Published on: June 6, 2022
ಸೇವಾ ಶುಲ್ಕ
ಸೇವಾ ಶುಲ್ಕ
ಸುದ್ಧಿಯಲ್ಲಿ ಏಕಿದೆ?
ರೆಸ್ಟೊರೆಂಟ್ಗಳು ಗ್ರಾಹಕರಿಗೆ ‘ಸೇವಾ ಶುಲ್ಕ’ ವಿಧಿಸುವಂತಿಲ್ಲ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಅವರು ಹೇಳಿದ್ದಾರೆ. ಆದರೆ ಗ್ರಾಹಕರು ಸ್ವ ಇಚ್ಛೆಯಿಂದ ಪ್ರತ್ಯೇಕವಾಗಿ “ಟಿಪ್ಸ್” ನೀಡಬಹುದು.
ಏಕೆ ಈ ತೀರ್ಮಾನ ?
- ಹೋಟೆಲ್ ಗಳು ಗ್ರಾಹಕರ ಮೇಲೆ ವಿಧಿಸುವ ಸೇವಾ ಶುಲ್ಕಗಳಿಗೆ ಯಾವುದೇ ಕಾನೂನು ಮಾನ್ಯತೆಯಿಲ್ಲ. ಹೀಗಾಗಿ ಗ್ರಾಹಕರ ಹಿತಾಸಕ್ತಿಯ ರಕ್ಷಣೆಗಾಗಿ ಸರ್ಕಾರ ಈ ಸಂಬಂಧ ಕಾನೂನು ರೂಪಿಸಲಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
- ಗ್ರಾಹಕರು ಸೇವಾ ಶುಲ್ಕವನ್ನು(Service Charge) ಸೇವಾ ತೆರಿಗೆ (Service tax) ಎಂದೇ ಭಾವಿಸಿ ಅನಿವಾರ್ಯ ಎಂಬ ಕಾರಣಕ್ಕೆ ಪಾವತಿಸುತ್ತಿದ್ದಾರೆ ಅಲ್ಲದೆ, ಈ ಸೇವಾ ಶುಲ್ಕದಲ್ಲಿ ಏಕರೂಪತೆ ಇಲ್ಲ, ಒಂದೊಂದು ಹೋಟೆಲ್ ಒಂದೊಂದು ಸೇವಾ ಶುಲ್ಕ ವಿಧಿಸುತ್ತಿವೆ