Published on: November 6, 2021
ನ್ಯಾಯಾಧೀಶರ ನಿವೃತ್ತಿ ವಯೋಮಿತ
ನ್ಯಾಯಾಧೀಶರ ನಿವೃತ್ತಿ ವಯೋಮಿತ
ಸುದ್ಧಿಯಲ್ಲಿ ಏಕಿದೆ? ಸುಪ್ರೀಂ ಕೋರ್ಟ್ ಹಾಗೂ ರಾಜ್ಯಗಳ ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 65 ವರ್ಷ ಮೀರಬಾರದು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಹೇಳಿದ್ದಾರೆ.
ಹಿನ್ನಲೆ
- ನ್ಯಾಯಾಧೀಶರ ನಿವೃತ್ತಿ ವಯಸ್ಸು ಏರಿಕೆ ಮಾಡಬೇಕೆಂದು ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳು ನೀಡಿದ್ದ ಹೇಳಿಕೆಯನ್ನ ಅವರು ತಳ್ಳಿ ಹಾಕಿದ್ದಾರೆ.
- ಹೈಕೋರ್ಟ್ಗಳ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು 65 ವರ್ಷಗಳವರೆಗೂ ಏರಿಕೆ ಮಾಡಬಹುದೇನೋ.. ಆದ್ರೆ, ಅದಕ್ಕಿಂತಾ ಹೆಚ್ಚು ವಿಸ್ತರಣೆ ಬೇಡ ನ್ಯಾಯಮೂರ್ತಿ ಭಟ್ ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು
- ಸದ್ಯ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 65 ವರ್ಷಕ್ಕೆ ನಿಗದಿಯಾಗಿದೆ. ಆದ್ರೆ, ಹೈಕೋರ್ಟ್ಗಳ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ಸೀಮಿತ ಮಾಡಲಾಗಿದೆ.
ವಯೋಮಿತಿ ಹೆಚ್ಚಳಕ್ಕೆ ವಿರೋಧವೇಕೆ ?
- ನಿವೃತ್ತಿ ವಯಸ್ಸಿನ ಮಿತಿಯನ್ನು ಏರಿಕೆ ಮಾಡೋದನ್ನು ವಿರೋಧಿಸಿರುವ ನ್ಯಾಯಮೂರ್ತಿ ಭಟ್, ನಮಗಿಂತಾ ಕಿರಿಯರಿಗೆ ಅವಕಾಶಗಳು ಸಿಗಬೇಕು, ಅವರು ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
- ಕಿರಿಯರು ನ್ಯಾಯ ಪೀಠಕ್ಕೆ ಬಂದರೆ ಹೊಸ ಮನಸ್ಥಿತಿ, ಯೋಜನೆಗಳನ್ನು ಹೊತ್ತು ಬರುತ್ತಾರೆ. ಪೀಠಕ್ಕೆ ಉತ್ಸಾಹ ಹಾಗೂ ಹೊಸತನ ತುಂಬುತ್ತಾರೆ. ಹೊಸ ಮಾಹಿತಿಗಳೊಂದಿಗೆ ಅವರು ಬರುತ್ತಾರೆ.