Published on: March 6, 2024
ಸಮುದ್ರ ಲಕ್ಷ್ಮಣ ವ್ಯಾಯಾಮ
ಸಮುದ್ರ ಲಕ್ಷ್ಮಣ ವ್ಯಾಯಾಮ
ಸುದ್ದಿಯಲ್ಲಿ ಏಕಿದೆ? ಸಮುದ್ರ ಲಕ್ಷ್ಮಣ ವ್ಯಾಯಾಮವನ್ನು ವಿಶಾಖಪಟ್ಟಣಂ ಕರಾವಳಿಯಲ್ಲಿ ನಡೆಯಿತು. ಇದು ಭಾರತ ಮತ್ತು ಮಲೇಷ್ಯಾ ನೌಕಾಪಡೆಗಳ ನಡುವೆ ನಡೆಸಲಾದ ದ್ವಿಪಕ್ಷೀಯ ಕಡಲ ವ್ಯಾಯಾಮವಾಗಿದೆ.
ಭಾಗವಹಿಸುವವರು: ಇಂಡಿಯನ್ ನೇವಲ್ ಶಿಪ್ ಕಿಲ್ತಾನ್ ಮತ್ತು ರಾಯಲ್ ಮಲೇಷಿಯನ್ ಶಿಪ್ KD ಲೆಕಿರ್ ಗುರಿ: ಭಾರತೀಯ ಮತ್ತು ರಾಯಲ್ ಮಲೇಷಿಯನ್ ನೌಕಾಪಡೆಯ ನಡುವಿನ ಬಂಧಗಳನ್ನು ಬಲಪಡಿಸಲು ಮತ್ತು ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವುದು.
ಹಂತಗಳು: ಎರಡು ಹಂತಗಳಲ್ಲಿ ನಡೆಸಲಾಗುತ್ತದೆ: ಬಂದರು ಹಂತ(harbor phase) ಮತ್ತು ಸಮುದ್ರ ಹಂತ(sea phase).
INS ಕಿಲ್ತಾನ್:
- ಇದು ಪ್ರಾಜೆಕ್ಟ್ 28 ರ ಅಡಿಯಲ್ಲಿ ನಿರ್ಮಿಸಲಾದ ಸ್ಥಳೀಯವಾಗಿ-ನಿರ್ಮಿತ ಜಲಾಂತರ್ಗಾಮಿ ವಿರೋಧಿ ಯುದ್ಧ ನೌಕೆ ಆಗಿದೆ.
- ಈ ನೌಕೆಗೆ ಆಯಕಟ್ಟಿನಲ್ಲಿ ನೆಲೆಗೊಂಡಿರುವ ಲಕ್ಷದ್ವೀಪ ಮತ್ತು ಮಿನಿಕೋಯ್ ದ್ವೀಪ ಸಮೂಹದ ಅಮಿನಿಡಿವಿ ಗುಂಪಿನಲ್ಲಿರುವ ದ್ವೀಪಗಳಲ್ಲಿನ ಒಂದು ದ್ವೀಪದ ಹೆಸರನ್ನು ಇಡಲಾಗಿದೆ.
ಭಾರತದ ಇತರೆ ಕಡಲ ವ್ಯಾಯಾಮಗಳು:
ಇಬ್ಸಾಮರ್: ಇದು ಭಾರತ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ನಿಂದ ನಡೆಸಲಾದ ಕಡಲ ವ್ಯಾಯಾಮವಾಗಿದೆ.
SIMBEX: ಭಾರತ ಮತ್ತು ಸಿಂಗಾಪುರ.
SLINEX: ಭಾರತ ಮತ್ತು ಶ್ರೀಲಂಕಾ.