Published on: February 19, 2024

ಭಾರತದ ಮೊದಲ ವೈದ್ಯಕೀಯ ಹೆಲಿಕಾಪ್ಟರ್ ಸೇವೆ

ಭಾರತದ ಮೊದಲ ವೈದ್ಯಕೀಯ ಹೆಲಿಕಾಪ್ಟರ್ ಸೇವೆ

ಸುದ್ದಿಯಲ್ಲಿ ಏಕಿದೆ? ‘ವೈದ್ಯಕೀಯ ತುರ್ತು ಸಂದರ್ಭದಲ್ಲಿ ತ್ವರಿತ ಚಿಕಿತ್ಸೆಗೆ ಅನುಕೂಲವಾಗುವಂತೆ ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆ (HEMS) ಉತ್ತರಾಖಂಡದಲ್ಲಿ ಆರಂಭಿಸಲಾಗುತ್ತಿದ್ದು, ಇದು ದೇಶದಲ್ಲೇ ಮೊದಲ ಪ್ರಯತ್ನವಾಗಿದೆ’.

ಮುಖ್ಯಾಂಶಗಳು

  • ಇದು ರಿಷಿಕೇಶದಲ್ಲಿರುವ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸಸ್ (AIIMS) ನಿಂದ ಕಾರ್ಯನಿರ್ವಹಿಸಲಿದೆ.
  • ಹೊಸ HEMS, ‘ಸಂಜೀವನಿ’ ಯೋಜನೆ ಅಡಿಯಲ್ಲಿ 150 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಉದ್ದೇಶ

ಇದು ಅಪಘಾತಕ್ಕೊಳಗಾದವರು ಮತ್ತು ರೋಗಿಗಳನ್ನು ಗುಡ್ಡಗಾಡು ಪ್ರದೇಶದಿಂದ ಏಮ್ಸ್‌ಗೆ ಸಮಯಕ್ಕೆ ಸಾಗಿಸುವುದನ್ನು ಖಚಿತಪಡಿಸುತ್ತದೆ. ಎಚ್ಇಎಂಎಸ್ ಮೂಲಕ ಹೆಲಿಕಾಪ್ಟರ್​ಗಳನ್ನು ಬಳಸಿಕೊಂಡು ದೇಶಾದ್ಯಂತದ ವ್ಯಾಪಕ ಜನಸಂಖ್ಯೆಗೆ ವೈದ್ಯಕೀಯ ಚಿಕಿತ್ಸೆ ಮತ್ತು ಆಘಾತ ಆರೈಕೆ ಸೇವೆಗಳ ಸೌಲಭ್ಯವನ್ನು ವಿಸ್ತರಿಸಲು ಸರ್ಕಾರ ಉದ್ದೇಶಿಸಿದೆ.