Published on: January 2, 2023
‘ಆಫ್ಟರ್ ಕೇರ್ ಹೋಮ್
‘ಆಫ್ಟರ್ ಕೇರ್ ಹೋಮ್
ಸುದ್ದಿಯಲ್ಲಿ ಏಕಿದೆ? 18-21 ವರ್ಷ ವಯಸ್ಸಿನ ಬಾಲಕಿಯರಿಗಾಗಿ ಆರು ಆಫ್ಟರ್ ಕೇರ್ ಹೋಮ್‌ಗಳ ಸ್ಥಾಪನೆಗೆ ಕರ್ನಾಟಕ ಮಕ್ಕಳ ರಕ್ಷಣಾ ನಿರ್ದೇಶನಾಲಯವು ಚಿಂತನೆ ನಡೆಸಿದೆ.
ಮುಖ್ಯಾಂಶಗಳು
- ಮಕ್ಕಳನ್ನು ಬೆಂಬಲಿಸಲು, ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ಆಫ್ಟರ್ ಕೇರ್ ಹೋಮ್‌ಗಳನ್ನು ಸ್ಥಾಪಿಸಲು ಆರು ಎನ್‌ಜಿಒಗಳನ್ನು ಬೆಂಬಲಿಸುವ ಉಪಕ್ರಮವನ್ನು ಸರ್ಕಾರ ಯೋಜಿಸುತ್ತಿದೆ.
- ಉದ್ದೇಶ : ಸರ್ಕಾರಿ ಶಿಶುಪಾಲನಾ ಸಂಸ್ಥೆಗಳಿಂದ ಹೊರಬಂದ ನಂತರ ಮನೆ ಮತ್ತು ಆರ್ಥಿಕ ಸಹಾಯವಿಲ್ಲದೆ ಹೆಣ್ಣು ಮಕ್ಕಳು ಸಂಕಷ್ಟ ಪಡುತ್ತಿದ್ದಾರೆ. ಇಂತಹ ಮಕ್ಕಳಿಗೆ ಆಫ್ಟರ್ ಕೇರ್ ಹೋಮ್ ಗಳ ತೆರೆಯಲು ಮಕ್ಕಳ ರಕ್ಷಣಾ ನಿರ್ದೇಶನಾಲಯ ಮುಂದಾಗಿದೆ.
ಉಪಕ್ರಮ :
- ಅನಾಥರಾಗಿರುವ, ಪೋಷಕರಿಂದ ಪರಿತ್ಯಕ್ತರಾದ ಅಥವಾ ಒಂಟಿ ಪೋಷಕರನ್ನು ಹೊಂದಿರುವ ಹೆಣ್ಣುಮಕ್ಕಳಿಗೆ ಸರ್ಕಾರಿ ಶಿಶುಪಾಲನಾ ಸಂಸ್ಥೆಗಳಲ್ಲಿ ಆಶ್ರಯ ನೀಡಲಾಗುತ್ತದೆ.
- ಅವರಿಗೆ 18 ವರ್ಷ ವಯಸ್ಸಿನವರೆಗೆ ಬೆಂಬಲವನ್ನು ನೀಡಲಾಗುತ್ತದೆ. ನಂತರ ಅವರ ಪೋಷಕರ ಬಳಿ ವಾಪಸ್ ಕಳುಹಿಸಲಾಗುತ್ತದೆ.
- ಪ್ರತಿ ಕೇಂದ್ರದಲ್ಲಿ 25 ಬಾಲಕಿಯರಿಗೆ ಅವಕಾಶ ಕಲ್ಪಿಸಲಾಗುವುದು.
ಎಲ್ಲೆಲ್ಲಿ ಕೇಂದ್ರಗಳು :
- ಬೆಂಗಳೂರಿನಲ್ಲಿ ಎರಡು ಮತ್ತು ಕಲಬುರಗಿ, ಬೆಳಗಾವಿ, ಮೈಸೂರು ಮತ್ತು ತುಮಕೂರಿನಲ್ಲಿ ತಲಾ ಒಂದರಂತೆ ಆರು ಆರೈಕೆ ಕೇಂದ್ರಗಳ ತೆರೆಯಲು ಇಲಾಖೆ ಚಿಂತನೆ ನಡೆಸಿದೆ.
ಅನುದಾನ:
- ಪ್ರತೀ ಕೇಂದ್ರಕ್ಕೆ 50 ಲಕ್ಷ ರೂಪಾಯಿ ಅನುದಾನಕ್ಕೆ ಸರ್ಕಾರ ಅನುಮೋದನೆ ನೀಡಿದೆ. ನಿಯೋಜಿತ ಎನ್‌ಜಿಒಗೆ ವಾರ್ಷಿಕ ಆಧಾರದ ಮೇಲೆ ಹಣವನ್ನು ನೀಡಲಾಗುತ್ತದೆ. ನೌಕರರ ವೇತನ ಮತ್ತು ಮಕ್ಕಳಿಗೆ ನೀಡುವ ಶಿಕ್ಷಣ ಮತ್ತು ತರಬೇತಿಯ ವೆಚ್ಚ ಸೇರಿದಂತೆ ಸಂಪೂರ್ಣ ಯೋಜನೆಯು ಸರ್ಕಾರದ ಅನುದಾನದಲ್ಲಿರಲಿದೆ.
- ಈಗಿರುವ ವಸತಿಗಳು : ಡಿಸೆಂಬರ್ 22, 2022 ರಂತೆ, ರಾಜ್ಯದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗಾಗಿ ಸುಮಾರು 80 ಸರ್ಕಾರಿ ಶಿಶುಪಾಲನಾ ಸಂಸ್ಥೆಗಳಿವೆ. ಒಟ್ಟಾರೆಯಾಗಿ, ಈ ಸಂಸ್ಥೆಗಳಲ್ಲಿ 1,040 ಹುಡುಗರು ಮತ್ತು 1,196 ಹುಡುಗಿಯರಿಗೆ ವಸತಿ ಒದಗಿಸಲಾಗಿದೆ.