Published on: July 22, 2023

ಅಮೆರಿಕ ರಾಸಾಯನಿಕ ಶಸ್ತ್ರಾಸ್ತ್ರ ಮುಕ್ತ ರಾಷ್ಟ್ರ

ಅಮೆರಿಕ ರಾಸಾಯನಿಕ ಶಸ್ತ್ರಾಸ್ತ್ರ ಮುಕ್ತ ರಾಷ್ಟ್ರ

ಸುದ್ದಿಯಲ್ಲಿ ಏಕಿದೆ? ಅಮೆರಿಕವು ದಶಕಗಳಷ್ಟು ಹಳೆಯದಾದ ಕೆಮಿಕಲ್‌ ಶಸ್ತ್ರಾಸ್ತ್ರಗಳ ದಾಸ್ತಾನನ್ನು ಸಂಪೂರ್ಣವಾಗಿ ನಾಶಪಡಿಸಿದೆ ಎಂದು ಜೋ ಬೈಡೆನ್‌ ಘೋಷಿಸಿದ್ದಾರೆ.

 ಮುಖ್ಯಾಂಶಗಳು

 • 1993ರಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳ ಸಮಾವೇಶದಲ್ಲಿ ಕೈಗೊಂಡ ನಿರ್ಧಾರದಂತೆ ಎಲ್ಲ ರಾಷ್ಟ್ರಗಳು ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ನಾಶಪಡಿಸಿದ್ದು, ಕೊನೆಯದಾಗಿ ಅಮೆರಿಕ ಪೂರ್ಣಗೊಳಿಸಿದೆ.
 • ಅಮೆರಿಕ ಸೇನೆ ಹೊಂದಿದ್ದ ಸುಮಾರು 500 ಟನ್‌ ಮಾರಣಾಂತಿಕ ಕೆಮಿಕಲ್‌ ಅಸ್ತ್ರಗಳ ಕೊನೆಯ ದಾಸ್ತಾನನ್ನು ನಾಶಪಡಿಸಿದ ಬಳಿಕ ಜೋ ಬೈಡೆನ್‌ ಈ ಘೋಷಣೆ ಮಾಡಿದ್ದಾರೆ.
 • ರಾಸಾಯನಿಕ ಶಸ್ತ್ರಾಸ್ತ್ರಗಳ ಸಮಾವೇಶದಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಕೊನೆಯದಾಗಿ ಅಮೆರಿಕ ಸಹಿ ಹಾಕಿತ್ತು, ಅದರಂತೆ ರಾಸಾಯನಿಕ ಶಸ್ತ್ರಾಸ್ತ್ರಗಳ ದಾಸ್ತಾನನ್ನು ನಾಶಪಡಿಸಿದೆ. ಇದರಿಂದ ಅಪಾಯಕಾರಿ ರಾಸಾಯನಿಕ ಶಸ್ತ್ರಾಸ್ತ್ರಗಳ ಮುಕ್ತ ಜಗತ್ತಿಗೆ ಒಂದು ಹೆಜ್ಜೆ ಹತ್ತಿರಕ್ಕೆ ತರುತ್ತದೆ.

ನಾಶಪಡಿಸಲು ಕಾರಣ

 • ಅಮೆರಿಕದ ಕೆಂಟುಕಿಯಲ್ಲಿರುವ ಅಮೆರಿಕ ಸೇನೆಯ ಬ್ಲೂ ಗ್ರಾಸ್‌ ಆರ್ಮಿ ಡಿಪೋ ಕಳೆದ ನಾಲ್ಕು ವರ್ಷಗಳಿಂದ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ನಾಶಪಡಿಸುವ ಕಾರ್ಯದಲ್ಲಿ ತೊಡಗಿತ್ತು. ಅಮೆರಿಕವು ದಶಕಗಳಿಂದ ಮಸ್ಟರ್ಡ್‌ ಗ್ಯಾಸ್‌, ವಿಎಕ್ಸ್‌ ಅನಿಲ ಮತ್ತು ಸರಿನ್‌ ನರ್ವ್‌ ರಾಸಾಯನಿಕ ಹಾಗೂ ಬ್ಲಿಸ್ಟರ್‌ ಕೆಮಿಕಲ್‌ಗಳನ್ನು ಒಳಗೊಂಡ ಆರ್ಟಿಲರಿ ಪ್ರೊಜೆಕ್ಟೈಲ್‌ಗಳು ಮತ್ತ ರಾಕೆಟ್‌ಗಳನ್ನು ಹೊಂದಿತ್ತು. ಮೊದಲ ವಿಶ್ವ ಮಹಾಯುದ್ಧದಲ್ಲಿ ಈ ಶಸ್ತ್ರಾಸ್ತ್ರಗಳನ್ನು ಬಳಸಲಾಗಿತ್ತು. ಈ ರಾಸಾಯನಿಕ ಶಸ್ತ್ರಾಸ್ತ್ರಗಳಿಂದ ಯುದ್ಧದಲ್ಲಿ ಭೀಕರ ಪರಿಣಾಮ ಉಂಟಾಗಿತ್ತು. ಇದನ್ನು ಹಲವು ದೇಶಗಳು ವ್ಯಾಪಕವಾಗಿ ಖಂಡಿಸಿದ್ದವು. ಆದರೆ, ಬಳಿಕ ಹಲವು ದೇಶಗಳು ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಉಳಿಸಿಕೊಂಡು, ಮತ್ತಷ್ಟು ಅಭಿವೃದ್ಧಿಪಡಿಸಿದ್ದವು.

ರಾಸಾಯನಿಕ ಶಸ್ತ್ರಾಸ್ತ್ರಗಳ ಸಮಾವೇಶ(CWC)

 • ಸೆಪ್ಟೆಂಬರ್ 1992 ರಲ್ಲಿ ಕರಡು ರಚಿಸಲಾಯಿತು ಮತ್ತು ಜನವರಿ 1993 ರಲ್ಲಿ ಸಮಾವೇಶ ನಡೆಯಿತು. ಇದು ಏಪ್ರಿಲ್ 1997 ರಿಂದ ಜಾರಿಗೆ ಬಂದಿತು. ಇದು ಹಳೆಯ ಮತ್ತು ಕೈಬಿಟ್ಟ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ನಾಶಮಾಡುವುದನ್ನು ಕಡ್ಡಾಯಗೊಳಿಸುತ್ತದೆ.

ಸದಸ್ಯರು:

 • CWC ಎಲ್ಲಾ ರಾಷ್ಟ್ರಗಳಿಗೆ ಮುಕ್ತವಾಗಿದೆ ಮತ್ತು ಪ್ರಸ್ತುತ 193 ರಾಷ್ಟ್ರಗಳನ್ನು ಹೊಂದಿದೆ.
 • ಇಸ್ರೇಲ್ ಸಹಿ ಮಾಡಿದೆ ಆದರೆ ಇನ್ನೂ ಸಮಾವೇಶವನ್ನು ಅಂಗೀಕರಿಸಬೇಕಾಗಿದೆ.
 • ಮೂರು ರಾಜ್ಯಗಳು ಒಪ್ಪಂದಕ್ಕೆ ಸಹಿ ಹಾಕಿಲ್ಲ ಅಥವಾ ಅನುಮೋದಿಸಿಲ್ಲ (ಈಜಿಪ್ಟ್, ಉತ್ತರ ಕೊರಿಯಾ ಮತ್ತು ದಕ್ಷಿಣ ಸುಡಾನ್).
 • ಭಾರತವು ಜನವರಿ 1993 ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿತು.

ಅನುಷ್ಠಾನ

 • CWC ಯನ್ನು ನೆದರಲ್ಯಾಂಡ್ಸನ ಹೇಗ್‌ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಆರ್ಗನೈಸೇಶನ್ ಫಾರ್ ದಿ ಪ್ರೊಹಿಬಿಷನ್ ಆಫ್ ಕೆಮಿಕಲ್ ವೆಪನ್ಸ್ (OPCW) ನಿಂದ ಜಾರಿಗೊಳಿಸಲಾಗಿದೆ.

ಸಮಾವೇಶ ಏನನ್ನು ನಿಷೇಧಿಸುತ್ತದೆ:

 • ರಾಸಾಯನಿಕ ಶಸ್ತ್ರಾಸ್ತ್ರಗಳ ಅಭಿವೃದ್ಧಿ, ಉತ್ಪಾದನೆ, ಸ್ವಾಧೀನ, ಸಂಗ್ರಹಣೆ
 • ರಾಸಾಯನಿಕ ಶಸ್ತ್ರಾಸ್ತ್ರಗಳ ವರ್ಗಾವಣೆ.
 • ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸುವುದು.
 • CWC ನಿಂದ ನಿಷೇಧಿಸಲ್ಪಟ್ಟ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಇತರ ರಾಷ್ಟ್ರಗಳಿಗೆ ಸಹಾಯ ಮಾಡುವುದು.
 • ಗಲಭೆ-ನಿಯಂತ್ರಣ ಸಾಧನಗಳನ್ನು ‘ಯುದ್ಧ ವಿಧಾನಗಳು’ ಎಂದು ಬಳಸುವುದು.

1993ರಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳ ಸಮಾವೇಶ ನಡೆದು, 1997ರಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳ ನಾಶಕ್ಕೆ ತೆಗೆದುಕೊಂಡ ನಿರ್ಧಾರ ಜಾರಿಗೆ ಬಂದಿತ್ತು.

ನಿಮಗಿದು ತಿಳಿದಿರಲಿ

 • 1990ರ ವರದಿಯಂತೆ ಅಮೆರಿಕ 28,600 ಟನ್‌ ಕೆಮಿಕಲ್‌ ಅನ್ನು ಹೊಂದಿತ್ತು. ರಷ್ಯಾದ ಬಳಿಕ ಅತಿಹೆಚ್ಚು ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಅಮೆರಿಕ ಹೊಂದಿತ್ತು.