Published on: September 6, 2021
ತೇಜಸ್
ತೇಜಸ್
ಸುದ್ಧಿಯಲ್ಲಿ ಏಕಿದೆ? ಸ್ವದೇಶಿ ಹಗುರ ಯುದ್ಧ ವಿಮಾನ ‘ತೇಜಸ್’ ಇನ್ನೂ 99 ಎಂಜಿನ್‌ಗಳ ಖರೀದಿಗೆ ಜನರಲ್ ಎಲೆಕ್ಟ್ರಿಕ್ (ಜಿಇ) ಜತೆಗೆ ಎಚ್‌ಎಎಲ್ ಒಪ್ಪಂದ ಮಾಡಿಕೊಂಡಿದೆ. ಆದರೆ, ಈ ಯುದ್ಧ ವಿಮಾನಕ್ಕೆ ಅಪ್ಪಟ ಸ್ವದೇಶಿ ನಿರ್ಮಿತ ಎಂಜಿನ್ (ಕಾವೇರಿ) ಅಳವಡಿಸಬೇಕು ಎಂಬ ಬಹುಕಾಲದ ಕನಸು ಇನ್ನು ನನಸಾಗಿಲ್ಲ.
ಕಾವೇರಿ ಎಂಜಿನ್ ಅಳವಡಿಸಿಕೊಳ್ಳುವ ಅಗತ್ಯ
- 2001 ರಿಂದಲೂ ‘ತೇಜಸ್’ಗೆ ಅಮೆರಿಕದ ಜಿಇ ನಿರ್ಮಿತ ಎಫ್ 404–ಐಎನ್ 20 ಎಂಜಿನ್ ಅನ್ನೇ ಬಳಸಲಾಗುತ್ತಿದೆ. ಇದೀಗ ಎಚ್‌ಎಎಲ್ ದೊಡ್ಡ ಪ್ರಮಾಣದಲ್ಲಿ ಅಂದರೆ 99 ಎಂಜಿನ್‌ಗಳನ್ನು ಖರೀದಿಸುತ್ತಿದ್ದು, ಇದರ ಮೊತ್ತ ₹5,375 ಕೋಟಿ. ರಕ್ಷಣಾ ಇಲಾಖೆ 83 ತೇಜಸ್ ಮಾರ್ಕ್ 1 ಎ ಖರೀದಿಗೆ ಆದೇಶ ನೀಡಿದ್ದು, ಇದರ ಮೊತ್ತ ₹45,696 ಕೋಟಿ.
ಕಾವೇರಿ ಎಂಜಿನ್ ಅಳವಡಿಸಿಕೊಳ್ಳಲು ಇರುವ ಅಡಚಣೆಗಳು
- ಜೆಟ್ ಎಂಜಿನ್ ಅಭಿವೃದ್ಧಿಪಡಿಸುವುದು ವಾಯುಯಾನ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ. ದೇಶಿ ನಿರ್ಮಿತ ಯುದ್ಧ ವಿಮಾನಕ್ಕೆ ಸ್ವದೇಶಿ ಎಂಜಿನ್ ಇರಬೇಕು ಎಂಬ ಆಶಯದೊಂದಿಗೆ, 80 ರ ದಶಕದಷ್ಟು ಹಳೆಯ ಕಾವೇರಿ ಎಂಜಿನ್ ಯೋಜನೆಗೆ ಇನ್ನಷ್ಟು ವೇಗ ನೀಡಲಾಗಿತ್ತು. ಆದರೆ, ನಿರೀಕ್ಷೆ ಹುಸಿಯಾಗಿದ್ದರಿಂದ ಜಿ.ಇ ಎಂಜಿನ್‌ಗಳನ್ನೇ ನೆಚ್ಚಿಕೊಳ್ಳಬೇಕಾಯಿತು ಎನ್ನುತ್ತಾರೆ ತಜ್ಞರು.
- ಡಿಆರ್‌ಡಿಒ ಎಂಜಿನ್ ಉತ್ಪಾದನೆಯ ಕಾರ್ಯವನ್ನು ಗ್ಯಾಸ್ ಟರ್ಬೈನ್ ರೀಸರ್ಚ್ ಎಸ್ಟಾಬ್ಲಿಷ್‌ಮೆಂಟ್‌ಗೆ ವಹಿಸಿತ್ತು. ಈ ಸಂಸ್ಥೆ ಮೂರು ದಶಕಗಳ ಸುದೀರ್ಘ ಅವಧಿಯಲ್ಲಿ ಎಂಜಿನ್ ಅಭಿವೃದ್ಧಿಪಡಿಸಿದರೂ ವಿಶ್ವದ ಅತ್ಯಂತ ಹಗುರ ಯುದ್ಧ ವಿಮಾನ ಎನಿಸಿರುವ ‘ತೇಜಸ್’ನ ಅಗತ್ಯಕ್ಕೆ ಅನುಗುಣವಾಗಿ ಇರಲಿಲ್ಲ. ಹೀಗಾಗಿ ವಿದೇಶಿ ಎಂಜಿನ್ ಅನ್ನೇ ಬಳಸಿ ಹಾರಾಟ ನಡೆಸಬೇಕಾಯಿತು.
ಜೆಟ್ ಎಂಜಿನ್ ಬಗ್ಗೆ
- ಜೆಟ್ ಎಂಜಿನ್ ಒಂದು ಕಾಂಪ್ಯಾಕ್ಟ್ ಗ್ಯಾಸ್ ಟರ್ಬೈನ್ ಆಗಿದ್ದು, ಇದು ವಿಮಾನ ಮೇಲಕ್ಕೆ ಹಾರಲು ಬೇಕಾದ ಶಕ್ತಿಯನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು ಐದು ಪ್ರಮುಖ ಭಾಗಗಳಿಂದ ತಯಾರಿಸಲಾಗುತ್ತದೆ. ಫ್ಯಾನ್, ಕಂಪ್ರೆಷನರ್, ಕಂಬಶನ್, ಟರ್ಬೈನ್, ಮಿಕ್ಸರ್ ಮತ್ತು ನಾಝಲ್. ಇಲ್ಲಿ ಉತ್ಪತ್ತಿ ಆಗುವ ಒತ್ತಡವು ಶಕ್ತಿಯುತವಾಗಿದ್ದು, ಸುಮಾರು 6 ಸಾವಿರ ಗಂಟೆಯವರೆಗೆ ಶಾಖ ತಡೆದುಕೊಳ್ಳುವ ವಿಶೇಷ ಲೋಹದ ಅಗತ್ಯವಿರುತ್ತದೆ
ಕಾವೇರಿ ಎಂಜಿನ್ ಬಗ್ಗೆ
- ರಷ್ಯಾದ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಏವಿಯೇಷನ್ ಮೋಟರ್ಸ್(ಸಿಐಎಎಂ) ನೆರವಿನಿಂದ 2010 ರಲ್ಲಿ ನಡೆಸಿದ ಎತ್ತರದ (ಆಲ್ಟಿಟ್ಯೂಡ್) ಹಾರಾಟ ಪರೀಕ್ಷೆಯಲ್ಲಿ ಕಾವೇರಿ ತೇರ್ಗಡೆ ಹೊಂದಿದೆ. ರಷ್ಯಾದ ಗ್ರೊಮೊವ್‌ನಲ್ಲಿ ಈ ಎಂಜಿನ್‌ನೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ 20 ಸಾವಿರ ಅಡಿಗಳಷ್ಟು ಎತ್ತರದಲ್ಲಿ ಹಾರಾಟ ನಡೆಸಿತು. 2021 ರಲ್ಲಿ ಡಿಆರ್‌ಡಿಒ ಸಿಂಗಲ್ ಕ್ರಿಸ್ಟಲ್ ಬ್ಲೇಟ್‌ಗಳು ಮತ್ತು ಅಗತ್ಯ ಘಟಕಗಳನ್ನು ಅಭಿವೃದ್ಧಿಪಡಿಸಿತು. ಇದನ್ನು ಸಾಧಿಸಿದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಿದೆ