Published on: August 3, 2021
ಕೆಎಂಎಫ್
ಕೆಎಂಎಫ್
ಸುದ್ಧಿಯಲ್ಲಿ ಏಕಿದೆ ? ರಾಜ್ಯದ ಹೆಮ್ಮೆಯ ಸಂಸ್ಥೆ, ಕೆಎಂಎಫ್ ತನ್ನ ಉದ್ಯಮವನ್ನು ರಾಜ್ಯದಾಚೆಗೂ ವಿಸ್ತರಿಸುತ್ತಿದೆ. ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬ್ರಾಂಡ್ ಹೊಂದಿರುವ ಕೆಎಂಎಫ್ ಮಹಾರಾಷ್ಟ್ರದ ವಿದರ್ಭ ಪ್ರದೇಶಕ್ಕೆ ಪದಾರ್ಪಣೆ ಮಾಡಿರುವುದಾಗಿ ತಿಳಿಸಿದೆ.
ಮುಖ್ಯಾಂಶಗಳು
- ಸುಮಾರು ₹1000 ಕೋಟಿ ವೆಚ್ಚದಲ್ಲಿ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಡೇರಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕೆಎಂಎಫ್ ಮುಂದಾಗಿದೆ
- ಕೆಎಂಎಫ್ ತನ್ನ ನಂದಿನಿ ಬ್ರ್ಯಾಂಡ್‌ನ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ವಿದರ್ಭ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ನಾಗ್ಪುರ, ವಾರ್ಧಾ, ಯಾವತ್ಮಲ್ ಮತ್ತು ಚಂದ್ರಪುರ ಮಾರುಕಟ್ಟೆಗಳಿಗೂ ವಿಸ್ತರಿಸಲು ಯೋಜಿಸುತ್ತಿದೆ
- ಇದರೊಂದಿಗೆ, ಕರ್ನಾಟಕದ ವಿಜಯಪುರದ ಡೇರಿಯಲ್ಲಿ ಸಂಸ್ಕರಿಸಿದ ಹಾಲು ಸುಮಾರು 650 ಕಿಮೀ ಸಾಗಿ ನಂತರ ಚಂದ್ರಪುರವನ್ನು ತಲುಪುತ್ತದೆ. ಅಲ್ಲಿ ಅದನ್ನು ಸ್ಥಳೀಯ ಡೈರಿ ಬ್ರಾಂಡ್ ಸ್ವಪ್ನಪೂರ್ತಿಯ ಸಹಯೋಗದೊಂದಿಗೆ ಪ್ಯಾಕ್ ಮಾಡಲಾಗುತ್ತದೆ.
- ಸದ್ಯ, ಕೆಎಂಎಫ್, ಕರ್ನಾಟಕ, ಗೋವಾ ಮತ್ತು ಮುಂಬೈ, ಪುಣೆ, ಸೊಲ್ಲಾಪುರ, ಚೆನ್ನೈ, ಹೈದರಾಬಾದ್, ವಿಜಯವಾಡ ಸೇರಿದಂತೆ ದೇಶದ ಇತರ ನಗರಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.
- 23,600 ಗ್ರಾಮಗಳು, 14,500 ಹಾಲು ಉತ್ಪಾದಕ ಸಹಕಾರ ಸಂಘಗಳು, 14 ಜಿಲ್ಲಾ ಹಾಲು ಒಕ್ಕೂಟಗಳು, 25 ಲಕ್ಷ ಹಾಲು ಉತ್ಪಾದಕ ಸದಸ್ಯರು 62 ಲಕ್ಷ ಲೀಟರ್ ಹಾಲು ಸಂಗ್ರಹಣೆಯೊಂದಿಗೆ ಪ್ರತಿದಿನ ರೈತರಿಗೆ ₹ 24 ಕೋಟಿಗಳನ್ನು ಕೆಎಂಎಫ್ ಪಾವತಿಸುತ್ತದೆ. ಕೆಎಂಎಫ್ 140ಕ್ಕೂ ಹೆಚ್ಚು ಹಾಲಿನ ಉತ್ಪನ್ನಗಳನ್ನು ಹೊಂದಿದೆ.