Published on: April 27, 2023
ಶೂನ್ಯ ನೆರಳಿನ ಕೌತುಕ
ಶೂನ್ಯ ನೆರಳಿನ ಕೌತುಕ
ಸುದ್ದಿಯಲ್ಲಿ ಏಕಿದೆ? ಖಗೋಳ ವಿಸ್ಮಯ ಶೂನ್ಯ ನೆರಳಿನ ದಿನದ (Zero shadow day) ಕೌತುಕವನ್ನು ಸಿಲಿಕಾನ್ ಸಿಟಿ ಬೆಂಗಳೂರಿನ ಮಂದಿ ಕಣ್ತುಂಬಿಕೊಂಡರು.
ಮುಖ್ಯಾಂಶಗಳು
- ಸೂರ್ಯ ನಡು ನೆತ್ತಿಯ ಮೇಲಿದ್ದಾಗ ಮಧ್ಯಾಹ್ನ 12.17ರ ವೇಳೆಯಲ್ಲಿ ಕೆಲ ಕ್ಷಣ ಯಾವುದೇ ವ್ಯಕ್ತಿ ಹಾಗೂ ವಸ್ತುವಿನ ನೆರಳು ಕಾಣಲಿಲ್ಲ.
- ಶೂನ್ಯ ನೆರಳಿನ ದಿನ ಗಮನಿಸಲು ಯಾವುದೇ ಉಪಕರಣಗಳ ಅವಶ್ಯಕತೆ ಇರಲಿಲ್ಲ.
ಏನಿದು ಶೂನ್ಯ ನೆರಳಿನ ದಿನ?
- ಶೂನ್ಯ ನೆರಳು ದಿನ ವರ್ಷಕ್ಕೆ ಎರಡು ಬಾರಿ ಸಂಭವಿಸುತ್ತದೆ.
- ಈ ವೇಳೆ ನೇರವಾಗಿ ಇಡುವ ಯಾವುದೇ ವಸ್ತುಗಳ ನೆರಳು ಕಾಣಿಸೋದಿಲ್ಲ. ಲಂಬವಾಗಿ ಇರಿಸಿದರೂ ವಸ್ತುವಿನ ನೆರಳು ಕಾಣಿಸಲ್ಲ. ಇದು ಸೂರ್ಯನು ನೇರವಾಗಿ ಮೇಲಿರುವ ಕಾರಣ ನೆರಳು-ಕಡಿಮೆಯಾಗುತ್ತದೆ.
- ಅಪರೂಪದ ಆಕಾಶ ವಿದ್ಯಮಾನವು ಹೆಚ್ಚಾಗಿ ಭೂಮಧ್ಯರೇಖೆಯ ಸಮೀಪವಿರುವ ಪ್ರದೇಶಗಳಲ್ಲಿ ಕಂಡುಬರುತ್ತದೆ.
- ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಯ ನಡುವೆ ಬೀಳುವ ಪ್ರದೇಶಗಳಲ್ಲಿ ಈ ವಿಸ್ಮಯ ನಡೆಯುತ್ತದೆ.