Published on: November 27, 2021
ಅತ್ಯಂತ ಬಡ ರಾಜ್ಯ
ಅತ್ಯಂತ ಬಡ ರಾಜ್ಯ
ಸುದ್ಧಿಯಲ್ಲಿ ಏಕಿದೆ ? ನೀತಿ ಆಯೋಗದ ಬಹು ಆಯಾಮ ಬಡತನ ಸೂಚ್ಯಂಕ(ಎಂಪಿಐ)ದ ಪ್ರಕಾರ ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ರಾಜ್ಯಗಳು ಭಾರತದ ಅತ್ಯಂತ ಬಡ ರಾಜ್ಯಗಳಾಗಿ ಹೊರಹೊಮ್ಮಿವೆ.
ಸೂಚ್ಯಂಕದಲ್ಲೇನಿದೆ ?
- ಈ ಸೂಚ್ಯಂಕದ ಪ್ರಕಾರ, ಬಿಹಾರದಲ್ಲಿ ಶೇ. 51.91 ರಷ್ಟು ಜನ ಬಡವರಾಗಿದ್ದರೆ, ಜಾರ್ಖಂಡ್ನಲ್ಲಿ ಶೇ. 42.16 ರಷ್ಟು ಜನ ಹಾಗೂ ಉತ್ತರ ಪ್ರದೇಶದಲ್ಲಿ ಶೇ. 37.79 ರಷ್ಟು ಜನ ಬಡವರಾಗಿದ್ದಾರೆ.
- ಅತ್ಯಂತ ಬಡ ರಾಜ್ಯಗಳ ಸೂಚ್ಯಂಕದಲ್ಲಿ ಮಧ್ಯಪ್ರದೇಶ(ಶೇ 36.65)ನಾಲ್ಕನೇ ಸ್ಥಾನದಲ್ಲಿದ್ದರೆ, ಮೇಘಾಲಯ (ಶೇ 32.67) ಐದನೇ ಸ್ಥಾನದಲ್ಲಿದೆ.
- ಕೇರಳ(ಶೇ. 0.71), ಗೋವಾ(ಶೇ. 3.76), ಸಿಕ್ಕಿಂ (ಶೇ. 3.82), ತಮಿಳುನಾಡು(ಶೇ. 4.89) ಮತ್ತು ಪಂಜಾಬ್(ಶೇ. 5.59) ರಾಜ್ಯಗಳು ದೇಶದಲ್ಲಿಯೇ ಅತ್ಯಂತ ಕಡಿಮೆ ಪ್ರಮಾಣದ ಬಡತನವನ್ನು ದಾಖಲಿಸಿವೆ ಮತ್ತು ಸೂಚ್ಯಂಕದ ಕೆಳಭಾಗದಲ್ಲಿವೆ.
ಎಂಪಿಐ ಅನ್ನು ಹೇಗೆ ಅಳೆಯಲಾಗುತ್ತದೆ?
- ವರದಿಯ ಪ್ರಕಾರ, ಭಾರತದ ರಾಷ್ಟ್ರೀಯ ಎಂಪಿಐ ಮಾಪನವೂ ಆಕ್ಸ್ಫರ್ಡ್ ಪಾವರ್ಟಿ ಮತ್ತು ಮಾನವ ಅಭಿವೃದ್ಧಿ ಉಪಕ್ರಮ(OPHI) ಮತ್ತು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(UNDP) ಅಭಿವೃದ್ಧಿಪಡಿಸಿದ ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ಮತ್ತು ದೃಢವಾದ ವಿಧಾನವನ್ನು ಬಳಸುತ್ತದೆ.
ಎಂಪಿಐ ಯ ಮೂರು ಆಯಾಮಗಳು
- ಎಂಪಿಐ ಶಿಕ್ಷಣ, ಆರೋಗ್ಯ ಮತ್ತು ಜೀವನಮಟ್ಟ ಎಂಬ ಮೂರು ಆಯಾಮಗಳನ್ನು ಆಧರಿಸಿದೆ. ಪ್ರತಿಯೊಂದು ಆಯಾಮವು ಸೂಚ್ಯಂಕದಲ್ಲಿ ಮೂರನೇ ಒಂದು ಭಾಗದಷ್ಟು ತೂಕವನ್ನು ಹೊಂದಿದೆ. ಈ ಆಯಾಮಗಳ 12 ವಿಭಾಗಗಳು ಸೇರಿವೆ- ಪೋಷಣೆ, ಪ್ರಸವಪೂರ್ವ ಆರೈಕೆ, ಮಕ್ಕಳು ಮತ್ತು ಹದಿಹರೆಯದವರ ಮರಣ, ಶಾಲಾ ಹಾಜರಾತಿ, ಶಾಲಾ ಶಿಕ್ಷಣದ ವರ್ಷಗಳು, ಅಡುಗೆ ಇಂಧನ, ಕುಡಿಯುವ ನೀರು, ನೈರ್ಮಲ್ಯ, ವಸತಿ, ವಿದ್ಯುತ್, ಬ್ಯಾಂಕ್ ಖಾತೆಗಳು ಮತ್ತು ಆಸ್ತಿಗಳು.