Published on: December 3, 2021

‘ಅಸ್ಸಾಂ ಬೈಭವ್’

‘ಅಸ್ಸಾಂ ಬೈಭವ್’

ಸುದ್ಧಿಯಲ್ಲಿ ಏಕಿದೆ ? ಅಸ್ಸಾಂ ರಾಜ್ಯದಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ನಿರ್ಮಿಸಲು ನೀಡಿದ ಕೊಡುಗೆಯನ್ನು ಗಮನಿಸಿ ಟಾಟಾ ಟ್ರಸ್ಟ್‌ನ ಅಧ್ಯಕ್ಷ ರತನ್ ಟಾಟಾ ಅವರಿಗೆ ರಾಜ್ಯ ಸರ್ಕಾರವು ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಅಸ್ಸಾಂ ಬೈಭವ್’ವನ್ನು ಪ್ರದಾನ ಮಾಡಲಿದೆ

ಮುಖ್ಯಾಂಶಗಳು

  • ಅಡ್ವಾಂಟೇಜ್ ಅಸ್ಸಾಂ – ಗ್ಲೋಬಲ್ ಇನ್ವೆಸ್ಟ್‌ಮೆಂಟ್ ಶೃಂಗಸಭೆ 2018ರಲ್ಲಿ ಟಾಟಾ ಟ್ರಸ್ಟ್‌ ಕ್ಯಾನ್ಸರ್ ಕೇರ್ ಘಟಕ ಸ್ಥಾಪನೆ ಸಂಬಂಧ ಅಸ್ಸಾಂ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು.
  • ಈ ಹಿಂದೆ ‘ಅಸ್ಸಾಂ ರತ್ನ’ ಎಂದು ಕರೆಯಲ್ಪಡುತ್ತಿದ್ದ ಈ ಪ್ರಶಸ್ತಿಯನ್ನು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಶರ್ಮಾ ನೇತೃತ್ವದ ಸರ್ಕಾರವು ‘ಅಸ್ಸಾಂ ಬೈಭವ್’ ಎಂದು ಮರುನಾಮಕರಣ ಮಾಡಿದೆ.