Published on: July 3, 2024

ಕೃತಕ ಬುದ್ಧಿಮತ್ತೆಯ ಸಿದ್ಧತೆ ಸೂಚ್ಯಂಕ (AIPI)

ಕೃತಕ ಬುದ್ಧಿಮತ್ತೆಯ ಸಿದ್ಧತೆ ಸೂಚ್ಯಂಕ (AIPI)

ಸುದ್ದಿಯಲ್ಲಿ ಏಕಿದೆ? ಇತ್ತೀಚೆಗೆ, ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಕೃತಕ ಬುದ್ಧಿಮತ್ತೆಯ ಸಿದ್ಧತೆ ಸೂಚ್ಯಂಕ (AIPI) ಡ್ಯಾಶ್‌ಬೋರ್ಡ್ ಅನ್ನು ಬಿಡುಗಡೆ ಮಾಡಿದೆ.

ಮುಖ್ಯಾಂಶಗಳು

  • ಭಾರತವು ಒಟ್ಟು 174 ದೇಶಗಳಲ್ಲಿ 72 ನೇ ಸ್ಥಾನದಲ್ಲಿದೆ, ಬಾಂಗ್ಲಾದೇಶ (0.38) 113, ಶ್ರೀಲಂಕಾ (0.43) 92 ಮತ್ತು ಚೀನಾ (0.63) 31 ನೇ ಸ್ಥಾನದಲ್ಲಿವೆ
  • AI ಯ ಸಂಭಾವ್ಯ ಪ್ರಯೋಜನಗಳನ್ನು ಹತೋಟಿಯಲ್ಲಿಡಲು ಮತ್ತು ಅಪಾಯಗಳನ್ನು ನಿರ್ವಹಿಸುವಲ್ಲಿ ದೇಶಗಳು ಸಿದ್ದತೆಯನ್ನು ಮಾಡಿಕೊಳ್ಳುವಲ್ಲಿ ಯಾವ ಹಂತದಲ್ಲಿವೆ ಎಂಬುವುದನ್ನು ತೋರಿಸುತ್ತದೆ

ಕೃತಕ ಬುದ್ಧಿಮತ್ತೆಯ ಸಿದ್ಧತೆ ಸೂಚ್ಯಂಕ (AIPI) ಕುರಿತು:

  • ಇದು 174 ದೇಶಗಳಲ್ಲಿ AI ಸನ್ನದ್ಧತೆಯ ಮಟ್ಟವನ್ನು ನಿರ್ಣಯಿಸುತ್ತದೆ.
  • ಡಿಜಿಟಲ್ ಮೂಲಸೌಕರ್ಯ, ಮಾನವ ಬಂಡವಾಳ ಮತ್ತು ಕಾರ್ಮಿಕ ಮಾರುಕಟ್ಟೆ ನೀತಿಗಳು, ನಾವೀನ್ಯತೆ ಮತ್ತು ಆರ್ಥಿಕ ಏಕೀಕರಣ, ಮತ್ತು ನಿಯಂತ್ರಣ ಮತ್ತು ನೈತಿಕತೆ – ನಾಲ್ಕು ಪ್ರಮುಖ ಕ್ಷೇತ್ರಗಳಲ್ಲಿನ ಸನ್ನದ್ಧತೆಯ ಮೌಲ್ಯಮಾಪನದ ಆಧಾರದ ಮೇಲೆ ಪ್ರತಿ ದೇಶಕ್ಕೆ ರೇಟಿಂಗ್ ನೀಡಲಾಗುತ್ತದೆ.

ಸೂಚ್ಯಂಕವು ದೇಶಗಳನ್ನು ಮೂರು ಗುಂಪುಗಳಲ್ಲಿ ವಿಂಗಡಿಸುತ್ತದೆ 

  • ಸುಧಾರಿತ ಆರ್ಥಿಕತೆ (AE), ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆ (EM), ಮತ್ತು ಕಡಿಮೆ ಆದಾಯದ ದೇಶ (LIC) ಎಂದು ವರ್ಗೀಕರಿಸಿದೆ.
  • ಸಿಂಗಾಪುರ್ (0.80), ಡೆನ್ಮಾರ್ಕ್ (0.78), ಮತ್ತು ಯುನೈಟೆಡ್ ಸ್ಟೇಟ್ಸ್ (0.77) ಅತ್ಯಧಿಕ- ರೇಟಿಂಗನೊಂದಿಗೆ ಸುಧಾರಿತ ಆರ್ಥಿಕತೆಗಳಲ್ಲಿ ಸೇರಿವೆ,
  • ಭಾರತವನ್ನು 0.49 ರೇಟಿಂಗ್‌ನೊಂದಿಗೆ ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆ ಎಂದು ವರ್ಗೀಕರಿಸಲಾಗಿದೆ.

 ಅಂತರರಾಷ್ಟ್ರೀಯ ಹಣಕಾಸು ನಿಧಿ(IMF)

  • ಪಾವತಿಗಳ ಸಮತೋಲನ ಮತ್ತು ತಾಂತ್ರಿಕ ಸಹಾಯವನ್ನು ಸುಲಭಗೊಳಿಸಲು ಸಹಾಯ ಮಾಡಲು ದೇಶಗಳಿಗೆ ತಾತ್ಕಾಲಿಕ ಹಣಕಾಸಿನ ನೆರವು ನೀಡುವ ಮೂಲಕ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗವನ್ನು ಉತ್ತೇಜಿಸುತ್ತದೆ.
  • ಇದನ್ನು 1944 ರಲ್ಲಿ ಬ್ರೆಟನ್ ವುಡ್ಸ್ ಸಮ್ಮೇಳನದಲ್ಲಿ ಅಂತರರಾಷ್ಟ್ರೀಯ ವಿತ್ತೀಯ ವ್ಯವಸ್ಥೆಯನ್ನು ಪುನರ್ನಿರ್ಮಿಸುವ ಗುರಿಯೊಂದಿಗೆ ರಚಿಸಲಾಯಿತು.
  • IMF ನೀಡುವ ಪ್ರಮುಖ ವರದಿಗಳು: ವಿಶ್ವ ಆರ್ಥಿಕ ಹೊರನೋಟ ಮತ್ತು ಜಾಗತಿಕ ಹಣಕಾಸು ಸ್ಥಿರತೆ ವರದಿ
  • ಪ್ರಧಾನ ಕಛೇರಿ: ವಾಷಿಂಗ್ಟನ್, DC, USA.