Published on: March 9, 2023

ಪ್ರತಿ ಪಾವತಿ ಡಿಜಿಟಲ್ ಮಿಷನ್

ಪ್ರತಿ ಪಾವತಿ ಡಿಜಿಟಲ್ ಮಿಷನ್


ಸುದ್ದಿಯಲ್ಲಿ ಏಕಿದೆ? ಜನರಲ್ಲಿ ಡಿಜಿಟಲ್’ ಪೇಮೆಂಟ್ ಬಗ್ಗೆ ಜಾಗೃತಿ ಮೂಡಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಪ್ರತಿ ಪಾವತಿ ಡಿಜಿಟಲ್ ಮಿಷನ್ (ಹರ್ ಪೇಮೆಂಟ್ ಡಿಜಿಟಲ್) ಎಂಬ ಅಭಿಯಾನಕ್ಕೆ ಚಾಲನೆ ನೀಡಿದೆ.


ಮುಖ್ಯಾಂಶಗಳು

  • ಮಾರ್ಚ್‌ 6 ರಿಂದ 12 ರ ತನಕ ಡಿಜಿಟಲ್ ಪಾವತಿಗಳ ಜಾಗೃತಿ ವಾರ (ಡಿಪಿಎಡಬ್ಲ್ಯು) 2023 ನಡೆಯಲಿದೆ.
  • ಇದೇ ವಿಚಾರವಾಗಿ ಗರಿಷ್ಠ ಜನರ ಭಾಗವಹಿಸುವಿಕೆಗೆ ಅನುಕೂಲವಾಗುವಂತೆ ವಿವಿಧ ಚಟುವಟಿಕೆಗಳನ್ನು ಕೇಂದ್ರೀಯ ಬ್ಯಾಂಕ್‌ ಆಯೋಜಿಸುತ್ತಿದೆ. ಜನ ಭಗೀದಾರಿ ಕಾರ್ಯಕ್ರಮಗಳು, 75 ಡಿಜಿಟಲ್ ಗ್ರಾಮಗಳ ಕಾರ್ಯಕ್ರಮ, ಯುವಕರೊಂದಿಗೆ ಸಹಭಾಗಿತ್ವ ಮತ್ತು ಹಳ್ಳಿಗಳಲ್ಲಿ ಜಾಗೃತಿ ಸಂದೇಶ ಈ ಚಟುವಟಿಕೆಗಳಲ್ಲಿ ಒಳಗೊಂಡಿವೆ.
  • ಇತ್ತೀಚೆಗೆ 90,000 ಪ್ರತಿಸ್ಪಂದಕರನ್ನು ಒಳಗೊಂಡ ಸಮೀಕ್ಷಾ ವರದಿಯನ್ನು ಆರ್‌ಬಿಐ ಪ್ರಕಟಿಸಿದೆ. ಇದರಲ್ಲಿ 42 ಪ್ರತಿಶತ ಪ್ರತಿಕ್ರಿಯಿಸಿದವರು ಡಿಜಿಟಲ್ ಪಾವತಿಗಳನ್ನು ಬಳಸುವುದನ್ನು ಖಚಿತಪಡಿಸಿದ್ದಾರೆ. ಶೇಕಡ 35 ಜನರು ಡಿಜಿಟಲ್ ಪಾವತಿಗಳ ಬಗ್ಗೆ ತಿಳಿದಿದ್ದರೂ ಬಳಕೆದಾರರಲ್ಲ. ಅದೇ ರೀತಿ, 23 ಪ್ರತಿಶತದಷ್ಟು ಜನರಿಗೆ ಡಿಜಿಟಲ್‌ ಪಾವತಿ ತಿಳಿದಿಲ್ಲ ಎಂದು ಸಮೀಕ್ಷಾ ವರದಿ ಹೇಳಿದೆ.

ಈ ಜಾಗೃತಿ ಸಪ್ತಾಹದ ಥೀಮ್: ಡಿಜಿಟಲ್ ಪಾವತಿಗಳನ್ನು ಅಳವಡಿಸಿಕೊಳ್ಳಿ ಮತ್ತು ಇತರರಿಗೂ ಕಲಿಸಿ: (ಡಿಜಿಟಲ್ ಪೇಮೆಂಟ್‌ ಅಪ್ನಾವೋ, ಔರೋ  ಕೊ ಭಿ ಸಿಖಾವೋ ).

ಈ ಉಪಕ್ರಮವೇನು?

  • ಉಪಕ್ರಮದ ಅಡಿಯಲ್ಲಿ, 75 ಡಿಜಿಟಲ್‌ ಗ್ರಾಮಗಳ ಕಾರ್ಯಕ್ರಮದಲ್ಲಿ, ಪಾವತಿ ವ್ಯವಸ್ಥೆ ಆಪರೇಟರ್‌ಗಳು 75ಗ್ರಾಮಗಳನ್ನು ದತ್ತು ತಗೊಂಡು ಅಲ್ಲಿ ಡಿಜಿಟಲ್‌ ಪಾವತಿ ಸಕ್ರಿಯಗೊಳಿಸುವ ಕೆಲಸವನ್ನು ಮಾಡುತ್ತಾರೆ. ಈ ಗ್ರಾಮಗಳಲ್ಲಿ ಡಿಜಿಟಲ್‌ ಬ್ಯಾಂಕಿಂಗ್‌ ಘಟಕಗಳು, ಡಿಜಿಟಲ್‌ ಪಾವತಿ ವ್ಯವಸ್ಥೆಗಳು ಇರಲಿವೆ.
  • PSO ಗಳು ಪಾವತಿ ವ್ಯವಸ್ಥೆಯನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು RBI ನಿಂದ ಅಧಿಕಾರ ಪಡೆದ ಘಟಕಗಳಾಗಿವೆ.
  • ಫೆಬ್ರವರಿ 2023 ರ ಹೊತ್ತಿಗೆ, ಚಿಲ್ಲರೆ ಪಾವತಿ ಸಂಸ್ಥೆಗಳು, ಕಾರ್ಡ್ ಪಾವತಿ ನೆಟ್‌ವರ್ಕ್‌ಗಳು, ATM ನೆಟ್‌ವರ್ಕ್‌ಗಳು, ಪ್ರಿಪೇಯ್ಡ್ ಪಾವತಿ ಉಪಕರಣಗಳು ಇತ್ಯಾದಿಗಳಂತಹ ವಿವಿಧ ವರ್ಗಗಳ ಅಡಿಯಲ್ಲಿ 67 PSO ಗಳಿವೆ.

ಉದ್ದೇಶ

  • ಅದು ವಿಷನ್ 2025 ರ ಅವಧಿಯವರೆಗೆ ಕಾರ್ಯನಿರ್ವಹಿಸುತ್ತದೆ ಮತ್ತು ಈ ಬಳಕೆದಾರರಲ್ಲದವರನ್ನು ಡಿಜಿಟಲ್ ಪಾವತಿಗಳ ಬಳಕೆದಾರರಾಗಿ ಪರಿವರ್ತಿಸಲು ಉದ್ದೇಶಿಸಿದೆ. ವಿಷನ್ 2025ಗೆ “ಪ್ರತಿಯೊಬ್ಬರಿಗೂ, ಎಲ್ಲೆಡೆ ಮತ್ತು ಎಲ್ಲ ಸಮಯದಲ್ಲೂ ಇ-ಪಾವತಿ ಮಾಡುವುದು- ಮತ್ತು ದೇಶದ ನಾಗರಿಕರು ಡಿಜಿಟಲ್ ಪಾವತಿಗಳ ಸಾರ್ವತ್ರಿಕ ಅಳವಡಿಕೆ ಉತ್ತೇಜಿಸುವುದಕ್ಕೆ “ಪ್ರತಿ ಪಾವತಿ ಡಿಜಿಟಲ್ ಮಿಷನ್ ಸೂಕ್ತ” ಎಂಬ ಉದ್ದೇಶವನ್ನು ಹೊಂದಿದೆ.

ಮಹತ್ವ:

  • ಡಿಜಿಟಲ್ ಪಾವತಿಯಿಂದ ದೇಶಕ್ಕೆ ಆಗುವ ಪ್ರಯೋಜನಗಳನ್ನು ಪರಿಗಣಿಸಿ, ಹೆಚ್ಚಿನ ಜಾಗೃತಿ ಮೂಡಿಸುವುದು ಮತ್ತು ಡಿಜಿಟಲ್ ಪಾವತಿಗಳ ಬಳಕೆಯನ್ನು ಇನ್ನಷ್ಟು ಹೆಚ್ಚಿಸುವುದು ಅಗತ್ಯವಾಗಿದೆ.
  • ಆರ್‌ಬಿಐನಿಂದ ಪ್ರತಿ ಪಾವತಿ ಡಿಜಿಟಲ್ ಅಭಿಯಾನವು ಡಿಜಿಟಲ್ ಪಾವತಿಗಳ ಸುಲಭ ಮತ್ತು ಅನುಕೂಲತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಮತ್ತು ಹೊಸ ಗ್ರಾಹಕರನ್ನು ಡಿಜಿಟಲ್ ವ್ಯವಸ್ಥೆಗೆ ಸೆಳೆಯಲು ಅನುಕೂಲವಾಗುತ್ತದೆ.
  • ಇದು ದೇಶದಲ್ಲಿ ಡಿಜಿಟಲ್ ಪಾವತಿಗಳ ಅಳವಡಿಕೆಯನ್ನು ಮತ್ತಷ್ಟು ಪ್ರೋತ್ಸಾಹಿಸುತ್ತದೆ ಮತ್ತು ಬೆಂಬಲಿಸುತ್ತದೆ.