ಡಿಜಿಟಲ್ ರೂಪಾಯಿ ಪೈಲಟ್ ಯೋಜನೆ
ಡಿಜಿಟಲ್ ರೂಪಾಯಿ ಪೈಲಟ್ ಯೋಜನೆ
ಸುದ್ದಿಯಲ್ಲಿ ಏಕಿದೆ?
ಭಾರತೀಯ ರಿಸರ್ವ್ ಬ್ಯಾಂಕ್ (RBI) ನವೆಂಬರ್ 1 ರಂದು ಡಿಜಿಟಲ್ ರೂಪಾಯಿ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸುತ್ತದೆ. ದೇಶದ ಮೊದಲ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಬಳಕೆಯು ಆರಂಭವಾಗಲಿದೆ.
ಮುಖ್ಯಾಂಶಗಳು
- ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ರಿಟೇಲ್ ವಹಿವಾಟು ದೇಶದ ಕೆಲವು ಆಯ್ದ ಪ್ರದೇಶಗಳಲ್ಲಿ, ಕೆಲವು ಗ್ರಾಹಕರು ಮತ್ತು ವ್ಯಾಪಾರಿಗಳ ನಡುವೆ ಒಂದು ತಿಂಗಳಲ್ಲಿ ಆರಂಭವಾಗಲಿದೆ.
- ಎಲ್ಲಿ ಬಳಕೆ? ಆರಂಭಿಕ ಹಂತದಲ್ಲಿ ಸರ್ಕಾರಿ ಟ್ರೆಷರಿ ಬಿಲ್, ಬಾಂಡ್ ವಹಿವಾಟುಗಳಲ್ಲಿ ಈ ವರ್ಚುವಲ್ ಕರೆನ್ಸಿ ಬಳಕೆ ಮಾಡಲು ಅವಕಾಶ ಇರಲಿದೆ.
- ಯಾವ ಬ್ಯಾಂಕ್ ಗಳು ನೀಡಲಿವೆ? ಎಸ್ಬಿಐ, ಬ್ಯಾಂಕ್ ಆಫ್ ಬರೋಡ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್ಸಿ ಫಸ್ಟ್ ಬ್ಯಾಂಕ್ ಮತ್ತು ಎಚ್ಎಸ್ಬಿಸಿ ಡಿಜಿಟಲ್ (ಒಟ್ಟು 9 ಬ್ಯಾಂಕ ಗಳು ರೂಪಾಯಿ) ನೀಡಲಿವೆ.
- ಪ್ರಾಯೋಗಿಕ ಬಳಕೆಯಲ್ಲಿ ಸಿಗುವ ಅನುಭವ ಆಧರಿಸಿ ಇತರ ಸಗಟು ವಹಿವಾಟುಗಳಲ್ಲಿ ಹಾಗೂ ಬೇರೆ ಬೇರೆ ದೇಶಗಳಲ್ಲಿ ಇರುವವರ ನಡುವಿನ ಪಾವತಿಗಳಲ್ಲಿ ಇದನ್ನು ಬಳಸಲು ಆದ್ಯತೆ ನೀಡಲಾಗುತ್ತದೆ.
- ಕೇಂದ್ರೀಯ ಬ್ಯಾಂಕ್ನ ಡಿಜಿಟಲ್ ಕರೆನ್ಸಿಯನ್ನು (ಸಿಬಿಡಿಸಿ) ಸೃಷ್ಟಿಸುವುದು ಚಾಲ್ತಿಯಲ್ಲಿ ಇರುವ ಕರೆನ್ಸಿಗೆ ಪೂರಕವೇ ವಿನಾ, ಪರ್ಯಾಯ ಅಲ್ಲ ಎಂದು ಹೇಳಿದೆ.
- ಬಳಕೆದಾರರಿಗೆ ಹೆಚ್ಚುವರಿ ಪಾವತಿ ವ್ಯವಸ್ಥೆಯೊಂದನ್ನು ಇದು ಕಲ್ಪಿಸುತ್ತದೆ. ಈಗ ಇರುವ ಪಾವತಿ ವ್ಯವಸ್ಥೆಗಳನ್ನು ತೆಗೆದುಹಾಕುವುದಿಲ್ಲ.
- ಸರ್ಕಾರಿ ಭದ್ರತೆಗಳಲ್ಲಿ ದ್ವಿತೀಯ ಮಾರುಕಟ್ಟೆ ವಹಿವಾಟುಗಳ ಇತ್ಯರ್ಥಕ್ಕಾಗಿ ಡಿಜಿಟಲ್ ರೂಪಾಯಿಯನ್ನು ಬಳಸಲು RBI ಹೇಳಿದೆ.
- ಡಿಜಿಟಲ್ ರೂಪಾಯಿಯ ಬಳಕೆಯು ಅಂತರ ಬ್ಯಾಂಕ್ ಮಾರುಕಟ್ಟೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ. ರಿಟೇಲ್ ವಿಭಾಗದಲ್ಲಿ ಡಿಜಿಟಲ್ ರೂಪಾಯಿ ಬಳಕೆಗಾಗಿ ಆರ್ಬಿಐ ಮುಂದಿನ ತಿಂಗಳಲ್ಲಿ ಕೆಲವು ಪ್ರದೇಶಗಳಲ್ಲಿ ಚಿಲ್ಲರೆ ಇ-ರೂಪಾಯಿ ಅನ್ನು ಪ್ರಾರಂಭಿಸಲಿದೆ. ಅಂದರೆ ಸಾಮಾನ್ಯ ವ್ಯಾಪಾರಿಗಳು ಮತ್ತು ಗ್ರಾಹಕರು ಕೂಡ ಡಿಜಿಟಲ್ ರೂಪಾಯಿಗಳನ್ನು ಬಳಸಬಹುದು.
ಸಿಬಿಡಿಟಿ : ಕೇಂದ್ರೀಯ ಬ್ಯಾಂಕ್ ಹೊರಡಿಸುವ ಡಿಜಿಟಲ್ ಕರೆನ್ಸಿ.
- ಈ ವರ್ಷದ ಫೆಬ್ರುವರಿ 1ರಂದು ಮಂಡಿಸಿದ ಬಜೆಟ್ನಲ್ಲಿ ಕೇಂದ್ರ ಸರ್ಕಾರವು ಸಿಬಿಡಿಸಿ ಚಲಾವಣೆಗೆ ತರುವ ಘೋಷಣೆ ಮಾಡಿತ್ತು. ಜಾಗತಿಕವಾಗಿ 60ಕ್ಕೂ ಹೆಚ್ಚು ಕೇಂದ್ರೀಯ ಬ್ಯಾಂಕ್ಗಳು ಸಿಬಿಡಿಸಿ ಬಗ್ಗೆ ಆಸಕ್ತಿ ತೋರಿವೆ. ಕೆಲವು ದೇಶಗಳಲ್ಲಿ ಈ ಕರೆನ್ಸಿಯನ್ನು ಚಲಾವಣೆಗೆ ತರುವ ಪ್ರಾಯೋಗಿಕ ಕಾರ್ಯ ನಡೆದಿದೆ.
ಉದ್ದೇಶ
- ದೇಶದಲ್ಲಿ ಖಾಸಗಿ ಕ್ರೀಪ್ಟೋ ಕರೆನ್ಸಿಗಳು ಹಣದ ಪರಿಕಲ್ಪನೆಯನ್ನು ಬದಲಿಸುತ್ತಿವೆ. ಅವುಗಳಿಗೆ ಆರ್ ಬಿ ಐ ನಿಂದ ಕರೆನ್ಸಿಯ ಮಾನ್ಯತೆ ಇರದಿದ್ದರೂ ಇವುಗಳ ಸಂಖ್ಯೆ ಹೆಚ್ಚುತ್ತಿದೆ.ಹೀಗಾಗಿ ಹಣದ ಮೂಲಭೂತ ಉದ್ದೇಶಗಳಿಗೆ ಧಕ್ಕೆಯಾಗುವ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಆರ್ ಬಿ ಐ ತನ್ನದೇ ಆದ ಕರೆನ್ಸಿಯನ್ನು ಬಿಡುಗಡೆಗೊಳಿಸಲು ಮುಂದಾಗಿದೆ.
ಡಿಜಿಟಲ್ ಕರೆನ್ಸಿಯ ವಿವಿಧ ಅನುಕೂಲಗಳು
- ವಿಶ್ವಾಸ, ನಗಧೀಕರಣ, ಸುರಕ್ಷತೆ, ಸೆಟಲ್ಮೆಂಟ್ ಅಂತಿಮವಾಗಿ ಸಮಗ್ರತೆಯ ವಿಚಾರದಲ್ಲಿ ಇದರ ಪ್ರಯೋಜನವಿದೆ.
- ಭೌತಿಕ ನಗದು ರೂಪಾಯಿಗೆ ತಗಲುವ ವೆಚ್ಚವನ್ನು ಗಮನಿಸಿದರೆ ಡಿಜಿಟಲ್ ಕರೆನ್ಸಿಗೆ ಕಡಿಮೆ.
- ಪಾವತಿ ವ್ಯವಸ್ಥೆಯಲ್ಲಿ ಹೆಚ್ಚು ದಕ್ಷತೆ ಸಿಗಲಿದೆ.
- ಸಿಬಿಡಿಸಿಯ ಆಫಲೈನ್ ಬಳಕೆಯ ವೈಶಿಷ್ಟ್ಯ ಕೂಡ ಲಭ್ಯವಿದ್ದುಹಿಂದುಳಿದ ಪ್ರದೇಶಗಳಲ್ಲಿ ವಿದ್ಯುತ ಮತ್ತು ಮೊಬೈಲ್ ನೆಟ್ ವರ್ಕ್ ಇಲ್ಲದಿರುವ ಕಡೆಗಳಲ್ಲಿ ಅನುಕೂಲಕರವಾಗಲಿದೆ.
ಡಿಜಿಟಲ್ ರೂಪಾಯಿ ಕೊಡು ಕೊಳ್ಳುವಿಕೆಗೆ ಬ್ಯಾಂಕ್ ಖಾತೆ ಬೇಡ :
- ಇದರ ಬಳಕೆ ಸುಲಭ, ತ್ವರಿತಗತಿಯಲ್ಲಿ ಸಾಧ್ಯ ಯಾವುದೇ ಮಧ್ಯವರ್ತಿಯ ಅಗತ್ಯವಿಲ್ಲ. ಇದರ ವರ್ಗಾವಣೆಗೆ ಬ್ಯಾಂಕ್ ಖಾತೆಯ ಅಗತ್ಯವಿಲ್ಲ.
ಡಿಜಿಟಲ್ ಕರೆನ್ಸಿಯ ವಿಧಗಳು: ಮುಖ್ಯವಾಗಿ ಎರಡು ವಿಧಗಳಿವೆ ಸಾಮಾನ್ಯ ಮತ್ತು ಚಿಲ್ಲರೆ ಬಳಕೆಗೆ(CBDC-R)
- ಸಾಮಾನ್ಯ : ಇದನ್ನು ದೈನಂದಿನ ಸಾಮಾನ್ಯ ಹಣಕಾಸು ಚಲಾವಣೆಗೆ ಬಳಸಬಹುದು
- ಚಿಲ್ಲರೆ ಬಳಕೆಗೆ: ಹಣಕಾಸೇತರ ಗ್ರಾಹಕರು ಬಳಸುವ ವ್ಯಾಪಾರ ಉದ್ದೇಶಗಳಿಗೆ ಸಗಟು ವ್ಯಾಪಾರ ಸಿಬಿಡಿಸಿ (CBDC-W) ಇದನ್ನು ಬ್ಯಾಂಕ್ ಗಳ ನಡುವೆ ಬಳಸಬಹುದು.ಸಗಟು ಹಣಕಾಸು ವರ್ಗಾವಣೆಗೆ ಉಪಯೋಗಿಸಬಹುದು.
- ಡಿಜಿಟಲ್ ಕರೆನ್ಸಿ ಮುಖಬೆಲೆ : ಸಿಬಿಡಿಸಿಗಳು ಬ್ಯಾಂಕ್ ನೋಟುಗಳ ಮುಖಬೆಲೆಯ ಮಾದರಿಯಲ್ಲಿ 500, 100, 50 ಇತ್ಯಾದಿ ನಿಗದಿತ ಬೆಲೆಯಲ್ಲಿ ಸಿಗಲಿವೆ.
ಹೊಣೆಗಾರಿಕೆಯಲ್ಲಿ ಎರಡೂ ಮಾದರಿ
ಅ) ಏಕ ಸ್ತರದ ಮಾದರಿ (single tier model): ಸಿಬಿಡಿಟಿ ಸಿಸ್ಟಮ್ ಬಿಡುಗಡೆ- ನಿರ್ವಹಣೆ, ಅಕೌಂಟ್ ಕೀಪಿಂಗ್, ವರ್ಗಾವಣೆಯ ಪರಿಶೀಲನೆ ಎಲ್ಲವನ್ನು ಅರ ಬಿ ಐ ಮಾಡಲಿದೆ.
ಬ) ದ್ವಿ ಸ್ತರದ ಮಾದರಿ(two tier model): ಇದು ಪರೋಕ್ಷವಾಗಿರುತ್ತದೆ. ಇದರಲ್ಲಿ ಸೆಂಟ್ರಲ್ ಬ್ಯಾಂಕ್, ಬ್ಯಾಂಕ್ ಗಳು ಸೇವೆ ಒದಗಿಸುವವರು ಎಲ್ಲರಿಗೂ ಅವರದ್ದೇ ಆದ ಜವಾಬ್ದಾರಿ ಇರುತ್ತದೆ.
ಸವಾಲೇನು?
ಸುರಕ್ಷತೆಯು ಪ್ರಶ್ನಾತೀತವಾಗಿದೆ.ಅದು ಬಿಡುಗಡೆಯಾಗಿ ಬಳಕೆಯ ನಂತರವೇ ಗೊತ್ತಾಗಲಿದೆ.ಬಹುತೇಕ ಎಲ್ಲ ಆನ್ ಲೈನ್ ಸಾಧನಗಳ ಮೂಲಕ ಈ ಕರೆನ್ಸಿಯ ವರ್ಗಾವಣೆ ಸಾಧ್ಯ. ಆದರೆ ಇದರ ಬಳಕೆಗೆ ಜನರಲ್ಲಿ ಅರಿವು ಮೂಡಿಸುವುದು ಅಗತ್ಯ ಇಲ್ಲದಿದ್ದರೆ ಸೈಬರ್ ವಂಚನೆಗೆ