Published on: December 19, 2022
ಕಪ್ಪು ಕುಳಿ ಪತ್ತೆ
ಕಪ್ಪು ಕುಳಿ ಪತ್ತೆ
http://beccajcampbell.com/tag/copy/ ಸುದ್ದಿಯಲ್ಲಿ ಏಕಿದೆ? 850 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ನಶಿಸುತ್ತಿರುವ ನಕ್ಷತ್ರವೊಂದರ ಅಂತ್ಯದ ವಿದ್ಯಮಾನ ಗುರುತಿಸುವಿಕೆಯಲ್ಲಿ Kitzingen ಲಡಾಖ್ನಲ್ಲಿರುವ ಹಿಮಾಲಯನ್ ಟೆಲಿಸ್ಕೋಪ್ ಮತ್ತು ಭಾರತದ ಖಗೋಳ ತಜ್ಞರ ತಂಡವು ಮಹತ್ವದ ಪಾತ್ರ ವಹಿಸಿರುವುದು ತಿಳಿದುಬಂದಿದೆ.
ಮುಖ್ಯಾಂಶಗಳು
- ನಕ್ಷತ್ರದಲ್ಲಿ ರೂಪುಗೊಂಡಿರುವ ಅಪರೂಪದ ಕಪ್ಪು ಕುಳಿ ಬಗ್ಗೆ ಭಾರತದ ಖಗೋಳ ತಜ್ಞರು ಜಗತ್ತಿನ ಗಮನ ಸೆಳೆದಿದ್ದಾರೆ. ಅಪರೂಪದ ಖಗೋಳ ವಿದ್ಯಮಾನವೊಂದಲ್ಲಿ ಇತ್ತೀಚೆಗೆ ಅತ್ಯಂತ ಶಕ್ತಿಯುತ ಕಿರಣಗಳ(ಸೂರ್ಯನ ಕಿರಣಗಳಿಗಿಂತ 1,000 ಟ್ರಿಲಿಯನ್ ಹೆಚ್ಚು ಪ್ರಕಾಶಮಾನ) ಹೊರಹೊಮ್ಮುವಿಕೆ ಕಂಡುಬಂದಿತ್ತು.
- 4 ಖಂಡಗಳು ಮತ್ತು ಬಾಹ್ಯಾಕಾಶದ ಟೆಲಿಸ್ಕೋಪ್ನಲ್ಲಿ ಇದನ್ನು ಗಮನಿಸಲಾಗಿತ್ತು. ಆ ಪ್ರಜ್ವಲಿಸುವ ಬೆಳಕು ಎಲ್ಲಿಂದ ಬರುತ್ತಿದೆ ಎಂಬ ಬಗ್ಗೆ ಬೆಳಕು ಚೆಲ್ಲಿದ್ದು ಭಾರತದ ಟೆಲಿಸ್ಕೋಪ್.
‘ಎಟಿ2022ಸಿಎಂಸಿ‘: ಕ್ಯಾಲಿಫೋರ್ನಿಯಾ ಮೂಲದ ಜ್ವಿಕಿ ಟ್ರಾನ್ಸಿಯಂಟ್ ಕೇಂದ್ರವು ಆಗಸದಲ್ಲಿ ಪ್ರಕಾಶಮಾನದ ಬೆಳಕು ಹೊರಹೊಮ್ಮುತ್ತಿರುವ ಹೊಸ ವಿದ್ಯಮಾನವನ್ನು ಮೊದಲಿಗೆ ಪತ್ತೆ ಮಾಡಿತ್ತು. ಅದಕ್ಕೆ ‘ಎಟಿ2022ಸಿಎಂಸಿ‘ ಎಂದು ಹೆಸರಿಸಲಾಗಿತ್ತು.
ಹೇಗೆ ಗುರುತಿಸಿದರು?
- ಬಹುವೇಗವಾಗಿ ಪ್ರಜ್ವಲಿಸಿ, ಅಷ್ಟೆ ವೇಗವಾಗಿ ಅದು ಕಣ್ಮರೆಯಾಗುತ್ತಿತ್ತು.
- ಪ್ರಜ್ವಲಿಸುವ ಬೆಳಕಿನ ಬಗ್ಗೆ ಮಾಹಿತಿ ಬಂದ ಕೂಡಲೇ ನಿತ್ಯ ಭಾರತದ ಟೆಲಿಸ್ಕೋಪ್ನಿಂದ ಪರಿವೀಕ್ಷಣೆಗೆ ಮುಂದಾದರು ಈ ಸಂದರ್ಭ ನಶಿಸುತ್ತಿರುವ ನಕ್ಷತ್ರದ ಕೊನೆಯ ಕ್ಷಣಗಳು ಖಗೋಳ ಶಾಸ್ತ್ರಜ್ಞರ ಕಣ್ಣಿಗೆ ಗೋಚರಿಸಿವೆ.
- ಅದರಲ್ಲಿ ಬೃಹತ್ ಪ್ರಮಾಣದ ಕಪ್ಪು ಕುಳಿ ಏರ್ಪಟ್ಟಿದ್ದು, ಅದರಿಂದ ಬೆಳಕು ಹೊರಸೂಸುತ್ತಿರುವುದು ಪತ್ತೆಯಾಗಿದೆ. ನಕ್ಷತ್ರ ನಶಿಸುವಾಗ ಯಾವ ಪರಿಸ್ಥಿತಿ ಇರುತ್ತದೆ ಎಂಬುದು ಅವರ ಗಮನಕ್ಕೆ ಬಂದಿದೆ.
- ಇಲ್ಲಿಯವರೆಗಿನ ಅಧ್ಯಯನಗಳ ಪ್ರಕಾರ, ಜಗತ್ತು 13.8 ಬಿಲಿಯನ್ ವರ್ಷಗಳ ಹಿಂದೆ ಆದ ಬಿಗ್ ಬ್ಯಾಂಗ್ನಿಂದ ಸೃಷ್ಟಿಯಾಗಿದೆ. ನಶಿಸುತ್ತಿರುವ ನಕ್ಷತ್ರದ ವಿವರಗಳನ್ನು ಅಂದಾಜು ಮಾಡುವುದು ಕಷ್ಟ.
- ಇದು ಬಹುಶಃ ಸಾಮಾನ್ಯ ನಕ್ಷತ್ರವಾಗಿದ್ದು, ಸೂರ್ಯನ ದ್ರವ್ಯರಾಶಿಯನ್ನು ಹೋಲುತ್ತದೆ. ಅಲ್ಲದೆ, ಇದು ವಿಚಿತ್ರ ಎನ್ನಬಹುದಾದ ವಿದ್ಯಮಾನವನ್ನು ಸೃಷ್ಟಿಸಿದೆ ಎಂದು ಖಗೋಳ ಶಾಸ್ತ್ರಜ್ಞರು ಹೇಳುತ್ತಾರೆ.
ಕಪ್ಪು ಕುಳಿ ಬಗ್ಗೆ
- ಕಪ್ಪು ಕುಳಿಯು ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆಯು ತುಂಬಾ ಎಳೆಯುವ ಸ್ಥಳವಾಗಿದ್ದು, ಬೆಳಕು ಸಹ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
- ಗುರುತ್ವಾಕರ್ಷಣೆಯು ತುಂಬಾ ಪ್ರಬಲವಾಗಿರುತ್ತದೆ ಏಕೆಂದರೆ ವಸ್ತುವನ್ನು ಒಂದು ಸಣ್ಣ ಜಾಗಕ್ಕೆ ಸೇರಿಸಲಾಗಿದೆ . ನಕ್ಷತ್ರವು ಸಾಯುತ್ತಿರುವಾಗ ಇದು ಸಂಭವಿಸಬಹುದು.
ಗೋಚರತೆ:
- ಅವು ಅಗೋಚರವಾಗಿರುತ್ತವೆ ಏಕೆಂದರೆ ಯಾವುದೇ ಬೆಳಕು ಹೊರಬರಲು ಸಾಧ್ಯವಿಲ್ಲ.
- ವಿಶೇಷ ಉಪಕರಣಗಳೊಂದಿಗೆ ಬಾಹ್ಯಾಕಾಶ ದೂರದರ್ಶಕಗಳು ಕಪ್ಪು ಕುಳಿಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.
- ಸುತ್ತಲೂ ಸುತ್ತುತ್ತಿರುವ ಅನಿಲಗಳು ತಮ್ಮ ಚಿತ್ರಗಳನ್ನು ಪಡೆಯಲು ಸಹಾಯ ಮಾಡುತ್ತವೆ.