Published on: July 11, 2024
ಜೊರಾವರ್ ಲಘು ಯುದ್ಧ ಟ್ಯಾಂಕ್
ಜೊರಾವರ್ ಲಘು ಯುದ್ಧ ಟ್ಯಾಂಕ್
ಸುದ್ದಿಯಲ್ಲಿ ಏಕಿದೆ? ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಗುಜರಾತ್ನ ಹಜಿರಾದಲ್ಲಿ ಭಾರತದ ಸ್ವದೇಶೀ ನಿರ್ಮಿತ ಲಘು ಯುದ್ಧ ಟ್ಯಾಂಕ್ ಜೊರಾವರ್ ಅನ್ನು ಪರೀಕ್ಷಿಸಿದೆ ಹಾಗೂ ಅನಾವರಣ ಮಾಡಿದೆ.
ಮುಖ್ಯಾಂಶಗಳು
- ಈ ಟ್ಯಾಂಕ್ಗಳನ್ನು ಕಡಿದಾದ ಚೀನಾ-ಲಡಾಖ್ ಗಡಿಯಲ್ಲಿ ನಿಯೋಜಿಸಲಾಗುತ್ತದೆ.
- ಡಿಆರ್ಡಿಒ ಮತ್ತು ಲಾರ್ಸೆನ್ ಮತ್ತು ಟೂಬ್ರೊ ಜಂಟಿಯಾಗಿ ಅಭಿವೃದ್ಧಿಪಡಿಸಿವೆ.
- ಟ್ಯಾಂಕ್ 2027 ರ ವೇಳೆಗೆ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ.
- 19 ನೇ ಶತಮಾನದಲ್ಲಿ ಜಮ್ಮುವಿನ ರಾಜಾ ಗುಲಾಬ್ ಸಿಂಗ್ ಅಡಿಯಲ್ಲಿ ಸೇವೆ ಸಲ್ಲಿಸಿದ ಮಿಲಿಟರಿ ಜನರಲ್ ಜೋರಾವರ್ ಸಿಂಗ್ ಕಹ್ಲುರಿಯಾ ಅವರ ಹೆಸರನ್ನು ಇಡಲಾಗಿದೆ.
ವಿಶೇಷತೆಗಳು
- ಭಾರವಾದ ಟಿ-72 ಮತ್ತು ಟಿ-90 ಟ್ಯಾಂಕ್ಗಳಿಗಿಂತ ಹಗುರವಾದ ಮತ್ತು ನೀರು/ಭೂಮಿಯಲ್ಲಿ ಚಲಿಸಬಹುದಾದ ಸಾಮರ್ಥ್ಯಗಳನ್ನು ಹೊಂದಿದೆ(ಇದು ಭೂಮಿ ಮತ್ತು ನೀರಿನಿಂದ ಕೂಡ ಕಾರ್ಯನಿರ್ವಹಿಸಬಹುದು)
- ತೂಕ : 25 ಟನ್
- ಪರ್ವತಗಳಲ್ಲಿ ಕಡಿದಾದ ಆರೋಹಣಗಳ ಮೂಲಕ ಮತ್ತು ನದಿಗಳು ಮತ್ತು ಇತರ ಜಲಮೂಲಗಳನ್ನು ಸುಲಭವಾಗಿ ದಾಟುತ್ತವೆ.
- ವೇಗ: 70km/h(ಆಫ್ ರೋಡ್: 35/40km/h
3 ಜನ ವ್ಯಕ್ತಿಗಳು ಕೂರಬಹುದು