Published on: November 24, 2021
ಆಯುಷ್ಮಾನ್ ಭಾರತ್
ಆಯುಷ್ಮಾನ್ ಭಾರತ್
ಸುದ್ಧಿಯಲ್ಲಿ ಏಕಿದೆ ? ವಿಶ್ವದಲ್ಲೇ ಬೃಹತ್ ಸಾರ್ವತ್ರಿಕ ಆರೋಗ್ಯ ಯೋಜನೆ ಎಂಬ ಹಿರಿಮೆಗೆ ಪಾತ್ರವಾಗಿರುವ ‘ಆಯುಷ್ಮಾನ್ ಭಾರತ್’ ಯೋಜನೆಗೆ ಮತ್ತಷ್ಟು ಉತ್ತೇಜನ ನೀಡಲು ಕೇಂದ್ರ ಸರಕಾರ ಮುಂದಾಗಿದೆ. ಇನ್ಮುಂದೆ ಚಿಕಿತ್ಸಾ ವೆಚ್ಚ 10 ದಿನಗಳಲ್ಲಿಯೇ ಮರುಪಾವತಿ ಆಗಲಿದೆ.
ಮುಖ್ಯಾಂಶಗಳು
- ಖಾಸಗಿ ಆಸ್ಪತ್ರೆಗಳಲ್ಲಿ ಜನಸಾಮಾನ್ಯರಿಗೆ ಉತ್ತಮ ಚಿಕಿತ್ಸೆ ಮತ್ತು ಹೆಚ್ಚಿನ ಸೌಲಭ್ಯಗಳನ್ನು ದೊರಕಿಸಲು ಯೋಜನೆ ರೂಪಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವ ಹೆಚ್ಚಿಸಲು ತ್ವರಿತ ಮರುಪಾವತಿ, ಉತ್ತಮ ಆಸ್ಪತ್ರೆಗೆ ಬಹುಮಾನ ಮೊದಲಾದ ಕ್ರಮಗಳನ್ನು ಘೋಷಿಸಲಾಗಿದೆ.
ಏನಿದು ಯೋಜನೆ ?
- ದೇಶದ 10 ಕೋಟಿ ಬಡ ಕುಟುಂಬಗಳ 50 ಕೋಟಿ ಜನರಿಗೆ ವಾರ್ಷಿಕ ಐದು ಲಕ್ಷ ರೂ.ವರೆಗೆ ಆರೋಗ್ಯ ವಿಮೆ ಭದ್ರತೆ ಒದಗಿಸುವ ದಿಸೆಯಲ್ಲಿ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ (ಎಬಿ ಪಿಎಂ-ಜೆಎವೈ, ಸಂಕ್ಷಿಪ್ತವಾಗಿ ಆಯುಷ್ಮಾನ್ ಭಾರತ್) ರೂಪಿಸಿದ್ದು, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ)ವು ಇದನ್ನು ಜಾರಿಗೊಳಿಸಿದೆ.
- ಆಯುಷ್ಮಾನ್ ಭಾರತ್’ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, 2018ರ ಸೆಪ್ಟೆಂಬರ್ 23ರಂದು ಚಾಲನೆ ನೀಡಿದ್ದಾರೆ
ಉದ್ದೇಶ ಮತ್ತು ಗುರಿ
- ಯೋಜನೆಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಸೇರಿಸುವುದು ಸರಕಾರದ ಉದ್ದೇಶವಾಗಿದೆ. ಆ ಮೂಲಕ ಹೆಚ್ಚು ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಸಮರ್ಪಕ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳುವುದು ನಮ್ಮ ಗುರಿ
ಪ್ರತಿಯೊಬ್ಬರಿಗೂ ಇ-ಕಾರ್ಡ್
- ”ಯೋಜನೆ ಜಾರಿಯ ಆರಂಭದಿಂದ ಇದುವರೆಗೆ ಪ್ರತಿ ಕುಟುಂಬಕ್ಕೆ ಒಂದೊಂದು ಆಯುಷ್ಮಾನ್ ಕಾರ್ಡ್ ನೀಡಲಾಗುತ್ತಿತ್ತು. ಆದರೆ, ಇನ್ನುಮುಂದೆ ಪ್ರತಿಯೊಬ್ಬ ಫಲಾನುಭವಿಗೂ ಇ-ಕಾರ್ಡ್ ನೀಡಲಾಗುತ್ತದೆ. ಇದರಿಂದ ಫಲಾನುಭವಿಗಳು ಕಡಿಮೆ ಸಮಯದಲ್ಲಿಯೇ ಆಸ್ಪತ್ರೆಗೆ ದಾಖಲಾಗಲು ಸಾಧ್ಯವಾಗುವ ಜತೆಗೆ ಅವರ ಆತ್ಮವಿಶ್ವಾಸ ಹೆಚ್ಚಿಸಲಿದೆ