Published on: September 3, 2022

ಉದ್ಯೋಗಸ್ಥ ಮಹಿಳೆಗೆ ‘ಪ್ರಾಜೆಕ್ಟ್ ರಶ್ಮಿ’

ಉದ್ಯೋಗಸ್ಥ ಮಹಿಳೆಗೆ ‘ಪ್ರಾಜೆಕ್ಟ್ ರಶ್ಮಿ’

ಸುದ್ದಿಯಲ್ಲಿ ಏಕಿದೆ?

‘ಉದ್ಯೋಗಸ್ಥ ಮಹಿಳೆಯರಿಗೆ ಉದ್ಯೋಗ ಸ್ಥಳದಲ್ಲಿ ಸೌಕರ್ಯ ಕಲ್ಪಿಸಿರುವ ‘ಪ್ರಾಜೆಕ್ಟ್‌ ರಶ್ಮಿ’ಯನ್ನು ಮೂರು ಕಡೆ ಅಂದರೆ, ಪೊಲೀಸ್‌ ಆಯುಕ್ತರ ಕಚೇರಿ, ಲೋಕೋಪಯೋಗಿ ಇಲಾಖೆ ಕಟ್ಟಡ ಹಾಗೂ ಹೈಕೋರ್ಟ್‌ ಆವರಣದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಮುಖ್ಯಾಂಶಗಳು

  • ಮಹಿಳೆಯರಿಗೆ ಅವರು ಉದ್ಯೋಗ ಮಾಡುವ ಸ್ಥಳದಲ್ಲಿ ಹೈಟೆಕ್‌ ವ್ಯವಸ್ಥೆಯನ್ನು ‘ಪ್ರಾಜೆಕ್ಟ್‌ ರಶ್ಮಿ’ ಒದಗಿಸುತ್ತಿದೆ.
  • ಇಲ್ಲಿ ಶೌಚಾಲಯ, ಮಗುವಿಗೆ ಹಾಲುಣಿಸುವ ಕೊಠಡಿ, ವಿಶ್ರಾಂತಿ ಕೊಠಡಿ, ಟಿ.ವಿ ನೋಡಲು, ಕೇರಂ, ಚೆಸ್‌ ಮುಂತಾದ ಕ್ರೀಡೆಗಳನ್ನಾಡುವ ಕೊಠಡಿ ಇದೆ. ಜೊತೆಗೆ ಇಲ್ಲಿ ಪತ್ರಿಕೆ, ನಿಯತಕಾಲಿಕಾಲಿಕಗಳನ್ನು ಓದುವ ಅವಕಾಶವೂ ಇದೆ.
  • ವಿಶಾಲವಾದ ಅಡಿಗೆಕೋಣೆಯೂ ಇದ್ದು, ಊಟ ಮಾಡುವುದಕ್ಕಾಗಿ ಕೊಠಡಿಯ ವ್ಯವಸ್ಥೆಯೂ ಇದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಇದೆ.

ಉದ್ದೇಶ

  • ಮನೆಗಿಂತ ಹೆಚ್ಚು ಸಮಯ ಕಚೇರಿಯಲ್ಲಿಯೇ ಕಳೆಯುವುದರಿಂದ, ವಿಶೇಷವಾಗಿ ಮಹಿಳೆಯರಿಗೆ ಇಂಥದೊಂದು ಕೊಠಡಿಯ ಅವಶ್ಯಕತೆ ಇರುತ್ತದೆ.