Published on: October 25, 2021

ಆಸ್ಕರ್ 2022 ಪ್ರಶಸ್ತಿ

ಆಸ್ಕರ್ 2022 ಪ್ರಶಸ್ತಿ

ಸುದ್ಧಿಯಲ್ಲಿ ಏಕಿದೆ?   ಪಿ.ಎಸ್. ವಿನೋದ್ ರಾಜ್ ನಿರ್ದೇಶನದ  ‘ಕೂಳಂಗಳ್’ ತಮಿಳು ಚಿತ್ರ  94ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಗಳಿಗೆ ಭಾರತದಿಂದ ಅಧಿಕೃತವಾಗಿ ಎಂಟ್ರಿಯಾಗಿದೆ.

  • ವಿಘ್ನೇಶ್ ಶಿವನ್ ಮತ್ತು ನಯನ ತಾರಾ ನಿರ್ಮಿಸಿರುವ ಈ ಚಿತ್ರದಲ್ಲಿ ಹೊಸಬರ ತಾರಾ ಬಳಗವಿದೆ.
  • ಈ ವರ್ಷದ ಆರಂಭದಲ್ಲಿ ರೊಟ್ಟರ್ ಡಾಮ್ 50ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಉತ್ತಮ ಚಿತ್ರಕ್ಕಾಗಿ ಅತ್ಯುನ್ನತ ಟೈಗರ್ ಪ್ರಶಸ್ತಿಯನ್ನು ‘ಕೂಳಂಗಳ್’ ಪಡೆದುಕೊಂಡಿತ್ತು. ಲಾಸ್ ಏಂಜಲೀಸ್ ನಲ್ಲಿ ಮಾರ್ಚ್ 22, 2022ರಲ್ಲಿ 94ನೇ ಆಸ್ಕರ್ ಅಕಾಡೆಮಿ ಅವಾರ್ಡ್ ಪ್ರದಾನ ಸಮಾರಂಭ ನಡೆಯಲಿದೆ.

ಕಥಾ ಹಂದರ

  • ಮದ್ಯ ವ್ಯಸನಿ ಪತಿ, ಧೀರ್ಘ ಕಾಲದ ಕಾಯಿಲೆಯಿಂದ ಬಳಲುತ್ತಿದ್ದ ಪತ್ನಿ ಬಿಟ್ಟು ಹೋದ ನಂತರ ತನ್ನ ಮಗನೊಂದಿಗೆ ಆಕೆಯನ್ನು ಪತ್ತೆ ಹಚ್ಚಿ, ಮನೆಗೆ ಕರೆದುಕೊಂಡು ಬರುತ್ತಾನೆ. ಇದು ಈ ಸಿನಿಮಾದ ಕಥಾ ಹಂದರವಾಗಿದೆ.