Published on: January 5, 2024
ಚುಟುಕು ಸಮಾಚಾರ : 5 ಜನವರಿ 2024
ಚುಟುಕು ಸಮಾಚಾರ : 5 ಜನವರಿ 2024
- ಪ್ರತಿ ವರ್ಷ ಜನವರಿ 3 ರಂದು ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ಆಚರಿಸಲಾಗುತ್ತದೆ. ಸಾವಿತ್ರಿಬಾಯಿ ಫುಲೆ ಅವರು 19 ನೇ ಶತಮಾನದಲ್ಲಿ ಭಾರತದ ಸಮಾಜ ಸುಧಾರಣಾ ಚಳವಳಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ ಸಮಾಜ ಸುಧಾರಕಿ, ಕವಿ ಮತ್ತು ಪ್ರಬಲ ಧ್ವನಿ ಯಾಗಿದ್ದರು. ಜನನ: ಅವರು ಜನವರಿ 3, 1831 ರಂದು ಮಹಾರಾಷ್ಟ್ರದ ನೈಗಾಂವ್ ಗ್ರಾಮದಲ್ಲಿ ಜನಿಸಿದರು. 9 ವರ್ಷ ವಯಸ್ಸಿನಲ್ಲಿ, ಅವರು ಜ್ಯೋತಿರಾವ್ ಫುಲೆ ಅವರನ್ನು ವಿವಾಹವಾದರು, ಅವರು ಆ ಸಮಯದಲ್ಲಿ 13 ವರ್ಷ ವಯಸ್ಸಿನವರಾಗಿದ್ದರು.
- ಇತ್ತೀಚೆಗೆ, ಭಾರತದ ರಕ್ಷಣಾ ಸಚಿವರು ಉತ್ತರ ಪ್ರದೇಶದ ವೃಂದಾವನದಲ್ಲಿ ಸಂವಿದ್ ಗುರುಕುಲಂ ಬಾಲಕಿಯರ ಸೈನಿಕ ಶಾಲೆಯನ್ನು ಉದ್ಘಾಟಿಸಿದರು.
- 16 ನೇ ಕೇಂದ್ರ ಹಣಕಾಸು ಆಯೋಗದ ನೂತನ ಅಧ್ಯಕ್ಷರನ್ನಾಗಿ ನೀತಿ ಆಯೋಗದ ಮಾಜಿ ಅಧ್ಯಕ್ಷ ಅರವಿಂದ್ ಪನಗಾರಿಯಾ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. 2015 ರಿಂ ದ 2017ರವರೆಗೆ ಪನಗಾರಿಯಾಅವರು ನೀತಿ ಆಯೋಗದ ಅಧ್ಯಕ್ಷರಾಗಿದ್ದರು. ಆ ಬಳಿಕ ಅವರು ಪ್ರಧಾನಿ ಮೋದಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಹಣಕಾಸು ಸಂಬಂಧಿ ಸಲಹೆ ಸೂಚನೆಗಳನ್ನು ಕೊಡುವಲ್ಲಿ ಮುಂಚೂಣಿಯಲ್ಲಿದ್ದರು. ಅರವಿಂದ್ ಪನಗಾರಿಯಾ ಅವರು ಪ್ರಮುಖ ಭಾರತ–ಅಮೆರಿಕನ್ ಆರ್ಥಿಕ ತಜ್ಞ ಎಂದು ಗುರುತಿಸಿಕೊಂಡಿದ್ದಾರೆ. ಐದು ವರ್ಷ ಕ್ಕೊಮ್ಮೆ ಕೇಂದ್ರ ಸರ್ಕಾರ ರಚಿಸುವ ಹಣಕಾಸು ಆಯೋಗ ಕೇಂದ್ರ ಹಾಗೂ ರಾಜ್ಯಗಳ ನಡುವೆ ತೆರಿಗೆ ಸಂಗ್ರಹದ ಹಂಚಿಕೆ ಬಗ್ಗೆ ಸಲಹೆ, ಸೂಚನೆ ಹಾಗೂ ಶಿಫಾರಸುಗಳನ್ನು ನೀಡುತ್ತದೆ.
- ಕೇಂದ್ರ ಸರ್ಕಾರ ಪ್ರತಿ ಶತ 42 ರಷ್ಟು ತೆರಿಗೆ ಸಂಗ್ರಹವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುತ್ತದೆ. ಹಣಕಾಸು ಆಯೋಗವು 2025 ರ ಅಕ್ಟೋಬರ್ 31 ರೊಳಗೆ ಐದು ವರ್ಷದ ತನ್ನ ವರದಿಯನ್ನು ಸಿದ್ದಪಡಿಸಿ ಒಪ್ಪಿಸಬೇಕು. ಅದು 2026ರ ಏಪ್ರಿಲ್ 1 ರಿಂ ದ ಜಾರಿಗೆ ಬರಲಿದೆ.
- ಬ್ರೆಜಿಲ್, ಭಾರತ, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ ದೇಶಗಳ ಒಕ್ಕೂಟ ಬ್ರಿಕ್ಸ್ಗೆ (BRICS) ಹೊಸದಾಗಿ ಐದು ರಾಷ್ಟ್ರಗಳನ್ನು ಸೇರಿಸಲಾಗಿದೆ. ಸೇರಿಕೊಂಡ ಐದು ರಾಷ್ಟ್ರಗಳು: ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮ ತ್ತ ಯುನೈಟೆಡ್ ಅರಬ್ ಎಮಿರೇಟ್ಸ್(UAE)
- ಇತ್ತೀಚೆಗೆ, ಕೇಂದ್ರ ಸಚಿವ ಸಂಪುಟವು ಭಾರತ ಮತ್ತು ಇಟಲಿ ನಡುವಿನ ವಲಸೆ ಮತ್ತು ಮೊಬಿಲಿಟಿ(ಚಲನಶೀಲತೆ) ಒಪ್ಪಂದಕ್ಕೆ ಎಕ್ಸ್-ಪೋಸ್ಟ್ ಫ್ಯಾಕ್ಟೋ ಅನುಮೋದನೆಯನ್ನು ನೀಡಿತು.