Published on: December 7, 2022

ಔಷಧ ವಿತರಣೆಗೆ ‘ಡ್ರೋನ್‌’ ಬಳಕೆ

ಔಷಧ ವಿತರಣೆಗೆ ‘ಡ್ರೋನ್‌’ ಬಳಕೆ

Kozan ಸುದ್ದಿಯಲ್ಲಿ ಏಕಿದೆ?

http://yookyoungyong.com/wp-json/oembed/1.0/embed?url=http://yookyoungyong.com/product/beer-mug-red-xl-size/ ಡ್ರೋನ್ ಬಳಸಿ ಔಷಧಗಳ ತಲುಪಿಸುವ ಕಾರ್ಯ ಆರಂಭಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಮೇಘಾಲಯ ಪಾತ್ರವಾಗಿದೆ.

ಮುಖ್ಯಾಂಶಗಳು

  • ಸ್ಥಳೀಯ ಫಾರ್ಮಸಿಯೊಂದಕ್ಕೆ ಮಾನವ ರಹಿತ ವಾಹನ ಔಷಧಗಳನ್ನು 68 ಕಿ.ಮೀ ದೂರದ ಪ್ರದೇಶದಿಂದ ತಂದು ತಲುಪಿಸಿದೆ.
  • ಜೆಂಗ್ಜಾಲ್ ಉಪವಿಭಾಗದ ಆಸ್ಪತ್ರೆಯ ಡ್ರೋನ್ ನಿಲ್ದಾಣ ಗಾರೋ ಹಿಲ್ಸ್ ನ ಅತ್ಯಂತ ಕುಗ್ರಾಮಕ್ಕೂ ಅಗತ್ಯ ವಸ್ತುಳು ತಲುಪುವುದನ್ನು ಖಾತ್ರಿಪಡಿಸಿಕೊಂಡಿದೆ.
  • ಡ್ರೋನ್ ಸಾಗಬೇಕಿರುವ ಮಾರ್ಗವನ್ನು ಜಿಪಿಎಸ್ ಆಧಾರದಲ್ಲಿ ಮೊದಲೇ ನಿಗದಿಪಡಿಸಲಾಗಿರುತ್ತದೆ.
  • ಸಾಮರ್ಥ್ಯ: ಈ ಡ್ರೋನ್ ಗೆ 3-5 ಕೆಜಿಯಷ್ಟು ಸರಕುಗಳನ್ನು ಹೊತ್ತು ಸಾಗುವ ಸಾಮರ್ಥ್ಯವಿದೆ. ಲಸಿಕೆಗಳನ್ನು ಕೊಂಡೊಯ್ಯುವುದಕ್ಕಾಗಿಯೇ ಎರಡು ಪ್ರತ್ಯೇಕ ಡ್ರೋನ್ ಗಳಿದ್ದು  ಅವುಗಳಿಗೆ 20-25 ಕೆ.ಜಿ ಕೊಂಡೊಯ್ಯುವ ಸಾಮರ್ಥ್ಯವಿದೆ.

ಡ್ರೋನ್ಗಳ ಬಳಕೆ ಏಕೆ?

  • ಇಲ್ಲಿನ ಭೂಕುಸಿತ, ಪ್ರವಾಹಗಳ ಕಾರಣದಿಂದಾಗಿ ಸರ್ಕಾರಿ ಆರೋಗ್ಯ ಪೂರೈಕೆ ಸರಪಳಿಗೆ ಲಾಜಿಸ್ಟಿಕ್ ಸಮಸ್ಯೆಗಳಿವೆ. ಆದ್ದರಿಂದ ಆರೋಗ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ಆರೋಗ್ಯ ಕೇಂದ್ರಗಳಿಗೆ ತಲುಪಿಸುವುದು ಸವಾಲಿನ ಸಂಗತಿಯಾಗಿದೆ.
  • ಸಹಯೋಗ:ವಿಶ್ವಬ್ಯಾಂಕ್ ನಿಂದ ಆರ್ಥಿಕ ನೆರವು ಪಡೆದು ಚಾಲ್ತಿಯಲ್ಲಿರುವ ಡ್ರೋಣ್ ಸೇವೆಗಳು ಮೇಘಾಲಯ ಆರೋಗ್ಯ ವ್ಯವಸ್ಥೆ ಸದೃಢ ಯೋಜನೆ ಹಾಗೂ ಸ್ಟಾರ್ಟ್ ಅಪ್ ಟೆಕ್ಕೀಗಲ್ ಎಂಬ ಜಂಟಿ ಸಹಯೋಗದ್ದಾಗಿದ್ದು, ಇದು ಏಷ್ಯಾದ ಮೊದಲ,  ಆರೋಗ್ಯ ವಿತರಣಾ ವ್ಯವಸ್ಥೆಯಗಾಗಿಯೇ ಇರುವ ಡ್ರೋಣ್ ಸ್ಟೇಷನ್ ಆಗಿದೆ.