Published on: March 4, 2024
ಮೊಹಶೀರ್ ಪಂಟಿಯಾಸ್ ಮತ್ಸ್ಯ ಧಾಮ
ಮೊಹಶೀರ್ ಪಂಟಿಯಾಸ್ ಮತ್ಸ್ಯ ಧಾಮ
ಸುದ್ದಿಯಲ್ಲಿ ಏಕಿದೆ? ಶಿವಮೊಗ್ಗದ ತೀರ್ಥಹಳ್ಳಿಯ ಸಿಬ್ಬಲಗುಡ್ಡೆಯ ಮತ್ಸ್ಯ ಧಾಮದಲ್ಲಿನ ಮೊಹಶೀರ್ ಹಾಗೂ ಪಂಟಿಯಾಸ್ ತಳಿಯ ಮೀನುಗಳ ರಕ್ಷಣೆಗೆ ಬೇಸಿಗೆಯಲ್ಲಿ ತುಂಗಾ ನದಿಯು ಬರಿದಾಗದಂತೆ ಮೀನುಗಾರಿಕೆ ಇಲಾಖೆ ನೋಡಿಕೊಳ್ಳಬೇಕಿದೆ. ಹೀಗಾಗಿ ಇದೇ ಮೊದಲ ಬಾರಿಗೆ ಅಲ್ಲಿನ ಮೀನುಗಾರಿಕೆ ಹಿತರಕ್ಷಣಾ ಸಮಿತಿಯ ಮೊರೆ ಹೋಗಿದೆ.
ಏನಿದು ಮತ್ಸ್ಯ ಧಾಮ.
- ಕಾವೇರಿ ಹಾಗೂ ತುಂಗೆಯ ಜಲಾನಯನ ಪ್ರದೇಶದಲ್ಲಿ ಕಾಣಸಿಗುವ ಅಳಿವಿನಂಚಿನ ಮೊಹಶೀರ್ ಹೆಸರಿನ ವಿಶಿಷ್ಟ ತಳಿಯ ಮೀನನ್ನು ಸಂರಕ್ಷಿಸಲು ಸರ್ಕಾರ ಮುಂದಾಗಿದೆ.
- ತುಂಗಾ ನದಿಯ ಶೃಂಗೇರಿ ತೀರ್ಥಹಳ್ಳಿ ತಾಲ್ಲೂಕಿನ ಸಿಬ್ಬಲಗುಡ್ಡೆ ಹಾಗೂ ಶಿವಮೊಗ್ಗ ಬಳಿಯ ಹೊಸಳ್ಳಿಯಲ್ಲಿ ಮೊಹಶೀರ್ ಮೀನುಗಳು ಹೆಚ್ಚಾಗಿ ಕಾಣಸಿಗುವ ಪ್ರದೇವನ್ನು ಸಂರಕ್ಷಿತ ಪ್ರದೇಶ (ಮತ್ಸ್ಯ ಧಾಮ) ಎಂದು ಘೋಷಿಸಲಾಗಿದೆ.
- ಅದರ ವ್ಯಾಪ್ತಿಯ 1.5 ಕಿ.ಮೀ ದೂರ ಮೀನುಗಾರಿಕೆ ಬೇಟೆಯನ್ನು ನಿಷೇಧಿಸಲಾಗಿದೆ.
- ಸುಮಾರು 27ಕ್ಕೂ ಅಧಿಕ ಸಂಖ್ಯೆಯ ಮೀನಿನ ಪ್ರಬೇಧ ಇಲ್ಲಿದೆ.
- ಭಾರತೀಯ ನೈಸರ್ಗಿಕ ಸಮೀಕ್ಷೆ ಮೀನುಗಳ ಸಂತತಿಯ ರಾಷ್ಟ್ರೀಯ ಘಟಕ ತನ್ನ ಸಂಶೋಧನೆಯಲ್ಲಿ ಮೊಹಶೀರ್ ಪೆಂಟಯಸ್ ತಳಿಯ ಮೀನು ಪ್ರಬೇಧ ಅಳಿವಿನ ಅಂಚಿನಲ್ಲಿದೆ ಎಂದು ಗುರುತಿಸಿದೆ.
- ಈ ಮೊಹಶೀರ್ ತಳಿಯ ಈ ಮೀನುಗಳು ಮನುಷ್ಯ ಸ್ನೇಹಿ. ಗುಂಪು ಗುಂಪಾಗಿ ವಾಸಿಸುತ್ತವೆ. ನಿರ್ದಿಷ್ಟ ಪರಿಸರ ಬಿಟ್ಟು ದೂರ ಹೋಗುವುದಿಲ್ಲ.
- ದೇವರ ಮೀನುಗಳು ಎಂದು ನಂಬುವ ಭಕ್ತರು ಹರಕೆಯ ರೂಪದಲ್ಲೂ ಆಹಾರ ಹಾಕುತ್ತಾರೆ.