ಚು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಯೋಜನೆಯ ಅನುಷ್ಠಾನ ಸಂಸ್ಥೆ ಎನ್‌ಎಚ್‌ಎಸ್‌ಆರ್‌ಸಿಎಲ್ ತಿಳಿಸಿದೆ.
ಒಡಿಶಾ: ಭಾರತ ಜೂ.06 ರಂದು ಒಡಿಶಾದಿಂದ ಮಧ್ಯಮ ವ್ಯಾಪ್ತಿಯ ‘ಅಗ್ನಿ-4’ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ಯನ್ನು ಯಶಸ್ವಿ ಯಾಗಿ ಪೂರೈಸಿತು
ಗುರುಗ್ರಾಮ ಮೂಲದ ಆಕ್ಮೆ( ACME) ಕ್ಲೀನ್ಟೆಕ್ ಸೊಲುಷನ್ ಪ್ರೈವೇಟ್ ಲಿಮಿಟೆಡ್ ಗ್ರೂಪ್ ಕಂಪೆನಿಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ರಾಜ್ಯದಲ್ಲಿ 52 ಸಾವಿರ ಕೋಟಿ ರೂಪಾಯಿ ಹೂಡಿಕೆ ಒಪ್ಪಂದ ಮಾಡಿಕೊಂಡಿದೆ.
ಆಧುನಿಕ ವೈದ್ಯಪದ್ಧತಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಆಯುರ್ವೇದ ದತ್ತ ಹೊರಳಲು ಪ್ರಯತ್ನಿಸುತ್ತಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಕೆಎಸ್‌ಆರ್‌ಡಿಪಿಆರ್) ವಿಶ್ವವಿದ್ಯಾನಿಲಯವು ಆಯುರ್ವೇದದ ಪ್ರಯೋಜನಗಳ ಕುರಿತು ಅರಿವು ಮೂಡಿಸಲು ಕಪ್ಪತಗುಡ್ಡದ ಆಯುರ್ವೇದ ಸಸ್ಯಗಳಾಧಾರಿತ ಚಿಕಿತ್ಸೆ ನೀಡುವ ಪರ್ಣಕುಟಿಯನ್ನು ನಿರ್ಮಿಸಿದೆ.
ಚುಟುಕು ಸಮಾಚಾರ
ಜೂನ್ 3, ವಿಶ್ವ ಸೈಕಲ್ ದಿನ. ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಫಿಟ್ ಇಂಡಿಯಾ ಚಳವಳಿ (Fit India movement) ಹೆಸರಿನಲ್ಲಿ ಹಮ್ಮಿಕೊಂಡಿರುವ ಕೇಂದ್ರ ಸರ್ಕಾರ ಸೈಕಲ್ ಜಾಥಾ ಹಮ್ಮಿಕೊಂಡಿದೆ.
ವಿಶ್ವ ಪರಿಸರ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 5 ರಂದು ‘ಮಣ್ಣು ಉಳಿಸಿ ಆಂದೋಲನ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈಶಾ ಫೌಂಡೇಶನ್ನ ಸಂಸ್ಥಾಪಕರಾದ ಸದ್ಗುರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರೆಸ್ಟೊರೆಂಟ್‌ಗಳು ಗ್ರಾಹಕರಿಗೆ ‘ಸೇವಾ ಶುಲ್ಕ’ ವಿಧಿಸುವಂತಿಲ್ಲ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಅವರು ಹೇಳಿದ್ದಾರೆ. ಆದರೆ ಗ್ರಾಹಕರು ಸ್ವ ಇಚ್ಛೆಯಿಂದ ಪ್ರತ್ಯೇಕವಾಗಿ “ಟಿಪ್ಸ್” ನೀಡಬಹುದು.
ನವಜಾತ ಶಿಶುಗಳು ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಶೀಘ್ರದಲ್ಲೇ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ (ABHA) ಅಥವಾ ಆರೋಗ್ಯ ಸಂಖ್ಯೆಯನ್ನು ಪಡೆಯುತ್ತಾರೆ.
ಭವಿಷ್ಯದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಗುರಿಯನ್ನಿಟ್ಟುಕೊಂಡು’ ಪಿಎಂ ಶ್ರೀ ಶಾಲೆಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ದೇಶದ ಮೊದಲ ಸೂಪರ್‌ಫಾಸ್ಟ್ ರೈಲು ಡೆಕ್ಕನ್ ಕ್ವೀನ್‌ನ 92 ವರ್ಷಗಳ ಸವಿ ನೆನಪಿಗಾಗಿ, ಜರ್ಮನ್ ತಂತ್ರಜ್ಞಾನದಲ್ಲಿ ತಯಾರಿಸಲಾದ ಅಲ್ಟ್ರಾಮೋಡರ್ನ್ ಮತ್ತು ಸುರಕ್ಷಿತ ಎಲ್‌ಎಚ್‌ಬಿ ಕೋಚ್‌ಗಳ ಹಲಬುಗಳೊಂದಿಗೆ (rakes) ರೈಲನ್ನು ಓಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.
ಮಂಕಿಪಾಕ್ಸ್ ಅಪರೂಪದ ಕಾಯಿಲೆಯಾಗಿದ್ದು, ಸಿಡುಬಿಗಿಂತ ಕಡಿಮೆ ತೀವ್ರತೆ ಹೊಂದಿದೆ. ಸಾಮಾನ್ಯವಾಗಿ ಪಶ್ಚಿಮ ಮತ್ತು ಮಧ್ಯ ಆಫ್ರಿಕಾಕ್ಕೆ ಸೀಮಿತವಾಗಿದ್ದ ಈ ಕಾಯಿಲೆ ಮೇ ತಿಂಗಳಿನಿಂದ ಯುರೋಪ್ ನಲ್ಲಿಯೂ ಕಂಡುಬರುತ್ತಿದೆ.
ತಮಿಳುನಾಡಿನಲ್ಲಿ ಸಂಗ್ರಹಿಸಿದ ಕೋವಿಡ್ ಮಾದರಿಗಳಲ್ಲಿ 12 ಮಂದಿಗೆ ಒಮಿಕ್ರಾನ್ ಉಪತಳಿಯ ಹೊಸ ರೂಪಾಂತರಗಳಾದ ಬಿಎ4 ಮತ್ತು ಬಿಎ5 ಪತ್ತೆಯಾಗಿದೆ.
ಪ್ರವಾಸೋದ್ಯಮ ವಿಶೇಷ ಪ್ಯಾಕೇಜ್‌ಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ರೈಲ್ವೆ ಇಲಾಖೆಯು ಭಾರತ್ ಗೌರವ್ ಯೋಜನೆಯನ್ನು ಪರಿಚಯಿಸಿದ್ದು, ಕರ್ನಾಟಕ ಸರ್ಕಾರವು ಎರಡು ತಿಂಗಳೊಳಗೆ ಬೆಂಗಳೂರಿನಿಂದ ಕಾಶಿ, ಅಯೋಧ್ಯೆ ಮತ್ತು ಪ್ರಯಾಗ್‌ರಾಜ್‌ಗೆ ಪ್ರವಾಸಿ ರೈಲುಗಳ ಭಾಗವಾಗಿರುವ ಮೊದಲ ‘ಭಾರತ್ ಗೌರವ್’ ರೈಲು ಸಂಚಾರ ಆರಂಭಿಸಲು ಉತ್ಸುಕವಾಗಿದೆ.
ಮುಂಬರುವ ದಿನಗಳಲ್ಲಿ ಗ್ರಾಮ ಒನ್ ಕೇಂದ್ರವನ್ನು ರಾಜ್ಯಾದ್ಯಂತ ಪ್ರಾರಂಭಿಸಲು ಸೂಕ್ತ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಮುಖ್ಯಮಂತ್ರಿಗಳ ಅಮೃತ ನಗರೋತ್ಧಾನ ಯೋಜನೆಯಡಿ ನಗರ ಸ್ಥಳೀಯ ಸಂಸ್ಥೆಗಳ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಮೂರು ವರ್ಷಗಳ ಬದಲಾಗಿ ಎರಡು ವರ್ಷಗಳಲ್ಲಿಯೇ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಎರಡನೇ ಮಕ್ಕಳ ಸ್ನೇಹಿ ಪ್ರದೇಶಕ್ಕೆ ಯಶವಂತಪುರ ರೈಲು ನಿಲ್ದಾಣದಲ್ಲಿ ರೈಲ್ವೆ ಸುರಕ್ಷತಾ ಪಡೆ ಚಾಲನೆ ನೀಡಿದೆ. ಆರ್ ಪಿಎಫ್ ಔಟ್ ಫೋಸ್ಟ್ ಬಳಿಯ ಪ್ಲಾಟ್ ಫಾರಂ ನಂಬರ್ 1 ರಲ್ಲಿ ಸುಮಾರು 400 ಚದರ ಅಡಿ ವಿಸ್ತೀರ್ಣದಲ್ಲಿ ‘ಖುಷಿ ಹಬ್” ತಲೆ ಎತ್ತಿದೆ.
ರಾಜ್ಯದಲ್ಲಿ ಪ್ರತಿ 3ನೇ ಶನಿವಾರ ವಿದ್ಯುತ್ ಅದಾಲತ್ ನಡೆಸಬೇಕು ಎಂದು ಇಂಧನ ಸಚಿವ ಸುನೀಲ್ ಕುಮಾರ್ಅವರು ಸೂಚನೆ ನೀಡಿದ್ದಾರೆ.
ಬೈಯಪ್ಪನಹಳ್ಳಿ ಬಳಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣವಾಗಿರುವ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೇ ಟರ್ಮಿನಲ್ ನಲ್ಲಿ ಜೂನ್ 6 ರಂದು ರೈಲು ಸಂಚಾರ ಆರಂಭಗೊಳ್ಳಲಿದೆ.
NammaKPSC Current Affairs - April 2022
ಚುಟುಕು ಸಮಾಚಾರ
ಇಂದು ವಿಶ್ವ ಭೂ ದಿನ. ಭೂಮಿ ಸುರಕ್ಷಿತವಾಗಿದ್ದರೆ ಮಾತ್ರ ಜೀವಿಗಳ ಉಳಿವು, ಆರೋಗ್ಯ ಎಲ್ಲವೂ ಸಾಧ್ಯ. ಈ ಬಾರಿ ವಿಶ್ವ ಭೂ ದಿನವನ್ನು ‘ನಮ್ಮ ಭೂಮಿಯಲ್ಲಿ ಹೂಡಿಕೆ ಮಾಡಿ’ (Invest in our Planet) ಎನ್ನುವ ಥೀಮ್‌ನಡಿಯಲ್ಲಿ ಭೂಮಿಯ ಉಳಿವಿಗೆ ಕೈಜೋಡಿಸಿ ಎನ್ನುವ ಅರ್ಥದಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ.
ನಾಸಾದ ಪರ್ಸಿವೆರೆನ್ಸ್ ಮಾರ್ಸ್ ರೋವರ್ ಮಂಗಳ ಗ್ರಹದಲ್ಲಿ ಸೂರ್ಯಗ್ರಹಣದ ದೃಶ್ಯವವೊಂದನ್ನು ಸೆರೆಹಿಡಿದಿದೆ. ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್) ಪ್ರಕಾರ, ಎಸ್‌ಯುವಿ ಗಾತ್ರದ ರೋವರ್‌ನಲ್ಲಿರುವ ಕ್ಯಾಮೆರಾ, ಮಂಗಳ ಗ್ರಹದ ನೈಸರ್ಗಿಕ ಉಪಗ್ರಹ ಫೋಬೋಸ್ ಸೂರ್ಯನ ಮುಂದೆ ಹಾದು ಹೋಗುವ ದೃಶ್ಯವನ್ನು ಸೆರೆಹಿಡಿದಿದೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಹಯೋಗದೊಂದಿಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಸಂಶೋಧಕರು ಮಂಗಳ ಗ್ರಹದಲ್ಲಿ ಕಟ್ಟಡದಂತಹ ರಚನೆಗಳನ್ನು ನಿರ್ಮಿಸಲು ಬಳಸಬಹುದಾದ “ಬಾಹ್ಯಾಕಾಶ ಇಟ್ಟಿಗೆಗಳನ್ನು ಅಭಿವೃದ್ಧಿಪಡಿಸಿದ್ದಾರೆ.
ಉಕ್ರೇನ್‌ನೊಂದಿಗೆ ಯುದ್ಧದಲ್ಲಿ ನಿರತವಾಗಿರುವಾಗಲೇ ರಷ್ಯಾ ಅತ್ಯಂತ ವಿಧ್ವಂಸಕಾರಿ ಖಂಡಾಂತರ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದೆ. ಸರ್ಮತ್ ಹೆಸರಿನ ಈ ಖಂಡಾಂತರ ಕ್ಷಿಪಣಿ, ಪರಮಾಣು ಸಿಡಿತಲೆಗಳನ್ನು ಹೊತ್ತು ಇಡೀ ಭೂಮಿಯನ್ನು ಒಂದು ಸುತ್ತು ಸುತ್ತಬಲ್ಲ ಸಾಮರ್ಥ್ಯ ಹೊಂದಿದೆ.
ಭಾರತದ ಅತ್ಯಂತ ಯಶಸ್ವೀ ಕ್ಷಿಪಣಿ ಎಂದೇ ಖ್ಯಾತಿ ಗಳಿಸಿರುವ ಬ್ರಹ್ಮೋಸ್ ಕ್ಷಿಪಣಿಯ ‘ಡಬಲ್ ಹಿಟ್’ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದ್ದು, ನೌಕೆ ಮತ್ತು ಯುದ್ಧ ವಿಮಾನದ ಮೂಲಕ ಒಂದೇ ಗುರಿ ಧ್ವಂಸ ಮಾಡುವ ಪರೀಕ್ಷೆ ಯಶಸ್ವಿಯಾಗಿದೆ.
ಭಾರತೀಯ ನೌಕಾದಳ ಸಾಮರ್ಥ್ಯ ಮತ್ತಷ್ಟು ಹೆಚ್ಚಳವಾಗಿದ್ದು, ಐಎನ್‌ಎಸ್ ವಾಗ್ಶೀರ್ ಜಲಾಂತರ್ಗಾಮಿ ನೌಕೆ ಲೋಕಾರ್ಪಣೆಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸಿಖ್‌ರ ಧರ್ಮಗುರು ಶ್ರೀ ಗುರು ತೇಜ್ ಬಹದ್ದೂರ್ ಅವರ 400ನೇ ಪ್ರಕಾಶ ಪೂರಬ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದರು
ಭಾರತದ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ ಯೋಜನೆಗೆ (ಪಿಎಲ್‌ಐ) ಭಾರಿ ಬೆಂಬಲ ಲಭಿಸಿದ್ದು, 14 ಕ್ಷೇತ್ರಗಳಲ್ಲಿ 2.34 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ನೀತಿ ಆಯೋಗವು ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸುವ ಬ್ಯಾಟರಿಗಳ ವಿನಿಮಯಕ್ಕೆ ಸಂಬಂಧಿಸಿ ಹೊಸ ನೀತಿಯ ಕರಡನ್ನು ಅನಾವರಣಗೊಳಿಸಿದೆ.
ದೇಶದ ಆಯುಷ್ ಉತ್ಪನ್ನಗಳ ಗುಣಮಟ್ಟ ದೃಢೀಕರಿಸುವುದಕ್ಕಾಗಿ ಶೀಘ್ರದಲ್ಲೇ ‘ಆಯುಷ್ ಮಾರ್ಕ್’ ಆರಂಭಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು
ಅಪರಾಧಿಗಳ ಮತ್ತು ಆರೋಪಿಗಳ ದೈಹಿಕ ಹಾಗೂ ಜೈವಿಕ ಮಾದರಿಗಳನ್ನು ಪಡೆಯಲು ಪೊಲೀಸರಿಗೆ ಅಧಿಕಾರ ನೀಡುವ ಕ್ರಿಮಿನಲ್ ಪ್ರೊಸೀಜರ್ (ಗುರುತು) ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಹಾಕಿದ್ದಾರೆ.
ಕರ್ನಾಟಕ ಪುರಸಭೆಗಳ ಕಾಯ್ದೆ 1964ರ ಸೆಕ್ಷನ್ 42(2) ರ ಅಡಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಕೌನ್ಸಿಲರ್‌ಗಳು ಪೌರಾಡಳಿತ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಚುಟುಕು ಸಮಾಚಾರ
ಪರಮಾಣು ಶಕ್ತಿ ಆಯೋಗದ ಅಧ್ಯಕ್ಷ ಕಮಲೇಶ್ ನೀಲಕಂಠ ವ್ಯಾಸ್ ಅವರಿಗೆ ಸರ್ಕಾರ ಒಂದು ವರ್ಷದ ಸೇವಾವಧಿ ವಿಸ್ತರಣೆಯನ್ನು ನೀಡಿದೆ.
ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ತಯಾರಿಸಲಾದ ಅಲಯನ್ಸ್ ಏರ್ ಸಂಸ್ಥೆಯ ಡಾರ್ನಿಯರ್ 228 ವಾಣಿಜ್ಯ ವಿಮಾನ ದಿಬ್ರುಗಢ್, ಅಸ್ಸಾಂನಿಂದ ಪಸಿಘಾಟ್‌ವರೆಗೆ ಹಾರಿದ್ದು, ವಾಯುಯಾನದ ಇತಿಹಾಸದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಿದೆ.
ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕ ಯಂತ್ರ, ಇದುವರೆಗಿನ ಅತ್ಯಂತ ಬೃಹತ್ ಧೂಮಕೇತುವೊಂದನ್ನು ಪತ್ತೆಹಚ್ಚಿದೆ. ಬರೋಬ್ಬರಿ 80 ಮೈಲುಗಳ ಸುತ್ತಳತೆ ಹೊಂದಿರುವ ಈ ಧೂಮಕೇತು, ಮಾನವ ಜನಾಂಗ ಬಲ್ಲ ಅತ್ಯಂತ ದೈತ್ಯ ಧೂಮಕೇತುವಾಗಿದೆ ಎಂದು ನಾಸಾದ ಖಗೋಳ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
ಉಕ್ರೇನ್ ಮತ್ತು ರಷ್ಯಾದಿಂದ ಅತಿ ಹೆಚ್ಚು ಗೋಧಿ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಒಂದಾಗಿರುವ ಈಜಿಪ್ಟ್ ಈಗ ಭಾರತವನ್ನು ಗೋಧಿ ಪೂರೈಕೆದಾರರನ್ನಾಗಿ ಅನುಮೋದಿಸಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಹೇಳಿದ್ದಾರೆ.
ಭಾರತದ ಕಡು ಬಡತನ ಪ್ರಮಾಣವು 2011ರಲ್ಲಿ ಇದ್ದುದಕ್ಕಿಂತ 2019ರಲ್ಲಿ ಶೇ 12.3ರಷ್ಟು ಕಡಿಮೆಯಾಗಿದೆ ಎಂದು ವಿಶ್ವ ಬ್ಯಾಂಕ್ ನೀತಿ ಸಂಶೋಧನೆಯ ಪ್ರಾಥಮಿಕ ವರದಿ ಹೇಳಿದೆ.
ಈ ವರ್ಷ ದೇಶದಲ್ಲಿ ಮುಂಗಾರು ಮಳೆ ‘ಸಾಮಾನ್ಯ’ವಾಗಿ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ನೈರುತ್ಯ ಮುಂಗಾರು ಮಾರುತಗಳು ಈ ವರ್ಷ ಪ್ರತಿ ಬಾರಿಯಂತೆ ಇರಲಿದ್ದು, ದೇಶಾದ್ಯಂತ ಸರಾಸರಿ 87 ಸೆಂಟಿ ಮೀಟರ್ ಇರಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ 108 ಅಡಿ ಎತ್ತರದ ಭಗವಾನ್ ಹನುಮಾನ್ ಪ್ರತಿಮೆಯನ್ನು ಅನಾವರಣ ಮಾಡಿದ್ದಾರೆ.
ಜಗದ್ಗುರು ಡಾ: ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಗಳ ಜನ್ಮದಿನವನ್ನು ಭಾವೈಕ್ಯ ದಿನವನ್ನಾಗಿ ಆಚರಿಸಲಾಗುವುದು. ಈ ಕುರಿತು ಶೀಘ್ರದಲ್ಲೇ ಸರ್ಕಾರಿ ಆದೇಶವನ್ನು ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ರಾಜ್ಯದ ಮುಜರಾಯಿ ಇಲಾಖೆಯ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಭಕ್ತರಿಕೆ ನೀಡುವ ಭೋಜನ ಪ್ರಸಾದವು ರಾಷ್ಟ್ರೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಪ್ರಮಾಣಪತ್ರ ಪಡೆದುಕೊಂಡಿದೆ.
ಚುಟುಕು ಸಮಾಚಾರ
ಲೇಖಕಿ ಗೀತಾಂಜಲಿ ಶ್ರೀ ಅವರ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ.
ಘನ ಇಂಧನ ಸಾಮರ್ಥ್ಯದ ಡಕ್ಟೆಡ್ ರಾಮ್ಜೆಟ್ ಕ್ಷಿಪಣಿ ವ್ಯವಸ್ಥೆಯನ್ನು ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ (ಡಿಆರ್ ಡಿಒ) ಯಶಸ್ವಿ ಉಡಾವಣೆ ಮಾಡಿದೆ.
ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ (DRDO) ನಿರ್ಮಿತ ಪಿನಾಕಾ ರಾಕೆಟ್ ವ್ಯವಸ್ಥೆಯ ಹೊಸ ಆವೃತ್ತಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.
ರಷ್ಯಾದ ಆಕ್ರಮಣದಿಂದಾಗಿ ಉಕ್ರೇನ್‌ನ ಆರ್ಥಿಕತೆಯು ಈ ವರ್ಷ ಶೇಕಡಾ 45.1 ರಷ್ಟು ಕುಸಿಯಲಿದೆ.ಯುದ್ಧದಿಂದಾಗಿ ದೇಶದ ಅರ್ಧದಷ್ಟು ವ್ಯವಹಾರಗಳನ್ನು ಸ್ಥಗಿತಗೊಳಿಸಿದೆ, ಆಮದು ಮತ್ತು ರಫ್ತುಗಳನ್ನು ಸ್ಥಗಿತಗೊಳಿಸಿದೆ, ಅಪಾರ ಪ್ರಮಾಣದಲ್ಲಿ ಮೂಲಸೌಕರ್ಯಗಳು ಹಾನಿಗೀಡಾಗಿವೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
ವಿದೇಶಿ ದೇಣಿಗೆ(ನಿಯಂತ್ರಣ) ಕಾಯ್ದೆ 2010ಕ್ಕೆ ಕೇಂದ್ರ ಮಾಡಿರುವ ತಿದ್ದುಪಡಿಗಳ ಸಿಂಧುತ್ವವನ್ನು ಎತ್ತಿಹಿಡಿಯುವ ಮೂಲಕ ವಿದೇಶಿ ದೇಣಿಗೆ ಪಡೆಯುವುದು ಸಂಪೂರ್ಣ ಅಥವಾ ಸೂಚಿತ ಹಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ದೇಶದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿರುವ ರಾಷ್ಟ್ರೀಯ ಸಹಕಾರಿ ಹೈನುಗಾರಿಕೆ ಮಹಾಮಂಡಲ( ಎನ್‌ಸಿಡಿಎಫ್ಐ)ವು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸು-ಸಂದರ್ಭದಲ್ಲಿ ಹಾಲು ಮತ್ತು ಹಾಲಿನ ಉತ್ಪಾದನೆ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ‘ಕೆಎಂಎಫ್’ ಗೆ ಪ್ರಶಸ್ತಿ ನೀಡಲಾಗಿದೆ
ಚುಟುಕು ಸಮಾಚಾರ
ಈ ಬಾರಿಯ ವಿಶ್ವ ಆರೋಗ್ಯ ದಿನದ (ಏ. 7) ಧ್ಯೇಯ‘Our planet, our health’- ‘ನಮ್ಮ ಗ್ರಹ, ನಮ್ಮ ಆರೋಗ್ಯ’
ರೂಪೆ ಕಾರ್ಡ್ ಹೊಂದಿರುವವರು ಇನ್ನು ಮುಂದೆ ನೇಪಾಳದಲ್ಲಿ ಪಾವತಿ ವಹಿವಾಟು ನಡೆಸಬಹುದು. ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರು ನೇಪಾಳದಲ್ಲಿ ರೂಪೆ ವಹಿವಾಟು ಆರಂಭಕ್ಕೆ ಚಾಲನೆ ನೀಡಿದ್ದಾರೆ.
ಭಾರತ 122 ವರ್ಷಗಳಲ್ಲೇ 2022 ರ ಮಾರ್ಚ್ ತಿಂಗಳು ಅತಿ ಹೆಚ್ಚು ಉಷ್ಣಾಂಶ ದಾಖಲಾದ ಮಾಸವಾಗಿದೆ ಎಂದು ಭಾರತದ ಹವಾಮಾನ ಇಲಾಖೆ ಹೇಳಿದೆ.
ಭಾರತವು ರಷ್ಯಾ-ವಿನ್ಯಾಸಗೊಳಿಸಿದ 12 ಸುಖೊಯ್-30 ಎಮ್ ಕೆ ಐ ಗಳ ಖರೀದಿಯ ವ್ಯವಹಾರಕ್ಕೆ ಸಹಿ ಹಾಕಲಿದೆ ಎಂದು ವರದಿಯಾಗಿದ್ದು, ಈ ವ್ಯವಹಾರ ರೂ 10,000 ಕೋಟಿ ಮೊತ್ತದ್ದಾಗಿದೆ.
ಸಾಮೂಹಿಕ ನಾಶ ಶಸ್ತ್ರಾಸ್ತ್ರಗಳು ಹಾಗೂ ಅವುಗಳ ವಿತರಣಾ ವ್ಯವಸ್ಥೆಗಳ (ಕಾನೂನುಬಾಹಿರ ಚಟುವಟಿಕೆಗಳ ನಿಷೇಧ) ಕಾಯ್ದೆ’ ತಿದ್ದುಪಡಿಗೆ ಸಂಬಂಧಿಸಿದ ಮಸೂದೆಯನ್ನು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಲೋಕಸಭೆಯಲ್ಲಿ ಮಂಡಿಸಿದರು.
ದೇಶದಲ್ಲಿಯೇ ಮೊದಲ ಬಾರಿಗೆ ಸಾವಯವ ಕೃಷಿಯತ್ತ ಗಮನ ಹರಿಸಿರುವ ರಾಜ್ಯ ಸರ್ಕಾರ, ಯಾವುದೇ ರಾಸಾಯನಿಕ ಮತ್ತು ಕ್ರಿಮಿನಾಶಕ ಬಳಸದೆ ರಾಜ್ಯದ ನಾಲ್ಕು ವಿಜ್ಞಾನ ವಿಶ್ವವಿದ್ಯಾಲಯಗಳಲ್ಲಿ ತಲಾ 1, 000 ಎಕರೆಯಂತೆ 4,000 ಎಕರೆ ಭೂಮಿಯಲ್ಲಿ ಬೆಳೆ ಬೆಳೆಯಲು ಮುಂದಾಗಿದೆ.
ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನೀಡುವ 2020-21ನೇ ಸಾಲಿನ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ, ಕ್ರೀಡಾರತ್ನ ಹಾಗೂ ಕ್ರೀಡಾ ಪೋಷಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಘೋಷಿಸಲಾಗಿದೆ.
ಬೆಂಗಳೂರು ಮೂಲದ ಸಂಗೀತ ನಿರ್ದೇಶಕ ರಿಕಿ ಕೇಜ್ ಅವರು 2022ನೇ ಸಾಲಿನ ಪ್ರತಿಷ್ಟಿತ ಅಂತಾರಾಷ್ಟ್ರೀಯ ಪ್ರಶಸ್ತಿಯಾದ ಗ್ರ್ಯಾಮಿಯನ್ನು ಗೆದ್ದುಕೊಂಡಿದ್ದಾರೆ. ಇದು ಅವರ ಎರಡನೇ ಗೆಲುವಾಗಿದೆ. ಈ ಹಿಂದೆ ‘ವಿಂಡ್ಸ್ ಆಫ್ ಸಂಸಾರ’ ಎನ್ನುವ ಆಲ್ಬಂಗೆ ಗ್ರ್ಯಾಮಿ ಗೆದ್ದುಕೊಂಡಿದ್ದರು
NammaKPSC Current Affairs - March 2022
ಚುಟುಕು ಸಮಾಚಾರ
ಪಹಣಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ಕಂದಾಯ ಇಲಾಖೆಯ ವಿವಿಧ ದಾಖಲೆಗಳನ್ನು ನೇರವಾಗಿ ರೈತರು ಮತ್ತು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ವಿನೂತನ ಯೋಜನೆಯಾದ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿಕ್ಕಬಳ್ಳಾಪುರ ತಾಲ್ಲೂಕಿನ ಪೋಶೆಟ್ಟಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಂಗಿರ್ಲಹಳ್ಳಿ ಗ್ರಾಮದಿಂದ ಚಾಲನೆ ನೀಡಿದರು.
ಕರ್ನಾಟಕದಲ್ಲಿ ತಾಯಂದಿರ ಮರಣ ಅನುಪಾತ (MMR) 2017-18 ರಲ್ಲಿ ಪ್ರತಿ ಲಕ್ಷ ಶಿಶುಗಳಿಗೆ 92, 2017-18 ರಲ್ಲಿ ಪ್ರತಿ ಲಕ್ಷ ಶಿಶುಗಳಿಗೆ 83ಕ್ಕೆ ಇಳಿದಿದೆ.
ಬೆಂಗಳೂರು, ತಿರುವನಂತಪುರಂ, ಹೈದರಾಬಾದ್, ಅಹಮದಾಬಾದ್ ಮತ್ತು ಶಿಲ್ಲಾಂಗ್ ನಲ್ಲಿ ಇಸ್ರೋ ಯುವಿಕಾ (ಯುವ ವಿಜ್ಞಾನಿ ಕಾರ್ಯಕ್ರಮ) ಆಯೋಜಿಸಲಿದೆ.
ಕರ್ನಾಟಕದಲ್ಲಿ ಏಪ್ರಿಲ್ 24 ರಿಂದ ಮೇ 3 ರವರೆಗೆ ಆಯೋಜಿಸಲಾಗಿರುವ ಖೇಲೋ ಇಂಡಿಯಾ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಮಲ್ಲಗಂಬ ಮತ್ತು ಯೋಗವನ್ನು ಸೇರಿಸಲಾಗುವುದು.
ರಷ್ಯಾಗೆ ರಫ್ತು ವಹಿವಾಟು ಕವರೇಜ್ ಹಿಂಪಡೆದಿಲ್ಲ ಎಂದು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಆಫ್ ಇಂಡಿಯಾ (ಇಸಿಜಿಸಿ) ಸ್ಪಷ್ಟನೆ ನೀಡಿದೆ.
ರಷ್ಯಾ ಸೇನೆಯ ದಾಳಿಗೆ ಅಸ್ತವ್ಯಸ್ತವಾಗಿರುವ ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಕರೆ ತರುವ ಆಪರೇಷನ್ ಗಂಗಾ ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ. ಈವರೆಗೆ 1,400 ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ವಾಪಸ್ ಕರೆ ತರಲಾಗಿದೆ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2022-23ರ ಬಜೆಟ್‌ನಲ್ಲಿ ಘೋಷಿಸಿರುವ ಪ್ರಸ್ತಾಪಗಳನ್ನು ಏಪ್ರಿಲ್‌ನಿಂದ ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಇಲಾಖೆಗಳಿಗೆ ಸೂಚಿಸಿದ್ದಾರೆ.
‘ಹಿಟ್ ಅಂಡ್ ರನ್’ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ ಕೈಗೊಂಡಿದೆ. ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಇನ್ಮುಂದೆ 8 ಪಟ್ಟು ಹೆಚ್ಚು ಪರಿಹಾರ ಸಿಗಲಿದೆ.
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಸ್ಥಗಿತಗೊಂಡಿದ್ದ ಹಂಪಿ ಬೈ ನೈಟ್ ಕಾರ್ಯಕ್ರಮವನ್ನು ಮತ್ತೆ ಆರಂಭಿಸಲು ವಿಜಯನಗರ ಜಿಲ್ಲಾಡಳಿತ ನಿರ್ಧರಿಸಿದೆ.
ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿ ‘ಜಲಶಕ್ತಿ ಯೋಜನೆಯನ್ನು ತಮ್ಮ ಸರ್ಕಾರ ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
NammaKPSC Current Affairs - January 2022
ಚುಟುಕು ಸಮಾಚಾರ
ಕಳೆದ ಡಿಸೆಂಬರ್ ನಲ್ಲಿ ಸೇವೆಯಿಂದ ಅಧಿಕೃತವಾಗಿ ನಿವೃತ್ತಿ ಹೊಂದಿದ ಭಾರತೀಯ ನೌಕಾಪಡೆಯ ಮೊದಲ ಸ್ವದೇಶಿ ನಿರ್ಮಿತ ಕ್ಷಿಪಣಿ ಕಾರ್ವೆಟ್ ಐಎನ್‌ಎಸ್ ಖುಕ್ರಿಯನ್ನು ಶೀಘ್ರದಲ್ಲೇ ಮ್ಯೂಸಿಯಂ ಆಗಿ ಪರಿವರ್ತನೆ ಮಾಡಲಾಗುವುದು ಎಂದು ಸೇನಾ ಮೂಲಗಳು ಹೇಳಿವೆ.
ಧನ್ಬಾದ್ ನಗರದ ಯುವಕರು ‘ನೇಕಿ ಕಿ ದೀವಾರ್’ ಎನ್ನುವ ಪರಿಕಲ್ಪನೆಯಡಿ ಗೋಡೆ ಮೇಲೆ ಸ್ವೆಟರ್ ಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.
ಮೈಸೂರು ಕೊಡಗಿನಾದ್ಯಂತ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 123ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ಹಾಸನ ಜಿಲ್ಲೆಯ ತೆಂಗಿನ ಬೆಳೆ ಆಯ್ಕೆಯಾಗಿದೆ.
ದಕ್ಷಿಣಭಾರತದ 10 ವಾಯುಮಾಲಿನ್ಯ ಪೀಡಿತ ನಗರಗಳ ಪಟ್ಟಿಯಲ್ಲಿ ರಾಜ್ಯದ ಮೂರು ನಗರಗಳು ಸ್ಥಾನಪಡೆದಿವೆ. ಪರಿಸರ ಕಾಳಜಿ ಕುರಿತು ಜಾಗೃತಿ ಮೂಡಿಸುವ ಸಂಸ್ಥೆ ಗ್ರೀನ್ ಪೀಸ್ ಇಂಡಿಯಾ ಈ ಮಾಹಿತಿಯನ್ನು ಹೊರಗೆಡವಿದೆ.
ಚುಟುಕು ಸಮಾಚಾರ
ಗಣರಾಜ್ಯೋತ್ಸವ ಕಾರ್ಯಕ್ರಮಗಳಿಗೆ ತೆರೆಎಳೆಯುವ ನಿಮಿತ್ತ ಜ.29ರಂದು ವಿಜಯ್‌ಚೌಕ್‌ನಲ್ಲಿ ನಡೆಸುವ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮದಿಂದ ‘ಅಬೈಡ್ ವಿತ್ ಮಿ’ ಗೀತೆ ಕೈಬಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ
ರಾಜ್ಯದಲ್ಲಿ ಭೂದಾಖಲೆಗಳ ಸುಗಮ ನಿರ್ವಹಣೆ, ಅಕ್ರಮಗಳನ್ನು ಕೊನೆಗಾಣಿಸಲು ಏಕೀಕೃತ ಭೂ-ನಿರ್ವಹಣಾ ವ್ಯವಸ್ಥೆ (ಯುಎಲ್‌ಎಂಎಸ್) ಜಾರಿಗೆ ತರಲು ಕಂದಾಯ ಇಲಾಖೆ ತಯಾರಿ ನಡೆಸಿದೆ
ಬೆಂಗಳೂರು ನಗರ 2020 ರ ಲಾಕ್ ಡೌನ್ ಅವಧಿಯಲ್ಲಿ ಸುಧಾರಣೆ ಕಂಡಿದ್ದ ವಾಯುಗುಣಮಟ್ಟವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಎಂಬ ವಿಷಯಾಧಾರಿತ ರಾಜ್ಯದ ಸ್ತಬ್ದಚಿತ್ರ ಈ ಬಾರಿಯ ಜನವರಿ 26ರ ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾಗಿದೆ.
ತಮಿಳು ನಾಡು ರಾಜ್ಯ ಸರ್ಕಾರ 4,600 ಕೋಟಿ ರೂಪಾಯಿ ವೆಚ್ಚದಲ್ಲಿ ಜಾರಿ ಮಾಡಲಿರುವ ಹೊಗೆನಕಲ್ ಕುಡಿಯುವ ನೀರಿನ ಎರಡನೇ ಹಂತದ ಯೋಜನೆಗೆ ಕರ್ನಾಟಕ ರಾಜ್ಯ ಆಕ್ಷೇಪ ವ್ಯಕ್ತಪಡಿಸಿದೆ
ಕನ್ನಡಕ್ಕೊಂದು ಹೊಸ ಫಾಂಟ್ ಅನ್ನು ಕನ್ನಡಿಗ ಟೈಪ್ ಡಿಸೈನರ್ ಮಂಜುನಾಥ ಪ್ರಸ್ತುತಪಡಿಸಿದ್ದಾರೆ.
ಚುಟುಕು ಸಮಾಚಾರ
ಹಾಲಿ ರಾಜಧಾನಿ ಜಕಾರ್ತ ಸಮುದ್ರದಲ್ಲಿ ಮುಳುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಇಂಡೋನೇಷ್ಯಾ ಸರ್ಕಾರ ತನ್ನ ನೂತನ ರಾಜಧಾನಿಯಾಗಿ ನುಸಂತರಾವನ್ನು ಆಯ್ಕೆ ಮಾಡಿದೆ.
ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸುಧಾರಿತ ಲಘು ಹೆಲಿಕಾಪ್ಟರ್ (ಎಎಲ್ಎಚ್ ಮಾರ್ಕ್ III) ನ ಸುಧಾರಿತ ಆವೃತ್ತಿ ರಫ್ತು ಒಪ್ಪಂದಕ್ಕೆ ಮಾರಿಷಸ್ ಸರ್ಕಾರದೊಂದಿಗೆ ಸಹಿ ಹಾಕಿದೆ.
ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ ಈಗ ‘ಸಾರಥಿ’ ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ.
ರಾಜ್ಯದ 10 ಕಡೆ ಚಿನ್ನದ ನಿಕ್ಷೇಪಗಳನ್ನು ಗುರುತಿಸಿರುವ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ 8 ಕಡೆ ಗಣಿ ಆರಂಭಕ್ಕೆ ಖಾಸಗಿ ಕಂಪನಿಗಳಿಗೆ ಹರಾಜು ಪ್ರಕ್ರಿಯೆಯನ್ನು ಆರಂಭಿಸಿದೆ. ಆ ಮೂಲಕ ರಾಜ್ಯದಲ್ಲಿ ಚಿನ್ನದ ಗಣಿಗಾರಿಕೆಗೆ ಹೊಸ ಪ್ರದೇಶಗಳನ್ನು ಸಜ್ಜುಗೊಳಿಸಲು ಸಿದ್ಧತೆಗಳು ನಡೆದಿವೆ.
ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕೃಷಿ ಸಚಿವ ಬಿ.ಸಿ.ಪಾಟೀಲರೊಂದಿಗೆ ಸಮಿತಿಯಲ್ಲಿ ಚರ್ಚಿಸಿ ನೀಡಿದ ಭರವಸೆಯಂತೆ “ಸೆಕೆಂಡರಿ ಅಗ್ರಿಕಲ್ಚರ್ “ನಿರ್ದೇಶನಾಲಯ ಸ್ಥಾಪಿಸಿ ಆದೇಶಿಸಿದೆ.
ಚುಟುಕು ಸಮಾಚಾರ
ಕಳೆದ ವರ್ಷ ಚೀನಾದ ಜನಸಂಖ್ಯೆ 5 ಲಕ್ಷಕ್ಕೂ ಕಡಿಮೆ ಏರಿಕೆ ಕಂಡಿದ್ದು, ಇದರೊಂದಿಗೆ ಸತತ 5 ವರ್ಷಗಳಿಂದ ದೇಶದ ಜನ ಪ್ರಮಾಣ ಕುಸಿತಕ್ಕೊಳಗಾದಂತಾಗಿದೆ.
ಕಾಲರ್ ವಾಲಿ ಮಾರತರಂ ಎಂದೇ ಪ್ರಸಿದ್ಧಿ ಪಡೆದಿದ್ದ ಮಧ್ಯಪ್ರದೇಶದ ಪೆಂಚ್ ಹುಲಿ ಸಂರಕ್ಷಿತ ಪ್ರದೇಶ(ಪಿಟಿಆರ್)ದಲ್ಲಿ ವಾಸವಿದ್ದ ಸುಮಾರು 16 ವರ್ಷದ ಹೆಣ್ಣು ಹುಲಿ ವಯೋ ಸಹಜ ಅನಾರೋಗ್ಯಕ್ಕೀಡಾಗಿ ಸಾವಿಗೀಡಾಗಿದೆ.
ಗುರು ರವಿದಾಸ್ ಜಯಂತಿಯನ್ನು ಗಮನದಲ್ಲಿಟ್ಟುಕೊಂಡು ಪಂಜಾಬ್‌ನಲ್ಲಿ ಫೆಬ್ರವರಿ 14 ರಂದು ನಿಗದಿಯಾಗಿದ್ದ ವಿಧಾನಸಭೆ ಚುನಾವಣೆಯನ್ನು ಫೆಬ್ರವರಿ 20 ರಂದು ಒಂದೇ ಹಂತದಲ್ಲಿ ಮತದಾನ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.
ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಗಣರಾಜ್ಯೋತ್ಸವದ ಸಮಿತಿ ತಿರಸ್ಕಾರ ಮಾಡಿರುವ ವಿಚಾರ ರಾಜಕೀಯವಾಗಿ ಭಾರೀ ಸದ್ದು ಗದ್ದಲಕ್ಕೆ ಕಾರಣವಾಗುತ್ತಿದೆ.
ರೈತರಿಗೆ ಬಲ ತುಂಬಲು ರಾಜ್ಯ ಸರ್ಕಾರ ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ (ಪಿಎಂಎಫ್ಎಂಇ) ಯೋಜನೆಗೆ ಸಹಾಯಧನವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.
ರಾಜ್ಯದ 7 ಜಿಲ್ಲೆಗಳಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಅನುದಾನದ ಸಮಸ್ಯೆ ಇಲ್ಲದಿದ್ದರೂ ಕೊರೊನಾ ಕುಂಟು ನೆಪ ಹೇಳಿ ಕಾಮಗಾರಿಯ ಅಂತಿಮ ಗಡುವನ್ನು ವಿಸ್ತರಿಸಿಕೊಳ್ಳಲಾಗಿದೆ.
ಚುಟುಕು ಸಮಾಚಾರ
ಜನವರಿ 16ರ ದಿನವನ್ನು ರಾಷ್ಟ್ರೀಯ ನವೋದ್ಯಮ ದಿನ (ಸ್ಟಾರ್ಟ್‌ಅಪ್ ಡೇ) ಎಂದು ಆಚರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಪೆಸಿಫಿಕ್ ದ್ವೀಪ ರಾಷ್ಟ್ರ ಟೊಂಗಾದಲ್ಲಿ ನೀರಿನಡಿಯ ಹಂಗಾ ಟೊಂಗಾ-ಹಂಗಾ ಹಾಪೈ ಅಗ್ನಿಪರ್ವತ ಸ್ಫೋಟಗೊಂಡ ಪರಿಣಾಮ ಉಂಟಾಗಿರುವ ಸುನಾಮಿ ಭೀತಿ ಉಂಟಾಗಿದೆ. ಅಮೆರಿಕ, ಜಪಾನ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಭಾರತದಿಂದ ಕಾಣೆಯಾಗಿದ್ದ 10ನೇ ಶತಮಾನದ ಬೆಲೆಬಾಳುವ ಯೋಗಿನಿ ವಿಗ್ರಹ ಇಂಗ್ಲೆಂಡ್‌ನಲ್ಲಿ ಪತ್ತೆಯಾಗಿದ್ದು, ಅದನ್ನು ಮಕರ ಸಂಕ್ರಾಂತಿಯ ಹಬ್ಬದಂದು ಭಾರತಕ್ಕೆ ಹಸ್ತಾಂತರಿಸಲಾಗಿದೆ
ವಿಶ್ವದ ಅತ್ಯಂತ ವೇಗದ ಸೂಪರ್ಸಾನಿಕ್ ಕ್ಷಿಪಣಿ ಎಂದೇ ಹೆಸರಾದ ಬ್ರಹ್ಮೋಸ್ ಖರೀದಿಸಲು ಫಿಲಿಪ್ಪೀನ್ಸ್ ಬೇಡಿಕೆ ಸಲ್ಲಿಸಿದೆ. ಈ ಸಂಬಂಧ ಭಾರತ ಮತ್ತು ಫಿಲಿಪೈನ್ಸ್ ನಡುವೆ ಒಪ್ಪಂದವಾಗಲಿದೆ.
ಸುದ್ಧಿಯಲ್ಲಿ ಏಕಿದೆ ? ಭಾರತೀಯ ಸೇನೆ ವಿನೂತನ ಯುದ್ಧ ಸಮವಸ್ತ್ರವನ್ನು ಅನಾವರಣಗೊಳಿಸಿದೆ. ಇದು ಯೋಧರಿಗೆ ಹಿತಕರವಾದ, ಹವಾಮಾನ ಸ್ನೇಹಿ ಮತ್ತು ಡಿಜಿಟಲ್ ಡಿಸ್ರಪ್ಟಿವ್ ಮಾದರಿಯ ವೈಶಿಷ್ಟ್ಯವನ್ನು ಒಳಗೊಂಡಿದೆ. ಮುಖ್ಯಾಂಶಗಳು ಸೇನಾ ದಿನ ಪಥಸಂಚಲನ ಸಂದರ್ಭದಲ್ಲಿ ಪ್ಯಾರಾಚೂಟ್ ರೆಜಿಮೆಂಟ್‌ನ ಕಮಾಂಡೋ ತಂಡ ಹೊಸ ಸಮವಸ್ತ್ರಗಳನ್ನು ಧರಿಸಿ ಕಾಣಿಸಿಕೊಂಡಿದೆ. ಆಲೀವ್ ಮತ್ತು ಮಣ್ಣಿನ ಬಣ್ಣಗಳ ಮಿಶ್ರಣವಾಗಿರುವ ಹೊಸ ಸೇನಾ ಸಮವಸ್ತ್ರ, ಸೇನಾ ಪಡೆಗಳನ್ನು ನಿಯೋಜಿಸುವ ಪ್ರದೇಶಗಳು ಮತ್ತು ಅವರು ಕಾರ್ಯ ನಿರ್ವಹಣೆ ಮಾಡುವ ವಾತಾವರಣ ಪರಿಸ್ಥಿತಿಗಳಂತಹ ಸಂಗತಿಗಳನ್ನು ಗಮನದಲ್ಲಿ ಇರಿಸಿಕೊಂಡು […]
ಡಬಲ್ಡ್ ಹ್ಯಾಪ್ಲಾಯ್ಡ್’ ವಿಧಾನದ ಮೂಲಕ ಮೆಕ್ಕೆ ಜೋಳದ ಹೈಬ್ರಿಡ್ ತಳಿಗಳ ಅಭಿವೃದ್ಧಿಗೆ ಅಗತ್ಯ ಪೋಷಕ ಸಾಲುಗಳನ್ನು (ಪೇರೆಂಟಲ್ ಲೈನ್ಸ್) ಕೃತಕವಾಗಿ ಉತ್ಪಾದಿಸುವ ಕೇಂದ್ರವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಕುಣಿಗಲ್‌ನಲ್ಲಿ ಆರಂಭಿಸಲಾಗಿದೆ.
ನವೋದ್ಯಮಗಳ ಉತ್ತೇಜನಕ್ಕಾಗಿ ಕೇಂದ್ರ ಸರಕಾರ ನೀಡುವ ‘ಸ್ಟಾರ್ಟ್‌ಅಪ್ ಅವಾರ್ಡ್’ನಲ್ಲಿ ಕರ್ನಾಟಕ ಅಗ್ರ ಸ್ಥಾನ ಪಡೆದಿದೆ. ಈ ಬಾರಿ ಘೋಷಿಸಲಾದ 46 ‘ರಾಷ್ಟ್ರೀಯ ಸ್ಟಾರ್ಟ್‌ಅಪ್ ಅವಾರ್ಡ್’ಗಳ ಪೈಕಿ 14 ಪ್ರಶಸ್ತಿಗಳು ರಾಜ್ಯದ ಪಾಲಾಗಿವೆ.
ಮನೆ ಮನೆಗೆ ಅನಿಲ ಸಂಪರ್ಕ ಒದಗಿಸುವ ಮೂಲಕ ಸಿಲಿಂಡರ್ ಗೊಡವೆ ತಪ್ಪಿಸುವ ಕೇಂದ್ರ ಸರ್ಕಾರದ ಅನಿಲ ಕೊಳವೆ ಸಂಪರ್ಕ ಯೋಜನೆಯಡಿ ರಾಜ್ಯದ ಚಿಕ್ಕಬಳ್ಳಾಪುರ ಮತ್ತು ಯಾದಗಿರಿ ಆಯ್ಕೆಯಾಗಿದೆ.
ಚುಟುಕು ಸಮಾಚಾರ
ಪ್ರತಿ ವರ್ಷ ಜನವರಿ 15ರಂದು ಭಾರತದಲ್ಲಿ ಸೇನಾ ದಿನ ಆಚರಿಸಲಾಗುತ್ತಿದೆ. ಯೋಧರಿಗೆ ಗೌರವ ಸಮರ್ಪಿಸುವ ಸಲುವಾಗಿ ದೇಶದ ಎಲ್ಲ ಸೇನಾ ಕಮಾಂಡ್‌ಗಳ ಪ್ರಧಾನ ಕಚೇರಿಗಳಲ್ಲಿ ಸೇನಾ ದಿನ ಆಚರಿಸಲಾಗುತ್ತದೆ.
ತಮಿಳುನಾಡಿನ ಮಧುರೈ ಜಿಲ್ಲೆಯ ಅವನಿಯಪುರಂನಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. 300 ಗೂಳಿಗಳನ್ನು ಬೆದರಿಸಲು ಅಖಾಡಕ್ಕೆ ಬಿಡಲಾಯಿತು.
ಸರ್ಸಿಸ್ ಬ್ಲೂ ತಳಿಯ ಚಿಟ್ಟೆ ಭೂಮಿ ಮೇಲಿಂದ ನಶಿಸಿ ಹೋಗಿದೆ ಎಂದೇ ನಂಬಲಾಗಿತ್ತು. ಆ ತಳಿಯ ಚಿಟ್ಟೆ ನಶಿಸಿದೆ ಎಂದು 80 ವರ್ಷಗಳ ಹಿಂದೆಯೇ ಅಂದರೆ 1941ರಲ್ಲಿ ಷರಾ ಬರೆಯಲಾಗಿತ್ತು. ಈಗ ಅದೇ ಚಿಟ್ಟೆಯನ್ನು ಮಧ್ಯಪ್ರದೇಶದಲ್ಲಿ ಸಂಶೋಧಕರು ಪತ್ತೆಹಚ್ಚಿದ್ದಾರೆ.
ಜಲಾನಯನ ಅಭಿವೃದ್ಧಿ ಇಲಾಖೆಯಡಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ – ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆಯಡಿ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ 642.26 ಕೋಟಿ ಮಂಜೂರಾಗಿರುವುದಾಗಿ ಕೃಷಿ ಸಚಿವ ಬಿ. ಸಿ. ಪಾಟೀಲ್ ಮಾಹಿತಿ ನೀಡಿದರು.
ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆಗೆ ಅಳವಡಿಸಿರುವ ಟೆಸ್ಟಿಂಗ್, ಟ್ರಾಕಿಂಗ್, ಟ್ರೇಸಿಂಗ್, ಟ್ರಯಾಜಿಂಗ್ ಮತ್ತು ಟೆಕ್ನಾಲಜಿ ಬಳಕೆಯ 5 ಟಿ ಸೂತ್ರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಚುಟುಕು ಸಮಾಚಾರ
18ನೇ ಶತಮಾನದಲ್ಲಿ ಭಾರತ ದೇಶ ಕಂಡ ಶ್ರೇಷ್ಠ ಧರ್ಮಗುರು, ತತ್ವಜ್ಞಾನಿ, ಸಮಾಜ ಸುಧಾರಕ, ಹಿಂದೂ ಧರ್ಮ ಪ್ರತಿಪಾದಕ ಸ್ವಾಮಿ ವಿವೇಕಾನಂದ. ಇಂದು ಜನವರಿ 12, ಅವರ 159ನೇ ಜನ್ಮಜಯಂತಿ. ಈ ದಿನವನ್ನು ನಾವು ರಾಷ್ಟ್ರೀಯ ಯುವ ದಿನ ಎಂದು ಆಚರಿಸುತ್ತೇವೆ.
ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರಕಟವಾಗಿದೆ.
ರಕ್ಷಣೆ ಮತ್ತು ಅಂತರಿಕ್ಷ ಯಾನ ತಂತ್ರಜ್ಞಾನಗಳ ಪ್ರಚಾರದ ಮೂಲಕ ಭಾರತ ಮತ್ತು ಸೌದಿ ಅರೇಬಿಯಾವನ್ನು ಹತ್ತಿರ ತರಲು ಸೌದಿ ಅರೇಬಿಯಾದ ಪವರ್ ಫಾರ್ ಡಿಫೆನ್ಸ್ ಟೆಕ್ನಾಲಜೀಸ್ ಕಂಪನಿ (ಪಿಡಿಟಿಸಿ) ಸಂಸ್ಥೆಯು ಭಾರತದ ನವರತ್ನ ಡಿಫೆನ್ಸ್ ಪಿಎಸ್‌ಯು, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ( DRDO) ಮ್ಯಾನ್-ಪೋರ್ಟಬಲ್ ಆಂಟಿ-ಟ್ಯಾಂಕ್ ಗೈಡೆಡ್ ಮಿಸೈಲ್ ಅನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಿದೆ.
ಆರೋಗ್ಯ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಲಾಗಿದೆ. ಅಮೆರಿಕದ ವೈದ್ಯರು 57 ವರ್ಷದ ವ್ಯಕ್ತಿಯೊಬ್ಬರಿಗೆ ಕುಲಾಂತರಿ ಹಂದಿಯ (Genetically Modified) ಹೃದಯವನ್ನು ಯಶಸ್ವಿಯಾಗಿ ಕಸಿ ಮಾಡಿದ್ದಾರೆ.
ಭಾರತವು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ನಾನಾ ದೇಶಗಳ ಜತೆಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಿದ್ಧತೆ ನಡೆಸುತ್ತಿದೆ.
ಪಶ್ಚಿಮ ರೈಲ್ವೆಯು ಆರ್‌ಪಿಎಫ್ ಪಡೆಯೊಂದಿಗೆ ‘ಮಿಷನ್ ಅಮಾನತ್’ ಸೇವೆಯನ್ನು ಪ್ರಯಾಣಿಕರಿಗಾಗಿ ಜಾರಿಗೆ ತಂದಿದೆ.
ಆಜಾಧಿ ಕಾ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಅಪೇಕ್ಷೆಯಂತೆ ದೇಶಾದ್ಯಂತ ಮಕರ ಸಂಕ್ರಾಂತಿಯ ದಿನ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ದೇಶದ ಪ್ರಪ್ರಥಮ ಅತ್ಯಾಧುನಿಕ ವಾಟರ್ ಟ್ಯಾಕ್ಸಿ ಸೇವೆಗಳನ್ನು ಪಡೆಯಲಿರುವ ನಗರ ಎಂಬ ಖ್ಯಾತಿಗೆ ಮುಂಬೈ ಪಾತ್ರವಾಗಲಿದೆ.
ಚುಟುಕು ಸಮಾಚಾರ
ಮೊಘಲ್ ಅರಸರಿಂದ ಗಲ್ಲಿಗೇರಿದ 10ನೇ ಸಿಖ್ ಗುರು ಗೋವಿಂದ ಸಿಂಗ್ ಅವರ ನಾಲ್ವರು ಪುತ್ರರ ಸ್ಮರಣಾರ್ಥ ಡಿಸೆಂಬರ್ 26 ಅನ್ನು ಇನ್ನು ಮುಂದೆ ‘ವೀರ ಬಾಲ ದಿವಸ’ ಎಂದು ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಜನವರಿ 9ರಂದು ದೇಶದಾದ್ಯಂತ ಪ್ರವಾಸಿ ಭಾರತೀಯ ದಿವಸ ಆಚರಿಸಲಾಗುತ್ತದೆ. ದೇಶದ ಅಭಿವೃದ್ಧಿಯಲ್ಲಿ ವಿದೇಶಗಳಲ್ಲಿ ಅನಿವಾಸಿ ಭಾರತೀಯರು ನೀಡುವ ಕೊಡುಗೆ ಸ್ಮರಿಸುವ ದಿನ ಇದಾಗಿದೆ.
ಭಾರತದ ಕೃಷಿ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡುವ ಯೋಜನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮುಂದಿನ ತಿಂಗಳಿನಿಂದ ಭಾರತದಿಂದ ಅಮೆರಿಕಾಗೆ ಮಾವು ಮತ್ತು ದಾಳಿಂಬೆ ರಫ್ತಾಗಲಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.
ಸುಮಾರು ಮೂರು ವರ್ಷಗಳ ಹಿಂದೆ ಹಣಕಾಸು ತಂತ್ರಜ್ಞಾನಕ್ಕಾಗಿ ಪ್ರತ್ಯೇಕ ಘಟಕ ಸ್ಥಾಪಿಸಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ), ಇದೀಗ ಶೀಘ್ರದಲ್ಲೇ ಫಿನ್‌ಟೆಕ್ ವಿಭಾಗ ಪ್ರಾರಂಭಿಸಲಿದೆ.
ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ, ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ್ ಪಾಟೀಲ್ ಅವರು ಬೆಂಗಳೂರಿನಲ್ಲಿ ನಿಧನರಾದರು.
ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನವರು. ಚಂದ್ರಶೇಖರ್ ಪಾಟೀಲ್ ಅವರು ಚಂಪಾ ಎಂದೇ ಪ್ರಸಿದ್ಧರಾದವರು.
ಗ್ರಾಮೀಣ ಕಾಮಗಾರಿಗಳ ಭೌತಿಕ ಮತ್ತು ಆರ್ಥಿಕ ಪ್ರಗತಿ ನಿಖರತೆಗಾಗಿ ‘ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶ’ ಉನ್ನತೀಕರಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ‘ಗಾಂಧಿ ಸಾಕ್ಷಿ ಕಾಯಕ 2.0’ ತಂತ್ರಾಂಶವನ್ನು ವಿಧಾನಸೌಧದಲ್ಲಿ ಬಿಡುಗಡೆಗೊಳಿಸಿತು.
ಕರ್ನಾಟಕದಲ್ಲಿ ಕೊರೊನಾ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಮನ್ನಣೆ ದೊರೆತಿದೆ. ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ನಡೆಸುತ್ತಿರುವ ನಿರ್ವಹಣೆಯಲ್ಲಿ ತೊಡಗಿರುವ ಕೋವಿಡ್ ರೂಮ್‌ಗೆ ಈಗ ರಾಷ್ಟ್ರಪ್ರಶಸ್ತಿ ದೊರೆತಿದೆ.
ಚುಟುಕು ಸಮಾಚಾರ
ಹಸಿರು ಇಂಧನ ಕಾರಿಡಾರ್‌ನಡಿ ₹12,000 ಕೋಟಿ ವೆಚ್ಚದ ಎರಡನೇ ಹಂತದ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಕೇಂದ್ರ ಜಲ ಶಕ್ತಿ ಸಚಿವಾಲಯವು 2020ನೇ ಸಾಲಿನ ರಾಷ್ಟ್ರೀಯ ಜಲ ಪ್ರಶಸ್ತಿ ಘೋಷಿಸಿದ್ದು, ಜಲ ಸಂರಕ್ಷಣೆಗಾಗಿ ಉತ್ತರ ಪ್ರದೇಶವು ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ.
ಪಂಜಾಬ್ನ ಸರಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ. ಆರ್ಟಿಕಲ್ 356 ಸುತ್ತ ಚರ್ಚೆ ಹುಟ್ಟುಹಾಕಿದೆ.
ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ.
ಚುಟುಕು ಸಮಾಚಾರ
ಭಾರತದ ಭೂಪಟ ನೋಡಿದಾಗ ಶ್ರೀಲಂಕಾ ಅದರಲ್ಲಿ ಕಾಣಿಸುತ್ತದೆ. ಆದರೆ, ಯಾವುದೇ ನೆರೆ ಹೊರೆಯ ದೇಶಗಳು ಕಾಣಿಸುವುದಿಲ್ಲ. ಭಾರತ ಭೂಪಟದಲ್ಲಿ ಶ್ರೀಲಂಕಾ ಕಾಣಿಸಿಕೊಂಡಿರುವುದರ ಹಿಂದೆ ಕಡಲ ಕಾನೂನು ಕಾರಣವಾಗಿದೆ.
ಕೋವಿಡ್ ಬಿಕ್ಕಟ್ಟಿನಿಂದ ಶ್ರೀಲಂಕಾದ ಪ್ರವಾಸೋದ್ಯಮ ಸೊರಗಿದೆ. ಸರಕಾರದ ವೆಚ್ಚ ಹೆಚ್ಚಳ, ತೆರಿಗೆ ಕಡಿತವೂ ಸೇರಿ ದ್ವೀಪ ರಾಷ್ಟ್ರದ ಆರ್ಥಿಕತೆ ಹದಗೆಟ್ಟಿದ್ದು, ದಿವಾಳಿಯತ್ತ ಸಾಗಿದೆ ಎಂದು ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಗೆ ಶೀಘ್ರದಲ್ಲೇ ಅಮೆರಿಕದ ಸಿಗ್ ಸೌರ್ ಅಸಾಲ್ಟ್ ರೈಫಲ್ ಹಾಗೂ ಪಿಸ್ತೂಲುಗಳು ಲಭ್ಯವಾಗಲಿದ್ದು, ಉಗ್ರ ನಿಗ್ರಹ ಕಾರ್ಯಾಚರಣೆ ಕೈಗೊಳ್ಳಲು ಭಾರಿ ಬಲ ಸಿಗಲಿದೆ.
ಹಿಂದಿ ಭಾಷಿಕ ರಾಜ್ಯಗಳಲ್ಲಿ ಶೇ 30ಕ್ಕಿಂತಲೂ ಹೆಚ್ಚು ಜನರು ಬಡವರು ಎನ್ನುತ್ತದೆ ಕೇಂದ್ರ ಸರ್ಕಾರದ ‘ಬಹು ಆಯಾಮದ ಬಡತನ ಸೂಚ್ಯಂಕ ವರದಿ’.
ಭಾರತ ಕಳೆದ 2014 ಮತ್ತು 2021ರ ಅವಧಿಯಲ್ಲಿ ತನ್ನ ಸೌರ ವಿದ್ಯುತ್ ಉತ್ಪಾದನೆಯನ್ನು 18 ಪಟ್ಟು ವೃದ್ಧಿಸಿದೆ ಎಂದು ಸರಕಾರ ತಿಳಿಸಿದೆ.
ಖ್ಯಾತ ಪವಿತ್ರ ಯಾತ್ರಾತಾಣ ತಿರುಮಲ ತಿರುಪತಿ ದೇವಸ್ಥಾನ( ಟಿಟಿಡಿ)ಗೆ ಕೇಂದ್ರ ಸರ್ಕಾರ ಎಫ್‌ಸಿಆರ್‌ಎ ಪರವಾನಗಿ ನವೀಕರಿಸದೇ ವಿದೇಶಿ ದೇಣಿಗೆಯನ್ನು ರದ್ದುಮಾಡಲಾಗಿದೆ.
ಊಟ ಮತ್ತು ವಸತಿ ಸೌಲಭ್ಯಗಳನ್ನು ಕಲ್ಪಿಸುವ ವಿದ್ಯಾಸಿರಿ ಯೋಜನೆಗೆ ಅರ್ಜಿ ಸಲ್ಲಿಸಲು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಜನವರಿ 10, 2022 ರವರೆಗೆ ಅವಧಿ ವಿಸ್ತರಣೆ ಮಾಡಿ ಪ್ರಕಟಣೆ ಹೊರಡಿಸಲಾಗಿದೆ.
ಚುಟುಕು ಸಮಾಚಾರ
ಭಾರತೀಯ ಮಹಿಳೆ ಸ್ಮರಿಸಬೇಕಾದ ಎರಡು ಮುಖ್ಯ ದಿನಾಚರಣೆಗಳೆಂದರೆ, ಮಾರ್ಚ್ 8 ಮತ್ತು ಜನವರಿ 3. ಅಂತರರಾಷ್ಟ್ರೀಯ ಮಟ್ಟದಲ್ಲಿ, ಮಹಿಳಾ ಹಕ್ಕು ಮತ್ತು ಸ್ವಅರಿವಿನ ಜಾಗೃತಿ ಹುಟ್ಟಿಸಿದ ಚಳವಳಿಯ ದ್ಯೋತಕವಾಗಿ ಮಾರ್ಚ್ 8 ವಿಶ್ವ ಮಹಿಳಾ ದಿನವಾಗಿ ಆಚರಿಸಲ್ಪಟ್ಟರೆ, ದೇಶದ ಅನಕ್ಷರಸ್ಥ ಮಹಿಳೆಯರಿಗೆ ಅಕ್ಷರದ ದಾರಿದೀಪ ತೋರಿಸಿದ ‘ಭಾರತದ ಮೊದಲ ಶಿಕ್ಷಕಿ’ ಸಾವಿತ್ರಿಬಾಯಿ ಫುಲೆಯವರ ಜನ್ಮದಿನವಾದ ಜನವರಿ 3, ಅಷ್ಟೇ ಆತ್ಮೀಯವಾಗಿ ನೆನಪಿಸಿಕೊಳ್ಳ ಬೇಕಾದ ದಿನ.
ಭಾರತ, ಪಾಕಿಸ್ತಾನ ತಮ್ಮ ದೇಶಗಳಲ್ಲಿರುವ ಪರಮಾಣು ವಿದ್ಯುತ್ ಸ್ಥಾವರಗಳು, ಪರಮಾಣು ಇಂಧನಕ್ಕೆ ಸಂಬಂಧಿಸಿದ ಇತರ ಸೌಲಭ್ಯಗಳ ಮಾಹಿತಿಯನ್ನು ಸತತ 31 ವರ್ಷವೂ ವಿನಿಮಯ ಮಾಡಿಕೊಂಡಿವೆ.
ಬ್ಯಾಂಕ್‌ಗಳ ಸುಸ್ತಿ ವಸೂಲಾತಿಗೆ ಕೇಂದ್ರ ಸರ್ಕಾರ ಸ್ಥಾಪಿಸಲು ಉದ್ದೇಶಿಸಿದ್ದ ‘ಬ್ಯಾಡ್ ಬ್ಯಾಂಕ್’ ಗೆ ಇದೀಗ ಕಾನೂನು ತೊಡರು ಎದುರಾಗಿದೆ. ಹೀಗಾಗಿ ಬ್ಯಾಡ್ ಬ್ಯಾಂಕ್ ಸ್ಥಾಪನೆ ಇನ್ನಷ್ಟು ವಿಳಂಬ ಆಗಲಿದೆ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಟೆಲಿ ಲಾ ಸೇವೆಯಿಂದ ಗ್ರಾಮೀಣ ಪ್ರದೇಶದ ಜನರು, ನಿರ್ಗತಿಕರು ಅತ್ಯಂತ ಅಗ್ಗದಲ್ಲಿ ಕಾನೂನು ಸಲಹೆಗಳನ್ನು ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಮೈಸೂರು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದ್ದು, 70 ಸಾವಿರಕ್ಕೂ ಹೆಚ್ಚು ಮಹಿಳೆಯರು ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ.
NammaKPSC Current Affairs - December 2021
ಚುಟುಕು ಸಮಾಚಾರ
ಭಾರತ ತನ್ನ ವಾಯುಪಡೆ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದಕ್ಕೆ ರಾಫೆಲ್ ಜೆಟ್ ಗಳನ್ನು ಖರೀದಿಸಿತ್ತು. ಈಗ ನೆರೆ ರಾಷ್ಟ್ರ ಪಾಕಿಸ್ತಾನ ಇದಕ್ಕೆ ಪ್ರತಿಸ್ಪರ್ಧಿಯಾಗಿ ತನ್ನ ಸಾರ್ವಕಾಲಿಕ ಪರಮಾಪ್ತ ಗೆಳೆಯ ಚೀನಾದಿಂದ 25 ಜೆ-10 ಜೆಟ್ ಖರೀದಿಸಿದೆ.
ಕನ್ನಡದ ಡಿಎಸ್ ನಾಗಭೂಷಣ್, ಖ್ಯಾತ ಲೇಖಕಿ ನಮಿತಾ ಗೋಖಲೆ, ಟಿಎಂಸಿ ಶಾಸಕ ಬ್ರಾತ್ಯಾ ಬಸು ಮತ್ತು ಖ್ಯಾತ ಪಂಜಾಬಿ ಬರಹಗಾರ ಖಾಲಿದ್ ಹುಸೇನ್ ಸೇರಿದಂತೆ 20 ಮಂದಿಯ ಹೆಸರನ್ನು ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಘೋಷಿಸಲಾಗಿದೆ.
ಪ್ರತ್ಯೇಕ ಹಾಲು ಉತ್ಪಾದನಾ ಒಕ್ಕೂಟ ರಚಿಸಲು ಹಾವೇರಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಸಾಮರ್ಥ್ಯ ಹೊಂದಿರುವ ಹಿನ್ನೆಲೆಯಲ್ಲಿ ಮೂಲ ಸಂಸ್ಥೆಯಿಂದ ವಿಭಜಿಸಿ ಪ್ರತ್ಯೇಕ ಒಕ್ಕೂಟ ರಚಿಸಲು ರಾಜ್ಯ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮ-2021′ ರ ಕರಡು ಪ್ರತಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಇದರಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕುಡಿಯುವ ನೀರಿಗೆ, ಖಾಲಿ ಪ್ರದೇಶಗಳಿಗೆ ತೆರಿಗೆ ವಿಧಿಸುವ ಪ್ರಸ್ತಾಪ ಇದೆ. ಈ ಬಗ್ಗೆ ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆಗಳನ್ನು ಆಹ್ವಾನಿಸಿದೆ.
ಚುಟುಕು ಸಮಾಚಾರ
ಭಾರತದ ಕುಕ್ಕುಟೋದ್ಯಮ ಉತ್ಪನ್ನಗಳ ಮೇಲೆ ಹೇರಿದ್ದ ನಿಷೇಧವನ್ನು ಸಂಯುಕ್ತ ಅರಬ್ ಸಂಸ್ಥಾನ ತೆರವುಗೊಳಿಸಿದೆ. ಆ ಮೂಲಕ ಐದು ವರ್ಷಗಳ ಬಳಿಕ ಯುಎಇ, ಭಾರತದ ಕುಕ್ಕುಟೋದ್ಯಮ ಉತ್ಪನ್ನಗಳ ಮೇಲೆ ಹೇರಿದ್ದ ನಿರ್ಬಂಧವನ್ನು ರದ್ದು ಮಾಡಿದೆ.
ನೀತಿ ಆಯೋಗದ ನೂತನ ಆರೋಗ್ಯ ಸೌಕರ್ಯ ನಿರ್ವಹಣಾ ಪಟ್ಟಿಯಲ್ಲಿ ಕೇರಳ ರಾಜ್ಯ ಅಗ್ರ ಸ್ಥಾನದಲ್ಲಿದ್ದು, ಉತ್ತರ ಪ್ರದೇಶಕ್ಕೆ ಕೊನೆಯ ಸ್ಥಾನ ದಕ್ಕಿದೆ.
ಕೃಷಿಯಲ್ಲಿ ಕಳೆನಾಶಕ್ಕೆ ಬಳಸುತ್ತಿರುವ ಕಳೆನಾಶಕದಲ್ಲಿರುವ ಟಾಕ್‌ಸೈಡ್, ಆರ್ಗಾನೋ ಪಾಸ್ಪರಸ್, ಪಾಸ್ಪನೇಟ್ ಇಡೀ ಜೀವ ಸಂಕುಲಕ್ಕೆ ಅಪಾಯಕಾರಿ ಎಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಮತ್ತು ರಾಜ್ಯದ ಇತರ ಕೃಷಿ ವಿವಿಗಳ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಚುಟುಕು ಸಮಾಚಾರ
ಐದು ಮೀಟರ್ ರೆಸಲ್ಯೂಶನ್‌ವುಳ್ಳ ಭೂಮಿಯ ಚಿತ್ರಗಳನ್ನು ತೆಗೆಯಬಲ್ಲ ಕ್ಯಾಮೆರಾವನ್ನು ಹೊಂದಿರುವ ಹೊಸ ಉಪಗ್ರಹವನ್ನು ಚೀನಾವು ಉಡಾವಣೆ ಮಾಡಿದೆ ಎಂದು ಚೀನಾದ ರಾಷ್ಟ್ರೀಯ ಅಂತರಿಕ್ಷ ಆಡಳಿತ (ಸಿಎನ್‌ಸಿಎ) ಹೇಳಿದೆ.
ಖಗೋಳಶಾಸ್ತ್ರಜ್ಞರ ತಂಡವೊಂದು ಸುಮಾರು 70 ಹೊಸ ರೋಗ್ ಪ್ಲ್ಯಾನೆಟ್‌ಗಳ ಗುಚ್ಛವೊಂದನ್ನು ಪತ್ತೆ ಹೆಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ರೋಗ್ ಪ್ಲ್ಯಾನೆಟ್‌ಗಳ ಗುಚ್ಛ ಭೂಮಿಯಿಂದ ಸುಮಾರು 420 ಜ್ಯೋತಿರ್ವರ್ಷ ದೂರದಲ್ಲಿದ್ದು, ಯಾವ ನಕ್ಷತ್ರಗಳ ಗುರುತ್ವ ಬಲಕ್ಕೂ ಒಳಪಡದೇ ಸ್ವತಂತ್ರ್ಯವಾಗಿ ಚಲಿಸುತ್ತಿವೆ.
ಬ್ರಹ್ಮಾಂಡ ಸೃಷ್ಟಿಯ ರಹಸ್ಯ ಭೇದಿಸಲು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಅಭಿವೃದ್ಧಿಪಡಿಸಿರುವ ವಿಶ್ವದ ಬೃಹತ್ ಹಾಗೂ ಬಲಶಾಲಿ ಬಾಹ್ಯಾಕಾಶ ಟೆಲಿಸ್ಕೋಪ್ ‘ಜೇಮ್ಸ್ ವೆಬ್’ ಅನ್ನು ಉಡಾವಣೆ ಮಾಡಲಾಗಿದೆ.
ವಿವಿಧ ಕ್ಷೇತ್ರಗಳಲ್ಲಿ ರಾಜ್ಯಗಳ ಆಡಳಿತ ವ್ಯವಸ್ಥೆ, ವ್ಯವಸ್ಥೆಯಲ್ಲಿನ ಸುಧಾರಣೆಗಳ ಮೇಲೆ ಬೆಳಕು ಚೆಲ್ಲುವ ಉತ್ತಮ ಆಡಳಿತ ಸೂಚ್ಯಂಕ 2021 ವರದಿಯನ್ನು ಕೇಂದ್ರ ಸರ್ಕಾರವು ಉತ್ತಮ ಆಡಳಿತ ದಿನವಾದ ಡಿ.25 ಬಿಡುಗಡೆ ಮಾಡಿದೆ.
ರಾಜ್ಯಾದ್ಯಂತ ಮಣ್ಣಿನಲ್ಲಿ ಅಡಗಿರುವ, ಅಳಿವಿನಂಚಿಗೆ ತಲುಪುತ್ತಿರುವ 25ರಿಂದ 30ಸಾವಿರ ಸ್ಮಾರಕಗಳಿದ್ದರೂ, ಸರಕಾರದಿಂದ ಸಂರಕ್ಷಣೆ ಕಾರ್ಯ ಮಾತ್ರ ಮಂದಗತಿಯಲ್ಲಿ ನಡೆಯುತ್ತಿದೆ. ಈವರೆಗೆ ಕೇವಲ 844 ಸ್ಮಾರಕಗಳನ್ನು ಮಾತ್ರ ರಾಜ್ಯ ಪುರಾತತ್ವ ಇಲಾಖೆಯಿಂದ ಸಮೀಕ್ಷೆಯಿಂದ ಪತ್ತೆ ಮಾಡಿ ಸಂರಕ್ಷಿಸಲಾಗಿದೆ.
ಚುಟುಕು ಸಮಾಚಾರ
ಬಲು ಅಪರೂಪದ ‘ನಡೆದಾಡುವ’ ಮೀನು ಸುಮಾರು 22 ವರ್ಷಗಳ ಬಳಿಕ ತಾಸ್ಮೇನಿಯಾ ಕರಾವಳಿಯಲ್ಲಿ ಪತ್ತೆಯಾಗಿದೆ. ಅಪರೂಪದ ಗುಲಾಬಿ ಬಣ್ಣದ ಹ್ಯಾಂಡ್ ಫಿಶ್ 1999ರಲ್ಲಿ ಕಡೆಯ ಬಾರಿ ಕಂಡುಬಂದಿತ್ತು ಎಂದು ಆಸ್ಟ್ರೇಲಿಯಾ ರಾಷ್ಟ್ರೀಯ ವಿಜ್ಞಾನ ಸಂಸ್ಥೆ ಕಾಮನ್‌ವೆಲ್ತ್ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ (ಸಿಎಸ್‌ಐಆರ್‌ಒ) ತಿಳಿಸಿದೆ.
ಭಾರತೀಯ ಸೇನೆಯು ವಾಟ್ಸಾಪ್ ನಂತಹ ಅಥವಾ ಅದಕ್ಕಿತಂಲೂ ಸುರಕ್ಷಿತವಾದ ASIGMA (ಆರ್ಮಿ ಸೆಕ್ಯೂರ್ ಇಂಡಿಜಿನಿಯಸ್ ಮೆಸೇಜಿಂಗ್ ಅಪ್ಲಿಕೇಶನ್) ಎಂದು ಕರೆಯಲ್ಪಡುವ ಆಂತರಿಕ ಸಂದೇಶ ಕಳುಹಿಸುವ ಅಪ್ಲಿಕೇಶನ್ ಅನ್ನು ಬಳಕೆಗೆ ತರುತ್ತಿರುವುದಾಗಿ ತಿಳಿಸಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದಿಂದ ನಾನಾ ಉತ್ಪನ್ನ ರಫ್ತು ಮಾಡುವ ದೇಶದ 30 ಜಿಲ್ಲೆಗಳಲ್ಲಿ ಬಳ್ಳಾರಿ ಜಿಲ್ಲೆಯೂ ಒಂದಾಗಿದೆ. ರಾಜ್ಯ ಮಾತ್ರವಲ್ಲದೇ ಅಂತಾರಾಜ್ಯ, ರಾಷ್ಟ್ರಗಳಿಗೆ ಸ್ಥಳೀಯ ಗಣಿನಾಡಿನ ಉತ್ಪನ್ನ ಪೂರೈಕೆ ಮಾಡುವಲ್ಲಿ ಗಣಿ ಜಿಲ್ಲೆ ಮುಂಚೂಣಿಯಲ್ಲಿದೆ.
ಬಹುನಿರೀಕ್ಷಿತ ಮೈಸೂರು-ಬೆಂಗಳೂರು-ಚೆನ್ನೈ ಹೈಸ್ಪೀಡ್ ಬುಲೆಟ್ ಟ್ರೈನ್ ಯೋಜನೆ ತಯಾರಿ ಇನ್ನಷ್ಟು ಚುರುಕುಗೊಂಡಿದೆ. ದೇಶದ ಪ್ರಮುಖ ಏಳು ಪ್ರಮುಖ ಹೈಸ್ಪೀಡ್ ಯೋಜನೆಯಲ್ಲಿ ದಕ್ಷಿಣ ಭಾರತದ ಏಕೈಕ ಯೋಜನೆಯಾಗಿದೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI)ನಲ್ಲಿ ವಿಶ್ವದ ಅಗ್ರ ಐದು ನಗರಗಳಲ್ಲಿ ಬೆಂಗಳೂರು 5ನೇ ಸ್ಥಾನ ಪಡೆದಿದೆ. ಮೊದಲ ನಾಲ್ಕು ಯುಎಸಎಯ ನಗರಗಳಾಗಿವೆ. ಶ್ರೇಯಾಂಕ ನೀಡಿಕೆ ಅಗ್ರ 50 AI ನಗರಗಳಲ್ಲಿ ಒಂದಾಗಿದೆ, ಇದನ್ನು ಟೈಡ್ ಫ್ರೇಮ್‌ವರ್ಕ್‌ನಿಂದ ಅಳೆಯಲಾಗಿದ್ದು, ಹಾರ್ವರ್ಡ್ ಬ್ಯುಸಿನೆಸ್ ರಿವ್ಯೂ (HBR)ನಲ್ಲಿ ಪಟ್ಟಿಮಾಡಲಾಗಿದೆ.
ಸಾಂಪ್ರದಾಯಿಕ ವೈದ್ಯ ಪದ್ಧತಿಯನ್ನು ಮುಖ್ಯವಾಹಿನಿಗೆ ಸೇರಿಸುವ ದೂರದೃಷ್ಟಿಯೊಂದಿಗೆ, ರಾಜ್ಯ ಸರ್ಕಾರ ಶಿವಮೊಗ್ಗ ನಗರದ ಸಮೀಪದ ಸೋಗಾನೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಆಯುಷ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಯೋಜಿಸಿದೆ.
ಚುಟುಕು ಸಮಾಚಾರ
ದೇಶದಲ್ಲಿ ಪ್ರತಿವರ್ಷವೂ ಡಿಸೆಂಬರ್ 23ನ್ನು ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ.
ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನ ಡಿಸೆಂಬರ್ 22, ಈ ದಿನವನ್ನು ಭಾರತದಲ್ಲಿ ಪ್ರತಿ ವರ್ಷ ‘ರಾಷ್ಟ್ರೀಯ ಗಣಿತ ದಿನ’ ಎಂದು ಆಚರಣೆ ಮಾಡಲಾಗುತ್ತದೆ.
ಚೀನಾದ ದಕ್ಷಿಣ ಭಾಗದಲ್ಲಿರುವ ಗಂಝೌ ಪ್ರಾಂತ್ಯದ ಕಲ್ಲುಬಂಡೆಗಳ ನಡುವೆ ದೊರೆತ ಡೈನೋಸಾರ್ ಮೊಟ್ಟೆಯ ಒಳಗೆ ಭ್ರೂಣವನ್ನು ಸಂಶೋಧಕರು ಪತ್ತೆ ಹಚ್ಚಿದ್ದು, ವಿಜ್ಞಾನ ಲೋಕದಲ್ಲಿ ಮತ್ತೊಂದು ಕುತೂಹಲಕ್ಕೆ ಕಾರಣವಾಗಿದೆ.
ಒಡಿಶಾ ಕರಾವಳಿ ಬಾಲಸೋರ್‌ನಿಂದ ಕಿರು ಶ್ರೇಣಿಯ, ಮೇಲ್ಮೈನಿಂದ ಮೇಲ್ಮೈಗೆ ಸಾಗುವ ಖಂಡಾಂತರ ಕ್ಷಿಪಣಿ ‘ಪ್ರಳಯ್’ ಅನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿದೆ
ಕ್ರೀಡಾಕ್ಷೇತ್ರದಲ್ಲಿ ಉದ್ದೀಪನ ಮದ್ದು ಸೇವನೆ ನಿಯಮ ಉಲ್ಲಂಘನೆಯಲ್ಲಿ ಭಾರತವು ಮೂರನೇ ಸ್ಥಾನಕ್ಕೇರಿದೆ.
ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತಕ್ಕೆ ಸಿಕ್ಕಿರುವ ರ‍್ಯಾಂಕ್ ಅನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳುವುದಿಲ್ಲ ಎಂದು ಕೇಂದ್ರ ಪ್ರಸಾರ ಖಾತೆ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಚುಟುಕು ಸಮಾಚಾರ
ಫಿಲಿಪ್ಪೀನ್ಸ್‌ನಲ್ಲಿ ಭೀಕರ ಗಾಳಿಯನ್ನು ತರುತ್ತಿರುವ ರೈ ತೂಫಾನು ನೂರಾರು ಮಂದಿಯನ್ನು ಬಲಿ ತೆಗೆದುಕೊಂಡಿದೆ. ಮನೆಗಳು, ಕಟ್ಟಡಗಳು ತೂಫಾನಿನ ಹೊಡೆತಕ್ಕೆ ನೆಲಸಮವಾಗಿವೆ. ಸಾವಿರಾರು ಮಂದಿ ಮನೆಗಳನ್ನು ಕಳೆದುಕೊಂಡಿದ್ದಾರೆ.
ಭಾರತ ಮತ್ತು ತೈವಾನ್ ದ್ವಿಪಕ್ಷೀಯವಾಗಿ ಆರ್ಥಿಕ ಒಪ್ಪಂದಕ್ಕೆ ಮಾತುಕತೆ ನಡೆಸಲಿವೆ. ಉಭಯ ರಾಷ್ಟ್ರಗಳು ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮಾತುಕತೆಯನ್ನು ಆರಂಭಿಸಿವೆ.
ಅಗ್ನಿ ಸರಣಿಯ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ಹೊಸ ತಲೆಮಾರಿನ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಒಡಿಶಾದ ಕರಾವಳಿಯಿಂದ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಈ ಕ್ಷಿಪಣಿ ಅಣ್ವಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.
ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕೊತಾದಲ್ಲಿನಡೆಯುವ ‘ದುರ್ಗಾ ಪೂಜೆ’ಗೆ ವಿಶ್ವಸಂಸ್ಥೆ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೊ)ಯು ಪಾರಂಪರಿಕ ಸ್ಥಾನಮಾನ ನೀಡಿದೆ.
ಸರಕಾರದ ನಾನಾ ಇಲಾಖೆಗಳು, ಎಸ್‌ಎಸ್‌ಎಲ್‌ಸಿ, ಪಿಯುಸಿ, ಸರಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವ ಅಧಿಕೃತ ದತ್ತಾಂಶವನ್ನು ಉದ್ಯೋಗದಾತ ಕಂಪೆನಿಗಳು, ಸಂಸ್ಥೆಗಳೊಂದಿಗೆ ತ್ವರಿತಗತಿಯಲ್ಲಿ ಹಂಚಿಕೊಳ್ಳಲು ‘ಇ-ಸಹಮತಿ’ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿ ಕಾಡಿದೆ. ಮಕ್ಕಳಲ್ಲಿ ಅಪೌಷ್ಟಿಕತೆ ಸೇರಿದಂತೆ ಬಾಲ್ಯದಲ್ಲಿ ಎದುರಾಗುತ್ತಿರುವ ಆರೋಗ್ಯ ಸಮಸ್ಯೆಗೆ ತಾಯಿಯ ಎದೆ ಹಾಲು ರಾಮಬಾಣ. ಇದರ ಮಹತ್ವ ಅರಿತಿರುವ ರಾಜ್ಯ ಸರಕಾರವು ‘ನೋರಾ ಹೆಲ್ತ್ ಕೇರ್’ ಯೋಜನೆ ಮೂಲಕ ಕೇರ್ ಕಂಪ್ಯಾನಿಯನ್ ಪ್ರೋಗ್ರಾಮ್ ಅನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದೆ.
ವಿವಾದಾತ್ಮಕ ಮತಾಂತರ ನಿಷೇಧ ವಿಧೇಯಕ ವಿಧಾನಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆ ದಟ್ಟವಾಗಿದೆ. ವಿಧೇಯಕದಲ್ಲಿ ಬಲವಂತದ ಮತಾಂತರಕ್ಕೆ ಹತ್ತು ವರ್ಷದ ವರೆಗೂ ಶಿಕ್ಷೆ ಕೊಡುವ ಅವಕಾಶ ಇದೆ.
ಚುಟುಕು ಸಮಾಚಾರ
ನಾಸಾದ ಪಾರ್ಕರ್ ಸೋಲಾರ್ ಪ್ರೋಬ್ ಸೂರ್ಯನ ಮೇಲ್ಭಾಗದ ವಾತಾವರಣವಾದ ಕರೊನಾ ಮೂಲಕ ಹಾದು ಹೋಗಿದೆ. ಅಲ್ಲದೆ, ಅದರಿಂದ ಕಣಗಳು ಹಾಗೂ ಆಯಸ್ಕಾಂತೀಯ ಭಾಗಗಳ ಮಾದರಿಗಳನ್ನು ಸಂಗ್ರಹಿಸಿದೆ.
ವಸೂಲಾಗದ ಸಾಲ (ಎನ್‌ಪಿಎ) ವಿಚಾರದಲ್ಲಿ ನಿರ್ದಿಷ್ಟ ಮಿತಿಯನ್ನು ಮೀರುವ ಅಥವಾ ಅವರ ಬಂಡವಾಳ ಅರ್ಹತಾ ಅನುಪಾತ ಕುಸಿತವಾದರೆ ಬ್ಯಾಂಕೇತರ ಸಾಲದಾರರನ್ನು ಕಠಿಣ ದಂಡನೆಗೆ ಒಳಪಡಿಸಲು ಬ್ಯಾಂಕೇತರ ಹಣಕಾಸು ಕಂಪೆನಿಗಳ (ಎನ್‌ಬಿಎಫ್‌ಸಿ) ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ ಕಠಿಣ ಸ್ವರೂಪದ ನಿರ್ಬಂಧಿತ ಕ್ರಮಗಳ (ಪಿಸಿಎ) ಚೌಕಟ್ಟನ್ನು ಬಿಡುಗಡೆ ಮಾಡಿದೆ.
ದೇಶದಲ್ಲಿ ಸೆಮಿಕಂಡಕ್ಟರ್ ಚಿಪ್‌ಗಳ ವಿನ್ಯಾಸ ಮತ್ತು ಉತ್ಪಾದನೆ ಹೆಚ್ಚಿಸಲು 76 ಸಾವಿರ ಕೋಟಿ ರೂ.ಗಳ ನೂತನ ಸೆಮಿಕಂಡಕ್ಟರ್ ನೀತಿಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಚುನಾವಣೆ ಆಯೋಗದ ಶಿಫಾರಸಿನಂತೆ ಚುನಾವಣಾ ಸುಧಾರಣೆಗೆ ಮುಂದಾಗಿರುವ ಕೇಂದ್ರ ಸರಕಾರ, 4 ಪ್ರಮುಖ ಸುಧಾರಣೆ ತರುವ ವಿಧೇಯಕ ಮಂಡನೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಿದೆ.
ಹಿಂದೂಸ್ತಾನಿ ಗಾಯಕ ಡಾ. ಮಲ್ಲಿಕಾರ್ಜುನ ಮನಸೂರ ನೆನಪಿನ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಬಾರಿ ಕೊಳಲು ವಾದಕ ಮುಂಬೈನ ಪಂಡಿತ್ ನಿತ್ಯಾನಂದ ಹಳದಿಪುರ ಅವರಿಗೆ ನೀಡಲು ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಸಾಮಾನ್ಯ ಸಭೆ ನಿರ್ಧರಿಸಿದೆ.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ವೈಕೆಮೊಳೆ ಮತ್ತು ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದ ನೂರು ಜನ ರೈತರಿಗೆ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ಹೈದರಾಬಾದ್ ಹಾಗೂ ತೆಲಂಗಾಣದಲ್ಲಿರುವ ಭಾರತೀಯ ಭತ್ತ ಸಂಶೋಧನಾ ಸಂಸ್ಥೆ ಸಿದ್ದಪಡಿಸಿರುವ RNR -15048 ಎನ್ನುವ ಭತ್ತದ ತಳಿಯನ್ನು ಪರಿಚಯಿಸಿಕೊಟ್ಟಿದೆ. ತನ್ನ ವಿಶೇಷ ಗುಣಲಕ್ಷಣಗಳಿಂದ ಈ ತಳಿ ಗಮನ ಸೆಳೆದಿದೆ.
ಡಿವೆಚಾ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್, ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ಹಾಗೂ ಮಂಗಳೂರು ವಿವಿಯ ಸೆಂಟರ್ ಫಾರ್ ಅಡ್ವಾನ್ಸ್‌ಡ್ ರಿಸರ್ಚ್ ಇನ್ ಎನ್ವಿರಾನ್‌ಮೆಂಟಲ್ ರೇಡಿಯೊ ಆ್ಯಕ್ಟಿವಿಟಿ ಸಂಸ್ಥೆಗಳು ನೀರಿನಲ್ಲಿ ಯುರೇನಿಯಂನ ಅಂಶ ಇರುವ ಬಗ್ಗೆ ಅಧ್ಯಯನ ನಡೆಸಿವೆ.
ಚುಟುಕು ಸಮಾಚಾರ
ಗ್ರಹಕಾಯಗಳ ಉಗಮ ಮತ್ತು ವಿಕಸನಕ್ಕೆ ಸಂಬಂಧಿಸಿದಂತೆ ಖಗೋಳ ವಿಜ್ಞಾನಿಗಳು ಹೊಂದಿರುವ ಕಲ್ಪನೆಗೆ ಸವಾಲೆಸೆಯುವ ಎಕ್ಸೋಪ್ಲ್ಯಾನೆಟ್(ಸೌರಮಂಡಲದ ಹೊರತಾದ ಗ್ರಹ)ವೊಂದು ಪತ್ತೆಯಾಗಿದೆ.
ಸೆಕೆಂಡ್‌ಗೆ 47 ಕಿ. ಮೀ. ವೇಗದಲ್ಲಿ ಸಾಗುವ ಲಿಯೋನಾರ್ಡ್ ಎಂಬ ಧೂಮಕೇತು, ಸರಿ ಸುಮಾರು 523 ಶತಕೋಟಿ ಕಿ. ಮೀ. ದೂರದಿಂದ ಭೂಮಿಯ ಬಳಿಗೆ ಬಂದು, ಇದೀಗ ದೂರ ಸರಿಯುತ್ತಿದೆ.
ಒಡಿಶಾ ತೀರಭಾಗದ ಚಂದೀಪುರದಲ್ಲಿ ಲಂಬವಾಗಿ ಉಡಾವಣೆಗೊಂಡ ಕಡಿಮೆ ಶ್ರೇಣಿಯ ಮೇಲ್ಮೈಯಿಂದ ಗಾಳಿಗೆ ಕ್ಷಿಪಣಿ(VL-SRSAM)ಯನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ಆಂತರಿಕ ಪರೀಕ್ಷಾ ವಲಯ(ಐಟಿಆರ್)ದಿಂದ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಆನ್ಲೈನ್ ಪೇಮೆಂಟ್ ತಾಣವಾದ ಪೇಟಿಎಂ.ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶೆಡ್ಯೂಲ್ಡ್ ಬ್ಯಾಂಕ್ ಸ್ಥಾನಮಾನ ನೀಡಿದೆ.
ಭಾರತದ ಮೂರನೇ ಭುವನ ಸುಂದರಿಯಾಗಿ ಪಂಜಾಬ್ ಮೂಲದ ರೂಪದರ್ಶಿ, ನಟಿ ಹರ್ನಾಜ್ ಕೌರ್ ಸಂಧು ಆಯ್ಕೆಯಾಗಿದ್ದಾರೆ. ಇಸ್ರೇಲ್‌ನಲ್ಲಿ ನಡೆದ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಅವರು ಪರಗ್ವೆ ಹಾಗೂ ದಕ್ಷಿಣ ಆಫ್ರಿಕಾದ ಸ್ಪರ್ಧಿಗಳನ್ನು ಹಿಂದಿಕ್ಕಿ ಕಿರೀಟ ಧರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ಭವ್ಯವಾದ ಕಾಶಿ ವಿಶ್ವನಾಥ್ ಧಾಮ ಕಾರಿಡಾರ್ ಅನ್ನು ಉದ್ಘಾಟಿಸುತ್ತಿದ್ದಾರೆ. 2019ರ ಮಾರ್ಚ್ 8ರಂದು ಪ್ರಧಾನಿ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಇದು ಲೋಕಾರ್ಪಣೆಗೊಳ್ಳುತ್ತಿದೆ.
ಕರ್ನಾಟಕದಲ್ಲಿ ರಕ್ತ ಹೀನತೆ ಹಾಗೂ ಅದರಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳು, ಮಹಿಳೆಯರ ಸಂಖ್ಯೆ ಕಳೆದ 5 ವರ್ಷಗಳಲ್ಲಿ ಗಣನೀಯ ಏರಿಕೆ ಕಂಡಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮಿಕ್ಷೆಯಿಂದ ಬಹಿರಂಗವಾಗಿದೆ.
ಚುಟುಕು ಸಮಾಚಾರ
ಖ್ಯಾತ ಭಾರತೀಯ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ ಅವರು ವಾಸ್ತುಶಿಲ್ಪಕ್ಕಾಗಿ ವಿಶ್ವದ ಅತ್ಯುನ್ನತ ಗೌರವಗಳಲ್ಲಿ ಒಂದಾದ ರಾಯಲ್ ಗೋಲ್ಡ್ ಮೆಡಲ್ 2022 ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಬ್ರಿಟಿಷ್ ಆರ್ಕಿಟೆಕ್ಟ್ಸ್(RIBA) ಪ್ರಕಟಿಸಿದೆ.
ಆತ್ಮಹತ್ಯೆಯ ಪ್ರಕರಣಗಳನ್ನು ತಡೆಯಲು ಅನೇಕ ದೇಶಗಳು ಶ್ರಮಿಸುತ್ತಿದ್ದರೆ, ಸುಲಭವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸಾಧನವೊಂದಕ್ಕೆ ಸ್ವಿಟ್ಜರ್ಲೆಂಡ್ ಅನುಮೋದನೆ ನೀಡಿದೆ.
ಭಾರತದ ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿ 14 ಮಂದಿ ಪ್ರಯಾಣಿಸುತ್ತಿದ್ದ Mi-17V-5 ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕುನೂರು ಎಂಬಲ್ಲಿ ಪತನವಾಗಿದೆ.
ಶೀಘ್ರದಲ್ಲೆ ಕರ್ನಾಟಕದ ಇಶಾದ್ ಮಾವು, ಕುಮಟಾ ಈರುಳ್ಳಿ, ಭಟ್ಕಳ ಮಲ್ಲಿಗೆಗೆ ಭೌಗೋಳಿಕ ಸನ್ನದು (ಜಿಐ ಟ್ಯಾಗ್) ಲಭ್ಯವಾಗಲಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಪ್ರಾದೇಶಿಕ ಕೌಶಲ ಸ್ಪರ್ಧೆಯಲ್ಲಿ ಕರ್ನಾಟಕ ತಂಡ 14 ಚಿನ್ನ ಮತ್ತು 13 ಬೆಳ್ಳಿ ಪದಕಗಳ ಸಹಿತ ಒಟ್ಟು 27 ಪದಕಗಳನ್ನು ಮಡಿಲಿಗೆ ಹಾಕಿಕೊಂಡು ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದೆ.
ಚುಟುಕು ಸಮಾಚಾರ
ಡಿಸೆಂಬರ್ 06 ಭಾರತರತ್ನ, ಸಂವಿಧಾನಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 65ನೇ ಪುಣ್ಯತಿಥಿ. ಬಾಬಾ ಸಾಹೇಬರು ದೇಹತ್ಯಾಗ ಮಾಡಿದ ದಿನವನ್ನು ‘ಮಹಾಪರಿನಿರ್ವಾಣ ದಿನ’ವನ್ನಾಗಿ ಆಚರಿಸಲಾಗುತ್ತದೆ.
ಭಾರತೀಯ ನೌಕಾಪಡೆಯ ಪಾತ್ರ ಮತ್ತು ಸಾಧನೆಗಳನ್ನು ಗುರುತಿಸಲು ಪ್ರತಿ ವರ್ಷ ಡಿಸೆಂಬರ್ 4 ರಂದು ಭಾರತದಲ್ಲಿ ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ.
ಪ್ರತಿ ವರ್ಷ ಧ್ಯೇಯವಾಕ್ಯದೊಂದಿಗೆ ಡಿಸೆಂಬರ್ 5 ರಂದು ವಿಶ್ವ ಮಣ್ಣು ದಿನ ಆಚರಣೆಗೊಳ್ಳುತ್ತದೆ.
ಸೇನಾಪಡೆಗಳ ಬಲಿಷ್ಠ ಶಸ್ತ್ರಗಳಲ್ಲಿ ಒಂದಾಗಿರುವ ರಷ್ಯಾ ನಿರ್ಮಿತ ಎಕೆ-203 ವಿಧ್ವಂಸಕ ಬಂದೂಕು ಇನ್ನು ಮುಂದೆ ಭಾರತದಲ್ಲೇ ತಯಾರಾಗಲಿದೆ.
ಮೂರು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಜನೋಪಯೋಗಿ ‘ಯಶಸ್ವಿನಿ’ ಯೋಜನೆಗೆ ಮರುಜೀವ ನೀಡಲು ರಾಜ್ಯ ಸರಕಾರ ಸಿದ್ಧತೆ ನಡೆಸಿದೆ.
ಇನ್ಫೋಸಿಸ್ ಸೈನ್ಸ್ ಫೌಂಡೇಷನ್ (ಐಎಸ್‌ಎಫ್), ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್, ಮಾನವೀಯ ಕ್ಷೇತ್ರ, ಜೀವವಿಜ್ಞಾನ, ಗಣಿತ ವಿಜ್ಞಾನ, ಭೌತಿಕ ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನದಂತಹ ಆರು ಕ್ಷೇತ್ರಗಳ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಇನ್ಫೋಸಿಸ್ ಪ್ರಶಸ್ತಿ 2021 ಅನ್ನು ನೀಡಿ ಗೌರವಿಸಲಾಯಿತು.
ರಾಜ್ಯದ ಆಸ್ತಿ ಮಾಲೀಕರು ತಮ್ಮ ಪ್ರಾಪರ್ಟಿ ದಾಖಲೆಗಳನ್ನು ಸುಲಭವಾಗಿ, ಸುಭದ್ರವಾಗಿ ಸಂಗ್ರಹಿಸಿಡಲು ನೆರವಾಗುವ ಬ್ಲಾಕ್‌ಚೈನ್ ತಂತ್ರಜ್ಞಾನ ಆಧರಿತ ‘ಸ್ಮಾರ್ಟ್‌ಕಾರ್ಡ್’ ಮತ್ತು ‘ಕೀ’ ಹೊಂದಿರುವ ವಿಶೇಷ ಡಿಜಿಟಲ್ ವ್ಯಾಲೆಟನ್ನು ರಾಜ್ಯ ಸರಕಾರವು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದೆ.
ಚುಟುಕು ಸಮಾಚಾರ
ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಅವರು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿ ಬಡ್ತಿ ಪಡೆದಿದ್ದಾರೆ.
ವರ್ಲ್ಡ್ ಅಥ್ಲೆಟಿಕ್ಸ್ ಭಾರತದ ಲೆಜೆಂಡರಿ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಅವರನ್ನು ‘ವರ್ಷದ ಮಹಿಳೆ’ ಎಂದು ಪ್ರಶಸ್ತಿ ನೀಡಿ ಗೌರವಿಸಿದೆ.
ವಿಶ್ವದ ಅತಿ ದುಬಾರಿ ನಗರ ಎನ್ನುವ ಖ್ಯಾತಿಗೆ ಇಸ್ರೇಲಿನ ಟೆಲ್ ಅವಿವ್ ನಗರ ಪಾತ್ರವಾಗಿದೆ. ಜೆರುಸಲೆಂ ಇಸ್ರೇಲಿನ ರಾಜಧಾನಿಯಾಗಿದ್ದರೂ, ದೇಶದ ಆರ್ಥಿಕ ಮತ್ತು ತಂತ್ರಜ್ನಾನ ಕೇಂದ್ರ ಟೆಲ್ ಅವಿವ್ ಆಗಿದೆ. ಎಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್ ಸಂಸ್ಥೆ ನಡೆಸಿದ ಜಾಗತಿಕ ಸಮೀಕ್ಷೆಯಿಂದ ಈ ಮಾಹಿತಿ ಹೊರಬಂದಿದೆ.
ಮತ್ತೊಂದು ಚಂಡಮಾರುತ (ಸೈಕ್ಲೋನ್) ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಈಗ ರೂಪುಗೊಳ್ಳುತ್ತಿರುವ ಚಂಡಮಾರುತಕ್ಕೆ ‘ಜವಾದ್ ಸೈಕ್ಲೋನ್’ (Cyclone Jawad) ಎಂದು ಹೆಸರಿಸಲಾಗಿದೆ
ಅಸ್ಸಾಂ ರಾಜ್ಯದಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ನಿರ್ಮಿಸಲು ನೀಡಿದ ಕೊಡುಗೆಯನ್ನು ಗಮನಿಸಿ ಟಾಟಾ ಟ್ರಸ್ಟ್‌ನ ಅಧ್ಯಕ್ಷ ರತನ್ ಟಾಟಾ ಅವರಿಗೆ ರಾಜ್ಯ ಸರ್ಕಾರವು ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಅಸ್ಸಾಂ ಬೈಭವ್’ವನ್ನು ಪ್ರದಾನ ಮಾಡಲಿದೆ
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡೇತರರಿಗೆ ಮತ್ತು ಜಗತ್ತಿನಾದ್ಯಂತ ಎಲ್ಲಿ ಬೇಕಾದರೂ ಭಾಷೆಯನ್ನು ಕಲಿಯಲು ಬಯಸುವವರಿಗೆ ನೆರವಾಗಬಲ್ಲ ‘ಕನ್ನಡ ನುಡಿ ಕಲಿಕೆ ಪಟ’ ಎಂಬ 20 ನಿಮಿಷಗಳ ಮಾಡ್ಯೂಲ್‌ಗಳನ್ನು ಹೊರ ತಂದಿದೆ.
ಉದಯೋನ್ಮುಖ ನಿರ್ದೇಶಕ ನಟೇಶ್ ಹೆಗ್ಡೆ ನಿರ್ದೇಶಕನದ ಕನ್ನಡ ಸಿನಿಮಾ ‘ಪೆಡ್ರೊ’, ಫ್ರಾನ್ಸ್ ನಲ್ಲಿ ನಡೆದ ಫೆಸ್ಟಿವಲ್ ಡೇ 3 ಕಾಂಟಿನೆಂಟ್ಸ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಗೆದ್ದುಕೊಂಡಿದೆ.
ಯಲಹಂಕದ ಪುಟ್ಟೇನಹಳ್ಳಿ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವನ್ನು ರಕ್ಷಣೆ ಮಾಡಬೇಕು ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈ ಕೋರ್ಟ್ ಅರಣ್ಯ ಇಲಾಖೆಗೆ ಅದರ ನಿರ್ವಹಣಾ ಮೇಲುಸ್ತುವಾರಿ ನೀಡಿದೆ.
ಚುಟುಕು ಸಮಾಚಾರ
ಡಿಸೆಂಬರ್ 1ಅನ್ನು ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸಲಾಗುತ್ತದೆ.
ಬಾರ್ಬಡೋಸ್ ತನ್ನನ್ನು ಹೊಸ ಗಣರಾಜ್ಯವೆಂದು ಘೋಷಿಸಿಕೊಂಡಿದ್ದು, ಸಾಂಡ್ರಾ ಮೇಸನ್ ಅವರನ್ನು ತನ್ನ ಮೊದಲ ಅಧ್ಯಕ್ಷೆಯನ್ನಾಗಿ ಚುನಾಯಿಸಿದೆ. ಈ ಮೂಲಕ 400 ವರ್ಷಗಳ ಬ್ರಿಟನ್ ಅಧಿಪತ್ಯವನ್ನು ಬಾರ್ಬಡೋಸ್ ಕೊನೆಗಾಣಿಸಿದೆ.
ವಿದೇಶದಿಂದ ಭಾರತಕ್ಕೆ ಬಂದ ಪ್ರಯಾಣಿಕರಿಗೆ ಕೊರೊನಾ ಸೋಂಕು ದೃಢಪಟ್ಟರೆ ಅವರ ಜೈವಿಕ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಬೇಕು ಮತ್ತು ವರದಿ ಬರುವವರೆಗೆ ಮನೆಯಲ್ಲಿಯೇ ಪ್ರತ್ಯೇಕ ವಾಸದಲ್ಲಿಡಬೇಕು ಎಂದು ಕೇಂದ್ರ ಸರಕಾರವು ರಾಜ್ಯಗಳಿಗೆ ಸೂಚನೆ ನೀಡಿದೆ.
ಇಸ್ರೇಲ್ ನಿರ್ಮಿತ ವಿಧ್ವಂಸಕ ಹೆರಾನ್ ಡ್ರೋನ್ ಕೊನೆಗೂ ಭಾರತೀಯ ಸೇನೆಯ ಬತ್ತಳಿಕೆ ಸೇರಿದ್ದು, ಲಡಾಖ್ ಸೆಕ್ಟರ್ನಲ್ಲಿ ನಿಯೋಜನೆಗೊಳಿಸಲಾಗುತ್ತದೆ
ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ಯನ್ನು ದೇಶಾದ್ಯಂತ ಜಾರಿಗೊಳಿಸುವ ಕುರಿತು ಇದುವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸರಕಾರ ಲೋಕಸಭೆಗೆ ಮಾಹಿತಿ ನೀಡಿದೆ.
ಭಾರತದಲ್ಲಿ ಕೋವಿಡ್ – 19 ಬಿಕ್ಕಟ್ಟಿನ ನಡುವೆಯೂ 2021ರ ಮೊದಲ 11 ತಿಂಗಳಿನಲ್ಲಿ 37 ಯುನಿಕಾರ್ನ್‌ಗಳು ಹೊರಹೊಮ್ಮಿವೆ. ಈ ಮೂಲಕ ದೇಶದ ಒಟ್ಟು ಯುನಿಕಾರ್ನ್‌ಗಳ ಸಂಖ್ಯೆ 77ಕ್ಕೆ ಏರಿದೆ.
NammaKPSC Current Affairs - November 2021
ಚುಟುಕು ಸಮಾಚಾರ
ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಲಯೊನೆಲ್ ಮೆಸ್ಸಿ ಅವರು ವಿಶ್ವದ ಉತ್ತಮ ಆಟಗಾರ ವಿಭಾಗದಲ್ಲಿ ಪ್ರತಿಷ್ಠಿತ ಬಾಲನ್ ಡಿ’ಓರ್ ಪ್ರಶಸ್ತಿಯನ್ನು 7ನೇ ಬಾರಿಗೆ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ರಾಬರ್ಟ್ ಲೆವಂಡೊಸ್ಕಿ ಮತ್ತು ಜಾರ್ಗಿನ್‌ಹೊ ಅವರನ್ನು ಹಿಂದಿಕ್ಕಿದ್ದಾರೆ.
ಹಿಂದೂ ಮಹಾಸಾಗರದಲ್ಲಿ ಭದ್ರತೆಯನ್ನು ಹೆಚ್ಚಿಸಲು ಮತ್ತು ನೌಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ನ ನೌಕಾಪಡೆಗಳು ಸಾಗರೋತ್ತರ ತ್ರಿಪಕ್ಷೀಯ ಸಮರಾಭ್ಯಾಸ ನಡೆಸಿವೆ.
ರಾಜ್ಯದಲ್ಲಿ ಹಸುಗಳ ಸಂಖ್ಯೆ ವೃದ್ಧಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ’ಲಿಂಗ ನಿರ್ಧಾರಿತ ವೀರ್ಯ’ ಬಳಕೆ ಪ್ರಕ್ರಿಯೆ ಚುರುಕುಗೊಳಿಸಲು 2022 ಜನವರಿಯಿಂದ ಸರಕಾರ ಹೊಸ ಅಭಿಯಾನ ಆರಂಭಿಸಲಿದೆ.
ಚುಟುಕು ಸಮಾಚಾರ
ಭಾರತ ಮತ್ತು ಫ್ರೆಂಚ್ ಸೇನಾ ಪಡೆಗಳ ಜಂಟಿ ಸಮಾರಾಭ್ಯಾಸ ‘ಎಕ್ಸ್ ಶಕ್ತಿ’. ಫ್ರಾನ್ಸ್‌ನ ಮಿಲಿಟರಿ ಶಾಲೆಯಲ್ಲಿ ಕಾರ್ಯಾಚರಣೆಯ ಅಭ್ಯಾಸ ನಡೆದಿದ್ದು, ಭಾರತದ 3 ಅಧಿಕಾರಿಗಳು, 3 ಜೂನಿಯರ್ ಕಮಿಷನ್ಡ್ ಅಧಿಕಾರಿಗಳು, 37 ಸೈನಿಕರು ಭಾಗಿಯಾಗಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಕಾಣಿಸೊಂಡಿರುವ ಹೊಸ ರೂಪಾಂತರ ವಿಶ್ವಕ್ಕೆ ಮತ್ತೊಮ್ಮೆ ಬೆದರಿಕೆವೊಡ್ಡುತ್ತಿದೆ. ಇದು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಅಪಾಯಕಾರಿ ಎಂದು ನಂಬಲಾಗಿದ್ದು, ಕಳೆದ ಒಂದು ವಾರದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಹೊಸ ಪ್ರಕರಣಗಳು ಶೇಕಡ 200 ರಷ್ಟು ಹೆಚ್ಚಾಗಿದೆ.
ನೀತಿ ಆಯೋಗದ ಬಹು ಆಯಾಮ ಬಡತನ ಸೂಚ್ಯಂಕ(ಎಂಪಿಐ)ದ ಪ್ರಕಾರ ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ರಾಜ್ಯಗಳು ಭಾರತದ ಅತ್ಯಂತ ಬಡ ರಾಜ್ಯಗಳಾಗಿ ಹೊರಹೊಮ್ಮಿವೆ.
ಶೀಘ್ರವೇ ಕರ್ನಾಟಕ ತನ್ನದೇ ಆದ ರಾಜ್ಯ ಕಪ್ಪೆಯೊಂದನ್ನು ಹೊಂದಲಿದೆ ಹಾಗೂ ಈ ರೀತಿ ರಾಜ್ಯ ಕಪ್ಪೆಯೊಂದು ಹೊಂದಿದ ಭಾರತದ ಮೊದಲ ರಾಜ್ಯವಾಗಲಿದೆ.
ಚುಟುಕು ಸಮಾಚಾರ
ಪ್ರತಿ ವರ್ಷ ನವೆಂಬರ್ 26 ರಂದು ರಾಷ್ಟ್ರೀಯ ಹಾಲು ದಿನವನ್ನು ಆಚರಿಸಲಾಗುತ್ತದೆ.
1949ರಲ್ಲಿ ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನೆಪಿಗಾಗಿ ದೇಶ ಇಂದು (ನವೆಂಬರ್ 26) ಸಂವಿಧಾನ ದಿನವನ್ನು ಆಚರಿಸುತ್ತಿದೆ.
ಭಾರತೀಯ ನೌಕಾಪಡೆಯು ಮುಂಬೈನ ನೌಕಾನೆಲೆಯಲ್ಲಿ ಜಲಾಂತರ್ಗಾಮಿ ‘ಐಎನ್ಎಸ್ ವೇಲಾ’ವನ್ನು ಸೇವೆಗೆ ಸೇರ್ಪಡೆ ಮಾಡಿಕೊಂಡಿದೆ. ‘ವೇಲಾ’ ಆಗಮನದೊಂದಿಗೆ ದೇಶದ ನೌಕಾ ಶಕ್ತಿಗೆ ಮತ್ತಷ್ಟು ಬಲ ಬಂದಿದೆ.
ಭಾರತೀಯ ವಾಯುಪಡೆಗೆ (IAF) ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್‌ಗಳ (LCH) ಮೊದಲ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಹಸ್ತಾಂತರಿಸಿದ್ದಾರೆ. ಎಚ್‌ಎಎಲ್ ನಿರ್ಮಿಸಿರುವ ಈ ಹೆಲಿಕಾಪ್ಟರ್‌ನ ಮೊದಲ ಹಂತವು ಮೇಕ್ ಇನ್ ಇಂಡಿಯಾಗೆ ದೊಡ್ಡ ಚೈತನ್ಯ ನೀಡಲಿದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ, ಪ್ರತೀ ವ್ಯಕ್ತಿಗೆ ಪ್ರತೀ ತಿಂಗಳು ಐದು ಕೆ.ಜಿ. ಆಹಾರ ಧಾನ್ಯವನ್ನು ಉಚಿತವಾಗಿ ನೀಡುವುದನ್ನು 2022ರ ಮಾರ್ಚ್‌ವರೆಗೆ ವಿಸ್ತರಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಐದನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದ ನೋಯ್ಡಾ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.
ಮಾನವಸಂಪನ್ಮೂಲ ಸಲಹಾ ಸಂಸ್ಥೆ (ಹೆಚ್ ಆರ್ ಕನ್ಸಲ್ಟೆನ್ಸಿ) ಎಮರ್ಜಿಂಗ್ ನಡೆಸಿರುವ ಹಾಗೂ ಟೈಮ್ಸ್ ಉನ್ನತ ಶಿಕ್ಷಣ (ಟಿಹೆಚ್ಇ) ಪ್ರಕಟಿಸಿರುವ ಜಾಗತಿಕ ಉದ್ಯೋಗಾರ್ಹತೆ ಶ್ರೇಣಿ ಹಾಗೂ ಸಮೀಕ್ಷೆಯಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರು ವಿಶ್ವವಿದ್ಯಾನಿಲಯ ಪ್ರವೇಶ ಪಡೆದಿದೆ.
ರಾಜ್ಯದಲ್ಲಿ ಶೌಚಾಲಯ ಬಳಕೆಯಲ್ಲಿ ತಾರತಮ್ಯಗಳು ಕಂಡು ಬಂದಿದೆ ಎಂದು 5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ತನ್ನ ವರದಿಯಲ್ಲಿ ತಿಳಿಸಿದೆ.
ಚುಟುಕು ಸಮಾಚಾರ
ನಮ್ಮ ಸೌರ ಮಂಡಲದ ರಚನೆಯ ಸಂದರ್ಭದಲ್ಲಿ ಗ್ರಹಕಾಯಗಳಾಗದೇ ಉಳಿದ ಕ್ಷುದ್ರಗ್ರಹಗಳೆಂಬ ಆಕಾಶಕಾಯಗಳಿಂದ ನಮ್ಮ ಭೂಮಿಗೆ ನಿರಂತರ ಬೆದರಿಕೆ ಇದ್ದೇ ಇರುತ್ತದೆ. ಕ್ಷುದ್ರಗ್ರಹಗಳು ತಮ್ಮ ಪಥ ಬದಲಿಸಿ ಭೂಮಿಯತ್ತ ಧಾವಿಸಿ ಬಂದು ಅಪ್ಪಳಿಸಿದರೆ ಉಂಟಾಗುವ ಅನಾಹುತ ಊಹಿಸಲೂ ಅಸಾಧ್ಯ. ಇದೇ ಕಾರಣಕ್ಕೆ ಮಾನವ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರೀ ಸಾಹಸವೊಂದಕ್ಕೆ ಅಮೆರಿಕದ ಖಗೋಳ ವಿಜ್ಞಾನ ಸಂಸ್ಥೆ ನಾಸಾ ಕೈ ಹಾಕಿದೆ.
ವಿಶ್ವದಲ್ಲೇ ಬೃಹತ್ ಸಾರ್ವತ್ರಿಕ ಆರೋಗ್ಯ ಯೋಜನೆ ಎಂಬ ಹಿರಿಮೆಗೆ ಪಾತ್ರವಾಗಿರುವ ‘ಆಯುಷ್ಮಾನ್ ಭಾರತ್’ ಯೋಜನೆಗೆ ಮತ್ತಷ್ಟು ಉತ್ತೇಜನ ನೀಡಲು ಕೇಂದ್ರ ಸರಕಾರ ಮುಂದಾಗಿದೆ. ಇನ್ಮುಂದೆ ಚಿಕಿತ್ಸಾ ವೆಚ್ಚ 10 ದಿನಗಳಲ್ಲಿಯೇ ಮರುಪಾವತಿ ಆಗಲಿದೆ.
ಭಾರತ ತನ್ನ ಸಂಗ್ರಹಾಗಾರಗಳಿಂದ 50 ಲಕ್ಷ ಬ್ಯಾರೆಲ್ ತೈಲವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ನಿರ್ಧರಿಸಿದೆ.
ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಹಾಲಯವನ್ನು ಬಳ್ಳಾರಿಯಿಂದ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ಬಿಳಿಕಲ್ಲು ಮೀಸಲು ಅರಣ್ಯಕ್ಕೆ ಸ್ಥಳಾಂತರಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಇತ್ತೀಚಿಗೆ ಅನುಮತಿಸಿದೆ.
ಚುಟುಕು ಸಮಾಚಾರ
ಭಾರತದ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರ ಪುಣ್ಯಸ್ಮರಣೆ ದಿನವಾದ ಇಂದು( ನ.23) ದೇಶದ ವಿವಿಧ ರಂಗಗಳ ಗಣ್ಯರು ಅನಂತ ನಮನಗಳನ್ನು ಸಲ್ಲಿಸಿದ್ದಾರೆ.
ಬಾಲಾಕೋಟ್ ವೈಮಾನಿಕ ಸರ್ಜಿಕಲ್ ಸ್ಟ್ರೈಕ್ ನಂತರದ ಘಟನೆಯಲ್ಲಿ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ಗೆ ನ.22 ರಂದು ವೀರ ಚಕ್ರ ಪಶಸ್ತಿ ಪ್ರದಾನ ಮಾಡಲಾಗಿದೆ .
ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ಘೋಷಣೆ ಮಾಡುವ ವಿವಾದಾತ್ಮಕ ನಿರ್ಣಯವನ್ನು ಆಂಧ್ರ ಪ್ರದೇಶ ಸರ್ಕಾರ ಕೊನೆಗೂ ಹಿಂಪಡೆದಿದ್ದು, ಸಿಎಂ ಜಗನ್ ಮೋಹನ್ ರೆಡ್ಡಿ ಸರ್ಕಾರ 3 ರಾಜಧಾನಿ ಮಸೂದೆಯನ್ನು ಆಂಧ್ರ ಅಸೆಂಬ್ಲಿಯಲ್ಲಿ ಹಿಂದಕ್ಕೆ ಪಡೆದಿದೆ.
ಬೆಂಗಳೂರು ವಿಮಾನ ನಿಲ್ದಾಣ ಮತ್ತೊಂದು ಅಂತಾರಾಷ್ಟ್ರೀಯ ಹಿರಿಮೆಗೆ ಪಾತ್ರವಾಗಿದ್ದು, ರೋಸೆನ್‌ಬೌರ್ ಫೈರ್ ಫೈಟಿಂಗ್ ಸಿಮ್ಯುಲೇಟರ್ ನಿಯೋಜನೆ ಮಾಡುವ ಮೂಲಕ ಈ ವ್ಯವಸ್ಥೆ ಹೊಂದಿದ ದಕ್ಷಿಣ ಏಷ್ಯಾದ ಮೊದಲ ವಿಮಾನ ನಿಲ್ದಾಣ ಎಂಬ ಕೀರ್ತಿಗೆ ಭಾಜನವಾಗಿದೆ.
ಹಾವಿನ ವಿಷ ಕುರಿತಾದ ಅಧ್ಯಯನ ಮತ್ತು ವಿಷ ನಿರೋಧಕ (Anti Venom) ಸಂಶೋಧನೆ ಸಲುವಾಗಿ ಸರ್ಕಾರಿ ಅನುದಾನಿತ ಪ್ರಯೋಗಾಲಯವೊಂದು ಉರಗ ಉದ್ಯಾನ ಸ್ಥಾಪನೆಗೆ ಮುಂದಾಗಿದೆ.
ಚುಟುಕು ಸಮಾಚಾರ
ಮೌಂಟ್ ಅಬುವಿನಲ್ಲಿ ಇರುವ ಪಿಆರ್‌ಎಲ್‌ನ 1.2 ಮೀಟರ್ ದೂರದರ್ಶಕದಲ್ಲಿ, ಆಪ್ಟಿಕಲ್ ಫೈಬರ್‌ಫೆಡ್ ಸ್ಪೆಕ್ಟ್ರೊಗ್ರಾಫ್ (ಪರಸ್) ಅನ್ನು ಬಳಸಿಕೊಂಡು ಈ ಅನ್ಯ ಸೌರಮಂಡಲದ ಗ್ರಹವನ್ನು ಪತ್ತೆ ಮಾಡಲಾಗಿದೆ.
ಅತ್ಯಾಚಾರದ ಅಪರಾಧಿಗಳ ಕಾಮಾಸಕ್ತಿ ಕುಗ್ಗಿಸಲು ಮುಂದಾಗಿರುವ ಪಾಕಿಸ್ತಾನ ಸರ್ಕಾರಕ್ಕೆ ಒಂದು ರೀತಿಯಲ್ಲಿ ಜಯ ಸಿಕ್ಕಿದೆ. ಕಾಮಾಶಕ್ತಿ ಕುಗ್ಗಿಸಲು ರಾಸಾಯನಿಕ ಬಳಕೆ ಮಾಡುವ ಮಸೂದೆಗೆ ಪಾಕ್ ಸಂಸತ್ನಲ್ಲಿ ಅಂಗೀಕಾರ ಸಿಕ್ಕಿದೆ.
2021-25ರ ಅವಧಿಗೆ ವಿಶ್ವಸಂಸ್ಥೆಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಯ ಕಾರ್ಯಕಾರಿ ಮಂಡಳಿಗೆ ನಡೆದ ಮರುಚುನಾವಣೆಯಲ್ಲಿ ಭಾರತ ಜಯಗಳಿಸಿದೆ.
ದೇಶದ ಮೊದಲ ರಹಸ್ಯ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ ನೌಕೆ ಐಎನ್ಎಸ್ ವಿಶಾಖಪಟ್ಟಂ ಅನ್ನು ಅಧಿಕೃತವಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಲಾಯಿತು.
ಕೇಂದ್ರ ಸರ್ಕಾರವು ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ಮೂಲಕ 2021ನೇ ಸಾಲಿನ ಭಾರತದ ಅತ್ಯಂತ ಸ್ವಚ್ಛ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸತತ ಐದನೇ ವರ್ಷ ಕೂಡ ಮಧ್ಯಪ್ರದೇಶದ ಇಂದೋರ್, ಅತ್ಯಂತ ಸ್ವಚ್ಛ ನಗರ ಎನಿಸಿಕೊಂಡಿದೆ.
ದಾಸಶ್ರೇಷ್ಠ ಕನಕದಾಸರ 534ನೇ ಜಯಂತಿಯನ್ನು 22 ನವೆಂಬರ್ ರಂದು ಆಚರಿಸಲು ಸಕಲ ಸಿದ್ಧತೆ ನಡೆದಿದೆ
ಚುಟುಕು ಸಮಾಚಾರ
ಆಸ್ಟ್ರೇಲಿಯಾದಲ್ಲಿ ಅತ್ಯಂತ ಅಪಾಯಕಾರಿ ಪ್ರಾಣಾಂತಿಕ ಮತ್ತು ದೊಡ್ಡ ಜೇಡವೊಂದು ಪತ್ತೆಯಾಗಿದೆ.ಅಷ್ಟೇ ಅಲ್ಲ ಇದೇ ಜೇಡ ಆ್ಯಂಟಿ ವಿಷಕಾರಿಯೂ ಆಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮುಂದಿನ ವರ್ಷ ತನ್ನ ಮೊದಲ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆಗೊಳಿಸುವ ನಿರೀಕ್ಷೆ ಇದೆ.
ಕಳೆದ ಒಂದು ವರ್ಷದಿಂದ ವ್ಯಾಪಕ ವಿರೋಧ, ಪ್ರತಿಭಟನೆಗೆ ಕಾರಣವಾಗಿದ್ದ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.
ದುರ್ಬಲ ವರ್ಗದ ಮಹಿಳೆಯರಿಗೆ ರಿಯಾಯಿತಿ ಸೇರಿದಂತೆ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಮತ್ತು ಉತ್ತೇಜಿಸುವ ನಿಟ್ಟಿನಲ್ಲಿ ಸ್ವಂತ ಉದ್ಯಮ ಆರಂಭಿಸಲು ಮುಂದೆ ಬಂದರೆ, ಅಂತಹವರಿಗೆ ಇಲಾಖೆಯ ವತಿಯಿಂದ ಸಾಧ್ಯವಿರುವ ಎಲ್ಲಾ ಅಗತ್ಯ ಸವಲತ್ತುಗಳನ್ನು ನೀಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಹೇಳಿದ್ದಾರೆ.
ಗಮನಾರ್ಹ ಸಾಧನೆ ಮಾಡಿರುವ ಐದು ಕಂಪನಿಗಳಿಗೆ `ಸ್ಮಾರ್ಟ್ ಬಯೋ ಪುರಸ್ಕಾರ’ ಮತ್ತು ಅತ್ಯುತ್ತಮ ಸಾಧನೆ ಮಾಡಿರುವ 15 ನವೋದ್ಯಮಗಳಿಗೆ `ಬೆಂಗಳೂರು ಇಂಪ್ಯಾಕ್ಟ್’ ಪುರಸ್ಕಾರವನ್ನು ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಎರಡನೇ ದಿನ ಪ್ರದಾನ ಮಾಡಲಾಯಿತು.
ಎಚ್‌ಎಎಲ್‌ನಂತಹ ಸಂಸ್ಥೆ ಹೊಂದಿರುವ ಬೆಂಗಳೂರನ್ನು ಹೆಲಿ-ಹಬ್ ಆಗಿ ಪರಿವರ್ತಿಸುವ ಮಹತ್ವದ ಯೋಜನೆ ಇದೆ. ದೇಶದ ಒಟ್ಟಾರೆ ಅಭಿವೃದ್ಧಿ ದೃಷ್ಟಿಯಿಂದ ಇದು ಬಹಳ ಮಹತ್ವದ್ದಾಗಿದೆ.
ಚುಟುಕು ಸಮಾಚಾರ
ನವೆಂಬರ್ 19 ರಂದು ಚಂದ್ರಗ್ರಹಣವಿದ್ದು ಈ ಚಂದ್ರಗ್ರಹಣ ಈ ಶತಮಾನದ ಸುದೀರ್ಘ ಚಂದ್ರಗ್ರಹಣವಾಗಿದೆ.ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಹಾದುಹೋಗಿ ಚಂದ್ರನ ಮೇಲ್ಮೈಯಲ್ಲಿ ನೆರಳು ರೂಪಿತವಾಗುತ್ತದೆ. ಆಗ ಭೂಮಿಯು 97 ಪ್ರತಿಶತದಷ್ಟು ಪೂರ್ಣ ಚಂದ್ರನನ್ನು ಸೂರ್ಯನ ಕಿರಣಗಳಿಂದ ಮರೆಮಾಡುತ್ತದೆ. ಇದು ಮೊದಲ ಬಾರಿಗೆ ಸಂಭವಿಸಲಿದೆ.
ಉತ್ತರ ವಲಯದಲ್ಲಿ ಲಾಜಿಸ್ಟಿಕ್ಸ್ ಪೂರೈಕೆಯನ್ನು ಬಲಪಡಿಸುವ ಉದ್ದೇಶದಿಂದ ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಯು ಜಂಟಿ ಸಮರಾಭ್ಯಾಸ ನಡೆಸಿದವು. ಈ ಕಾರ್ಯಾಚರಣೆಗೆ ‘ಆಪರೇಷನ್ ಹರ್ಕ್ಯುಲಸ್’ ಎಂದು ಹೆಸರಿಸಡಲಾಗಿತ್ತು.
ಪೋಷಣ್ ಟ್ರ್ಯಾಕರ್ ಎಂಬುದು ಮೊಬೈಲ್ ಆ್ಯಪ್ ಆಧಾರಿತ ತಂತ್ರಜ್ಞಾನ. ಕೇಂದ್ರ ಸರಕಾರ ಜಾರಿಗೆ ತಂದಿರುವ ಈ ಆ್ಯಪ್ ಅನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ವಹಿಸುತ್ತಿದೆ. ಮಕ್ಕಳಲ್ಲಿನ ಪೌಷ್ಟಿಕತೆ ಮತ್ತು ಅಪೌಷ್ಟಿಕತೆ ಮಾತ್ರವಲ್ಲದೆ, ಗರ್ಭಿಣಿ ಮತ್ತು ಬಾಣಂತಿಯರಲ್ಲಿ ರಕ್ತಹೀನತೆ ಸಮಸ್ಯೆಯಿದ್ದರೆ ಅದರ ಬಗೆಗೂ ಈ ಆ್ಯಪ್ ನಲ್ಲಿ ನಮೂದಿಸಬಹುದು.
ಶಿಮ್ಲಾದಲ್ಲಿ ನಡೆದ ಅಖಿಲ ಭಾರತ ಅಧ್ಯಕ್ಷರ ಸಮ್ಮೇಳನದ ಶತಮಾನೋತ್ಸವದ ವರ್ಷಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಬಿರ್ಲಾ, ಶಾಸಕಾಂಗ ಸಂಸ್ಥೆಗಳಲ್ಲಿ ಸಭೆಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವುದು ಮತ್ತು ಕಾನೂನು ರಚನೆಯ ಬಗ್ಗೆ ಚರ್ಚೆಯ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಚುಟುಕು ಸಮಾಚಾರ
ಕಳೆದ ಎರಡು ದಶಕಗಳಲ್ಲಿ ಜಾಗತಿಕ ಸಂಪತ್ತು ಮೂರು ಪಟ್ಟು ಅಧಿಕವಾಗಿದೆ. ಈ ಹಾದಿಯಲ್ಲಿ ಅಮೆರಿಕವನ್ನು ಹಿಂದಿಕ್ಕಿ ಜಾಗತಿಕ ಮಟ್ಟದಲ್ಲಿ ಚೀನಾ ಮೊದಲ ಸ್ಥಾನಕ್ಕೇರಿದೆ.
ಕರ್ತಾರ್ಪುರ ಕಾರಿಡಾರ್ ನ್ನು ಮತ್ತೆ ತೆರೆಯುವ ಭಾರತ ಸರ್ಕಾರದ ನಿರ್ಧಾರವನ್ನು ಪಾಕಿಸ್ತಾನದ ಉನ್ನತ ಸಿಖ್ ಸಂಸ್ಥೆ ಮತ್ತು ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ಸ್ವಾಗತಿಸಿದೆ, ಇದು ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಅವರ ಕೊನೆಯ ನಿವಾಸಕ್ಕೆ ಯಾವುದೇ ಅಡೆತಡೆಯಿಲ್ಲದೆ ಭೇಟಿ ನೀಡಲು ಭಾರತೀಯ ಸಿಖ್ಖರಿಗೆ ಸಹಾಯ ಮಾಡುತ್ತದೆ
ತಮಿಳುನಾಡಿನ ತಂಜಾವೂರಿನಲ್ಲಿ ಸೋಮವಾರ ದೇಶದ ಮೊದಲ ಆಹಾರ ವಸ್ತು ಸಂಗ್ರಹಾಲಯವನ್ನು (ಮ್ಯೂಸಿಯಂ) ಕೇಂದ್ರ ವಾಣಿಜ್ಯ, ಕೈಗಾರಿಕೆ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪೀಯೂಷ್ ಗೋಯಲ್ ಅವರು ವರ್ಚುವಲ್ ಕಾರ್ಯಕ್ರಮದ ಮೂಲಕ ಉದ್ಘಾಟಿಸಿದರು.
ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ನಲ್ಲಿ ನವೀಕೃತ ಅತ್ಯಾಧುನಿಕ ರಾಣಿ ಕಮಲಾಪತಿ ರೈಲ್ವೇ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
ದೇಶದಲ್ಲೇ ಅತೀ ಉದ್ದದ ಎಕ್ಸ್ಪ್ರೆಸ್ ವೇ ಎನ್ನುವ ಹಿರಿಮೆಗೆ ಪಾತ್ರವಾಗಿರುವ ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯಲ್ಲಿರುವ ಪೂರ್ವಾಂಚಲ ಎಕ್ಸ್ಪ್ರೆಸ್ ವೇ ಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಗೊಳಿಸಿದರು.
ಕೊರೊನಾ ಮತ್ತು ಅದರ ರೂಪಾಂತರಿಗಳು ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಬೆನ್ನಲ್ಲಿಯೇ ಹೊಸ ಸೋಂಕು ಸದ್ದಿಲ್ಲದೆ ಭಾರತದಲ್ಲಿ ವ್ಯಾಪಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.’ಕೊರೊನಾ ಬಳಿಕ ಆ್ಯಂಟಿ ಮೈಕ್ರೊಬಿಯಲ್ ರೆಸಿಸ್ಟನ್ಸ್ (ಎಎಂಆರ್) ಎಂಬ ಸೋಂಕು ತೀವ್ರಗತಿಯಲ್ಲಿ ವ್ಯಾಪಿಸುತ್ತಿದೆ.
ಬಹು ನಿರೀಕ್ಷಿತ ಬೆಂಗಳೂರು ತಂತ್ರಜ್ಞಾನ ಶೃಂಗದ 24ನೇ ವರ್ಷದ ಸಮಾವೇಶ ಆರಂಭವಾಗಲಿದೆ. ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಹೈಬ್ರಿಡ್ ಮಾದರಿಯಲ್ಲಿ ಮುಂದಿನ ಮೂರು ದಿನಗಳ ಕಾಲ ನಡೆಯಲಿರುವ ಈ ಸಮಾವೇಶಕ್ಕೆ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡುಚಾಲನೆ ನೀಡಲಿದ್ದಾರೆ.
ಅಕಾಲಿಕವಾಗಿ ವಿಧಿವಶರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ರಾಜ್ಯ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ
ಉತ್ತರ ಪ್ರದೇಶದ ವಾರಣಾಸಿಗೆ ರೇಷ್ಮೆ ಪೂರೈಕೆ ಮಾಡಲು ಕರ್ನಾಟಕ ಮುಂದಾಗಿದೆ. ಈ ಕುರಿತಾಗಿ ಉತ್ತರ ಪ್ರದೇಶ ರೇಷ್ಮೆ ಸಚಿವರ ಜೊತೆ ಸಚಿವ ಡಾ.ಕೆ.ಸಿ. ನಾರಾಯಣಗೌಡ ಅವರ ನೇತೃತ್ವದ ನಿಯೋಗದ ಸಭೆ ನಡೆಸಲಿದೆ.
ಚುಟುಕು ಸಮಾಚಾರ
ಇತಿಹಾಸಕಾರ–ಲೇಖಕ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಬಾಬಾಸಾಹೇಬ್ ಪುರಂದರೆ (ಬಲ್ವಂತ್ ಮೊರೇಶ್ವರ್ ಪುರಂದರೆ) ಅವರು ನಿಧನರಾಗಿದ್ದಾರೆ.
ಬಿರ್ಸಾ ಮುಂಡಾ ಅವರ ಜನ್ಮದಿನವಾದ ನವೆಂಬರ್ 15 ಅನ್ನು ‘ಜಂಜಾಟಿಯ ಗೌರವ್ ದಿವಸ್’ ಎಂದು ಆಚರಿಸಲು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ರಷ್ಯಾದ ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆ, ಬ್ರಿಟನ್‌ನ ಎಂ777 ಹೊವಿಟ್ಜರ್ ಗನ್‌ಗಳು ಭಾರತೀಯ ಸೇನೆಯ ಬತ್ತಳಿಕೆ ಸೇರಿದ್ದು, ಗಡಿಯಲ್ಲಿ ಸದಾ ಕಿರಿಕಿರಿ ಉಂಟುಮಾಡುವ ಚೀನಾ ಜತೆ ಹೋರಾಡಲು ಮತ್ತಷ್ಟು ಶಕ್ತಿ ತುಂಬಿವೆ.
ಕಲುಷಿತ ನೀರು ಹಾಗೂ ಆಹಾರದಿಂದ ಮನುಷ್ಯರಿಗೆ ಹರಡುವ ಮಾರಕ ನೋರೋವೈರಸ್‌ನ ಪ್ರಕರಣಗಳು ಕೇರಳದ ವಯನಾಡು ಜಿಲ್ಲೆಯಲ್ಲಿ ದೃಢಪಟ್ಟಿವೆ.
ದೇಶದಲ್ಲೇ ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲಿ ಹಸುಗಳಿಗೆ ಆಂಬುಲೆನ್ಸ್ ಸೇವೆಯನ್ನು ಒದಗಿಸುವ ಯೋಜನೆಗೆ ಚಾಲನೆ ನೀಡಲಾಗುತ್ತಿದೆ.
ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಕೇಂದ್ರ ತನಿಖಾ ದಳ (ಸಿಬಿಐ) ನಿರ್ದೇಶಕರ ಅಧಿಕಾರ ಅವಧಿಯಲ್ಲಿ 5 ವರ್ಷಗಳವರೆಗೆ ವಿಸ್ತರಣೆ ಮಾಡುವ ಎರಡು ಸುಗ್ರೀವಾಜ್ಞೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ
ದೇಶಾದ್ಯಂತ ಮಕ್ಕಳ ಮೇಲೆ ನಡೆದ ಸೈಬರ್ ದೌರ್ಜನ್ಯ ಪ್ರಕರಣಗಳು 2019ಕ್ಕೆ ಹೋಲಿಸಿದರೆ 2020ರಲ್ಲಿ ಶೇ.400ರಷ್ಟು ಹೆಚ್ಚಾಗಿದೆ. ಮಕ್ಕಳ ಮೇಲಿನ ಸೈಬರ್ ದೌರ್ಜನ್ಯ ಪ್ರಕರಣಗಳು ಜಾಸ್ತಿ ದಾಖಲಾಗಿರುವ ಐದು ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
ದೆಹಲಿಯಲ್ಲಿ ಶುದ್ಧಗಾಳಿಗೆ ಪರದಾಡುತ್ತಿರುವ ಮಧ್ಯೆ, ದೇಶದಲ್ಲಿ ಅತೀ ಹೆಚ್ಚು ಬಿಸಿಲಿನ ತಾಪ ಇರುವ 50 ಜಿಲ್ಲೆಗಳ ಪಟ್ಟಿಯಲ್ಲಿ ಕಲಬುರಗಿ ಮತ್ತು ವಿಜಯಪುರ ಸ್ಥಾನ ಪಡೆದಿವೆ. ಮುಂಬರುವ ದಿನಗಳಲ್ಲಿ ಬಿಸಿಲ ಪ್ರಖರತೆ ಹೆಚ್ಚಾಗುವ ಆತಂಕವನ್ನು ಪರಿಸರ ಸಂಬಂಧಿತ ವರದಿಗಳು ವ್ಯಕ್ತಪಡಿಸಿವೆ.
ನಾಡಗೀತೆಗೆ ಮೈಸೂರು ಅನಂತ ಸ್ವಾಮಿ ಅವರ ರಾಗ ಸಂಯೋಜನೆಯ ದಾಟಿಯನ್ನೇ ಉಳಿಸಿಕೊಳ್ಳುವಂತೆ ಎಚ್.ಆರ್.ಲೀಲಾವತಿ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ಸರಕಾರ ಯಾವುದೇ ಕಾರಣಕ್ಕೂ ಒಪ್ಪಬಾರದು ಎಂದು ಸುಗಮ ಸಂಗೀತಗಾರರು ಒತ್ತಾಯಿಸಿದ್ದಾರೆ.
ಚುಟುಕು ಸಮಾಚಾರ
ನವೆಂಬರ್ 14 ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನ. ಈ ದಿನವನ್ನು ಮಕ್ಕಳ ದಿನಾಚರಣೆ ಎಂದು ದೇಶದಾದ್ಯಂತ ಆಚರಿಸಲಾಗುತ್ತಿದೆ.
ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಕುಲಪತಿ ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿ ಸದಸ್ಯ ಪ್ರಾಧ್ಯಾಪಕ ವಿಮಲ್ ಪಟೇಲ್ ಅವರು ಅಂತರರಾಷ್ಟ್ರೀಯ ಕಾನೂನು ಆಯೋಗದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಎರಡು ನವೀನ ಮತ್ತು ಗ್ರಾಹಕ-ಕೇಂದ್ರಿತ ಯೋಜನೆಗಳು ಹೂಡಿಕೆಯ ಮಾರ್ಗಗಳನ್ನು ಹೆಚ್ಚಿಸುವುದಲ್ಲದೆ ಬಂಡವಾಳ ಮಾರುಕಟ್ಟೆಯನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ದೊರಕಲು ಸಹಾಯ ಮಾಡುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಕರ್ಜಾತ್ ಪುರಸಭೆಯನ್ನು ಕಸ ಮುಕ್ತ ಪಟ್ಟಣವೆಂದು ಕೇಂದ್ರ ಸರ್ಕಾರ ಘೊಷಿಸಿದೆ.
ದಕ್ಷಿಣ ಒಳನಾಡಿನ ರಾಮನಗರ, ಮೈಸೂರು, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಮಾತ್ರ ಗುಡುಗು, ಸಿಡಿಲು ಸಹಿತ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ನ.15ರವರೆಗೆ ‘ಯೆಲ್ಲೊ ಅಲರ್ಟ್’ ಮುಂದುವರಿಸಲಾಗಿದೆ.
ಚುಟುಕು ಸಮಾಚಾರ
ಪ್ರತಿ ವರ್ಷ ನವೆಂಬರ್ 12ನ್ನು ಜಾಗತಿಕ ನ್ಯುಮೋನಿಯಾ ದಿನವನ್ನಾಗಿ ಆಚರಿಸಲಾಗುತ್ತದೆ.
ಯುಎಸ್ ಏರ್ ಕ್ವಾಲಿಟಿ ಇಂಡೆಕ್ಸ್ ಬಿಡುಗಡೆ ಮಾಡಿದ ವಾಯು ಮಾಲಿನ್ಯದ ಅಂಕಿಅಂಶಗಳ ಪ್ರಕಾರ, ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಪಾಕಿಸ್ತಾನದ ಲಾಹೋರ್ ಅಗ್ರಸ್ಥಾನದಲ್ಲಿದೆ.
ಭಾರತದಲ್ಲಿ ಬ್ಯಾಟರಿಚಾಲಿತ ವಾಹನಗಳ (ಇವಿ) ಬಳಕೆ ಹೆಚ್ಚುತ್ತಿದೆ. ಆದರೆ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲಿನ ಉಷ್ಣ ವಿದ್ಯುತ್ ಸ್ಥಾವರಗಳನ್ನೇ ಹೆಚ್ಚು ನೆಚ್ಚಿಕೊಂಡಿರುವ ಕಾರಣ ಇವಿಗಳಿಂದಲೂ ಹೆಚ್ಚು ವಾಯುಮಾಲಿನ್ಯವಾಗುತ್ತದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರ ಏರ್ಪಡಿಸಿದ್ದ ಸ್ವಚ್ಛ ಸರ್ವೇಕ್ಷಣ್ 2021ರ ‘ಸಫಾಯಿ ಮಿತ್ರ ಸುರಕ್ಷಾ ಸ್ಪರ್ಧೆ’ಯಲ್ಲಿ ಬಿಬಿಎಂಪಿಯು ಪ್ರಶಸ್ತಿಗೆ ಆಯ್ಕೆಯಾಗಿದೆ.
ಚುಟುಕು ಸಮಾಚಾರ
ಪ್ರತಿ ವರ್ಷ ನವೆಂಬರ್ 11 ರಂದು ಭಾರತದಲ್ಲಿ ರಾಷ್ಟ್ರೀಯ ಶಿಕ್ಷಣ ದಿನ’ವಾಗಿ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಶೈಕ್ಷಣಿಕ ದಾರ್ಶನಿಕರಾದ ಡಾ.ಮೌಲಾನಾ ಅಬ್ದುಲ್ ಕಲಾಂ ಅಜಾದ್ ರವರನ್ನು ಭಾರತೀಯರೆಲ್ಲರೂ ನೆನೆಯುವ ದಿನ. ಅವರ ಜನ್ಮದಿನ ಸಹ ಹೌದು.
ಉತ್ತರ ಪ್ರದೇಶದಲ್ಲಿ ಕೆಂಪು ಬಣ್ಣದ ‘ಕುಂಕುಮ್ ಭಿಂಡಿ’ ಎಂಬ ತಳಿಯ ಬೆಂಡೆಕಾಯಿಯನ್ನು ರೈತರು ಬೆಳೆಯುತ್ತಿದ್ದು, ಇದು ಪೌಷ್ಟಿಕಾಂಶಗಳನ್ನು ಹೊಂದಿರುವುದರಿಂದ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಸಿದೆ.
ಹಳದಿ ಬಣ್ಣದ ಚಿರತೆಗಳಲ್ಲದೆ ಕಪ್ಪು ಮತ್ತು ಬಿಳಿ ಬಣ್ಣದ ಚಿರತೆಗಳ ಬಗ್ಗೆ ಕೇಳಿದ್ದೀರಿ. ಆದರೆ ಗುಲಾಬಿ ವರ್ಣದ ಚಿರತೆಯೂ ಇದೆ. ಇಂತಹ ಅಪರೂಪದ ಚಿರತೆ ರಾಜಸ್ಥಾನದ ರಾಣಕ್ಪುರ ಪ್ರದೇಶದ ಬೆಟ್ಟ ಭಾಗವೊಂದರಲ್ಲಿ ಪತ್ತೆಯಾಗಿದೆ.
ಗ್ರಾಮೀಣ ಜನರಿಗೆ ಶಾಸನಬದ್ಧ ಮನೆ ಹಕ್ಕು ಪತ್ರ ನೀಡಿ, ಪರೋಕ್ಷವಾಗಿ ಆರ್ಥಿಕ ಮೂಲ ಸೃಷ್ಟಿಸಿಕೊಡುವ ಮಹತ್ವಾಕಾಂಕ್ಷೆಯ ಯೋಜನೆ ‘ಸ್ವಾಮಿತ್ವ’ಕ್ಕೆ ಹತ್ತಾರು ವಿಘ್ನಗಳು ಎದುರಾಗಿವೆ.
ಜನವರಿಯಿಂದ ಹೈಕೋರ್ಟ್‌ಗಳಲ್ಲಿ ಪ್ರಕರಣಗಳ ಇ-ಫೈಲಿಂಗ್ ಕಡ್ಡಾಯಗೊಳಿಸುವ ಮೂಲಕ ಸರ್ವೋಚ್ಚ ನ್ಯಾಯಾಲಯ, ಇ-ಕೋರ್ಟ್‌ಗಳ ಸ್ಥಾಪನೆಯತ್ತ ದಿಟ್ಟ ಹೆಜ್ಜೆಯಿಟ್ಟಿದೆ.
ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಿರುವ ಬೆನ್ನಲ್ಲೇ ನವೆಂಬರ್ 11ರಂದು ಒನಕೆ ಓಬವ್ವ ಜಯಂತಿ ಆಚರಣೆಗೆ ರಾಜ್ಯ ಸರಕಾರ ಆದೇಶ ಮಾಡಿದೆ.
ಚುಟುಕು ಸಮಾಚಾರ
ಚೀನಾವು ಅತಿದೊಡ್ಡ ಮತ್ತು ಅತ್ಯಾಧುನಿಕ ಯುದ್ಧನೌಕೆ ಪಿಎನ್‍ಎಸ್ ತುಗ್ರಿಲ್ಯನ್ನು ಪಾಕಿಸ್ತಾನಕ್ಕೆ ತಲುಪಿಸಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಲವು ಮಹನೀಯರಿಗೆ 2020ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರದಾನ ಮಾಡಿದರು.
ಮಜಗಾಂವ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ (ಎಂಡಿಎಲ್) ನಿರ್ಮಿತ ‘ಸ್ಕಾರ್ಪಿಯಾನ್’ ಸರಣಿಯ ನಾಲ್ಕನೇ ಜಲಾಂತರ್ಗಾಮಿ ‘ಐಎನ್ಎಸ್ ವೇಲಾ’ವನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿದೆ.
ಗ್ಲಾಸ್ಗೋದಲ್ಲಿ ಇತ್ತೀಚೆಗೆ ನಡೆದ ಸಿಒಪಿ-26 ಹವಾಮಾನ ಶೃಂಗಸಭೆಯಲ್ಲಿ ಭಾರತ ಸ್ಥಿರ ಕೃಷಿ ನೀತಿಯ ಕ್ರಿಯಾ ಕಾರ್ಯಸೂಚಿಗೆ ಸಹಿ ಹಾಕಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಹೊಸ ಮರಳು ನೀತಿ ಜಾರಿಗಾಗಿ ಮಾಡಿರುವ ತಿದ್ದುಪಡಿ ನಿಯಮಾವಳಿಗಳಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಕೊರೊನಾ ಕಾರಣದಿಂದಾಗಿ ‘ಮನೆ ಮನೆಗೆ ಗಂಗೆ’ ಎನ್ನುವ ಮಹತ್ವದ ಯೋಜನೆಗೆ ತೀವ್ರ ಹಿನ್ನಡೆಯಾಗಿದೆ. ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ ವಿಳಂಬ ಮತ್ತು ಅನುದಾನದ ಕೊರತೆಯಿಂದಾಗಿ ನಿಗದಿತ ಪ್ರಗತಿ ಸಾಧಿಸುವುದು ಸಾಧ್ಯವಾಗಿಲ್ಲ.
ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್(ಪಿಎಲ್‌ಐ) ಯೋಜನೆಯಡಿ ಸೆಮಿಕಂಡಕ್ಟರ್ ಚಿಪ್ ವಿನ್ಯಾಸಕ್ಕೆ ಪ್ರೋತ್ಸಾಹ ಧನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಒತ್ತಾಯಿಸಿದೆ.
ನವೀನ ಸಂಶೋಧನಾ ಕಲ್ಪನೆಗಳು ಮತ್ತು ವಿವಿಧ ವಿಭಾಗಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಪ್ರಭಾವ ಬೀರುವ ಸಾಮರ್ಥ್ಯಕ್ಕಾಗಿ ಬೆಂಗಳೂರಿನ ಮೂವರು ವಿಜ್ಞಾನಿಗಳಿಗೆ ಸ್ವರ್ಣಜಯಂತಿ ಫೆಲೋಶಿಪ್’ಗಳನ್ನು ನೀಡಲಾಗಿದೆ.
ಚುಟುಕು ಸಮಾಚಾರ
ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಐಆರ್‌ಸಿಟಿಸಿ ಶ್ರೀ ರಾಮಾಯಣ ಯಾತ್ರಾ ಪ್ರವಾಸ ಸರಣಿಯನ್ನು ಆರಂಭಿಸಲು ಚಿಂತನೆ ನಡೆಸಿದೆ. ದೇಶದಲ್ಲಿ ಕೋವಿಡ್ 19 ಸನ್ನಿವೇಶದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಆಂತರಿಕ ಪ್ರವಾಸೋದ್ಯಮವನ್ನು ಹಂತ ಹಂತವಾಗಿ ಸ್ಥಾಪಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ.
ನೋಟು ಅಮಾನ್ಯೀಕರಣಕ್ಕೆ 5 ವರ್ಷ ಪೂರ್ಣಗೊಂಡಿದೆ. ಆದರೆ ಜನರ ಬಳಿ ನಗದು ಪ್ರಮಾಣ ಹೆಚ್ಚುತ್ತಲೇ ಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ವರದಿ ಪ್ರಕಾರ 2021ರ ಅಕ್ಟೋಬರ್ 8ರಂದು ಜನರ ಬಳಿ 28.30 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳಿವೆ.
ಮುಂದಿನ ವರ್ಷ (2022) ಏಪ್ರಿಲ್‌ನಿಂದ ಪ್ಯಾಕೇಜಿಂಗ್ ಕುರಿತ ಹೊಸ ನಿಯಮಾವಳಿಗಳು ಜಾರಿಯಾಗಲಿದ್ದು, ದರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಗ್ರಾಹಕರಿಗೆ ಒದಗಿಸಬೇಕಾಗುತ್ತದೆ.
ಕೋಲಾರ ಜಿಲ್ಲಾದ್ಯಂತ ಕೆಲವು ಕೆರೆಗಳಲ್ಲಿ ನಿಷೇದಿತ ಆಫ್ರಿಕನ್ ಕ್ಯಾಟ್‌ಪಿಷ್ ಸಾಕಾಣಿಕೆ ಮಾಡುತ್ತಿರುವ ಟೆಂಡರ್‌ದಾರರ ಪರವಾನಿಗೆ ರದ್ದುಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತಸಂಘದಿಂದ ಮೀನುಗಾರಿಕೆ ಇಲಾಖೆಗೆ ಮನವಿ ಸಲ್ಲಿಸಲಾಯಿತು.
ಚುಟುಕು ಸಮಾಚಾರ
ಮಹಾತ್ಮ ಗಾಂಧಿ ಸ್ಮರಣಾರ್ಥ ಅವರ ಜೀವನ ಮತ್ತು ಪರಂಪರೆ ಕೊಂಡಾಡುವ 5 ಪೌಂಡ್‌ನ ಹೊಸ ನಾಣ್ಯವನ್ನು ದೀಪಾವಳಿ ಹಬ್ಬದ ಅಂಗವಾಗಿ ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ ಅವರು ಅನಾವರಣಗೊಳಿಸಿದರು.
ದಕ್ಷಿಣ ಆಫ್ರಿಕಾದ ಲೇಖಕ ಡೇಮನ್ ಗಾಲ್ಗಟ್ ಅವರ ಕಾದಂಬರಿ ‘ದಿ ಪ್ರಾಮಿಸ್’ ಪ್ರತಿಷ್ಠಿತ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿನ ವರ್ಣಭೇದ ನೀತಿ ಮತ್ತು ಬಿಳಿಯ ವರ್ಣದ ಕುಟುಂಬದ ಕಥೆಯನ್ನು ಕಾದಂಬರಿ ಒಳಗೊಂಡಿದೆ.
ಗೋವಾದಲ್ಲಿ ನಡೆಯಲಿರುವ 52 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕಾಗಿ ಭಾರತೀಯ ಪನೋರಮಾ ವಿಭಾಗದಲ್ಲಿ 25 ಫೀಚರ್ ಮತ್ತು 20 ನಾನ್‌ಫೀಚರ್ ಚಿತ್ರಗಳು ಆಯ್ಕೆಯಾಗಿವೆ.
ಇಂಡೋನೇಷ್ಯಾ ವಿಜ್ಞಾನಿಗಳು, ಡೆಂಗ್ಯೂ ಸೋಂಕು ಹರಡುವ ಸೊಳ್ಳೆಯನ್ನು ಮಟ್ಟ ಹಾಕಲು ಮತ್ತೊಂದು ಜನ ಸ್ನೇಹಿ ಸೊಳ್ಳೆ ತಳಿ ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ.
ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2070ರ ವೇಳೆಗೆ ಭಾರತವನ್ನು ಇಂಗಾಲಮುಕ್ತ ದೇಶವನ್ನಾಗಿ ಪರಿವರ್ತಿಸುವುದಾಗಿ ಪ್ರಕಟಿಸಿದ್ದಾರೆ. ಹವಾಮಾನ ಮಾಲಿನ್ಯದ ನಿಯಂತ್ರಣಕ್ಕೆ ಅವರು ಐದು ಭರವಸೆಗಳನ್ನು ನೀಡಿದ್ದಾರೆ.
ವಿಶ್ವದ ಬಡ ರಾಷ್ಟ್ರಗಳಿಗೆ ನವೀಕರಿಸಬಹುದಾದ ಮೂಲದ ವಿದ್ಯುತ್ ಅನ್ನು ಪೂರೈಸುವ ವಿಶ್ವ ವಿದ್ಯುತ್ ಗ್ರಿಡ್ ಯೋಜನೆಗೆ ಭಾರತ ಮತ್ತು ಬ್ರಿಟನ್ ಚಾಲನೆ ನೀಡಿವೆ.
ಕೊರೊನಾ ವೈರಸ್ ನಿರೋಧಕ ಮಾತ್ರೆ ಮೊಲ್ನುಪಿರವಿರ್‌ಗೆ ಬ್ರಿಟನ್ ಅನುಮತಿ ನೀಡಿದ್ದು, ಜಗತ್ತಿನಲ್ಲೇ ಸೋಂಕಿನ ವಿರುದ್ಧ ಹೋರಾಡಲು ಮಾತ್ರೆಗಳಿಗೆ ಸಮ್ಮತಿ ಸೂಚಿಸಿದ ಮೊದಲ ರಾಷ್ಟ್ರ ಎಂಬ ಖ್ಯಾತಿಗೆ ಭಾಜನವಾಗಿದೆ.
ಬಹು ರಾಷ್ಟ್ರೀಯ ಕಂಪನಿಗಳಿಗೆ ಹೆಚ್ಚು ನ್ಯಾಯಯುತ ತೆರಿಗೆಯನ್ನು ಅಳವಡಿಸುವ ಉದ್ದೇಶದಿಂದ 136 ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಜಾಗತಿಕ ಕಾರ್ಪೊರೇಟ್ ಕಂಪನಿಗಳಿಗೆ ಕನಿಷ್ಠ ಶೇ. 15 ತೆರಿಗೆ ವಿಧಿಸಲು ಇದರಿಂದ ಹಾದಿ ಸುಗಮವಾಗಿದೆ.
ಮೂರು ದಿನಗಳ ಗಂಗಾ ಉತ್ಸವ 2021 ಗಂಗಾ ನದಿ ಮತ್ತು ಅದರ ಉಪನದಿಗಳ ಪುನರುಜ್ಜೀವನದ ಬಗ್ಗೆ ಸಕಾರಾತ್ಮಕ ನಿರ್ಣಯಗಳೊಂದಿಗೆ ಮುಕ್ತಾಯಗೊಂಡಿದೆ.
ಗಾಂಧೀಜಿ, ಜವಾಹರಲಾಲ್ ನೆಹರು, ವಲ್ಲಭಬಾಯಿ ಪಟೇಲ್ ಸೇರಿದಂತೆ ಅನೇಕ ಸ್ವಾತಂತ್ರ ಹೋರಾಟಗಾರರ ಐತಿಹಾಸಿಕ ಸಂದರ್ಶನ, ಕಾರ್ಯಕ್ರಮಗಳ ಸಂಗ್ರಹವನ್ನು ಖಾಸಗಿ ತೆಕ್ಕೆಗೆ ಒಪ್ಪಿಸಲು ಪ್ರಸಾರ ಭಾರತಿ ಮುಂದಾಗಿದೆ.
ಸುಪ್ರೀಂ ಕೋರ್ಟ್ ಹಾಗೂ ರಾಜ್ಯಗಳ ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 65 ವರ್ಷ ಮೀರಬಾರದು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಹೇಳಿದ್ದಾರೆ.
ಉತ್ತರಾಖಂಡದ ಕೇದಾರನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ ಆದಿಗುರು ಶಂಕರಾಚಾರ್ಯ ಅವರ ಸುಂದರ ಪುತ್ಥಳಿಯನ್ನು ಕೆತ್ತಿದ್ದು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್.
ಚುಟುಕು ಸಮಾಚಾರ
8 ಇಲಾಖೆಗಳ 58 ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ‘ಜನಸೇವಕ’ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಜನಸೇವಕ, ಏಕೀಕೃತ ದೂರು ಪರಿಹಾರ ವ್ಯವಸ್ಥೆ ಮತ್ತು ಸಾರಿಗೆ ಇಲಾಖೆಯ ಕಾಗದ ರಹಿತ ಮತ್ತು ಸಂಪರ್ಕ ರಹಿತ ಸೇವೆಗಳನ್ನು ಉದ್ಘಾಟಿಸಿದರು.
ಬೆಂಗಳೂರು ನಗರದಲ್ಲಿನ 18 ಕೆರೆಗಳ ಪುನಶ್ಚೇತನ ಮತ್ತು ಏಳಕ್ಕೂ ಹೆಚ್ಚು ಕೆರೆಗಳ ಸಂರಕ್ಷಣೆ ಕೆಲಸಕ್ಕಾಗಿ ಬಿಬಿಎಂಪಿಗೆ ಅರ್ಥ್ ಡೆ ನೆಟ್ ವರ್ಕ್ ಸ್ಟಾರ್ ಮುನ್ಸಿಪಾಲ್ ಲೀಡರ್ ಶಿಪ್ ಪ್ರಶಸ್ತಿಯನ್ನು ಪಡೆದಿದೆ.
ಬಳಸಿ ಎಸೆಯುವ ಹೂವುಗಳಿಂದ ಊದುಬತ್ತಿ ತಯಾರಿಸುವ ನಿಟ್ಟಿನಲ್ಲಿ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(ಐಐಎಚ್‌ಆರ್)ಯ ವಿಜ್ಞಾನಿಗಳ ತಂಡ ಸಂಶೋಧನೆ ಕೈಗೊಂಡಿದೆ.
ದೀಪಾವಳಿ ಸಂದರ್ಭದಲ್ಲಿ ‘ಹಸಿರು ಪಟಾಕಿ’ಗಳನ್ನು ಬಿಟ್ಟು ಉಳಿದ ಯಾವುದೇ ಪಟಾಕಿಗಳನ್ನು ಮಾರಾಟ ಮಾಡುವುದನ್ನು ಹಾಗೂ ಸಿಡಿಸುವುದನ್ನು ರಾಜ್ಯ ಸರಕಾರ ನಿಷೇಧಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2020-21ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 66 ಸಾಧಕರನ್ನು ಗುರುತಿಸಲಾಗಿದೆ. ಜತೆಗೆ ಈ ಬಾರಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿಶೇಷ ಪ್ರಶಸ್ತಿ ಪ್ರಕಟಿಸಲಾಗಿದೆ.
NammaKPSC Current Affairs - October 2021
ಚುಟುಕು ಸಮಾಚಾರ
ಅಮೆರಿಕದಲ್ಲಿ ಪುರುಷರು, ಮಹಿಳೆಯರಲ್ಲದ ಎಲ್ ಜಿ ಬಿ ಟಿ ( ಸಲಿಂಗಕಾಮಿ, ದ್ವಿಲಿಂಗಿ, ಲಿಂಗಪರಿವರ್ತಿತ) ಸಮುದಾಯದ ನಾಗರಿಕರ ಹಕ್ಕುಗಳ ಗುರುತಿಸುವ ಪ್ರಕ್ರಿಯೆಯಲ್ಲಿ ನಿರ್ಣಾಯಕ ಹೆಜ್ಜೆ ಇರಿಸಲಾಗಿದೆ.
ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ಫುಟ್ಬಾಲ್ ದಂತಕಥೆ ಸುನಿಲ್ ಛೆಟ್ರಿ ಸೇರಿದಂತೆ 11 ಕ್ರೀಡಾಪಟುಗಳ ಹೆಸರನ್ನು ಈ ವರ್ಷದ ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
ಭಾರತೀಯ ನೌಕಾಪಡೆಗೆ ಮುಂಬೈನ ನೌಕಾ ಹೆಲಿಕಾಪ್ಟರ್ ಬೇಸ್ ಐಎನ್ಎಸ್ ಶಿಕ್ರಾದಲ್ಲಿ ಎರಡು ಸುಧಾರಿತ ಲಘು ಹೆಲಿಕಾಪ್ಟರ್‌ಗಳು(ALH) MK III ಸೇರ್ಪಡೆಗೊಂಡಿವೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ಹಾಲಿ ಗವರ್ನರ್ ಶಕ್ತಿಕಾಂತ ದಾಸ್ ಅವರನ್ನು ಡಿಸೆಂಬರ್ 10 ರ ನಂತರದ ಮೂರು ವರ್ಷಗಳ ಅವಧಿಗೆ ಮರು ನೇಮಕ ಮಾಡಲಾಗಿದೆ.
ಮೈಸೂರಿನ ಚಾಮುಂಡಿ ಬೆಟ್ಟವನ್ನು ಪ್ರಸಾದ್ ಯೋಜನೆ ವ್ಯಾಪ್ತಿಯಲ್ಲಿ ಸೇರಿಸುವಲ್ಲಿ ಅಗತ್ಯ ವಿವರ ಒದಗಿಸುವಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಲೋಪ ಕಂಡುಬಂದ ಮಾರನೇ ದಿನವೇ ಪ್ರವಾಸೋದ್ಯಮ ಸಚಿವಾಲಯ ಈ ಪ್ರಸ್ತಾವಕ್ಕೆ ತಾತ್ವಿಕ ಅನುಮೋದನೆ ನೀಡಿದೆ.
ಮೊಬೈಲ್ ಕರೆ ಮಾಡುವವರ ಗುರುತು ಪತ್ತೆ ಹಚ್ಚುವ ಟ್ರೂ ಕಾಲರ್ ಆಪ್ ತಾನು ಭಾರತೀಯ ರೈಲ್ವೇ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದೆ.
ರಾಜ್ಯಗಳ ಆಡಳಿತದ ಕಾರ್ಯಕ್ಷಮತೆಯ 6ನೇ ವರ್ಷದ ಶ್ರೇಯಾಂಕವು ಬಿಡುಗಡೆಗೊಂಡಿದ್ದು, ದಕ್ಷಿಣದ ರಾಜ್ಯಗಳು ಪ್ರಾಬಲ್ಯ ಸಾಧಿಸಿವೆ. ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದು, ತಮಿಳುನಾಡು ಎರಡನೇ ಸ್ಥಾನ ಹಾಗೂ ತೆಲಂಗಾಣ ಮೂರನೇ ಸ್ಥಾನ ಪಡೆದಿದೆ.
ಚುಟುಕು ಸಮಾಚಾರ
ಜಿ 20 ಶೃಂಗಸಭೆಯು ಇಟಲಿಯ ರೋಮ್‌ನಲ್ಲಿ ಅಕ್ಟೋಬರ್ 30 ಮತ್ತು 31 ರಂದು ನಡೆಯಲಿದೆ ಮತ್ತು ಹವಾಮಾನ ಬದಲಾವಣೆ, ಅಫ್ಘಾನಿಸ್ತಾನ ಮತ್ತು ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳುವುದು ಸೇರಿದಂತೆ ಹಲವಾರು ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ
ಆನ್ಲೈನ್ ನಡವಳಿಕೆಯನ್ನು ಮರುರೂಪಿಸುವ ದೃಷ್ಟಿಯಿಂದ, ‘ನಾಗರಿಕ ಅಂತರ್ಜಾಲ’ ನೀತಿಯನ್ನು ಜಾರಿಗೊಳಿಸಲು ಚೀನಾ ಮುಂದಾಗಿದೆ. ಸಮಾಜವಾದಿ ಮೌಲ್ಯಗಳನ್ನು ಉತ್ತೇಜಿಸಲು ಅಂತರ್ಜಾಲವನ್ನು ಒಂದು ವೇದಿಕೆಯಾಗಿ ಬಳಸಿಕೊಳ್ಳುವುದು ಚೀನಾದ ಉದ್ದೇಶ ಎನ್ನಲಾಗಿದೆ.
ಖಗೋಳಶಾಸ್ತ್ರಜ್ಞರು ಇದೇ ಮೊದಲ ಬಾರಿಗೆ ನಮ್ಮ ಕ್ಷಿರಪಥ(ಮಿಲ್ಕಿ ವೇ) ನಕ್ಷತ್ರ ಪುಂಜದ ಹೊರಗೆ ಅಸ್ತಿತ್ವದಲ್ಲಿರಬಹುದಾದ ಸಂಭವನೀಯ ಗ್ರಹವನ್ನು ಪತ್ತೆ ಹಚ್ಚಿದ್ದಾರೆ. ನಾಸಾದ ಚಂದ್ರ ಎಕ್ಸ್-ರೇ ಖಗೋಳ ವೀಕ್ಷಣಾಲಯದ ಖಗೋಳ ವಿಜ್ಞಾನಿಗಳು, M51 ಅಥವಾ ‘ವರ್ಲ್‌ಪೂಲ್’ ಗ್ಯಾಲಕ್ಸಿಯಲ್ಲಿ ಅಸ್ತಿತ್ವದಲ್ಲಿರುವ ಸೂರ್ಯನ ಗಾತ್ರದ M51-ULS-1 ಹೆಸರಿನ ನಕ್ಷತ್ರವನ್ನು ಈ ಸಂಭವನೀಯ ಗ್ರಹ ಸುತ್ತುತ್ತಿದೆ ಎಂದು ಅಂದಾಜಿಸಿದ್ದಾರೆ.
ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಖಂಡಾಂತರ ಕ್ಷಿಪಣಿ ಅಗ್ನಿ-5 ರ ಪರೀಕ್ಷಾರ್ಥ ಉಡಾವಣೆಯನ್ನು ಡಿ ಆರ್ ಡಿ ಒ ಯಶಸ್ವಿಯಾಗಿ ನೆರವೇರಿಸಿದೆ.
ಶಾಲಾ ವಿದ್ಯಾರ್ಥಿಗಳಲ್ಲಿ ಅಪೌಷ್ಟಿಕತೆ ನೀಗಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಬಿಸಿಯೂಟದಲ್ಲಿ ‘ಸಾರವರ್ಧಿತ ಅಕ್ಕಿ ಸೇರ್ಪಡೆಗೊಳಿಸಿ ವಿತರಣೆ ಆರಂಭಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಕೂಲ್ ಆನ್ ವೀಲ್ಸ್ ಯೋಜನೆ ಆರಂಭವಾಗಿದೆ. ಯೋಜನೆ ಅಡಿಯಲ್ಲಿ ನಗರದ ಎಂಟು ಬಿಬಿಎಂಪಿ ವಲಯಗಳಿಗೆ ತಲಾ 10 ಬಸ್‌ಗಳು ಭೇಟಿ ನೀಡಲಿವೆ
ಪ್ರತಿವರ್ಷ 5 ಲಕ್ಷ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಉಪಯುಕ್ತವಾಗುವುದರೊಂದಿಗೆ ವಿದ್ಯಾರ್ಥಿಗಳ ಕಲಿಕಾ ರೀತಿಯಲ್ಲಿ ಮಹತ್ವದ ಪರಿವರ್ತನೆ ಉಂಟುಮಾಡುವ ಒಡಂಬಡಿಕೆಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು(ಡಿ.ಸಿ.ಟಿ.ಇ.) ಮುಂಚೂಣಿ ಐಟಿ ಕಂಪನಿ ಇನ್ಫೋಸಿಸ್ ಜತೆ ಸಹಿ ಹಾಕಿದೆ.
ಚುಟುಕು ಸಮಾಚಾರ
ಪುರಾತತ್ವಶಾಸ್ತ್ರಜ್ಞರು ಇರಾಕ್‌ನಲ್ಲಿ 2,700 ವರ್ಷಗಳಷ್ಟು ಹಳೆಯ ವೈನ್ ತಯಾರಿಸುವ ಕಾರ್ಖಾನೆಯೊಂದನ್ನು ಪತ್ತೆ ಹಚ್ಚಿದ್ದಾರೆ. ಇದು ಅಸ್ಸೀರಿಯನ್ ರಾಜರ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಿದ ವೈನ್ ತಯಾರಿಸುವ ಕಾರ್ಖಾನೆ ಎಂದು ಹೇಳಲಾಗಿದೆ.
ಸ್ವದೇಶಿ ನಿರ್ಮಿತ ಮೊದಲ ವಿಮಾನವಾಹಕ ಯುದ್ಧನೌಕೆ (ಐಎಸಿ) ವಿಕ್ರಾಂತ್ ಸಮುದ್ರದಲ್ಲಿ ತನ್ನ ಎರಡನೇ ಪ್ರಯೋಗಾರ್ಥ ಸಮುದ್ರ ಸಂಚಾರವನ್ನು ಆರಂಭಿಸಿತು. ದೇಶದ ಅತಿದೊಡ್ಡ ಮತ್ತು ಅತ್ಯಂತ ಸಂಕೀರ್ಣದಿಂದ ಕೂಡಿರುವ ಯುದ್ಧನೌಕೆ ಇದಾಗಿದ್ದು, ಮುಂದಿನ ಆಗಸ್ಟ್ ವೇಳೆಗೆ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ.
ಮಹಿಳಾ ಸೇನಾಧಿಕಾರಿಗಳಿಗೆ ಕಾಯಂ ಆಯೋಗದ ಅರ್ಹತೆ ನೀಡುವ ಸಂಬಂಧ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. 71 ಮಹಿಳಾ ಅಧಿಕಾರಿಗಳ ಪೈಕಿ 39 ಮಂದಿಯನ್ನು ಶಾಶ್ವತ ಆಯೋಗಕ್ಕೆ ಪರಿಗಣಿಸುವಂತೆ ಅದು ನಿರ್ದೇಶಿಸಿದೆ.
ಧಾರ್ಮಿಕ ಸ್ಥಳಗಳ ದೇವಾಲಯ ಸ್ವರೂಪ ಸಂರಕ್ಷಣಾ ಮಸೂದೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ. ಇದರಿಂದಾಗಿ ದೇವಾಲಯಗಳನ್ನು ಹಠಾತ್ತನೆ ನೆಲಸಮ ಮಾಡುವ ಅಧಿಕಾರಿಗಳ ಸ್ವಯಂ ಪ್ರಕ್ರಿಯೆಗೆ ತಡೆ ಬಿದ್ದಿದೆ.
ರೊಹಿಂಗ್ಯಾ ವಲಸಿಗರು ಹಾಗೂ ಅಕ್ರಮ ಒಳನುಸುಳುಕೋರರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಬಿಜೆಪಿ ಮುಖಂಡ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಪಿಐಎಲ್‌ಗೆ ಕರ್ನಾಟಕ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಈ ಅರ್ಜಿಯನ್ನು ವಜಾಗೊಳಿಸುವಂತೆ ಅದು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ.
ಚುಟುಕು ಸಮಾಚಾರ
ಪಿ.ಎಸ್. ವಿನೋದ್ ರಾಜ್ ನಿರ್ದೇಶನದ ‘ಕೂಳಂಗಳ್’ ತಮಿಳು ಚಿತ್ರ 94ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಗಳಿಗೆ ಭಾರತದಿಂದ ಅಧಿಕೃತವಾಗಿ ಎಂಟ್ರಿಯಾಗಿದೆ.
ಅಮೆರಿಕದಲ್ಲಿ ಕಚ್ಚಾ ಈರುಳ್ಳಿ ಸಾಲ್ಮೊನೆಲ್ಲಾ ಸೋಂಕಿನ ಹರಡುವಿಕೆಗೆ ಕಾರಣವಾಗಿದೆ. ಕರುಳಿನ ಕೆಲಸಕ್ಕೆ ಹಾನಿ ಮಾಡುವ ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾ ಈ ಕಳಪೆ ಗುಣಮಟ್ಟದ ಈರುಳ್ಳಿಯಿಂದ ಪ್ರಸರಿಸಿದೆ ಎನ್ನಲಾಗಿದೆ.
ಅಹಮದಾಬಾದ್: ಜಿಲ್ಲೆಯ ಗಿರ್ ಸೋಮನಾಥ್ ಜಿಲ್ಲೆಯ ರೈತರೊಬ್ಬರ ಮನೆಯಲ್ಲಿ ಐವಿಎಫ್ ತಂತ್ರಜ್ಞಾನದಡಿ ಗರ್ಭ ಧರಿಸಿದ್ದ ‘ಬನ್ನಿ’ ತಳಿಯ ಎಮ್ಮೆ ಗಂಡು ಕರುವಿಗೆ ಜನ್ಮನೀಡಿದೆ.
ರೈತರಿಗೆ ನೀಡಿರುವ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಶೀಘ್ರವೇ ಮೀನುಗಾರರಿಗೂ ವಿಸ್ತರಿಸಲಾಗುವುದು ಎಂದು ಕೇಂದ್ರ ಮೀನುಗಾರಿಕೆ ಮತ್ತು ಪಶು ಸಂಗೋಪನೆ ಖಾತೆ ಸಹಾಯಕ ಸಚಿವ ಎಲ್.ಮುರುಗನ್ ತಿಳಿಸಿದ್ದಾರೆ.
ಭಾರತೀಯ ಅಂಚೆ ಕರ್ನಾಟಕ ವೃತ್ತವು ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಹೊರತಂದಿರುವ ವಿಶೇಷ ಅಂಚೆ ಲಕೋಟೆ ಹಾಗೂ ಮೂರು ಪೋಸ್ಟ್ ಕಾರ್ಡ್‌ಗಳನ್ನು ನಜರಬಾದ್‌ನ ಅಂಚೆ ತರಬೇತಿ ಕೇಂದ್ರದಲ್ಲಿ ಬಿಡುಗಡೆ ಮಾಡಲಾಯಿತು.
ಹೈದರಾಬಾದ್-ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕವಾಗಿ ಮರುನಾಮಕರಣ ಮಾಡಿದ ರೀತಿಯಲ್ಲಿಯೇ ಉತ್ತರ ಕರ್ನಾಟಕ ಭಾಗದ ಬಹುದಿನಗಳ ಬೇಡಿಕೆಯಾಗಿರುವ ಮುಂಬೈ-ಕರ್ನಾಟಕ ಪ್ರಾಂತ್ಯವನ್ನು ಕಿತ್ತೂರು ಕರ್ನಾಟಕ ಎಂದು ಘೋಷಿಸಬೇಕೆನ್ನುವ ಕೂಗಿಗೆ ಶೀಘ್ರದಲ್ಲಿಯೇ ಸರ್ಕಾರದ ಅಧಿಕೃತ ಮುದ್ರೆ ಬೀಳಲಿದೆ.
ಚುಟುಕು ಸಮಾಚಾರ
ದಕ್ಷಿಣ ಕೊರಿಯಾ ದೇಶೀಯವಾಗಿ ಅಭಿವೃದ್ಧಿಪಡಿಸಿದ ತನ್ನ ಮೊಟ್ಟಮೊದಲ ಬಾಹ್ಯಾಕಾಶ ರಾಕೆಟ್ ಅನ್ನು ಪರೀಕ್ಷಾರ್ಥ ಉಡಾವಣೆ ಮಾಡಿತು.
ದೇಶೀಯವಾಗಿ ಅಭಿವೃದ್ಧಿಪಡಿಸಿರುವ ವೇಗದ ವಾಯು ಗುರಿ ಭೇದಿಸುವ ‘ಅಭ್ಯಾಸ್’ಫ್ಲೈಟ್ ಪರೀಕ್ಷೆಯನ್ನು ಡಿಆರ್‌ಡಿಒ ಯಶಸ್ವಿಯಾಗಿ ಪೂರೈಸಿದೆ.
ಭಯೋತ್ಪಾದಕರು ಹಾಗೂ ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿಯೇ ಮುಂದುವರಿಸಲು ಹಣಕಾಸು ಕಾರ್ಯಪಡೆ ನಿರ್ಧರಿಸಿದೆ. ಜತೆಗೆ ಟರ್ಕಿಯನ್ನು ಕೂಡ ಈ ಪಟ್ಟಿಗೆ ಸೇರಿಸಲಾಗಿದೆ.
ಕೋವಿಡ್ ಸಾಂಕ್ರಾಮಿಕ ನಿಯಂತ್ರಣದಲ್ಲಿರುವ ಹೊತ್ತಿನಲ್ಲೇ ದಕ್ಷಿಣ ಭಾರತದಲ್ಲಿ ಸದ್ದಿಲ್ಲದೇ ಆರ್ಭಟ ನಡೆಸುತ್ತಿರುವ ಡೆಂಗ್ಯೂ ಮಹಾಮಾರಿ ನಿಯಂತ್ರಣಕ್ಕೆ ಪುದುಚೇರಿ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದೆ. ಡೆಂಗ್ಯೂ ಸೋಂಕು ಹರಡುವಲ್ಲಿ ಮಹತ್ತರ ಪಾತ್ರವಹಿಸುವ ಸೊಳ್ಳಗಳೆ ನಿಯಂತ್ರಣಕ್ಕೆ ‘ಮಸ್ಕಿಟೋ ಫಿಶ್’ಗಳನ್ನು ಬಿಡಲು ಯೋಜನೆ ರೂಪಿಸಿದೆ.
ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಸಂಗ್ರಹಿಸಿಟ್ಟು, ದರ ಏರಿಕೆಯಾದಾಗ ಮಾರಲು ಅನುಕೂಲವಾಗುವಂತೆ ರೈತರಿಗೆ ಉಗ್ರಾಣಗಳನ್ನು ರಿಯಾಯಿತಿ ದರದಲ್ಲಿ ನೀಡಲು ರಾಜ್ಯ ಸರಕಾರ ಮುಂದಾಗಿದೆ.
ಚುಟುಕು ಸಮಾಚಾರ
ಪೊಲೀಸ್ ಸಂಸ್ಮರಣಾ ದಿನದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯ ಸಿ.ಎ. ಆರ್. ಮೈದಾನದಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ನಮನ ಸಲ್ಲಿಸಿದರು.
ಭಾರತದಲ್ಲಿ ಅಕ್ಟೋಬರ್ 21 ರಂದು ರಾಷ್ಟ್ರೀಯ ಪೊಲೀಸ್ ಸ್ಮರಣಾರ್ಥ ದಿನವನ್ನು ಆಚರಿಸಲಾಗುತ್ತದೆ. 1959 ರಲ್ಲಿ ಚೀನಾದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಹತ್ತು ಪೊಲೀಸರಿಗೆ ಈ ದಿನವನ್ನು ಅರ್ಪಿಸಲಾಗಿದೆ.
ಅರುಣಾಚಲ ಪ್ರದೇಶ ಗಡಿಗೆ ಹೊಂದಿಕೊಂಡಿರುವ ವಾಸ್ತವ ಗಡಿ ರೇಖೆ(ಎಲ್‌ಎಸಿ)ಯಲ್ಲಿ ಚೀನಿ ಸೇನೆ ಚಟುವಟಿಕೆಗಳು ಹೆಚ್ಚತೊಡಗಿವೆ. ಅರುಣಾಚಲ ಪ್ರದೇಶ ಗಡಿಗೆ ಭಾರತೀಯ ಸೇನೆ ಬೋಫೋರ್ಸ್ ಫಿರಂಗಿಯನ್ನು ನಿಯೋಜಿಸಿದೆ. ಗಡಿಯ ಮುಂಚೂಣಿ ಸೇನಾ ನೆಲೆಗಳಲ್ಲಿ ಬೋಫೋರ್ಸ್ ಫಿರಂಗಿಗಳನ್ನು ನಿಯೋಜಿಸಲಾಗಿದ್ದು, ಗಡಿ ಕಣ್ಗಾವಲನ್ನು ಕೂಡ ಹೆಚ್ಚಿಸಲಾಗಿದೆ.
ಜಾಗತಿಕ ಆಹಾರ ಭದ್ರತೆ (ಜಿಎಫ್‌ಎಸ್) ಸೂಚ್ಯಂಕದಲ್ಲಿ ಭಾರತವು 113 ದೇಶಗಳ ಪೈಕಿ 71ನೆಯ ಸ್ಥಾನ ಪಡೆದಿದೆ. ಕೈಗೆಟಕುವ ದರದಲ್ಲಿ ಆಹಾರ ಸಿಗುವ ವಿಚಾರದಲ್ಲಿ ಭಾರತವು ಶ್ರೀಲಂಕಾ ಮತ್ತು ಪಾಕಿಸ್ತಾನಕ್ಕಿಂತ ಹಿಂದೆ ಇದೆ ಎಂದು ವರದಿಯೊಂದು ಹೇಳಿದೆ.
ದೇಶದಲ್ಲಿ 100 ಕೋಟಿ ಡೋಸ್ ಕೋವಿಡ್–19 ಲಸಿಕೆ ವಿತರಣೆಯನ್ನು ಸಂಭ್ರಮಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ (ಎಎಸ್‌ಐ) ತನ್ನ 100 ಪಾರಂಪರಿಕ ಸ್ಮಾರಕಗಳನ್ನು ರಾಷ್ಟ್ರ ಧ್ವಜದ ಬಣ್ಣದಲ್ಲಿ ಬೆಳಗಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಮಹಿಳೆಯರ ಸುರಕ್ಷತೆ ಹೆಚ್ಚಿಸುವ ಸಿಟಿ ಪ್ರಾಜೆಕ್ಟ್ ಅನ್ನು ಹನಿವೆಲ್ ಅಟೋಮೇಷನ್ ಇಂಡಿಯಾ ಸಂಸ್ಥೆ ತನ್ನದಾಗಿಸಿಕೊಂಡಿದೆ. ನಿರ್ಭಯಾ ನಿಧಿಯಡಿ ಈ ಪ್ರಾಜೆಕ್ಟ್ ರೂಪಿಸಲಾಗಿದ್ದು, ಪ್ರಾಜೆಕ್ಟ್ ಮೊತ್ತ 496.57 ಕೋಟಿ ರೂ. ಆಗಿದೆ.
ಚುಟುಕು ಸಮಾಚಾರ
ದೆಹಲಿ ಮೂಲದ ಉದ್ಯಮಿ ವಿದ್ಯುತ್ ಮೋಹನ್ ಅವರ ಕೃಷಿತ್ಯಾಜ್ಯ ಮರುಬಳಕೆಯ ಯೋಜನೆಯ ಆವಿಷ್ಕಾರಕ್ಕೆ ಬಿಬಿಸಿಯ ಪ್ರತಿಷ್ಠಿತ ‘ಅರ್ತ್‌ಶಾಟ್’ ಪ್ರಶಸ್ತಿ ದೊರೆತಿದೆ. ಇದನ್ನು “ಪರಿಸರ ಆಸ್ಕರ್” ಎಂದೂ ಕರೆಯುತ್ತಾರೆ.
ಲಾಂಗ್ ಮಾರ್ಚ್-2 ಹೆಸರಿನ ಬಾಹ್ಯಾಕಾಶ ರಾಕೆಟ್ ಮೂಲಕ ಹೈಪರ್‌ಸಾನಿಕ ಗ್ಲೈಡ್ ವೆಹಿಕಲ್(HGV) ಪರೀಕ್ಷಾರ್ಥ ಉಡಾವಣೆ ಮಾಡಲಾಗಿದ್ದು, ಈ ಕುರಿತು ಫೈನಾನ್ಸಿಶಿಯಲ್ ಟೈಮ್ಸ್ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ. ಈ ವರದಿ ಜಾಗತಿಕವಾಗಿ ಗಮನ ಸೆಳೆದಿದ್ದು, ಚೀನಾದ ಬಾಹ್ಯಾಕಾಶ ಮತ್ತು ಮಿಲಿಟರಿ ಶಕ್ತಿಯ ಬಗ್ಗೆ ಕಳವಳ ವ್ಯಕ್ತವಾಗಿದೆ.
ವಿಶ್ವ ಚಿನ್ನ ಪರಿಷತ್ತು, ಭಾರತೀಯ ಚಿನ್ನ ಮಾರುಕಟ್ಟೆಯ ಆಳ – ವಿಸ್ತೃತ ವಿಶ್ಲೇಷಣೆಯ ಸರಣಿಯ ಮೊದಲ ಕಂತಾದ ‘ಭಾರತೀಯ ಚಿನ್ನ ಬೇಡಿಕೆಯ ಚಾಲಕರು’ ಎಂಬ ವರದಿಯನ್ನು ಬಿಡುಗಡೆಗೊಳಿಸಿದೆ.
2020ರ ಅಂತ್ಯದ ವೇಳೆಗೆ ದೇಶದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಆಪ್ಟಿಕಲ್ ಫೈಬರ್ ಮೂಲಕ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸುವುದು ಯೋಜನೆಯ ಗುರಿಯಾಗಿತ್ತು. ಯೋಜನೆ ಆರಂಭವಾಗಿ 10 ವರ್ಷ ಕಳೆದರೂ, ಮರುನಾಮಕರಣ ಮಾಡಿ ಏಳು ವರ್ಷ ಕಳೆದರೂ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಸರ್ಕಾರ ಪದೇ ಪದೇ ಯೋಜನೆಯ ಅವಧಿಯನ್ನು ವಿಸ್ತರಿಸುತ್ತಲೇ ಇದೆ
ಉತ್ತರ ಪ್ರದೇಶದ ಕುಶಿನಗರದಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಿದ್ದಾರೆ.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಚೇರಿ, ಉದ್ಯಮ, ಅಂಗಡಿ ಮುಂಗಟ್ಟು, ಮನೆ– ಮನೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಸಂಪೂರ್ಣ ಕನ್ನಡದಲ್ಲಿ ಮಾತನಾಡುವ, ಬರೆಯುವ ಹಬ್ಬದ ರೀತಿಯಲ್ಲಿ ‘ಕನ್ನಡಕ್ಕಾಗಿ ನಾವು’ ಅಭಿಯಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದೆ.
ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುವ ಅಪರಾಧ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಮಹಿಳಾ ಅಧಿಕಾರಿಗೊಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿದೆ.
ಚುಟುಕು ಸಮಾಚಾರ
ಸಕ್ಕರೆಗೆ ಹೋಲಿಸಿದರೆ ಎಥನಾಲ್ ಉತ್ಪಾದನೆಯಲ್ಲಿ ಲಾಭದ ಪ್ರಮಾಣ ಅಧಿಕ. ಹೀಗಾಗಿ, ರಾಜ್ಯದ ಹಲವು ಸಕ್ಕರೆ ಕಾರ್ಖಾನೆಗಳು ಎಥನಾಲ್ ಉತ್ಪಾದನೆಗೆ ಆಸಕ್ತಿ ತೋರುತ್ತಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ದಿನೇದಿನೆ ಏರುತ್ತಿದ್ದು, ಎಥನಾಲ್‌ಗೆ ರಾಷ್ಟ್ರ-ಮಟ್ಟದಲ್ಲೂ ಬಹುಬೇಡಿಕೆ ಸೃಷ್ಟಿಯಾಗಿದೆ.
ಅಕ್ಟೋಬರ್ 6ರಿಂದಲೇ ಮುಂಗಾರು ಹಿಂತೆಗೆತ ಆರಂಭವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದರೂ, ಕೇರಳದಲ್ಲಿ ಮಾತ್ರ ಭಾರಿ ಮಳೆಯಾಗುತ್ತಿದೆ. ಇದನ್ನೂ ಮುಂಗಾರು ಅಂತ್ಯದ ಸೂಚನೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ದಿಲ್ಲಿ ವಾಯುಮಾಲಿನ್ಯ ನಿಯಂತ್ರಿಸಲು ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರಕಾರ ಸಾಕಷ್ಟು ಮುಂಚಿತವಾಗಿಯೇ ಕಾರ್ಯಪ್ರವೃತ್ತವಾಗಿದೆ. ಇದರ ಭಾಗವಾಗಿ ‘ಕೆಂಪು ದೀಪ ಹತ್ತಿದ ತಕ್ಷಣ ಎಂಜಿನ್ ಆಫ್ ಮಾಡಿ’ ಅಭಿಯಾನಕ್ಕೆ ಅ.18ರಂದು ಚಾಲನೆ ನೀಡಲಿದೆ.
ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಕಳೆದ 10 ದಿನಗಳಿಂದ ಭೂಕಂಪನವಾಗುತ್ತಿರುವುದರಿಂದ ಹೈದರಾಬಾದಿನ ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ(ಎನ್‌ಜಿಆರ್‌ಐ) ವಿಜ್ಞಾನಿಗಳ ತಂಡ ಭೇಟಿ ನೀಡಿ ಭೂಕಂಪನದ ಅಲೆಯನ್ನು ಅಳೆಯಲು ಸಿಸ್ಮೋಮೀಟರ್ ಅನ್ನು ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಿದೆ.
ಚೀನಾದಿಂದ ರೇಷ್ಮೆ ಜಿಲ್ಲೆಗೆ(ರಾಮನಗರ) ದಶಕದ ಹಿಂದೆ ಪ್ರಾಯೋಗಿಕ ಪರೀಕ್ಷಾರ್ಥವಾಗಿ ಬಂದ ಆಟೋಮೆಟಿಕ್ ರೀಲರ್ ಮೆಷಿನ್ (ಎಆರ್‌ಎಂ) ಇದೀಗ ಜಿಲ್ಲೆಯಲ್ಲಿ ಹಂತ ಹಂತವಾಗಿ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಾ ಸಾಗಿದೆ.
ಚುಟುಕು ಸಮಾಚಾರ
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ(ಯುಎನ್‌ಎಚ್‌ಆರ್‌ಸಿ) 2022-24ರ ಅವಧಿಗೆ ಭಾರತವು ಆರನೇ ಬಾರಿಗೆ ಬಹುಮತದೊಂದಿಗೆ ಆಯ್ಕೆಯಾಗಿದೆ.
ಡಾ. ಎಪಿಜೆ ಅಬ್ದುಲ್ ಕಲಾಂ ಪ್ರೇರಣಾ ಸ್ಥಾನವನ್ನು ಅಕ್ಟೋಬರ್ 15, 2021 ರಂದು ವಿಶಾಖಪಟ್ಟಣದ ನೌಕಾ ವಿಜ್ಞಾನ ಮತ್ತು ತಾಂತ್ರಿಕ ಪ್ರಯೋಗಾಲಯದಲ್ಲಿ (ಎನ್ ಎಸ್ ಟಿ ಎಲ್) ಉದ್ಘಾಟಿಸಲಾಯಿತು.
ಗುರು ಗ್ರಹದ ಗುರುತ್ವ ಪರೀಧಿಯೊಳಗಿರುವ ಟ್ರೋಜನ್ ಕ್ಷುದ್ರಗ್ರಹಗಳ ಪಟ್ಟಿಯುತ್ತ ಬಾಹ್ಯಾಕಾಶ ನೌಕೆಯೊಂದನ್ನು ಕಳುಹಿಸಲು ಸಜ್ಜಾಗಿದೆ. ಲುಸಿ ಹೆಸರಿನ ಈ ಬಾಹ್ಯಾಕಾಶ ನೌಕೆ ಅಟ್ಲಾಸ್ V401 ಎಂಬ ಅತ್ಯಾಧುನಿಕ ರಾಕೆಟ್ ಮೂಲಕ ನಭಕ್ಕೆ ಚಿಮ್ಮಲಿದೆ.
ಅರುಣಾಚಲ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಸೇಲಾ ಸುರಂಗ ಮಾರ್ಗ ಅಂತಿಮ ಹಂತಕ್ಕೆ ಬಂದಿದೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೊಸ 7 ರಕ್ಷಣಾ ಸಂಸ್ಥೆಗಳನ್ನ ದೇಶಕ್ಕೆ ಅರ್ಪಿಸಿದ್ದಾರೆ.
ಚುಟುಕು ಸಮಾಚಾರ
ವಿಶ್ವ ಮಾನದಂಡ ದಿನದ ಅಂಗವಾಗಿ ಭಾರತೀಯ ಮಾನಕ ಬ್ಯೂರೋ (ಬಿಐಎಸ್) ನವದೆಹಲಿಯ ತನ್ನ ಕೇಂದ್ರ ಕಚೇರಿಯಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳಿಗಾಗಿ “ಉತ್ತಮ ಜಗತ್ತಿಗಾಗಿ ಹಂಚಿಕೆಯ ದೃಷ್ಟಿಕೋನ’ ಎಂಬ ಘೋಷವಾಕ್ಯದಡಿ ಇಡೀ ದಿನದ ಕಾರ್ಯಕ್ರಮ ಆಯೋಜಿಸಿತ್ತು.
ಚೀನಾದೊಂದಿಗೆ ಗಡಿ ಸಂಬಂಧ ಸಂಘರ್ಷ ನಡೆಯುತ್ತಿರುವ ಸಂದರ್ಭದಲ್ಲೇ, ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶದಲ್ಲಿ ಚೀನಾ ಪ್ರಾಬಲ್ಯವನ್ನು ನಿಯಂತ್ರಿಸುವ ಉದ್ದೇಶದ ಕ್ವಾಡ್ ಒಕ್ಕೂಟದ ನೌಕಾಪಡೆಗಳ ಸಮರಾಭ್ಯಾಸ ಆರಂಭವಾಗಿದೆ.
ಅಪೌಷ್ಟಿಕತೆ ನಿವಾರಣೆಗಾಗಿ ಶ್ರಮಿಸುತ್ತಿರುವ 116 ರಾಷ್ಟ್ರಗಳಲ್ಲಿ ಭಾರತ 101ನೇ ಸ್ಥಾನಕ್ಕೆ ಕುಸಿದಿದೆ. ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ರಾಷ್ಟ್ರಗಳಿಂದ ಹಿಂದುಳಿದಿದೆ.
ಬಹು ಮಾದರಿ ಸಂಪರ್ಕ ಏರ್ಪಡಿಸುವ ₹100 ಲಕ್ಷ ಕೋಟಿ ಮೌಲ್ಯದ ‘ಪಿಎಂ ಗತಿ ಶಕ್ತಿ’ ರಾಷ್ಟ್ರೀಯ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ಕೊಟ್ಟರು. ಸಾಗಣೆ ವೆಚ್ಚ ಕಡಿಮೆ ಮಾಡಿ, ಆರ್ಥಿಕತೆ ಉತ್ತೇಜಿಸುವ ಹಾಗೂ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಗುರಿಯನ್ನು ಇದು ಹೊಂದಿದೆ.
ತಮಿಳುನಾಡಿನ ವಿವಿಧ ದೇವಸ್ಥಾನಗಳಿಗೆ ಭಕ್ತರು ನೀಡುವ ಚಿನ್ನದ ಸಣ್ಣ ಆಭರಣಗಳ ನಗದೀಕರಣ ಯೋಜನೆಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮರು ಚಾಲನೆ ನೀಡಿದರು.
ಕೆಲವು ವರ್ಗಗಳ ಮಹಿಳೆಯರಿಗೆ ಗರ್ಭಪಾತದ ಅವಧಿಯನ್ನು 20 ರಿಂದ 24 ವಾರಗಳಿಗೆ ಹೆಚ್ಚಿಸುವ ಹೊಸ ನಿಯಮಗಳನ್ನೊಳಗೊಂಡ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ.
ಒಂದೇ ಸೂರಿನಡಿ ಸರ್ಕಾರದ ಸೇವೆಗಳನ್ನು ಒದಗಿಸುವ ಮಾಹಿತಿ ಕಣಜ ಪೋರ್ಟಲ್ ಅನ್ನು ವಿವಿಧ ಇಲಾಖೆಗಳಿಂದ ನವೀಕರಿಸಿದ ಮಾಹಿತಿಗಳೊಂದಿಗೆ ರಿಲಾಂಚ್ ಮಾಡಲಾಗಿದ್ದು, ಈಗ ಯಾವುದೇ ಲಾಗಿನ್ ವ್ಯವಸ್ಥೆ ಹೊಂದಿರುವುದಿಲ್ಲ ಮತ್ತು ಆರ್ ಟಿಐ ಅರ್ಜಿ ಸಲ್ಲಿಸದಯೇ ರಾಜ್ಯ ಸರ್ಕಾರದ 157 ಸೇವೆ ಗಳ ಮಾಹಿತಿಯನ್ನು ಪಡೆಯಬಹುದು.
ಚುಟುಕು ಸಮಾಚಾರ
2021ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದ್ದು, ಮೂವರು ಅಮೆರಿಕ ಮೂಲದ ಅರ್ಥಶಾಸ್ತ್ರಜ್ಞರು ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.
ಗುಜರಾತ್ನ ಮುಂದ್ರಾ ಬಂದರಿನಲ್ಲಿ ಅಂದಾಜು 20,000 ಕೋಟಿ ರೂ ಮೌಲ್ಯದ 2,998 ಕೆಜಿ ಹೆರಾಯಿನ್ ಪತ್ತೆಯಾದ ಸುಮಾರು ಒಂದು ತಿಂಗಳ ಬಳಿಕ, ಈ ಬಂದರನ್ನು ನಿರ್ವಹಣೆ ಮಾಡುತ್ತಿರುವ ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ (ಎಪಿಎಸ್‌ಇಜೆಡ್) ಮಹತ್ವದ ಪ್ರಕಟಣೆ ಮಾಡಿದೆ. ನವೆಂಬರ್ 15 ರಿಂದ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಇರಾನ್ ದೇಶಗಳಿಂದ ಹೊರಡುವ ಯಾವುದೇ ಕಂಟೇನರ್ ಸರಕು ಸಾಗಣೆ ಹಡಗಿನ ನಿರ್ವಹಣೆ ಮಾಡುವುದಿಲ್ಲ ಎಂದು ತಿಳಿಸಿದೆ.
ಬಿಎಂಆರ್‌ಸಿಎಲ್ ಅಕ್ಟೋಬರ್ 21 ರಂದು, ಬಹುನಿರೀಕ್ಷಿತ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ಬಿಡುಗಡೆ ಮಾಡುತ್ತಿದೆ.
ರಾಜ್ಯದ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲಿ ಕಲ್ಲಿದ್ದಲು ಕೊರತೆಯಿಂದಾಗಿ ಹಲವು ಘಟಕಗಳನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಜಲ ವಿದ್ಯುತ್ ಉತ್ಪಾದನಾ ಕೇಂದ್ರಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದೆ
ಅಲಹಾಬಾದ್ ಹೈಕೋರ್ಟ್ ನ ಹಿರಿಯ ನ್ಯಾಯಾಧೀಶ, ಜಸ್ಟೀಸ್ ರಿತು ರಾಜ್ ಅವಸ್ತಿ ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ.
ಸೈಬರ್ ಅಪರಾಧ ಪ್ರಕರಣಗಳಲ್ಲಿ ಬೆಂಗಳೂರು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಚುಟುಕು ಸಮಾಚಾರ
ಅ.9ರಂದು ಜಗತ್ತಿನಾದ್ಯಂತ ವಿಶ್ವ ಅಂಚೆ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರಪಂಚದ ನಾನಾ ಭಾಗಗಳ ಜನತೆ, ಸಂಸ್ಥೆ, ಸರಕಾರಗಳ ನಡುವಿನ ಸಂಪರ್ಕಕ್ಕೆ ಅತ್ಯಂತ ಹಳೆಯ ಮಾನವ ಸಂವಹನ ಪ್ರಕ್ರಿಯೆಗಳಲ್ಲಿ ಪ್ರಮುಖ ಸಾಧನವಾಗಿ ಅಂಚೆ ಸೇವೆಗಳು ನಡೆದುಬಂದಿವೆ.
ರಷ್ಯಾ ಮತ್ತು ಫಿಲಿಪ್ಪೀನ್ಸ್ ಇಬ್ಬರು ಪತ್ರಕರ್ತರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ವಿಶ್ವಾದ್ಯಂತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ಪ್ರಶಸ್ತಿ ಸಮಿತಿಯು, ಅದರ ರಕ್ಷಣೆಗಾಗಿ ಈ ಇಬ್ಬರೂ ಪತ್ರಕರ್ತರು ನಡೆಸಿದ ಪ್ರಯತ್ನವನ್ನು ಮನ್ನಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಫಿಲಿಪ್ಪೀನ್ಸ್‌ನ ಮರಿಯಾ ರೆಸ್ಸಾ, ರಷ್ಯಾದ ಡಿಮಿಟ್ರಿ ಮುರಾಟೋವ್ ಪ್ರಶಸ್ತಿ ಪುರಸ್ಕೃತರು.
“ಭಾರತೀಯ ವಾಯು ಪಡೆ ಸ್ಥಾಪನೆಯಾದ 89ನೇ ವರ್ಷದ ಆಚರಣೆ 8 ಅಕ್ಟೋಬರ್ ನಡೆಯುತ್ತಿದೆ. ಎಂದಿನಂತೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಹಿಂಡನ್ ವಾಯುನೆಲೆಯಲ್ಲಿ ಕಾರ್ಯಾಕ್ರಮ ನಡೆಯುತ್ತಿದೆ.
ಬೆಳೆ ಹಾನಿ ಮಾಡುವ ಇಲಿ, ಬಾವಲಿಗಳು ಮತ್ತು ಕಾಗೆಗಳನ್ನು ‘ಕ್ರಿಮಿ ಕೀಟಗಳು‘(ವರ್ಮಿನ್) ಎಂದು ಘೋಷಿಸಲಾಗಿದ್ದು, ಪೊಕ್ಕಲಿ ಭತ್ತದ ಮೇಲೆ ದಾಳಿ ಮಾಡಿ, ಬೆಳೆ ನಾಶಮಾಡುವ ಬೂದು ತಲೆಯ ನೀರುಕೋಳಿ ಅಥವಾ ‘ನೀಲ ಕೋಳಿ‘ಯನ್ನೂ ಆ ಪಟ್ಟಿಗೆ ಸೇರಿಸುವಂತೆ ಕೇರಳದ ಪೊಕ್ಕಲಿ ಭತ್ತದ ಕೃಷಿಕರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಜವಳಿ ಕ್ಷೇತ್ರವನ್ನು ಉತ್ತೇಜಿಸುವ ಮತ್ತೊಂದು ಯೋಜನೆಯಲ್ಲಿ, ಕೇಂದ್ರ ಸಚಿವ ಸಂಪುಟ 7 ಮೆಗಾ ಇಂಟಿಗ್ರೇಟೆಡ್ ಜವಳಿ ಪ್ರದೇಶ ಮತ್ತು ಉಡುಪುಗಳ ಒಟ್ಟು 4,445 ಕೋಟಿ ರೂಪಾಯಿ ವೆಚ್ಚದ ಪಿಎಂ ಮಿತ್ರಾ ಟೆಕ್ಸ್ ಟೈಲ್ ಪಾರ್ಕ್ ಯೋಜನೆಗೆ ಅನುಮೋದನೆ ನೀಡಿದೆ.
ಕೆಂಪೇಗೌಡ ಅಂತರಾಷ್ಟ್ರೀಯಯ ವಿಮಾನ ನಿಲ್ದಾಣವೂ ಅತಿ ಹೆಚ್ಚು ಪೆರಿಷೆಬಲ್(ಕೊಳೆಯುವ) ಪದಾರ್ಥಗಳ ಸರಕು ಸಾಗಣಿ ಮಾಡಿದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೇಂದ್ರ ಸರಕಾರವು ಅರಣ್ಯ ಸಂರಕ್ಷಣೆ ಕಾಯಿದೆ 1980ಕ್ಕೆ ತಿದ್ದುಪಡಿ ತಂದು ಅರಣ್ಯ ಕಾನೂನನ್ನು ಉದಾರಗೊಳಿಸಲು ಮುಂದಾಗಿದೆ. ಇದರಿಂದಾಗಿ, ಮಹತ್ವದ ಯೋಜನೆಗಳಿಗೆ ಪೂರ್ವಾನುಮತಿ ಪಡೆಯದೆ ಅರಣ್ಯ ಭೂಮಿ ಬಳಕೆಗೆ ಮುಕ್ತ ಅವಕಾಶ ಸಾಧ್ಯವಾಗಲಿದೆ.
ಚುಟುಕು ಸಮಾಚಾರ
ರಸಾಯನಶಾಸ್ತ್ರದಲ್ಲಿ ಅಸಿಮ್ಮೆಟ್ರಿಕ್ ಆರ್ಗನೊಕಟಾಲಿಸಿಸ್ ಅಭಿವೃದ್ಧಿಗಾಗಿ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ವಿಜ್ಞಾನ ಪ್ರಸಕ್ತ ಸಾಲಿನ ನೊಬೆಲ್ ಪ್ರಶಸ್ತಿ ಘೋಷಿಸಿದೆ.
ಪ್ರತಿ ವರ್ಷ ಲಕ್ಷಾಂತರ ಜನರ ಸಾವಿಗೆ ಕಾರಣವಾಗುತ್ತಿರುವ ಮಲೇರಿಯಾ ವಿರುದ್ಧ ಹೋರಾಟಕ್ಕೆ ಲಸಿಕೆ ಅಭಿವೃದ್ಧಿಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅನುಮೋದನೆ ದೊರೆತಿದೆ. ‘ಇದೊಂದು ಐತಿಹಾಸಿಕ ಘಟನೆ’ ಎಂದು ಬಣ್ಣಿಸಲಾಗಿದೆ.
ಸ್ವದೇಶಿ ನಿರ್ಮಿತ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ‘ಬ್ರಹ್ಮೋಸ್’ ಮತ್ತು ಸಬ್ ಸಾನಿಕ್ ಕ್ಷಿಪಣಿ ‘ನಿರ್ಭಯ್’ ಬಗ್ಗೆ ವಿಶ್ವದ ಹಲವು ದೇಶಗಳ ಆಸಕ್ತಿ ಹೆಚ್ಚುತ್ತಿರುವ ಬೆನ್ನಲ್ಲೇ, ಬೆಂಗಳೂರಿನ ಕ್ಷಿಪಣಿಗಳ ಬಿಡಿ ಭಾಗ ತಯಾರಿಕೆಯ ಉದ್ಯಮಗಳ ಕನಸುಗಳು ಗರಿಗೆದರಿವೆ.
ಗ್ರಾಮೀಣ ಭಾಗದ ಜನರಿಗೆ ಆಸ್ತಿ ಹಕ್ಕು ಕಾರ್ಡ್ ವಿತರಿಸುವ ಮಹತ್ವಾಕಾಂಕ್ಷಿ ‘ಸ್ವಾಮಿತ್ವ ಯೋಜನೆ’ಯನ್ನು ಶೀಘ್ರವೇ ರಾಷ್ಟ್ರದಾದ್ಯಂತ ಜಾರಿಗೊಳಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಭದ್ರತೆಯನ್ನು ಹೆಚ್ಚಿಸುವ ಆರ್ಟ್ ವಿಡಿಯೋ ವಾಲ್ (ಗೋಡೆ)ಯನ್ನು ಬೆಲ್ಜಿಯಂ ನಿಂದ ಆಮದು ಮಾಡಿಕೊಳ್ಳಲಾಗಿದ್ದು ರೈಲ್ವೆ ಭದ್ರತಾ ಪಡೆ (ಆರ್ ಪಿಎಫ್) ನ್ ಸೈಬರ್ ಸೆಲ್ ನ ಆವರಣದಲ್ಲಿ ಅಳವಡಿಸಲಾಗಿದೆ.
ಚುಟುಕು ಸಮಾಚಾರ
2021ನೇ ಸಾಲಿನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ವಿಜ್ಞಾನಿಗಳಾದ ಸೈಕುರೊ ಮನಾಬೆ, ಕ್ಲಾಸ್ ಹ್ಯಾಸೆಲ್ಮನ್, ಪ್ಯಾರಿಸಿಯವರು ಭಾಜನರಾಗಿದ್ದಾರೆ.
ನಮ್ಮ ಸೌರಮಂಡಲದಲ್ಲಿ ಅಸ್ತಿತ್ವದಲ್ಲಿ ಇರಬಹುದಾದ 9ನೇ ಗ್ರಹ ಪ್ಲ್ಯಾನೆಟ್ ಎಕ್ಸ್ ಬಗ್ಗೆ ಈಗ ಮತ್ತೆ ಚರ್ಚೆಗಳು ಶುರುವಾಗಿವೆ. ಪ್ಲ್ಯಾನೆಟ್ ಎಕ್ಸ್ ಅಸ್ತಿತ್ವದ ಬಗ್ಗೆ ಪ್ರಬಲ ಸಾಕ್ಷಿಗಳು ದೊರೆಯುತ್ತಿದ್ದು, ಈ ಕಾಲ್ಪನಿಕ ಗ್ರಹ ನೈಜ ಗ್ರಹವಾಗಿ ನಮ್ಮ ಕಣ್ಣಮುಂದೆ ಗೋಚರವಾಗಲಿದೆಯೇ ಎಂಬ ಕುತೂಹಲ ಮೂಡಿದೆ
ಅಮೆರಿಕ, ಇಸ್ರೇಲ್ ಮತ್ತು ನೆದರ್‌ಲ್ಯಾಂಡ್ ವಿಜ್ಞಾನಿಗಳು, ಕಪ್ಪುರಂಧ್ರವೊಂದು ನಕ್ಷತ್ರವನ್ನು ನುಂಗುವ ವಿದ್ಯಮಾನವನ್ನು ಗುರುತಿಸಿದ್ದಾರೆ.
ರಷ್ಯಾದ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳಲ್ಲಿ ಒಂದಾದ ಎಸ್ – 400 ಕ್ಷಿಪಣಿ ವ್ಯವಸ್ಥೆಯನ್ನು ಈ ವರ್ಷದ ಅಂತ್ಯದ ವೇಳೆಗೆ ವಾಯುಪಡೆಗೆ ಸೇರಿಸಲಾಗುವುದು ಎಂದು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಹೇಳಿದ್ದಾರೆ.
ಪ್ರಧಾನಮಂತ್ರಿ ಕುಸುಮ್’ ಯೋಜನೆಯ ಅಡಿಯಲ್ಲಿ ರಾಜ್ಯದ ಫಲಾನುಭವಿ ರೈತರಿಗೆ ಶೀಘ್ರವೇ ಸೋಲಾರ್ ಗ್ರಿಡ್ ಆಧಾರಿತ ಪಂಪ್‌ಸೆಟ್‌ಗಳನ್ನು ನೀಡಲು ಸರ್ಕಾರ ನೆರವಾಗಲಿದೆ’ ಎಂದು ಇಂಧನ ಸಚಿವ ವಿ.ಸುನಿಲ್‌ಕುಮಾರ್ ತಿಳಿಸಿದ್ದಾರೆ.
ರಾಜ್ಯದ ನೂತನ ಮುಖ್ಯ ಚುನಾವಣಾಧಿಕಾರಿಯಾಗಿ 2003ರ ಬ್ಯಾಚಿನ ರಾಜ್ಯದ ಐಐಎಸ್ ಅಧಿಕಾರಿ ಮನೋಜ್ ಕುಮಾರ್ ಮೀನಾ ಅವರು ನೇಮಕವಾಗಿದ್ದಾರೆ.
ವಿಶ್ವದ ಏಕೈಕ ಕಾಳಿಂಗ ಸರ್ಪ ಕೃತಕ ಸಂತಾನಾಭಿವೃದ್ಧಿ ಕೇಂದ್ರ ಖ್ಯಾತಿಯ ಪಿಲಿಕುಳ ನಿಸರ್ಗಧಾಮಕ್ಕೆ ಇದೀಗ ಕಾಳಿಂಗ ಸರ್ಪದ ಜತೆಗೆ ಅಪರೂಪದ ಕೆಂಚಳಿಲು ಸಂತಾನಾಭಿವೃದ್ಧಿ ಸಂಶೋಧನೆ ಮಾಡುವ ಪ್ರಾಜೆಕ್ಟನ್ನು ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರ ನೀಡಿದೆ.
ಚುಟುಕು ಸಮಾಚಾರ
ಭಯೋತ್ಪಾದನೆಯನ್ನು ನಿಗ್ರಹಿಸುವ ಕಾರ್ಯಾಚರಣೆಯ ಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಮತ್ತು ಶ್ರಿಲಂಕಾ ನಡುವಿನ ಜಂಟಿ ಸೇನಾ ಅಭ್ಯಾಸ ಶ್ರೀಲಂಕಾದ ಪೂರ್ವ ಭಾಗದ ಅಂಪಾರಾ ಜಿಲ್ಲೆಯ ಕಾಂಬ್ಯಾಟ್ ಟ್ರೈನಿಂಗ್ ಸ್ಕೂಲ್‌ನಲ್ಲಿ ಆರಂಭವಾಯಿತು.
ಭಾರತ-ಚೀನಾ ಗಡಿಯಿಂದ ಕೇವಲ 50 ಕಿ.ಮೀ. ದೂರದಲ್ಲಿ ಶೆಲ್ ದಾಳಿ ನಡೆಸಿ ಶತ್ರುಪಡೆಯನ್ನು ಛಿದ್ರಗೊಳಿಸುವ ಸಾಮರ್ಥ್ಯದ ಸ್ವಯಂಚಾಲಿತ ಹೊವಿಟ್ಜರ್ ‘ಕೆ9- ವಜ್ರ’ವನ್ನು ಗಡಿ ಭದ್ರತಾ ಪಡೆ ನಿಯೋಜಿಸಿದೆ.
ಪಾಲ್ಘರ್ ಜಿಲ್ಲೆಯ ವಾಡಾ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯಲಾಗುವ ‘ಕೋಲಂ ಅಕ್ಕಿ‘ಗೆ ‘ಭೌಗೋಳಿಕ ಸೂಚಿ’ (ಜಿಐ ಟ್ಯಾಗ್) ಮಾನ್ಯತೆ ಲಭಿಸಿದೆ.
ಅತಿವೇಗದಿಂದಾಗುವ ಅಪಘಾತಗಳಿಗೆ ಕಡಿವಾಣ ಹಾಕಲು ಆಯ್ದ ಕೆಲವು ರಾಜ್ಯಗಳಲ್ಲಿನ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ನಗರಗಳ ಪ್ರಮುಖ ರಸ್ತೆಗಳಲ್ಲಿ ವೇಗ ನಿರ್ವಹಣಾ ಸಾಧನಗಳನ್ನು (ಎಸ್‌ಎಂಡಿ) ಅಳವಡಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪ್ರಸ್ತಾವ ಸಿದ್ಧಪಡಿಸಿದೆ.
2024ರೊಳಗೆ ದೇಶದ ಪ್ರತಿ ಹಳ್ಳಿಗೂ ನಿರಂತರ ಶುದ್ಧ ಕುಡಿಯುವ ನೀರು ಕಲ್ಪಿಸುವ ಮಹತ್ವಾಕಾಂಕ್ಷಿ ಜಲ್ ಜೀವನ್ ಮಿಷನ್‌ನ (ಜೆಜೆಎಮ್) ಭಾಗವಾಗಿರುವ ಮೊಬೈಲ್ ಅಪ್ಲಿಕೇಷನ್ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅನಾವರಣಗೊಳಿಸಿದರು.
ಚಿತ್ರದುರ್ಗದ ಮುರುಘಾ ಮಠದ ವತಿಯಿಂದ ಪ್ರದಾನ ಮಾಡುವ ಬಸವಶ್ರೀ ಪ್ರಶಸ್ತಿಯ 2019ರ ಸಾಲಿಗೆ ಪಂಡಿತ್ ರಾಜೀವ್ ತಾರಾನಾಥ್ ಹಾಗೂ 2020ರ ಸಾಲಿನ ಪ್ರಶಸ್ತಿಗೆ ಇಸ್ರೋ ಮಾಜಿ ಅಧ್ಯಕ್ಷರಾದ ಕೆ. ಕಸ್ತೂರಿ ರಂಗನ್ ಅವರು ಆಯ್ಕೆಯಾಗಿದ್ದಾರೆ.
ಮೈಸೂರು ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಶೀಘ್ರವೇ ಗೊರಿಲ್ಲಾ ಹಾಗೂ ಒರಾಂಗುಟನ್ ಗಳು ಕಾಣಸಿಗಲಿವೆ.
ಚುಟುಕು ಸಮಾಚಾರ
ದೆಹಲಿ ಆಪ್ ಸರ್ಕಾರ ಶಾಲಾ ಮಕ್ಕಳು ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ‘ದೇಶಭಕ್ತಿ ಧ್ಯಾನ್’ ಎನ್ನುವ ದೇಶಪ್ರೇಮ ಪಠ್ಯವನ್ನು ಸಿದ್ಧಪಡಿಸಿದೆ.
ಸ್ವಚ್ಛ ಭಾರತ್ ಮಿಷನ್-ನಗರ 2.0 ಮತ್ತು ಅಮೃತ್ 2.0 ಯೋಜನೆಗೆ ಪ್ರಧಾನಿ ಅವರು ಚಾಲನೆ ನೀಡಿದರು .ದೇಶದಲ್ಲಿ ಪ್ರತಿದಿನ 1 ಲಕ್ಷ ಟನ್ ಕಸ ಉತ್ಪಾದನೆಯಾಗುತ್ತಿದ್ದು ಅದನ್ನು ನಿರ್ವಹಣೆ ಮಾಡಲು ಆದ್ಯತೆ ನೀಡಲಾಗುತ್ತಿದೆ. ಕಸಮುಕ್ತ ನಗರವಾಗಿರುವ ಜೊತೆಗೆ ಒಳಚರಂಡಿ ವ್ಯವಸ್ಥೆಗೆ ಆದ್ಯತೆ ಮತ್ತು ಸುರಕ್ಷತಾ ನಿರ್ವಹಣೆಗೆ ಒತ್ತು ನೀಡುವ ಮೂಲಕ ಕೊಳಚೆ ನೀರು ನದಿಗೆ ಸೇರಿದಂತೆ ಕ್ರಮ ಕೈಗೊಳ್ಳಲಾಗುವುದು
2021-22ನೇ ಸಾಲಿನ ಅಯವ್ಯಯ ಘೋಷಣೆಯನ್ವಯ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೇದಗುಡ್ಡ ನಗರದಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
‘ಗ್ರ್ಯಾಂಡ್ ಚಾಲೆಂಜ್’ ಯೋಜನೆಯಡಿ ಇ- ಕಲ್ಚರ್ ಪರಿಕಲ್ಪನೆ ಉತ್ತೇಜಿಸಲು ದೇಶದ 9 ಮಹಾನಗರಗಳಿಗೆ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ಬಸ್‌ಗಳನ್ನು ನೀಡಲು ಮುಂದಾಗಿದ್ದು, ಪಟ್ಟಿಯಲ್ಲಿ ಬೆಂಗಳೂರು ಹಾಗೂ ಮೈಸೂರು ನಗರಗಳಿವೆ
NammaKPSC Current Affairs - September 2021
ಚುಟುಕು ಸಮಾಚಾರ
ನೊಬೆಲ್ ಗೆ ಸಮನಾದ ಪ್ರಶಸ್ತಿ ಎಂದೇ ಹೆಸರಾದ 2021 ಸಾಲಿನ ರೈಟ್ ಲೈವ್ಲಿಹುಡ್ ಪ್ರಶಸ್ತಿಗೆ ಈ ಬಾರಿ ನಾಲ್ಕು ಮಂದಿ ಭಾಜನರಾಗಿದ್ದಾರೆ. ಈ ಪ್ರಶಸ್ತಿಯನ್ನು ‘ಅಲ್ಟರ್ನೇಟಿವ್ ನೊಬೆಲ್’ ಎಂದೇ ಕರೆಯಲಾಗುತ್ತದೆ.ಈ ಬಾರಿ ಪ್ರಶಸ್ತಿಗೆ ಭಾಜನರಾದ ನಾಲ್ಕು ಮಂದಿಯಲ್ಲಿ ಭಾರತದ LIFE(Legal Initiative for Forest and Environment) ಎನ್ ಜಿ ಒ ಕೂಡಾ ಸೇರಿದೆ.
ದೇಶದಲ್ಲಿ ಈಗ ಅಸ್ತಿತ್ವದಲ್ಲಿರುವ ಕಲ್ಲಿದ್ದಲು ವಿದ್ಯುತ್ ಸ್ಥಾವರಗಳು ಮತ್ತು ಮುಂಬರುವ ದಿನಗಳಲ್ಲಿ ಕಲ್ಲಿದ್ದಲು ಘಟಕಗಳನ್ನು ವಿಸ್ತರಿಸುವ ವಿವಿಧ ಯೋಜನೆಗಳನ್ನು ಪರಿಶೀಲನೆಗೆ ಒಳಪಡಿಸಿ, ‘ಸಿ40 ಸಿಟೀಸ್’ ಸಂಸ್ಥೆಯು ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿದೆ.
ದೇಶದಾದ್ಯಂತ ಸರ್ಕಾರಿ ಹಾಗೂ ಅನುದಾನಿತ ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಬಿಸಿಯೂಟ ಒದಗಿಸುವ ‘ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್’ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ವಿವಾದಿತ ಎತ್ತಿನಹೊಳೆ ಯೋಜನೆಗಾಗಿ ಈವರೆಗೆ 20,185 ಮರಗಳ ಮಾರಣಹೋಮ ನಡೆದಿದೆ. ಯೋಜನೆಗಳ ಹೆಸರಿನಲ್ಲಿ ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟಕ್ಕೆ ಕೊಡಲಿ ಏಟು ಹಾಕುತ್ತಿರುವ ಸರ್ಕಾರದ ನಡೆಯನ್ನು ಪರಿಸರವಾದಿಗಳು ಖಂಡಿಸಿದ್ದಾರೆ.
ತಾಯಿಯು ತಾನು ಹೆತ್ತ ಮಗುವಿಗೆ ಸ್ತನ್ಯಪಾನ ಮಾಡಿಸುವ ಹಕ್ಕನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಇದು ತಾಯಿ ಮತ್ತು ಮಗು ಇಬ್ಬರ ಮೂಲಭೂತ ಹಕ್ಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕೊರೊನಾದಿಂದಾಗಿ ಕಳೆದ ಎರಡು ಬಾರಿ ತಡೆ ಹಿಡಿಯಲಾಗಿದ್ದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು ಘೋಷಿಸಲಾಗಿದೆ.2020ರ ಸಾಲಿಗೆ ಬಾಗಲಕೋಟೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾದ ‘ಮೀರಾಬಾಯಿ ಕೊಪ್ಪಿಕರ್’ ಮತ್ತು 2021ನೇ ಸಾಲಿಗೆ ‘ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಹಾಗೂ ‘ಸಿದ್ಧಗಂಗಾ ಮಠ’ ವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
2022-23ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುವ ಉದ್ದೇಶದಿಂದ ಪ್ರತಿ ಮನೆಗೂ ನರೇಗಾ ಯೋಜನೆಯನ್ನು ತಲುಪಿಸುವ ಗುರಿಯೊಂದಿಗೆ ಮನೆ ಮನೆಗೆ ಉದ್ಯೋಗ ಖಾತರಿ ಯೋಜನೆ ಅಭಿಯಾನ ಶುರುವಾಗಲಿದೆ. ಅ. 1ರಿಂದ ಒಂದು ತಿಂಗಳ ಕಾಲ ಗ್ರಾಮದ ಪ್ರತಿ ಮನೆಗೂ ನರೇಗಾ ಯೋಜನೆ ಮಾಹಿತಿ ತಲುಪಲಿದೆ.
ಚುಟುಕು ಸಮಾಚಾರ
ಹೃದಯದ ಬಗ್ಗೆ ನಿಷ್ಕಾಳಜಿ ಬೇಡ, ಪುಟ್ಟ ಹೃದಯದ ಮಿಡಿತ ಚೆನ್ನಾಗಿರಬೇಕೆಂಬ ಸದುದ್ದೇಶದಿಂದಲೇ ಜಿನೇವಾದಲ್ಲಿರುವ ವಿಶ್ವ ಹಾರ್ಟ್ ಫೆಡರೇಶನ್ ಪ್ರತಿವರ್ಷ ಸೆ. 29 ರಂದು ಜಾಗತಿಕ ಮಟ್ಟದಲ್ಲಿ ವಿಶ್ವ ಹೃದಯ ದಿನವನ್ನಾಗಿ ಆಚರಿಸುತ್ತಿದೆ.
ಈಗ ಜಾರಿಯಲ್ಲಿ ಇರುವ ವಿದೇಶ ವ್ಯಾಪಾರ ನೀತಿಯನ್ನು (ಎಫ್‌ಟಿಪಿ) ಮಾರ್ಚ್ 31ರವರೆಗೂ ಮುಂದುವರಿಸಲಾಗುವುದು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ರಕ್ಷಣಾ ಸಚಿವಾಲಯವು ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್ (OFB) ವನ್ನು ರದ್ದುಪಡಿಸಿದ್ದು, ಮತ್ತು ಅಲ್ಲಿದ್ದ ಆಸ್ತಿ, ಉದ್ಯೋಗಿಗಳು ಮತ್ತು ನಿರ್ವಹಣೆಯನ್ನು ಏಳು ಸಾರ್ವಜನಿಕ ವಲಯದ ಘಟಕಗಳಿಗೆ (PSU) ವರ್ಗಾಯಿಸಿದೆ.
ಜವಳಿ ಉದ್ಯಮಕ್ಕೆ ಈಚೆಗೆ ಘೋಷಿಸಲಾಗಿರುವ ₹10,683 ಕೋಟಿ ಮೊತ್ತದ ತಯಾರಿಕೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆಯಲ್ಲಿ ಭಾರತದಲ್ಲಿ ನೋಂದಣಿ ಆಗಿರುವ ತಯಾರಿಕಾ ಕಂಪನಿಗಳು ಮಾತ್ರ ಪಾಲ್ಗೊಳ್ಳಬಹುದು ಎಂದು ಕೇಂದ್ರ ಜವಳಿ ಸಚಿವಾಲಯ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ 35 ಬಗೆಯ ವಿವಿಧ ಬೆಳೆಗಳ ಸುಧಾರಿತ ತಳಿಯ ಬೀಜಗಳನ್ನು ದೇಶಕ್ಕೆ ಅರ್ಪಿಸಿದರು. ಈ ವಿಶೇಷ ತಳಿಗಳು ಹವಾಮಾನ ಬದಲಾವಣೆಗೆ ನಿರೋಧಕವಾಗಿರುವ ಜತೆಗೆ ಹೆಚ್ಚಿನ ಪೌಷ್ಟಿಕಾಂಶಗಳನ್ನು ಹೊಂದಿರಲಿವೆ. ಅಂದರೆ, ಈ ತಳಿಗಳು ಹವಾಮಾನ ಬದಲಾವಣೆಯ ಪರಿಣಾಮಕ್ಕೆ ಒಳಪಡುವುದಿಲ್ಲ. ಈ ತಳಿಗಳನ್ನು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) ಅಭಿವೃದ್ಧಿಪಡಿಸಿದೆ.
ರಾಜ್ಯದ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗಾಗಿ ಡಾ.ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯ ಶಿಫಾರಸ್ಸಿನಂತೆ ಜಾರಿಯಲ್ಲಿರುವ ‘ವಿಶೇಷ ಅಭಿವೃದ್ಧಿ ಯೋಜನೆ’ಯನ್ನು ಬದಲಿಸಿ, ನೀತಿ ಆಯೋಗ ಸೂಚಿಸಿರುವ 49 ಸೂಚಕಗಳನ್ನು ಅಳವಡಿಸಿ ‘ಪ್ರಾದೇಶಿಕ ಸಮತೋಲನ ಯೋಜನೆ’ ಎಂಬ ಹೆಸರಿನಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಚುಟುಕು ಸಮಾಚಾರ
ಆಕಾಶ್ ಕ್ಷಿಪಣಿಯ ಹೊಸ ಆವೃತ್ತಿಯನ್ನು ಸೆ.27 ರಂದು ಒಡಿಶಾದ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನಿಂದ ಪರೀಕ್ಷಾರ್ಥ ಪ್ರಯೋಗ ಮಾಡಲಾಗಿದೆ.
ಭಾರತವು ಚಿಪ್‌ಗಳ ಕೊರತೆಯನ್ನು ಬಗೆಹರಿಸಲು ತೈವಾನ್ ಜತೆಗೆ ಚಿಪ್‌ಗಳ ಉತ್ಪಾದನೆಗೆ ಬೃಹತ್ ಘಟಕ ಸ್ಥಾಪಿಸಲು ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಅಂದಾಜು 55,500 ಕೋಟಿ ರೂ. ಮೊತ್ತದ ಒಪ್ಪಂದ ನಿರೀಕ್ಷಿಸಲಾಗಿದೆ.
ಭಾರತೀಯ ಮೃಗಾಲಯ ಸರ್ವೇಕ್ಷಣಾ ಸಂಸ್ಥೆಯು (ಝಡ್‌ಎಸ್‌ಐ) ಲಂಡನ್‌ನ ರಾಷ್ಟ್ರೀಯ ಇತಿಹಾಸ ಸಂಗ್ರಹಾಲಯದ (ಎನ್‌ಎಚ್ಎಂ) ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಒಡಂಬಡಿಕೆಯ ಅವಧಿ ಐದು ವರ್ಷಗಳು
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯ ಇಬ್ಬರು ಅಧಿಕಾರಿಗಳು ನೇಪಾಳದಲ್ಲಿನ ಮೌಂಟ್ ಮನಸ್ಲು ಪರ್ವತವನ್ನು ಅಳತೆ ಮಾಡಿದ್ದಾರೆ. ಇದು ಪ್ರಪಂಚದ ಎಂಟನೇ ಅತಿ ಎತ್ತರದ ಶಿಖರವಾಗಿದೆ.
ಏಷ್ಯಾದ ಅತ್ಯಂತ ಉದ್ದದ ಮತ್ತು ಅತಿ ಎತ್ತರದಲ್ಲಿರುವ ಜೊಜಿಲಾ ಸುರಂಗ ಮಾರ್ಗವು 2026ರಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ. ವರ್ಷದ ಎಲ್ಲಾ ಋತುವಿನಲ್ಲೂ ಸಂಚಾರಕ್ಕೆ ಅವಕಾಶವಿರುವ ಈ ಸುರಂಗಮಾರ್ಗವು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಪ್ರಾಂತದ ನಡುವೆ ಸಂಪರ್ಕವನ್ನು ಸುಲಭಗೊಳಿಸುತ್ತದೆ.
ವಿಶ್ವ ಪ್ರವಾಸೋದ್ಯಮ ದಿನದ ಪ್ರಯುಕ್ತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ‘ದೇಖೋ ಮೇರಿ ದಿಲ್ಲಿ ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ್ದಾರೆ.
ಚುಟುಕು ಸಮಾಚಾರ
ವಿಶ್ವ ಪ್ರವಾಸೋದ್ಯಮ ದಿನವನ್ನು ವಿಶ್ವಸಂಸ್ಥೆಯ ಸಂಸ್ಥೆಗಳು (UNO) ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ಆಚರಿಸಲಾಗುತ್ತದೆ.
ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಬಾಹ್ಯ ಲೆಕ್ಕ ಪರಿಶೋಧಕರ ಹುದ್ದೆಯ ಆರು ವರ್ಷಗಳ ಅವಧಿಗೆ ಭಾರತದ ಸಿಎಜಿ ಜಿಸಿ ಮುರ್ಮು ಅವರು ಆಯ್ಕೆಯಾಗಿದ್ದಾರೆ. ಮತದಾನದಲ್ಲಿ ಜರ್ಮನಿ, ಬ್ರಿಟನ್, ಟರ್ಕಿಯಂತಹ ದೇಶಗಳನ್ನು ಭಾರತ ಮಣಿಸಿದೆ.
ಕೇಂದ್ರ ಸರ್ಕಾರ 56 C-295 ಸರಕು ಸಾಗಣೆ ವಿಮಾನ ಸ್ವಾಧೀನ ಒಪ್ಪಂದವನ್ನು ಅಧಿಕೃತಗೊಳಿಸಿದೆ.
ಆರೋಗ್ಯ ಕುರಿತ ಸಮಗ್ರ ವಿವರಗಳುಳ್ಳ ಡಿಜಿಟಲ್ ಆರೋಗ್ಯ ಕಾರ್ಡ್ ವಿತರಿಸುವ ‘ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್‌ಸೈಂಟಿಫಿಕ್ ರೀಸರ್ಚ್‌ನ (ಜೆಎನ್‌ಸಿಎಎಸ್‌ಆರ್) ಪ್ರಾಧ್ಯಾಪಕ ಕಾನಿಷ್ಕ ವಿಶ್ವಾಸ್ ಅವರು 2021ನೇ ಸಾಲಿನ ‘ಶಾಂತಿ ಸ್ವರೂಪ್ ಭಟ್ನಾಗರ್’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಚಾಮರಾಜನಗರವು ಮೂರು ಹುಲಿ ಅಭಯಾರಣ್ಯಗಳನ್ನು ಹೊಂದಿರುವ ದೇಶದ ಮೊದಲ ಜಿಲ್ಲೆಯಾಗಲಿದೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ವಿಧಾನಸಭೆಯಿಂದ ನೀಡಲಾಗುವ ಮೊದಲ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಲೋಕಸಭೆ ಸ್ಪೀಕರ್ ಓ ಬಿರ್ಲಾ ಅವರು ಪ್ರಶಸ್ತಿ ಪ್ರಧಾನ ಮಾಡಿದರು.
ಚುಟುಕು ಸಮಾಚಾರ
2050ರ ವೇಳೆಗೆ ಭಾರತದ ಬಹುಪಾಲು ಜನರು ನಗರವಾಸಿಗಳಾಗಲಿದ್ದಾರೆ ಎಂದು ತಜ್ಞರು ಅಂದಾಜಿಸಿದ್ದಾರೆ.
ವಿಶ್ವಸಂಸ್ಥೆ ಪ್ರಧಾನ ಸಭೆಯ ಜತೆಗೇ ಸೆಪ್ಟೆಂಬರ್ 25ರಂದು ನಡೆಯಬೇಕಿದ್ದ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ (ಸಾರ್ಕ್) ರಾಷ್ಟ್ರಗಳ ವಿದೇಶಾಂಗ ಸಚಿವರ ಶೃಂಗ ಸಭೆಯಲ್ಲಿ ತಾಲಿಬಾನ್ ಸರಕಾರಕ್ಕೂ ಭಾಗಿಯಾಗಲು ಅವಕಾಶ ನೀಡಬೇಕು ಎಂಬ ಪಾಕಿಸ್ತಾನದ ಒತ್ತಾಯಕ್ಕೆ ಭಾರತ ಸೇರಿ ಸಾರ್ಕ್ನ ಏಳು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ ಕಾರಣ ಸಭೆಯೇ ರದ್ದಾಗಿದೆ.
30 ವರ್ಷಗಳ ಹಿಂದೆ ಇರಾಕಿನ ವಸ್ತುಸಂಗ್ರಹಾಲಯದಿಂದ ಕಳ್ಳಸಾಗಣೆಯಾಗಿದ್ದ 3,500 ವರ್ಷಗಳ ಹಳೆಯ ಜೇಡಿಮಣ್ಣಿನ ಟ್ಯಾಬ್ಲೆಟ್ ಅಂತಿಮವಾಗಿ ಇರಾಕ್‌ಗೆ ಮರಳಿ ಬರುತ್ತಿದೆ.
ಕ್ಯೂಎಸ್ ಪದವೀಧರರ ಉದ್ಯೋಗಶೀಲತೆ ಶ್ರೇಣಿ 2022’ ಪಟ್ಟಿಯ ಉನ್ನತ 500 ಸಂಸ್ಥೆಗಳಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಆರು ಐಐಟಿಗಳು ಒಳಗೊಂಡು ದೇಶದ 12 ಸಂಸ್ಥೆಗಳು ಸ್ಥಾನ ಪಡೆದಿವೆ. ಭಾರತದ ಸಂಸ್ಥೆಗಳ ಪೈಕಿ ಐಐಟಿ (ಬಾಂಬೆ) ಮೊದಲ ಸ್ಥಾನದಲ್ಲಿದೆ.
ಚುಟುಕು ಸಮಾಚಾರ
ಅಮೆರಿಕದ ಬೇಹುಗಾರಿಕೆ ಸಂಸ್ಥೆ ಸಿಐಎ ನಿರ್ದೇಶಕ ಬಿಲ್ ಬರ್ನ್ಸ್ ಅವರ ನಿಯೋಗವು ಭಾರತಕ್ಕೆ ಭೇಟಿ ನೀಡಿದ್ದ ವೇಳೆ ನಿಗೂಢವಾದ ಮಾನಸಿಕ ಹಾಗೂ ನರರೋಗ ಸಮಸ್ಯೆ ಎನ್ನಲಾದ ‘ಹವಾನಾ ಸಿಂಡ್ರೋಮ್’ ತಮ್ಮ ತಂಡದ ಸದಸ್ಯರಿಗೆ ತಗುಲಿದೆ ಎಂದು ಅಮೆರಿಕ ಆರೋಪ ಮಾಡಿದೆ.
ಮೊದಲ ಬಾರಿಗೆ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳ ವಿದೇಶಿ ಉನ್ನತ ಶಿಕ್ಷಣಕ್ಕಾಗಿ ಜಾರ್ಖಂಡ್ ರಾಜ್ಯ ಸರ್ಕಾರ ಸ್ಕಾಲರ್ ಶಿಪ್ ಯೋಜನೆ ಜಾರಿಗೊಳಿಸಿದೆ.
900 ಎಂಎಂ ಮಳೆಯ ಮೂಲಕ ಮೇಘಾಲಯದಲ್ಲಿರುವ ಚಿರಾಪುಂಜಿ ವಿಶ್ವದ ಅತ್ಯಂತ ಹೆಚ್ಚು ಮಳೆಯಾಗುವ ಪ್ರದೇಶ. ಬೆಂಗಳೂರಿನ ವಾರ್ಷಿಕ ಮಳೆಯ ಪ್ರಮಾಣ ಇದಾಗಿದ್ದು, ಇಂತಹ ತೀವ್ರ ಮಳೆಯಾಗುವ ಪ್ರದೇಶವೂ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಇಲ್ಲದ ಶುಷ್ಕ ವಾತಾವರಣ ಉಂಟಾಗುತ್ತಿದೆ.
ಕೊರೊನಾ ವೇಳೆಯಲ್ಲಿ ಸ್ಥಾಪಿಸಲಾದ ಪರಿಹಾರ ನಿಧಿ, ಪಿ.ಎಂ ಕೇರ್ಸ್ ಫಂಡ್, ಸರ್ಕಾರದ ನಿಧಿ ಅಲ್ಲ ಎಂದು ಕೇಂದ್ರ ಸರ್ಕಾರ ಹಾಗೂ ಪ್ರಧಾನ ಮಂತ್ರಿ ಕಾರ್ಯಾಲಯ ದೆಹಲಿ ಹೈ ಕೋರ್ಟ್‌ಗೆ ತಿಳಿಸಿದೆ.
ಗ್ರಾಮ ಪಂಚಾಯತಿ ಮುಖಾಂತರ ಸರ್ಕಾರದ ಸೇವೆಗಳು ಜನರ ಮನೆಬಾಗಿಲಿಗೆ ಸಿಗುವಂತೆ ಮಾಡುವ ‘ಗ್ರಾಮ ಸೇವಾ ಯೋಜನೆ’ಗೆ 2022ರ ಜನವರಿ 26 ರಂದು ಚಾಲನೆ ನೀಡಲಾಗುವುದು.
ಅರ್ಕಾವತಿ ನದಿ ಪುನಶ್ಚೇತನಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ. ನದಿ ಶುದ್ಧೀಕರಣಕ್ಕೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 20.50 ಕೋಟಿ ರೂ.ಗಳ ಸಮಗ್ರ ಯೋಜನೆ ಸಿದ್ಧಪಡಿಸಿದೆ.
ಚುಟುಕು ಸಮಾಚಾರ
ಚುಟುಕು ಸಮಾಚಾರ
ಸಾಮಾನ್ಯವಾಗಿ ಹಬಲ್ ಸ್ಪೇಸ್ ಟೆಲಿಸ್ಕೋಪ್ ಎಂದು ಕರೆಯಲ್ಪಡುವ ಈ ವಿಸ್ಮಯ ತಂತ್ರಜ್ಞಾನ, ಅನಂತ ವಿಶ್ವದ ಅನೇಕ ರಹಸ್ಯಗಳನ್ನು ಬಯಲು ಮಾಡಿದ ಖ್ಯಾತಿ ಹೊಂದಿದೆ. ಹಬಲ್ ಟೆಲಿಸ್ಕೋಪ್ ಮಾನವನ ಬಾಹ್ಯಾಕಾಶ ಜ್ಞಾನದ ಹಸಿವನ್ನು ನೀಗಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಿದೆ.
ಮುಂದಿನ ವರ್ಷದ ವೇಳೆಗೆ ಪೂರ್ಣಗೊಳ್ಳಲಿರುವ ನಿರ್ಮಾಣ ಹಂತದಲ್ಲಿರುವ ತನ್ನ ಬಾಹ್ಯಾಕಾಶ ನಿಲ್ದಾಣಕ್ಕೆ ಸಾಮಗ್ರಿ ಸರಬರಾಜು ಮಾಡಲು ಚೀನಾ ಮಾನವ ರಹಿತ ಸರಕು ಹೊತ್ತ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಲಸಿಕೆ ಮೈತ್ರಿ’ ಕಾರ್ಯಕ್ರಮದ ಅಡಿಯಲ್ಲಿ ಭಾರತವು ಮುಂದಿನ ತಿಂಗಳು ಹೆಚ್ಚುವರಿ ಕೋವಿಡ್ ಲಸಿಕೆಗಳ ರಫ್ತನ್ನು ಪುನರಾರಂಭಿಸಲಿದೆ.ಇದು ನಮ್ಮ ‘ವಸುಧೈವ ಕುಟುಂಬಕಂ’ ಎಂಬ ಧ್ಯೇಯ ವಾಕ್ಯಕ್ಕೆ ಅನುಗುಣವಾಗಿದೆ
ಉಡುಪಿ ಜಿಲ್ಲೆ, ಕುಂದಾಪುರ ತಾಲ್ಲೂಕಿನ ಬಸ್ರೂರಿನಲ್ಲಿ ಶಿಲಾಯುಗ ಕಾಲದ ಬೃಹತ್ ನಿಲ್ಸಕಲ್ ಪತ್ತೆಯಾಗಿದೆ.ಗರ್ಭಿಣಿ ಸ್ತ್ರೀಯ ದೇಹದ ಬಾಗು-ಬಳುಕುಗಳಂತೆ ಈ ನಿಲ್ಸಕಲ್ ವಿನ್ಯಾಸಗೊಂಡಿದೆ. ಕರಾವಳಿಯ ನಿಲ್ಸಕಲ್‌ಗಳನ್ನು ಗರ್ಭಿಣಿ ಕಲ್ಲುಗಳೆಂದೇ ಕರೆಯಲಾಗಿದೆ.
ಚುಟುಕು ಸಮಾಚಾರ
ಚೀನಾ ಮತ್ತು ಇತರ ಸರ್ಕಾರಗಳ ಒತ್ತಡಕ್ಕೆ ಮಣಿದ ಆರೋಪಕ್ಕೆ ಗುರಿಯಾಗಿರುವ ವಿಶ್ವಬ್ಯಾಂಕ್ ತನ್ನ ಜನಪ್ರಿಯ ಆರ್ಥಿಕ ದೇಶಗಳ ಶ್ರೇಯಾಂಕ ವರದಿಯನ್ನು ಕೈಬಿಟ್ಟಿದೆ.
ಈ ಶತಮಾನದ ಅಂತ್ಯದ ವೇಳೆಗೆ ಭೂಮಿಯ ಮೇಲಿನ ಜಾಗತಿಕ ತಾಪಮಾನ ಅತ್ಯಂತ ಅಪಾಯಕಾರಿ ಮಟ್ಟ ತಲುಪಲಿದೆ’ ಎಂದು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಮೇಲಿನ ಫ್ರೇಮ್‌ವರ್ಕ್ ಕನ್ವೆನ್ಷನ್ ವರದಿ (UNFCCC) ಎಚ್ಚರಿಕೆ ನೀಡಿದೆ.
ಸ್ಥಳೀಯವಾಗಿ ‘ಕಾಟ್ಲೆ’ ಎಂದು ಕರೆಯಲಾಗುವ ‘ಕೂಪರ್ ಮಹಸೀರ್’ ಅನ್ನು ಸಿಕ್ಕಿಂ ಸರ್ಕಾರವು ರಾಜ್ಯ ಮೀನು ಎಂದು ಘೋಷಿಸಿದೆ.
ಲಿಂಗ ತಾರತಮ್ಯ ನಿವಾರಣೆಗಾಗಿ ಲಿಂಗಾಧಾರಿತ ಬಜೆಟ್ ಪರಿಕಲ್ಪನೆಯ ಅಡಿಯಲ್ಲಿ ಕೆಲವು ವರ್ಷಗಳಿಂದ ಈಚೆಗೆ ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನ ಘೋಷಿಸಿದ್ದರೂ, ವಾಸ್ತವಿಕ ವೆಚ್ಚದಲ್ಲಿ ಕುಸಿತವಾಗಿದೆ. ಲಿಂಗಾಧಾರಿತ ಬಜೆಟ್ ಘೋಷಣೆಗೆ ಸೀಮಿತವಾಗಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.
ಚುಟುಕು ಸಮಾಚಾರ
ಚುಟುಕು ಸಮಾಚಾರ
2023ರಲ್ಲಿ ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನತ್ತ ನಾಸಾ ಮತ್ತೆ ಮಾನವಸಹಿತ ಬಾಹ್ಯಾಕಾಶ ನೌಕೆಯನ್ನು ಕಳುಹಿಸಲಿದೆ. ಈ ಬಾರಿ ಓರ್ವ ಮಹಿಳಾ ಗಗನಯಾತ್ರಿಯನ್ನೂ ಚಂದ್ರನ ನೆಲಕ್ಕೆ ಕಳುಹಿಸುವ ಯೋಜನೆ ರೂಪಿಸಲಾಗಿದೆ. ಆರ್ಟೆಮಿಸ್ ಹೆಸರಿನ ಈ ಯೋಜನೆ ಅಂತಾರಾಷ್ಟ್ರೀಯ ಸಹಕಾರದ ಮೊಟ್ಟ ಮೊದಲ ಬಾಹ್ಯಾಕಾಶ ಯೋಜನೆಯಾಗಲಿದೆ.
ಇಂಡೊ– ಪೆಸಿಫಿಕ್ ಪ್ರದೇಶದಲ್ಲಿ ಚೀನಾವನ್ನು ಎದುರಿಸಲು ಆಸ್ಟ್ರೇಲಿಯಾ, ಬ್ರಿಟನ್‌ನೊಂದಿಗೆ ಅಮೆರಿಕವು (ಆಕಸ್) ಹೊಸ ತ್ರಿಪಕ್ಷೀಯ ಭದ್ರತಾ ಮೈತ್ರಿಕೂಟವನ್ನು ಘೋಷಿಸಿದೆ.
ಅಸ್ಸಾಂ ರಾಜ್ಯದ ಸಂಗ್ರಹಾಗಾರಗಳಲ್ಲಿರುವ, ಘೇಂಡಾಮೃಗಗಳ 2,479 ಕೊಂಬುಗಳನ್ನು ಸುಡಬೇಕು ಎಂಬ ಪ್ರಸ್ತಾವನೆಗೆ ಅಸ್ಸಾಂ ಸಚಿವ ಸಂಪುಟ ಅನುಮೋದನೆ ನೀಡಿದೆ.ಘೇಂಡಾಮೃಗದ ಕೊಂಬಿನಲ್ಲಿ ಔಷಧೀಯ ಗುಣಗಳಿವೆ ಎಂಬ ನಂಬಿಕೆ ಇದೆ. ಕೊಂಬುಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಹ ಭಾರಿ ಬೇಡಿಕೆ. ಈ ಕಾರಣಕ್ಕೆ ಈ ಪ್ರಾಣಿಗಳ ಕಳ್ಳಬೇಟೆ ಅಸ್ಸಾಂನಲ್ಲಿ ಅಧಿಕ. ಘೇಂಡಾಮೃಗಗಳ ಹತ್ಯೆ ಮತ್ತು ಕೊಂಬುಗಳ ಕಳ್ಳಸಾಗಣೆಗೆ ಕಡಿವಾಣ ಹಾಕುವ ಸಲುವಾಗಿ ಸರ್ಕಾರದ ಸಂಗ್ರಹದಲ್ಲಿರುವ ಕೊಂಬುಗಳನ್ನು ಸುಡಲು ನಿರ್ಧರಿಸಲಾಗಿದೆ.
ಭಾರತದ ಅತಿ ದೊಡ್ಡ ಸಾಫ್ಟ್‌ವೇರ್ ರಫ್ತುದಾರ ಕಂಪನಿಯಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಇದೀಗ 200 ಬಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳ ಮೌಲ್ಯದ ಮೈಲುಗಲ್ಲು ದಾಖಲಿಸಿದ ಭಾರತದ ಮೊಟ್ಟ ಮೊದಲ ಕಂಪನಿಯಾಗಿ ಹೊರಹೊಮ್ಮಿದೆ.
ಬ್ಯಾಂಕ್‌ಗಳಲ್ಲಿನ ವಸೂಲಾಗದ ಸಾಲವನ್ನು ತಾನು ವಹಿಸಿಕೊಳ್ಳುವ ‘ಬ್ಯಾಡ್ ಬ್ಯಾಂಕ್’ ಅಥವಾ ‘ರಾಷ್ಟ್ರೀಯ ಆಸ್ತಿ ಪುನರ್‌ರಚನಾ ಕಂಪನಿ ಲಿಮಿಟೆಡ್’ (ಎನ್‌ಎಆರ್‌ಸಿಎಲ್) ಸ್ಥಾಪನೆಗೆ ಕೇಂದ್ರ ಸರ್ಕಾರವು ಹಸಿರು ನಿಶಾನೆ ತೋರಿದೆ.
ಸೆಪ್ಟೆಂಬರ್ 17 ರಂದು ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತದೆ. ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಅವಧಿಯಲ್ಲಿ ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಲಾಗಿದೆ. ಅಲ್ಲದೇ ಸೆಪ್ಟೆಂಬರ್ 17 ರಂದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.
ಚುಟುಕು ಸಮಾಚಾರ
ಒಡಿಶಾದ ಸಿಮಿಲಿಪಾಲ್‌ನಲ್ಲಿ ಕಾಣಿಸಿಕೊಂಡಿದ್ದ ‘ಕಪ್ಪು ಹುಲಿ’ಯ ಹಿಂದಿನ ರಹಸ್ಯವನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.
ಟೆಲಿಕಾಂ ಸುಧಾರಣೆಗಳಿಗೆ ಕೇಂದ್ರ ಸಚಿವ ಸಂಪುಟ ಸೆ.15 ರಂದು ಅನುಮೋದನೆ ನೀಡಿದ್ದು, ಪರಿಹಾರ ಪ್ಯಾಕೇಜ್ ಗಳನ್ನೂ ಈ ಕ್ಷೇತ್ರಕ್ಕೆ ಘೋಷಣೆ ಮಾಡಲಾಗಿದೆ.
ಮುಂಬೈನಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಎಚ್ಚೆತ್ತುಕೊಂಡ ಮುಂಬೈ ಪೊಲೀಸರು ಮಹಿಳೆಯರ ರಕ್ಷಣೆಗಾಗಿ ನಿರ್ಭಯಾ ದಳ ರಚಿಸಿದ್ದಾರೆ.
ದೈನಂದಿನ ಸಾಮಾನ್ಯ ಮಾಹಿತಿಗಳ ಬಗ್ಗೆಯೇ ದೇಶೀಯ ಭಾಷೆಗಳಲ್ಲಿ ಅನುವಾದಗಳು ಸಮರ್ಪಕವಾಗಿರದೇ ಇರುವ ಸಮಸ್ಯೆಗಳಿವೆ. ಇದಕ್ಕೆ ಪರಿಹಾರವೆಂಬಂತೆ ವಿದ್ಯಾರ್ಥಿಗಳಿಗೆ ಆಯಾ ಭಾಷೆಗಳಲ್ಲಿ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗುವಂತೆ ‘ಉಡಾನ್’ ಎಂಬ ಯೋಜನೆಯೊಂದಕ್ಕೆ ಭಾರತೀಯ ತಂತ್ರಜ್ಞಾನ ಸಂಸ್ಥೆ- ಬಾಂಬೆ (ಐಐಟಿ) ಚಾಲನೆ ನೀಡಿದೆ.
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿನ ವಾಹನಗಳಿಗೆ ಹಂತ ಹಂತವಾಗಿ ಸಾಂದ್ರೀಕೃತ ನೈಸರ್ಗಿಕ ಅನಿಲ(ಸಿಎನ್ ಜಿ) ಬಳಕೆ ಮಾಡಲು ಉತ್ತೇಜಿಸಲು ಗೇಲ್ ಗ್ಯಾಸ್ ಲಿಮಿಟೆಡ್ ಸಂಸ್ಥೆ ಹೊಸ ಯೋಜನೆ ಪ್ರಾರಂಭಿಸಿದೆ.
ಚುಟುಕು ಸಮಾಚಾರ
ಭಾರತದಲ್ಲಿ ಸೆಪ್ಟೆಂಬರ್ 15 ರಂದು ಇಂಜಿನಿಯರ್‌ಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನದಂದು ಇಂಜಿನಿಯರ್‌ಗಳ ದಿನವನ್ನು ಆಚರಿಸಲಾಗುತ್ತದೆ. ಕರುನಾಡಿನ ಹೆಮ್ಮೆಯ ಪುತ್ರ, ಭಾರತ ರತ್ನ ವಿಶ್ವೇಶ್ವರಯ್ಯನವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ದಿನವನ್ನು ಇಂಜಿನಿಯರ್‌ಗಳ ದಿನವನ್ನಾಗಿ ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿದೆ.
ಅಮೆರಿಕದ ಗ್ರೀನ್ ಪೀಸ್ ಸ್ವಯಂ ಸೇವಾ ಸಂಸ್ಥೆ ಸಿದ್ಧಪಡಿಸಿರುವ ‘ದಿ ಕ್ಲೈಮೇಟ್ ಎಮರ್ಜೆನ್ಸಿ ಅನ್‌ಪ್ಯಾಕ್ಡ್: ಹೌ ಕನ್ಸ್ಯೂಮರ್ ಗೂಡ್ಸ್ ಕಂಪನೀಸ್ ಆರ್ ಫ್ಯೂಯೆಲಿಂಗ್ ಬಿಗ್ ಆಯಿಲ್ಸ್ ಪ್ಲಾಸ್ಟಿಕ್ ಎಕ್ಸ್‌ಪ್ಯಾನ್ಷನ್‘ ಎಂಬ ಶೀರ್ಷಿಕೆಯ ವರದಿಯನ್ನು ಬಿಡುಗಡೆ ಮಾಡಲಾಗಿದೆ.
ಅಮೆರಿಕ ಮತ್ತು ಭಾರತ ನಡುವೆ ಶುದ್ಧ ಇಂಧನ ಮತ್ತು ಹವಾಮಾನ ಬದಲಾವಣೆ ಕ್ಷೇತ್ರದಲ್ಲಿ ಸಹಕಾರವನ್ನು ವೃದ್ದಿಗೊಳಿಸುವ ಮಸೂದೆಯೊಂದನ್ನು ಅಮೆರಿಕ ಸಂಸದ ರಾಬರ್ಟ್ ಮೆಂಡೇಜ್ ಅವರು ಸೆನೆಟ್‌ನಲ್ಲಿ ಮಂಡಿಸಿದ್ದಾರೆ.
ಧ್ವನಿ ಆಧಾರಿತ ಹಣಕಾಸು ವಹಿವಾಟು ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ. ಧ್ವನಿ ಆಧಾರಿತ ಪಾವತಿಗಳನ್ನು ನಡೆಸಲು ಬೆಂಗಳೂರು ಮೂಲದ ಟೋನ್‌ಟ್ಯಾಗ್ ಕಂಪನಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಒಪ್ಪಿಗೆ ನೀಡಿದೆ.
ದೇಶದಲ್ಲಿನ ವಿವಿಧ ರಾಜ್ಯಗಳ ಗುಪ್ತಚರ ಇಲಾಖೆಗಳನ್ನು ಒಂದೇ ರಾಷ್ಟ್ರೀಯ ಜಾಲದ ಅಡಿಯಲ್ಲಿ ತಂದು, ಆಧುನಿಕ ತಂತ್ರಜ್ಞಾನ ಆಧರಿಸಿ ಕ್ಷಣ ಮಾತ್ರದಲ್ಲಿ ದಾಳಿ, ಉಗ್ರರ ಚಟುವಟಿಕೆಗಳ ಮಾಹಿತಿ ರವಾನಿಸಲು ಅನುಕೂಲವಾಗುವಂತಹ ‘ನ್ಯಾಟ್ ಗ್ರಿಡ್’ (ನ್ಯಾಷನಲ್ ಇಂಟೆಲಿಜೆನ್ಸ್ ಗ್ರಿಡ್) ಶೀಘ್ರದಲ್ಲಿಯೇ ದೇಶದಲ್ಲಿ ಅಸ್ವಿತ್ವಕ್ಕೆ ಬರಲಿದೆ.
ಚುಟುಕು ಸಮಾಚಾರ
ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಸಂಸ್ಥೆ, ಇದೇ ಮೊದಲ ಬಾರಿಗೆ ವೃತ್ತಿಪರ ಗಗನಯಾತ್ರಿಗಳಲ್ಲದ ನಾಲ್ವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ. ಇನ್ಸ್ಪಿರೇಷನ್ 4 ಎಂಬ ಹೆಸರಿನ ಈ ಯೋಜನೆಯಲ್ಲಿ ನಾಲ್ವರು ಭಿನ್ನ ಭಿನ್ನ ಕ್ಷೇತ್ರಗಳಿಂದ ಬಂದಿರುವ ಜನ ಬಾಹ್ಯಾಕಾಶ ಸೇರಲಿದ್ದಾರೆ.
ವರ್ಲ್ಡ್ ಗೋಲ್ಡ್ ಕೌನ್ಸಿಲ್ (ಡಬ್ಲ್ಯೂಜಿಸಿ) ಅಂಕಿ ಅಂಶಗಳ ಪ್ರಕಾರ ಜಗತ್ತಿನ ಚಿನ್ನದ ಗಣಿಗಳಿಂದ ಈ ತನಕ 1,97,576 ಟನ್ ಚಿನ್ನದ ನಿಕ್ಷೇಪ ಹೊರ ತೆಗೆದಿದ್ದು, ಭಾರತದಲ್ಲಿ 21,733 ಟನ್ ಚಿನ್ನವಿದೆ, ಇದು ಜಗತ್ತಿನ ಶೇ.11 ಪಾಲಾಗಿದೆ. ಹೆಣ್ಮಕ್ಕಳು ಮಾತ್ರವಲ್ಲ ಕೆಲ ಗಂಡಸರಲ್ಲೂ ಇರುವ ಚಿನ್ನದ ವ್ಯಾಮೋಹದಿಂದ ಭಾರತ ಜಗತ್ತಿನಲ್ಲೇ ಅತಿ ಹೆಚ್ಚು ಚಿನ್ನ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಮಣಿಪುರ ಮತ್ತು ನಾಗಾಲ್ಯಾಂಡ್‌ನಲ್ಲಿ ಕೊರೋನಾ ಲಸಿಕೆಗಳನ್ನು ವಿಸ್ತರಿಸಲು ಡ್ರೋನ್‌ಗಳನ್ನು ಬಳಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಗೆ ಷರತ್ತುಬದ್ಧ ಅನುಮತಿಯನ್ನು ನೀಡಲಾಗಿದೆ
ಸೆಪ್ಟೆಂಬರ್ 14ರಂದು ದೇಶಾದ್ಯಂತ ಹಿಂದಿ ದಿವಸ್ ಆಚರಣೆ ಮಾಡಲಾಗುತ್ತ