Published on: September 3, 2021

ಅಫ್ಗಾನಿಸ್ತಾನದಲ್ಲಿ ಇರಾನ್ ಮಾದರಿ ಸರ್ಕಾರ

ಅಫ್ಗಾನಿಸ್ತಾನದಲ್ಲಿ ಇರಾನ್ ಮಾದರಿ ಸರ್ಕಾರ

http://humanesmarts.org/events/toddler-time-in-the-farm-march-27th-2020 ಸುದ್ಧಿಯಲ್ಲಿ ಏಕಿದೆ? ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ನೇತೃತ್ವದ ಸರ್ಕಾರ ರಚನೆಯ ಸಿದ್ಧತೆಯ ಬಹುತೇಕ ಪೂರ್ಣಗೊಂಡಿದ್ದು, ಇರಾನ್‌ ನಾಯಕತ್ವದ ಮಾದರಿಯನ್ನು ತಾಲಿಬಾನ್‌ ಕೂಡ ಅನುಸರಿಸಲಿದೆ ಎಂದು ತಿಳಿದು ಬಂದಿದೆ.

where to buy dapoxetine in the philippines ಏನಿದು ಇರಾನ್ ಮಾದರಿ?

  • ಸರ್ವೋಚ್ಚ ನಾಯಕ ಎಂದು ಪರಿಗಣಿಸಲಾಗುವ ವ್ಯಕ್ತಿಯು ದೇಶದ ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರದ ಅತ್ಯುನ್ನತ ನಾಯಕ ಆಗಿರುತ್ತಾನೆ. ದೇಶದ ಅಧ್ಯಕ್ಷರಿಗಿಂತಲೂ ಈತನಿಗೆ ಮೇಲಿನ ಸ್ಥಾನ ಇರುತ್ತದೆ. ಸೇನೆ, ಸರ್ಕಾರ, ನ್ಯಾಯಾಂಗ ಎಲ್ಲದರ ಮುಖ್ಯಸ್ಥರನ್ನು ಈತ ನೇಮಿಸುತ್ತಾನೆ. ರಾಜಕೀಯ, ಧಾರ್ಮಿಕ, ಸೇನೆಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳಲ್ಲಿ ಸರ್ವೋಚ್ಚ ನಾಯಕನ ಮಾತೇ ಅಂತಿಮ.

ಆಡಳಿತ ವ್ಯವಸ್ಥೆ ಹೇಗೆ?

  • ಪ್ರಾಂತ್ಯಗಳ ಆಳ್ವಿಕೆಯನ್ನು ಗವರ್ನರ್‌ಗಳು ನೋಡಿಕೊಳ್ಳಲಿದ್ದಾರೆ. ಜಿಲ್ಲೆಗಳಿಗೆ ಜಿಲ್ಲಾ ಗವರ್ನರ್‌ಗಳು ಆಡಳಿತಾಧಿಕಾರಿಗಳಾಗಿರುತ್ತಾರೆ. ಬಹುತೇಕ ಪ್ರಾಂತ್ಯಗಳ ಗವರ್ನರ್‌ಗಳ ನೇಮಕವನ್ನು ತಾಲಿಬಾನ್‌ ಪೂರ್ಣಗೊಳಿಸಿದೆ. ಪ್ರಾಂತ್ಯ ಮತ್ತು ಜಿಲ್ಲೆಗಳ ಪೊಲೀಸ್‌ ಮುಖ್ಯಸ್ಥ ಹುದ್ದೆಗಳ ನೇಮಕವೂ ಆಗಿದೆ
  • ಹೊಸ ಆಡಳಿತ ವ್ಯವಸ್ಥೆಯ ಹೆಸರು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಇನ್ನಷ್ಟೇ ಅಂತಿಮ ಆಗಬೇಕಿದೆ.