Published on: May 5, 2024
‘ಚಾಂಗಿ–6’ ಗಗನನೌಕೆ
‘ಚಾಂಗಿ–6’ ಗಗನನೌಕೆ
ಸುದ್ದಿಯಲ್ಲಿ ಏಕಿದೆ? ಚಂದ್ರನ ಮೇಲ್ಮೈ ಅಧ್ಯಯನ ಉದ್ದೇಶದ ‘ಚಾಂಗಿ–6’ ಗಗನನೌಕೆಯನ್ನು ಚೀನಾದ ದಕ್ಷಿಣದಲ್ಲಿನ ಹೈನಾನ್ ಪ್ರಾಂತ್ಯದ ಕರಾವಳಿಯಲ್ಲಿರುವ ವೆಂಚಾಂಗ್ ಅಂತರಿಕ್ಷ ಉಡ್ಡಯನ ಕೇಂದ್ರದಿಂದ ಉಡ್ಡಯನ ಮಾಡಿದೆ ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ಸಿಎನ್ಎಸ್ಎ) ತಿಳಿಸಿದೆ.
ಮುಖ್ಯಾಂಶಗಳು
- ರಾಕೆಟ್: ‘ಮಾರ್ಚ್–5 ವೈ 8’
- ಭೂಮಿಗೆ ಕಾಣದಂತಹ ಚಂದಿರನ ಮತ್ತೊಂದು ಭಾಗದಿಂದ ಮಾದರಿಗಳನ್ನು ಸಂಗ್ರಹಿಸಿ, ತರುವ ಇಂತಹ ಬಾಹ್ಯಾಕಾಶ ಕಾರ್ಯ ಕ್ರಮ ಚಂದ್ರನ ಅನ್ವೇಷಣೆಯಲ್ಲಿಯೇ ಇದೇ ಮೊದಲ ಬಾರಿಗೆ ನಡೆಯುತ್ತಿದೆ.
- ಗಗನನೌಕೆಯು, ಆರ್ಬಿಟರ್, ಲ್ಯಾಂಡರ್, ಅಸೆಂಡರ್ ಹಾಗೂ ಭೂಮಿ ಮರಳಲಿರುವ ಘಟಕ ಎಂಬ ನಾಲ್ಕು ಉಪಕರಣಗಳನ್ನು ಹೊಂದಿದೆ.
- ಚಂದಿರನ ಮತ್ತೊಂದು ಬದಿಯಲ್ಲಿನ ಶಿಲೆಗಳು, ದೂಳಿನ ಕಣಗಳನ್ನು ಸಂಗ್ರಹಿಸಲಾಗುವುದು. ಈ ಮಾದರಿಗಳನ್ನು ‘ಅಸೆಂಡರ್’, ಭೂಮಿಗೆ ತರಲಿದ್ದು, ನಂತರ ಅವುಗಳನ್ನು ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಲಾಗುವುದು.
- ಈ ಕಾರ್ಯಾಚರಣೆಯು ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA) ಮತ್ತು ಫ್ರೆಂಚ್ ಬಾಹ್ಯಾಕಾಶ ಸಂಸ್ಥೆ CNES ನಿಂದ ಪೇಲೋಡ್ಗಳೊಂದಿಗೆ ಅಂತರರಾಷ್ಟ್ರೀಯ ಸಹಯೋಗವನ್ನು ಒಳಗೊಂಡಿರುತ್ತದೆ.
ಉದ್ದೇಶ: ಗೋಚರವಾಗದ, ಚಂದ್ರನ ಮತ್ತೊಂದು ಪಾರ್ಶ್ವದಿಂದ ಮಾದರಿಗಳನ್ನು ಸಂಗ್ರಹಿಸಿ ತರುವುದು