Published on: August 23, 2022
ಆಲಿವ್ ರಿಡ್ಲೆ ಆಮೆಗಳು
ಆಲಿವ್ ರಿಡ್ಲೆ ಆಮೆಗಳು
ಸುದ್ದಿಯಲ್ಲಿ ಏಕಿದೆ?
ದೇವಬಾಗ್ ಬಳಿಯ ದಂಡೇಬಾಗ್ನಲ್ಲಿ ದಡಕ್ಕೆ ತೇಲಿಬಂದ ಆಳಸಮುದ್ರ ಮೀನುಗಾರಿಕೆಯ ಬಲೆಯಲ್ಲಿ ಎರಡು ಆಲಿವ್ ರಿಡ್ಲೆ ಆಮೆಗಳು ಸಿಲುಕಿದ್ದವು.
ಆಲಿವ್ ರಿಡ್ಲೆ ಆಮೆಗಳು
- ಆಲಿವ್ ರಿಡ್ಲಿ ಸಮುದ್ರ ಆಮೆ (ಲೆಪಿಡೋಚೆಲಿಸ್ ಒಲಿವೇಸಿಯಾ), ಇದನ್ನು ಸಾಮಾನ್ಯವಾಗಿ ಪೆಸಿಫಿಕ್ ರಿಡ್ಲಿ ಸಮುದ್ರ ಆಮೆ ಎಂದೂ ಕರೆಯಲಾಗುತ್ತದೆ, ಇದು ಚೆಲೋನಿಡೆ ಜಾತಿಯ ಕುಟುಂಬಕ್ಕೆ ಸೇರಿದೆ.
- ಆಲಿವ್ ರಿಡ್ಲಿ ಆಮೆಗಳು ಅಟ್ಲಾಂಟಿಕ್, ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದಲ್ಲಿ ಉಷ್ಣವಲಯದ ಪ್ರದೇಶಗಳಲ್ಲಿ ಮತ್ತು ಅಟ್ಲಾಂಟಿಕ್ ಮಹಾಸಾಗರದಲ್ಲಿ, ಅವು ಪಶ್ಚಿಮ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದ ಕರಾವಳಿಯಲ್ಲಿ ಕಂಡುಬರುತ್ತವೆ.
- ಕರ್ನಾಟಕದ ಕಡಲತೀರ ಪ್ರದೇಶದಲ್ಲಿ ಮೂರು ಪ್ರಬೇಧದ ಆಮೆಗಳನ್ನ ನಾವು ಕಾಣಬಹುದು. ಗ್ರೀನ ಟರ್ಟಲ್, ಹಾಕ್ ಬಿಲ್ಡ್, ಆಲಿವ್ ರಿಡ್ಲೆ ಹೀಗೆ ಮೂರು ಪ್ರಬೇಧಗಳಿವೆ.
- ಅದರಲ್ಲಿ ಆಲಿವ್ ರಿಡ್ಲೆ ಆಮೆ ಉತ್ತರ ಕನ್ನಡ ಜಿಲ್ಲೆಯ ಕಡಲತೀರವನ್ನ ತನ್ನ ಸಂತಾನೋತ್ಪತ್ತಿ ತಾಣವನ್ನಾಗಿ ಆಯ್ಕೆ ಮಾಡಿಕೊಂಡಿದೆ. ಪ್ರಮುಖವಾಗಿ ಈ ಆಮೆಗಳು ಜನವರಿ ತಿಂಗಳಿನಿಂದ ಮಾರ್ಚ್ವರಗೆ ಸಂತಾನೋತ್ಪತ್ತಿ ಮಾಡುತ್ತವೆ. ಪ್ರಶಾಂತವಾದ ಕಡಲತೀರ ಪ್ರದೇಶದಲ್ಲಿ ಹುಣ್ಣಿಮೆ ಬೆಳಕಿನಲ್ಲಿ ಬಂದು ಮರಳಿನಲ್ಲಿ ಗೂಡು ಕಟ್ಟಿ ಮೊಟ್ಟೆಯಿಟ್ಟು, ಮರಳಿ ಆ ಗೂಡನ್ನು ಮುಚ್ಚಿ ಯಾರಿಗೂ ಗೊತ್ತಾಗದಂತೆ ತಾನು ಬಂದ ದಾರಿಯನ್ನ ಅಳಿಸುತ್ತಾ ಮರಳಿ ಸಮುದ್ರಕ್ಕೆ ಸೇರಿಕೊಳ್ಳುತ್ತವೆ.
- ಒಂದು ಬಾರಿ ಈ ಆಮೆ ಮೊಟ್ಟೆ ಇಟ್ಟರೆ ಸುಮಾರು 100 ಕ್ಕೂ ಹೆಚ್ಚು ಇಡುತ್ತವೆ. ಆದರು ಇತ್ತಿಚಿನ ದಿನಗಳಲ್ಲಿ ಈ ಆಮೆಗಳ ಸಂಖ್ಯೆ ತೀರಾ ಕಡಿಮೆ ಆಗುತ್ತಿದ್ದು, ಆಳಿವಿನ ಅಂಚಿಗೆ ಬಂದಿವೆ. ಹೀಗಾಗಿ ಸರ್ಕಾರ ಇವುಗಳನ್ನ ಸಂರಕ್ಷಣೆ ಮಾಡುವ ಯೋಜನೆಗೆ ಮುಂದಾಗಿದೆ.
- ಈ ಆಮೆಗಳ ಪ್ರಾಮುಖ್ಯತೆ ಎನೆಂದರೆ, ಸಮುದ್ರದ ಆಹಾರ ಸರಪಳಿಯನ್ನ ಭದ್ರತೆಗೊಳಿಸುತ್ತವೆ. ಅನುಪಯುಕ್ತವಾದ ಜೆಲ್ಲಿ ಮೀನುಗಳನ್ನ ಇದು ಭಕ್ಷಿಸುವುದರಿಂದ ಮೀನುಗಾರಿಗೆ, ಮೀನಿನ ಸಂತತಿಯಲ್ಲಿ ಬಹಳ ಉಪಯುಕ್ತವಾದ ಪಾತ್ರ ವಹಿಸುತ್ತವೆ.
-
ವಿಪರ್ಯಾಸವೆಂದರೆ 100 ಆಮೆಗಳಲ್ಲಿ ಕೇವಲ ಒಂದು ಅಥವಾ ಎರಡು ಆಮೆಗಳು ಮಾತ್ರ ಯೌವ್ವನದ ಸ್ಥತಿ ತಲುಪುತ್ತವೆ ಎಂಬ ಉಲ್ಲೆಖಗಳಿವೆ. ಹೀಗಾಗಿ ಇದರ ಸಂತತಿ ಕಡಿಮೆ ಇದೆ. ಮುಖ್ಯವಾಗಿ ಜನರಲ್ಲಿ ಕೂಡ ಇದರ ಬಗ್ಗೆ ಅರಿವು ಅವಶ್ಯಕವಾಗಿ ಬೇಕಿದೆ. ಯಾಕೆಂದರೆ ಈ ಆಮೆಗಳ ಮೊಟ್ಟೆ, ಹೆಚ್ಚು ಪ್ರೋಟೀನ್ ಯುಕ್ತವಾಗಿದ್ದರಿಂದ ಇವುಗಳನ್ನ ತಿನ್ನುತ್ತಾರೆ. ಇದನ್ನ ತಪ್ಪಿಸಬೇಕು.