Published on: December 7, 2022
ಕರ್ನಾಟಕ ಕ್ರೀಡಾ ಪ್ರಶಸ್ತಿಗಳು
ಕರ್ನಾಟಕ ಕ್ರೀಡಾ ಪ್ರಶಸ್ತಿಗಳು
Gifu-shi ಸುದ್ದಿಯಲ್ಲಿ ಏಕಿದೆ?
one-on-one ರಾಜ್ಯ ಸರ್ಕಾರದಿಂದ ಕ್ರೀಡಾ ಸಾಧಕರಿಗೆ ನೀಡುವ 2021ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ, 36ನೇ ರಾಷ್ಟ್ರೀಯ ಕ್ರೀಡಾಕೂಟ ಪದಕ ವಿಜೇತರಿಗೆ ನಗದು ಪುರಸ್ಕಾರ ಹಾಗೂ 2022-23ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಮುಖ್ಯಾಂಶಗಳು
- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕೊಡಮಾಡುವ ಈ ಪ್ರಶಸ್ತಿಗೆ ರಾಜ್ಯದ ಹಲವು ಕ್ರೀಡಾ ಸಾಧಕರು ಆಯ್ಕೆಯಾಗಿದ್ದಾರೆ.
2021ನೇ ಸಾಲಿನ ಏಕಲವ್ಯ ಪ್ರಶಸ್ತಿ ಪುರಸ್ಕೃತರು
- ಚೇತನ್ ಬಿ – ಅಥ್ಲೇಟಿಕ್ಸ್
- ಶಿಖಾ ಗೌತಮ್ – ಬ್ಯಾಡ್ಮಿಂಟನ್
- ಕೀರ್ತಿ ರಂಗಸ್ವಾಮಿ – ಸೈಕ್ಲಿಂಗ್
- ಅದಿತ್ರಿ ವಿಕ್ರಾಂತ್ ಪಾಟೀಲ್ – ಫೆನ್ಸಿಂಗ್
- ಅಮೃತ್ ಮುದ್ರಾಬೆಟ್ – ಜಿಮ್ನಾಸ್ಟಿಕ್
- ಶೇಷೇಗೌಡ ಬಿ.ಎಂ – ಹಾಕಿ
- ರೇಷ್ಮಾ ಮರೂರಿ – ಲಾನ್ ಟೆನ್ನಿಸ್
- ತನೀಷ್ ಜಾರ್ಜ್ ಮ್ಯಾಥ್ಯು – ಈಜು
- ಯಶಸ್ವಿನಿ ಘೋರ್ಪಡೆ – ಟೇಬಲ್ ಟೆನ್ನಿಸ್
- ಹರಿಪ್ರಸಾದ್ – ವಾಲಿಬಾಲ್
- ಸೂರಜ್ ಸಂಜು ಅಣ್ಣೀಕೇರಿ – ಕುಸ್ತಿ
- ಹೆಚ್.ಎಸ್.ಸಾಕ್ಷಾತ್ – ನೆಟ್ ಬಾಲ್
- ಮನೋಜ್ ಬಿ.ಎಂ – ಬಾಸ್ಕೆಟ್ ಬಾಲ್.
- ರಾಘವೇಂದ್ರ ಪಿ – ಪ್ಯಾರಾ ಅಥ್ಲೆಟಿಕ್ಸ್
- ಏಕಲವ್ಯ ಪ್ರಶಸ್ತಿಯು ಏಕಲವ್ಯ ಕಂಚಿನ ಪ್ರತಿಮೆ, ಪ್ರಶಸ್ತಿ ಪತ್ರ, ಸಮವಸ್ತ್ರ, 2 ಲಕ್ಷ ರೂ. ನಗದು ಬಹುಮಾನ ಒಳಗೊಂಡಿರುತ್ತದೆ.
2021ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತರು
- ಅಲ್ಕಾ ಎನ್ ಫಡತಾರೆ – ಸೈಕ್ಲಿಂಗ್
- ಬಿ.ಆನಂದ್ ಕುಮಾರ್ – ಪ್ಯಾರಾ ಬ್ಯಾಡ್ಮಿಂಟನ್
- ಹೆಚ್.ಎಲ್.ಶೇಖರಪ್ಪ – ಯೋಗ
- ಕೆ.ಸಿ.ಅಶೋಕ್ – ವಾಲಿಬಾಲ್
- ರವೀಂದ್ರ ಶೆಟ್ಟ – ಕಬ್ಬಡ್ಡಿ
- ಬಿ.ಜಿ.ಅಮರನಾಥ್ – ಯೋಗ
- ಜೀವಮಾನ ಸಾಧನೆ ಪ್ರಶಸ್ತಿಯು ಪ್ರಶಸ್ತಿ ಫಲಕ, ಸಮವಸ್ತ್ರ, 1.50 ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡಿದೆ.
ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕಾರ
- ಕವನ ಎಂ.ಎಂ – ಬಾಲ್ ಬ್ಯಾಡ್ಮಿಂಟನ್
- ಬಿ.ಗಜೇಂದ್ರ – ಗುಂಡು ಎತ್ತುವುದು
- ಶ್ರೀಧರ್ – ಕಂಬಳ
- ರಮೇಶ್ ಮಳವಾಡ್ – ಖೋ-ಖೋ
- ವೀರಭದ್ರ ಮುಧೋಳ್ – ಮಲ್ಲಕಂಬ
- ಖುಷಿ ಹೆಚ್ – ಯೋಗ
- ಲೀನಾ ಅಂತೋಣಿ ಸಿದ್ದಿ – ಮಟ್ಟಿ ಕುಸ್ತಿ
- ದರ್ಶನ್ ಜೆ – ಕಬ್ಬಡ್ಡಿ
- ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯು ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ, ಸಮವಸ್ತ್ರ, 1 ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡಿರುತ್ತದೆ.
2021-23ನೇ ಸಾಲಿನ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ಪುರಸ್ಕೃತರು
- BMS ಕಾಲೇಜು, ಮಂಗಳ ಪ್ರೆಂಡ್ಸ್ ಸರ್ಕಲ್, ನಿಟ್ಟೆ ಎಜುಕೇಷನ್ ಟ್ರಸ್ಟ್ ಗೆ ಪ್ರಶಸ್ತಿ ಪ್ರದಾನಮಾಡಲಾಗಿದೆ.
-
ಈ ಪ್ರಶಸ್ತಿಯು ಪ್ರಶಸ್ತಿ ಪತ್ರ, 5 ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡಿದೆ.