Published on: June 8, 2022
ಕ್ರೆಡಿಟ್ ಕಾರ್ಡುಗಳ ಜೊತೆ ಯುಪಿಐ ಜೋಡಣೆ
ಕ್ರೆಡಿಟ್ ಕಾರ್ಡುಗಳ ಜೊತೆ ಯುಪಿಐ ಜೋಡಣೆ
ಸುದ್ಧಿಯಲ್ಲಿಏಕಿದೆ?
UPI (ಯುನೈಟೆಡ್ ಪೇಮೆಂಟ್ಸ್ ಇಂಟರ್‌ಫೇಸ್) ಪ್ಲಾಟ್‌ಫಾರ್ಮ್ ಮತ್ತು ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಉದ್ದೇಶದಿಂದ, ಭಾರತೀಯ ರಿಸರ್ವ್ ಬ್ಯಾಂಕ್ (RBI) UPI ಅಡಿಯನಲ್ಲಿ ಕ್ರೆಡಿಟ್ ಕಾರ್ಡ್ ಗಳ ಜೋಡಣೆಗೆ ಅನುವು ಮಾಡಿಕೊಡಲು ಪ್ರಸ್ತಾವನೆ ಸಲ್ಲಿಸಿದೆ.
ಮುಖ್ಯಾಂಶಗಳು
- ಈ ಸೌಲಭ್ಯ ರುಪೇ ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಪ್ರಾರಂಭವಾಗುತ್ತದೆ, ಅವುಗಳನ್ನು ಯುಪಿಐಗೆ ಲಿಂಕ್ ಮಾಡಲಾಗುತ್ತದೆ. ಇದು ಬಳಕೆದಾರರಿಗೆ ಹೆಚ್ಚುವರಿ ಅನುಕೂಲವನ್ನು ಒದಗಿಸುತ್ತದೆ ಮತ್ತು ಡಿಜಿಟಲ್ ಪಾವತಿಗಳ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ.
- ಯುಪಿಐ ಅಡಿಯಲ್ಲಿ 26 ಕೋಟಿಗೂ ಹೆಚ್ಚು ಬಳಕೆದಾರರು ಮತ್ತು 5 ಕೋಟಿ ವ್ಯಾಪಾರಿಗಳಿದ್ದು, ದೇಶದಲ್ಲಿ ಅತ್ಯಂತ ಅಂತರ್ಗತ ಪಾವತಿ ವಿಧಾನವಾಗಿದೆ. ಕಳೆದ ಮೇ ತಿಂಗಳಲ್ಲಿ ಯುಪಿಐ ಮೂಲಕ ಸುಮಾರು 594 ಕೋಟಿ ವಹಿವಾಟು ನಡೆಸಿದ್ದು, 10.4 ಲಕ್ಷ ಕೋಟಿ ಯುಪಿಐ ಮೂಲಕ ಪರಿಷ್ಕರಣೆಯಾಗಿದೆ.
- ಪ್ರಸ್ತುತ, UPI ಬಳಕೆದಾರರು ಡೆಬಿಟ್ ಕಾರ್ಡ್‌ಗಳ ಮೂಲಕ ಉಳಿತಾಯ ಅಥವಾ ಚಾಲ್ತಿ ಖಾತೆಗಳನ್ನು ಲಿಂಕ್ ಮಾಡುವ ಮೂಲಕ ವಹಿವಾಟುಗಳನ್ನು ಸುಗಮಗೊಳಿಸುತ್ತದೆ. ಈ ಹೊಸ ಪ್ರಸ್ತಾವನೆಯೊಂದಿಗೆ, ಬಳಕೆದಾರರು ತಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು UPI ಯೊಂದಿಗೆ ಲಿಂಕ್ ಮಾಡಬಹುದು.
- ಈಗ ನಡೆಯುತ್ತಿರುವ ಐದು ವಹಿವಾಟುಗಳಲ್ಲಿ ಎರಡು ನಗದುರಹಿತವಾಗಿವೆ. ಡಿಜಿಟಲ್ ಪಾವತಿ ಕಂಪನಿ ಫೋನ್‌ಪೇ ಮತ್ತು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ನ ಇತ್ತೀಚಿನ ವರದಿಯು 2026 ರ ವೇಳೆಗೆ ಮೂರನೇ ಎರಡರಷ್ಟು ಪಾವತಿ ವಹಿವಾಟುಗಳು ಡಿಜಿಟಲ್ ಆಗಲಿವೆ ಎಂದು ಹೇಳಿದೆ.
ಉದ್ದೇಶ
UPI (ಯುನೈಟೆಡ್ ಪೇಮೆಂಟ್ಸ್ ಇಂಟರ್‌ಫೇಸ್) ಪ್ಲಾಟ್‌ಫಾರ್ಮ್ ಮತ್ತು ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುತ್ತವೆ.