Published on: January 11, 2024

ಕರ್ನಾಪೆಕ್ಸ್ 2024

ಕರ್ನಾಪೆಕ್ಸ್ 2024

ಸುದ್ದಿಯಲ್ಲಿ ಏಕಿದೆ? ಕರ್ನಾಟಕ ಅಂಚೆ ಇಲಾಖೆಯು ಬೆಂಗಳೂರಿನಲ್ಲಿ 13ನೇ ರಾಜ್ಯಮಟ್ಟದ ಅಂಚೆಚೀಟಿಗಳ ಸಂಗ್ರಹದ ಪ್ರದರ್ಶನ, ಕರ್ನಾಪೆಕ್ಸ್ 2024 (ಅಂಚೆ ಚೀಟಿಗಳ ಹಬ್ಬ) ಆಯೋಜಿಸಿತ್ತು.

ಮುಖ್ಯಾಂಶಗಳು

  • ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರ ಇರುವ ವಿಶೇಷ ಲಕೋಟೆ, ಸರ್ ಎಂ ವಿಶ್ವೇಶ್ವರಯ್ಯ ಎಫ್‌ಕೆಸಿಸಿಐ ಸ್ಥಾಪನೆ, 100 ವರ್ಷಗಳ ಕಾರ್ಲ್‌ಟನ್ ಹೌಸ್, 100 ವರ್ಷಗಳ ಲಲಿತ್ ಮಹಲ್ ಮತ್ತು ಮೈಸೂರು ಸ್ಯಾಂಡಲ್ ಸೋಪ್ ಕುರಿತ ಲಕೋಟೆಗಳನ್ನು ಬಿಡುಗಡೆ ಮಾಡಲಾಯಿತು.
  • ಬನ್ನೇರುಘಟ್ಟ ಜೈವಿಕ ಉದ್ಯಾನದ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಗಿದೆ ಈ ವಿಶೇಷ ಅಂಚೆ ಲಕೋಟೆಯಲ್ಲಿ ಉದ್ಯಾನದ ವಿವಿಧ ಮಾಹಿತಿ ಒಳಗೊಂಡಿವೆ. ಸಫಾರಿ, ಜೈವಿಕ ಉದ್ಯಾನ, ಚಿಟ್ಟೆ ಪಾರ್ಕ್‌ನ ಮಾಹಿತಿ ಇದೆ. ಉದ್ಯಾನದಲ್ಲಿ ಸಸ್ಯಗಳು ಮತ್ತು ಪ್ರಾಣಿಗಳ ಬಗೆಗಿನ ಜಾಗೃತಿಯ ಚಿತ್ರಗಳಿವೆ. ಈ ಲಕೋಟೆಯನ್ನು ವಿಜ್ಞಾನ ಮತ್ತು ತಂ ತ್ರಜ್ಞಾನದ ವಿಷಯದಡಿ ಬಿಡುಗಡೆ ಮಾಡಲಾಗಿದೆ

ಈ ಪ್ರದರ್ಶನದಲ್ಲಿ ನಾಲ್ಕು ದಿನ ನಾಲ್ಕು ವಿಷಯಗಳಿಗೆ ಒತ್ತು ನೀಡಲಾಯಿತು.

  • ಮೊದಲ ದಿನ: ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃ ತಿ,
  • ಎರಡನೇ ದಿನ: ವಿಜ್ಞಾನ, ತಂತ್ರಜ್ಞಾ ನ ಮತ್ತು ಪರಿಸರ
  • ಮೂರನೇ ದಿನ: ಮಾನಸಿಕ ಆರೋಗ್ಯ ಮತ್ತು ಕ್ರೀಡಾ ದಿನ
  • ನಾಲ್ಕನೇ ದಿನ: ಮಹಿಳಾ ಸಬಲೀಕರಣ ದಿನ ಎಂದು ಗುರುತಿಸಲಾಗಿದೆ.