Published on: December 26, 2022

ಅವಳಿ ಕೆಪ್ಲರ್ ಉಪಗ್ರಹಗಳು

ಅವಳಿ ಕೆಪ್ಲರ್ ಉಪಗ್ರಹಗಳು

ಸುದ್ದಿಯಲ್ಲಿ ಏಕಿದೆ? ಹೊಸದಾಗಿ ಆವಿಷ್ಕರಿಸಿರುವ ಅವಳಿ ಕೆಪ್ಲರ್ ಉಪಗ್ರಹಗಳಲ್ಲಿ ನೀರು ಇರುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಮುಖ್ಯಾಂಶಗಳು 

  • ಅಮೆರಿಕದ ನಾಸಾದ ಕೆಪ್ಲರ್ ಬಾಹ್ಯಕಾಶ ದೂರದರ್ಶಕದ ಸಹಾಯದಿಂದ ಈ ಉಪಗ್ರಹಗಳನ್ನು ಪತ್ತೆಹಚ್ಚಲಾಯಿತು. ಉಪಗ್ರಹಗಳಲ್ಲಿ ನೀರು ಇರುವುದನ್ನು ನೇರವಾಗಿ ಪತ್ತೆ ಮಾಡಿಲ್ಲ.
  • ಆದರೆ ಗಾತ್ರದ ಆಧಾರದಲ್ಲಿ ಈ ಉಪಗ್ರಹಗಳು ಬಂಡೆಗಿಂತ ಹಗುರವಾದ ಹಾಗೂ ಹೈಡ್ರೋಜನ್ ಅಥವಾ ಹೀಲಿಯಂಗಿಂತ ಭಾರವಾದ ವಸ್ತುಗಳಿಂದ ಆಗಿರಬೇಕು. ಬಹುತೇಕ ನೀರು ಇವುಗಳಲ್ಲಿ ಇದ್ದಿರಬಹುದು ಎಂದು ಹೇಳಲಾಗಿದೆ.

ಉಪಗ್ರಹಗಳ ಹೆಸರು

  • ಕೆಪ್ಲರ್-138ಸಿ ಮತ್ತು ಕೆಪ್ಲರ್-138ಡಿ ಉಪಗ್ರಹಗಳು ಭೂಮಿಯಿಂದ 218 ಜ್ಯೋರ್ತಿವರ್ಷ ಗಳ ದೂರದಲ್ಲಿವೆ. ಅಲ್ಲದೇ ಇವು ಭೂಮಿಗಿಂತ ಒಂದೂವರೆ ಪಟ್ಟು ದೊಡ್ಡದಾಗಿವೆ.

ಕೆಪ್ಲರ್ ಬಾಹ್ಯಾಕಾಶ ದೂರದರ್ಶಕ

  • ಕೆಪ್ಲರ್ ಬಾಹ್ಯಾಕಾಶ ದೂರದರ್ಶಕವನ್ನು ನಾಸಾ ಮಾರ್ಚ್ 7, 2009 ರಂದು ಇತರ ನಕ್ಷತ್ರಗಳ ಸುತ್ತ ಸುತ್ತುತ್ತಿರುವ ಭೂಮಿಯ ಗಾತ್ರದ ಗ್ರಹಗಳನ್ನು ಕಂಡುಹಿಡಿಯುವ ಉದ್ದೇಶದಿಂದ ಉಡಾವಣೆ ಮಾಡಿತು.
  • ಈ ದೂರದರ್ಶಕಕ್ಕೆ  ಖಗೋಳಶಾಸ್ತ್ರಜ್ಞ ಜೋಹಾನ್ಸ್ ಕೆಪ್ಲರ್ ಅವರ ಹೆಸರನ್ನು ಇಡಲಾಗಿದೆ.