Published on: December 8, 2022
ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ 2022
ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ 2022
ಸುದ್ದಿಯಲ್ಲಿ ಏಕಿದೆ?
ಪ್ರತಿವರ್ಷವೂ ಡಿಸೆಂಬರ್ 7ರಂದು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ದೇಶದ ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆಯ ಯೋಧರಿಗೆ ಗೌರವ ಸಲ್ಲಿಸುವ ಸಂಪ್ರದಾಯದ ದಿನವಾಗಿ ಆಚರಿಸಲಾಗುತ್ತಿದೆ.
ಮುಖ್ಯಾಂಶಗಳು
· ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಸೇನಾಪಡೆಗಳಿಗೆ ಹೆಚ್ಚಿನ ಸೌಕರ್ಯ ಒದಗಿಸುವ ಉದ್ದೇಶಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಆಯೋಜಿಸಲಾಯಿತು.
· ಆ ಬಳಿಕ ಈ ದಿನವನ್ನು ದೇಶದ ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆಯ ಯೋಧರಿಗೆ ಗೌರವ ಸಲ್ಲಿಸುವ ಸಂಪ್ರದಾಯದ ದಿನವಾಗಿ ಆಚರಿಸಲಾಗುತ್ತಿದೆ.
ಉದ್ದೇಶ
- ಈ ವಾರ್ಷಿಕ ಆಚರಣೆ ಯುದ್ಧ ಗಾಯಾಳುಗಳಿಗೆ ಪುನರ್ವಸತಿ, ಆರೈಕೆ, ಹಾಗೂ ನಿವೃತ್ತ ಯೋಧರ ಕ್ಷೇಮಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯಂದು ಭಾರತದ ಗೌರವವನ್ನು ಕಾಪಾಡುವಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಭಾರತೀಯ ಸೇನಾಪಡೆಗಳ ವೀರ ಸೈನಿಕರಿಗೆ ಗೌರವ ಅರ್ಪಿಸಿ, ಅವರನ್ನು ಸ್ಮರಿಸಲಾಗುತ್ತದೆ.
ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ: ಇತಿಹಾಸ
- ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಮೂಲ ಉದ್ದೇಶವೆಂದರೆ ಬ್ಯಾಚ್ಗಳು, ಸ್ಟಿಕ್ಕರ್ಗಳನ್ನು ಮಾರಾಟ ಮಾಡಿ, ಆ ಮೂಲಕ ಬಂದ ಹಣವನ್ನು ಸೈನಿಕರ ಅಭಿವೃದ್ಧಿಗೆ ಬಳಸುವುದು. ಆಗಸ್ಟ್ 28, 1949ರಂದು ರಕ್ಷಣಾ ಸಚಿವಾಲಯ ಈ ದಿನವನ್ನು ಆಚರಿಸಲು ನಿರ್ಧರಿಸಿತು.
ಉದ್ದೇಶ
- ಸೈನಿಕರಿಗೆ ಗೌರವ ಅರ್ಪಿಸುವ ಮೂಲಕ, ಸಾರ್ವಜನಿಕರಲ್ಲಿ ಸೌಹಾರ್ದತೆ ಮೂಡಿಸುವುದೂ ಈ ದಿನದ ಉದ್ದೇಶವಾಗಿತ್ತು.
- ಈ ವಾರ್ಷಿಕ ಆಚರಣೆ ಯುದ್ಧ ಗಾಯಾಳುಗಳಿಗೆ ಪುನರ್ವಸತಿ, ಆರೈಕೆ, ಹಾಗೂ ನಿವೃತ್ತ ಯೋಧರ ಕ್ಷೇಮಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಆದ್ದರಿಂದ ಈ ಧ್ವಜ ದಿನಾಚರಣೆ ಸೈನಿಕರು ಮತ್ತು ಭಾರತೀಯರ ನಡುವೆ ಸಾಂಸ್ಕೃತಿಕ ಸಂಪರ್ಕವನ್ನು ಬೆಳೆಸುತ್ತದೆ. ಇದಕ್ಕೆ ಸಂಬಂಧಿಸಿದ ವಿವಿಧ ನಿಧಿಗಳಾದ ಯುದ್ಧ ಸಂತ್ರಸ್ತರ ನಿಧಿ, ಕೇಂದ್ರೀಯ ಸೈನಿಕ ಬೋರ್ಡ್ ನಿಧಿ, ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಇನ್ನಿತರ ನಿಧಿಗಳನ್ನು ಒಗ್ಗೂಡಿಸಿ, 1993ರಲ್ಲಿ ಭಾರತದ ರಕ್ಷಣಾ ಸಚಿವಾಲಯ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಅತಿಯಾಗಿ ರೂಪಿಸಿತು.
- ಭಾರತದಲ್ಲಿ ನಿಧಿ ಸಂಗ್ರಹವನ್ನು ಕೇಂದ್ರೀಯ ಸೈನಿಕ ಬೋರ್ಡ್ನ ಸ್ಥಳೀಯ ಸಂಸ್ಥೆಗಳು ನಿರ್ವಹಿಸುತ್ತವೆ. ಕೇಂದ್ರೀಯ ಸೈನಿಕ ಬೋರ್ಡ್ ರಕ್ಷಣ ಸಚಿವಾಲಯದ ಭಾಗವಾಗಿದೆ. ಇದನ್ನು ವ್ಯವಸ್ಥಾಪಕ ಸಮಿತಿ ನಿಯಂತ್ರಿಸುತ್ತದೆ. ಇದರಲ್ಲಿ ಅಧಿಕೃತ ಹಾಗೂ ಅಧಿಕೃತವಲ್ಲದ ಸ್ವಯಂಸೇವಕ ಸಂಸ್ಥೆಗಳು ಉಸ್ತುವಾರಿ ವಹಿಸುತ್ತವೆ.
ದಿನಾಚರಣೆಯ ಮಹತ್ವವೇನು?
ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯಂದು ಸಾರ್ವಜನಿಕರ ಸಹಭಾಗಿತ್ವವನ್ನು ವಿವಿಧ ಕಾರಣಗಳಿಗೆ ಅಪೇಕ್ಷಿಸಲಾಗುತ್ತದೆ.
- ಯುದ್ಧ ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಪುನರ್ವಸತಿ ಒದಗಿಸಲು.
- ಸೇವೆ ಸಲ್ಲಿಸುತ್ತಿರುವ ಸೈನಿಕರ ಮತ್ತು ಅವರ ಕುಟುಂಬಸ್ತರ ಒಳಿತಿಗೆ ಕ್ರಮ ಕೈಗೊಳ್ಳಲು.
-
ನಿವೃತ್ತ ಸೈನಿಕರಿಗೆ ಹಾಗೂ ಅವರ ಕುಟುಂಬಸ್ತರ ಅಗತ್ಯಗಳನ್ನು ಪೂರೈಸಲು.