Published on: November 22, 2022

ಕಮೆಂಗ್ ಜಲವಿದ್ಯುತ್ ಯೋಜನೆ

ಕಮೆಂಗ್ ಜಲವಿದ್ಯುತ್ ಯೋಜನೆ

cenforce antibiotic purchase ಸುದ್ದಿಯಲ್ಲಿ ಏಕಿದೆ?

how to buy Ivermectin ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ ಕಮೆಂಗ್ ಜಲವಿದ್ಯುತ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಸಮರ್ಪಿಸಿದರು.

ಮುಖ್ಯಾಂಶಗಳು

  • ಯೋಜನೆಯು 2030 ರ ವೇಳೆಗೆ 30,000 ಮೆಗಾವ್ಯಾಟ್ ಯೋಜಿತ ಜಲ ಸಾಮರ್ಥ್ಯದ ಸೇರ್ಪಡೆಯ ಭಾಗವಾಗಿದೆ.
  • ಇದು ವಿದ್ಯುತ್ ಸಚಿವಾಲಯದ ಅಡಿಯಲ್ಲಿ ಒಂದು ಮಿನಿ ರತ್ನ ಪವರ್ ಸಾರ್ವಜನಿಕ ವಲಯ ಘಟಕವಾದ ಈಶಾನ್ಯ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NEEPCO Ltd) ಮೂಲಕ ಜಾರಿಗೊಳಿಸಲಾದ ಅತಿದೊಡ್ಡ ಜಲವಿದ್ಯುತ್ ಯೋಜನೆಯಾಗಿದೆ.
  • ಕಮೆಂಗ್ ಜಲವಿದ್ಯುತ್ ಕೇಂದ್ರ ಈಶಾನ್ಯ ಭಾಗದ ರಾಜ್ಯದಲ್ಲಿ 6ನೇ ಜಲವಿದ್ಯುತ್ ಘಟಕವಾಗಿದೆ.
  • ಯೋಜನೆಯು ಎರಡು ಅಣೆಕಟ್ಟುಗಳನ್ನು ಮತ್ತು 3,353 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲು 150 ಮೆಗಾವ್ಯಾಟ್ ನ 4 ಘಟಕಗಳನ್ನು ಹೊಂದಿದೆ.
  • ಸಾಮರ್ಥ್ಯ: 600 ಮೆಗಾವ್ಯಾಟ್
  • ವೆಚ್ಚ: ರೂ. 8,450 ಕೋಟಿ
  • ವಿಸ್ತೀರ್ಣ ಪಶ್ಚಿಮ ಕಮೆಂಗ್ ಜಿಲ್ಲೆಯ 80 ಚದರ ಕಿಲೋಮೀಟರ್‌ಗಿಂತಲೂ ಅಧಿಕ ಪ್ರದೇಶ

ಉದ್ದೇಶ

  • ಈ ಯೋಜನೆಯಿಂದ ಅರುಣಾಚಲ ಪ್ರದೇಶಕ್ಕೆ ಅಗತ್ಯವಿರುವುದಕ್ಕಿಂತಲೂ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಆಗಲಿದೆ. ಸ್ಥಿರತೆ ಮತ್ತು ಏಕೀಕರಣದ ದೃಷ್ಟಿಯಿಂದ ರಾಷ್ಟ್ರೀಯ ಗ್ರಿಡ್‌ಗೆ ಅನುಕೂಲವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಕಮೆಂಗ್ ನದಿ

  • ಹಿಂದೆ ಭರಾಲಿ ನದಿ ಎಂದು ಕರೆಯಲಾಗುತ್ತಿತ್ತು.
  • ಉಗಮ : ತವಾಂಗ್ ಜಿಲ್ಲೆಯಲ್ಲಿ ಹಿಮದಿಂದ ಆವೃತವಾದ ಗೋರಿ ಚೆನ್ ಪರ್ವತದ ಕೆಳಗಿನ ಹಿಮನದಿ ಸರೋವರದಿಂದ ಹುಟ್ಟುತ್ತದೆ.
  • ಈಗ ಅರುಣಾಚಲ ಪ್ರದೇಶದಲ್ಲಿ ಕಮೆಂಗ್ ಮತ್ತು ಅಸ್ಸಾಂನಲ್ಲಿ ಜಿಯಾಭಾರಲಿ ಎಂದು ಕರೆಯುತ್ತಾರೆ
  • ಬ್ರಹ್ಮಪುತ್ರ ನದಿಯ ಉಪನದಿಯಾಗಿದೆ.
  • ಉದ್ದ : ಸುಮಾರು 264 ಕಿಲೋಮೀಟರ್ (164 ಮೈಲಿ)
  • ಜಲಾನಯನ ಪ್ರದೇಶ : ಸುಮಾರು 11,843 ಚದರ ಕಿಲೋಮೀಟರ್ (4,573 ಚದರ ಮೈಲಿ)
  • ಉಪನದಿಗಳು

ಎಡ:  ಟೆಂಗಾ, ಬಿಚೋಮ್ ಮತ್ತು ದಿರಂಗ್ ಚು

ಬಲ : ಬೋರ್ ಡಿಕರೈ, ಪಚಾ