Published on: July 11, 2024

ಚುಟುಕು ಸಮಾಚಾರ : 9 and 10 ಜುಲೈ 2024

ಚುಟುಕು ಸಮಾಚಾರ : 9 and 10 ಜುಲೈ 2024

  • ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಗೋದಾವರಿ–ಕೃಷ್ಣಾ–ಕಾವೇರಿ–ಪೆನ್ನಾರ್ ನದಿಗಳ ಜೋಡಣೆಯಿಂದ ಕರ್ನಾಟಕ ರಾಜ್ಯಕ್ಕೆ ನೀರಿನ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಕರ್ನಾಟಕ ಸರ್ಕಾರ, ಈ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದೆ.ನದಿ ಜೋಡಣೆಯಾದ ಬಳಿಕ ದಕ್ಷಿಣದ ರಾಜ್ಯ ಗಳಿಗೆ 147 ಟಿಎಂಸಿ ಅಡಿ ನೀರು ಲಭ್ಯವಾಗಲಿದೆ. ಕರ್ನಾಟಕಕ್ಕೆ 10.74 ಟಿಎಂಸಿ ಅಡಿ ನೀರು ನಿಗದಿಪಡಿಸಲಾಗಿದೆ.
  • ಕರ್ನಾಟಕ ಮುಖ್ಯಮಂತ್ರಿ ಅವರು 2024–25ರ ಬಜೆಟ್ನಲ್ಲಿ ಘೋಷಿಸಿದ್ದ ‘ನಾವು ಮನುಜರು’ ಕಾರ್ಯಕ್ರಮವನ್ನು ಎಲ್ಲಾ ಶಾಲಾ-ಕಾಲೇಜುಗಳಲ್ಲೂ ಆರಂಭಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆ ಹೊರಡಿಸಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಕಾರ್ಯಕ್ರಮ ಜಾರಿಗೊಳಿಸಲು ಸೂಚಿಸಲಾಗಿದೆ. ವಾರಕ್ಕೆ ಎರಡು ಗಂಟೆಗಳನ್ನು (ತಲಾ 40 ನಿಮಿಷಗಳ ಮೂರು ಕಾರ್ಯಕ್ರಮ) ಮೀಸಲಿಡಲು ಸೂಚಿಸಲಾಗಿದೆ. ಈ ಅವಧಿಯಲ್ಲಿ ಸಾಮಾಜಿಕ ಸಾಮರಸ್ಯ, ವೈಜ್ಞಾನಿಕ ಮನೋಭಾವ, ಮೌಲ್ಯಯುತ ಶಿಕ್ಷಣ ಮತ್ತು ಸಹಬಾಳ್ವೆಯನ್ನು ಉತ್ತೇಜಿಸಲು ಸಂಪನ್ಮೂಲ ವ್ಯಕ್ತಿಗಳು, ತಜ್ಞರನ್ನು ಆಹ್ವಾನಿಸಿ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ದೇಶದ ಸಮಾಜ ಸುಧಾರಕರು, ಕ್ರಾಂತಿಗಳ ಮಾಹಿತಿ ಒದಗಿಸುವುದು, ಸಮೀಪದ ಐತಿಹಾಸಿಕ ಸ್ಥಳಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವುದು, ಸಮಾಜದಲ್ಲಿನ ಅಸಮಾನತೆ ನಿವಾರಣೆ ಕುರಿತು ಚರ್ಚೆಗಳನ್ನು ಆಯೋಜಿಸಲಿದೆ.
  • ಮಿದುಳು ತಿನ್ನುವ ಅಮೀಬಾ ಸೋಂಕು ಎಂದು ಕರೆಯಲಾಗುವ ಅಮೀಬಿಕ್ ಮೆನಿಂಗೊಎನ್ಸೆಫಲಿಟಿಸ್(ಈ ಕಾಯಿಲೆಯ ವೈಜ್ಞಾನಿಕ ಹೆಸರು) ಎಂಬ ಕಾಯಿಲೆ ನೆರೆಯ ಕೇರಳ ರಾಜ್ಯದಲ್ಲಿ ಕಂಡುಬಂದಿದೆ. ಕೇರಳದಲ್ಲಿ ಹೆಚ್ಚು ಕಂಡುಬರಲು ಕಾರಣ: ಕೇರಳದ ಪರಿಸರ ಮತ್ತು ವಾತಾವರಣವು ನೆಗ್ಲೇರಿಯಾ ಫೌಲೆರಿಯ ಬೆಳವಣಿಗೆಗೆ ಪೂರಕವಾಗಿರುವುದರಿಂದ ಈ ಕಾಯಿಲೆ ಹೆಚ್ಚು ವರದಿಯಾಗುತ್ತದೆ. ಮಿದುಳಿಗೆ ಹಾನಿಮಾಡುವಂತಹ ನೆಗ್ಲೇರಿಯಾ ಫೌಲೆರಿ ಎನ್ನುವ ಹೆಸರಿನ ಪರಾವಲಂಬಿ ಏಕಕೋಶ ಜೀವಿಯಿಂದ ಬರುವ ಸೋಂಕು. ಇದು ಸಾಮಾನ್ಯವಾಗಿ ಕಲುಷಿತಗೊಂಡ ಕೆರೆ, ಕುಂಟೆ, ನದಿಗಳ ಬೆಚ್ಚನೆಯ ನೀರಿನಲ್ಲಿ ಅಭಿವೃದ್ಧಿ ಹೊಂದುತ್ತದೆ. ನಿರ್ವಹಣೆಯ ಕೊರತೆ ಇರುವ ಈಜುಕೊಳಗಳಲ್ಲಿಯೂ ಕಂಡುಬರುತ್ತದೆ.  ಈಜಾಡುವಾಗ, ಮೇಲಿನಿಂದ ನೀರಿನೊಳಗೆ ಧುಮುಕಿದಾಗ ಮತ್ತು ಇತರ ಸಂದರ್ಭ ಗಳಲ್ಲಿ ಮೂಗಿನ ಮೂಲಕ ಮನುಷ್ಯನ ದೇಹ ಪ್ರವೇಶಿಸುತ್ತದೆ
  • ಕಝಾಕಿಸ್ತಾನ್ (ಅಸ್ತಾನಾ) ಶಾಂಘೈ ಸಹಕಾರ ಸಂಸ್ಥೆಯ (SCO) 24 ನೇ ಶೃಂಗಸಭೆಯನ್ನು ಆಯೋಜಿಸಿತ್ತು. SCO ಗೆ ಬೆಲಾರಸ್ 10 ನೇ ಸದಸ್ಯ ರಾಷ್ಟ್ರವಾಗಿ ಸೇರಿಕೊಂಡಿದೆ.ಇದನ್ನು ಆಸ್ತಾನಾ ಘೋಷಣೆ ಎಂದು ಕರೆಯುತ್ತಾರೆ. ಘೋಷಣೆಯ ಅಡಿಯಲ್ಲಿ 2025-2027ಕ್ಕೆ ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದವನ್ನು ಎದುರಿಸಲು ಸಹಕಾರ ಕಾರ್ಯಕ್ರಮ, 2024-2029 ಕ್ಕೆ ಮಾದಕ ದ್ರವ್ಯ ವಿರೋಧಿ ತಂತ್ರ, 2035 ರವರೆಗೆ SCO ಅಭಿವೃದ್ಧಿ ಕಾರ್ಯತಂತ್ರವನ್ನು ಅಳವಡಿಸಲಾಗಿದೆ.
  • ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಗುಜರಾತ್ನ ಹಜಿರಾದಲ್ಲಿ ಭಾರತದ ಸ್ವದೇಶೀ ನಿರ್ಮಿತ ಲಘು ಯುದ್ಧ ಟ್ಯಾಂಕ್ ಜೊರಾವರ್ ಅನ್ನು ಪರೀಕ್ಷಿಸಿದೆ ಹಾಗೂ ಅನಾವರಣ ಮಾಡಿದೆ. ಈ ಟ್ಯಾಂಕ್ಗಳನ್ನು ಕಡಿದಾದ ಚೀನಾ-ಲಡಾಖ್ ಗಡಿಯಲ್ಲಿ ನಿಯೋಜಿಸಲಾಗುತ್ತದೆ. ಡಿಆರ್ಡಿಒ ಮತ್ತು ಲಾರ್ಸೆನ್ ಮತ್ತು ಟೂಬ್ರೊ ಜಂಟಿಯಾಗಿ ಅಭಿವೃದ್ಧಿಪಡಿಸಿವೆ.
  • 2024 ರ ಜುಲೈ 21 ರಿಂದ 31 ರವರೆಗೆ ನವದೆಹಲಿಯಲ್ಲಿ ನಡೆಯುತ್ತಿರುವ ವಿಶ್ವ ಪರಂಪರೆ ಸಮಿತಿ ಸಭೆಯ 46 ನೇ ಅಧಿವೇಶನದ ಸಂದರ್ಭದಲ್ಲಿ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು ಪ್ರಾಜೆಕ್ಟ್ ಪರಿ (ಭಾರತದ ಸಾರ್ವಜನಿಕ ಕಲೆ) ಅನ್ನು ಪ್ರಾರಂಭಿಸಿದೆ. ಇದು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಉಪಕ್ರಮವಾಗಿದೆ, ಇದನ್ನು ಲಲಿತ ಕಲಾ ಅಕಾಡೆಮಿ ಮತ್ತು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ನಿರ್ವಹಿಸುತ್ತದೆ. ಸಂವಾದ, ಪ್ರತಿಬಿಂಬ ಮತ್ತು ಸ್ಫೂರ್ತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ, ಇದು ರಾಷ್ಟ್ರದ ಕ್ರಿಯಾತ್ಮಕ ಸಾಂಸ್ಕೃತಿಕ ರಚನೆಗೆ ಕೊಡುಗೆ ನೀಡುತ್ತದೆ. ಪ್ರಾಜೆಕ್ಟ್ ಪರಿಗಾಗಿ ರಚಿಸಲಾಗುತ್ತಿರುವ ಪ್ರಸ್ತಾವಿತ ಶಿಲ್ಪಗಳಲ್ಲಿ ಪ್ರಕೃತಿಗೆ ಗೌರವ ಸಲ್ಲಿಸುವುದು, ನಾಟ್ಯಶಾಸ್ತ್ರದಿಂದ ಪ್ರೇರಿತವಾದ ವಿಚಾರಗಳು, ಗಾಂಧೀಜಿ, ಭಾರತದ ಆಟಿಕೆಗಳು, ಆತಿಥ್ಯ, ಪ್ರಾಚೀನ ಜ್ಞಾನ, ನಾದ, ಜೀವನದ ಸಾಮರಸ್ಯ, ಕಲ್ಪತರು(ದೈವಿಕ ಮರ) ಮುಂತಾದ ವ್ಯಾಪಕವಾದ ಕಲ್ಪನೆಗಳು ಸೇರಿವೆ.
  • ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್) ಕೇರಳದ ಕೊಲ್ಲಂನಲ್ಲಿ ತನ್ನ ಮೊದಲ ಉಪಕ್ರಮವನ್ನು ಗುರುತಿಸುವ ಮೂಲಕ ಕುಲತುಪುಳ ಗ್ರಾಮ ಪಂಚಾಯತ್ನಲ್ಲಿ ಸಮಗ್ರ ಬುಡಕಟ್ಟು ಅಭಿವೃದ್ಧಿ ಕಾರ್ಯಕ್ರಮವನ್ನು ಪ್ರಾರಂಭಿಸಲಿದೆ. ಅನುಷ್ಠಾನ ಸಂಸ್ಥೆ: ಥಾನಲ್ ಎಂಬ ಪರಿಸರ ಸಂಘಟನೆ. ಐದು ವರ್ಷಗಳ ಉಪಕ್ರಮವು ಎಂಟು ಕುಗ್ರಾಮಗಳಲ್ಲಿ ವಾಸಿಸುವ 413 ಕುಟುಂಬಗಳ ಸುಸ್ಥಿರ ಜೀವನೋಪಾಯ ಮತ್ತು ಕೃಷಿ ವರ್ಧನೆಯ ಗುರಿಯನ್ನು ಹೊಂದಿದೆ.
  • ಮುಂದಿನ 10 ವರ್ಷಗಳವರೆಗೆ ರಸ್ತೆ ಸುರಕ್ಷತೆಗಾಗಿ ಕ್ರಿಯಾ ಯೋಜನೆಯನ್ನು ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ರಾಜಸ್ಥಾನ ಪಾತ್ರವಾಗಲಿದೆ. ಕ್ರಿಯಾ ಯೋಜನೆಯು 2030 ರವರೆಗೆ ರಾಜ್ಯದಲ್ಲಿ ರಸ್ತೆ ಅಪಘಾತಗಳನ್ನು 50% ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ವಿಶ್ವಬ್ಯಾಂಕ್ ವಿವಿಧ ದೇಶಗಳಲ್ಲಿ ಅಳವಡಿಸಿಕೊಂಡಿರುವ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಂಡು ಕ್ರಿಯಾ ಯೋಜನೆ ಮತ್ತು ರಸ್ತೆ ಸುರಕ್ಷತಾ ನೀತಿಯನ್ನು ತಯಾರಿಸಲು ರಾಜ್ಯ ಸರ್ಕಾರಕ್ಕೆ ನೆರವು ನೀಡುತ್ತದೆ. ಮೂರು ಹಂತಗಳಲ್ಲಿ ಕ್ರಿಯಾ ಯೋಜನೆ ಜಾರಿಯಾಗಲಿದೆ. ಮೊದಲ ಹಂತ 2025 ರಿಂದ 2027 ರವರೆಗೆ, ಎರಡನೆಯದು 2027 ರಿಂದ 2030 ರವರೆಗೆ ಮತ್ತು ಮೂರನೆಯದು 2030 ರಿಂದ 2033 ರವರೆಗೆ.
  • ಗಗನಯಾನದಿಂದ ಆರೋಗ್ಯದ ಮೇಲೆ ಪರಿಣಾಮ: ಅತ್ಯಲ್ಪ ಕಾಲದ ಬಾಹ್ಯಾಕಾಶಯಾನವೂ ಗಗನಯಾತ್ರಿಗಳ ಜೈವಿಕ ಗಡಿಯಾರದ ಮೇಲೆ, ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಎಂದು ನೂತನ ಅಧ್ಯಯನವೊಂದು ತಿಳಿಸಿದೆ. ಈವರೆಗೆ ಕೇವಲ 600 ಜನರುಮಾತ್ರ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ್ದಾರೆ. ನಾಸಾದ ಅವಳಿಗಳ ಸಂಶೋಧನೆಯ ಭಾಗವಾಗಿ ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ತಿಳಿಸಲಾಗಿದೆ. ಕೊಲೊರಾಡೊ ಸ್ಟೇಟ್ ವಿಶ್ವವಿದ್ಯಾಲಯದ ಪರಿಸರ ಮತ್ತು ರೇಡಿಯಾಲಜಿಕಲ್ ಹೆಲ್ತ್ ಸೈನ್ಸ್ ಇಲಾಖೆಯ ಕ್ಯಾನ್ಸರ್ ಜೀವಶಾಸ್ತ್ರಜ್ಞರು ಮತ್ತು ಸಹೋದ್ಯೋಗಿಗಳು ಈ ಸಂಶೋಧನೆ ನಡೆಸಿದ್ದಾರೆ. ನಾಸಾ ತನ್ನ ಯೋಜನೆಗಾಗಿ ಗಗನಯಾತ್ರಿ ಸ್ಕಾಟ್ ಕಿಲೆ ಅವರನ್ನು ಆಯ್ಕೆ ಮಾಡಿಕೊಂಡಿತ್ತು. ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಅವರು 2015ರಿಂದ 2016ರ ವರೆಗೆ ಇದ್ದರು. ಇದೇ ಅವಧಿಯಲ್ಲಿ ಅವರ ಅವಳಿ ಸಹೋದರ, ಮಾಜಿ ಗಗನಯಾತ್ರಿ ಮಾರ್ಕ್‌ ಕಿಲೆ ಭೂಮಿಯ ಮೇಲೆ ಇದ್ದರು. ತಂಡವು ಇಬ್ಬರ ರಕ್ತದ ಮಾದರಿಗಳನ್ನು ಪಡೆದಿತ್ತು. ಸ್ಕಾಟ್ ಅವರು ಬಾಹ್ಯಾಕಾಶದಲ್ಲಿ ಇದ್ದ ಸಂದರ್ಭದಲ್ಲಿ ಅವರ ಟೆಲೊಮೇರ್ಗಳು (ಕ್ರೋಮೊಝೋಮುಗಳ (ವರ್ಣ ತಂತು) ಕೊನೆಯಲ್ಲಿ ಇರುವ ರಕ್ಷಣಾ ಕ್ಯಾಪ್) ಉದ್ದವಾಗಿತ್ತು. ಅವರು ಭೂಮಿಗೆ ಮರಳಿದ ನಂತರ ಟೆಲೊಮೇರ್ಗಳು ಚಿಕ್ಕದಾಗುತ್ತ ಬಂದವು.