Published on: March 11, 2023
ಸೆಮಿಕಂಡಕ್ಟರ್ ಪೂರೈಕೆ ವ್ಯವಸ್ಥೆ ಒಪ್ಪಂದ
ಸೆಮಿಕಂಡಕ್ಟರ್ ಪೂರೈಕೆ ವ್ಯವಸ್ಥೆ ಒಪ್ಪಂದ
ಸುದ್ದಿಯಲ್ಲಿ ಏಕಿದೆ? ಸೆಮಿಕಂಡಕ್ಟರ್ ಪೂರೈಕೆ ವ್ಯವಸ್ಥೆಯನ್ನು ಸ್ಥಾಪಿಸಲು ಭಾರತ ಮತ್ತು ಅಮೆರಿಕ ಒಪ್ಪಂದಕ್ಕೆ ಸಹಿ ಮಾಡಿವೆ.
ಮುಖ್ಯಾಂಶಗಳು
- ಎರಡೂ ದೇಶಗಳು ಮಾನದಂಡಗಳು ಮತ್ತು ಅನುಸರಣೆ ಸಹಕಾರ ಕಾರ್ಯಕ್ರಮವನ್ನು ಪ್ರಾರಂಭಿಸಿವೆ. ಇದನ್ನು US ನ ಅಮೇರಿಕನ್ ನ್ಯಾಷನಲ್ ಸ್ಟ್ಯಾಂಡರ್ಡ್ ಇನ್ಸ್ಟಿಟ್ಯೂಟ್ ಮತ್ತು ಭಾರತದ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನಿರ್ವಹಿಸುತ್ತವೆ.
- ಆಟೊಮೊಬೈಲ್, ಎಲೆಕ್ಟ್ರಾನಿಕ್ಸ್ ಉಪಕರಣಗಳ ತಯಾರಿಕೆಯಲ್ಲಿ ಸೆಮಿಕಂಡಕ್ಟರ್ಗಳ ಬಳಕೆ ವ್ಯಾಪಕವಾಗಿದೆ. ಆದರೆ ಸೆಮಿಕಂಡಕ್ಟರ್ಗಳ ಕೊರತೆಯ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಹಲವು ಉದ್ದಿಮೆಗಳು ಸಮಸ್ಯೆ ಎದುರಿಸಿವೆ.
- ಈಗ ಆಗಿರುವ ಒಪ್ಪಂದದ ನೆರವಿನಿಂದಾಗಿ ಭಾರತ ಮತ್ತು ಅಮೆರಿಕ ನಡುವಿನ, ಸೆಮಿಕಂಡಕ್ಟರ್ ಪೂರೈಕೆ ವ್ಯವಸ್ಥೆಯಲ್ಲಿನ ಅಡೆತಡೆಗಳು ನಿವಾರಣೆಯಾಗುವ ನಿರೀಕ್ಷೆ ಇದೆ.
ಉದ್ದೇಶ
- ಈ ಒಪ್ಪಂದದ ಕಾರಣದಿಂದಾಗಿ ಭಾರತದ ಎಲೆಕ್ಟ್ರಾನಿಕ್ಸ್ ತಯಾರಿಕಾ ವ್ಯವಸ್ಥೆಯು ಬಲಗೊಳ್ಳುವ ನಿರೀಕ್ಷೆ ಇದೆ. ಅಲ್ಲದೆ, ಇದರಿಂದಾಗಿ ಈ ವಲಯದಲ್ಲಿ ಚೀನಾ ಹೊಂದಿರುವ ಪ್ರಾಬಲ್ಯ ಕುಗ್ಗಬಹುದು. ‘ಎಲೆಕ್ಟ್ರಾನಿಕ್ಸ್ ಪೂರೈಕೆ ವ್ಯವಸ್ಥೆಯಲ್ಲಿ ಹೆಚ್ಚಿನ ಪಾತ್ರ ವಹಿಸುವ ಆಕಾಂಕ್ಷೆಯನ್ನು ಭಾರತ ಹೊಂದಿದೆ. ಈ ಆಕಾಂಕ್ಷೆಯನ್ನು ಈಡೇರಿಸಲು ಒಪ್ಪಂದವು ನೆರವಾಗುತ್ತದೆ’.
ನಿಮಗಿದು ತಿಳಿದಿರಲಿ
- ಅಮೇರಿಕ ಭಾರತದ ಅತಿದೊಡ್ಡ ರಫ್ತುದಾರ ಮತ್ತು ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. ಭಾರತವು ಅಮೇರಿಕಾಗೆ ಒಂಬತ್ತನೇ-ದೊಡ್ಡ ವ್ಯಾಪಾರ ಪಾಲುದಾರ. ಏಪ್ರಿಲ್-ಜನವರಿ ಅವಧಿಯಲ್ಲಿ ದ್ವಿಪಕ್ಷೀಯ ವ್ಯಾಪಾರ ವಹಿವಾಟು $108.43 ಬಿಲಿಯನ್ ಆಗಿತ್ತು. ಎರಡೂ ರಾಷ್ಟ್ರಗಳು 2025 ರ ವೇಳೆಗೆ $500 ಶತಕೋಟಿ ದ್ವಿಪಕ್ಷೀಯ ವ್ಯಾಪಾರವನ್ನು ಸಾಧಿಸುವ ಗುರಿಯನ್ನು ಹೊಂದಿವೆ. ಅಮೇರಿಕ ಭಾರತಕ್ಕೆ ವಿದೇಶಿ ನೇರ ಹೂಡಿಕೆಯ ಮೂರನೇ ಅತಿದೊಡ್ಡ ಮೂಲವಾಗಿದೆ ಮತ್ತು ಭಾರತಕ್ಕೆ ಅಗ್ರ ಐದು ಹೂಡಿಕೆ ತಾಣಗಳಲ್ಲಿ ಒಂದಾಗಿದೆ.