Published on: July 16, 2024
ಚಂಡೀಪುರ ವೈರಸ್ ಸೋಂಕು
ಚಂಡೀಪುರ ವೈರಸ್ ಸೋಂಕು
ಸುದ್ದಿಯಲ್ಲಿ ಏಕಿದೆ? ಗುಜರಾತ್ನ ಸಬರಕಾಂತ ಜಿಲ್ಲೆಯಲ್ಲಿ ಚಂಡೀಪುರ ವೈರಸ್ ಸೋಂಕಿಗೆ ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ. ಸೋಂಕು ಉಲ್ಬಣವಾಗಿರುವ ಹಿನ್ನೆಲೆ ಜಿಲ್ಲಾಧಿಕಾರಿಗಳು ಸೋಂಕಿನ ತಡೆಗೆ ಸೋಂಕಿತ ಪ್ರದೇಶದಲ್ಲಿ ಮರಳುನೊಣ(sandfly)ಗಳನ್ನು ತಡೆಗಟ್ಟಲು ಮುಂದಾಗಿದ್ದಾರೆ.
ವೈರಸ್ ಬಗ್ಗೆ
- ಚಂಡಿಪುರ ವೆಸಿಕ್ಯುಲೋವೈರಸ್ (CHPV) ಮಾನವರಲ್ಲಿ ಎನ್ಸೆಫಾಲಿಟಿಕ್(ಮಿದುಳಿಗೆ ಸಂಬಂಧಿಸಿದ) ಕಾಯಿಲೆಗೆ ಸಂಬಂಧಿಸಿದ ರಾಬ್ಡೋವಿರಿಡೆ ಕುಟುಂಬಕ್ಕೆ ಸೇರಿದೆ.
- ವೈರಸ್ ಸೊಳ್ಳೆಗಳು, ಉಣ್ಣಿ ಮತ್ತು ಮರಳುನೊಣಗಳಂತಹ ವಾಹಕಗಳ ಮೂಲಕ ಹರಡುತ್ತದೆ.
- ಇದನ್ನು ಮೊದಲು 1965 ರಲ್ಲಿ ಭಾರತದ ಮಹಾರಾಷ್ಟ್ರ ರಾಜ್ಯದ ಚಂಡಿಪುರ ಗ್ರಾಮದಲ್ಲಿ ಕಂಡುಬಂದಿದ್ದರಿಂದ ಈ ಹೆಸರಿನಿಂದ ಕರೆಯಲಾಗುತ್ತದೆ.
- ಭಾರತವನ್ನು ಹೊರತುಪಡಿಸಿ ಸೆನೆಗಲ್ ಮತ್ತು ನೈಜೀರಿಯಾದಲ್ಲಿ ಕಂಡುಬಂದಿದೆ
- ವೈರಸ್ ಪ್ರಧಾನವಾಗಿ 2-16 ವರ್ಷದೊಳಗಿನ ಮಕ್ಕಳಿಗೆ ತಗುಲುತ್ತದೆ.
- ಇದು ರೇಬೀಸ್‌ಗೆ ಕಾರಣವಾಗುವ ವೈರಸ್ ನ ಸಂಬಂಧವನ್ನು ಹೊಂದಿದೆ ಮತ್ತು 55-75 ಪ್ರತಿಶತದಷ್ಟು ಸಾವು ಸಂಭವಿಸುತ್ತದೆ.
- ವೈಯಕ್ತಿಕ ರಕ್ಷಣಾ ಕ್ರಮಗಳು ಮತ್ತು ಪರಿಸರ ನಿಯಂತ್ರಣದ ಮೂಲಕ ಈ ರೋಗವನ್ನು ತಡೆಗಟ್ಟಬಹುದಾಗಿದೆ.
ರೋಗಲಕ್ಷಣಗಳು
ತಲೆನೋವು ಮತ್ತು ಹಠಾತ್ ಅಧಿಕ ಜ್ವರ, ನಡುಕ, ವಾಂತಿ ಮತ್ತು ವಾಕರಿಕೆ ಮತ್ತು ಪ್ರಜ್ಞಾಹೀನತೆ, ಅನಾರೋಗ್ಯ, ಕೋಮಾ ಮತ್ತು ಸಾವಿಗೆ ಕಾರಣವಾಗಬಹುದು.