Published on: May 29, 2024

ಚುಟುಕು ಸಮಾಚಾರ :29 ಮೇ 2024

ಚುಟುಕು ಸಮಾಚಾರ :29 ಮೇ 2024

  • ಪರ್ವತಾರೋಹಿ ಮತ್ತು ಕ್ರಿಕೆಟಿಗ ಕಬಕ್ ಯಾನೊ ಅವರು ಇತ್ತೀಚೆಗೆ ಅರುಣಾಚಲ ಪ್ರದೇಶದ ಐದನೇ ಮಹಿಳೆ ಮತ್ತು ಮೌಂಟ್ ಎವರೆಸ್ಟ್ ಅನ್ನು ಏರಿದ ನಿಶಿ(Nyishi) ಬುಡಕಟ್ಟಿನ ಮೊದಲ ಮಹಿಳೆಯಾಗಿದ್ದಾರೆ. ನಿಶಿ ಬುಡಕಟ್ಟು: ನಿಶಿ ಅರುಣಾಚಲ ಪ್ರದೇಶದ ಅತಿದೊಡ್ಡ ಬುಡಕಟ್ಟು ಗುಂಪು. ಅವರು ಅರುಣಾಚಲ ಪ್ರದೇಶದ ಅತಿದೊಡ್ಡ ಬುಡಕಟ್ಟು ಗುಂಪು, ಸುಮಾರು 300,000 ಜನಸಂಖ್ಯೆಯನ್ನು ಹೊಂದಿದೆ. ಪ್ರಾಥಮಿಕವಾಗಿ ಅರುಣಾಚಲ ಪ್ರದೇಶದ ಎಂಟು ಜಿಲ್ಲೆಗಳಲ್ಲಿ ಕಂಡುಬರುತ್ತವೆ . ಸಣ್ಣ ಜನಸಂಖ್ಯೆಯು ಅಸ್ಸಾಂನ ಸೋನಿತ್ಪುರ ಮತ್ತು ಉತ್ತರ ಲಖಿಂಪುರ ಜಿಲ್ಲೆಗಳಲ್ಲಿ ನೆಲೆಸಿದೆ.
  • ಪತ್ತನಂತಿಟ್ಟದ ಕ್ಯಾಥೋಲಿಕೇಟ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಸ್ಯಶಾಸ್ತ್ರಜ್ಞರ ಗುಂಪು ಇತ್ತೀಚೆಗೆ, ಕೊಲ್ಲಂನ ಪಶ್ಚಿಮ ಘಟ್ಟಗಳ ಕುಂಭವುರುಟ್ಟಿ ಪ್ರದೇಶದ ನೈಸರ್ಗಿಕ ಕಾಡುಗಳಲ್ಲಿ ಓಡೋಕ್ಲಾಡಿಯಮ್ ಸಹ್ಯಾದ್ರಿಕಂ ಎಂಬ ಹೊಸ ಪಾಚಿ(ಆಲ್ಗೆ) ಪ್ರಭೇದವನ್ನು ಕಂಡುಹಿಡಿದಿದೆ. ‘ಸಹ್ಯಾದ್ರಿಕಂ’ ಎಂಬ ಹೆಸರು ಪಶ್ಚಿಮ ಘಟ್ಟಗಳನ್ನು ಸೂಚಿಸುತ್ತದೆ, ಇದನ್ನು ಸಹ್ಯಾದ್ರಿ ಎಂದೂ ಕರೆಯುತ್ತಾರೆ.
  • ಭಾರತೀಯ ನೌಕಾಪಡೆಯ ನೌಕೆ ಕಿಲ್ಟಾನ್ ಬ್ರೂನೈನ ಮುವಾರಾಗೆ ಆಗಮಿಸಿತು. ಈ ಭೇಟಿಯು ದಕ್ಷಿಣ ಚೀನಾ ಸಮುದ್ರಕ್ಕೆ ಭಾರತೀಯ ನೌಕಾಪಡೆಯ ಪೂರ್ವ ನೌಕಾಪಡೆಯ ಕಾರ್ಯಾಚರಣೆಯ ನಿಯೋಜನೆಯ ಭಾಗವಾಗಿದೆ. ಆಕ್ಟ್ ಈಸ್ಟ್ ಮತ್ತು ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ) ಕೇಂದ್ರೀಕರಣಕ್ಕೆ ಅನುಗುಣವಾಗಿ ಇಂಡೋ-ಪೆಸಿಫಿಕ್ನಲ್ಲಿನ ದೊಡ್ಡ ಸಹಕಾರದ ಭಾಗವಾಗಿ ಭಾರತವು ಆಗ್ನೇಯ ಏಷ್ಯಾದೊಂದಿಗೆ ತನ್ನ ಕಡಲ ನಿಶ್ಚಿತಾರ್ಥವನ್ನು ವಿಸ್ತರಿಸುವುದನ್ನು ಮುಂದುವರೆಸಿದೆ.
  • ಪಪುವಾ ನ್ಯೂಗಿನಿಯಾದಲ್ಲಿ ಇತ್ತೀಚಿಗೆ ಸಂಭವಿಸಿದ ಭೀಕರ ಭೂಕುಸಿತದಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರದ ವೇದಿಕೆ (ಎಫ್ಐಪಿಐಸಿ) ಅಡಿಯಲ್ಲಿ ನಿಕಟ ಸ್ನೇಹಿತ ಮತ್ತು ಪಾಲುದಾರ ರಾಷ್ಟ್ರವಾಗಿ ಭಾರತ ಪಪುವಾ ನ್ಯೂಗಿನಿಯಾದ ಜನರೊಂದಿಗೆ ಒಗ್ಗಟ್ಟಿನ ಸೂಚಕವಾಗಿ ತತ್ ಕ್ಷಣದ ಪರಿಹಾರವಾಗಿ 1 ಮಿಲಿಯನ್ ಡಾಲರ್ ಹಣವನ್ನು ನೀಡುವುದಾಗಿ ಘೋಷಣೆ ಮಾಡಿದೆ.
  • ಇಸ್ರೇಲ್ ಮೂಲದ ಹಾಗೂ ಸೈಬರ್ ಸೆಕ್ಯೂರಿಟಿಯಲ್ಲಿ ಮುಂಚೂಣಿಯಲ್ಲಿರುವ ಚೆಕ್ ಪಾಯಿಂಟ್ ಸಾಫ್ಟ್ ವೇರ್ ಕಂಪನಿ ಬೆಂಗಳೂರಿನಲ್ಲಿ ಕಚೇರಿಯನ್ನು ಆರಂಭಿಸುತ್ತಿದೆ. ಕಂಪನಿ, ಇಸ್ರೇಲ್ ಟೆಲ್ ಅವಿವ್ ಹೊರತುಪಡಿಸಿ ಬೆಂಗಳೂರಿನಲ್ಲಿ ತೆರೆಯುತ್ತಿರುವ ಅತಿದೊಡ್ಡ ಕಚೇರಿಯಾಗಿದೆ. ಜಾಗತಿಕವಾಗಿ ಸುಮಾರು 6 ಸಾವಿರ ನೌಕರರನ್ನು ಹೊಂದಿರುವ ಕಂಪನಿ ಜೂನ್ನಲ್ಲಿ ಬೆಂಗಳೂರು ಕಚೇರಿಯನ್ನು ಉದ್ಘಾಟಿಸಲಿದೆ. ಅಲ್ಲದೇ ದೆಹಲಿ, ಚೆನ್ನೈ ಮತ್ತು ಮುಂಬೈನಲ್ಲೂ ಭಾರತದ ಶಾಖೆಗಳನ್ನು ಹೊಂದಲಿದೆ ಎಂದು ಚೆಕ್ ಪಾಯಿಂಟ್ ಸಾಫ್ಟ್ ವೇರ್ ಭಾರತದ ಮುಖ್ಯಸ್ಥ ಸುಂದರ್ ಸುಬ್ರಮಣಿಯನ್ ತಿಳಿಸಿದ್ದಾರೆ. ಚೆಕ್ ಪಾಯಿಂಟ್ ಅಮೆರಿಕ ಸಹಯೋಗದ ಒಂದು ಜಾಗತಿಕ ಸಾಫ್ಟ್ ವೇರ್ ಕಂಪನಿಯಾಗಿದೆ.
  • ಹುತಾತ್ಮ ಭಾರತೀಯ ಶಾಂತಿಪಾಲಕನಿಗೆ ಪ್ರತಿಷ್ಠಿತ ಪದಕ: ವಿಶ್ವಸಂಸ್ಥೆಯಡಿ ಶಾಂತಿಪಾಲಕನಾಗಿ ಕರ್ತವ್ಯ ನಿರ್ವಹಿಸುವಾಗ ಹುತಾತ್ಮನಾದ ಭಾರತೀಯ ಸೇರಿದಂ ತೆ 60ಕ್ಕೂ ಹೆಚ್ಚು ಮಿಲಿಟರಿ, ಪೊಲೀಸ್ ಮತ್ತು ನಾಗರಿಕ ಶಾಂತಿಪಾಲಕರಿಗೆ ಮರಣೋತ್ತರವಾಗಿ ಪ್ರತಿಷ್ಠಿತ ಪದಕ ಘೋಷಿಸಲಾಗಿದೆ. ವಿಶ್ವಸಂಸ್ಥೆಯ ಶಾಂತಿಪಾಲಕರ ಅಂತರರಾಷ್ಟ್ರೀಯ ದಿನಾಚರಣೆ ಸಂದರ್ಭ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಸೇವೆ ಸಲ್ಲಿಸುವಾಗ ಹುತಾತ್ಮರಾದ ನಾಯಕ್ ಧನಂಜಯ್ ಕುಮಾರ್ ಸಿಂಗ್ ಅವರಿಗೆ ಮರಣೋತ್ತರವಾಗಿ ಡಾಗ್ ಹಮ್ಮರ್ಕ್‌ ಜೋಲ್ಡ್ ಪದಕ ನೀಡಿ ಗೌರವಿಸಲಾಗುವುದು.
  • ರಾಧಿಕಾ ಸೆನ್ ವಿಶ್ವಸಂಸ್ಥೆಯ ವಾರ್ಷಿಕ ಪ್ರಶಸ್ತಿ: ಸೇನೆಯಲ್ಲಿ ಲಿಂಗ ಸಮಾನತೆಯನ್ನು ಪ್ರತಿಪಾದಿಸುವ ಪ್ರಮುಖರಿಗೆ ವಿಶ್ವಸಂಸ್ಥೆ ನೀಡಲಿರುವ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಯ 2023ನೇ ಸಾಲಿಗೆ ಭಾರತದ ಮೇಜರ್ ರಾಧಿಕಾ ಸೆನ್ ಅವರು ಆಯ್ಕೆಯಾಗಿದ್ದಾರೆ. ರಾಧಿಕಾ ಸೆನ್ ಅವರು ಪ್ರಸ್ತುತ ಕಾಂಗೊದಲ್ಲಿ ವಿಶ್ವಸಂಸ್ಥೆಯ ಸೇವಾ ಚಟುವಟಕೆಗಳಲ್ಲಿ ತೊಡಗಿದ್ದಾರೆ. ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ಅವರು ಸೆನ್ ಅವರನ್ನು, ‘ನಿಜವಾದ ಮಾದರಿ ನಾಯಕಿ’ ಎಂದು ಬಣ್ಣಿಸಿದ್ದಾರೆ. ಕಾಂಗೊದಲ್ಲಿ ಅವರು 2023ರಮಾರ್ಚ್‌ ನಿಂದ ಇಂಡಿಯನ್ ರ‍್ಯಾಪಿಡ್ ಡೆಪ್ಲಾಯ್ಮೆಂಟ್ ಬೆಟಾಲಿಯನ್ (ಐಎನ್ಡಿಆರ್ಡಿಬಿ) ಕಮಾಂಡರ್ ಆಗಿದ್ದಾರೆ. ರಾಧಿಕಾ ಸೆನ್ ಅವರು ಹಿಮಾಚಲ ಪ್ರದೇ ಶದಲ್ಲಿ 1993ರಲ್ಲಿ ಜನಿಸಿದ್ದರು. ಭಾರತೀಯ ಸೇನೆಗೆ ಎಂಟು ವರ್ಷಗಳ ಹಿಂದೆ ಸೇರ್ಪಡೆಯಾಗಿದ್ದರು. ಇವರು ಬಾಂಬೆ ಐಐಟಿಯಲ್ಲಿ ಜೈವಿಕ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
  • ಏಷ್ಯನ್ ಜಿಮ್ನಾಸ್ಟಿಕ್ಸ್ ಚಾಂಪಿಯನ್ಷಿಪ್: ಉಜ್ಬೇಕಿಸ್ಥಾನದ ತಾಸ್ಕೆಂಟ್ ನಲ್ಲಿ ನಡೆದ ಏಷ್ಯನ್ ಸೀನಿಯರ್ ಜಿಮ್ನಾಸ್ಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಭಾರತದ ತ್ರಿಪುರ ರಾಜ್ಯದವರಾದ ದೀಪಾ ಕರ್ಮಾಕರ್, ಮಹಿಳಯರ ವಾಲ್ಟ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದರು. ಈ ಸಾಧನೆ ಮಾಡಿದ ಭಾರತದ ಮೊದಲ ಜಿಮ್ನಾಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಉತ್ತರ ಕೊರಿಯಾದ ಕಿಮ್ ಸನ್ಯಾಂಗ್ (13.466) ಹಾಗೂ ಜೊಯಾಂಗ್ ಬಿಯಾಲ್ (12.966) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು. ಇಡೀ ಚಾಂಪಿಯನ್ಷಿಪ್ನ ಆಲ್ರೌಂಡ್ ವಿಭಾಗದಲ್ಲಿ ಅವರು ಒಟ್ಟು 46.166 ಅಂ ಕ ಗಳಿಸಿ, 16ನೇ ಸ್ಥಾನ ಪಡೆದರು. 2015ರ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ದೀಪಾ ಅವರು ಕಂಚು ಪಡೆದಿದ್ದರು.  2019 ಹಾಗೂ 2022ರಲ್ಲಿ ಪ್ರಣತಿ ನಾಯಕ ಅವರು ಕಂಚಿನ ಪದಕಗಳನ್ನು ಗಳಿಸಿದ್ದರು. ಅವರೂ ವಾಲ್ಟ್ ವಿಭಾಗದಲ್ಲಿಯೇ ಸಾಧನೆಮಾಡಿದ್ದರು. ಆದರೆ ಚಿನ್ನ ಗೆದ್ದ ಭಾರತದ ಮೊದಲ ಸ್ಪರ್ಧಿ ದೀಪಾ ಆಗಿದ್ದಾರೆ. 2016ರ ರಿಯೊಒಲಿಂಪಿಕ್ಸ್ನಲ್ಲಿ ಅವರು ನಾಲ್ಕನೇ ಸ್ಥಾನ ಗಳಿಸಿದ್ದರು. ಟರ್ಕಿಯ ಮರ್ಸಿನ್ನಲ್ಲಿ 2018ರಲ್ಲಿ ನಡೆದಿದ್ದ ಎಫ್ಐಜಿ ವಿಶ್ವಕಪ್ ಟೂರ್ನಿಯಲ್ಲಿಯೂ ದೀಪಾ ಚಿನ್ನದ ಪದಕ ಜಯಿಸಿ ಸಾಧನೆ ಮಾಡಿದ್ದರು.