Published on: June 6, 2022

ಪಿಎಂ ಶ್ರೀ ಶಾಲೆಗಳ ಸ್ಥಾಪನೆ

ಪಿಎಂ ಶ್ರೀ ಶಾಲೆಗಳ ಸ್ಥಾಪನೆ

ಸುದ್ಧಿಯಲ್ಲಿ ಏಕಿದೆ?

ಭವಿಷ್ಯದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಗುರಿಯನ್ನಿಟ್ಟುಕೊಂಡು’ ಪಿಎಂ ಶ್ರೀ ಶಾಲೆಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಮುಖ್ಯಾಂಶಗಳು

  • ರಾಜ್ಯಗಳ ಶಿಕ್ಷಣ ಸಚಿವರು ಹಾಜರಾಗಿದ್ದ ಈ ಸಮ್ಮೇಳನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಟಾನವನ್ನು ವಿರೋಧಿಸಿ ತಮಿಳುನಾಡು ಭಾಗವಹಿಸದೆ ಬಹಿಷ್ಕರಿಸಿದೆ.
  • 21ನೇ ಶತಮಾನದ ಜ್ಞಾನ ಮತ್ತು ಕೌಶಲ್ಯದಿಂದ ಹೊಸ ಪೀಳಿಗೆ ವಂಚಿತವಾಗಬಾರದು ಎಂದು ಹೇಳಿದ ಸಚಿವರು, ಪಿಎಂ ಶ್ರೀ ಶಾಲೆಗಳ ಮಾದರಿಗಾಗಿ ನೀತಿ ರೂಪಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪ್ರೋತ್ಸಾಹ ಮತ್ತು ಸಲಹೆಗಳನ್ನು ಪಡೆಯಲು ಇಚ್ಚಿಸುವುದಾಗಿ ತಿಳಿಸಿದರು.
  • ಭಾರತವನ್ನು ಜ್ಞಾನಧಾರಿತ ಆರ್ಥಿಕತೆ ರಾಷ್ಟ್ರವನ್ನಾಗಿಸುವಲ್ಲಿ ಮುಂದಿನ 25 ವರ್ಷ ಮಹತ್ವದ್ದಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ. ಪರಸ್ಪರ ಅನುಭವಗಳನ್ನು ಯಶಸ್ಸು ಹಂಚಿಕೊಳ್ಳುವ ಮೂಲಕ ಭಾರತವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕಾಗಿದೆ.
  • ಕರ್ನಾಟಕ, ಒಡಿಶಾ, ದೆಹಲಿ, ಮೇಘಾಲಯ, ಬಿಹಾರ್, ಉತ್ತರ ಪ್ರದೇಶ, ಗುಜರಾತ್ ಮತ್ತು ಹರಿಯಾಣದ ಶಿಕ್ಷಣ ಮಾದರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.