Published on: January 24, 2023

ಐಎನ್ಎಸ್ ವಾಗಿರ್

ಐಎನ್ಎಸ್ ವಾಗಿರ್


ಸುದ್ದಿಯಲ್ಲಿ ಏಕಿದೆ? ಕಲ್ವರಿ ದರ್ಜೆಯ ಐದನೇ ಜಲಾಂತರ್ಗಾಮಿ ನೌಕೆ ಐಎನ್ಎಸ್ ವಾಗಿರ್ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದೆ.


ಮುಖ್ಯಾಂಶಗಳು

  • ಕಲ್ವರಿ ವರ್ಗದ ನಾಲ್ಕು ಜಲಾಂತರ್ಗಾಮಿ ನೌಕೆಗಳನ್ನು ಈಗಾಗಲೇ ಭಾರತೀಯ ನೌಕಾಪಡೆಗೆ ನಿಯೋಜಿಸಲಾಗಿದೆ.
  • ಜಲಾಂತರ್ಗಾಮಿಯು ಇಲ್ಲಿಯವರೆಗಿನ ಎಲ್ಲಾ ಸ್ಥಳೀಯವಾಗಿ ತಯಾರಿಸಿದ ಜಲಾಂತರ್ಗಾಮಿ ನೌಕೆಗಳಲ್ಲಿ ಅತ್ಯಂತ ಕಡಿಮೆ ನಿರ್ಮಾಣ ಸಮಯ ತೆಗೆದುಕೊಂಡ ಹೆಗ್ಗಳಿಕೆಯಿದೆ.
  • ವಾಗಿರ್ ಅಂದರೆ ‘ಸ್ಯಾಂಡ್ ಷಾರ್ಕ್’ , ರಹಸ್ಯ, ನಿರ್ಭಯತೆಯನ್ನು ಪ್ರತಿಬಿಂಬಿಸುತ್ತದೆ.

ನಿರ್ಮಾಣ :ಐಎನ್ಎಸ್ ವಾಗಿರ್ ಅನ್ನು ಫ್ರಾನ್ಸ್ ತಂತ್ರಜ್ಞಾನದೊಂದಿಗೆ ಮಜಗಾನ್ ಡಾಕ್ ಶಿಪ್ಬಿಲ್ಡರ್ಸ್ ಲಿಮಿಟೆಡ್ ನಿರ್ಮಿಸಿದೆ.

ವಿಶೇಷತೆಗಳು  

  • ಸುಧಾರಿತ ತಂತ್ರಜ್ಞಾನದ ಐಎನ್ಎಸ್ ವಾಗಿರ್, ಶತ್ರುಗಳ ದಾಳಿ ತಡೆಯಲು, ಸಾಗರದಲ್ಲಿ ಭಾರತದ ರಕ್ಷಣೆಯ ಬಲವರ್ಧನೆಗೆ, ಗುಪ್ತಚರ ಹಾಗೂ ನಿಗಾ ವಹಿಸಲು ನೆರವಾಗಲಿದೆ. ಜಗತ್ತಿನ ಅತ್ಯುತ್ತಮ ಸೆನ್ಸಾರ್ಗಳನ್ನು ಇದು ಒಳಗೊಂಡಿವೆ.

ನಿಮಗಿದು ತಿಳಿದಿರಲಿ

  • ಇದೆ ವರ್ಗದ ಮೊದಲ ಸಬ ಮರಿನ್ ಐಎನ್ಎಸ ಕಲ್ವಾರಿ  2017 , ಐಎನ್ಎಸ  ಖಂಡೇರಿ 2019 , ಐಎನ್ಎಸ ಕಾರಂಜಾ ಮಾರ್ಚ್ 2021, ಐಎನ್ಎಸ ವೇಲಾ 2021 ನವೇಂಬರನಲ್ಲಿ ಸೇರ್ಪಡೆಯಾಗಿವೆ.