Published on: December 2, 2022

ಯುದ್ಧ ಅಭ್ಯಾಸ

ಯುದ್ಧ ಅಭ್ಯಾಸ

ಸುದ್ದಿಯಲ್ಲಿ ಏಕಿದೆ?

18ನೇ ಭಾರತ-ಅಮೆರಿಕ ಜಂಟಿ ಸೇನಾ ‘ಯುದ್ಧ ಅಭ್ಯಾಸ’ ನಡೆಯುತ್ತಿದೆ.

ಮುಖ್ಯಾಂಶಗಳು

  • ಹದ್ದು, ನಾಯಿಗಳಿಗೂ ತರಬೇತಿ ನೀಡಲಾಗುತ್ತಿದೆ.
  • ಸ್ಥಳ :ಉತ್ತರಾಖಂಡದಲ್ಲಿ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ)ಯಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ತಪೋವನ
  • ಇದು ಶಾಂತಿಪಾಲನೆ ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಎರಡೂ ಸೇನೆಗಳ ನಡುವೆ ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸಲು ಮತ್ತು ಪರಿಣತಿಯನ್ನು ಹಂಚಿಕೊಳ್ಳುವ ಗುರಿಯನ್ನು ಹೊಂದಿದೆ.

ಉದ್ದೇಶ

  • ಎರಡು ರಾಷ್ಟ್ರಗಳ ಸೇನೆಗಳ ನಡುವೆ ಉತ್ತಮ ಅಭ್ಯಾಸಗಳು, ತಂತ್ರಗಳು ಮತ್ತು ಕಾರ್ಯವಿಧಾನಗಳನ್ನು ವಿನಿಮಯ ಮಾಡಿಕೊಳ್ಳುವ ಉದ್ದೇಶದಿಂದ ಪ್ರತಿ ವರ್ಷ ಭಾರತ ಮತ್ತು ಅಮೆರಿಕ ನಡುವೆ ಸೇನಾ ಸಮರಾಭ್ಯಾಸ ನಡೆಸಲಾಗುತ್ತದೆ.