Published on: October 12, 2022
ಟೆಲಿ-ಮನಸ್ ಯೋಜನೆ
ಟೆಲಿ-ಮನಸ್ ಯೋಜನೆ
ಸುದ್ದಿಯಲ್ಲಿ ಏಕಿದೆ?
ವಿಶ್ವ ಮಾನಸಿಕ ಆರೋಗ್ಯ ದಿನ(ಅಕ್ಟೋಬರ್10) ದ ಅಂಗವಾಗಿ, ಕೇಂದ್ರ ಸರ್ಕಾರವು ಟೆಲಿ-ಮನಸ್ ಎಂಬ ಯೋಜನೆ ಜಾರಿ ಮಾಡಿದೆ. ಕರ್ನಾಟಕದ ಇ-ಮನಸ್ ಯೋಜನೆಯೇ ಇದಕ್ಕೆ ಪ್ರೇರಣೆಯಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಮುಖ್ಯಾಂಶಗಳು
- ರಾಜ್ಯದ ನಿಮ್ಹಾನ್ಸ್ ಸಂಸ್ಥೆಯ ಇ-ಮನಸ್ ಕಾರ್ಯಕ್ರಮದಡಿ, ತಂತ್ರಾಂಶ ಬಳಸಿ ಮಾನಸಿಕ ಆರೋಗ್ಯ ಚಟುವಟಿಕೆಗಳ ನಿರ್ವಹಣೆ ಮಾಡಲಾಗುತ್ತಿದೆ. ಇದು ಇಡೀ ದೇಶಕ್ಕೆ ಮಾದರಿಯಾಗಿದೆ.
ಟಿ-ಮನಸ್ ಯೋಜನೆ :
- ಈ ಎಲ್ಲಾ ಕಾರ್ಯಕ್ರಮಗಳನ್ನ ಮಾದರಿಯಾಗಿಸಿಕೊಂಡು ಕೇಂದ್ರ ಸರ್ಕಾರ, ಟೆಲಿ- ಮನಸ್ ಯೋಜನೆ ಜಾರಿ ಮಾಡಿ ಮಾನಸಿಕ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಿದೆ.
- ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಪ್ರಾರಂಭಿಸಿದ ಟೆಲಿ ಮೆಂಟಲ್ ಹೆಲ್ತ್ ಅಸಿಸ್ಟೆನ್ಸ್ ಮತ್ತು ನೆಟ್‌ವರ್ಕಿಂಗ್ ಭಾರತದಾದ್ಯಂತ ಎಲ್ಲ ರಾಜ್ಯಗಳಲ್ಲಿ ಪ್ರಾರಂಭಿಸಲಾಗಿದೆ.
- ಮಾನಸಿಕ ಆರೋಗ್ಯ ರಕ್ಷಣೆಗೆ ಪ್ರವೇಶವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಮಾನಸಿಕ ಆರೋಗ್ಯ ಸೇವೆಯಾಗಿದೆ.
- ಟೆಲಿ-ಮಾನಸ್ ರಾಷ್ಟ್ರವ್ಯಾಪಿ ನೆಟ್‌ವರ್ಕ್ ತಜ್ಞರೊಂದಿಗೆ ಸಮಾಲೋಚನೆ ನೀಡುವ ಮೂಲಕ ಮತ್ತು ಇ- ಪ್ರಿಸ್ಕ್ರಿಪ್ಷನ್‌ಗಳನ್ನು ಒದಗಿಸುವ ಮೂಲಕ ದೇಶದಾದ್ಯಂತ ಮಾನಸಿಕ ಆರೋಗ್ಯದ ಪ್ರವೇಶವನ್ನು ಹೆಚ್ಚಿಸುತ್ತದೆ.
ಉದ್ದೇಶ
- ಇದು ದೇಶದ ಅತ್ಯಂತ ದೂರದ ಮತ್ತು ಕಷ್ಟಕರವಾದ ಭೂಪ್ರದೇಶಗಳಿಗೆ ಮಾನಸಿಕ ಆರೋಗ್ಯ ಸೇವೆಗಳನ್ನು ಪ್ರವೇಶಿಸುವಂತೆ ಮಾಡುವ ಗುರಿಯನ್ನು ಹೊಂದಿದೆ.
ಇ-ಮನಸ್ ಯೋಜನೆ:
- ನರರೋಗ ಸಂಬಂಧಿ ಸಮಸ್ಯೆಗಳು ದೇಶದ ಅಭಿವೃದ್ಧಿಗೆ ದೊಡ್ಡ ಅಡ್ಡಿಯಾಗಿವೆ. ಇದಕ್ಕಾಗಿ ಇದೇ ವರ್ಷ ಕರ್ನಾಟಕ ರಾಜ್ಯದಲ್ಲಿ ಬ್ರೈನ್ ಹೆಲ್ತ್ ಇನೀಶಿಯೇಟಿವ್ ಜಾರಿ ಮಾಡಲಾಗಿದೆ.
- ಇದರಡಿ, ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಆಸ್ಪತ್ರೆಗಳಲ್ಲಿ ಮಾನಸಿಕ ಅನಾರೋಗ್ಯಕ್ಕೊಳಗಾದವರ ಆರೈಕೆಗಾಗಿ ವಾರಕ್ಕೆ ಒಂದು ದಿನ ಮೀಸಲಿಡಲಾಗುತ್ತಿದೆ. ಈ ಕಾರ್ಯಕ್ರಮಗಳ ಮೂಲಕ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಗೆ ಬಂದಿದೆ.
- ಟೆಲಿ ಕನ್ಸಲ್ಟೇಶನ್: ಕೋವಿಡ್ ಸಮಯದಲ್ಲಿ ಅನೇಕರು ಮಾನಸಿಕ ಒತ್ತಡಕ್ಕೆ ಒಳಗಾದರು. ಇದಕ್ಕಾಗಿ ನಿಮ್ಹಾನ್ಸ್ ಮತ್ತು ರಾಜ್ಯ ಸರ್ಕಾರದಿಂದ ಟೆಲಿ ಕೌನ್ಸಿಲಿಂಗ್ ಸೇವೆ ಆರಂಭಿಸಲಾಯಿತು.
- ಕ್ವಾರಂಟೈನ್‌ನಲ್ಲಿರುವವರಿಂದ ಆರಂಭವಾಗಿ ವಲಸೆ ಕಾರ್ಮಿಕರವರೆಗೂ ಎಲ್ಲರೂ ಈ ಸೇವೆ ಪಡೆದಿದ್ದಾರೆ.
- ಮಾನಸಿಕ ಆರೋಗ್ಯ ಸೇವೆ ಕೋವಿಡ್ ಸಮಯಕ್ಕೆ ಮಾತ್ರ ಸೀಮಿತವಾಗಿಲ್ಲ. ಟೆಲಿ ಮೆಂಟಲ್ ಹೆಲ್ತ್ ಎಂಬ ಕಾರ್ಯಕ್ರಮವನ್ನೂ ಸರ್ಕಾರ ಆರಂಭಿಸಿದ್ದು, ಇದರಡಿ ನಿಮ್ಹಾನ್ಸ್ ಪ್ರತಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ಮಾನಸಿಕ ಆರೋಗ್ಯ ನಿರ್ವಹಣೆ ಕುರಿತು ತರಬೇತಿ ನೀಡುತ್ತಿದೆ.
- ಮಾನಸಧಾರ ಕಾರ್ಯಕ್ರಮದಡಿ, ಮಾನಸಿಕ ಅನಾರೋಗ್ಯಕ್ಕೊಳಗಾದವರಿಗೆ ಸೂಕ್ತ ಹಗಲು ಆರೈಕೆ ಸೇವೆ ನೀಡಲಾಗುತ್ತಿದೆ.