Published on: February 3, 2023

ಬಜೆಟ್‌ 2023

ಬಜೆಟ್‌ 2023


ಬಜೆಟ್‌ 2023 ರನ್ನು ಮೊದಲ ಅಮೃತ ಕಾಲದ ಬಜೆಟ್‌ ಎಂದು ಘೋಷಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಪ್ರಮುಖ 7 ಅಂಶಗಳ ಅಡಿಯಲ್ಲಿ ಬಜೆಟ್‌ ಮಂಡಿಸಿದ್ದಾರೆ.

ಬಜೆಟ್‌ 2023 ರ 7 ಪ್ರಮುಖಾಂಶಗಳು ಹೀಗಿವೆ.
  • ಎಲ್ಲ ಒಳಗೊಂಡ ಅಭಿವೃದ್ಧಿ
  • ಗುರಿ ತಲುಪುವಿಕೆ
  • ಮೂಲಸೌಕರ್ಯ
  • ಬಂಡವಾಳ ಹೂಡಿಕೆ
  • ಸಾಮರ್ಥ್ಯವನ್ನು ಹೊರಹಾಕುವುದು
  • ಹಸಿರು ಅಭಿವೃದ್ಧಿ
  • ಯುವ ಶಕ್ತಿ ಆರ್ಥಿಕ ಕ್ಷೇತ್ರ
ನಿಮಗಿದು ತಿಳಿದಿರಲಿ : ಸ್ವತಂತ್ರ ಭಾರತದಲ್ಲಿ ಸತತ ಐದನೇ ಬಜೆಟ್ ಮಂಡಿಸುತ್ತಿರುವ ಆರನೇ ಸಚಿವರೆಂಬ ಎಂಬ ಹೆಗ್ಗಳಿಕೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪಾತ್ರರಾಗಿದ್ದಾರೆ.
 ಈ ಮೂಲಕ ಅವರು ಮನಮೋಹನ್ ಸಿಂಗ್, ಅರುಣ್ ಜೇಟ್ಲಿ ಅವರಂತಹ ಪ್ರಮುಖರ ಸಾಲಿಗೆ ಸೇರಿಕೊಂಡಿದ್ದಾರೆ.ಇದಕ್ಕೂ ಮುನ್ನ ಮೊರಾರ್ಜಿ ದೇಸಾಯಿ, ಡಾ. ಮನಮೋಹನ್ ಸಿಂಗ್, ಪಿ ಚಿದಂಬರಂ, ಯಶವಂತ್ ಸಿನ್ಹಾ ಮತ್ತು ಅರುಣ್ ಜೇಟ್ಲಿ ಅವರು ಐದು ಸತತ ವಾರ್ಷಿಕ ಬಜೆಟ್‌ಗಳನ್ನು ಮಂಡಿಸಿದ್ದರು.
ವಿಷಯ : ಕೃಷಿ ವಲಯ
ಕೃಷಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಇನ್ನು ಒಂದೇ ಡಿಜಿಟಲ್ ಪ್ಲಾಟ್ ಫಾರಂನಲ್ಲಿ ಲಭ್ಯವಾಗಲಿವೆ. ಇದಕ್ಕಾಗಿ, ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ ಸ್ಥಾಪನೆ ಮಾಡಲಾಗುತ್ತದೆ.  ಅಂತೆಯೇ ದೇಶದಲ್ಲಿರುವ 63,000 ಕೃಷಿ ಕೊಆಪರೇಟಿವ್ ಸೊಸೈಟಿಗಳನ್ನು ಕೇಂದ್ರೀಕೃತಗೊಳಿಸಲಾಗುತ್ತದೆ. ಇದಕ್ಕಾಗಿ 2,516 ಕೋಟಿ ರೂ.ಗಳನ್ನು ನಿಗದಿಗೊಳಿಸಲಾಗುತ್ತದೆ. ಪ್ರಾಥಮಿಕ ಕೃಷಿ ಸಾಲ ಸಹಕಾರ ಸಂಸ್ಥೆಗಳನ್ನು ಒಂದೇ ಸೂರಿನಡಿ ತರಲಾಗುತ್ತದೆ. ನ್ಯಾಷನಲ್ ಮೊನೆಸ್ಟೈಸೇಷನ್ ಪೈಪ್ ಲೈನ್ ಯೋಜನೆಗೆ 9 ಸಾವಿರ ಕೋಟಿ ರೂ. ಹೂಡಿಕೆ ಮಾಡಲಾಗುತ್ತದೆ