Published on: May 14, 2024

ತೀರ್ಥಹಳ್ಳಿ ಪ್ರದೇಶದಲ್ಲಿ ಬೆಳೆಯುವ ಅಡಿಕೆ

ತೀರ್ಥಹಳ್ಳಿ ಪ್ರದೇಶದಲ್ಲಿ ಬೆಳೆಯುವ ಅಡಿಕೆ

ಸುದ್ದಿಯಲ್ಲಿ ಏಕಿದೆ? ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಅಡಿಕೆ ಸಂಶೋಧನಾ ಕೇಂದ್ರವು ನಡೆಸಿದ ವಿಶ್ಲೇಷಣೆಯಲ್ಲಿ ತೀರ್ಥಹಳ್ಳಿ ಪ್ರದೇಶದಲ್ಲಿ ಬೆಳೆಯುವ ಅಡಿಕೆ ಕರ್ನಾಟಕದಲ್ಲಿ ಬೆಳೆಯುವ ತಳಿಗಳಲ್ಲಿ ಉತ್ತಮ ಗುಣಮಟ್ಟದ ಅಡಿಕೆಯಾಗಿ ಹೊರಹೊಮ್ಮಿದೆ.

ಮುಖ್ಯಾಂಶಗಳು

  • ತೀರ್ಥಹಳ್ಳಿ ಬೆಳೆಗಾರರು ವಿಶೇಷವಾಗಿ ನುಲಿ ಮತ್ತು ಹಸ ಅಡಿಕೆಯನ್ನು ಉತ್ಪಾದಿಸುತ್ತಾರೆ,
  • ಶ್ರೇಣೀಕರಣ ಪ್ರಕ್ರಿಯೆ: ಸಿಪ್ಪೆಯನ್ನು ತೆಗೆದ ನಂತರ, ಅಡಿಕೆಯನ್ನು ಕುದಿಸಿ ಒಣಗಿಸಲಾಗುತ್ತದೆ. ಎಲ್ಲಾ ಪ್ರಕ್ರಿಯೆಗಳ ನಂತರ, ಅಡಿಕೆಗಳನ್ನು ಮಾರುಕಟ್ಟೆಯಲ್ಲಿ ಅವುಗಳ ಮೌಲ್ಯವನ್ನು ಪರಿಗಣಿಸಿ – ನುಲಿ, ಹಸ, ರಾಶಿ, ಬೆಟ್ಟೆ ಮತ್ತು ಗೊರಬಾಳು – ಎಂದು ವರ್ಗೀಕರಿಸಲಾಗುತ್ತದೆ. ರಾಶಿ, ಬೆಟ್ಟೆ, ಗೊರಬಾಳುಗಿಂತ ನುಲಿ, ಹಸ ಅಡಿಕೆಗೆ ಹೆಚ್ಚಿನ ಬೆಲೆ ಸಿಗುತ್ತದೆ.
  • ಇದು ಭಾರತದಲ್ಲಿ ಬೆಳೆಯುವ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ.

ಅಡಿಕೆ ಬೆಳೆ

  • ಅಡಿಕೆ ಕೃಷಿಯು ಹೆಚ್ಚಾಗಿ ಸಮಭಾಜಕದ 28º ಉತ್ತರ ಮತ್ತು ದಕ್ಷಿಣಕ್ಕೆ ಸೀಮಿತವಾಗಿದೆ.
  • ತಾಪಮಾನ: ಇದು 14ºC ಮತ್ತು 36ºC ತಾಪಮಾನದಲ್ಲಿ ಬೆಳೆಯುತ್ತದೆ
  • ಮಣ್ಣು: ಕೆಂಪು ಜೇಡಿಮಣ್ಣಿನ ಪ್ರಕಾರದ ಜಲ್ಲಿ ಲ್ಯಾಟರೈಟ್(ಜಂಬಿಟ್ಟಿಗೆ)ಮಣ್ಣ
  • ಮಳೆ: ವಾರ್ಷಿಕ 750 ಮಿಮೀ ಮಳೆ ಬೀಳುವ ಪ್ರದೇಶಗಳಲ್ಲಿ ಇದನ್ನು ಬೆಳೆಯಬಹುದು.
  • ಭಾರತವು ಅಡಿಕೆಯ ಅತಿದೊಡ್ಡ ಉತ್ಪಾದಕ ಮತ್ತು ಅತಿದೊಡ್ಡ ಗ್ರಾಹಕನೂ ಆಗಿದೆ.
  • ಈ ಬೆಳೆಯನ್ನು ಬೆಳೆಯುವ ಪ್ರಮುಖ ರಾಜ್ಯಗಳೆಂದರೆ ಕರ್ನಾಟಕ (40%), ಕೇರಳ (25%), ಅಸ್ಸಾಂ (20%), ತಮಿಳುನಾಡು, ಮೇಘಾಲಯ ಮತ್ತು ಪಶ್ಚಿಮ ಬಂಗಾಳ.

ನಿಮಗಿದು ತಿಳಿದಿರಲಿ

ಮೊಟ್ಟ ಮೊದಲ ಬಾರಿಗೆ ಅಡಕೆ ವಲಯದಲ್ಲಿ, ಉತ್ತರ ಕನ್ನಡದಲ್ಲಿ ಬೆಳೆಯುವ ‘ಶಿರಸಿ ಸುಪಾರಿ’ ಅಡಕೆಗೆ ಭೌಗೋಳಿಕ ಹೆಗ್ಗುರುತು (ಜಿಯೋಗ್ರಾಫಿಕಲ್‌ ಇಂಡಿಕೇಶನ್‌-ಜಿಐ) ಮಾನ್ಯತೆ ಲಭಿಸಿದೆ.